POLICE BHAVAN KALABURAGI

POLICE BHAVAN KALABURAGI

02 November 2014

Gulbarga District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮೋಹನ ತಂದೆ ಬಸವಣಪ್ಪಾ ಢೋಲೆ ಸಾಃ ಡಿಪೋ ನಂ. 3, ವಿಭಾಗ ನಂ. 3, ಎನ್.ಈ.ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ಇವರು ದಿನಾಂಕಃ 27/10/2014 ರಂದು ಸುಪರ ಮಾರ್ಕೆಟದಿಂದ ಪಾಳಾ ಗ್ರಾಮದ ಮಾರ್ಗದಲ್ಲಿ ಬಸ್ ನಂ. ಎಫ್ 1389 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಅಂದು ಸುಪರ ಮಾರ್ಕೆಟದಿಂದ ಪಾಳಾ ಗ್ರಾಮದ ಮಾರ್ಗದಲ್ಲಿ ಹೋಗುವಾಗ ಸದರಿ ನಮ್ಮ ವಾಹನ ಸರಡಗಿ ದಾಟಿ ಅರ್ದ ಕಿ.ಮೀ ದಾಟಿದ ಮೇಲೆ ಇನ್ನೂ 03 ಕಿ.ಮೀ ಇರುವಾಗ 1) ಶ್ರೀ ರಾಘವೇಂದ್ರ ಎ.ಟಿ.ಐ ಹಾಗು 2) ಹಣಮಂತ ಎ.ಟಿ.ಐ ತನಿಖಾಧಿಕಾರಿಗಳು ಬಂದು ನಮ್ಮ ಬಸ್ ತಡೆದು ಕೂಡಲೇ ಬಸ್ಸಿನಲ್ಲಿ ಹತ್ತಿ ನನ್ನ ಹತ್ತಿರ ಇರುವ ಟಿಕೆಟ್ ವಿತರಣೆ ಮಶೀನ್ ನೀಡುವಂತೆ ಕೇಳಿದರು. ಆಗ ನಾನು ಅವರಿಗೆ ಸದರಿ ಮಶೀನ್ ಕೊಟ್ಟೆ ಇನ್ನೂ ಟಿಕೆಟ್ ಕೊಡುತ್ತಿದ್ದೇನೆ ಅಂದರೂ ಕೂಡ ಸದರಿ ಅಧಿಕಾರಿಗಳು ಕೇಳದೇ ಮಶಿನ್ ನನ್ನ ಹತ್ತಿರ ತೆಗೆದುಕೊಂಡರು. ಆಗ ಸಮಯ ಅಂದಜು 01 ಗಂಟೆಯಾಗಿತ್ತು. ನೀನು ಟಿಕೆಟ್ ಇನ್ನೂ ವಿತರಣೆ ಮಾಡಿರುವುದಿಲ್ಲ ಎಂದು ಹೇಳಿ ನಿನಗೆ ಮೆಮೋ ನೀಡುತ್ತೇವೆಂದು ಹೇಳಿದರು. ಆಗ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರೂ ಅವರು ಕೇಳದೇ ಪಾಳಾ ಗ್ರಾಮದವರೆಗೆ ಬಂದರು. ಅಲ್ಲಿಯೇ ಸುಮಾರು 01 ಗಂಟೆಯವರೆಗೆ ನಮ್ಮ ಅವರ ಮಧ್ಯೆ ವಾದ ವಿವಾದ ನಡೆಯಿತು. ಆವಾಗ ಗ್ರಾಮದ ನಾಗರೀಕರು ಸಮಕ್ಷಮದಲ್ಲಿ ಇದ್ದ ಸ್ಥಿತಿ ಮೆಮೋ ನೀಡುತ್ತೇವೆಂದು ಹೇಳಿ ಒಂದು ಮೆಮೋ ಸುಳ್ಳು ಬರೆದು ಕೊಟ್ಟರು. ಅದಕ್ಕೆ ನಾನು ಒಪ್ಪುವುದಿಲ್ಲವೆಂದು ಸಹಿ ಮಾಡಿರುತ್ತೇನೆ. ನಂತರ ನಾನು ಸಾರ್ವಜನಿಕರು ಬಸ್ ತಡವಾಗಿದೆ ನಡೆರಿ ಎಂದು ಒತ್ತಾಯ ಮಾಡುತ್ತಿರುವುದರಿಂದ ಸದರಿ ಬಸ್ಸನ್ನು ಗುಲಬರ್ಗಾಕ್ಕೆ ಬರುವಾಗ ಸದರಿ ರಾಘವೇಂದ್ರ ಎ.ಟಿ.ಐ ಸಾಹೇಬರು ಹಾಗು ಹಣಮಂತ ಎ.ಟಿ.ಐ ಸಾಹೇಬರು ಅವರ ಕಾರ್ ಡ್ರೈವರ ಪುನಃ ನಮ್ಮ ಬಸ್ ಸರಡಗಿ ಕ್ರಾಸ್ ಹತ್ತಿರ ನಿಲ್ಲಿಸಿ ನೀನು ಹಳೆ ನಿರ್ವಾಹಕಕನಾಗಿದ್ದು ನಿನಗೆ ಅನ್ಯಾಯವಾಗುತ್ತದೆ ನಿನಗೆ ಇನ್ನೊಂದು ಮೆಮೋ ಬರೆದುಕೊಡುತ್ತೇವೆ ಈಗ ಬರೆದು ಕೊಟ್ಟ ಮೊಮೊ ಕೊಡಿ ಎಂದು ನನ್ನಿಂದ ವಾಪಸ್ಸು ಪಡೆದುಕೊಂಡು, ನಂತರ ನೀನು ಗುಲಬರ್ಗಾಕ್ಕೆ ಬನ್ನಿರಿ ಎಂದು ಅಲ್ಲಿಯೇ ಮೆಮೊ ಬರೆದುಕೊಡುತ್ತೇವೆ. ಈಗ ಪ್ಯಾಸಿಂಜರಗೆ ತಡವಾಗುತ್ತದೆ ನಡೆ ಎಂದು ಹೇಳಿದ್ದರಿಂದ ನಾನು ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಬಂದು ಮಾನ್ಯರು ನನಗೆ ಮೆಮೊ ನೀಡಲು ಕೋರಿದೆ. ಆಗ ಸದರಿಯವರು ನನಗೆ ನಾನು ಯಾವುದೇ ತಪ್ಪು ಮಾಡಿದಿದ್ದಾಗ್ಯೂ ಪುನಃ ಹೆಚ್ಚಿನ ಟಿಕೆಟ್ ಹೊಡೆಯಲಾಗಿದೆ ಎಂದು ಸುಳ್ಳು ಮೆಮೊ ನೀಡಿದರು. ಆಗ ನಾನು ತಾವು ಇದ್ದ ಸ್ಥಿತಿ ಬರೆಯಬೇಕು ಒಂದು ವೇಳೆ ಹೆಚ್ಚಿಗೆ ಬರೆದರೆ ಅನ್ಯಾಯವಾಗು ವುದೆಂದು ಅಂದಾಗ ಮಗನೆ ನಾವು ಹೇಳಿದಹಾಗೆ  ಕೇಳಬೇಕೆಂದು ನನಗೆ ಹೆದರಿಸಿದರು. ನಾನು ಅವರಿಗೆ ಹೆದರದೇ ಇದ್ದಾಗ ಮಾತಿಗೆ ಮಾತು ಬೆಳೆದು ಸದರಿ ಇಬ್ಬರೂ ಎ.ಟಿ.ಐ ಹಾಗು ಅವರ ಕಾರ್ ಚಾಲಕರು ಸೇರಿ ನನಗೆ ಬಸ್ಸಿನಿಂದ ಅಂಗಿ ಹಿಡಿದು ಎಳೆದಾಡಿ  ಮಗನೆ ಸಹಿ ಮಾಡು ಎಂದು ನನಗೆ ಸಿಕ್ಕಾಪಟ್ಟೆ ಹೊಡೆ ಬಡೆ ಮಾಡಿದ್ದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಾನು ಸಹಿ ಮಾಡುವುದಿಲ್ಲ ಎಂದಿದಕ್ಕೆ ಸದರಿಯವರು ನನಗೆ ಎಳೆದಾಡಿ ಹೊಡೆ ಬಡೆ ಮಾಡಿ ಸಹಿ ಮಾಡಿಕೊಂಡಿದ್ದು ನೀನು ಹೇಗೆ ನೌಕರಿ ಮಾಡುತ್ತಿ ಮಗನೇ ಎಂದು ನನಗೆ ಸದರಿಯವರು ಜೀವಕ್ಕೆ ಭಯ ಹಾಕಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿಗಳ ಕತ್ತು ಕೊಯಿದು ಸಾಯಿಸಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ. ಶರಣಪ್ಪ ತಂದೆ ಸಂಗಪ್ಪ ದಂಡಗುಂಡ ವಯ|| 45, ಸಾ|| ನೃಪತುಂಗ ಕಾಲೋನಿ ಹತ್ತಿರ ಇರುವ ಅಶೋಕ ಹೊನ್ನಳಿ ರವರ ಹೊಲದಲ್ಲಿ ತಾ||ಜಿ|| ಕಲಬುರ್ಗಿ ಇವರಿಗೆ 5 ಜನ ಮಕ್ಕಳಿದ್ದು ಮಗಳಾದ ಅಂಬಿಕಾ ಇವಳೊಂದಿಗೆ ಶಕ್ತಿ ನಗರದಲ್ಲಿ ವಾಸವಾಗಿರುವ ರವಿ ತಂದೆ ಚೋಕ್ಲು ರಾಠೋಡ ಈತನು ಪ್ರೀತಿಸುತ್ತಿದ್ದು ಈ ಬಗ್ಗೆ ಅವರ ತಂದೆ-ತಾಯಿಗೆ ಕರೆಯಿಸಿ ಇನ್ನೊಮ್ಮೆ ನಮ್ಮ ಮಗಳ ತಂಟೆಗೆ ಬಾರದಂತೆ ಬುದ್ದಿವಾದ ಹೇಳಿ ಕಳುಹಿಸಿದ್ದು ದಿನಾಂಕ: 31/10/2014 ರಂದು ರಾತ್ರಿ 9:00 ಗಂಟೆಗೆ ನನ್ನ ಕುರಿಗಳನ್ನು ಹಾಗೂ ಪಕ್ಕದ ಮನೆಯ ಆಶಪ್ಪ ತಂದೆ ಸಾಯಿಬಣ್ಣ ದೊಡ್ಡಮನಿ, ಇವರ ಕುರಿಗಳನ್ನು ಕೂಡಿಸಿ ರಾತ್ರಿ ಶೆಡ್ಡಿನಲ್ಲಿ ಹಾಕಿ ನಾನು ಮನೆಯಲ್ಲಿ ಮಲಗಿಕೊಂಡಿದ್ದು.  ದಿನಾಂಕ: 01/11/2014 ರಂದು 12:30 ಎ.ಎಮ್ ಕ್ಕೆ ಸುಮಾರಿಗೆ ಕುರಿಗಳು ಚೀರಾಡುವ ಸಪ್ಪಳ ಕೇಳಿ ನಾನು ಮತ್ತು ಆಶಪ್ಪ ಎದ್ದು ಹೊರಗೆ ಬಂದು ಬ್ಯಾಟರಿ ಹಾಕಿ ನೋಡಲಾಗಿ ರವಿ ತಂದೆ ಚೋಕ್ಲು ಮತ್ತು ಆತನ ಗೆಳೆಯ ಗುಂಡು ಇಬ್ಬರು ನಾವು ಕುರಿಗಳು ಹಾಕಿರುವ ಶೆಡ್ಡನಲ್ಲಿ ನಿಂತಿದ್ದು ನಾವು ಹಿಡಿಯಲು ಹೋದರೆ ಓಡಿ ಹೋಗಿದ್ದು, ಶೆಡ್ಡಿನಲ್ಲಿ ಹೋಗಿ ನೋಡಲಾಗಿ ಶೆಡ್ಡನಲ್ಲಿ ಹಾಕಿರುವ 19 ಕುರಿ ಮರಿಗಳ ಕುತ್ತಿಗೆ ಕೊಯ್ದು ಸಾಯಿಸಿ ಬಿಟ್ಟಿದ್ದರು. ರವಿ ಈತನು ನನ್ನ ಮಗಳಿಗೆ ಪ್ರೀತಿಸಿದ್ದರಿಂದ ಅವನಿಗೆ ಬುದ್ದಿವಾದ ಹೇಳಿದ್ದಕ್ಕೆ ಅದೇ ವೈಷ್ಯಮ್ಯವಿಟ್ಟುಕೊಂಡು ರಾತ್ರಿ ವೇಳೆಯಲ್ಲಿ ಶೆಡ್ಡದಲ್ಲಿ ಹಾಕಿರುವ 19 ಕುರಿ ಮರಿಗಳನ್ನು ಚಾಕುವಿನಿಂದ ಕತ್ತು ಕೊಯ್ದು ಸಾಯಿಸಿದ್ದು ಅಂದಾಜು 50,000/- ರೂ. ಹಾನಿ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಜೀವನ ಬಸವರಾಜ ಐ.ಎಸ್.ಎಸ್ ಅಧೀಕಾರಿ ಅಸಿಸ್ಟೆಂಟ ಕಮಿಷನರ್ ನಗಾಂವ ಆಸ್ಸಾಂ ರಾಜ್ಯ ಹಾ;ವ: ಮ.ನಂ. 1711/73 ಸರಸ್ವತಿ ನಗರ ದಾವಣಗೇರೆ ಇವರು ದಿನಾಂಕ 31/10/2014 ರಂದು ಹೈದ್ರಾಬಾದ ಪೊಲೀಸ ಅಕಾಡಮಿಯಲ್ಲಿ ಗೆಳೆಯರೊಂದಿಗೆ ಭೇಟ್ಟಿಯಾಗಿ ನನ್ನ ಸ್ವಗ್ರಾಮ ದಾವಣಗೇರೆ ಹೊಗಲು  ಗುಲಬರ್ಗಾ ಬಸ ಸ್ಟ್ಯಾಂಡಕ್ಕೆ ಬಂದು ಇಳಿದು, ರಾತ್ರಿ 9 ಗಂಟೆ ಸುಮಾರಿಗೆ  ಸ್ಲೀಪರ ಕೊಚ ಬಸ್‌ನಲ್ಲಿ ನನ್ನ ಲಗೇಜ ಬ್ಯಾಗ ಹಾಗು  ಹೆಚ್‌ಪಿ ಮಿಡಿಯಾ ಸೆಂಟರ ಲ್ಯಾಪಟಾಪ ಮತ್ತು  ಐ-ಪ್ಯಾಡ ಮಿನಿ ಸಿಮ್‌ ನಂ. 08135024475 ಹಾಗು ಹಾರ್ಡ ಡಿಸ್ಕವುಳ್ಳ ಬ್ಯಾಗನ್ನು  ಬಸ್ಸಿನ ಸೀಟಿನ ಮೇಲೆ ಇಟ್ಟಿದ್ದು ಕಂಡಕ್ಟರ ಹತ್ತಿರ ಟಿಕೇಟ ತೆಗೆದುಕೊಳ್ಳುತ್ತಿರುವಾಗ  2 ನಿಮಿಷಯದಲ್ಲಿ  ಯಾರೋ ಕಳ್ಳರು  ಲ್ಯಾಪಟಾಪ ಮತ್ತು ಐ-ಪ್ಯಾಡ ಹಾಗು ಹಾರ್ಡ ಡಿಸ್ಕವುಳ್ಳ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅದರ ಮೌಲ್ಯ  1 ಲಕ್ಷ ರೂಪಾಯಿ  ಇರುತ್ತದೆ.  ಐ-ಪ್ಯಾಡಿನ  ಜಿ.ಪಿ.ಎಸ್‌ ಲೋಕೇಶನ ಪರಿಶೀಲಿಸಿದಾಗ ರಾತ್ರಿ 10 ಗಂಟೆ ಸುಮಾರಿಗೆ ಜಿಲಾನಾಬಾದ  ಗೊಚರಿಸಿರುತ್ತದೆ.  ನನ್ನ ಹೆಚ್‌ಪಿ ಮಿಡಿಯಾ ಸೆಂಟರ ಲ್ಯಾಪಟಾಪ ಮತ್ತು  ಐ-ಪ್ಯಾಡ ಮಿನಿ ಹಾಗು ಹಾರ್ಡ ಡಿಸ್ಕನಲ್ಲಿ ಜಿಲ್ಲಾ ಆಡಳಿತಕ್ಕೆ ಸಂಬಂಧಪಟ್ಟ ದೈನಂದಿನ ಡಾಟಾ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಐಎಎಸ್ ಅಕ್ಯಾಡಮಿಗೆ ಸಂಬಂಧಪಟ್ಟ ಸಂಪೂರ್ಣ ಡಾಟಾ ಇರುತ್ತದೆ. ಆದ್ದರಿಂದ ಕಳುವಾದ ಲ್ಯಾಪಟಾಪ ಮತ್ತು ಐ-ಪ್ಯಾಡ ಬ್ಯಾಗನ್ನು ಪತ್ತೆ ಹಚ್ಚಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

31 October 2014

GULBARGA DIST REPORTED CRIMES

ಅತ್ಯಾಚಾರ ಪ್ರಕರಣ :
ಆಳಂದ ಠಾಣೆ : ಆಳಂದ ತಾಲೂಕಿನ ಮಹಿಳೆ ತನ್ನ ಗಂಡನಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಉಮರ್ಗಾದ ಡಿಗ್ಗಿಕರ್ ದವಾಖಾನೆಯಲ್ಲಿ ಸೇರಿಕೆ ಮಾಡಿದ್ದು ಉಮರ್ಗಾಕ್ಕೆ ಹೋಗುವ ಸಲುವಾಗಿ ನಾನು ಆಳಂದನಲ್ಲಿ ಉಮರ್ಗಾಕ್ಕೆ ಹೋಗುವ ಜೀಪಿನಲ್ಲಿ ಕುಳಿತು ಹೋಗುತ್ತಿರುವಾಗ ಜೀಪಿನಲ್ಲಿದ್ದ ವಿಠ್ಠಲ ಪಾಟೀಲ್ ಮು|| ನಸೀರವಾಡಿ ಎಂಬ ಅಂದಾಜು 50 ರಂದ 55 ವರ್ಷ ವಯಸ್ಸಿನ ವ್ಯಕ್ತಿಯು ನಾನು ಭೂದಿ ಪ್ರಸಾದ ಕೊಡುತ್ತೇನೆ, ಇದು ಕಡಿಮೆ ಯಾಗುತ್ತದೆ ನಸೀರವಾಡಿಗೆ ಬನ್ನಿ ಎಂದು ಹೇಳಿದಾಗ ತನ್ನ ತಂಗಿಯೊಂದಿಗೆ ಹೋಗುತ್ತಿರುವಾಗ ವಿಠ್ಠಲನ ಹತ್ತಿರ ಬೂದಿ ಪ್ರಸಾದ ತೆಗೆದುಕೊಳ್ಳುವ ಸಲುವಾಗಿ ಆಳಂದನಲ್ಲಿ ನಿಂತಿದ್ದ ಚಿತಲಿ ಗ್ರಾಮದ ಹೆಣ್ಣು ಮಗಳು ಮತ್ತು ಆಕೆಯ ಮಗಳು ಸಹ ನಮ್ಮಂತೆ ಅವನೊಂದಿಗೆ ತಡಕಲ್ ವರೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ನಾವೆಲ್ಲರೂ ಅವನೊಂದಿಗೆ ನಡೆದುಕೊಂಡು ನಸೀರವಾಡಿಯಲ್ಲಿರುವ ಆತನ ಮನೆಗೆ ಹೋದೇವು, ಅಲ್ಲಿ ನಾನು ಹಾಗೂ ಅವರು ಕೂಡಿ ವಿಠ್ಠಲನು ಹೇಳಿದಂತೆ ಊರಲ್ಲಿ ಹೋಗಿ ತೆಂಗು, ಊದಬತ್ತಿ, ತಾಯಿತ್, ಸಕ್ಕರೆ, ಉಂಬಾ ಎಣ್ಣಿ, ತಂದು ಅವನಿಗೆ ಕೊಟ್ಟೆವು, ಅಂದಾಜು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನಮ್ಮ ತಂಗಿಗೆ ತನ್ನ ಮನೆಯಲ್ಲಿ ಒಳಗಿನ ಕೋಣೆಯಲ್ಲಿ ಕರೆದನು, ನಮ್ಮಿಬ್ಬರಿಗೆ ಅದೆ ಗ್ರಾಮದ ದರ್ಗಾಕ್ಕೆ ಹೋಗಿ ನಿಮ್ಮ ಮನಸ್ಸಿನ ಮಾತು ಬೇಡಿಕೊಂಡು ಬರಬೇಕೆಂದು ಹೇಳಿದಾಗ ನಾನು ಹಾಗೂ ಇನ್ನುಬ್ಬಳು ಮತ್ತು  ಆಕೆಯ ಮಗಳೊಂದಿಗೆ ದರ್ಗಾಕ್ಕೆ ಹೋಗಿ ಬಂದೆವು. ಬಂದು ನೋಡಲಾಗಿ ನನ್ನ ತಂಗಿಯ ಮುಖಕ್ಕೆ ಭೂದಿ ಊದಿ ಒಂದು ತಾಯಿತ ಕೊಟ್ಟು ಹೊರಗೆ ಕಳುಹಿಸಿದ್ದನು. ನಂತರ ಅರ್ಧ ಗಂಟೆಯ ನಂತರ ನನ್ನ ಜೋತೆಗೆ ಬಂದ ಮಹಿಳೆಗೆ ತನ್ನ ಕೋಣೆಯಲ್ಲಿ ಕರೆದಾಗ ಆಕೆ ತನ್ನ ಮಗಳೊಂದಿಗೆ ಮನೆಯಲ್ಲಿ ಹೋದಾಗ ತನ್ನ ಮಗಳಿಗೆ ವಿಠ್ಠಲನು ಒಂದು ನಿಂಬೆ ಹಣ್ಣು ಕೊಟ್ಟು ಹೊರಗೆ ಕಳುಹಿಸಿದನು, ಅರ್ಧ ಗಂಟೆಯ ನಂತರ ಆಕೆಯು ಕೂಡಾ ಹೊರಗೆ ಬಂದಳು, ಆಕೆ ಹಾಗೂ ಅವಳ ಮಗಳು ಕೂಡಾ ಸುಸ್ತಾಗಿ ಯಾರ ಜೊತೆ ಮಾತನಾಡದೆ ಹೊರಗೆ ಕುಳಿತರು ನಂತರ ನನಗೆ ಒಳಗೆ ಕರೆದಾಗ ನಾನು ಹೊದೇನು, ಅವನು ನನ್ನ ಮೇಲೆ ಭೂದಿಯನ್ನು ಎರಚಿದಾಗ ಸುಸ್ತಾಗಿ ನೆಲಕ್ಕೆ ಬಿದ್ದೇನು, ಅವನು ನನ್ನ ಮೈ ಕೈ ಹಿಡಿದು ಜೊಲಿ ಹೊಡೆಯುತ್ತಿದ್ದನು, ನಾನು ಬಾಯಿ ತೆರೆದು ಚೀರಬೇಕೆಂದರೆ ನನ್ನ ಬಾಯಿ ತೆರೆಯಲಿಲ್ಲ ಅವನು ನನಗೆ ಸುಸ್ತು ಮಾಡಿ ಜಬರಿ ಸಂಭೋಗ ಮಾಡಿದ್ದು ನಾನು 15 ನಿಮೀಷದ ನಂತರ ಹೊರಗೆ ಬಂದಾಗ ನನಗೆ ಗೊತ್ತಾಗಿರುತ್ತದೆ, ನಾನು ನನ್ನ ತಂಗಿಗೆ ಊರಿಗೆ ಹೊಗೋಣ ನಡೆಯಿರಿ ಅಂತಾ ನಡೆದುಕೊಂಡು ಆ ಊರಿನಿಂದ 1 ಕಿಮಿ ತಡಕಲ್ ಕಡೆಗೆ ಬಂದಾಗ ನನ್ನ ತಂಗಿಗೆ ವಿಚಾರಿಸಿದಾಗ ಅವಳು ಕೂಡಾ ಅಳುತ್ತಾ ಅವನು ನನಗೆ ಜಬರಿ ಸಂಭೋಗ ಮಾಡಿರುತ್ತಾನೆಂದು ಈಗ ನನಗೆ ಗೊತ್ತಾಗಿದೆ ಅಂದಾಗ ನನ್ನ ಜೋತೆ ಬಂದ ಮಹಿಳೆಗೂ ಸಹ  ಜಬರಿ ಸಂಭೋಗ ಮಾಡಿದ್ದು ತಿಳಿಸಿದಳು, ಅವನು ಮಧ್ಯಾಹ್ನ 2:00 ಗಂಟೆಯಿಂದ 3.30 ಗಂಟೆಯ ಅವಧಿಯಲ್ಲಿ ನಮ್ಮ 3 ಜನರಿಗೆ ಶೀಲ್ ಹರಣ ಮಾಡಿ ಸಂಭೊಗ ಮಾಡಿರುತ್ತಾನೆ,  ನಾವು ಅವನು ಕೊಟ್ಟ ತಾಯಿತ, ಭೂದಿ ಪ್ರಸಾದ, ನಿಂಬೆ ಹಣ್ಣು, ಸರಿಯಾಗಿಟ್ಟುಕೊಳ್ಳಿರಿ ಅಂತಾ ಹೇಳಿ ಮತ್ತೆ ಸೋಮವಾರ ಯಾರಿಗೂ ಹೇಳದೆ ಗಂಡಸು ಮಕ್ಕಳಿಗೆ ಕರೆದುಕೊಂಡು ಬರದೆ ನೀವೆ 3 ಜನರು ಬರಬೇಕೆಂದು ಹೇಳಿದನು, ನಮಗೆ ಮೋಸ್ ಮಾಡಿ ತಾಯಿತ್ ಭೂದಿ ನಿಂಬೆ ಹಣ್ಣು ಕೊಟ್ಟು ಜಬರಿ ಸಂಭೋಗ ಮಾಡಿದ ವಿಠ್ಠಲನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ  ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೀವರ್ಗಿ ಠಾಣೆ : ದಿನಾಂಕ 29.10.2014 ರಂದು ರಾತ್ರಿ ಜೇವರ್ಗಿ (ಕೆ) ನ ಇದ್ಗಾ ಮೈದಾನದ ಪಕ್ಕದ ಕಟ್ಟೆಯ ಮೇಲೆ ಲೈಟಿನ ಕಂಬದ ಬೇಳಕಿನಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಜೇವರ್ಗಿ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 14 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರ ವಿಳಾಸ ವಿಚಾರಿಸಲು 1) ಸಂತೋಷ ತಂದೆ ಶಂತಗೌಡ ರದ್ದೆವಾಡಗಿ  2) ಯಂಕಯ್ಯಾ ತಂದೆ ರಾಮಯ್ಯ ವಡ್ಡರ್  3) ಆನಂದ ತಂದೆ ಗ್ವಾಲಪ್ಪ ಕೊಂಬಿನ್  4) ಶ್ರಿಕಾಂತ ತಂದೆ ಶರಣಪ್ಪ ಗಂಗಾರಾಯ  5) ಬಾಬು ತಂದೆ ಬಸಲಿಂಗಪ್ಪ ಗೋಪಾಲಕರ್  6) ಅಖಂಡಪ್ಪ ತಂದೆ ವೀರಣ್ಣ ಆಂದೋ 7) ದೆವಿಂದ್ರಪ್ಪ ತಂದೆ ನಾಗಪ್ಪಗೌಡ  8) ಗುಂಡಪ್ಪ ತಂದೆ ದುರ್ಗಪ್ಪ ಚೌಧರಿ  9) ಚಂದ್ರು ತಂದೆ ಮುತ್ತಪ್ಪಾ ಮ್ಯಾಗೇರಿ  10) ರಾಜು ತಂದೆ ತಿಪ್ಪಣ್ಣ ತಳವಾರ  11) ಅಂಬಾಜಿ ತಂದೆ ಭೀಮರಾಯ ಮಾಗಣಗೇರಿ 12) ಅಬ್ದುಲ್‌ ಘನಿ ತಂದೆ ಮೌಲಾನಸಾಬ್‌ 13) ಸಿದ್ದಪ್ಪ ತಂದೆ ಭಿಮಶಾ ನೈಕೋಡಿ   14) ರಮೇಶ ತಂದೆ ಸೈಬಣ್ಣ ಗುಡಿಮನಿ   ಸಾ|| ಎಲ್ಲರು ಜೇವರ್ಗಿ ಅಂತಾ ತಿಳಿಸಿದ್ದು  ಅವರಿಂದ 79.000/- ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಮಹ್ಮದ ಆರೀಫ ಅಲಿ ತಂದೆ ಮಹ್ಮದ ಯಾಕುಬ ಅಲಿ, ಸಾಃ ಮ. ನಂ. 4-601/19/20, ಪ್ಲಾಟ ನಂ. 20 ಮನಸಬದಾರ ಲೇಓಟ, ಜಿ.ಡಿ.ಎ ಕಾಲೊನಿ ಗುಲಬರ್ಗಾ  ರವರ ಮಗಳಾದ ಓಮೆರಾ ಆರ್ಶಿ ವಃ 5 ವರ್ಷ ಇವಳು ಗುಲಬರ್ಗಾ ನಗರದ ಸಿ.ಟಿ ಇಂಗ್ಲೀಷ ಮಿಡಿಯ ಶಾಲೆಯಲ್ಲಿ ಯು.ಕೆ.ಜಿ ತರಗತಿಯಲ್ಲಿ ಓದುತ್ತಿದ್ದು, ಓಮೆರಾ ಆರ್ಶಿ ಇವಳು ಪ್ರತಿ ಸಿಟಿ ಇಂಗ್ಲೀಷ ಮಿಡಿಯಂ ಶಾಲೆಯ ಬಸ್ಸಿನ್ಲಲಿ ಹೋಗಿ ಬರುತ್ತಿದ್ದಳು ಇಂದು ದಿನಾಂಕ 30-10-2014 ರಂದು 5-00 ಪಿ.ಎಮ್ ಕ್ಕೆ ಫಿರ್ಯಾದಿ ಮಗಳು ಶಾಲೆ ಬಸ್ಸಿನಲ್ಲಿ ಬಂದು ಮನೆಯ ಮುಂದೆ ಇಳಿದು ಹೋಗುವಾಗ ಶಾಲೆ ಬಸ್ ಚಾಲಕನು ನಿರ್ಲಕ್ಷತನಿಂದ ತನ್ನ ಬಸ್ಸನ್ನು ಒಮ್ಮೆಲೆ ಮುಂದಕ್ಕೆ ಚಲಾಯಿಸಿ ಮಗಳಿಗಿ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅಪಘಾತದಲ್ಲಿ ತಲೆಗೆ ಭಾರಿ ಗಾಯಹೊಂದಿದ ಒಮೇರಾ ಆರ್ಶಿ ಇವಳನ್ನು ಉಪಚಾರ ಕುರಿತು ಮೆಡಿಕೇರ ಆಸ್ಪತ್ರೆಗೆ ಸೇರಿಕೆ ಮಾಡಿದಾಗ 05-10 ಪಿ.ಎಮ್ ಕ್ಕೆ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀಮತಿ ನರಸಮ್ಮ ಗಂಡ ಅಶೋಕ ಕುನ್ನಳ್ಳಿ ಸಾ:ಕಲಖೋರಾ ತಾ:ಬಸವಕಲ್ಯಾಣ ಜಿ:ಬೀದರ ರವರು  ದಿನಾಂಕ: 30-10-2014 ರಂದು ಮದ್ಯಾಹ್ನ 01-30 ಗಂಟೆಯ ಸೂಮಾರಿಗೆ ನನ್ನ ತಂದೆಯವರ ಅಂತ್ಯಕ್ರೀಯೇ ಕುರಿತು ತಿಲ್ಲಾಪೂರ ಗ್ರಾಮಕ್ಕೆ ಹೋಗಲು ನಾನು ನನ್ನ ಮಗ ಚಂದ್ರಶೇಖರ ಕುನ್ನಳ್ಳಿ ನಮ್ಮ ಗ್ರಾಮದ ಜಗದೇವಿ ಗಂಡ ವೆಂಕಟ ಬಿರಾದಾರ ನೀಲಮ್ಮ ಗಂಡ ಬಾಬುರಾವ ಬಿರಾದಾರ ಅನೀತಾ ಗಂಡ ಲೋಹಿತ ಬಿರಾದಾರ ನಾಗಮ್ಮ ಗಂಡ ಹಣಮಂತ ಬಿರಾದಾರ ವಿಜಾಬಾಯಿ ಗಂಡ ರೇವಣಸಿದ್ದ ಬಿರಾದಾರ ಅನುಷಾಬಾಯಿ ಗಂಡ ರಾಜೇಂದ್ರ ಬಿರಾದಾರ ಮತ್ತು ಮಲ್ಲಪ್ಪ ತಂದೆ ರಾಮಚಂದ್ರ  ಸಾ:ಎಲ್ಲರೂ ಕಲಖೋರಾ ಕೂಡಿಕೊಂಡು ನಮ್ಮ ಗ್ರಾಮದ ಈಶ್ವರ ಬಿರಾದಾರ ಇವರ ಟಂಟಂ ನಂ-ಕೆಎ-32 ಸಿ-0012 ನೇದ್ದರಲ್ಲಿ ಕುಳಿತು ತಿಲ್ಲಾಪೂರ ಗ್ರಾಮಕ್ಕೆ ಹೋಗುವ ಕುರಿತು ಹೋರಟಿದ್ದು. ಟಂಟಂನ್ನು ಶ್ರಿನಾಥ ತಂದೆ ಚಂದ್ರಶೆಟ್ಟಿ ಪಾಟೀಲ ಸಾ:ಕಲಖೋರಾ ಈತನು ನಡೆಸುತ್ತಿದ್ದು. ಶ್ರೀನಾಥ ಇವನು ಟಂಟಂನ್ನು ಅತಿವೇಗದಿಂದ ಮತ್ತು ಅಡ್ಡಾತಿಡ್ಡಿಯಾಗಿ ನಡೆಸುತ್ತ  ಹೋರಟಿದ್ದು. ಒಳಗೆ ಕುಳಿತ ನಾವೇಲ್ಲರೂ ಟಂಟಂನ್ನು ನಿದಾನವಾಗಿ ನಡೆಸುವಂತೆ ಚಾಲಕನಿಗೆ ಹೇಳಿದರು ಅದನ್ನು ಕೆಳದೆ ಹಾಗೆ ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದನು.ನಾವು ಕುಳಿತು ಹೋರಟ ಟಂಟಂ ಗುಲಬರ್ಗಾ ಹುಮನಾಬಾದ ಹೆದ್ದಾರಿಯ ಕಮಲಾಪೂರ ಗ್ರಾಮದ ಮಾಟೂರ ಪೆಟ್ರೊಲ ಪಂಪ ಸಮೀಪ ಹೋಗುತ್ತಿದ್ದಾಗ ಪಂಪನಲ್ಲಿ ಡಿಸೇಲ ಹಾಕಿಕೊಳ್ಳುವ ಸಲುವಾಗಿ ಅದರ ಚಾಲಕನು ಟಂಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಒಮ್ಮಲೆ ರೋಡಿನ ಬಲಭಾಗಕ್ಕೆ ಕಟ್ಟ ಮಾಡಿ ಟಂಟಂನ್ನು ರೊಡಿನ ಮದ್ಯ ಪಲ್ಟಿ ಮಾಡಿ ಕೆಡವಿದನು. ನಂತರ ನಾವೇಲ್ಲರೂ ಟಂಟಂನಿಂದ ಹೋರಗೆ ಬಂದು ನೋಡಲು ನನಗೆ ದವಾಖಾನೆಗೆ ತೋರಿಸುವಂತ ಯಾವುದೇ ಗಾಯಗಳು ಆಗಿರುವುದಿಲ್ಲ. ನನ್ನ ಮಗ ಚಂದ್ರಶೇಖರನಿಗೆ ನೋಡಲು ಅವನ ಎಡ ಮೋಣಕಾಲಿಗೆ ರಕ್ತಗಾಯ ಎಡ ತೋಡೆಗೆ ರಕ್ತ ಮತ್ತು ಗುಪ್ತಗಾಯ ಬಲ ಪಾದಕ್ಕೆ ರಕ್ತಗಾಯ ಎಡಗೈ ಮುಂಗೈಗೆ ತರಚಿದ ರಕ್ತಗಾಯ ಮತ್ತು ಅಲ್ಲಲ್ಲಿ ಗುಪ್ತಗಾಯಗಳಾಗಿದ್ದು. ಜಗದೇವಿ ಬಿರಾದಾರ ಇವಳಿಗೆ ಎಡ ಮೇಲಕಿಗೆ ತರಚಿದ ರಕ್ತಗಾಯ ಎಡಗೈ ತೋರ ಬೆರಳಿಗೆ ರಕ್ತಗಾಯ ಎಡಭುಜಕ್ಕೆ ಗುಪ್ತಗಾಯ ಮತ್ತು ಎದೆಯ ಮೇಲೆ ಭಾರಿ ಗುಪ್ತ ಗಾಯಗಳಾಗಿ ಬಾಯಿಯಿಂದ ಜೋಲ್ಲು ಸೋರಿ ಉಸಿರು ಕಟ್ಟಿದಂತಾಗಿರುತ್ತದೆ. ಅಲ್ಲದೆ ಟಂಟಂನಲ್ಲಿ ಕುಳಿತ ಇತರರಿಗು ಕೂಡಾ ಅಲ್ಲಲ್ಲಿ ರಕ್ತ ಮತ್ತು ಗುಪ್ತ ಗಾಯಳಾಗಿದ್ದು. ಟಂಟಂ ಚಾಲಕ ಟಂಟಂ ಬಿಟ್ಡು ಓಡಿ ಹೋಗಿರುತ್ತಾನೆ. ನಂತರ ನಮಗೆ ಅಪಘಾತವಾದ ಬಗ್ಗೆ ಟಂಟಂ ಮಾಲಿಕ ಈಶ್ವರನಿಗೆ ಫೋನ ಮುಖಾಂತರ ತಿಳಿಸಿ ಅಪಘಾತದಲ್ಲಿ ಗಾಯಗೊಂಡವರಿಗೆ ನಾನು ಮತ್ತು ನಮ್ಮ, ಜೋತೆಗೆ ಬಂದಿದ್ದ ಮಲ್ಲಪ್ಪ ಗುಜ್ಜೆನೋರ ಇವರು ಕೂಡಿ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಕಮಲಾಪೂರ ಆಸ್ಪತ್ರಗೆ ತಂದು ನಂತರ ಅಲ್ಲಿಂದ ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನಾವದಗಿ ಬ್ರೀಡ್ಜ ಹತ್ತೀರ ಜಗದೆವಿ ಬಿರಾದಾರ ಇವಳು ಮೃತ ಪಟ್ಟಿರುತ್ತಾಳೆ. ಅಲ್ಲದೆ ಅಪಘಾತದಲ್ಲಿ ಟಂಟಂ ಕೂಡಾ ಜಖಂಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ನಾಗಯ್ಯಾ ತಂದೆ ರೇವಣಯ್ಯಾ ಪೊಲಕಪಳ್ಳಿ ಸಾ : ಜಂಗೆ ಲೇಔಟ  ರಾಘವೇಂದ್ರ ನಗರ ಕಾಲೋನಿ ಗುಲಬರ್ಗಾ  ಇವರು ದಿನಾಂಕ: 25-10-2014 ರಂದು  ಬೆಳಗ್ಗೆ ಪ್ರವಾಸ ಕುರಿತು ಹೆಂಡತಿ ಮಕ್ಕಳೊಂದಿಗೆ ಶಿರಸಿಗೆ ಹೋಗುವ ಕುರಿತು ಮನೆಗೆ ಬಿಗ ಹಾಕಿ ಹೊಗಿದ್ದು  ನಾವು ಪ್ರವಾಸ ಮುಗಿಸಿಕೊಂಡು ದಿನಾಂಕ|| 30-10-2014 ರಂದು ರಾತ್ರಿ 2 ಗಂಟೆಗೆ ಬಂದು ನೋಡಲು ನಮ್ಮ ಮನೆಯ ಗೇಟ ಲಾಕ ಮುರಿದಿದ್ದು ಮನೆಗೆ ಹಾಕಿದ ಕೀಲಿ ಮತ್ತು ಸೆಂಟರಲ್ ಲಾಕ ಮುರಿದಿದ್ದು ಮನೆಯ ಬಾಗಿಲು ತೆರೆದಿದ್ದು  ನಾನು ಮತ್ತು ನ್ನನ ಹೆಂಡತಿ ಗಾಬರಿಯಾಗಿ ಒಳಗೆ ಹೋಗಿ ನೋಡಲು ಬೆಡರೂಮನಲ್ಲಿ ಇಟ್ಟಿದ್ದ ಅಲಮಾರಾ ಮುರಿದು ಅದರಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ನಗದು ಹೀಗೆ ಒಟ್ಟು 9,01250/- ರೂ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಗಾಯತ್ರಿ ಗಂಡ ಖಾಜಪ್ಪ ಗೌಂಡಿ ಸಾ|| ಮಾಶಾಳ ಹಾ|| || ತಾಂಬಾ ತಾ|| ಇಂಡಿ ಇವರನ್ನು ಸುಮಾರು 8-9 ವರ್ಷಗಳ ಹಿಂದೆ ಮಾಶಾಳ ಗ್ರಾಮದ ಖಾಜಪ್ಪ ತಂದೆ ಕಲ್ಲಪ್ಪ ಗೌಂಡಿ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು 2 ಗಂಡು ಮಕ್ಕಳು ಇರುತ್ತಾರೆ, ಮಾಶಾಳ ಗ್ರಾಮದಲ್ಲಿ ನಾನು ಮತ್ತು ನನ್ನ ಗಂಡ ಖಾಜಪ್ಪ ನನ್ನ ಅತ್ತೆ ಮಾಹಾದೇವಿ ನಾವೆಲ್ಲರು ಒಟ್ಟಿಗೆ ಇರುತ್ತೆವೆ, ನನ್ನ ಗಂಡ ಖಾಜಪ್ಪ ಮತ್ತು ನನ್ನ ಅತ್ತೆ ಮಾಹಾದೇವಿ ಇವರು ನನಗೆ ಈಗ 2 ವರ್ಷಗಳಿಂದ ನೀನು ನೋಡಲು ಚೆನ್ನಾಗಿಲ್ಲ, ನಮಗೆ ಮೂಲಾಗಿದಿ, ಸರಿಯಾಗಿ ಕೆಲಸ ಮಾಡಲ್ಲಾ ಅಂತಾ ವಿನಾಕಾರಣ ನನಗೆ ಅವಾಚ್ಯವಾಗಿ ಬೈಯುವುದು, ಕೈಯಿಂದ ಹೊಡೆಯುವುದ ಮಾಡುತ್ತಿದ್ದರು, ವಿಷಯವನ್ನು ನಾನು ನಮ್ಮ ತಂದೆ ತಾಯಿಗೆ ತಿಳಿಸಿದ್ದು ಅವರು ಸಹ ನನ್ನ ಮನೆಗೆ ಬಂದು ಅವರು ಮತ್ತು ನಮ್ಮ ಗ್ರಾಮದ ಗುರು ಹಿರಿಯರು ನ್ಯಾಯಾ ಪಂಚಾಯತಿ ಮಾಡಿದ್ದು ಆಗ ನನ್ನ ಗಂಡ ಮತ್ತು ಅತ್ತೆ ಇಬ್ಬರು ಇಲ್ಲ ಇನ್ನು ಮುಂದೆ ಚೆನ್ನಾಗಿ ಇರುತ್ತೆವೆ ಎಂದು ಹೇಳಿರುತ್ತಾರೆಆದರು ನನ್ನ ಗಂಡ ಖಾಜಪ್ಪ ಮತ್ತು ಅತ್ತೆ ಮಾಹಾದೇವಿ ಇವರು ದಿನಾಂಕ 24-05-2014 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಮಾಶಾಳ ಗ್ರಾಮದ ನನ್ನ ಗಂಡನ ಮನೆಯಲ್ಲಿದ್ದಾಗ ನನ್ನೊಂದಿಗೆ ವಿನಾಕಾರಣ ಜಗಳ ತಗೆದು ಯಾರ ಬಂದ ಹೇಳಿದರು ನಾವು ಕೇಳಲ್ಲಾ, ಯಾರ ಏನು ಮಾಡುತ್ತಾರೆ ನಾವು ನೋಡುತ್ತೆವೆ, ರಂಡಿ ನೀನು ನಿನ್ನ ತವರು ಮನೆಗೆ ಹೋಗು ಇಲ್ಲಯಾಕ ಇರ್ತಿ ಅಂತಾ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ, ನಂತರ ಸದರಿ ನಡೆದ ವಿಷಯವನ್ನು ನಾನು ನನ್ನ ತವರು ಮನೆಯವರಿಗೆ ತಿಳಿಸಿ ನಾನು ನನ್ನ ತವರು ಮನೆಯಾದ ತಾಂಬಾಕ್ಕೆ ಹೋಗಿರುತ್ತೇನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕಸ್ಮಿಕ ಸಾವು ಪ್ರಕರಣ :

ಜೇವರ್ಗಿ ಠಾಣೆ : ದಿನಾಂಕ: 29.10.2014 ರಂದು ನಾನು ಚಿಗರಳ್ಳಿ ಕ್ರಾಸ್‌ ಹತ್ತಿರ ಇದ್ದಾಗ 03 ಗಂಟೆಯ ಸುಮಾರಿಗೆ ಇದ್ದಾಗ ಮುಂಜಾನೆ ನನ್ನ ಮಗ ಝಾಕೀರ್‌ ಈತನು ಚಿಗರಳ್ಳೀ ಕ್ರಾಸ್‌ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತೆನೆ ಅಂತ ಹೇಳಿ ಹೋಗಿದ್ದು, ನಂತರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿಜಾಮ್‌ ಈತನು ಪೋನ್‌ ಮೂಲಕ ನನಗೆ ತಿಳಿಸಿದ್ದೆನೆಂದರೆ ನಿನ್ನ ಮಗನು ಕೈಕಾಲು ಮುಖ ತೊಳೆಯಲು ಕೆನಾಲ್‌ ಗೆ ಹೋಗಿ ಕೆನಾಲ್‌ ನೀರಿನಲ್ಲಿ ಬಿದ್ದಿರುತ್ತಾನೆ ಅಂತ ತಿಳಿಸಿದ ಕೂಡಲೆ ನಾನು ಮತ್ತು ಇತರರು ಕೂಡಿಕೊಂಡು ನನ್ನ ಮಗ ಬಿದ್ದ ಕೆನಾಲ್‌ ಸ್ಥಳಕ್ಕೆ ಹೋಗಿ ನೋಡಲು ಅವನು ನೀರಿನಲ್ಲಿ ಮುಳುಗಿದ್ದು ಇರುತ್ತದೆ. ನಂತರ ನನ್ನ ಮಗನ ಶವವನ್ನು ಹುಡುಕಾಡಲು ಶವವು ಸಾಯಂಕಾಲ 06 ಗಂಟೆಯ ಸುಮಾರಿಗೆ ನನ್ನ ಮಗನ ಶವ ಕೆನಾಲ್‌ ನೀರಿನಲ್ಲಿ ಸಿಕ್ಕಿದ್ದು ಇರುತ್ತದೆ. ಕಾರಣ ನನ್ನ ಮಗನು ಕೇನಾಲ್‌ ನೀರಿನಲ್ಲಿ ಕೈಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆನಾಲ್‌ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಶ್ರೀ ಗುಡುಸಾಬ ಸಾ : ಮುಸ್ಲೀಂ ಬಸ್ತಿ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.