POLICE BHAVAN KALABURAGI

POLICE BHAVAN KALABURAGI

28 May 2014

Gulbarga District Reported Crimes

ಕಳವು ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಗುಂಡೆರಾವ ತಂದೆ ಶರಣಪ್ಪ ಹಳಿಮನಿ ಸಾ|| ನಿಂಬರ್ಗಾ ಇವರು ದಿನಾಂಕ 27-05-2014 ರಂದು 0100 ಗಂಟೆಯಿಂದ 5 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ 2 ಬಂಗಾರದ ಸುತ್ತುಂಗರಗಳು ಅ.ಕಿ 14000/- ರೂಪಾಯಿ ಹಾಗೂ 5000/- ರೂಪಾಯಿ ನಗದು ಹಣ ಮತ್ತು ಫಿರ್ಯಾದಿಯ ಪ್ಯಾಂಟಿನ ಕಿಸೇಯಲ್ಲಿ ಇಟ್ಟಿರುವ 5000/- ರೂಪಾಯಿ ನಗದು ಹಣ ಹೀಗೆ ಒಟ್ಟು 2400/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ರಾಚಣ್ಣಾ ತಂದೆ ಮಲ್ಲಿನಾಥ ಅಮಾಣಿ  ಸಾ|| ನಿಂಬರ್ಗಾ ಇವರು ದಿನಾಂಕ 26-05-2014 ರಂದು 11 ಗಂಟೆಯಿಂದ ದಿನಾಂಕ 27-05-2014 ರಂದು 6 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ ಅರ್ಧ ತೊಲಿಯ ಎರಡು ಬಂಗಾರದ ಉಂಗುರ ಅ.ಕಿ 12000/-, ಬೆಳ್ಳಿ ಸಾಮಾನು ಚಮಚಾ, ವಾಟಿ ಅ.ಕಿ 2000/- ಮಗುವಿನ ಕಿವಿಯಲ್ಲಿಯ ಬಂಗಾರದ ರಿಂಗ 1500/-, ಮಗುವಿನ ಬಂಗಾರದ ಉಂಗುರ 1500/-, ನಗದು ಹಣ 6000/- ರೂಪಾಯಿ ಹೀಗೆ ಒಟ್ಟು 23000/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಹಾಗೂ ಬೆಳ್ಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಶಂಭುಲಿಂಗಯ್ಯಾ ತಂ ರಾಚಯ್ಯಾ ಮಠಪತಿ  ಸಾ|| ತೊಂಡಕಲ ತಾ||ಜಿ|| ಗುಲಬರ್ಗಾ  ದಿನಾಂಕ 26-05-2014  ರಂದು ತಾನು ಹೊಲಕ್ಕೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ತನ್ನ ಆಳು ಮನುಷ್ಯ ಕೂಡಾ ರಾತ್ರಿ 8.30 ಗಂಟೆಗೆ ಮನೆಗೆ ಬಂದು ಎತ್ತುಗಳು ಮತ್ತು ಎಮ್ಮೆ ಹೋಲದಲ್ಲಿ ಕಟ್ಟಿ ಮೇವು ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿ ತನ್ನ ಮನೆಗೆ ಹೋದನು ಇಂದು ಬೆಳಗ್ಗಿನ ಜಾವ 6 ಗಂಟೆಗೆ ನಮ್ಮ ಆಳು ಮನುಷ್ಯ ಹೋಲಕ್ಕೆ ಹೋಗಿದ್ದು 6.15 ಎ,ಎಮ್,ಕ್ಕೆ ವಾಪಸ ಮನೆಗೆ ಬಂದು ತಿಳಿಸಿದ್ದೆನಂದರೆ ಒಂದು ಎತ್ತು ಕಾಣುತ್ತಿಲ್ಲಾ ಅಂತಾ ಹೇಳಿದ್ದಾಗಿ ತಾನು ತನ್ನ ಮಕ್ಕಳೊಂದಿಗೆ ಹೋಲಕ್ಕೆ ಹೋಗಿ ನೊಡಲಾಗಿ ಒಂದು ಎಮ್ಮೆ ಮತ್ತು ಒಂದು ಎತ್ತು ಹೋಲದಲ್ಲಿದ್ದು ಇನ್ನೊಂದು ಬೀಳಿ ಬಣ್ಣದ ಸಹದೃಡ ಮೈಕಟ್ಟಿನ  2 ಕೋಡುಗಳು ನೇರವಾಗಿದ್ದ ಅಂದಾಜು 7-8 ವರ್ಷ ವಯಸ್ಸಿನ ಅ.ಕಿ. 45,000 ರೂ ಕಿಮ್ಮತ್ತಿ ನ ಎತ್ತು ಕಾಣಲಿಲ್ಲಾ ದಾವಣಿಯಲ್ಲಿ ನೋಡಿದ್ದಾಗ ನನ್ನ ಎತ್ತು ಹಗ್ಗದ ಸಮೇತಾ ಬಿಡಿಸಿಕೊಂಡು ಹೊಗಿದ್ದು ಕಂಡು ಬಂತ್ತು ನಂತರ ನಮ್ಮ ಆಳು ಮನುಷ್ಯ ನನ್ನ ಮಕ್ಕಳು ಹಾಗೂ ನಾನು ಅಡವಿಯಲ್ಲಿ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲಾ ನಿನ್ನೆ ದಿನಾಂಕ 26-05-2014 ರಂದು  ರಾತ್ರಿ 9 ಪಿ,ಎಮ್,ದಿಂದ ಇಂದು 27-05-2014  ರ ಬೆಳಗ್ಗಿನ ಜಾವ 5.30 ಎ,ಎಮ್,ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ತೋಟದಲ್ಲಿ ಕಟ್ಟಿದ ಒಂದು ಎತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಸೋಮಶೇಖರ ತಂದೆ ರೇವಣಸಿದ್ದಪ್ಪಾ ಜನಕಟ್ಟಿ  ಸಾ:ಡೊಂಗರಗಾಂವ  ತಾ:ಜಿ: ಗುಲಬರ್ಗಾ ಇವರು ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದರ ಮೇಲೆ ಚಾಲಕ ಅಂತಾ ಕೆಲಸ  ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೆನೆ . ನನ್ನಂತೆ ನನ್ನ ಮಗ ಪ್ರಭು ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 24-05-2014 ರಂದು 6 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದರಲ್ಲಿ ರಾಯಚೂರನ ವಿಜಯಲಕ್ಷ್ಮೀ ಕಮರ್ಸಿಯಲ ಕಂಪನಿಯಿಂದ ಅಕ್ಕಿಲೋಡ ಮಾಡಿಕೊಂಡು ಗುಲಬರ್ಗಾಕ್ಕೆ ಬರುತ್ತಿದ್ದೆನೆ ಅಂತಾ ನನ್ನ ಮಗ ಪ್ರಭು ಇವರು ನನಗೆ ಪೋನ ಮಾಡಿ ತಿಳಿಸಿರುತ್ತಾನೆ. ಹೀಗಿದ್ದು ದಿನಾಂಕ 25-05-2014 ರಂದು ರಾತ್ರಿ 12-15 ಗಂಟೆಯ ಸುಮಾರಿಗೆ  ನಾನು ನಮ್ಮೂರಿನಲ್ಲಿದ್ದಾಗ ನನ್ನ ಮಗ ಪ್ರಭು ಈತನು ಪೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 24-05-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ಅಕ್ಕಿಲೋಡ ಮಾಡಿದ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದನ್ನು ರಾಯಚೂರಿನಿಂದ ಗುಲಬರ್ಗಾ ಕಡೆಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಸರಡಗಿ(ಬಿ) ಖಣಿ ಹತ್ತಿರ ಬರುತ್ತಿರುವಾಗ ನನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿರುತ್ತೆನೆ.  ಇದರಿಂದ ನನಗೆ ಯಾವುದೇ ಗಾಯ ವೈಗೆರೆಯಾಗಿರುವುದಿಲ್ಲಾ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಅಳಿಯ ಶಿವಕುಮಾರ ಬೀಮಳ್ಳಿ ಇಬ್ಬರೂ ಕೂಡಿ ಸದರ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಪ್ರಭು ಇತನು ಅಕ್ಕಿ ಲೋಡ ಮಾಡಿದ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಲಾರಿಯನ್ನು  ಪಲ್ಟಿಗೊಳಿಸಿ ಹಾನಿಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 26/05/2014 ರಂದು ರಾತ್ರಿ 10:30 ಪಿ.ಎಂ. ಸುಮಾರಿಗೆ ನನ್ನ ಮಗ ಫೈಸಲ ಇತನು ಜಾಗನೇಕಿ ರಾತ್ ಸಲುವಾಗಿ ಮನೆಯಿಂದ ಪಲ್ಸರ್ ಮೋಟಾರ ಸೈಕಲ ನಂ. KA 32 Y 2211 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ KNZ ಫಂಕ್ಷನ್ ಹಾಲ್ ಎದರುಗಡೆ ಇರುವ ರಿಂಗ್ ರೋಡದಲ್ಲಿ ಪಲ್ಸರ್ ಮೋಟಾರ ಸೈಕಲ ಸ್ಕಿಡ್ ಆಗಿ ಬಿದ್ದಿದ್ದರಿಂದ ಎಡಗೈ ಮೊಳಕೈ ಹತ್ತಿರ ಭಾರಿ ಗಾಯವಾಗಿ ಮುರಿದಂತಾಗಿದ್ದು, ಎಡಗಡೆ ತೊಡೆಯ ಹತ್ತಿರ ಭಾರಿ ಗಾಯ ಹಾಗು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಲ್ಲಿನ ಜನರು ನೋಡಿ ಅಂಬುಲೆನ್ಸ್ ದಲ್ಲಿ ಹಾಕಿ ಉಪಚಾರಕ್ಕಾಗಿ ಸತ್ಯ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಂತಾ  ಶ್ರೀ ಇಕ್ರಾಮೂದ್ದಿನ ತಂದೆ ಮೈನೂದ್ದಿನ ಖಲೀಫ್  ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ  ತಿಪ್ಪಣ್ಣಾ ತಂದೆ ಭಾಗಣ್ಣಾ ಹೊಸಮನಿ ಸಾ;ಜನಿವಾರ ಹಾವ; ಬಸವೇಶ್ವರ ಕಾಲನಿ ಎಂ.ಜಿ ರೋಡ ಕೆ.ಇ.ಬಿ ಆಪೀಸ ಎದುರುಗಡೆ ಗುಲಬರ್ಗಾ ಇವರ ಮಗಳಾದ ಸರಸ್ವತಿ ವ|| 17 ವರ್ಷ ಇವಳಿಗೆ ನಮ್ಮ ಗ್ರಾಮದವನೆಯಾದ ರಮೇಶ ತಂದೆ ಸಿದ್ದಪ್ಪಾ ಇತನು ದಿನಾಂಕ:20.05.2014  ರಂದು 3 ಪಿ ಎಮ್ ಕ್ಕೆ ನಾವು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ಮಗಳಿಗೆ ಅಪಹರಣ  ಮಾಡಿಕೋಂಡು ಹೋಗಿರುತ್ತಾನೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 May 2014

Gulbarga District Reported Crimes

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಮಶದ ಆಲಂ ತಂದೆ ಅಕ್ಬರ ಹುಸೆನ್‌ ಸಿದ್ದಿಕಿ ಸಾ:ಫಿರೋಜಾಬಾದ ಇವರಿಗೆ ಮೂರು ಜನ ಮಕ್ಕಳಿದ್ದು ನಾನು ಬಿಹಾರದ ನೂರಪೂರ ಬೆಗೂ ಸರಾಯಿತ ತಾ:ಜಿ:ದವನಿದ್ದು ಕಳೆದ 14 ವರ್ಷದಿಂದ ನಾವು ಫಿರೊಜಾಬಾದ ಗ್ರಾಮದಲ್ಲಿ ವಾಸವಾಗಿರುತ್ತೆವೆ. ದಿನಾಂಕ: 21/05/2014 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ಮಸೂತಿಯಲ್ಲಿದ್ದಾಗ ನನ್ನಹೆಂಡತಿಯಾದ ತರುನೂ ಆರಾ ಇವಳು ನನಗೆ ಫೊನ್‌ಮಾಡಿ ಈಗ 4:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಮಗಳು ಸಾದಿಯ ಆಯಾತ ಇವಳು ಆಟವಾಡುತ್ತಿದ್ದಾಗ ಮನೆಯ ಮುಂದಿನ ಗಲ್ಲಿ ರಸ್ತೆಯ ಮೇಲಿಂದ ಈಗ 4:40 ಗಂಟೆಯ ಸುಮಾರಿಗೆ ಕಾಣದೆ ಇರುತ್ತಾಳೆ. ಅಂತಾ ತಿಳಿಸಿದ ಕೂಡಲೆ ನಾನು ಮನೆಗೆ ಹೋಗಿ ಇಬ್ಬ್ರೂ ಕೂಡಿಕೊಂಡು ಮನೆಯ ಆಜುಬಾಜು ಹುಡಕಾಡಿ, ಊರಿನ ಪ್ರಮೂಖ ರಸ್ತೆ ಹಾಗೂ ಗಲ್ಲಿಯ ರಸ್ತೆಸುತ್ತಲೂ ಹುಡಕಾಡಿದ್ರು ನನ್ನ ಮಗಳು ಸಿಕ್ಕಿರುವದಿಲ್ಲ. ಮರು ದಿವಸ  ನಾನು ಮತ್ತು ಲತೀಫ ಜಾಗಿರದಾರ ಹಾಗೂ ಇತರರು ಕೂಡಿಕೊಂಡು ನಮ್ಮೂರಿನ ಸುತ್ತ-ಮುತ್ತಲು ಹುಡಕಾಡಿದರೂ ನಮ್ಮ ಮಗಳು ಸಿಗದೆಯಿದ್ದರಿಂದ ದಿನಾಂಕ:22/೦5/2014 ರಂದು ಫರಹತಾಬಾದ ಪೊಲೀಸ್‌ ಠಾಣೆಗೆ ಹೋಗಿ ನನ್ನ ಮಗಳು ಕಾಣೆಯಾದ ಬಗ್ಗೆ ಪ್ರಕ್ರಣ ದಾಖಲಿಸಿ ಬಂದಿರುತ್ತೆನೆ. ದಿನಾಂಕ:26/05/2014 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಮ್ಮೂರಿನ ಅಗಸಿ ಹತ್ತಿರ ನಿಂತಿದ್ದಾಗ ನಮ್ಮೂರಿನ ಇಸ್ಮಾಯಿಲ್‌ ಮುಜಾವರ, ಶಕೀಲ್‌ ಷಾ, ಮತ್ತು ಮೈನೊದ್ದಿನ ಗ್ವಾಡಿಕರ ಇವರು ಬಂದು ನನಗೆ ತಿಳಿಸಿದ್ದೆನಂದರೆ ನಾವು ಸುಬಾಶ್ಚಂದ್ರ ಮಾಮನಿ ಇವರ ಮನೆಯಲ್ಲಿ ಕಾರ್ಯಕ್ರಮ ಇದ್ದ ಪ್ರಯುಕ್ತ ಟೆಂಟ್‌ ಹೊಡೆಯುತ್ತಿರುವಾಗ ಬಸಯ್ಯ ಸ್ವಾಮಿ ಇವರ ಹಾಳುಬಿದ್ದ ಖುಲ್ಲಾ ಜಾಗೆಯಲ್ಲಿ ವಾಸನೆ ಬರುತ್ತಿದ್ದಾಗ ಅಲ್ಲಿ ನಾವು ಹೋಗಿ ನೋಡಿದಾಗ ಒಂದು ಹುಡಗಿಯ ಮೃತ ದೇಹದ ಬಿದ್ದಿರುತ್ತದೆ, ಅದು ನಿಮ್ಮ ಮಗಳ ಮೃತ ದೇಹ ಇರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮತ್ತು ಅವರೆಲ್ಲರೂ ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮೃತ ದೇಹದ ಮೇಲೆ ಅಂಗಿ( ಫ್ರಾಕ್‌) ಮತ್ತು ಅದ್ರ ಪಕ್ಕದಲ್ಲಿ ಬಿದ್ದಿದ್ದ ಅಂಡ್ರವೇರ ನೋಡಿ ಗುರುತಿಸಿದ್ದು, ಅದು ನನ್ನ ಮಗಳ  ಮೈಮೇಲೆ ಇದ್ದ ಬಟ್ಟೆಗಳಗಿದ್ದು ಸದರಿ ಮೃತ ದೇಹವು ನನ್ನ ಮಗಳಾದ ಸಾದಿಯಾ ಆಯಾತ ಇವಳದೆ ಇದ್ದಿರುತ್ತದೆ. ಸದ ರಿ ಮೃತ ದೇಹದ ತಲೆಯ ಭಾಗ ಪೂರ್ತಿಯಾಗಿ ಒಡೆದು ಬೇರೆಬೇರೆಯಾಗಿಬಿದ್ದಿರುತ್ತದೆ. ಮುಖದ ಭಾಗ ಇದ್ದಿರುವದಿಲ್ಲ ಬಲಗೈ ಮತ್ತು ಬಲಗಾಲು ಪೂರ್ತಿಯಾಗಿ ಇದ್ದಿರುವದಿಲ್ಲ, ಎಡಗಾಲು ಮತ್ತು ಎಡಗೈ ಇದ್ದು ಎಡಗಾಲು ಮೊಳಕಾಲಿನಿಂದ ಬೆರ್ಪಟ್ಟು ಬಿದ್ದಿರುತ್ತದೆ.ಬಾಯಿಯಲ್ಲಿನ ಒಸಡು ಬಿದ್ದಿದ್ದು  ಕೆಲವು ಹಲ್ಲುಗಳು ಇದ್ದಿರುವದಿಲ್ಲ.ಸದರಿ ಮೃತ ದೇಹದ ಮೈಮೇಲಿನ ಚರ್ಮ ಪೂರ್ತಿಯಾಗಿ ಸುಲಿದಿದ್ದು ಹುಳಗಳು ಕಂಡುಬಂದಿರುತ್ತವೆ ದಿನಾಂಕ:22/05/2014 ರಂದು 4:40 ಪಿಎಮ್‌ ದಿಂದ ಇಲ್ಲಿಯವರೆಗೆ ಸದ್ರಿ ನನ್ನ ಮಗಳಾದ ಸಾದಿಯಾ ಆಯಾತ ಇವಳನ್ನು ಯಾರೋ ಅಪರಿಚೀತರು ಯಾವುದೋ ದುರುದ್ದೇಶದಿಂದ ಕೊಲೆ ಮಾಡಿ ಗುರುತು ಸಿಗಂದಂತೆ ಮೂಖದ ಭಾಗ ಹಾಗೂ ದೇಹದ ಭಾಗದ ಮೇಲಿನ ಚರ್ಮ ಸುಲಿದು ನುಜ್ಜಗುಜ್ಜಾಗಿ ಮಾಡಿ ಬಿಸಾಡಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

26 May 2014

Gulbarga District Reported Crimes

ಕೊಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಶ್ರೀದೇವಿ ಗಂಡ ಧೂಳಪ್ಪ ಕುಂಬಾರ ಸಾ: ಬೊಳೆವಾಡ ತಾ:ಜಿ:ಗುಲಬರ್ಗಾ ಹಾವ: ಸಿದ್ದೇಶ್ವರ ಕಾಲನಿ ಗುಲಬರ್ಗಾ  ರವರು ಒಂದು ವರ್ಷದ ಹಿಂದೆ ಬೊಳೆವಾಡ ಗ್ರಾಮದ ಧೂಳಪ್ಪ ತಂದೆ ಮಲ್ಲಣ್ಣ ಕುಂಬಾರ ಇತನೊಂದಿಗೆ ಲಗ್ನ ಮಾಡಿಕೊಟ್ಟಿದ್ದು. ಲಗ್ನ ಆದಾಗಿನಿಂದ ಹೊಟ್ಟೆಯ ಉಪಜೀವನ ಕುರಿತು ಗುಲಬರ್ಗಾದ ಅಜಾದಪೂರ ರೋಡಿನ ಸಿದ್ದೇಶ್ವರ ಕಾಲನಿಯ ಈರಮ್ಮ ಗಂಡ ಅಣ್ಣಪ್ಪ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು. ನನ್ನ ಅತ್ತೆ ಮಾವ ಬೊಳೆವಾಡದಲ್ಲಿ ವಾಸವಾಗಿದ್ದು. ನಾನು ನನ್ನ ಗಂಡ ಕೂಲಿ ಕೆಲಸ ಸಿಕ್ಕಲ್ಲಿ ಹೋಗುತ್ತಿದ್ದೆವು. ಅದರಂತೆ ಇ.ಎಸ್.ಐ ಆಸ್ಪತ್ರೆಯಲ್ಲಿ ನಾನು ನನ್ನ ಗಂಡ 2 ತಿಂಗಳ ಲೇಬರ ಕೆಲಸ ಮಾಡಿದ್ದು. ಕೂಲಿ ಕೆಲಸ ಮಾಡುವ ಕಾಲಕ್ಕೆ ವಿಜಯಕುಮಾರ ತಂದೆ ನಿಂಗಪ್ಪ ಕಬ್ಬಲಿಗೇರ ಎಂಬುವನು ನನ್ನ ಗಂಡನಿಗೆ ಪರಿಚಯವಾಗಿದ್ದು. ಅವನು ಆಗಾಗ ನಮ್ಮ ಮನೆಗ ಬಂದು ನನ್ನ ಗಂಡನಿಗೆ ಸಿಂಧಿ ಕುಡಿಯಲು ಕರೆದುಕೊಂಡು ಹೋಗುತ್ತಿದ್ದನು. ದಿನಾಂಕ: 25-05-14 ರಂದು 5 ಪಿಎಮ ಸುಮಾರಿಗೆ ಇ.ಎಸ.ಐ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿಜಯಕುಮಾರ ತಂದೆ ನಿಂಗಪ್ಪ ಕಬ್ಬಲಿಗೇರ ಇತನು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಕೆಲಸವಿದೆ ಬಾ ನಾನು ಊರಿಗೆ ಹೋಗುತ್ತೇನೆ ಸಿಂಧಿ ಕುಡಿಯೋಣಾ ಬಾ ಅಂತಾ ಹೇಳಿ ಕರೆದುಕೊಂಡು ಹೋಗಿದ್ದು  ದಿನಾಂಕ: 26-05-14 ರಂದು ರಾತ್ರಿ 00-15 ಎ.ಎಮ ವೇಳೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯ ಪೊಲೀಸರು ನಾನು, ನನ್ನ ಚಿಕ್ಕಮ್ಮ ಶರಣಮ್ಮ ಗಂಡ ಮಾರುತಿ ಇವರ ಮನೆಯಲ್ಲಿದ್ದಾಗ ನಮ್ಮ ಮನೆಯ ಹತ್ತಿರ ಬಂದು ಪೊಲೀಸರು ನಿನ್ನ ಗಂಡ ಎಲ್ಲಿ ಇದ್ದಾನೆ ಅಂತಾ ಕೇಳಲು ದಿನಾಂಕ 25-05-2014 ರಂದು ಸಾಯಂಕಾಲ 5 ಪಿಎಮಕ್ಕೆ ವಿಜಯಕುಮಾರ ತಂದೆ ನಿಂಗಪ್ಪ ಇತನ ಸಂಗಡ ಹೋದನು. ಮರಳಿ ಬಂದಿರುವದಿಲ್ಲ ಅವನ ದಾರಿ ಕಾಯುತ್ತಾ ಕುಳಿತಿದ್ದೆನೆ ಅಂತಾ ಹೇಳಿದೆನು. ಆಗ ಪೋಲಿಸರು ನಿನ್ನ ಗಂಡನಿಗೆ ಗಾಯಗಳಾಗಿದ್ದು ಯಾರೋ ಹೊಡೆದಿದ್ದು. ಸದರಿ ಗಾಯದಿಂದ ಮೃತಪಟ್ಟಿದ್ದು ನೀನು ನೋಡಲು ಬಾ ಅಂತಾ ಹೇಳಿ ನನಗೆ ಮತ್ತು ಚಿಕ್ಕಮ್ಮಳೊಂದಿಗೆ ಆಸ್ಪತ್ರೆಗೆ ಹೋಗಿ ನೋಡಲು ಮೃತಪಟ್ಟವನು ನನ್ನ ಗಂಡ ಧೂಳಪ್ಪನಿದ್ದು. ಅವನ ತಲೆಗೆ ಭಾರಿ ರಕ್ತಗಾಯವಾಗಿದ್ದು. ಬಲಗದ್ದದಿಂದ ಬಲಕಿವಿಯ ಹತ್ತಿರವರೆಗೆ ರಕ್ತಗಾಯವಾಗಿದ್ದು. ನನ್ನ ಗಂಡನಿಗೆ ಇ.ಎಸ.ಐ ಆಸ್ಪತ್ರೆಯ ಲೇಬರ ಜನರು ವಾಸಿಸುವ ಕೋಣೆಯ ಪಕ್ಕದಲ್ಲಿ ಯಾವುದೊ ಆಯುಧದಿಂದ ಯಾವುದೊ ದುರುದ್ದೇಶದಿಂದ ಯಾರೋ ಹೊಡೆದು ಭಾರಿ ಗಾಯಗಳು ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ. ಮಹಾದೇವ  ತಂದೆ  ಬಂಡಪ್ಪ ಕರಕನಳ್ಳಿ  ಸಾ;  ಭೂಂಯ್ಯಾರ  ಗ್ರಾಮ  ತಾ: ಜಿ: ಗುಲಬರ್ಗಾ  ಇವರು  ದಿನಾಂಕ: 25/05/2014 ರಾತ್ರಿ 08-00  ಗಂಟೆಯ ವರೆಗೆ ನಾನು ಕಮಲಾಪೂರದ  ನನ್ನ ಫೋಟೋ ಸ್ಟುಡಿಯೋ ದಲ್ಲಿ  ಕೆಲಸ  ಮಾಡಿಕೊಂಡು ನನ್ನ  ಅಂಗಡಿ ಬಂದ ಮಾಡಿಕೊಂಡು  ಮನೆಗೆ  ಹೋಗಿದ್ದು, ನನಗೆ  ಇಂದು ಮನ್ನಾಖೇಳ್ಳಿಯಲ್ಲಿ  ಒಂದು ಮದುವೆಯ  ಫೋಟೋ  ತೆಗೆಯುವ  ಆರ್ಡರ್  ಇದ್ದಿದ್ದರಿಂದ  ನಾನು  ಇಂದು  ದಿನಾಂಕ: 26-05-2014 ರಂದು  ಬೆಳೆಗ್ಗೆ 06-00  ಗಂಟೆಗೆ  ಕಮಲಾಪೂರದ  ನನ್ನ  ಫೋಟೋ  ಸ್ಟುಡಿಯೋಕ್ಕೆ  ಬಂದು  ನೋಡಲಾಗಿ ನನ್ನ  ಅಂಗಡಿಯ ಶೇಟರನ್ನು  ಯಾರೋ  ಅಪರಿಚಿತ ಕಳ್ಳರು  ಮುರಿದಿದ್ದು,  ಆಗ  ನಾನು ಗಾಬರಿಯಾಗಿ ನಾನು ಬಾಡಿಗೆ  ಇರುವ ಅಂಗಡಿಯ  ಮಾಲಿಕರಾದ  ಸೀತಾಬಾಯಿ  ಗಂಡ  ಕಲ್ಯಾಣಶೇಟ್ಟಿ  ಕಲ್ಯಾಣ   ಸಾ:ಕಮಲಾಪೂರ  ಮತ್ತು  ನನ್ನ ಸ್ನೇಹಿತನಾದ  ಸಿದ್ದು  ತಂದೆ  ಶಿವಶರಣಪ್ಪ ಕೋಡ್ಲಿ  ಸಾ: ಜೀವಣಗಿ  ಮತ್ತು  ಇವರಿಗೆ ಫೋನ್ ಮಾಡಿ  ಕರೆಯಿಸಿ ನಂತರ ಕಮಲಾಪೂರ  ಪೊಲೀಸ್  ಠಾಣೆಗೆ  ಫೋನ್  ಮಾಡಿದ್ದು, ಪೊಲೀಸರು ಬಂದ  ನಂತರ  ನಾವು  ನಮ್ಮ  ಫೋಟೋ  ಸ್ಟುಡಿಯೋದ  ಒಳಗೆ ಹೋಗಿ  ನೋಡಲಾಗಿ  ನನ್ನ  ಫೋಟೋ  ಸ್ಟುಡಿಯೋದಲ್ಲಿದ್ದ  1. ಒಂದು  ನಿಕಾನ್  ಕ್ಯಾಮೇರಾ       ಡಿ-60  ಅ.ಕಿ. 35,000/- ರೂಪಾಯಿ   2.  ಒಂದು ಎಸ್.ಪಿ  - 22  ಫ್ಲಾಶ್  ಅ.ಕಿ. 18000/- ರೂಪಾಯಿ  3. ಒಂದು ಎಲ್.ಜಿ. ಕಂಪನಿಯ ಕಂಪ್ಯೂಟರ  ಅ.ಕಿ. 32000/- ರೂಪಾಯಿ   ಹೀಗೆ  ಒಟ್ಟು 85,000/- (ಎಂಭತ್ತೈದು  ಸಾವಿರ  ರೂಪಾಯಿ ) ವಸ್ತುಗಳನ್ನು  ದಿನಾಂಕ: 25/05/2014 ರ  ರಾತ್ರಿ  08-00  ಗಂಟೆಯಿಂದ  ದಿನಾಂಕ;26/05/2014  ರ  ಬೆಳಗಿನ  06-00  ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ  ಅಪರಿಚಿತ  ಕಳ್ಳರು  ನನ್ನ  ಫೋಟೋ  ಸ್ಟುಡಿಯೋದ ಶೇಟರನ್ನು  ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಮಾಹಾದೇವ ತಂದೆ ಬಸವಣಪ್ಪ ದಸ್ತಾಪೂರ ಸಾ:ಮಾಹಾಗಾಂವ ಗ್ರಾಮ ರವರು  ದಿನಾಂಕ  25-05-2014 ರಂದು ತನ್ನ ಅಂಗಡಿ ತೆರೆದು ಮುಡಬಿ ಗ್ರಾಮಕ್ಕೆ ಮದುವೆಗೆ ಹೋಗಿ ಶೂಟ್ಟಿಂಗ ಮಾಡಿ ವಾಪಸ್ಸು ಅಂಗಡಿಗೆ ಬಂದು ವಿಡಿಯೋ ಕ್ಯಾಮರಾ ಅಂಗಡಿಯಲ್ಲಿ ಇಟ್ಟು  ಕ್ಯಾಸೆಟ ತರಲು ಗುಲಬರ್ಗಾಕ್ಕೆ ಹೋಗಿದ್ದು, ಮಾಹಾಗಾಂವಕ್ಕೆ ಬರಲು ತಡವಾಗಿದ್ದ ರಿಂದ ರಾತ್ರಿ 9-00 ಗಂಟೆಗೆ ತನ್ನ ಸಹಾಯಕ ಧರ್ಮಣ್ಣಾ ಇತನು ಫಿರ್ಯಾದಿಗೆ  ತಿಳಿಸಿ, ಅಂಗಡಿ ಬಂದ ಮಾಡುವುದಾಗಿ ತಿಳಿಸಿ ಶೆಟ್ಟರ ಕೀಲಿ ಹಾಕಿ ಮನೆಗೆ ಹೋಗಿದ್ದು ಇರುತ್ತದೆ. ದಿನಾಂಕ 26-05-14 ರಂದು ಬೆಳಿಗ್ಗೆ 6-00 ಗಂಟೆಗೆ ಮನೆಯಲ್ಲಿದ್ದಾಗ ತಮ್ಮ ಅಂಗಡಿಯ ಬಾಜುದವರಾದ ನಿಖಿಲ್ ಕಟ್ಟೋಳಿ ಇವರು ಶೆಟ್ಟರ ಮೇಲೆ ಎತ್ತಿದ್ದು ನೋಡಿ ಪೋನ ಮಾಡಿ ತಿಳಿಸಿದಾಗ ಅಂಗಡಿ ಬಂದು ನೋಡಲಾಗಿ ಯಾರೋ ಕಳ್ಳರು ದಿನಾಂಕ 26-05-14 ರಂದು ರಾತ್ರಿ 12-00 ಗಂಟೆಯಿಂದ ಬೆಳಗಿನ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಶೆಟರ ಮಧ್ಯ ಭಾಗದಲ್ಲಿ ಭಾರವಾದ ವಸ್ತುವಿನಿಂದ ಮಣಿಸಿ ಮೇಲ ಎತ್ತಿ ಅಂಗಡಿಯೊಖೆಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 1. ಪ್ಯಾನಾಸೋನಿಕ ಎಂ.ಡಿ. 9000 ವಿಡಿಯೋ ಕ್ಯಾಮರಾಅ:ಕಿ:70,000/-  2.ಒಂದು ನಿಕ್ಕಾನ-3100 ಪೋಟೋ ಕ್ಯಾಮರಾದ ಅ:ಕಿ: 30,000/-  3. ಪ್ಲಾಶ ನಿಕ್ಕಾನ ಎಸ್ಬಿ 600 ಅ:ಕಿ: 10,500/-  4. ಒಂದು 8 ಜಿ.ಬಿ.ಮತ್ತು ಒಂದು 4 ಜಿ.ಜಿ. ಪೆನ್ ಡ್ರಾವ್ಅ:ಕಿ:2400/-   5. ಒಂದು ಜಾಕೇಟ ಅ:ಕಿ:1000/-ರೂ. ಒಟ್ಟು 1,13,900/- ರೂ.   ವಸ್ತಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.