POLICE BHAVAN KALABURAGI

POLICE BHAVAN KALABURAGI

21 December 2014

Kalaburagi District Reported Crimes

ಆಸ್ತಿಗಾಗಿ ಚಿಕ್ಕಪ್ಪನ ಕೊಲೆ, ಎರಡು ಜನ ಆರೋಪಿತರ ಬಂಧನ
ಫರತಾಬಾದ ಠಾಣೆ :  ದಿನಾಂಕ 5/12/2014 ರಂದು ರಾತ್ರಿ ವೇಳೆಯಲ್ಲಿ ಕವಲಗಾ (ಬಿ) ಗ್ರಾಮದ ಬ್ರೀಡ್ಜ ಕಂ ಬ್ಯಾರೇಜ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಚಾಕುವಿನಿಂದ ಇರಿದು ಭೀರಕವಾಗಿ ಕೊಲೆ ಮಾಡಿ ಬ್ರೀಡ್ಜ ಮೇಲಿಂದ ಕೆಳಗೆ ನೂಕಿಸಿಕೊಟ್ಟು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದು ಈ ಬಗ್ಗೆ ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಈ ಕೊಲೆ ಪ್ರಕರಣದ ಗಂಭೀರ ಸ್ವರೂಪದ ಅಫರಾದ ಅಂತಾ ಪರಿಗಣಿಸಿ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡುವಂತೆ ಮಾನ್ಯ ಶ್ರೀ ಅಮಿತ್ ಸಿಂಗ್.  ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ, ಶ್ರೀ ಸಂತೋಷ ಬಾಬು. ಐ.ಪಿ.ಎಸ್. ಸಹಾಯಕ ಪೊಲೀಸ್ ಅಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ ಕಲಬುರಗಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ ಶ್ರೀ ನಾಗಭೂಷಣ, ಹೆಚ್.ಸಿಗಳಾದ ಶಂಕರ, ಅರ್ಜುನ ಸಿಂಗ್, ಎ.ಹೆಚ್.ಸಿ ಅರ್ಜುನ ಹೆಚ್.ಸಿ, ಪಿಸಿಗಳಾದ ಮಲ್ಲಿನಾಥ ಆರ್.ಹೆಚ್, ಅಶೋಕ ಹಳಿಗೋದಿ, ಮಶಾಕ, ಚನ್ನಬಸಯ್ಯ, ಬಲರಾಮ  ರವರು ಕೂಡಿಕೊಂಡು ಮಾಹಿತಿ ಸಂಗ್ರಹಿಸಿ ಅಪರಿಚಿತ ವ್ಯಕ್ತಿಯ ಹೆಸರು ಶಾಬೋದ್ದಿನ ತಂದೆ ಮಹಿಬೂಬಸಾಬ ಜಮಾದಾರ ಸಾ :ಮೈನಾಳ ಈತನ ಮೃತ ದೇಹ ಅಂತಾ ಪತ್ತೆ ಹಚ್ಚಿ ಆರೊಪಿತರ ಪತ್ತೆಗಾಗಿ ಜಾಲ ಬಿಸಿ ಮಾಹಿತಿ ಸಂಗ್ರಹಿಸಿ  ಈ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು ಆರೋಪಿ ಮಹ್ಮದ ಮಶಾಕ (ಜುನೈದಿ) ಮತ್ತು ಆತನ ಗೆಳೆಯನಾದ ಜಹೀರ ಇವರಿಬ್ಬರು ಕೂಡಿಕೊಂಡು ಮೈನಾಳ ಗ್ರಾಮದಲ್ಲಿರುವ ತಮ್ಮ ಪಾಲಿಗೆ ಬರುವ 9 ಎಕರೆ ಜಮೀನು ತಮ್ಮ ಚಿಕ್ಕಪ್ಪ ನೀಡದಿದ್ದಕ್ಕೆ ಮೃತ ಶಾಬೋದ್ದಿನ ಈತನಿನನ್ನು ಮೊಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿ ಕವಲಗಾ ಬಿ ಹೋಗುವ ರಸ್ತೆಯಲ್ಲಿರುವ ಬ್ರೀಡ್ಜ ಕಂ ಬ್ಯಾರೇಜ ಮೇಲೆ ಕೊಲೆ ಮಾಡಿ ಶವವನ್ನು ಬ್ರಿಡ್ಜನ ಕೆಳಗಡೆ ಬಿಸಾಕಿ ಫರಾರಿಯಾಗಿದ್ದು ದಿನಾಂಕ 20/12/2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1) ಮಹ್ಮದ ಮಶಾಕ @ ಜನೈದ ತಂದೆ ಮೈನೋದ್ದಿನ ಜಮಾದಾರ ಸಾ : ಮೈನಾಳ ತಾ :ಜಿ ಕಲಬುರಗಿ ಹಾಲಿ ವಸ್ತಿ ಗರಿಬ ನವಾಜ ಕಾಲೋನಿ ಕಲಬರುಗಿ 2) ಜಹೀರ @ ಮಹ್ಮದ ಜಹೀರ ತಂದೆ ಖಾಜಾಮಿಯ್ಯಾ ಸಾ : ಗರಿಬ ನವಾಜ ಕಾಲೋನಿ ಆಜಾದಪುರ ರೋಡ್ ಕಲಬುರಗಿ ರವರನ್ನು ಬಂಧಿಸಿ ನ್ಯಾಂಗ ಭಂಧನಕ್ಕೆ ಕಳುಹಿಸಿದ್ದು ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. 
ಅಪ್ರಾಪ್ತ  ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚರ ಪ್ರಕರಣ :
ಕಾಳಗಿ ಠಾಣೆ : ಕುಮಾರಿ ವಯ:07 ವರ್ಷ ಇವಳಿಗೆ ದಿನೇಶ ಚವ್ಹಾಣ, ಕಾಳ್ಯಾ ಜಾಧವ, ನಾಗೇಶ ರಾಠೋಡ, ಮತ್ತು ಶಿವಾ ರಾಠೋಡ ಇವರುಗಳು ದಿನಾಂಕ 19-12-2014 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನಗೆ ಮನೆಯಿಂದ ಎಳೆದುಕೊಂಡು ದಿನೇಶನ ಮನೆಗೆ ಹೋಗಿ ದಿನೇಶನು ತನ್ನೊಂದಿಗೆ ಸಂಬೋಗ ಮಾಡಿದ್ದು ನಂತರ ಎಲ್ಲರೂ ಕೂಡಿ ತಾಂಡಾದ ಪಕ್ಕದಲ್ಲಿರುವ ಧರ್ಮು ರಾಠೋಡ ರವರ ತೋಗರಿಯ ಹೋಲದಲ್ಲಿ ಎಳೆದುಕೊಂಡು ಹೋಗಿ ಎಲ್ಲರು ಸರದಿಯಂತೆ ತನ್ನ ಮೇಲೆ ಮಲಗಿ ಜಬರಿ ಸಂಭೋಗ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶಿವರತ್ನಾ ಗಂಡ ಗಿರೀಶ ರವರು  ದಿನಾಂಕ: 20-12-2014 ರಂದು 12-30 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಚಿಕ್ಕಮ್ಮ ಶಿವಲಿಲಾ, ತಾಯಿ ಅಕ್ಕನಾಗಮ್ಮ ರವರು ಕಮಲ ಹೊಟೇಲ ಎದುರುಗಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು  ರೋಡ ದಾಟುತ್ತಿದ್ದಾಗ ಮೋ/ಸೈಕಲ್ ನಂ: ಕೆಎ 32 ಯು 5843 ರ ಸವಾರನು ಎಮ್.ಎಸ್.ಕೆ.ಮಿಲ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಅದೆ ರೀತಿ ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡವಾಗಿ ಬರುತ್ತಿದ್ದ ಮೋ/ಸೈಕಲ್ ನಂ; ಕೆಎ 02  ಹೆಚ್.ಎಮ್. 931 ನೆದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನಗೆ ಭಾರಿ ಪೆಟ್ಟು ಬಿದ್ದಿದ್ದು ಮೋಟಾರ ಸೈಕಲ ನಂ ಕೆಎ-02-ಹೆಚ,ಎಮ್- 931 ನೆದ್ದರ ಹಿಂದುಗಡೆ ಕುಳಿತು ಬಂದಿದ್ದ ಮಹಿಬೂಬ ಷಾ ಇತನಿಗೂ ಗಾಯವಾಗಿದ್ದು ಎರಡು ಮೋಟಾರ ಸೈಕಲ ನಿಲ್ಲಿಸಿ  ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

20 December 2014

KALABURAGI DIST REPORTED CRIMES

ಅಫಜಲಪೂರ ಠಾಣೆ:
ಜಾತಿ ನಿಂದನೆ ಮತ್ತು ಆತ್ಮ ಹತ್ಯೆಗೆ ಪ್ರೇರಣೆ ಪ್ರಕರಣ:
ದಿನಾಂಕ 19/12/2014 ರಂದು ಶ್ರೀ ಶಿವಾನಂದ ತಂದೆ ರಾಮಚಂದ್ರ ಚಾಬುಕ್ಕಸರ ಸಾ|| ಆಳೂರ ಜಿ|| ವಿಜಯಪೂರ ಇವರು ಠಾಣೆಗೆ ಹಾಜರಾಗಿ ನ್ನ ಮಗ ಅನೀಲಕುಮಾರ (ಕುಮಾರ) ಈತನು ಅಫಜಲಪೂರ ತಾಲೂಕಿನ ಮಂಗಳೂರ ಗ್ರಾಮದ ಚಿದಾನಂದ ತಂದೆ ಕಾಂತಪ್ಪ ಪೂಜಾರಿ ಇವರ ಟ್ಯಾಕ್ಟರನ್ನು ನಡೆಸಿಕೊಂಡು ಅವರ ಹತ್ತಿರವೆ ಇದ್ದು ದಿನಾಂಕ 16-12-2014 ರಂದು ರಾತ್ರಿ  9:00 ಗಂಟೆ ಸುಮಾರಿಗೆ ಅನೀಲಕುಮಾರನು ಅಫಜಲಪೂರದ ಎಮ್.ಜಿ.ಎಮ್ ದಾಬಾದ ಮುಂದೆ ನಿಲ್ಲಿಸಿದ್ದ ನಡೆಸುತ್ತಿದ್ದ ಟ್ಯಾಕ್ಟರನ್ನು ಯಾರೊ ತಗೆದುಕೊಂಡು ಹೊಗಿದ್ದರಿಂದ ಟ್ಯಾಕ್ಟರ ಮಾಲಿಕ ಚಿದಾನಂದ ಮತ್ತು ಅವರ ತಮ್ಮ ಮಾಳಪ್ಪ ಪೂಜಾರಿ ಮತ್ತು ಇತರ 02 ಜನ ಕೂಡಿಕೊಂಡು ಮಗನೆ ಟ್ಯಾಕ್ಟರ ಎಲ್ಲಿಟ್ಟಿದಿ ಎನು ಮಾಡಿದಿ ಎಂದು ಅನೀಲಕುಮಾರನಿಗೆ ಜಾತಿ ಎತ್ತಿ ಬೈದು - ಹೊಡೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳ ಕಿರುಕುಳ ಕೊಟ್ಟ ಬಗ್ಗೆ ನನಗೆ ದೂರವಾಣಿ ಮೂಲಕ ತಿಳಿಸಿರುತ್ತಾನೆ. ಹೀಗಿರುವಾಗ ದಿನಾಂಕ 19-12-2014 ರಂದು ಮದ್ಯ ರಾತ್ರಿ 2:00 ಗಂಟೆ ಸುಮಾರಿಗೆ ಟ್ಯಾಕ್ಟರ ಮಾಲಿಕರಾದ ಚಿದಾನಂದ ಪೋನ ಮಾಡಿ ನಿಮ್ಮ ಮಗ ಟ್ಯಾಕ್ಟರ ವಿಷಯವಾಗಿ ಮಂಗಳೂರ ಗ್ರಾಮದ ನಮ್ಮ ಮನೆಯಲ್ಲಿ ತನ್ನ ಮೈಗೆ  ನಮ್ಮ ಮನೆಯ್ಲಲಿಟ್ಟಿದ ಸೀಮೆ ಎಣ್ಣೆ ಮೈ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು ಆತನಿಗೆ ಗುಲಬರ್ಗಾದ ಸರ್ಕಾರಿ ಆಸ್ಪತ್ರೆಗೆ ತಂದು ಹಾಕಿದ ಬಗ್ಗೆ ತಿಳಿಸಿದ್ದು. ನಂತರ ಬೆಳಿಗ್ಗೆ ಬೆಳಿಗ್ಗೆ 7:00 ಗಂಟೆ ಮತ್ತೆ ಚಿದಾನಂದ ಇವರು ನಮಗೆ ಪೋನ ಮಾಡಿ ನಿಮ್ಮ ಮಗ ಉಪಚಾರದ ವೇಳೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಗುಲಬರ್ಗಾಕ್ಕೆ ಹೋಗಿ ಈಗ ತಡವಾಗಿ ಠಾಣೆಗೆ ಬಂದಿದ್ದು. ನನ್ನ ಮಗ ಅನೀಲಕುಮಾರನಿಗೆ (ಕುಮಾರ) ಅವನ ಟ್ಯಾಕ್ಟರ ಮಾಲಿಕ ಚಿದಾನಂದ ಪೂಜಾರಿ ಮತ್ತು ಮಾಳಪ್ಪ ಪೂಜಾರಿ ಇಬ್ಬರು ಹಾಗೂ ಇವರ ಜೋತೆಗೆ ಇನ್ನು 02 ಜನ ಕೂಡಿಕೊಂಡು ಟ್ಯಾಕ್ಟರ ವಿಷಯವಾಗಿ ಜಾತಿ ಎತ್ತಿ ಬೈದು, ಕೈಯಿಂದ ಹೊಡೆಯುವುದು ಮಾಡಿ ಅವನ ಮನಸ್ಸಿಗೆ ನೋವಾಗುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಹಾಗೂ ಆತ್ಮಹತ್ಯ ಮಾಡಿಕೊಳ್ಳಲು ದುಸ್ಪ್ರೇರಣೆ ಮಾಡಿದ್ದರಿಂದ ನನ್ನ ಮಗ ತನ್ನ ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾನೆ  ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ
ದಿನಾಂಕ 19-12-2014 ರಂದು 4-40 ಪಿ.ಎಮ್.ಕ್ಕೆ ಶ್ರೀ ಈಶ್ವರ @ ವಿಶ್ವರಾಥ್ಯ ತಂದೆ ಮಾನಪ್ಪ ಮೇಟಿ ಸಾ: ಪ್ರಗತಿ ಕಾಲೋನಿ  ಕಲಬುರಗಿ  ಸರಕಾರಿ ಆಸ್ಪತ್ರೆಯ ಎದುರಿನ ರೋಡ ಮೇಲೆ ಎಸ್.ಟಿ.ಬಿ.ಟಿ. ಕ್ರಾಸ ಕಡೆಗೆ ಹೋಗುವ ಸಲುವಾಗಿ ನಡೆದುಕೊಂಡು ರೋಡ ಕ್ರಾಸ ಮಾಡುತ್ತಿದ್ದಾಗ ಆರ್.ಟಿ.ಓ ಕ್ರಾಸ ಕಡೆಯಿಂದ ಬರುತ್ತಿದ್ದ  ಮೋ/ಸೈಕಲ ನಂಬರ ಕೆಎ-34 ಡಬ್ಲೂ-1539 ರ ಸವಾರನು ತನ್ನ ಮೋ/ಸೈಕಲ ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಈಶ್ವರ @ ವಿಶ್ವರಾಥ್ಯ ನಿಗೆ  ಅಪಘಾತ ಮಾಡಿದ್ದರಿಂದ ಶ್ರೀ ಈಶ್ವರ @ ವಿಶ್ವರಾಥ್ಯನ ಬಲಗಡೆ ತಲೆಗೆ ಗುಪ್ತಪೆಟ್ಟು, ಬಲಗಾಳು ಪಾದಕ್ಕೆ ಮೇಲ್ಬಾಗದಲ್ಲಿ ರಕ್ತಗಾಯ, ಎಡಗಾಲು ಮೊಳಕಾಲ ಕೆಳಗೆ ತರಚೀದಗಾಯ ಹಾಗು ಬಲಗೈ  ಮೊಳಕೈಗೆ ತರಚೀದಗಾಯಗಳಾಗಿದ್ದು ಅಪಘಾತಪಡಿಸಿದ ಮೋ.ಸೈ ಸವಾರ ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸಂಚಾರಿ ಪೊಲೀಸ ಠಾಣೆ ಕಲಬುರಗಿ
ದಿನಾಂಕ 18-12-2014 ರಂದು 5-00 ಪಿ.ಎಮ್ ಕ್ಕೆ ಮಿಜಗುರಿ ನಯಾ ಮೊಹಲ್ಲಾದಲ್ಲಿರುವ ನಸೀರ ಈತನ ಮನೆಯ ಎದರುಗಡೆ ರೋಡಿನ ಮೇಲೆ ತನ್ನ ಮಗನಾದ ಅಬ್ದುಲ ರಹಿಮಾನ ನೊಂದಿಗೆ ನಿಂತಾಗ ಮೋಟಾರ ಸೈಕಲ ನಂ. ಕೆ.ಎ 32 ಎಚ್. 1094 ನೇದ್ದರ ಮೇಲೆ ಇಬ್ಬರು ಕುಳಿತು ಅದರ ಚಾಲಕ ಜವಹಾರ ಸ್ಕೂಲ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಅಬ್ದುಲ ರಹಿಮಾನನಿಗೆ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ರಹಿಮಾನನಿಗೆ ಮೊಳಕಾಲಿಗೆ ಮತ್ತು ಬಲಗಡೆ ಕಿವಿತೆ ಗಾಯ ಪೆಟ್ಟಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗೆದೆ. 

18 December 2014

Kalaburagi District Reported Crimes

ಅಪಘಾತ ಪ್ರಕರಣ :

ಸರಕಾರಿ ಆಸ್ಪತ್ರೆಯ ಓ.ಪಿ. ಪಿಸಿ ರವರು ನಿಸ್ತಂತು ಮೂಲಕ ಸಂತೋಷ ಮತ್ತು ಮಂಜುನಾಥ ಇವರು ರಸ್ತೆ ಅಪಘಾತಹೊಂದಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಸರಕಾರಿ ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು ಮಂಜುನಾಥ ಇವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ ರಾತ್ರಿ 11=30 ಗಂಟೆಯ ಸುಮಾರಿಗೆ ಫಿರ್ಯಾದಿಯು ಸಂತೋಷ ನಾಟಿಕಾರ ಇತನ ಮೋ/ಸೈಕಲ್ ನಂ; ಕೆಎ 32 ಇಸಿ 1756 ನೆದ್ದರ ಮೇಲೆ ಹಿಂದುಗಡೆ ಕುಳಿತುಕೊಂಡು ಜೇವರ್ಗಿ ರೋಡ ಕಡೆಯಿಂದ ಆರ್.ಪಿ.ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ರಾಮ ಮಂದಿರ ರಿಂಗ ರೋಡ ಹತ್ತಿರ ಆರ್.ಪಿ.ಸರ್ಕಲ್ ಕಡೆಯಿಂದ ಕೃಜರ ಜೀಪ ನಂ: ಕೆಎ 48 ಎಮ್ 1253 ನೆದ್ದರ ಚಾಲಕ ಸಂಗಪ್ಪ @ ಸಂಗಮೇಶ ಇತನು ತನ್ನ ಕೃಜರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೋಗುತ್ತಿದ್ದ ಮೋ/ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಸಂತೋಷನಿಗೆ ಗಾಯಗೊಳಿಸಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ.