POLICE BHAVAN KALABURAGI
15 June 2014
14 June 2014
Gulbarga District Reported Crimes
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ
ಅಬ್ದುಲಬೀ ಶೇಖ ಗಂಡ ರಮಮಾನ ಅಲಿ ಸಾ|| ಪ್ಲಾ
ನಂ 96, ಮದೀನಾ ಕಾಲೋನಿ ಸೋಯಿ ಗುಮ್ಮಜ ಹತ್ತಿರ ಗುಲಬರ್ಗಾ ರವರ ಗಂಡನ ಊರ ಸುರಪೂರ ಇದ್ದು ನಾವು ಮಕ್ಕಳೊಂದಿಗೆ ಮಹಾರಾಷ್ಟ
ರಾಜ್ಯದ ಮುಂಬೈಯಲ್ಲಿ ಕೆಲಸ ಮಾಡಿಕೊಂಡು ಉಪಜೀವಿ ಸುತ್ತೆವೆ ಸುಮಾರು 10 ವರ್ಷ ಗಳ ಹಿಂದೆ ಅರೀಫ ಕಲ್ಯಾಣಿ
ಎಂಬುವರ ಕಡೆಯಿಂದ ಪ್ಲಾಟ ನಂ 96,
ಖರೀದಿಸಿ ನನ್ನ ತಂದೆಯವರಾದ ಸೈಯದ ಹುಸೇನಿ ಇವರ ಹೆಸರಿನಲ್ಲಿ
ಕಾಗದ ಪತ್ರಗಳು ಇರುತ್ತದೆ, ಖರೀದಿಸಿದ
ಪ್ಲಾಟ್ ನಲ್ಲಿ ಅಲ್ಪ ಸ್ವಲ್ಪ ಕಟ್ಟಡ ಮಾಡಿಸಿಕೊಂಡಿದ್ದು ಈಗ ಒಂದು ತಿಂಗಳ ಹಿಂದೆ ಗುಲಬರ್ಗಾ ಕ್ಕೆ
ಬಂದಿದ್ದು ನಾನು ನನ್ನ ಗಂಡ ಸೇರಿ ಕಟ್ಟಡದ ಕಾಮಗಾರಿ ಮಾಡುತ್ತಿದ್ದೆವೆ ದಿನಾಂಕ||
03-06-2014 ರಂದು ಮಂಗಳವಾರ ದಿವಸ ನಾನು ಮತ್ತು ನನ್ನ ಗಂಡ
ಇಬ್ಬರು ಮಣ್ಣು ತೆಗೆಯುತ್ತ ಕೆಲಸದಲ್ಲಿ ತೊಡೆಗಿದ್ದೆವೆ ಸುಮಾರು ಬೆಳಗ್ಗೆ 10-45 ಗಂಟೆಗೆ ಪಕ್ಕದ
ಮನೆ ಫುರಖಾನ ಅಲಿ ಮತ್ತು ಇವರ ಮಗ ರೀಜವಾನ ಸಡಕ್ ಫಾರುಕ ಈ ಮೂರು ಜನರು ಸೇರಿ ನಾವು ಮಣ್ಣು ತೆಗೆಯುವದನ್ನು
ನೋಡಿ ನಮ್ಮ ಜೊತೆಯಲ್ಲಿ ಜಗಳಕ್ಕೆ ಬಿದ್ದರು ಮತ್ತು ನನ್ನಗೆ ಅವಾಚ್ಯ ಶಬ್ದಗಳಿಂದ ಬೈಹತ್ತಿದರು ನಮ್ಮಗೂ
ಅವರಿಗೂ ಬಾಯಿ ಮಾತಿನ ಜಗಳ ಸೂರು ಆಯಿತು ಆಗ ಫೂರಖಾನ್
ಅಲಿ ಈತನು ಸ್ವಲ್ಪ ಹೊತ್ತು ತಡಿರಿ ನಿಮಗೆ ಒಂದು ಕೈ ತೊರಿಸುತ್ತೇನೆ ಅಂತಾ ಹೇಳಿ ಹೋಗಿ 15 ನಿಮಿಷದಲ್ಲಿ ಮಾಜಿ ಕಾರ್ಪೊರೆಟರ್ ಸಜ್ಜಾದ ಅಲಿ ಇವರನ್ನು
ಮತ್ತು ಇನ್ನು 2-3 ಜನರನ್ನು ಕರೆದುಕೊಂಡು ಬಂದರು
ಆಗ ನಮ್ಮ ತಮ್ಮ ಮೀರ ಅಲಿ ಜಮಾದಾರ ಈತನು ನಮ್ಮ ಹತ್ತಿರ ಬಂದಿದ್ದು ಆಗ ಪೂರಕಾನ್ ಅಲಿ ಈತನು ನಮಗೆ ಅವಾಚ್ಯವಾಗಿ ಚಿನಾಲ್ ರಾಂಡಾಕಾ
ಬೋಸಡಿಕೆ ಅಂತಾ ಬೈಯುತ್ತಾ ನನ್ನ ಮೇಲೆ ಏರಿ ಬಂದು ಚೀರಾಗಿ ದಬ್ಬಿಕೊಟ್ಟನು ಆಗ ನಾನು ಮೈಮುಟ್ಟಿ ದಬ್ಬಿದ್ದರಿಂದ
ನಾನು ನೆಲಕ್ಕೆ ಬಿದ್ದುಬಿಟ್ಟೆ ಅದೇ ಸಿಟ್ಟಿನಿಂದ ಕಲ್ಲು ತೆಗೆದುಕೊಂಡು ಅವನಿಗೆ ಹೊಡೆದಿರುತ್ತೇನೆ
ಆಗ ಎಲ್ಲರೂ ಸೇರಿ ನಮ್ಮೊಂದಿಗೆ ಜಗಳಕ್ಕೆ ಬಿದ್ದು
ಫುರಕಾನ ಈತನು ನನ್ನ ತಲೆ ಮೇಲಿನ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆ ಬಡೆ ಮಾಡಿದನು ನನ್ನ ಗಂಡನಿಗೆ
ರೀಜ್ವಾನ್ ಈತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ . ಬಸವರಾಜ ತಂದೆ ನಾಗಪ್ಪ ಕುಂಬಾರ ಸಾ:ಕೋಟನೂರ (ಡಿ) ತಾ:ಜಿ:ಗುಲಬರ್ಗಾ ಮತ್ತು ರಘುನಾಥ ತಂದೆ ನಾಗಪ್ಪ ಕುಂಬಾರ ಇಬ್ಬರು ಕೋಟನೂರ (ಡಿ) ಗ್ರಾಮದಿಂದ ಶೆಳ್ಳಗಿ ಗ್ರಾಮದಲ್ಲಿ ನಮ್ಮ ಅಣ್ಣ ತಮ್ಮಕೀಯ ಶಿವಪ್ಪ ಕುಂಬಾರ ಇವರು ಯಲ್ಲಮ್ಮಾ ದೇವರ ಕೊಡಾ ಕಾರ್ಯಕ್ರಮಕ್ಕೆ ಹಾಜರಾಗಲು ತಮ್ಮ ಬಸವರಾಜನ ಟಿ.ವಿ.ಎಸ್ ಎಕ್ಸಎಲ್ ಹೇವಿ ಡೂಟಿ ಕೆಎ-32 ಇಸಿ-7452 ಮೇಲೆ ಹೋಗಿದ್ದು ದೇವರ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ ಮಹಾಗಾಂವ ಕ್ರಾಸ ಮುಖಾಂತರ ಹೊರಟಿದ್ದು ಸಂಜೆ 05:00 ಗಂಟೆ ಸುಮಾರಿಗೆ ಕುರಿಕೋಟಾ ಗ್ರಾಮದ ದಾಟಿ ಬ್ರೀಜ ಸಮೀಪ ಬಂದಾಗ ಆಗ ನಮ್ಮ ಹಿಂದಿನಿಂದ ಅಂದರೆ ಮಹಾಗಾಂವ ಕ್ರಾಸ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ಅತೀವೆಗದಿಂದ ಮತ್ತು ನಿಕ್ಷಾಜಿತನದಿಂದ ನಡೆಸುತ್ತಾ ನಮ್ಮ ಮೋಟಾರ ಸೈಕಲಿಗೆ ಓವರ ಟೇಕ ಮಾಡಿ ಸ್ವಲ್ಪ ಮುಂದೆ ಹೋಗಿ ಕುರಿಕೋಟಾ ಬ್ರೀಡ್ಜ ರೋಡಿನ ಮೇಲೆ ವೇಗದಲ್ಲಿ ಯಾವುದೇ ಮುನ್ಸೂಚನೇ ನೀಡದೇ ಒಮ್ಮಿಂದ ಒಮ್ಮಲೇ ಬ್ರೇಕ ಹಾಕಿ ನಿಲ್ಲಿಸಿದಾಗ ಹಿಂದೆ ಹೊರಟ ನನ್ನ ತಮ್ಮ ಬಸವರಾಜ ಟಿಪ್ಪರಕ್ಕೆ ಡಿಕ್ಕಿ ಹೊಡೆಯಲು ನಾವಿಬ್ಬರು ರೋಡಿಗೆ ಬಿದ್ದೇವು ಇದರಿಂದಾಗಿ ನನಗೆ ಮೈಮೇಲೆ ಅಲ್ಲಲ್ಲಿ ಮತ್ತು ಬಲ ಕುಂಡಿ ದಡಿಗೆ ಗುಪ್ತಗಾಯವಾಗಿದ್ದು ಎದ್ದು ನನ್ನ ತಮ್ಮ ಬಸವರಾಜನಿಗೆ ನೋಡಲಾಗಿ ಅವನ ಗದ್ದದ ಕೆಳೆಗೆ ಹರಿದ ರಕ್ತಗಾಯವಾಗಿದ್ದು ಮುಖಕ್ಕೆ ಮತ್ತು ಎಡಗಣ್ಣಿಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲೆ
ಮೃತಪಟ್ಟಿರುತ್ತಾನೆ ಅಂತಾ ಶ್ರೀ ರಘುನಾಥ ತಂದೆ. ನಾಗಪಗಪ್ಪಾ ಕುಂಬಾರ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
13 June 2014
Gulbarga District Reported Crimes
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 11-06-2014 ರಂದು ರಾತ್ರಿ 11-00 ಗಂಟೆಗೆ ಶ್ರೀ,ಸಿದ್ರಾಮಪ್ಪ ಎ.ಎಸ್.ಐ ಮತ್ತುಶ್ರೀ.ಕತಲಸಾ ಸಿಪಿಸಿ 310 , ವೆಂಕಟ ಸಿಪಿಸಿ 329 ರವರೊಂದಿಗೆ ರಾತ್ರಿ ಗಸ್ತು ಮೇಲ್ವಿಚಾರಣೆ ಮತ್ತು
ಹೆದ್ದಾರಿ ಗಸ್ತು ಮಾಡುತ್ತಾ ದಿನಾಂಕ:
12-06-2014 ರಂದು ಬೆಳೆಗ್ಗೆ 04-30 ಗಂಟೆಯ ಸುಮಾರಿಗೆ ಕುದುರೆಮುಖ ಹೊಡ್ಡಿನ ಮೂಲಕ
ಮರಗುತ್ತಿ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಕುದುರೆಮುಖ ಹೊಡ್ಡಿನ ರಸ್ತೆಯಲ್ಲಿ ಗೊಬ್ಬರದ
ಕಾಳುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಗಮನಿಸುತ್ತಾ ಹಾಗೇಯೇ ಮರಗುತ್ತಿ ಕ್ರಾಸ್ ಹತ್ತಿರ ಬಂದಾಗ ಒಬ್ಬ ಕ್ರೂಜರ್ ಜೀಪ್ ಚಾಲಕನು
ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಕ್ರೂಜರ್ ಜೀಪನ್ನು ಪಕ್ಕಕ್ಕೆ ಹಚ್ಚಿ ಜೀಪ್ ಕೆಟ್ಟಿರುವಂತೆ
ಜೀಪಿನ ಬೈನೆಟ್ ತೆಗೆದು ದುರಸ್ತಿ ಮಾಡುವಂತೆ ನಟಿಸುತ್ತಿದ್ದಾಗ ನಾವು ಆತನ ಮೇಲೆ ಸಂಶಯಗೊಂಡು
ಕ್ರೂಜರ್ ಜೀಪ್ ಒಳಗಡೆ ನೋಡಲಾಗಿ ಅದರಲ್ಲಿ ಒಬ್ಬನು ಕುಳಿತಿದ್ದು ಅಲ್ಲದೇ ಜೀಪಿನ ಹಿಂದುಗಡೆ
ಸೀಟಿನಲ್ಲಿ ಎರಡು ಗೊಬ್ಬರದ ಚೀಲಗಳು ಇದ್ದವು. ಆಗ ನಾವು ಸಂಶಯಗೊಂಡು ಅವರನ್ನು ವಿಚಾರಿಸಲಾಗಿ ಅವರು ತಮ್ಮ ಹೆಸರು 1. ವಿಜಯ ತಂದೆ ಭೀಮರಾವ ಪವಾರ ಸಾ;ಶಖಾಪೂರ ತಾಂಡಾ ತಾ;ಆಳಂದ ಜಿ;ಗುಲಬರ್ಗಾ 2. ಜಗನ್ನಾಥ ತಂದೆ ಚಂದ್ರಪ್ಪ @ ಚಂದುರಾಯ ಶೇಳಕೆ ಸಾ:ಇಕ್ಕಳಕಿ ತಾ;ಆಳಂದ ಜಿ:
ಗುಲಬರ್ಗಾ ಅಂತಾ ತಿಳಿಸಿದ್ದು, ಅವರ ಜೊತೆಯಲ್ಲಿದ್ದ ಇನ್ನೂ ನಾಲ್ಕು ಜನರು ಓಡಿ
ಹೋಗಿರುತ್ತಾರೆ.
ಅವರನ್ನು ವಿಚಾರಿಸಲಾಗಿ ತಾವು ಆರು ಜನರು ಕೂಡಿಕೊಂಡು ಕುದುರೆಮುಖ ಹೊಡ್ಡಿನ ಹತ್ತಿರ ಹೊಡ್ಡು ಏರುತ್ತಿದ್ದ
ಲಾರಿಯನ್ನು ಹಿಂದಿನಿಂದ ಏರಿ
ತಾಡಪತ್ರಿಯನ್ನು ಹರಿದು ಅದರಲ್ಲಿದ್ದ ಗೊಬ್ಬರದ ಚೀಲಗಳನ್ನು ಕಳ್ಳತನ ಮಾಡಿರುತ್ತೇವೆ ಅಂತಾ
ತಿಳಿಸಿರುತ್ತಾರೆ .ಇಬ್ಬರನ್ನು ಹಿಡಿದು ದಸ್ತಗಿರಿ ಮಾಡಿದ್ದು, ಉಳಿದ ನಾಲ್ಕು ಜನರು ಓಡಿ ಹೋಗಿರುತ್ತಾರೆ. ಕಳ್ಳತನ ಮಾಡಿದ ಅಂದಾಜು 7425=00 ರೂಪಾಯಿ ಕಿಮ್ಮತ್ತಿನ ಒಟ್ಟು 11 ಗೊಬ್ಬರದ ಚೀಲಗಳು ಮತ್ತು ಈ ಕಳ್ಳತನಕ್ಕೆ ಉಪಯೋಗಿಸಿದ ಒಂದು ಕ್ರೂಜರ್ ಜೀಪ್ ನಂಬರ್: ಎಂ.ಹೆಚ್. 23 -ಇ - 4493 ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತು ಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ
ಬಂದು ಪ್ರಕರಣ ದಾಖಲಿಸಲಾಗಿದೆ.
ನಿರ್ಲಕ್ಷತನದಿಂದ ವಾಹನ ಚಲಾಯಿಸಿದ
ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಗೋವಿಂದ ಎ,ಎಸ್,ಐ ಪೆಟ್ರೊಲಿಂಗ ಕರ್ತವ್ಯ ಮಾಡುತ್ತಾ ಬರುತ್ತಿದ್ದಾಗ ನಾವದಗಿ ಕ್ರಾಸ ಹತ್ತಿರ 1.30 ಪಿ,ಎಮ್,ಕ್ಕೆ ಹೋದಾಗ ಅದೆ ವೇಳೆಗೆ
ಹುಮನಾಬಾದ ಕಡೆಯಿಂದ ಒಬ್ಬ ಕ್ರೂಸರ ಚಾಲಕನು ತನ್ನ ವಾಹನದಲ್ಲಿ ಮಾನವನ
ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಪ್ರಯಾಣಿಕರನ್ನು ಒಳಗಡೆ ಕೂಡಿಸಿಕೊಂಡು ತನ್ನ ವಶದಲ್ಲಿದ್ದ ವಾಹನವು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿದ್ದಲ್ಲದೆ ನಾವು ಕ್ರೋಜರ ಚಾಲಕನಿಗೆ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಕ್ರೋಜರ
ಚಾಲಕ ನಿಲ್ಲಿಸದೆ ಹಾಗೆ ಮುಂದೆ ಹೋಗಿದ್ದಾಗ ನಮ್ಮ ಜೀಪಿನ
ಸಹಾಯದಿಂದ ಮಹಾಗಾಂವ ಕ್ರಾಸದಲ್ಲಿ ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಿದ್ದಾಗ ಅದು ಕ್ರೂಸರ ಜೀಪ ನಂ ಕೆ,ಎ, 39, 7260 ಅಂತಾ ಇದ್ದು ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದ್ದಾಗ ತನ್ನ ಹೆಸರು ನಾಗರಾಜ ಸಾ|| ಶೆಳಗಿ ಅಂತಾ ತಿಳಿಸಿದ್ದು ಸದರಿ ವಾಹನದ ಪರಿಮೀಟ
ಹಾಜರಪಡಿಸಿರುವುದಿಲ್ಲಾ ಮತ್ತು ವಾಹನದಲ್ಲಿ ಹೆಚ್ಚಿನ ಪ್ರಯಾಣಿಕರನ್ನು
ಹಾಕಿ ಸ್ಟೇಜ ಕ್ಯಾರಿಯೆಜ ಮಾಡುತ್ತಾ ಪರಿಮೀಟ ಉಲ್ಲಂಘನೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ
ದಾಖಲಗಿದೆ.
ವಿ.ಸಿ..ಎಫ್.
ಕಂಪನಿಯಲ್ಲಿ ಕಾರ್ಮಿಕ ಬಿದ್ದು ಸಾವು ಪ್ರಕರಣ :
ಸೇಡಂ
ಠಾಣೆ :
ಶ್ರೀಮತಿ. ಸುನಿತಾ ಗಂಡ ಲಕ್ಷ್ಮಣ ಇವರ ಗಂಡ ನಾದ ಲಕ್ಷ್ಮಣ ಇವರು ದಿನಾಂಕ 12-06-2014 ರಂದು
ಪ್ರತಿದಿವಸದಂತೆ ಗಂಡ ಲಕ್ಷ್ಮಣ ಹಾಗೂ ಮಗ ದಿನೇಶ ಇಬ್ಬರೂ ಕೂಡಿ ವಿ.ಸಿ.ಎಫ್ ಕಂಪನಿಗೆ ಕೂಲಿ
ಕೆಲಸಕ್ಕೆ ಹೋಗಿದ್ದರು. ನಂತರ ನನ್ನ ಮಗ ಫೋನ ಮೂಲಕ ಅಳುತ್ತಾ ತಿಳಿಸಿದ್ದೇನೆಂದರೆ, 2ನೇ ಸಿಮೆಂಟ್
ಪ್ಲಾಂಟಿನ ಸಿಮೆಂಟಿನ ಸೈಲೊದಲ್ಲಿ ಬ್ಯಾಗಗಳನ್ನು ಬದಲಾಯಿಸುವ ಕುರಿತು ತಂದೆಯವರು ಕೆಲಸ ಮಾಡುವದಾಗ
ಅಂದಾಜು 11-30 ಗಂಟೆಯ ಸುಮಾರಿಗೆ ಸಿಮೆಂಟ್ ಬ್ಯಾಗಿಗೆ ಇರುವ ಬೊಲ್ಟಿಗೆ ಪಾನಾ ಹಚ್ಚಿ ಬೊಲ್ಟ
ಬಿಚ್ಚುವಾಗ ಪಾನಾ ಸ್ಲಿಪ್ ಆಗಿ ಆಯ ತಪ್ಪಿ ಹಿಂದೆ ಸಿಮೆಂಟ್ ಸೈಲೊ ಮೇಲಿಂದ ಕೆಳಗಡೆ ಬಿದ್ದಿದ್ದು
ಆಗ ನಾನು ಗಾಭರಿಯಾಗಿ ಕೆಳಗಡೆ ಬಂದು ನೋಡಲು ನಮ್ಮ ತಂದೆಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು
ಇರುತ್ತದೆ. ಸದರ ಘಟನೆ ಆಕಸ್ಮಿಕವಾಗಿ
ಜರುಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
Subscribe to:
Posts (Atom)