POLICE BHAVAN KALABURAGI

POLICE BHAVAN KALABURAGI

09 August 2014

Gulbarga District Reported Crimes

ದರೋಡೆ ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 09-08-14 ಬೆಳಗಿನ ಜಾವ 2-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿರೇಶ ನಗರ  ಕ್ರಾಸ್ ಹತ್ತಿರ ಇರುವ ಜಾಲಿ ಕಂಟಿಯ ಮರೆಯಲ್ಲಿ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ  ಬಾತ್ಮಿ ಬಂದ ಮೇರೆಗೆ ಶ್ರೀ ಎಮ್.ಬಿ.ಬಿರಾದಾರ ಪಿ.ಎಸ್.ಐ (ಅ.ವಿ) ಬ್ರಹ್ಮಪೂರ ಠಾಣೆ ಮತ್ತು  ಸಿಬ್ಬಂದಿಯವರೊಂದಿಗೆ ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೊಗಿ ಜಾಡು ಹಿಡಿದು ನೋಡಲು  ವಿರೇಶ ನಗರದ ಕಡೆಗೆ ಹೋಗುವ ರೋಡಿನ ಎಡಗಡೆ ಜಾಲಿ ಕಂಟಿಗಳಲ್ಲಿ ದರೋಡೆ ಕೋರರು ಗುಜು ಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರೂ ಬರುವದನ್ನು ಗಮನಿಸಿ ಓಡಿರೋ ಓಡಿರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ  ಒಟ್ಟು 6 ಜನರಿಗೆ ಹಿಡಿದು ಕೊಂಡಿದ್ದು ಅವರ ಹೆಸರು 1. ಮುಸ್ತಾಖ ಶಫೀ @ ಭೋಲಾ ತಂದೆ ಅಲಿಂ ಮೀಯಾ  ಸಾ|| ರಹಿಮತ ನಗರ ಗುಲಬರ್ಗಾ 2. ಸೈಯದ ಸದಾಂ ತಂದೆ ಬಾಬುಮಿಯಾ ಸಾ|| ಎಮ್.ಎಸ್.ಕೆ ಮೀಲ ಗುಲಬರ್ಗಾ 3. ಸಾಗರ @ ಸಾಗರ್ಯಾ ತಂದೆ ವಕೀಲ @ ನಾರಾಯಣ ಕಾಂಬಳೆ   ಸಾ|| ಬಾಪು ನಗರ ಗುಲಬರ್ಗಾ 4. ಚಿರಂಜೀವಿ ತಂದೆ ಸುಗಾರಾಮ ಪಾಟೀಲ ಸಾ|| ಬಾಪು ನಗರ ಗುಲಬರ್ಗಾ 5.  ದೇವು @ ದೇವ್ಯಾ ತಂದೆ ಪನ್ನಾ ಸಕಟ ಸಾ|| ಬಾಪು ನಗರ ಗುಲಬರ್ಗಾ  6. ಅಜರ್ುನ ತಂದೆ ವಿಜಯ ಕಾಂಬಳೆ ಸಾ|| ಬಾಪು ನಗರ ಗುಲಬರ್ಗಾ ಅಂತಾ ತಿಳಿಸಿದ್ದು  ಸದರಿಯವರ ವಶದಲ್ಲಿದ್ದ ನಗದು ಹಣ ಒಟ್ಟು 5618/- ರೂಪಾಯಿ ಹಾಗು  ದರೊಡೆ ಮತ್ತು ಸುಲಿಗೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ 2 ಮೋಟಾರು ಸೈಕಲಗಳಾದ 1] ಒಂದು ಸಿ.ಟಿ 100 ಮೋಟಾರ ಸೈಕಲ್ ನಂ. ಕೆಎ-32.ಕ್ಯೂ-9876 ಕಪ್ಪು ಬಣ್ಣದು ಅ||ಕಿ|| 35.000/- 2) ಹಿರೋಹೊಂಡಾ ಸ್ಪ್ಲೆಂಡರ್  ಮೋಟಾರ ಸೈಕಲ್ ನಂಬರ ಕೆಎ-32. ಎಲ್-1199 ಕಪ್ಪು ಬಣ್ಣದು ಅ|| ಕಿ|| 35.000/-  ಮತ್ತು ಕೃತ್ಯಕ್ಕೆ ಬಳಸಲು ತಂದಿದ್ದ ಖಾರದ ಪುಡಿ ಪಾಕೀಟಗಳು, ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ ಹಾಗು ಹಗ್ಗಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :

ಮಹಿಳಾ ಠಾಣೆ : ಶ್ರೀ ಸುರೇಶ ತಂದೆ ಲಾಲುಸಿಂಗ್ ಪವಾರ ಸಾ; ಮಹಾರಾಜ ಹೋಟಲ ಎದುರುಗಡೆ ಐವಾನ್-ಶಾಹಿ ರೋಡ ಗುಲಬರ್ಗಾ ರವರ  ಅಕ್ಕ ಅನುಷಾ ಮತ್ತು ಭಾವ ರಾಜು ಇವರಿಬ್ಬರೂ ಮೃತಪಟ್ಟಿದ್ದರಿಂದ ಅವರ ಮಕ್ಕಳಾದ ಸಪ್ನಾ ಮತ್ತು ರಾಹುಲ ಇವರು ಸುಮಾರು 5 ವರ್ಷಗಳಿಂದ ನಮ್ಮಲ್ಲಿಯೇ ಇರುತ್ತಾರೆ. ಸಪ್ನಾ ಇವಳೂ ದಿನಾಂಕ 7.08.2014 ರಂದು ಮನೆಯ ಮುಂದೆ ಆಡುತ್ತಿದ್ದಳು. ಸುಮಾರು 4 ಗಂಟೆಯ ಸುಮಾರಿಗೆ ನಾನು ಹೊರಗಡೆ ಬಂದು ನೋಡಲಾಗಿ ಸಪ್ನಾ ಇವಳು ಕಾಣಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ನಾನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ. ಕಾರಣ ಕಾಣೆಯಾದ ಸಪ್ನಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಥಾವರು ತಂದೆ ಪಾಂಡು ಪವಾರ ಸಾ; ಚೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ  ರವರು ದಿನಾಂಕ 07-08-2014 ರಂದು 8 ಗಂಟೆಗೆ ಸುಮಾರಿಗೆ ಶ್ರಾವಾಣ ಮಾಸವಿದ್ದ ಸಂಭಂದ ಜೋಕ್ಲಾ ನಾಯ್ಕ ತಾಂಡದ ಹುನುಮಾನ ದೇವರ ಗುಡಿಯಲ್ಲಿ ಪಿರ್ಯಾದಿ ಮತ್ತು ಆರೋಪಿತರು ಹಾಗೂ ತಾಂಡದ ಇತರರು ಕೂಡಿಕೊಂಡು ಭಜನೆ ಮಾಡಿ ರಾತ್ರಿ 10 ಗಂಟೆಗೆ ಸಮಯ ಬಹಳ ಆಗಿದ್ದರಿಂದ ಪಿರ್ಯಾದಿ ಹುಮನಾನ ದೇವರಿಗೆ ಟೆಂಗು ಒಡೆದು ಆರತಿ ಮಾಡಿ ಭಜನೆಯನ್ನು ಮುಗಿಸಿದ್ದರಿಂದ ಇದೆ ವಿಷಯದಲ್ಲಿ ದೇವಿದಾಸ ಸಂಡಗ 3 ಜನರು ಎಲ್ಲರೂ ಸಾ; ಜೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ ಇವರು ಅವಾಚ್ಯ ಶಭ್ದಗಳಿಂದ ಬೈದ್ದು, ಪ್ರಚೋದನೆ ಯಿಂದ ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ ಹಾಕಿದ ಪ್ರಕಣ :
ನಿಂಬರ್ಗಾ ಠಾಣೆ : ಶ್ರೀ ಶಾಂತಮಲ್ಲಪ್ಪ ಹೆಚ್.ಸಿ 434 ನಿಂಬರ್ಗಾ ಪೊಲೀಸ ಠಾಣೆರವರು ದಿನಾಂಕ  01-08-2014 ರಂದು 15-30 ಗಂಟೆಗೆ ತನ್ನ ಮೊಬೈಲ ನಂ. 9449693699 ನೇದ್ದಕ್ಕೆ ಮೋಬೈಲ ನಂ. 9902496551 ನೇದ್ದರಿಂದ ಯಾವುನೊ ಒಬ್ಬ ವ್ಯಕ್ತಿಯು ಜೀವ ಬೆದರಿಕೆ ಕರೆ ಮಾಡಿರುತ್ತಾನೆ ಕಾರಣ ಮಾನ್ಯರವರು ಸದರಿ ಮೋಬೈಲ ನಂಬರದಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಪ್ಪ ತಂದೆ ಶರಣಪ್ಪ ದೇವಣಿ  ಸಾ : ಮೈಸಲಗಿ ತಾ: ಬಸವಕಲ್ಯಾಣ ಜಿ : ಬೀದರ ರವರು ಬೆಳಗ್ಗಿನ ಜಾವ 2.00 ,ಎಮ್,ದ ಸೂಮಾರಿಗೆ ನನ್ನ ಲಾರಿ ಚಾಲಕ ಕಿಶನ ಇತನು ಪೋನ ಮಾಡಿ ತಿಳಿಸಿದ್ದೇನಂದರೆ ಮದ್ಯ ರಾತ್ರಿ 1.00 ಗಂಟೆಯ ಸೂಮಾರಿಗೆ ತಾನು ಸದರ ಲಾರಿ ಚಲಾಯಿಸಿಕೊಂಡು ಗುಲಬರ್ಗಾ ಕಡೆಗೆ ಹೋಗುತ್ತಿದ್ದಾಗ ಕುರಿಕೋಟ ಗ್ರಾಮದ ಸಮೀಪ ರೋಡಿನ ಎಡಗಡೆ ತೆಗ್ಗಿನಲ್ಲಿ ಲಾರಿ ಅಪಘಾತವಾಗಿರುತ್ತದೆ ಇದರಿಂದ ತನಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಅಂತಾ ತಿಳಿಸಿದನು ದಿನಾಂಕ 08-08-2014  ರಂದು ಬೆಳಗ್ಗೆ 11.00 ಗಂಟೆಗೆ ನಾನು ಸ್ಥಳದಲ್ಲಿ ಬಂದು ನೋಡಲಾಗಿ ಹಕೀಕತ ನಿಜಾಇದ್ದು ಲಾರಿ ನೋಡಲಾಗಿ ಲಾರಿ ಬಲಮಗ್ಗಲಾಗಿ ಬಿದ್ದಿದ್ದು ಮುಂದಿನ ಗ್ಲಾಸ ಒಡೆದು ಹೋಗಿದ್ದು ಸೈಡ ಬಾಡಿ ಜಖಂ ಗೊಂಡಿದ್ದು ಕ್ಯಾಬೀನ , ಲಾರಿಯ ಚೆಸ್ಸಿ , ಬೆಂಡ್ ಹಾಗೂ ಹೌಸಿಂಗ ಇತ್ಯಾದಿಗಳು ಜಖಂ ಗೊಂಡಿರುತ್ತವೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 August 2014

Gulbarga District Reported Crimes

ಅಪಘಾತ ಪ್ರಕರಣಗಳು :
ವಾಡಿ ಠಾಣೆ : ಶ್ರೀ ಸಣ್ಣಬುಡ್ಡಪ್ಪ ತಂದೆ ಹಣಮಂತ ಹಳ್ಳಿ ಸಾ|| ಲಕ್ಷ್ಮಿಪೂರ ವಾಡಿ ಇವರ ಮಗ ಹಣಮಂತ ಇವನು ದಿನಾಂಕ 07-08-2014 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಹೆಂಡಿಯ ಮನೆಗೆ ಹೋಗಿ ಬರುತ್ತೆನೆ ಅಂತಾ ಹಲಕಟ್ಟಿಗೆ ಹೋಗಿದ್ದು ರಾತ್ರಿ 11 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನಮ್ಮ ಭಿಗ ನಿಂಗಪ್ಪಾ ಕೊಡಚಿ @ ಚೌದ್ರಿ ಇವರು ಫೊನಮಾಡಿ ತನಗೆ ನಮ್ಮೂರ ಗೊರಖಪಾಶಾ ಫೊನಮಾಡಿ ತಾನು ವಾಡಿಯಿಂದ ಮೊಟರ ಸೈಕಲ ಮೆಲೆ ಹಲಕಟ್ಟಾಗೆ ಹೊರಟಿದ್ದೆ ವಾಲ್ಮಿಕಿ ಪೆಟ್ರೊಲಬಂಕ ಹತ್ತಿರ ಒಬ್ಬ ಮನುಷ್ಯನಿಗೆ ಯಾವುದೊ ವಾಹನ ಡಿಕ್ಕಿ ಹೊಡೆದು ಹೊಗಿದ್ದರಿಂದ ನರಳುತ್ತಾ ಬಿದ್ದಿದ್ದು ನೋಡಿ ಯಾರು ನೀನು ನಿನ್ನ ಹೆಸರು ಏನು ಅಂತಾ ವಿಚಾರಿಸಲು ಹಲಕಟ್ಟಾದಲ್ಲಿ ನಿಂಗಪ್ಪಾ ಚೌದ್ರಿ ನಮ್ಮ ಮಾವ ಇದ್ದಾನೆ ಲಕ್ಷಿಪೂರ ವಾಡಿಯಲ್ಲಿ ಸಣ್ಣಬುಡ್ಡಪ್ಪಾ ಅಂತಾ ನನ್ನ ತಂದೆಯವರಿದ್ದಾರೆ. ಈಗ 10 ನಿಮಿಷದ ಮುಂಚೆ ಯಾವುದೊ ವಾಹನ ನಾನು ನಡೆದುಕೊಂಡು ಹಲಕಟ್ಟಾಗೆ ಹೊರಟಿದ್ದೆ ಹಿಂದಿನಿಂದ ಡಿಕ್ಕಿ ಹೊಡೆದು ಹೋಗಿದೆ ಆಗ ರಾತ್ರಿ 10-30 ಗಂಟೆಯಾಗಿದ್ದು ಅಂತಾ ನನಗೆ ಫೋನಮಾಡಿ ಹೇಳಿದನು. ಉಪಚಾರ ಕುರಿತು ಸರಕಾರಿ ಆಸ್ಪತ್ರೆ ವಾಡಿಗೆ ಕಳುಹಿಸುತ್ತಿದ್ದೆನೆ ಅಂತಾ ಹೇಳಿದನು. ಕೂಡಲೆ ನಾನು ನನ್ನ ಹೆಂಡತಿ ಆಸ್ಪತ್ರೆಗೆ ಹೊಗಲು ನನ್ನ ಬೀಗ ನಿಂಗಪ್ಪಾ ಚೌದ್ರಿ ನನ್ನ ಸೊಸೆ ಲಲಿತಾ ಇವರು ಆಸ್ಪತ್ರೆಗೆ ಬಂದಿದ್ದರು ನೊಡಲು ನನ್ನ ಮಗ ಹಣಮಂತನ ಎಡಗಾಲ ಪಾದದ ಹತ್ತಿರ ಮುರಿದಿದ್ದು, ಬಲಗಾಲ ಸಿಳಿದ ಹಾಗೆ ಆಗಿತ್ತು ಮತ್ತು ಹಿಂದುಗಡೆ ತೆಲೆಗೆ ಭಾರಿ ರಕ್ತಗಾಯವಾಗಿ ರಕ್ತ ಬರ ಹತ್ತಿತು ಮತ್ತು ಎರಡು ಕೈಗಳಿಗೆ ತೆರಚಿದ ಗಾಯಗಳಾಗಿತ್ತು ನನ್ನ ಮಗ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಭರತ ತಂದೆ ದೀಪಕ ಮಾಳಗೆ ಸಾ: ಎಲ್,ಎಲ್, ಕೇರ ಆಸ್ಪತ್ರೆ ಎದುರು ಆದರ್ಶ ನಗರ ರಿಂಗ ರೋಡ  ಗುಲಬರ್ಗಾ ಇವರು  ದಿನಾಂಕ 08-08-2014 ರಂದು ಬೆಳಿಗ್ಗೆ 8-30 ಗಂಟೆಗೆ ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಡಿ-5906 ನೇದ್ದನ್ನು ಚಲಾಯಿಸಿಕೊಂಡು ಆರ್.ಟಿ.ಓ ಕ್ರಾಸ್, ಜಿ.ಜಿ.ಹೆಚ್ ಸರ್ಕಲ ಮುಖಾಂತರ ಅನ್ನಪೂರ್ಣ ಕ್ರಾಸ್ ಕಡೆಗೆ ಬರುತ್ತಿದ್ದಾಗ ಕುಳಗೇರಿ ಕ್ರಾಸ್ ಹತ್ತಿರ ಎದುರಿನಿಂದ ಮೋ/ಸೈಕಲ ನಂಬರ ಕೆಎ-32 ವಾಯಿ-8162 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಬಲಗಾಲ ಮೊಳಕಾಲಿಗೆ ಗುಪ್ತಪೆಟ್ಟು, ತರಚಿದಗಾಯ ಮತ್ತು ಬಲ ಮುಂಗೈಗೆ ತರಚಿದಗಾಯ ಹಾಗು ಬಲುಭುಜಕ್ಕೆ ಗುಪ್ತಪೆಟ್ಟು ಮಾಡಿ ಮೋ/ಸೈಕಲ ಸ್ಥಳದಲ್ಲಿ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 August 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಕಮಲಾಪೂರ ಠಾಣೆ : ಕಮಲಾಪೂರ ಗ್ರಾಮದ ಸುಭದ್ರಾ ಕಾಂಪ್ಲೇಕ್ಸ್ ಎದುರುಗಡೆ ಇರುವ  ರಾಚೋಟೇಶ್ವರ  ಪಾನ ಶಾಪದ  ಹತ್ತಿರ  ಸಾರ್ವಜನಿಕ  ರಸ್ತೆಯ  ಮೇಲೆ  ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ  ಸಾರ್ವಜನಿಕರಿಂದ ಹಣವನ್ನು ಪಡೆದುಕುಂಡು ಏನೋ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಿದ್ದು, ಹಾಗೂ ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಬನ್ನಿರಿ ಅಂತಾ ಕರೆಯುತ್ತಿರುವುದನ್ನು ನೋಡಿ ಖಚಿತಪಡಿಸಿಕೂಂಡು  ಎ ಎಸ್.ಐ ಸಾಹೇಬರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ವಿಚಾರಿಸಲು  ರಾಮನಾಥ ತಂದೆ ಚಂದ್ರಪ್ಪ ರಾಜೇಶ್ವರ  ಸಾ; ಕಮಲಾಫೂರ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 3665/- ರೂಪಾಯಿ, ಒಂದು  ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಮತ್ತು ಎರಡು ಬಾಲಪೆನ್  ವಶಪಡಿಸಿಕೊಂಡು ಮರಳಿ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 06-08-2014 ರಂದು ಮಧ್ಯಾಹ್ನ 03-00 ಗಂಟೆಗೆ ಕಾಳಮಂದರ್ಗಿ ಗುತ್ತಿ ತಾಂಡಾದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮೀ ಮೇರೆಗೆ ಶ್ರೀ.ಸಿದ್ರಾಮಪ್ಪ ಎ.ಎಸ್.ಐ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ- ಬಹಾರ  ಇಸ್ಪೀಟ್ ಜೂಜಾಟವಾಡುತ್ತಿದ್ದು 1. ವಿಕ್ರಮ ತಂದೆ ನಾಮು ರಾಠೋಡ ರ್ಷ  2. ಸಂದೀಪ್ ತಂದೆ ಬಳಿರಾಮ ಜಾಧವ  3. ಪ್ರಕಾಶ ತಂದೆ ಹರಿಶ್ಚಂದ್ರ ಪವಾರ  4. ದಿಲೀಪ್  ತಂದೆ  ಜೈಚಂದ್ರ ಜಾಧವ  5. ಸಂತೋಷ ತಂದೆ ಭೀಮಲಾ ರಾಠೋಡ 6. ಸಂಜುಕುಮಾರ ತಂದೆ ನಾಮದೇವ ರಾಠೋಡ 7. ಅಶೋಕ ತಂದೆ ಕಿಶನ ಜಾಧವ  ಎಲ್ಲರೂ  ಸಾ: ಕಾಳಮಂದರ್ಗಿ ಗುತ್ತಿ ತಾಂಡಾ  ತಾ: ಜಿ: ಗುಲಬರ್ಗಾ ಇವರುಗಳಿಗೆ  ದಸ್ತಗಿರಿ ಮಾಡಿಕೊಂಡು  ಇಸ್ಪೀಟ್  ಜೂಜಾಟಕ್ಕೆ  ಸಂಭಂದಿಸಿದ  ನಗದು ಹಣ 1150 =00 ರೂಪಾಯಿ  ಮತ್ತು 52  ಇಸ್ಪೀಟ್  ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತು ಪಡಿಸಿಕೊಂಡ  ಮರಳಿ ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ರವಿಕುಮಾರ ತಂದೆ ಬಸವರಾಜ ಬೆಣ್ಣೂರ ಸಾ: ಮ.ನಂ. 11-45/29 ಮಹಾಲಕ್ಷ್ಮಿ ಲೇಔಟ ಫೈಯರ ಸ್ಟೇಷನ ಎದುರುಗಡೆ ಗುಲಬರ್ಗಾ ರವರು ದಿನಾಂಕ  06-08-2014 ರಂದು ಸಂಜೆ 7-45 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಗೆಳೆಯರಾದ ಪ್ರದೀಪ ಪಾಟೀಲ, ಗುರುಪ್ರಸಾದ ಪಾಟೀಲ, ಶಿವಶರಣ ರಾಮಪೂರ, ಎಲ್ಲರೂ ಮಾತನಾಡುತ್ತಾ ವೆಂಕಟಗೀರಿ ಹೊಟೇಲ ಎದುರಿಗೆ ಇರುವ ಗುರುಶಾಂತಯ್ಯಾ ಸ್ವಾಮಿ ರವರ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಂತಾಗ ಕಾರಿನಲ್ಲಿ ಬಂದು ವ್ಯಕ್ತಿ ಮಿರರ್ ತಾಗಿಸಿದಕ್ಕೆ ಕಾರ ನಡೆಸಲು ಬರುವುದಿಲ್ಲಾ ಎಂದು ಕೇಳಿದಕ್ಕೆ ಆ ವ್ಯಕ್ತಿ ಕಾರಿನಿಂದ ಇಳಿದು ಬಂದು '' ಏನು ಮಾತನಾಡುತ್ತಿ ಬೋಸಡಿ ಮಗನೇ ಏನು ನಿಗರಿ ನೋಡತ್ತಿ ಅಂತಾ ಅವಾಚ್ಯ ಶಬ್ಗಗಳಿಂದ ಬೈದು ನಿನಗೆ ಶೂಟ ಮಾಡುತ್ತಿನಿ ಅಂತಾ ಬಗಲಲ್ಲಿ ಇದ್ದ ಪಿಸ್ತೂಲಿನಿಂದ ಹೊಡೆಯಲು ಬಂದು ಕೊಲೆಗೆ ಯತ್ನಿಸಿರುತ್ತಾನೆ. ಅಷ್ಠರಲ್ಲಿ ನನ್ನ ಗೆಳೆಯರಾದ ಪ್ರದೀಪ ಪಾಟೀಲ, ಗುರುಪ್ರಸಾದ ಪಾಟೀಲ, ಶಿವಶರಣ ಅವರು ಬಂದು ಯಾಕೆ ಪಿಸ್ತೂಲಿನಿಂದ ಹೆದರಿಸುತ್ತಿದ್ದಿರಿ ಅಂತಾ ಆ ವ್ಯಕ್ತಿಗೆ ಕೇಳಿದಾಗ ನನ್ನ ಹೆಸರು ಜಗದೀಶ ಅಂಬಲಗಿ ಇದೆ ನನ್ನ ಹತ್ತಿರ ಪಿಸ್ತೂಲ್  ಲೈಸನ್ಸ ಇದೆ ಪೊಲೀಸರು ಏನು ಮಾಡಲ್ಲಾ ಅಂತಾ ಹೇಳಿ ಹೆದರಿಸಿ ಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಸಮೀಮ್ ತಂದೆ ಮಹ್ಮದ ಸಲಿಮ ಸಾ|| ಗುಲಶನ ಚೌಕ ಮದಿನಾ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರು ದಿನಾಂಕ|| 06-08-2014 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ತಾನು ಮತ್ತು ತಂದೆ ಕೂಡಿಕೊಂಡು ನಜೀರ ಪಟೇಲ ಈತನಿಗೆ ನೀವು ಹಾಕುತ್ತಿರುವ ನಿಮ್ಮ ಮನೆಯ ಚತ್ ನಮ್ಮ ಜಾಗದಲ್ಲಿ ಬರುತ್ತಿದ್ದು  ಅದನ್ನು ಅಳತೆ ಮಾಡಿ ಹಾಕಿಕೊಳ್ಳಿ ಅಂತಾ ಹೇಳುತ್ತಿದ್ದಾಗ ನಜೀರ ಪಟೇಲ ಈತನು ನಮ್ಮೊಂದಿಗೆ ಜಗಳಾ ತೆಗೆದು ನಾನು ನಮ್ಮ ಜಾಗದಲ್ಲಿ ಕಟ್ಟುತ್ತಿದ್ದು ನೀನು ಏಕೆ ನನಗೆ ಬಂದು ಕೇಳುತ್ತಿರುವೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತ ತನ್ನ ಹತ್ತಿರ ಇದ್ದ ಒಂದು ಚಾಕುವಿನಿಂದ ಫಿರ್ಯಾದಿಯ ಮುಗಿನ ಹತ್ತಿರ ಹೊಡೆದಿದ್ದರಿಂದ ನನಗೆ ರಕ್ತ ಬರಹತ್ತಿದ್ದು  ಇದನ್ನು ನೋಡಿ ನಮ್ಮ ತಂದೆ ನಜೀರ ಪಟೇಲ ಇವರ ಕುಟುಂಬದವರಾದ ಮಲಂಗಹಾಗು ಅವರ ಮನೆಯ ಹೆಣ್ಣು ಮಕ್ಕಳಾದ ಜಾಹೀದ, ಪರವಿನ ಶಮಿಮ ಜಾಹಾಂ, ಹೀನಾ, ಕೌಸರ ಇವರೆಲ್ಲರೂ ಸೇರಿ ನನ್ನ ತಂದೆಗೆ ಕೈಯಿಂದ ಹೊಡೆದು ಅಲ್ಲಲ್ಲಿ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ಶೇಖ ರಶೀದ ಅಹ್ಮದ ಕಿರಿಯ ಇಂಜನಿಯರ್ (ವಿ) ಜೇಸ್ಕಾಂ ಗುಲಬರ್ಗಾರವರು ನಾಗಲೇಗಾಂವ ಗ್ರಾಮದ ಶ್ರೀ.ಶ್ರೀಕಾಂತ ತಂದೆ ಶರಣಪ್ಪ ಮಂಜೂಳಕರ್ ರವರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಸರಬರಾಜು ಮಾಡಲು 25 ಕೆ.ವಿ.ಎ ವಿದ್ಯುತ್ ಪರಿವರ್ತಕ ಮಂಜೂರಾಗಿದ್ದು ಅವರ ಹೊಲದಲ್ಲಿ ವಿದ್ಯುತ್ ಕಾಮಗಾರಿಯು ನಡೆಯುತ್ತಿದ್ದು ದಿನಾಂಕ:25/05/2014 ರಂದು ರಾತ್ರಿ ಸುಮಾರು 07:00 ಗಂಟೆ ಯಿಂದ ದಿ:26/05/2014 ರ ಬೇಳಗ್ಗೆ 06:00 ಗಂಟೆ ಅವಧಿಯೊಳಗೆ 25 ಕೆ.ವಿ.ಎ ವಿದ್ಯುತ್ ಪರಿವರ್ತಕದ ತೈಲ ಚೆಲ್ಲಿ ಅದರೊಳಗಿನ ವೈಂಡಿಂಗ್ ಕಾಯಿಲ್ ಗಳುನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೊತ್ತ ರೂಪಾಯಿ 14,500/- ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಗಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿನೋದ ತಂದೆ ಯಲ್ಲಪ್ಪ ಇಂಗಳಗಿ ಸಾ: ರಾಜಾಪೂರ ಗುಲಬರ್ಗಾ ರವರು ದಿನಾಂಕ 06-07-2014 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ತಾನು ಚಲಾಯಿಸುತ್ತಿರುವ ಮೋ/ಸೈಕಲ ನಂಬರ ಕೆಎ-32 ಇಡಿ-8540 ನೇದ್ದರ ಹಿಂದುಗಡೆ ದೇವಿಂದ್ರ ಇತನನ್ನು ಕೂಡಿಸಿಕೊಂಡು ಕೋರ್ಟ ಕ್ರಾಸ ಕಡೆಯಿಂದ ಸ್ಟೇಶನ ಏರಿಯಾದಲ್ಲಿ ಬರುವ ನನ್ನ ಗೆಳಯ ಮಲ್ಲು ಇವರ ಹತ್ತಿರ ಹೋಗುವಾಗ ಎಸ್.ವಿ.ಪಿ. ಸರ್ಕಲ ಹತ್ತಿರ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಸ್ಟೇಶನ ಏರಿಯಾ ಕಡೆಗೆ ಹೋಗುವ ಕುರಿತು ಲಾರಿ ನಂಬರ ಕೆಎ-31 -7211 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಮೋ/ಸೈಕಲ ಎಡಗಡೆಯ ಫುಟರೆಸ್ಟ, ಎರಡು ಶಾಗಪ್ಸ ಗೇರ, ಹಿಂದಿನ ವಿಲ ಹಾಗು ಕ್ಲಚ ಡ್ಯಾಮೇಜ ಮಾಡಿ ತನ್ನ ಲಾರಿ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.