POLICE BHAVAN KALABURAGI

POLICE BHAVAN KALABURAGI

28 April 2015

Kalaburagi District Reported Crimes

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 27/4/2015 ರಂದು ವಿನೋದ ತಂದೆ ಜಗನ್ನಾಥ ಹೂಗಾರನು ತನ್ನ ಹೋಂಡಾ ಶೈನ್ ಮೋ.ಸೈ ನಂ ಕೆಎ 32 ಇಸಿ 4539 ನೇದ್ದರ ಮೇಲೆ  ನಾಗೇಶ ತಂದೆ ಸೈಬಣ್ಣ ಪೂಜಾರಿ ಈತನೊಂದಿಗೆ ಹೋಗುತ್ತಿರುವಾಗ ವಿನೋದ ತಂದೆ ಜಗನ್ನಾನು ಮೋ.ಸೈ ಅನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಪಟ್ಟಣ ಗ್ರಾಮದಿಂದ ಸ್ವಲ್ಪ ಮುಂದೆ ಇರುವ ಗ್ಯಾರೇಜ್ ಹತ್ತಿರ ರಸ್ತೆ ಮೇಲೆ ನಿಂತಿದ್ದ ಟ್ರಾಕ್ಟರ್ ನಂ ಕೆಎ 32 ಟಿಎ 7393 ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಮೋ.ಸೈ ನೊಂದಿಗೆ ಕೆಳಗೆ ಬಿದ್ದಾಗ ಹಣೆಗೆ ಮೂಗಿಗೆ, ಭಾಯಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಯಿಂದ ರಕ್ತಸ್ರಾವವಾಗಿ ವಿನೋದ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .
ಸೇಡಂ ಪೊಲೀಸ್ ಠಾಣೆ:ದಿನಾಂಕ: 27-05-2015 ರಂದು ಶ್ರೀಮತಿ ಮನಿಲಾ ಗಂಡ ವೆಂಕಟೇಶ ಸಾ: ಮುಧೋಳ ಇವರು ಠಾಣಾಗೆ ಹಾಜರಾಗಿ ದಿನಾಂಕ: 26-04-15 ರಂದು ಸಾಯಾಂಕಾಲ ನನ್ನ ಗಂಡ ವೆಂಕಟೇಶನು ಮುಧೋಳದಲ್ಲಿರುವ  ತನ್ನ ತಾಯಿ ಹತ್ತಿರ ಹೋಗಿ ಬರುವುದಾಗಿ ಮೋಟಾರು ಸೈಕಲ್ ನಂ ಕೆಎ-32-ಇಇ-5235 ನ್ನೇದ್ದನ್ನು ನಡೆಸಿಕೊಂಡು ಮುಧೋಳಕ್ಕೆ ಹೋಗಿದ್ದು . ರಾತ್ರಿ ಮರಳಿ ಸೇಡಂಕ್ಕೆ ಬರುತ್ತಿರುವಾಗ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಅವರಿಗೆ ಭಾರಿ ರಕ್ತ ಗಾಯ  ತರಚಿದ ಗಾಯವಾಗಿದ್ದು ಅವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ತಂದು ನಂತರ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ 108 ಅಂಬುಲೆನಸ್ ನಲ್ಲಿ ಹೋಗುತ್ತಿದ್ದಾಗ ಗುಲಬರ್ಗಾದ ಸಮೀಪ ಹೋದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಪಘತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ: ಶ್ರೀ  ವಿಧ್ಯಾಸಾಗರ ತಂದೆ ಸಿದ್ದಯ್ಯ ಹಿರೇಮಠ ಠಾಣೆಗೆ ಹಾಜರಾಗಿ ದಿನಾಂಕ 27.04.2015 ರಂದು ಬೇಳಗ್ಗೆ 05:00 ಗಂಟೆಗೆ ಜೇವರ್ಗಿ ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಚಿಗರಳ್ಳಿ ಕ್ರಾಸ್ ಸಮೀಪ ಹುಂಡೈ ಸೆಂಟ್ರೋ ಕಾರ್ ನಂ ಕೆ.ಎ32ಎಮ್3008 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿನಲ್ಲಿ ಅಡ್ಡಲಾಗಿ ಬರುತ್ತಿದ್ದ ನಾಯಿಗೆ ಕಟ್ ಹೋಡೆಯಲು ಹೋಗಿ ರೋಡಿನ ಬಲ ಸೈಡಿನಲ್ಲಿ ಕಾರ್‌ ಅನ್ನುಪಲ್ಟಿ ಮಾಡಿ ಕಾರ್‌ ಅನ್ನು ಜಖಂ ಗೊಳಿಸಿರುತ್ತಾನೆ ಕಾರಣ ಸದರಿ ಕಾರ್‌ ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು  ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ
ಮಹಿಳಾ ಪೊಲೀಸ ಠಾಣೆ:ದಿನಾಂಕ 27-04-2015 ರಂದು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ವಿಜಯಲಕ್ಷ್ಮೀ ಗಂಡ ರಾಮಚಂದ್ರ ಆಲಗೂಡ ವಯಾ:35 ವರ್ಷ ಜಾ:ಲಿಂಗಾಯತ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ತಮ್ಮ ಹೇಲಿಕೆ ಸಲ್ಲಿಸಿದ್ದೇನೆಂದರೆ ಸುಮಾರು 16 ವರ್ಷಗಳ ಹಿಂದೆ ನನ್ನ ಸೋದರ ಮಾವ ರಾಮಚಂದ್ರ ಇತನೊಂದಿಗೆ ಮದುವೆಯಾಗಿದ್ದು. ಒಂದು ಗಂಡು, ಒಂದು ಹೆಣ್ಣು ಮಗಳಿದ್ದು. ನಾನು ದುಡಿದ ಹಣವನ್ನು ತನಗೆ ಕುಡಿಯಲು ಕೊಡು ಅಂತಾ ದಿನಾಲೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದನು. ನಾನು ಹಿಂಸೆಯನ್ನು ತಾಳಲಾರದೇ ನನ್ನ ತವರು ಮನೆಯಾದ ಸಂತೋಷ ಕಾಲೋನಿಯಲ್ಲಿ ಹೋಗಿ ಉಳಿದುಕೊಂಡಿದ್ದು. ದಿನಾಂಕ 27-04-2015 ರಂದು ನಾನು ಮಹಾ ನಗರ ಪಾಲಿಕೆಗೆ ಹೋಗಿದ್ದಾಗ, ನನ್ನ ಗಂಡ ಬಂದವನೇ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಹಣ ಕೊಡು ಅಂದರೆ ಕೊಡುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಅಂದುತನ್ನ  ಹತ್ತಿರವಿದ್ದ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಿದ್ದು  ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಕಸ್ನಿಕ ಗುಂಡು ತಗುಲಿ ವ್ಯಕ್ತಿ ಸಾವು:
ಅಪಜಲಪೂರ ಠಾಣೆ: ದಿನಾಂಕ 27/04/2015 ರಂದು ಶ್ರೀ ಬಸಣ್ಣ ದೇಸಾಯಿ ಸಾ: ಬೋಸಗಾ ತಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 27-04-2015 ರಂದು ನಮ್ಮೂರಲ್ಲಿ, ಹೊನ್ನಲಿಂಗೇಶ್ವರ ದೇವರ ಜಾತ್ರೆ ಇದ್ದು, ಈ ಜಾತ್ರೆಗೆ ನಾನು ಮತ್ತು ನನ್ನ ಮಗ ಗಿರಿಮಲ್ಲ ಹಾಗು ನಮ್ಮೂರಿನ ರುದ್ರುಗೌಡ ಪಾಟೀಲ, ತುಕಾರಾಮ ಮಾಶಾಳ, ರಾಜು ಬಿರಾದಾರ, ನಿಂಗಪ್ಪಾ ಕಲ್ಲೂರ, ಮಲ್ಲಿಕಾರ್ಜುನ ಸುತಾರ ಹಾಗು ಇನ್ನಿತರರು ಸೇರಿಕೊಂಡು ಹೊನ್ನ ಲಿಂಗೇಶ್ವರ ದೇವರ ಗುಡಿಯ ಮುಂದೆ ಅಗ್ಗಿ ಕುಣಿ ಹತ್ತಿರ ಇದ್ದಾಗ ಮದ್ಯಾಹ್ನ 1;30 ಗಂಟೆ ಸುಮಾರಿಗೆ ನಮ್ಮೂರ ಶಂಕರಗೌಡ ತಂದೆ ಸಾಹೆಬಗೌಡ ಪಾಟೀಲನು ತನ್ನ ಅಣ್ಣನಾದ ಸಿದ್ದನಗೌಡ ತಂದೆ ಸಾಹೇಬಗೌಡ ಪಾಟೀಲನ ಡಿ.ಬಿ.ಬಿ.ಎಲ್ (ಜೋಡಬಾರ) ಬಂದುಕನ್ನು ತೆಗೆದುಕೊಂಡು ಬಂದು ಗುಡಿಯ ಮುಂದೆ ಅಗ್ಗಿ ಕುಣಿಯ ಹತ್ತಿರ ನಿಂತು ಗಾಳಿಯಲ್ಲಿ ಗುಂಡು ಹಾರಿಸುವ ಸಲುವಾಗಿ ತನ್ನ ಕೈಯಲ್ಲಿದ್ದ ಬಂದುಕನ್ನು ಮೇಲೆ ಮಾಡಿ ಗುಂಡು ಹಾರಿಸಿದಾಗ ಗುಂಡು ಹಾರಲಿಲ್ಲಾ, ನಂತರ ಬಂದುಕನ್ನು ಸ್ವಲ್ಪ ಕೆಳಗೆ ಮಾಡಿ ಅದರ ಬೋರನ್ನು ಒತ್ತಿ ಸರಿ ಪಡಿಸಿದಾಗ ಆಕಸ್ಮಿಕವಾಗಿ ಟ್ರಿಗರಗೆ ಕೈತಾಗಿ ಗುಂಡು ಹಾರಿದ್ದು, ಸದರಿ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಾಗಿದ್ದರಿಂದ ಭಾರಿ ರಕ್ತಗಾಯ ಹೊಂದಿ ಅವನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶಂಕರಗೌಡ ತಂದೆ ಸಾಹೇಬಗೌಡ ಪಾಟೀಲನು ಯಾವುದೆ ತರಹದ ಅಧೀಕೃತ ಲೈಸನ್ಸ್ ವಗೈರೆ ಇಲ್ಲದೆ, ಬಂದೂಕು ತರಬೇತಿ ಹೊಂದದೆ ಜನರ ಮದ್ಯ ನಿಂತುಕೊಂಡು ಗುಂಡು ಹಾರಿಸಿದರೆ ಯಾರಿಗಾದರು ತಗಲಿ ಸಾಯಬಹುದು ಅಂತಾ ತಿಳುವಳಿಕೆ ಇದ್ದರು ಕೂಡ, ಅದರಂತೆ ಸಿದ್ದನಗೌಡ ಪಾಟೀಲ ಇವನು ತನ್ನ ಹೆಸರಲ್ಲೆ ಇದ್ದ ಬಂದೂಕನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೆ ಅನವಶ್ಯಕವಾಗಿ ತನ್ನ ಸಹೋದರ ಶಂಕರಗೌಡನ ಕೈಯಲ್ಲಿ ಕೊಟ್ಟು, ಈ ರೀತಿ ಆಕಸ್ಮಿಕ ಬಂದೂಕಿನ ಟ್ರಿಗರ್ ಒತ್ತಿದ್ದರಿಂದ ಬಂದೂಕಿನಿಂದ ಹಾರಿದ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಗಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಕಾರಣ ಮಾನ್ಯ ರವರು ಶಂಕರಗೌಡ ಪಾಟೀಲ ಮತ್ತು ಸಿದ್ದನಗೌಡ ಪಾಟೀಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

26 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ಲಕ್ಷ್ಮಣರಾವ ಜಮಾದಾರ ಸಾ: ಕಮಲನಗರ ಕಲಬುರಗಿ ಇವರು ದಿನಂಕ 25-04-2015 ರಂದು ಸಾಯಂಕಾಲ ತಾನು ಚಲಾಯಿಸಿಸುತ್ತೀರುವ ಆಟೋರಿಕ್ಷಾ ನಂ ಕೆಎ-32-ಬಿ-3921 ನೇದ್ದರಲ್ಲಿ 3 ಜನ ಪ್ರಯಾಣಿಕ ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ಸುಪರ ಮಾರ್ಕೆಟನಿಂದ ಕೆಂದ್ರ ಬಸ ನಿಲ್ದಾಣ ಕಡೆಗೆ ಹೋಗುವ ಕುರಿತು ಜಗತ ಸರ್ಕಲ ಮುಖಾಂತರ ಹೊಗುವಾಗ ದಾರಿ ಮದ್ಯ ಸಿದ್ದಿಪಾಶಾ ದರ್ಗಾ ಕ್ರಾಸ ಹತ್ತಿರ ಬರುವ ಹಲ್ಲಿನ ಆಸ್ಪತ್ರೆಯ ಎದುರಿನ ರೋಡ ಮೇಲೆ ಹಿಂದಿನಿಂದ   ಮೋಟಾರ ಸೈಕಲ ನಂ ಕೆಎ-05-ಹೆಚ್.ಎ-4085 ನೇದ್ದರ ಸವಾರ ಚಂದ್ರಕಾಂತ ಇತನು ಹಿಂದುಗಡೆ ಈರಪ್ಪಾ ರವರನ್ನು ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಆಟೋರಿಕ್ಷಾ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆಟೋರಿಕ್ಷಾ ಡ್ಯಾಮೆಜ ಮಾಡಿ ಈರಪ್ಪಾ ಇವರಿಗೆ ಭಾರಿ ಗಾಯಗೊಳಿಸಿ ತಾನೂ ಗಾಯ ಹೊಂದಿದ್ದು  ಇರುತ್ತದೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 24-04-2015 ರಂದು ಮದ್ಯಾಹ್ನ ನನ್ನ ಗಂಡ ಸಿದ್ದರಾಮ ಇತನು ತಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ಇಸಿ- 1754 ನೇದ್ದನ್ನು ಶಹಾಬಜಾರ ನಾಕಾ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಖಾದ್ರಿಚೌಕ ಹತ್ತಿರ ನಡೆದುಕೊಂಡು ಹೋಗುತ್ತಿರುವ ಯಾವುದೊ ಒಬ್ಬ ಮನುಷ್ಯನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಸಣ್ಣಪುಟ್ಟ ಗಾಯಗೊಳಿಸಿ ತಾನೇ ಮೋಟಾರ ಸೈಕಲ ಮೇಲಿಂದ ಬಿದ್ದು ತಲೆಯ ಹಿಂದುಗಡೆ ಗುಪ್ತಪೆಟ್ಟು, ಬಾಯಿಗೆಪೆಟ್ಟು ಬಿದ್ದು ಮೇಲಿನ ಹಲ್ಲು ಕಟ್ಟಾಗಿರುತ್ತದೆ ಬಲ ಮೆಲಕಿನ ಹತ್ತಿರ ತರಚಿದಗಾಯ ಹಾಗು ಬಲಗಾಲು ಪಾದದ ಮೇಲ್ಬಾಗದಲ್ಲಿ ರಕ್ತಗಾಯ ಹೊಂದಿರುತ್ತಾರೆ ಅಂತಾ ಶ್ರೀಮತಿ ಮಹಾದೇವಿ ಗಂಡ ಸಿದ್ದರಾಮ ಶ್ರೀಗಣಿ ಸಾ: ನಿಂಬಾಳ ತಾ: ಆಳಂದ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಹೆಣ್ಣು ಶಿಶುವನ್ನು ಕಂಟಿಯಲ್ಲಿ ಬಿಸಾಕಿ ಹೋದ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ ಬಸವರಾಜ ತಂದೆ ಶಾಂತಪ್ಪ ಫುಲಾರಿ ಸಾ:ಮಾದನಹಿಪ್ಪಗಾ ತಾ:ಆಳಂದ ಇವರು ದಿನಾಂಕ:25/04/2015 ರಂದು ನಾನು ಬೆಳಗ್ಗೆ ತಮ್ಮ ಮನೇಯ ಪಕ್ಕಕ್ಕೆ ಇರುವ ಸರ್ಕಾರಿ ನಾಲಾ (ಹಳ್ಳ) ದಲ್ಲಿ ಸಂಡಾಸಕ್ಕೆ ಹೊದಾಗ ನಮ್ಮೂರಿನ ಶಿವಲಿಂಗಪ್ಪಾ ಹೇಲಿಕೇರಿ ಇವರ ಹಳೇಯ ಮನೆ ಹಿಂದುಗಡೆಯ ನಾಲಾದಲ್ಲಿನ ಜಾಲಿ ಕಂಟೆಯಲ್ಲಿ ಮಗು ಅಳುವ ಶಬ್ದ ಕೇಳಿ ನಾನು ವಾಪಾಸ ಮನೆಗೆ ಬಂದು ಬ್ಯಾಟರಿ ತೆಗೆದುಕೊಂಡು ಹೊಗುವಾಗ ರಸ್ತೇಯ ಮೇಲೆ ಹೊಗುತಿದ್ದ ನಮ್ಮೂರಿನ ಇಸಾಕ ಬಳಿಗಾರ, ವೈಜುನಾಥ ಎಳಮೇಲಿ ಇವರಿಗೆ ನಾನು ಮಗು ಅಳುವ ವಿಷಯ ತಿಳಿಸಿ ನಡೇಯಿರಿ ಅಲ್ಲಿ ಮಗುವಿನ ಅಳುವ ಸಬ್ದ ಬರುತ್ತಿದೆ ಹೊಗೊಣಾ ಅಂತ ಕರೆದುಕೊಂಡು ಶಿವಲಿಂಗಪ್ಪಾ ಹೇಲಿಕೇರಿ ಅವರ ಹಳೇಯ ಮನೆಯ ಹಿಂದಿನ ನಾಲಾದಲ್ಲಿ ಹೊಗಿ ಜಾಲಿ ಕಂಟಿಯಲ್ಲಿ ಬ್ಯಾಟರಿ ಹಾಕಿ ನೋಡಿದಾಗ ಮಗು ಇದ್ದುದ್ದು ಕಂಡು ಬಂದಿದ್ದರಿಂದ ನಾವೂ ಮೂರು ಜನರು ಸೇರಿ ಆ ಮಗುವನ್ನು ಎತ್ತಿಕೊಂಡು ಹೊರಗೆ ಬಂದು ಬ್ಯಾಟರಿ ಹಾಕಿ ಪರಿಶಿಲಿಸಿ ನೊಡಲಾಗಿ ಒಂದು ದಿವಸದ ನವಜಾತ ಹೆಣ್ಣು ಶಿಶು ಇದ್ದು ಅದರ ತಲೇಯಲ್ಲಿ ಒಂದು ಇಂಚುದಷ್ಟು ಕಪ್ಪು ಕೂದಲು ಮಗುವಿನ ಬಣ್ಣ ಬೆಳ್ಳನೆಯ ಬಣ್ಣ ಇದ್ದು ಹೊಂಕುಳದ ಹೂರಿ ಜನಿಸಿದಾಗ ಇದ್ದ ಹಾಗೆ ಇದ್ದು ಈ ಮಗುವನ್ನು ಇಂದು ಬೇಳಗಿನ ಜಾವದಲ್ಲಿ ಯಾರೊ ಬಿಸಾಕಿರುತ್ತಾರೆ. ಮಗುವಿನ ಜೀವಕ್ಕೆ ಎನಾದರು ಅಪಾಯ ವಾಗಬಹುದು ಅಂತಾ ತಿಳಿದು ನಾವೂ ಮೂರು ಜನರು ನಮ್ಮೂರಿನ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೊಗಿ ಆ ಮಗುವಿನ ಆರೈಕೆ ಮಾಡಿಸಿರುತ್ತೆವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

25 April 2015

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಅಮೃತ ತಂದೆ ಶ್ರೀಮಂತ ಕಂಬಾರ ಸಾ|| ಜಿಡಗಾ ಇವರು ದಿನಾಂಕ 22/04/2015 ರಂದು ನೀಲೂರದಿಂದ ಮೋಟಾರ ಸೈಕಲ ನಂ. ಕೆ.ಎ 32, ಎಕ್ಸ 2624 ನೇದ್ದರ ಮೇಲೆ ದುತ್ತರಗಾಂವ ಗ್ರಾಮಕ್ಕೆ ನಾನು ಹಾಗೂ ಈರಣ್ಣಾ ತಂದೆ ದೇವೆಂದ್ರಪ್ಪಾ ಕಂಬಾರ ಸಾ|| ನೀಲೂರ ಮತ್ತು ಆತನ ಗೆಳೆಯನಾದ ಸೈಬಣ್ಣ ಹಾಳೋಳ್ಳಿ ಸಾ|| ನೀಲೂರ ಎಲ್ಲರೂ ಸೇರಿ ಈರಣ್ಣಾ ತಂದೆ ದೇವೆಂದ್ರಪ್ಪಾ ಕಂಬಾರ ಇತನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಹೊರಟಿದ್ದು ಮಧ್ಯಾಹ್ನ ದುತ್ತರಗಾಂವ ಗ್ರಾಮ 01 ಕೀ.ಮಿ ದೂರ ಇರುವಾಗ ಎದುರುಗಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32, ಇಇ 7639 ನೇದ್ದರ ಸವಾರನಾದ ರಮೇಶ ತಂದೆ ಶಿವಲಿಂಗಪ್ಪ ಮಲಶೇಟ್ಟಿ ಸಾ|| ಧುತ್ತರಗಾಂವ ಇತನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಎರಡು ಮೋಟಾರ ಸೈಕಲ ಸವಾರರು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ಡಿಕ್ಕಿಪಡಿಸಿ ಅಪಘಾತಪಡಿಸಿ ಡಾಂಬರ ರಸ್ತೆಯ ಮೇಲೆ ಬಿದ್ದು ನಮಗೆಲ್ಲರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಸುಮಾರು 10-15 ದಿವಸಗಳ ಹಿಂದೆ ಒಬ್ಬ ಅಂದಾಜು 35 ರಿಂದ 40 ವರ್ಷ ವಯಸ್ಸಿನ ಪುರುಷನು ಎಲ್ಲಿಂದಲೊ ಜೇವರಗಿ ಪಟ್ಟಣದ ಎಪಿ.ಎಮ್‌.ಸಿ ಗೆ ಬಂದು ಬಿಕ್ಷೆ ಬೇಡುತ್ತ ತಿರುಗಾಡಿ ಯಾವುದೋ ಒಂದು ರೋಗದಿಂದ ಬಳಲಿ ಅಶಕ್ತನಾಗಿ ಹಾಗು ಬೇಸಿಗೆ ಬಿಸಿಲಿನ ತಾಪದಿಂದ ಬಳಲಿ ದಿನಾಂಕ 22.04.2015 ರಂದು ರಾತ್ರಿ ವೇಳೆಯಲ್ಲಿ ಜೇವರ್ಗಿ ಪಟ್ಟಣದ ಎ.ಪಿ.ಎಮ್.ಸಿ ಯಾರ್ಡನ ತರಕಾರಿ ಮಾರುಕಟ್ಟೆ ಹತ್ತಿರ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಈರಣ್ಣ ತಂದೆ ದೇವಿಂದ್ರಪ್ಪಗೌಡ ಪೊಲೀಸ್ ಬಿರಾದಾರ್ ಸಾ|| ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಸೇಡಂ ಠಾಣೆ : ಶ್ರೀ. ಮಡಿವಾಳಪ್ಪ ತಂದೆ ಬಸಣ್ಣ ಮಡಿವಾಳ ಸಾ:ಕಲಕಂಬಾ ಗ್ರಾಮ ಹಾ.ವ:ದೊಡ್ಡ ಅಗಸಿ ಸೇಡಂ ಇವರು ದಿನಾಂಕ:22-04-2015 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ  ನನ್ನ ಮಗನಾದ ನಂದಪ್ಪ ಇತನು ನಮ್ಮ ಮನೆಯ ಮುಂದೆ ಬಂದು ನಿಂತು ಬಾಯಿಗೆ ಬಂದಂತೆ ಬೈಯುತ್ತಾ ನನ್ನ ಸೊಸೆಯಾದ ಜಗದೇವಿ ಇವಳೊಂದಿಗೆ ಕಿರಿಕಿರಿ ಮಾಡುತ್ತಿದ್ದನು ಆಗ ನಾನು ನಂದಪ್ಪ ಇತನಿಗೆ ಸುಮ್ಮನೆ ಯಾಕೆ ಕಿರಿಕಿರಿ ಮಾಡುತ್ತಿ ಅಂತಾ ಕೇಳಲು ಹೋಗಿದ್ದಕ್ಕೆ ನನ್ನೊಂದಿಗೆ ಕುಸ್ತಿಗೆ ಬಿದ್ದು “ ಸೂಳೆ ಮಗನೆ ನನ್ನ ಹೆಂಡತಿಗೆ ನಾನು ಹೊಡಿತಿನಿ ಅದು ನೀಏನ್ ಕೇಳತೀ ರಂಡಿ ಮಗನೆ” ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಕೈಯಿಂದ ಬಲಗೈ ಮುಂಡಿಗೆ ಹೊಡೆದು ಗುಪ್ತಗಾಯ ಮಾಡಿದನು ಮತ್ತು ಗೋಡೆಗೆ ನನ್ನ ಬಲಗೈ ತಾಕಿದ್ದರಿಂದ ಬಲಗೈ ಮೊಳಕೈಗೆ ತರಚಿದ ಗಾಯ ಪಡಿಸಿದ್ದು  ಅಲ್ಲದೆ  ನಂದಪ್ಪ ಈತನು ನನಗೆ “ ಯಾಕೋ ನಿಂದು ಬಹಾಳೇ ಆಗ್ಯಾದ ನಿನಗೆ ಕೊಂದೆ ಬಿಡ್ತಿನಲೇ” ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕೊರಳಲ್ಲಿಯ ಎರಡು ಎಳೆಯ ಕರಿ ಬಣ್ಣದ ದಾರದ ಕಾಶಿದಾರ ಎಳೆದು ಒತ್ತಿ ಹಿಡಿದು ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ:
ಅಫಜಲಪೂರ ಠಾಣೆ: ಶ್ರೀ ಬಸವರಾಜ ತಂದೆ ಕಲ್ಲಪ್ಪ ಕಂಬಾರ ಸಾ: ಅಳ್ಳಗಿ (ಬಿ) ಇವರು  ತಮ್ಮ ಹಿರೋ ಸ್ಪೇಂಡರ ಪ್ಲಸ್ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-32 ಇಬಿ-8791 ಅಂತಾ ಇದ್ದು, ಚೆಸ್ಸಿ ನಂಬರ:- MBLHA10AMC9G04361 ಇಂಜೆನ ನಂಬರ:- HA10EJC9G13124 ಅಂತಾ ಇದ್ದು, ಅಂದಾಜು 25,000/- ರೂ ಕಿಮ್ಮತ್ತಿನದನ್ನು ದಿನಾಂಕ 09-04-2015 ಮದ್ಯಾಹ್ನ 2:30 ಪಿ ಎಮ್ ಕ್ಕೆ ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ನಿಲ್ಲಿಸಿ ಒಳಗೆ ಜಾತಿ ಗಣತಿಯ ಬಗ್ಗೆ ಮಾಹಿತಿ ಕೇಳಲು ಹೋಗಿ ಜಾತಿ ಗಣತಿಯ ಮಾಹಿತಿಯನ್ನು ಪಡೆದುಕೊಂಡು ನಂತರ 3:00 ಪಿ ಎಮ್ ಕ್ಕೆ ತಹಸಿಲ ಕಾರ್ಯಾಲಯದ ಹೊರಗೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.