POLICE BHAVAN KALABURAGI

POLICE BHAVAN KALABURAGI

14 August 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ದಿನಾಂಕ: 12/08/2014 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಅಶೋಕ ತಂದೆ ಮೋನು ಚವ್ಹಾನ ಸಾ : ದಿನಸಿ ಕೆ ತಾಂಡಾ ಇವರ  ಅತ್ತಿಗೆಯ ತಮ್ಮನಾದ ಸಂಜು ತಂದೆ ರಾಮು ರಾಠೋಡ ಈತನು ನನ್ನ ಅಣ್ಣ ಮಾರುತಿ  ಈತನಿಗೆ ಫೋನ್ ಮಾಡಿ ಶಶಿಕಲಾ ಇವಳನ್ನು ಕರೆದುಕೊಂಡು ಹೋಗುವ ಸಂಭಂದ ನಾವು ಕಮಲಾಫೂರದಲ್ಲಿ ಪಂಚಾಯತಿ ಹಾಕಿದ್ದೇವೆ, ನೀವು ಬರಬೇಕು ಅಂತಾ ಹೇಳಿದ ಮೇರೆಗೆ ನಾನು , ನನ್ನ ಅಣ್ಣ ಮಾರುತಿ, ತಮ್ಮ ಪಿಂಟೂ ಮತ್ತು ತಾಯಿಯಾದ ಸೀತಾಬಾಯಿ ಕೂಡಿಕೊಂಡು  ನಮ್ಮ ತಾಂಡಾದ .ಮೋತಿರಾಮ ತಂದೆ ಗೇಮಾ ಕಾರಬಾರಿ. ಮುಕುಂದ ತಂದೆ ಶಂಕರ ರಾಠೋಡ ರವರನ್ನು ಕರೆದುಕೊಂಡು ಮಧ್ಯಾಹ್ನ  04-00 ಗಂಟೆ ಸುಮಾರಿಗೆ ಕಮಲಾಫೂರದ  ಹುಮನಾಬಾದ ರಸ್ತೆಗಿರುವ ಮಿನರಲ್ ವಾಟರ ಕೇಂದ್ರದ ಹತ್ತಿರ ಬಂದಿದ್ದು, ಇಲ್ಲಿ  ರಾಜನಾಳ  ತಾಂಡಾದ  ನಮ್ಮ  ಅತ್ತಿಗೆ  1. ಶಶಿಕಲಾ  ಮತ್ತು  ಅವರ ಮನೆಯವರು  ಇದ್ದರು . ಆಗ ನಾವು ಪಂಚಾಯತಿ ಮಾಡುತ್ತಿದ್ದಾಗ ನಮ್ಮ ಅತ್ತಿಗೆ  ಶಶಿಕಲಾ  ಇವಳು ನಮ್ಮನ್ನು  ನೋಡಿ  ನಮ್ಮ ಲಂಬಾಣಿ  ಭಾಷೆಯಲ್ಲಿ ಈ  ಅಶ್ಯಾ,ಪಿಂಟ್ಯಾ,ಮತ್ತು  ಸೀತಾಬಾಯಿ ಇವರು ಜೀವಂತವಾಗಿ  ತಾಂಡಾದಲ್ಲಿ ಇರುವ  ವರೆಗೆ ನಾನು ನನ್ನ  ಗಂಡನ  ಹತ್ತಿರ  ಹೋಗುವುದಿಲ್ಲ, ಈ ಜಗಳಕ್ಕೆ ಇದೇ  ರಂಡಿ ಮಕ್ಕಳು ಕಾರಣರಾಗಿರುತ್ತಾರೆ ಅಂತಾ ಹೇಳುತ್ತಿದ್ದಾಗ  ನಾವು  ಬಾಂಬೇಕ್ಕೆ ಹೋಗುತ್ತೇವೆ, ನಿವೇ ಇಲ್ಲಿ  ಇರಿ  ಅಂತಾ  ಹೇಳುತ್ತಿದ್ದಾಗ  ಒಮ್ಮಿಲೇ  2. ಸಂಜು ತಂದೆ ರಾಮು ರಾಠೋಡ, 3. ರಾಮು ತಂದೆ ಧರ್ಮು ರಾಠೋಢ  ಮತ್ತು 4. ಪಿಂಟೂ ತಂದೆ ರಾಮು  ರಾಠೋಡ ಇವರು ಈ ರಂಡಿ ಮಕ್ಕಳು ಜೀವಂತ  ಇರುವ ವರೆಗೆ ನಮ್ಮ  ತಂಗಿಗೆ  ನೆಮ್ಮದಿ  ಇರುವುದಿಲ್ಲ ,ಮೊದಲು  ಇವರಿಗೆ  ಒಂದು ಗತಿ  ಕಾಣಿಸಬೇಕು  ಅಂತಾ ನಮ್ಮ ಲಂಭಾಣಿ ಬಾಷೆಯಲ್ಲಿ  ಬೈಯ್ದಾಡುತ್ತಾ ನನ್ನೊಂದಿಗೆ  ತೆಕ್ಕಿ ಮಸ್ತಿ ಮಾಡುತ್ತಾ  ನನಗೆ  ನೆಲದ ಮೇಲೆ  ಎತ್ತಿ ಬಿಸಾಡಿ   ಸಂಜು, ರಾಮು ಮತ್ತು ಪಿಂಟೂ ಕೂಡಿಕೊಂಡು ನನಗೆ ತಮ್ಮ  ಕೈಯಿಂದಹೊಡೆಯುತ್ತಾ  ಕಾಲಿನಿಂದ  ಒದೆಯುತ್ತಾ  ಗುಪ್ತಗಾಯ ಪಡಿಸಿರುತ್ತಾರೆ  ಜಗಳ ಬಿಡಿಸಲು ಬಂದ  ನನ್ನ ತಾಯಿ  ಸೀತಾಬಾಯಿಗೆ  5. ಬಾಬು ತಂದೆ  ರಾಮು ರಾಠೋಡ, ರಾಮುತಂದೆ  ಧರ್ಮು  ರಾಠೋಡ  ಇವರು ಅಡ್ಡಗಟ್ಟಿ ನಿಲ್ಲಿಸಿ ತೆಲೆಯ ಕೂದಲು ಮತ್ತು ಗಗರಿ  ಹಿಡಿದು ಎಳೆದಾಡಿ ತಮ್ಮ  ಕೈಗಳಿಂದ ಹೊಡೆಯುತ್ತಾ  ಮಾನಭಂಗ ಮಾಡುತ್ತಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸಂಗೀತಾ ಗಂಡ ರವೀಂದ್ರನಾಥ ಘಂಟಿ ಇವರಿಗೆ ನನಗೆ ಪರಿಚಯದ ಮಿನಾಕ್ಷಿ ಗಂಡ ಭೀಮಾಶಂಕರ ಇವರ ಹತ್ತಿರ ನಾನು ಸ್ಕೀಮ್ ಸಲುವಾಗಿ ಹಣವನ್ನು ತೆಗೆದುಕೊಂಡಿದ್ದು ಅದರಲ್ಲಿ ಅರ್ದ ಹಣ ಕೊಟ್ಟಿದ್ದು ಇನ್ನುಳಿದ ಹಣ ಕೊಡಬೇಕಿದ್ದು ದಿನಾಂಕಃ 12/08/2014 ರಂದು ಸಾಯಂಕಾಲ 07:00 ಪಿ.ಎಂ. ದ ಸುಮಾರಿಗೆ ದರ್ಶನಾಪೂರ ಲೇಔಟ ಜಿ.ಡಿ.ಎ ಕಾಲೋನಿಯಲ್ಲಿರುವ ಮೀನಾಕ್ಷಿ ಇವರ ಮನೆಗೆ ಹಣದ ವಿಷಯದ ಬಗ್ಗೆ ಮಾತನಾಡಲು ನಾನು ಹೋದಾಗ ಮೀನಾಕ್ಷಿ ಇವಳು ಉಳಿದ ಹಣ ನನಗೆ ಯಾವಾಗ ಕೊಡುತ್ತಿ ನಿನ್ನ ಗಂಡನಿಗೆ ಕೊಟ್ಟ ಹಣವನ್ನು ಇವತ್ತೇ ಕೊಟ್ಟು ಹೋಗಬೇಕು ರಂಡಿ ಭೋಸಡಿ ಅಂತಾ ಅವಾಚ್ಯವಾಗಿ ಬೈದು ನನಗೆ ಮುಂದಕ್ಕೆ ಹೋಗದಂತೆ ತಡೆ ಹಿಡಿದು ಕೈಗಳಿಂದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಜಗ್ಗಾಡಿ ಬಲಕೈಯನ್ನು ತಿರುವಿದಳು. ನೀನು ಹಣ ಕೊಡದಿದ್ದರೇ ನಿನಗೆ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಗೊವಿಂದ ರೆಡ್ಡಿ ತಂದೆ ಅನಂತ ರೆಡ್ಡಿ ಕೆ.ಎ.ಎಸ್ ಅಪರ ಜಿಲ್ಲಾಧಿಕಾರಿಗಳು ಗುಲಬರ್ಗಾ ಇವರು ದಿನಾಂಕ 08-08-2014 ರಂದು ಸಂಜೆ 05:00 ಗಂಟೆ ಸುಮಾರಿಗೆ ತಾವು ವಾಸವಿರುವ ಐವನಶಾಹಿ ಕಾಲೋನಿಯಲ್ಲಿರುವ ಪಿ.ಡಬ್ಲೂ.ಡಿ ಕ್ವಾಟರ್ಸ ಡಿ 67 ನೇದ್ದರ ಕೀಲಿ ಹಾಕಿಕೊಂಡು ತರಬೇತಿ ಕುರಿತು ಮೈಸೂರಕ್ಕೆ ಹೋಗಿದ್ದು ದಿನಾಂಕ 12-08-2014 ರಂದು 10 ಗಂಟೆ ಸುಮಾರಿಗೆ ಕಛೇರಿ ಸಿಬ್ಬಂದಿಯವರು ಫೋನ ಮಾಡಿ ಮನೆಯ ಬಾಗಿಲ ಕೀಲಿ ಮುರದಿದ್ದು ಇದೆ ಅಂತಾ ತಿಳಿಸಿದ ಮೇರೆಗೆ ದಿನಾಂಕ 13-08-2014 ರಂದು 40 ಪಿ.ಎಮ್ ಕ್ಕೆ ಮನೆಗೆ ಬಂದು ನೋಡಲಾಗಿ ಮನೆಯಲ್ಲಿಯ ಬಂಗಾರದ ಆಭರಣಗಳು ಹಾಗು ನಗದು ಹಣ ಒಟ್ಟು ಅ.ಕಿ 7,60,000/-- ರೂ ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದಾಗ ಬಾಗಿಲ ಕೀಲಿ ಮುರಿದು ಮನೆಯಲ್ಲಿಯ ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಸುನೀಲಕುಮಾರ ತಂದೆ ರುಕ್ಕಪ್ಪಾ ಖಣಗೆ ಸಾ;ಶರಣಸಿರಸಗಿ ಮಡ್ಡಿ ಅಫಜಲಪೂರ ರೋಡ ಗುಲಬರ್ಗಾ ಇವರು ದಿನಾಂಕ. 13-08-2014 ರಂದು ರಾತ್ರಿ. 8-15 ಗಂಟೆಯ ಸುಮಾರಿಗೆ  ಮೋಬಾಯಿಲ ರಿಚಾರ್ಜ ಮಾಡಿಕೊಂಡು ಮರಳಿ ಮನೆಗೆ ಹೋಗುತ್ತಿರುವಾಗ ಗುಲಬರ್ಗಾ ಅಫಜಲಪೂರ ರೋಡನ ಶರಣಶಿರಸಗಿ ನಿಸರ್ಗಾ ಕಾಲೂನಿ ಕ್ರಾಸ ಹತ್ತಿರ  ರೋಡಿನ ಎಡಬದಿಗೆ ನಡೆದುಕೊಂಡು ಹೋಗುತ್ತಿರುವಾಗ ಅದೇವೇಳಗೆ ನನ್ನ ಹಿಂದಿನಿಂದ ಗುಲಬರ್ಗಾ ಕಡೆಯಿಂದ ಒಂದು ಟಿ.ವಿ.ಎಸ್. ವೇಗಾ ಸ್ಕೂಟಿ ನಂ.ಕೆ..32 .ಸಿ.0668 ನೆದ್ದರ ಚಾಲಕ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನಗೆ ಜೋರಾಗಿ ಡಿಕ್ಕಿ ಹೊಡೆದು ನನಗೆ ಗಾಯಗೊಳಿಸಿದ್ದು, ಅಲ್ಲದೆ ಸದರಿ ಸ್ಕೂಟಿ ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲದೊಂದಿಗೆ ಜೋರಾಗಿ  ಕೆಳಗೆ ಬಿದ್ದಿರಿಂದ ಆತನಿಗೆ  ತಲೆಗೆ , ಹಣೆಗೆ , ಮುಖಕ್ಕೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ  ಸದರಿ ಮೋಟಾರ ಸೈಕಲ ಚಾಲಕ ಮೃತನ ಹೆಸರು ನಾಗರಾಜ ತಂದೆ ಲಿಂಗಮ್ಮಾ ಚಿದ್ರಿ ಸಾ;ಕರುಣೆಶ್ವರ ಕಾಲೂನಿ ಗುಲಬರ್ಗಾ ಇರುತ್ತದೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಕುಸಮಾವತಿ ಗಂಡ ಮಾರುತಿ ವಾಗ್ದರಗಿ ಇವರ  ಗಂಡನಾದ ಮಾರುತಿ ತಂದೆ ಲಕ್ಕಪ್ಪಾ ವಾಗ್ದರಗಿ ಈತನು ಗುಲಬರ್ಗಾ ನಗರದ ರಾಜಾಪೂರ ರಿಂಗ್ ರೋಡ್ ಸಮೀಪ ಇರುವ ವಿ.ಟಿ.ಯು ಕಾಲೇಜನಲ್ಲಿ ಸೆಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡುತ್ತಿದ್ದು, ಆಗಾಗ ವಾರದಲ್ಲಿ 02 ಸಲ ಅಂಬಲಗಿ ಗೆ ಬಂದು ಹೋಗುವುದು ಮಾಡುತ್ತಿದ್ದನು. ದಿನಾಂಕಃ 13/08/2014 ರಂದು 08:00 ಎ.ಎಂ. ಸುಮಾರಿಗೆ ನನ್ನ ಮೈದುನಾದ ರಮೇಶ ಈತನು ಫೋನ್ ಮಾಡಿ ಹೇಳಿದ್ದೇನೆಂದರೇ, ಅಣ್ಣನಾದ ಮಾರುತಿ ಈತನಿಗೆ ಗುಲಬರ್ಗಾ ಸೇಡಂ ರೋಡಿನ ವಿರೇಂದ್ರ ಪಾಟೀಲ ಬಡವಣೆಯ ಕಮಾನ ದಿಂದ ಸ್ವಲ್ಪ ಮುಂದೆ ರೋಡಿನಲ್ಲಿ ಯಾವುದೋ ವಾಹನ ಅತಿವೇಗ ಮತ್ತು ನಿಸ್ಕಾಳಜಿತನದಿಮದ ಚಲಾಯಿಸಿ ಅಪಘಾತ ಪಡಿಸಿ ಹೋಗಿದ್ದರಿಂದ ಈತನಿಗೆ ತಲೆಗೆ, ಹೊಟ್ಟೆಗೆ, ಮುಂಡಿಯ ಕೆಳಗಡೆ, ದೇಹದ ಇತರೆ ಕಡೆಗಳಲ್ಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

13 August 2014

Gulbarga District Reported Crimes

ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಗೌತಮ ತಂದೆ ಅಂಬರಾವ್ ಬಬಲಾದ ಸಾಃ ಮನೆ ನಂ. ಎಲ್.ಐ.ಜಿ 06, 01 ನೇ ಹಂತ ಆದರ್ಶ ನಗರ ಗುಲಬರ್ಗಾ ಇವರು ದಿನಾಂಕಃ 09/08/2014 ರಂದು ರಾತ್ರಿ 11:30 ಪಿ.ಎಂ. ಕ್ಕೆ  ತಮ್ಮ ಮೊಬೈಲ್ ಅಂಗಡಿಗೆ ಎಂದಿನಂತೆ ಶಟರ್ ಲಾಕ್ ಮಾಡಿಕೊಂಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ 10/08/2014 ರಂದು 05:30 ಎ.ಎಂ. ಸುಮಾರಿಗೆ ನಮ್ಮ ಶಟರ ಅಂಗಡಿಯ ಮಾಲಿಕರಾದ ಕೋಮಲ ಮನೆಗೆ ಬಂದು ನಿಮ್ಮ ಮೊಬೈಲ್ ಅಂಗಡಿ ಶಟರ ಯಾರೋ ಅರ್ದ ಎತ್ತಿದ್ದಾರೆ ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಣ್ಣ ಮೊಬೈಲ್ ಅಂಗಡಿಗೆ ಬಂದು ನೋಡಲು ಅಂಗಡಿಯ ಶಟರ್ ಬೆಂಡ್ ಮಾಡಿದ್ದು ಒಳಗಡೆ ಹೋಗಿ ಚೆಕ್ ಮಾಡಿ ನೋಡಲು ಕೌಂಟರನಲ್ಲಿದ್ದ ನಗದು ಹಣ 20,000/- ರೂ. ಹಾಗು 06 ಚೈನ ಕಂಪನಿ ಮೊಬೈಲ್, 04 ರಿಲೇನ್ಸ್ ಕಂಪನಿ ಮೊಬೈಲ್ ಹಾಗು 01 ಎಂ.ವಿ.ಎಲ್ ಕಂಪನಿ ಮೊಬೈಲ್ ಮತ್ತು ಬ್ಯಾಂಕ್ ಪಾಸ್ ಬುಕ್, ಎ.ಟಿ.ಎಂ. ಕಾರ್ಡ. ಡಿ.ಎಲ್, ಪ್ಯಾನಕಾರ್ಡ, ಓಟಿಂಗ್ ಕಾರ್ಡ ಹಾಗು ನನ್ನ ಅಣ್ಣನ ಚೆಕ್ ಬುಕ್ ಇತ್ಯಾದಿ ಕಾಗದ ಪತ್ರಗಳು ಹೀಗೆ ಒಟ್ಟು 23,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ    ದಿನಾಂಕ; 07-08-2014 ರಂದು ನಾನು ಪುಸ್ತಕ ತರಲೆಂದು ಕಡಗಂಚಿಯಿಂದ ಗುಲಬರ್ಗಾದ ಯುನಿರ್ವಸಿಟಿಗೆ ಬಂದು ನನ್ನ ಪರಿಚಯದ ಮಹೇಶ ಇತನ ಬಳಿಗೆ ಹೋದಾಗ ನನ್ನ ಪರಿಚಯದ ಲೊಕೇಶ ಇತನು ನನಗೆ ಪೋನ ಮಾಡಿ ಯುನಿರ್ವಸಿಟಿಗೆ ಬಂದು ನನಗೆ ಮತ್ತು ಮಹೇಶ ಇತನಿಗೆ ಮಾತನಾಡಿಸಿ ಹೋದನು. ನನ್ನ ಲ್ಯಾಪಟಾಪ ದುರಸ್ತಿಗೆ ಕೊಟ್ಟಿದ್ದು ಅದನ್ನು ತೆಗೆದುಕೊಂಡು ಹೋಗುವ ಕುರಿತು ನಾನು ಮತ್ತು ಮಹೇಶ ಹೋಗಿದ್ದು ಲ್ಯಾಪಟಾಪ ದುರಸ್ತಿ ಆಗದ ಕಾರಣ ನಾನು ಮಹೇಶ ಕೂಡಿ ಅಪ್ಪಾ ಪಾರ್ಕನಲ್ಲಿ ಕುಳಿತುಕೊಂಡಾಗ ಲೊಕೇಶ ಇತನು ಮತ್ತೆ ಪೋನ ಮಾಡಿ ನಾವಿರುವಲ್ಲಿಗೆ ಬಂದು ನಿನಗೆ ವಿಶ್ವ ವಿದ್ಯಾಲಯಕ್ಕೆ ಹೋಗುವುದು ತಡವಾಗುತ್ತದೆ. ನನ್ನ ಕಾರಿನಲ್ಲಿ ನಿನಗೆ ಬಿಡುತ್ತೇನೆ ಅಂತಾ ತಿಳಿಸಿದನು. ಸಾಯಾಂಕಾಲ 7 ಗಂಟೆಯ ಸುಮಾರಿಗೆ ಅಪ್ಪಾ ಪಾರ್ಕದಿಂದ ಕಾರನಲ್ಲಿ ಕರೆದುಕೊಂಡು ಹೋದನು. ಸ್ವಲ್ಪ ದೂರ ಹೋದ ನಂತರ ಲೊಕೇಶ ಇತನು ನನಗೆ ತನ್ನ ಹತ್ತಿರವಿದ್ದ ಜ್ಯೂಸ ಕುಡಿಸಿದನು. ಅದರಿಂದ ನನಗೆ ಮತ್ತು ಬರಲು ಶುರುವಾಗಿ ಏನು ಗುರುತಿಸುವಷ್ಟು ಹುಷಾರಿಕೆಯನ್ನು ಕಳೆದುಕೊಂಡೆ. ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋಗಿ ಹಾಸ್ಟಲ ಅಂತಾ ಹೇಳಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಮದ್ಯ ರಾತ್ರಿ ನನಗೆ ಎಚ್ಚರಗೊಂಡಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಲೊಕೇಶ ಇತನು ನನಗೆ ಚಾಕು ತೋರಿಸಿ ಬಲವಂತವಾಗಿ ದೈಹಿಕ ಸಂಬೋಗ ಮಾಡಿದ್ದಾನೆ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಮತ್ತು ನಿಮ್ಮ ಕುಟುಂಬದವರಿಗೆ ಕೊಲೆ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12/08/2014 ರಂದು ಭೂಸನೂರ ಗ್ರಾಮದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೂಸನೂರ ಗ್ರಾಮಕ್ಕೆ ಹೋಗಿ ಬಸವೇಶ್ವರ ಸರ್ಕಲ ಮರೆಯಲ್ಲಿ ನಿಂತು ನೋಡಲಾಗಿ ಡಾಂಬರ ರಸ್ತೆಯ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಗೈಬಗಿರಿ ತಂದೆ ಗೊವಿಂದಗಿರಿ ಗೋಸಾಯಿ ಸಾ|| ಭೂಸನೂರ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 330/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಘಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಎ.ಟಿ.ಎಮ್. ಕಳವು ಮಾಡಲು ಪ್ರಯತ್ನ
ರೋಜಾ ಠಾಣೆ : ಸ್ಟೇಟ ಬ್ಯಾಂಕ ಆಫ್ ಹೈದ್ರಾಬಾದ ದರ್ಗಾ ಬ್ರಾಂಚದ ಬ್ರಾಂಚ ಬ್ಯಾಂಕ ಮುಂದುಗಡೆ ಒಂದು ಎ.ಟಿ.ಎಮ್ ಇದ್ದು  ಎ.ಟಿ.ಎಮ್ . ನಲ್ಲಿ ಸಿ.ಸಿ. ಟಿವಿ ಕ್ಯಾಮರಾ ಸಹ ಇದ್ದು ಪ್ರತಿ ನಿತ್ಯ ನಾನು ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡುವ ಕಾಲಕ್ಕೆ ದಿನಾಂಕ: 28/07/2014 ರಂದು ಬೆಳಗಿನ ಜಾವ 5:05 ಎಎಮ ದಿಂದ 6:15 ಎಎಮ್ ಅವಧಿಯಲ್ಲಿ ನಮ್ಮ ದರ್ಗಾ ಬ್ರಾಂಚ ಎದುರುಗಡೆ ಇರುವ ಎಸ.ಬಿ.ಹೆಚ. ಎ.ಟಿ.ಎಮ್ ದಲ್ಲಿ ಒಬ್ಬ ಅಪರಿಚಿತ ಕಳ್ಳನು ಎ.ಟಿ.ಎಮ್ ಕಳುವು ಮಾಡಲು ಎ.ಟಿ.ಎಮ್ ದಲ್ಲಿ ಬಂದು ಎ.ಟಿ.ಎಮ್ ದ ವೈರಗಳನ್ನು ಕಟ್ ಮಾಡಿ ಎ.ಟಿ.ಎಮ್ ದ ಮೇಲಿನ ಕವರ ಸಹ ತೆರೆದು ಒಳಗಡೆ ಇದ್ದ ಸೇಫ ಲಾಕರ ಬರದೇ ಇರುವದರಿಂದ ಯಥಾ ಪ್ರಕಾರವಾಗಿ ವೈರಗಳನ್ನು ಮತ್ತು ಎ.ಟಿ.ಎಮ್ ಬಾಕ್ಸ್ ಗಳನ್ನು ಯಾವುದೇ ರೀತಿ ಒಡೆದು ಹಾಳು ಮಾಡದೇ ಮುಚ್ಚಿ ಹೋಗಿದ್ದು ಯಾವುದೇ ರೀತಿಯಿಂದ ಎ.ಟಿ.ಎಮ್ ದಲ್ಲಿ ಹಣ  ವಗೈರೆ ಕಳುವುವಾಗಿರುವದಿಲ್ಲ. ಅಂತಾ ಶ್ರೀ ರಾಮನಗೌಡ ಶಿವರಾಯಗೌಡ ಬಿರಾದಾರ ಉ: ಬ್ರಾಂಚ ಮ್ಯಾನೇಜರ ದರ್ಗಾ ಬ್ರಾಂಚ ಗುಲಬರ್ಗಾ ಇವರು ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ದೇವಿಂದ್ರ ತಂದೆ ಭೀಮರಾವ ಆಳಂದ ಮು: ಮೋಘಾ (ಬಿ) ತಾ:ಆಳಂದ ರವರ ತಮ್ಮ ಸೂರ್ಯಕಾಂತ ಇವನು ಈ ಎರಡು ತಿಂಗಳ ಹಿಂದೆ ನಾನು ನನ್ನ ತಮ್ಮ ಕೂಡಿ ಖಜೂರಿ ಗ್ರಾಮದ ನಮ್ಮ ಮಾವನವರಾದ ಶಂಕರ ಕೋರೆಯವರ ಹತ್ತಿರ ಬಂದು ಉಳಿದುಕೊಂಡಿದ್ದು ದಿನಾಂಕ 12-08-2014 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಶರಣಬಸಪ್ಪಾ ತಂದೆ ಕರಬಸಪ್ಪಾ ಪಾಟೀಲ ಇವರು ಪೋನ ಮೂಲಕ ತಿಳಿಸಿದೆನೆಂದರೆ ಮೋ.ಸೈಕಲ ನಂ ಎಮ್‌ಎಚ್‌ 25 ಎಸ್‌‌ 5163 ನೇದ್ದರ ಸ್ಪೇಂಡರ ಪ್ಲಸ್‌ ಮೇಲೆ ಸೂರ್ಯಕಾಂತ ಆಳಂದ ಮತ್ತು ಗಜಾನಂದ ನಗರೆ ಕೂಡಿ ಖಜೂರಿ ಕಡೆಯಿಂದ ಬಾರ್ಡರ ಕಡೆಗೆ ಹೊಗುವಾಗ ಸೂರ್ಯಕಾಂತನು ಮೋಟರ ಸೈಕಲ ಚಲಾಯಿಸುತ್ತಿದ್ದು ಯುವರಾಜ ದಾಬಾದ ಹತ್ತಿರ ಖಜೂರಿ ಉಮರ್ಗಾ ರೋಡಿನ ಮೇಲೆ ಉಮರ್ಗಾ ಕಡೆಯಿಂದ ಲಾರಿ ಟ್ಯಾಂಕರ ನಂ ಎಮ್‌ಎಚ್‌ 12 ಕೆಪಿ 7999 ನೇದ್ದರ ಚಾಲಕ ತನ್ನ ವಾಹನವನ್ನು ವೇಗವಾಗಿ ಮತ್ತು ನಿಷ್ಕಾಳಜಿತದಿಂದ ಓಡಿಸುತ್ತಾ ಬಂದವನೇ ನಿನ್ನ ತಮ್ಮ ನಡೆಸುತ್ತಿದ್ದ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಿನ್ನ ತಮ್ಮ ನ ಹಣೆಗೆ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಹಿಂದೆ ಕುಳಿತ್ತಿದ್ದ ಗಜಾನಂದ ನಗರೆ ಇತನಿಗೆ ಕೂಡಾ ತಲೆಗೆ ಪೆಟ್ಟಾಗಿರುತ್ತದೆ ಅರ್ಜಂಟ ಬರಬೇಕು ಅಂತಾ ತಿಳಿಸಿದರ ಮೇರೆಗೆ ನಾನು ಹಾಗು ನಮ್ಮ ಮಾವ ಶಂಕರ ಹಾಗು ಇತರರು ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ಪೆಟ್ಟಾಗಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ನಿಜ ಇರುತ್ತದೆ. ಗಜಾನಂದನಿಗೆ ಗಾಯವಾಗಿದ್ದರಿಂದ ಯ್ಯಾರೋ ಅವನ ಸಂಬಂದಿಕರು ಉಮರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಫಘಾತ ಪಡಿಸಿದ ಲಾರಿ ಟ್ಯಾಂಕರ ಅಲ್ಲೆ ನಿಂತಿದ್ದು ಚಾಲಕನು ಓಡಿ ಹೋಗಿರುತ್ತಾನೆ. ಅದರ ನಂಬರ ನೋಡಲಾಗಿ ಎಮ್‌ಎಚ್‌ 12 ಕೆಪಿ 7999 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೆಲೀಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ  ಹಣಮಂತ ತಂದೆ ಶ್ಯಾಮರಾವ ಇಟಗಿ ಸಾ: ಪ್ಲಾಟ ನಂ. 11/4  ನ್ಯೂ ಘಾಟಗೇ ಲೇಔಟ  ಗುಲಬರ್ಗಾ ರವರು ದಿನಾಂಕ 13/08/2014 ರಂದು ಮದ್ಯರಾತ್ರಿ 12 ಎಎಂ ಸುಮಾರಿಗೆ  ನಾನು ಮತ್ತು ಸಿದ್ದಾರ್ಥ ತಂದೆ ದೇವಿಂದ್ರಪ್ಪಾ ಪಾರಾ, ಸಾತಪ್ಪಾ ತಂದೆ ವಿಠ್ಠಲ ಭಜಂತ್ರಿ, ಎಲ್ಲರೂ ದ್ವಿಚಕ್ರ ವಾಹನದ ಮೇಲೆ  ಕ್ರಸ್ಟಲ ಪ್ಯಾಲೇಸ ಹೊಟೇಲನಿಂದ ಊಟ ಮುಗಿಸಿಕೊಂಡು ಬರುತ್ತಿರುವಾಗ ರಾಮ ಮಂದಿರ ಸರ್ಕಲ ಹತ್ತಿರ ಬಂದು ಪಾರ್ಚುನರ್‌ ಕಾರ ನಂ. ಕೆಎ 32-ಎನ್‌-5252 ರ ಚಾಲಕ ನಮ್ಮ ದ್ವಿಚಕ್ರ ವಾಹನಕ್ಕೆ ಓವರ ಟೇಕ ಮಾಡಿದ್ದು ಆಗ ನಾವು ಏ ಅಂತಾ ಚಿರಾಡಿದಕ್ಕೆ ಫಾರ್ಚುನರ್‌ ಕಾರನಲ್ಲಿದ್ದವರು  ಕೆ.ಇ.ಬಿ ಕಲ್ಯಾಣ ಮಂಟಪ ಹತ್ತಿರ  ನಮ್ಮನ್ನು ತಡೆದು ನಿಲ್ಲಿಸಿ ಕಾರನಿಂದ ಹೊರಗಡೆ ಬಂದುವನೇ  ಏನಲೇ ಹೊಲೆಯ ಭೋಸಡಿ ಮಕ್ಕಳೆ  ಗಾಡಿ ರೋಡನಲ್ಲಿ ನಿಲ್ಲಿಸಿ ನನಗೆ ಏ ಎಂದು ದಬಾಯಿಸುತ್ತಿರಾ ನಾನು ಯಾರೆಂದು ಗೊತ್ತೇನು ನಾನು ವೀರಯ್ಯಾ ಗುತ್ತೆದಾರ ಮಗನಿದ್ದನೆ ಮಕ್ಕಳೇ ಎಂದು  ಜಾತಿ ಎತ್ತಿ ಬೈದಿರುತ್ತಾನೆ. ಮತ್ತು ಅವರ ಗೆಳೆಯರಿಗೆ ಫೋನ ಮಾಡಿ ಕರೆಯಿಸಿದ್ದು 8-10 ನಿಮಿಷದಲ್ಲಿ  7-8 ಜನರು ಬಂದವರೇ ನಮ್ಮೊಂದಿಗೆ ಜಗಳ ತೆಗೆದು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದಿರುತ್ತಾನೆ. ಮತ್ತು ಇನ್ನೊಬ್ಬನು ಕಟ್ಟಿಗೆಯಿಂದ ಸಿದ್ದಾರ್ಥ ತಂದೆ ದೇವಿಂದ್ರಪ್ಪಾ ಪಾರಾನ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿರುತ್ತಾರೆ.  ಅಷ್ಟರಲ್ಲಿ ಸಿದ್ದಾರ್ಥನ ತಲೆಯಿಂದ ರಕ್ತ ಬರುತ್ತಿರುವುದನ್ನು ನೊಡಿ ಅವರೇಲ್ಲರೂ ಓಡಿ ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 August 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :

ರಾಘವೇಂದ್ರ ನಗರ ಠಾಣೆ : ದಿನಾಂಕ 11-08-2014 ರಂದು ಸಾಯಂಕಾಲ 19-00 ಗಂಟೆ ಸುಮಾರಿಗೆ ರಾಘವೇಂದ್ರನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಮದಿನಾ ಕಾಲೋನಿಯಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ ಮೆರೆಗೆ ಶ್ರೀ ಹೇಮಂತಕುಮಾರ ಎಂ ಪಿ ಎಸ್ ಐ ರಾಘವೇಂದ್ರನಗರ ಪೊಲೀಸ ಠಾಣೆ mtftu ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರತಿಸಿದ್ದ ಅವನು ತನ್ನ ಹೆಸರು ಶೈಫಿಕ ತಂದೆ ಮೈಹೆಮೊದಖಾನ ಸಾ|| ಮದಿನಾ ಕಾಲೋನಿ ಗುಲಬರ್ಗಾ ಅಂತಾ ತಳಿಸಿದ್ದು. ಆತನ ಅಂಗ ಸಂಶೋದನೆ ಮಾಡಲು ಆತನ ಪ್ಯಾಂಟಿನ ಜೆಬಿನಲ್ಲಿ 1210 ರೂ. ಮತ್ತು ಒಂದು ಪೈನ ಮೂರು ಮಟಕಾ ಚೀಟಿಗಳು ಅ.ಕಿ.-00 ದೊರೆತವು ಸದರಿ ಘಟನೆ ಬಗ್ಗೆ ಒಂದು ಜಪ್ತಿ ಪಂಚನಾಮೆ ಬರೆದು ಸದರಿ ಆರೋಪಿತನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಆಶರಫ ಹುಸೇನ ತಂದೆ ಹಾಜಿ ಅಬ್ದುಲ ಲತೀಫ ಸಾ: ರಾಮ ಮೊಹಲ್ಲಾ ಶಹಾಬಾದ ಇವರು ದಿನಾಂಕ: 11-08-2014 ರಂದು ಮುಂಜಾನೆ 9-30 ಗಂಟೆಗೆ  ಬೆಂಡಿ ಬಜಾರನಲ್ಲಿರುವ ಜೀಕ್ರಿಯಾ ಮಟನ ಅಂಗಡಿಗೆ ಹೋಗಿ 12 ಕೆ.ಜಿ ಮಟನ ಬೇಕಾಗಿದೆ ಸರಿಯಾಗಿರುವ ಮಟನ ಕೊಡಿ ಅಂತಾ ಮುಂಗಡವಾಗಿ 1380-00 ರೂ ಕೊಟ್ಟು ಮನೆಗೆ ವಾಪಸ ಹೋಗಿ ನಂತರ  ಪಿರ್ಯಾದಿ ಆತನ ಗೆಳೆಯನಾದ  ನಜೀಬ ಖಾನ ಇಬ್ಬರೂ ಇಂದು ಮುಂಜಾನೆ 11-30 ಗಂಟೆಗೆ ಮಟನ ಅಂಗಡಿ ಬಂದು ಅವರು ಕಟ್ಟಿ ಇಟ್ಟ ಮಟನ ಬಿಚ್ಚಿ ನೋಡಲು ಸರಿಯಾದ ಮಟನ ಇರದ ಕಾರಣ ಮಟನ ಸರಿಯಾಗಿ ಇಲ್ಲ ಬೇರೆ ಕೊಡಿ ಅಂತಾ ಕೇಳಿದಕ್ಕೆ  ಅರೋಫಿ  ಮಹ್ಮದ ಅಜಮ ಮತ್ತು ಅವನ ತಮ್ಮ ಮೊಹ್ಮದ ಜಕೀರಿಯ ಹಾಗೂ ಹಾಜಿ ಕರೀಮ ಖುರೇಷಿ ಇವರುಗಳು ಮಟನ ಸರಿಯಾಗಿ ಕೊಡುವ ವಿಷಯದಲ್ಲಿ   ತಕರಾರು ಮಾಡಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿ ಮತ್ತು ಅವನ ಗೆಳೆಯ ನಜೀಬ ಖಾನ ಇತನಿಗೆ ಕೈಯಿಂದ ಮತ್ತು ಮಚ್ಚಿನಿಂದ ಹೊಡೆದು ಭಾರಿ ರಕ್ತ ಗಾಯಾ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಸೈಯ್ಯದ ವಲೀದ ತಾಹೇರ ತಂದೆ ಸೈಯ್ಯದ ತಾಹೇರ ಅಲಿ ಸಾಃ ಗಣೇಶ ಮಂದೀರ ಹತ್ತಿರ ಚೆಟ್ಟೆವಾಡಿ ಮೋಮಿನಪುರ ಗುಲಬರ್ಗಾ ದಿನಾಂಕಃ 10-08-2014 ರಂದು ರಾತ್ರಿ ಮೇಜಿಸ್ಟಿಕ್ ಫಂಕ್ಷನ ಹಾಲನಲ್ಲಿ ನನ್ನ ಅಣ್ಣನಾದ ಸೈಯ್ಯದ ಸೌತ ತಾಹೇರ ಇವರ ಮದುವೆ ಇರುವದರಿಂದ ನಾನು ಹಾಗೂ ನಮ್ಮ ಸಂಬಂದಿಕರು ಅಲ್ಲದೆ ನಮ್ಮ ಕುಟುಂಬ ಸಮೇತ ಎಲ್ಲರೂ ರಾತ್ರಿ 8.30 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಕೀಲಿ ಹಾಕಿ ಮದುವೆಗೆ ಹೋಗಿರುತ್ತೇವೆ.  ಮದುವೆ ಕಾರ್ಯ ಕ್ರಮ ಮುಗಿಸಿ ಕೊಂಡು ಮರಳಿ ರಾತ್ರಿ 3.00 ಗಂಟೆಗೆ ಮನಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ತೆರದ ಹಾಗೆ ಕಾಣುವದರಿಂದ ಗಾಬರಿಯಾಗಿ ಮನೆಯೊಳಗೆ ಹೋಗಿ ನೋಡಲು ಮನೆಯೋಳಗೆ ಇರುವ ಅಲಮಾರಿಯನ್ನು ತೆರೆದಿತ್ತು.  ನಾವು ಪರಶೀಲಿಸಿ ನೊಡಿದಾಗ ಅಲ್ಮಾರಿಯಲ್ಲಿದ್ದ ನನ್ನ ತಾಯಿಯ ಬಂಗಾರದ ಆಭರಣಗಳು ಒಟ್ಟು 5,67,825/- ಬೆಲೆ ಬಾಳುವ ಆರಣಗಳು ಮತ್ತು ನಗದು 1,00,000/- ಹೀಗೆ ಒಟ್ಟು 6,67,825/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.