POLICE BHAVAN KALABURAGI

POLICE BHAVAN KALABURAGI

07 April 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:06/04/2015 ರಂದು ಬೆಳಗ್ಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಎಂ.ಎಸ್.ಕೆ.ಮೀಲ್ ಬಡಾವಣೆಯ ಖದೀರ ಚೌಕ ಹತ್ತಿರ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಹ್ಮದಿ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ಮನುಷ್ಯನು ರಸ್ತೆ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ಸಾರ್ವಜನಿಕರಿಗೆ ಕೊಟ್ಟು ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿದ್ದು ಅವನು ತನ್ನ ಹೆಸರು ಗೌಸಮೀಯಾ ತಂದೆ ಮಹೇಬೂಬಸಾಬ ನಾಗೂರ ಸಾ:ರಾಮಚಕ್ಕಿ ಹತ್ತಿರ ಜಿಲಾನಾಬಾದ ಎಂ.ಎಸ್.ಕೆ.ಮೀಲ್ ಕಲಬುರಗಿ ಅಂತಾ ತಿಳಿಸಿದ್ದು ಆತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2135/-ರೂ ಒಂದು ಬಾಲಪೇನ್ ಹಾಗೂ 5 ಮಟಕಾ ನಂಬರ ಬರೆದ ಚೀಟಿಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ನಿಂಗಪ್ಪ ತಂದೆ ಬಸಪ್ಪ ಬಿಜನಳ್ಳಿ ಸಾ:ಮಳಖೇಡ ರವರು ದಿನಾಂಕ: 05-04-15 ರಂದು ಬೆಣ್ಣೂರ(ಬಿ) ಗ್ರಾಮದಲ್ಲಿ ನಾಟಕ ಇದುದ್ದರಿಂದ ನಾಟಕ ನೋಡಿಕೊಂಡು ಬರಲು ನಾನು ಹಾಗೂ ನಮ್ಮ ಓಣಿಯ ದೇವಪ್ಪ ತಂದೆ ರಾಯಪ್ಪ ಇತನೂ ತನಗೆ ಪರಿಚಯದವರಾದ ಶಾಂತಪ್ಪಾ ತಂದೆ ಮಾಣೀಕಪ್ಪ ಮರಗೋಳ ಇತನ ಮೋಟರ ಸೈಕಲ ನಂ.ಕೆಎ-32-ಇಇ-8480 ನೇದ್ದನ್ನು ತೆಗೆದುಕೊಂಡು ಮಾರಿಗೆ ಮಳಖೇಡದಿಂದ ಸದರಿ ಮೋಟರ ಸೈಕಲ ಮೇಲೆ ನಾನು ಹಿಂದೆ ಕುಳಿತಿದ್ದು ಮೋಟರ ಸೈಕಲ ದೇವಪ್ಪ ಇತನೂ ಚಲಾಯಿಸುತ್ತಿದ್ದು ಮುಗುಟಾ ಕ್ರಾಸ ಬಂದಾಗ ನಮ್ಮ ಗ್ರಾಮದ ಮಲ್ಲಪ್ಪ ತಂದೆ ನರಸಪ್ಪಾ ನಾಚವಾರ ಇತನೂ ಸಿಕ್ಕಿದ್ದರಿಂದ ನಾವು ಮೋಟರ ಸೈಕಲ ರೋಡಿನ ಬದಿಗೆ ನಿಲ್ಲಿಸಿ ಮಲ್ಲಪ್ಪನ ಸಂಗಡ ಮಾತನಾಡುತ್ತಾ ನಿಂತಿರುವಾಗ ಅಂದಾಜು 10-30 ಪಿಎಂದ ಸುಮಾರಿಗೆ ಸೇಡಂ ಕಡೆಯಿಂದ ಒಂದು ಕ್ರೂಜರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬದಿಗೆ ಮಾತನಾಡುತ್ತಾ ನಿಂತ ನಮ್ಮ 3 ಜನರಿಗೆ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಬಲಗೈ ಹಸ್ತ ಬೆರಳಿಗೆ,ಹಣೆಗೆ ಭಾರಿ ರಕ್ತಗಾಯವಾಗಿದ್ದು ಬಲ ಮಗ್ಗಲಿಗೆ ಒಳಪೆಟ್ಟಾಗಿದ್ದು,ಎಡಗಾಲು ಮೊಳಕಾಲಿಗೆ ತೆರಚಿದ ಗಾಯವಾಗಿದ್ದು ಆಗ ಮಲ್ಲಪ್ಪನಿಗೆ ನೋಡಲಾಗಿ ಆತನಿಗೂ ಸಹ ಬಲಗೈ ಮುಂಗೈ ಕೆಳಗಡೆ ಅಲ್ಲಲ್ಲಿ ಎಲುಬು ಮುರಿದು ರಕ್ತ ಸೋರುತ್ತಿದ್ದು ಬಲಭುಜಕ್ಕೆ ತೆರಚಿದ ಗಾಯ ಎಡಗಾಲ ಮೊಳಕಾಲಿಗೆ ತೆರಚಿದ ಗಾಯ ಎಡಗೈ ಮೊಳಕೈಗೆ ತೆರಚಿದ ಗಾಯವಾಗಿದ್ದು ನಂತರ ದೇವಪ್ಪ ಇತನಿಗೆ ನೋಡಲಾಗಿ ಆತನ ಬಲಗೈ ಭುಜದ ಹತ್ತಿರ ಸಂಪೂರ್ಣ ಕೈ ಕಡಿದು ಬೇರೆ ಕಡೆ ಬಿದ್ದು ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯ ಹೊಂದಿ ಮೆದುಳು ಹೊರಗೆ ಬಿದ್ದು ನರಳಾಡುತ್ತಿದ್ದು ನಂತರ ಅಲ್ಲೆ ಮುಗುಟಾ ಕ್ರಾಸ ಹತ್ತಿರ ಇದ್ದ ಕೇಲವು ಜನರೂ ಬಂದು ನೋಡಿ 108 ಅಂಬುಲೇನ್ಸಕ್ಕೆ ಫೋನ ಮಾಡಿ ತಿಳಿಸಿದ್ದು ನಂತರ ಅಲ್ಲೆ ನಿಂತಿದ್ದ ಕ್ರೂಜರ ನಂ ನೋಡಲಾಗಿ ಎಂ.ಎಚ-17-ಎನ-1486 ಅಂತ ಇದ್ದು ಸದರಿ ಕ್ರೂಜರ ಚಾಲಕ ಜನರೂ ಬರುವುದನ್ನು ನೋಡಿ ತನ್ನ ವಾಹನ ಸಮೇತ ಅಲ್ಲಿಂದ ಓಡಿ ಹೋದನು. ನಂತರ 108 ಅಂಬುಲೇನ್ಸ ಬರಲಿ ಅಲ್ಲೆ ಇದ್ದ ಕೇಲವು ಜನರು ಅದರಲ್ಲಿ ನಮ್ಮ 3 ಜನರಿಗೆ ಹಾಕಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕಳಿಸಿದ್ದು ಸದರಿ ದೇವಪ್ಪಾ ಇತನೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 05-04-2015 ರಂದು ನಾನು ಬಿದರಚೇಡ ಗ್ರಾಮಕ್ಕೆ ಹೋಗಿದ್ದು  ನನ್ನ ಮಗನು 1ನೇ ತರಗಿತಿಯಲ್ಲಿ ಅಲ್ಲಿಯೇ ಓದುತ್ತಿದ್ದು ಈಗ ಬೆಸಿಗೆ ರಜೆ ಇರುವುದರಿಂದ ನಾನು ನಮ್ಮ ಮಗನಿಗೆ ನಮ್ಮೂರಿಗೆ ಕರೆದುಕೊಂಡು ಹೋಗುವ ಸಲುವಾಗಿ ಇಂದು ಬೆಳಿಗ್ಗೆ ನಾನು ಮತ್ತು ನನ್ನ ಅಳಿಯನಾದ ಸಂತೋಷ ಹಾಗು ನನ್ನ ಮಗ ಪ್ರಜ್ವಲ್ ಕೂಡಿಕೊಂಡು ನನ್ನ ಅಳಿಯನ ಮೋಟಾರು ಸೈಕಲ್ ನಂ ಕೆಎ-32-ಡ್ಬ್ಲೂ-2361 ನ್ನೇದ್ದರ ಮೇಲೆ ಬಿದರಚೇಡ ಗ್ರಾಮದಿಂದ ಸೇಡಂ ಕಡೆಗೆ ಬರುತ್ತಿದ್ದೆವು ನಮ್ಮ ಮೋಟಾರು ಸೈಕಲ್ ಸಂತೋಷ ಇತನು ಲಾಯಿಸುತ್ತಿದ್ದನು. ನಮ್ಮ ಮೋಟಾರು ಸೈಕಲ್ ಮುಧೋಳ ಸೇಡಂ ಮುಖ್ಯ ರಸ್ತೆಯ ಬಟಗೇರಾ(ಕೆ) ಗೇಟ್ ದಾಟಿ ಕಾಗಿಣಾ ನದಿಯ ಬ್ರಿಡ್ಜ್ ಮೇಲೆ  ಮುಖ್ಯ ರಸ್ತೆಯ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಸೇಡಂ ಕಡೆಯಿಂದ ಒಂದು ಮೋಟಾರು ಸೈಕಲ ಚಾಲಕನು ಅತಿವೇಗ ಹಾಗು ನಿಸ್ಕಾಳಜೀತನದಿಂದ ರಸ್ತೆಯ ಬಲಬದಿಗೆ ರಾಂಗ್ ಸೈಡಿನಿಂದ ಚಲಾಯಿಸಿಕೊಂಡು ಬಂದು 09-45 ಎ.ಎಮ್.ದ ಸುಮಾರಿಗೆ ನಮ್ಮ ಮೋಟಾರು ಸೈಕಲಿಗೆ ಮುಖಾಮುಖಿ ಡಿಕ್ಕಿ ಪಡಿಸಿದನು. ಆಗ ನಾವೆಲ್ಲರೂ ಕೆಳಗೆ ಬಿದ್ದೇವು. ಸದರಿ ಅಪಘಾತದಲ್ಲಿ ನನ್ನ ಎರಡು ಕಾಲುಗಳಿಗೆ ತರಚಿದ ಗುಪ್ತ ಗಾಯ, ಮೈಗೆ ಒಳಪೆಟ್ಟು ಆಗಿರುತ್ತದೆ ಮತ್ತು ಮೋಟಾರು ಸೈಕಲ ಮುಂದುಗಡೆ ಕುಳಿತ ನನ್ನ ಮಗನಿಗೆ ನೋಡಲಾಗಿ ಬಲಹಣೆಯ ಹುಬ್ಬಿನ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ನಮ್ಮ ಮೋಟಾರು ಸೈಕಲ ಚಾಲಕ ಸಂತೋಷ ಇತನಿಗೆ ಬಲಗೈಗೆ ಭಾರಿ ಗುಪ್ತ ಗಾಯ ಮುಖಕ್ಕೆ ರಕ್ತ ಗಾಯ ಮತ್ತು ಬಲಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಸದರಿ ಅಪಘಾತ ಪಡಿಸಿದ ಮೋಟಾರು ಸೈಕಲ್ ನಂ ನೋಡಲಾಗಿ ಕೆಎ-32-ಎಲ್- 4402 ನ್ನೇದ್ದು ಇದ್ದು ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ  ಸದಾಶಿವ ಸ್ವಾಮಿ ತೊನಸನ್ನಳ್ಳಿ ಸಾ: ಕುರಕುಂಟಾ ಅಂತ ತಿಳಿಸಿದ್ದು  ಅವನಿಗೆ ಬಲಗಾಲಿಗೆ ಮತ್ತು ಎಡಗೈಗೆ ಭಾರಿ ರಕ್ತಗಾಯವಾಗಿರುತ್ತದೆ . ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರ್ಗಿ ಠಾಣೆ : ದಿನಾಂಕ 22-03-2015 ರಂದು ಮನೆಯ ಮುಂದೆ ರೊಡಿನಲ್ಲಿ ಕು. ಭಾಗಮ್ಮ ಇವಳು ನಡೆದುಕೊಂಡು ಬರುವಾಗ ಮಲ್ಲಿಕಾರ್ಜುನ ತಂದೆ ಯಲ್ಲಣ್ಣ ಇನಾಮದಾರ ಇತನು ತನ್ನ ಮೋಟಾರು ಸೈಕಲ್‌ ನಂ ಕೆ.32,ಎಕ್ಸ್1244 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕು. ಬಾಗಮ್ಮ ಇವಳಿಗೆ ಡಿಕ್ಕಿಪಡಿಸಿ ಗಾಯಪೆಟ್ಟುಗೊಳಿಸಿರುತ್ತಾನೆ, ನಂತರ ಮೊಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ ಅಂತಾ ಶ್ರೀಮತಿ ದೇವಕಿ ಗಂಡ ಹಣಮಂತ ತಳಗೇರಿ ಸಾಃ ನರಿಬೊಳ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 April 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 05-04-2015 ರಂದು ರೇವನೂರ ಹನುಮಾನ ಗುಡಿಯ ಕಟ್ಟಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಅಂತಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್. ಜೇವರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ 3 ಜನರಿಗೆ ಹಿಡಿದುಕೊಂಡಿದ್ದು ಮತ್ತು ಒಬ್ಬನು ಓಡಿ ಹೋಗಿದ್ದು ಬೀರಲಿಂಗ ತಂದೆ ಶರಣಪ್ಪ ಹನ್ನೂರ  2. ಚೆನ್ನಬಸ್ಸು ತಂದೆ ರಾಮಚಂದ್ರ ಹನ್ನೂರ  3. ಬಸವರಾಜ ತಂದೆ ರೇವಣಸಿದ್ದಪ್ಪಗೌಡ ಮಾಲಿ ಪಾಟೀಲ 4. ಸಂಗಣ್ಣ ತಂದೆ ಲಕ್ಷ್ಮಣ ಹನ್ನೂರ ಸಾ|| ಎಲ್ಲರು ರೇವನೂರ ಇವರನ್ನು ದಸ್ತಗೀರ ಮಾಡಿಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆಗಳು ಮತ್ತು ನಗದು ಹಣ 1110/-ನೇದ್ದು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಯೊಗೇಶ ತಂದೆ ಸುಭಾಸ ಬಂಡಗರ ಸಾ:ಸ್ವಾಮಿ ವಿವೇಕಾನಂದ ನಗರ ಆಳಂದ ರಸ್ತೆ ಕಲಬುರಗಿ ಇವರು ತಮ್ಮ ಹಿರೋಹೊಂಡಾ ಸ್ಪೆಂಡರ ಪ್ಲಸ್ ಮೋಟಾರ ಸೈಕಲ್ ನಂ.ಕೆಎ-32, ಆರ್-3034 ನೇದ್ದನ್ನು ದಿನಾಂಕ: 17/03/2015 ರಂದು ಸಾಯಂಕಾಲ ತಮ್ಮ ಮನೆಯ ಮುಂದೆ ನಿಲ್ಲಿಸಿ ಅದಕ್ಕೆ ಹ್ಯಾಂಡಿಲ್ ಲಾಕ ಮಾಡಿ ರಾತ್ರಿ ಊಟಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡಿದ್ದು ಬೆಳಗ್ಗೆ ದಿನಾಂಕ: 18/03/2015 ರಂದು ಮುಂಜಾನೆ 6.00 ಗಂಟೆಗೆ ಎದ್ದು ಮನೆಯಿಂದ ಹೊರಗೆ ಬಂದಿದ್ದು ಮನೆಯ ಮುಂದೆ ತನ್ನ ಮೋಟಾರ ಸೈಕಲ ಇರಲಿಲ್ಲಾ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಹಿರೋಹೊಂಡಾ ಸ್ಪೆಂಡರ ಪ್ಲಸ್ ಮೋಟಾರ ಸೈಕಲ್ ನಂ.ಕೆಎ-32, ಆರ್-3034 ಅ.ಕಿ.39955/-ರೂ ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 04.04.2015 ರಂದು 1೦:30 ಗಂಟೆಗೆ ಶ್ರೀ ರವಿ ತಂದೆ ತಿಪ್ಪಣ್ಣ ಹಳ್ಳಿ ಸಾ|| ಬಿರಾಳ ಬಿ ಗ್ರಾಮ ಮತ್ತು ಸಿದ್ರಾಮ ಜೀರ ಇಬ್ಬರು ಕೂಡಿಕೊಂಡು ಮಾನಪ್ಪ ಈತನು ನಡೆಸುತ್ತಿ ಮೋಟಾರು ಸೈಕಲ್‌ ನಂ ಕೆ.ಎ32ಈಡಿ2381 ನೇದ್ದರ ಮೇಲೆ ಕುಳಿತುಕೊಂಡು ಜೇವರ್ಗಿಯಿಂದ ನಮ್ಮೂರಿಗೆ ಹೋಗುತ್ತಿದ್ದಾಗ ದೇವರ ಮನೆ ಲೇಔಟ್‌ ಹತ್ತಿರ ಜೇವರ್ಗಿ ಶಹಾಪುರ ಮೇನ್‌ ರೋಡಿನ ಮೇಲೆ ಹೋಗುತ್ತಿದ್ದಾಗ ನಮ್ಮ ಮುಂದುಗಡೆ ಹೋಗುತ್ತಿದ್ದ ಆಟೋ ರಿಕ್ಷಾ ನಂ ಕೆ.32ಬಿ7162 ನೇದ್ದರ ಚಾಲಕನು ತನ್ನ ಆಟೋವನ್ನು ಯಾವುದೆ ಮುನ್ಸುಚನೆ ಇಲ್ಲದೆ ಸಂಚಾರಿ ನೀಯಮ ಪಾಲಿಸದೆ ಒಮ್ಮೇಲೆ ಬಲ ಸೈಡಿಗೆ ಹೋರಳಿಸಿ ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿ ನನಗೆ ಮತ್ತು ಮಾನಪ್ಪ ಹಾಗು ಕು|| ಸಿದ್ದಪ್ಪ ಇವರಿಗೆ ಗಾಯ ಪೆಟ್ಟುಗೊಳಿಸಿ ತನ್ನ ಆಟೋವನ್ನು ಅಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಜೇವರ್ಗಿ ಠಾಣೆ : ಶ್ರೀ ಶಿವರಾಜ ತಂದೆ ಯಲ್ಲಣ್ಣ ಇನಾಮದಾರ ಸಾ: ನರಿಬೋಳ  ರವರು ದಿನಾಂಕ 04.04.2015 ರಂದು ೦4:30 ಗಂಟೆಗೆ ನನ್ನ ಮೋಟಾರು ಸೈಕಲ್‌ ನಂ ಕೆ.32ಎಕ್ಸ್1244 ನೇದ್ದರ ಮೇಲೆ ಕುಳಿತುಕೊಂಡು ನಮ್ಮುರ ಶಾಲೆಯಿಂದ ಮನೆಯ ಕಡೆಗೆ ಹೋಗುತ್ತಿದ್ದಾಗ 1. ಅಭಿಮಾನ @ ಅಭಿಮನ್ಯ ತಂದೆ ಮೂಕಪ್ಪ ತೆಳಗೇರಿ  2. ಮಲ್ಲಪ್ಪ ತಂದೆ ಮೂಕಪ್ಪ ತಳಗೇರಿ 3. ಮಲ್ಲಪ್ಪ ಕೋಳಕೂರ 4. ಹಣಮಂತ ಹೊಟ್ಟೆಗೋಳ 5. ಮಾರ್ತಂಡ ಮೂಕಪ್ಪ ತಳಗೇರಿ ಸಾ|| ಎಲ್ಲರು ನರಿಬೋಳ ಗ್ರಾಮ ಕೂಡಿಕೊಂಡು ಬಂದು ನಮ್ಮೂರ ಶಿವಣ್ಣ ರಾವೂರ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ನನಗೆ ತಡೆದು ನಿಲ್ಲಿಸಿ ಹಳೆಯ ವೈಶಮ್ಯದಿಂದ ನನ್ನ ಮೋಟಾರು ಸೈಕಲ್‌ಗೆ ಕಲ್ಲಿನಿಂದ ಹೊಡೆದು ಅದನ್ನು ಜಖಂ ಗೊಳಿಸಿ ನನಗೆ ಅವಾಚ್ಯವಾಗಿ ಬೈದು, ಕೊಲೆ ಮಾಡುವ ಉದ್ದೇಶದಿಂದ ರಾಡಿನಿಂದ, ಬಡೆಗೆಯಿಂದ, ಕಲ್ಲಿನಿಂದ ಮತ್ತು ಕೈಯಿಂದ ನನಗೆ ಹೊಡೆ ಬಡೆ ಮಾಡಿ ಕೋಲೆ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಚಂದ್ರಕಾಂತ ತಂದೆ ಬಸವರಾಜ ಹಲಗೆನವರ ಸಾ:ಮಂಗಲಗಿ ಹಾ.ವ:ಕುಕ್ಕುಂದಾ ಇವರು ದಿನಾಂಕ 05-04-2015 ರಂದು ಮುಂಜಾನೆ ಕುಕ್ಕುಂದಾ ಗ್ರಾಮದಲ್ಲಿ ಇದ್ದಾಗ ಮುಂಜಾನೆ ನನ್ನ ಹೆಂಡತಿಯ ತಮ್ಮನಾದ ಚಕ್ರವರ್ತಿ ತಂದೆ ಜುಮರು ಚೊಂಚರ ಈತನು ನನಗೆ ನೀನು  ಬೇರೆ ಜಾತಿಯವನಿದ್ದು ನಮ್ಮೊಂದಿಗೆ ಇದ್ದು ನಮ್ಮ ತಂಗಿಗೆ ಮಾಡಿಕೊಂಡಿದ್ದಿ ಮಗನೆ ನಿನಗೆ ನಾನು ನೋಡಿಕೊಳ್ಳುತ್ತೇನೆ. ಅಂತಾ ಹೇಳಿದ್ದನು. ಆಗ ನೀ ಏನ ಮಾಡಿಕೊಳ್ಳುತ್ತಿ ಮಾಡಿಕೊ ಅಂತಾ ಹೇಳಿ ನಾನು ಸೇಡಂಕ್ಕೆ ಹೋದೆನು. ನಂತರ ನಾನು ಸೇಡಂದಿಂದ ಮರಳಿ ಕುಕ್ಕುಂದಾ ಗ್ರಾಮಕ್ಕೆ ಇಂದು ಮಧ್ಯಾನ 2-45 ಗಂಟೆಗೆ ಮನೆಗೆ ಬಂದೆನು. ನಾನು ಬಂದಿದ್ದನ್ನು ನೋಡಿ ಚಕ್ರವರ್ತಿ ಈತನು ಮತ್ತು ಅವನ ಹೆಂಡತಿಯಾದ ಸುಮಿತ್ರ ಇಬ್ಬರು ಕೂಡಿ ನನಗೆ ಈ ಸೂಳೇ ಮಗನಿಗೆ ಇವತ್ತು ಬಿಡಬ್ಯಾಡದು ಇವನು ಬೇರೆ ಜಾತಿಯವನಿದ್ದು ನಮ್ಮ ತಂಗಿಗೆ ಮದುವೆ ಮಾಡಿಕೊಂಡಿದ್ದಾನೆ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿಂದ ಒಂದು ಕೊಡಲಿ ತೆಗೆದುಕೊಂಡು ಬಂದನು. ನಾನು ಮನೆಯಲ್ಲಿ ಹೋಗುತ್ತಿರುವಾಗ ನನಗೆ ಮುಂದೆ ಹೋಗದಂತೆ ಒಮ್ಮೆಲೆ ತಡೆದು ಸುಮಿತ್ರ ಇವಳು ನನಗೆ ಅವಾಚ್ಯವಾಗಿ ಬೈದು ಈ ಬಾಢಕೌಗೆ ಬಿಡಬ್ಯಾಡ ಅಂತಾ ಹೇಳಿದಳು. ಆಗ ಚಕ್ರವರ್ತಿ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನಗೆ ಹೊಡೆದು ಕೊಲೆ ಮಾಡಲು ಬಂದನು. ಆಗ ನಾನು ಒಮ್ಮೆಲೆ ತಪ್ಪಿಸಿಕೊಂಡಾಗ ಕೊಡಲಿ ಏಟು ನನ್ನ ಬೆನ್ನಿಗೆ ಎಡಗಡೆ ಬಿತ್ತು ಆಗ ನನಗೆ ಕೊಡಲಿ ಏಟಿನಿಂದ ಬೆನ್ನಿಗೆ ಗಾಯವಾಗಿ ರಕ್ತ ಸೋರಹತ್ತಿತ್ತು. ನಾನು ಚೀರಾಡುತ್ತಿದ್ದೆನು. ಆಗ ಸಪ್ಪಳ ಕೇಳಿ ನನ್ನ ಮನೆಯ ಮುಂದೆ ಇದ್ದ ನನ್ನ ಹೆಂಡತಿ ಪುಣ್ಯವತಿ, ಮತ್ತು ಅವಳ ತಾಯಿಯಾದ ಲಕ್ಷ್ಮೀಬಾಯಿ ಇವರುಗಳು ಬಂದು ನನಗೆ ಹೊಡೆಯುವದನ್ನು ಬಿಡಿಸಿದರು. ಇಲ್ಲದಿದ್ದರೆ ನನಗೆ ಹೊಡೆದು ಕೊಲೆ ಮಾಡುತ್ತಿದ್ದರು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರೆಕರಣ ದಾಖಲಾಗಿದೆ. 

05 April 2015

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-04/04/2015 ರಂದು ಮುಂಜಾನೆ ರಮೇಶ ಇತನ ಚಾಲನೆಯಲ್ಲಿ ಮೋಟಾರ ಸೈಕಲ್ ನಂ ಎಂ.ಎಚ್-13 ಎವಾಯ್-3962 ನೇದ್ದರ ಮೇಲೆ ತಮ್ಮೂರಿನಿಂದ ಶ್ರೀ ಬಾಳು ತಂದೆ ಭಜರಂಗ ಡುಬಲ್ ಸಾ:ಅಜನ್ ಸೊಂಡಾ ತಾ:ಪಂಡರಪುರ ಜಿ;ಸೋಲಾಪುರ  ಕರ್ನಾಟಕ ರಾಜ್ಯದ ಹುಮನಾಬಾದಕ್ಕೆ ಹೋಗಿ ವೀರಭದ್ರಶ್ವರ ದೇವರ ದರ್ಶನ ಮುಗಿಸಿಕೊಂಡು ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಹೋಗುವಾಗ ಮೃತ ರಮೇಶ ಇತನು ಫಿರ್ಯಾದಿಗೆ ಹಿಂದೆ ಕೂಡಿಸಿಕೊಂಡು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ಚಲಾಯಿಸಿ ಅವರಾದ ದಾಟಿ ಸ್ವಾಮಿ ಸಮರ್ಥ ಆಶ್ರಮದ ಹತ್ತಿರ ರೋಡಿನ ಬದಿಗೆ ಇದ್ದ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೃತನಿಗೆ ಒಳಪೆಟ್ಟು ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟಿದ್ದು ಫಿರ್ಯಾದಿಗೂ ಸಹಾ ಭಾರಿ ಗಾಯಗಳಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಘಾ ಠಾಣೆ : ಶ್ರೀಮತಿ ಸಕ್ಕುಬಾಯಿ ಗಂಡ ರಮೇಶ ರಾಠೋಡ ಸಾ: ಕೋರಳ್ಳಿ ತಾಂಡಾ ಹಾ:ವ ನಿಂಬರ್ಗಾ ಇವರ ಪಾಲಿಗೆ ಬರಬೇಕಾದ ಹೊಲ ಮನೆ ಕೇಳಿದಕ್ಕೆ ಮೋಹನ ತಂದೆ ಧನಸಿಂಗ್ ರಾಠೋಡ ಸಂಗಡ 02 ಜನರು ಸಾ : ಎಲ್ಲರೂ ಕೋರಳ್ಳಿ ತಾಂಡಾ  ಸೇರಿ ದಿನಾಂಕ 03-04-2015 ರಂದು ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಮಾನ ಭಂಗಕ್ಕೆ ಯತ್ನಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಗೌರಮ್ಮ ಗಂಡ ಬಸವರಾಜ ನಾವಿ ಸಾ|| ಘತ್ತರಗಾ ಇವರು ದಿನಾಂಕ 04-04-2015 ರಂದು ನನ್ನ ಅಣ್ಣನ ಹೊಲದಲ್ಲಿರುವ ಶ್ರೀ ಲಕ್ಷ್ಮಿ ದೇವಿಗೆ ಪೂಜೆ ಮಾಡಲು ಹೋಗಿದ್ದು ಪೂಜೆ ಮಾಡಿಕೊಂಡು ಮರಳಿ ಬರುವಾಗ ನಮ್ಮ ಗ್ರಾಮದವರಾದ ಶ್ರೀ ಮುದಕಪ್ಪ (ಅವ್ವಪ್ಪ ತಂದೆ ಕಾಂತಪ್ಪ ಬಂಟನೂರ ಎನ್ನುವ ವ್ಯಕ್ತಿ ಆಜು ಬಾಜು ಯಾರು ಇಲ್ಲದನ್ನು ನೋಡಿಕೊಂಡು ಮಹಿಳೆಯಾದ ನನಗೆ ಅಡ್ಡಗಟ್ಟಿ ಕೈಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದು, ನಾನು ಎದುರು ಮಾತನಾಡಿದಾಗ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ ನನ್ನ ಕೈಯಲ್ಲಿರುವ ಬಳೆಗಳು ಒಡೆದು ರಕ್ತ ಸ್ರಾವವಾಗಿದೆ ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರಿಸಿಕೊಂಡ ಆರೋಪಿತನ ಬಂಧನ :
ರೋಜಾ ಠಾಣೆ : ರೋಜಾ ಪೊಲೀಸ್ ಠಾಣೆಯ 1] ಗುನ್ನೆ ನಂ.90/2011, 2] ಗುನ್ನೆ ನಂ. 84/2011, 3] ಗುನ್ನೆ ನಂ. 70/2012, ನೇದ್ದರ ಕೇಸುಗಳಲ್ಲಿ ಬಹಳ ದಿನಗಳಿಂದ ತಲೆಮರೆಸಿಕೊಂಡಿರುವ ವಾರೆಂಟ ಆರೋಪಿ ಮಿರ್ಜಾ ಅಕ್ಬರ ಕಲಿಮ ಬೇಗ @ ಕಲಿಮ @ ಮಿರ್ಜಾ ಅನ್ವರ ಕಲಿಮ ಬೇಗ @ ಕಲಿಮ ಡಾನ ತಂದೆ ಮಿರ್ಜಾ ಮಹೆಬೂಬ ಬೇಗ ಸಾ: ಮನೆ ನಂ. 7-22/1202 ಮದೀನಾ ಮಂಜಿಲ್ ಕೆ.ಬಿ.ಎನ್ ಇಂಜಿನಿಯರಿಂಗ ಕಾಲೇಜ ಎದುರುಗೆಡ ಬಿಲಾಲಾಬಾದ ಕಾಲೋನಿ ಕಲಬುರಗಿ ಹಾ:ವಾ: ಹೈದ್ರಾಬಾದ ಈತನಿಗೆ ಇಂದು ದಿನಾಂಕ: 04/04/2015 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಕಳುಹಿಸಿಲಾಗಿದೆ.