POLICE BHAVAN KALABURAGI

POLICE BHAVAN KALABURAGI

15 May 2014

Gulbarga District Reported Crimes

ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಗೌಡಪ್ಪಾಗೌಡ ತಂದೆ ಶಂಕರಗೌಡ ಪಾಟೀಲ ಸಾ: ಪ್ಲಾಟ ನಂ. 6 ಗೊದುತಾಯಿ ನಗರ ಗುಲಬರ್ಗಾ ರವರು ದಿನಾಂಕ 14-05-2014 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿ ಊಟ ಮಾಡಿಕೊಂಡು ನಾನು ಮತ್ತು ಮಲ್ಲಿಕಾರ್ಜುನ ಪಾಟೀಲ ಇಬ್ಬರು ಮನೆ ಮುಂದೆ  ವಾಕಿಂಗ ಮಾಡುತ್ತಾ ಇದ್ದಾಗ ಟೆಂಗಳಿ ಮನೆಯ ಹತ್ತಿರ  ರಸ್ತೆ ಟರ್ನಿಂಗದಲ್ಲಿ  ಒಬ್ಬ ಮೊಟರ ಸೈಕಲ ಸವಾರನು  ಬಂದನವೇ ಒಮ್ಮೇಲೆ  ನನ್ನ ಕೊರಳಲ್ಲಿ ಕೈ ಹಾಕಿ  ಬಂಗಾರದ ಲಾಕೇಟ ಕಸಿದುಕೊಂಡು ಹೊಗಿರುತ್ತಾನೆ. ಎರಡು ತೊಲೆ ಬಂಗಾರದ ಲಾಕೇಟ ಇತ್ತು ಅದರಲ್ಲಿ  ಅರ್ಧ ಭಾಗ ಮತ್ತು ಪದಕ ಉಳಿದಿದ್ದು, ಅವನಿಗೆ ಬೆನ್ನು ಹತ್ತಿದ್ದರು. ಸಿಕ್ಕಿರುವುದಿಲ್ಲಾ. ಕತ್ತಲಲ್ಲಿ ಮೊಟರ ಸೈಕಲ ನಂಬರ ಕಾಣಿಸಿರುವುದಿಲ್ಲಾ. ಒಬ್ಬ ಮೊಟರ ಸೈಕಲ ಸವಾರನು ಅರ್ಧ  ಬಂಗಾರದ ಚೈನ ಕಸಿದುಕೊಂಡು ಹೊಗಿದ್ದು  ಅರ್ಧ ಚೈನು ಒಂದು ತೊಲೆ ಇರಬಹುದು. ಅದರ ಕಿಮ್ಮತ್ತು 25,000/- ರೂಪಾಯಿ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಹೀನಾ ಕೌಸರ ಗಂಡ ಖಾಸಿಂ ಪಟೇಲ್ ಗಾಲಿಬ ಕಾಲೋನಿ ಎಮ್.ಎಸ್,ಕೆ.ಮಿಲ್ ಗುಲಬರ್ಗಾ ಇವರನ್ನು ದಿನಾಂಕ:21.04.2013 ರಂದು ಖಮರ ಕಾಲೋನಿಯ ಮಹ್ಮದ ರಫಿಕ ಚೌಕ  ಗುಲಬರ್ಗಾದ ಶ್ರೀ ಖಾಸಿಂ ಪಟೇಲ್ ತಂದೆ ನಜೀರ ಅಹ್ಮದ ಇವರ ಜೊತೆ ನಮ್ಮ  ಧಾರ್ಮಿಕ ಸಂಪ್ರದಾಯ ಪ್ರಕಾರ ಮದುವೆಯಾಗಿದ್ದು ನನ್ನ ಮದುವೆಯಲ್ಲಿ ನನ್ನ ಗಂಡನಿಗೆ 25,000/- ರೂಪಾಯಿ ಮತ್ತು ಎರಡುವರೆ ತೋಲಿ (25) ಗ್ರಾಮ್ ಬಂಗಾರ ಹಾಗೂ ಒಂದು  ಹೀರೋ ಹೊಂಡಾ ಮೋಟಾರ ಸೈಕಲ್ ಅಲ್ಲದೇ ಫರ್ನಿಚರ ಮತ್ತು ಮನೆ ಬಳಿಕೆಯ ಸಾಕಷ್ಟು  ಪಾತ್ರೆಗಳನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ.ನನಗೆ ಮದುವೆಯಾದ ನಂತರ ಕೇವಲ ಒಂದು ವಾರ  ಮಾತ್ರ ಸರಿಯಾಗಿ ನೋಡಿಕೊಂಡಿದ್ದು ನಂತರ ನನ್ನ ಪತಿಯವರು ಡಿಪ್ಲೋಮಾ ಸಿವಿಲ್ ಮಾಡಿದ್ದು ಇವರ ಕೆಲಸಕ್ಕೆ 5,00,00/-ರೂ.  ಗಳ ಅವಶ್ಯಕತೆ ಇದೆ. ನೀನು 5,00,00/-  ರೂಪಾಯಿಗಳನ್ನು ತವರು ಮನೆಯಿಂದ ತಂದು ಕೊಡು ನಮ್ಮ ಮಗ ಗುಲಬರ್ಗಾದಲ್ಲಿಯೇ ಇದ್ದುಕೊಂಡು ವ್ಯಾಪಾರ ಮಾಡುತ್ತಾನೆ, ಅಂತಾ ದಿನಾಲು ನನ್ನ ಪತಿಯವರಾದ ಖಾಸಿಂ ಪಟೇಲ್ , ಮಾವನಾದ ನಜೀರ ಪಟೇಲ್ , ಅನಸರ ಮೌಲಾನ, ಲೈಕ, ಅತ್ತೆಯಾದ  ರಾಬೀಯಾ , ಮೈದುನ ವಸೀಮ, ನಾದನಿಯವರಾದ ವಾಹೆದಾ, ಖಾಲೇದಾ, ಸಾಜೇದಾ ಅಲ್ಲದೇ ನನ್ನ ಮಾವನ ತಮ್ಮನಾದ ನಸೀರ ಹಾಗೂ ನನ್ನ ಗಂಡನ ಅತ್ತೆಯಾದ  ನಸೀಮಾ ಬೇಗಂ ಇವರು ನನಗೆ ದಿನಾಲು ಅವಾಚ್ಯ ಶಬ್ದಗಳಿಂದ ಬೈಯುವುದು ಹಾಗೂ ಮಾನಸಿಕವಾಗಿ ಹಿಂಸೆ ಕೊಡುವುದರೊಂದಿಗೆ ನನಗೆ ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ.  ಸುಮಾರು 10 ತಿಂಗಳು ಹಿಂದೆ ನನಗೆ ಹೊಡೆ-ಬಡೆ ಮಾಡಿ ನನಗೆ ನನ್ನ ತವರು ಮನೆಯಿಂದ  5,00,00/-  ರೂಪಾಯಿಗಳ ತೆಗೆದುಕೊಂಡು ಬಾ ಇಲ್ಲದಿದ್ದರೆ ನಮ್ಮ ಮನೆಗೆ ಬರಬೇಡ ಅಂತಾ ನನಗೆ ನನ್ನ ತವರು ಮನೆಗೆ ಕಳುಹಿಸಿದ್ದು ನಾನು ಸುಮಾರು 10 ತಿಂಗಳಿಂದ ನನ್ನ ತವರು  ಮನೆಯಲ್ಲಿಯೇ ಇದ್ದೇನೆ  ನನಗೆ 3 ತಿಂಗಳ ಒಂದು ಹೆಣ್ಣು ಮಗು ಇರುತ್ತದೆ.    ದಿನಾಂಕ: 09.09.2013 ರಂದು ತಮ್ಮ ಮನೆಯಾದ ಮಹಾರಾಜ ಹೋಟಲ ಹತ್ತಿರ ಮಹಿಬೂಬ ನಗರಕ್ಕೆ ಕರೆದುಕೊಂಡು ಹೋಗಿ ರಾತ್ರಿ 10.00 ಗಂಟೆಗೆ ಮತ್ತೆ ನೀನು ನಿಮ್ಮ ತಂದೆಯಿಂದ  5.00.000/- ರೂಪಾಯಿಗಳು ತೆಗೆದುಕೊಂಡು  ಬಾ ಅಂದರೆ ಖಾಲಿ ಕೈಯಲ್ಲಿ ಬಂದಿರುತ್ತಿ ಅಂತಾ ಹೊಡೆ ಬಡೆ ಮಾಡಿರುತ್ತಾನೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹೇಂದ್ರ ತಂದೆ ಸಿದ್ದಣ್ಣಾ ಸರಡಗಿ ಇವರು ಸುಮಾರು 15 ವರ್ಷಗಳಿಂದ ಬಸವೇಶ್ವರ ಆಸ್ಪತ್ರೆ ಮುಂದುಗಡೆ ಅಂಬುಲೆನ್ಸ್ ವಾಹನ ಇಟ್ಟು ಚಲಾಯಿಸಿಕೊಂಡು ಉಪಜೀವಿಸುತ್ತಿದ್ದು, ಅದರಂತೆ ಮಹ್ಮದ ನಜೀರ ಮಸುಲ್ದಾರ ಇತನು ಸುಮಾರು 8-9 ವರ್ಷಗಳಿಂದ ಬಾಡಿಗೆಯಿಂದ ಅಂಬ್ಯುಲೆನ್ಸ್ ಪಡೆದು ಡ್ರೈವರ ಕೆಲಸ ಮಾಡಿಕೊಂಡಿರುತ್ತಾನೆ. ಈಗ ಸುಮಾರು 4-5 ತಿಂಗಳ ಹಿಂದೆ ಅಂಬ್ಯುಲೆನ್ಸ್ ವಾಹನಗಳ ಚಾಲಕರ ಸಂಘಟನೆ ಮಾಡಿದ್ದು ಸದರ ಸಂಘಟನೆಯ ಕಾರ್ಯಲಯ ಬಸವೇಶ್ವರ ಆಸ್ಪತ್ರೆಯ ಆವರಣದಲ್ಲಿರುತ್ತದೆ. ಈಗ ಸುಮಾರು 5-6 ದಿವಸಗಳ ಹಿಂದೆ ಸದರಿ ನಜೀರ ಇತನು ನನ್ನ ಅಂಬುಲೆನ್ಸ್ ಪಾಳಿ ಬರುತ್ತದೆ ನೀನ್ಯಾಕೆ ಅಂಬುಲೆನ್ಸ್ ಪಾಳಿ ಹಚ್ಚಿದ್ದಿ ಅಂತಾ ತಕರಾರು ತೆಗೆದು ಅಂಬುಲೆನ್ಸ್ ಸಂಘಟನೆ ಏನು ನಿಮ್ಮಪ್ಪಂದು ಸೂಳ್ಯ ಮಗನೆ ಇದಕ್ಕೆಲ್ಲಾ ನೀನೆ ಮುಖ್ಯಸ್ಥನಂತೆ ನಡೆದುಕೊಳ್ಳುತ್ತಿದ್ದಿ ಅಂತಾ ತರಕಾರು ಮಾಡುವಾಗ ಅಂಬುಲೆನ್ಸ್ ಡ್ರೈವರು ಸಮಜಾಯಿಸಿ ಕಳುಹಿಸಿರುತ್ತಾರೆ. ಹೀಗಿದ್ದು ದಿನಾಂಕಃ 13/05/2004 ರಂದು 10:45 ಪಿ.ಎಂ. ಸುಮಾರಿಗೆ ಬಸವೇಶ್ವರ ಆಸ್ಪತ್ರೆಯ ಕ್ಯಾಜುಲಿಟಿ ಮುಂದೆ, ಸದರಿ ಮಹ್ಮದ ನಜೀರ ಮುಸುಲ್ದಾರ ಈತನು ಅಂಬ್ಯುಲೆನ್ಸ್ ಪಾಳಿಯ ವಿಷಯಕ್ಕೆ ಜಗಳ ತೆಗೆದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಉದ್ದನೇಯ ಜಂಬ್ಯದಿಂದ ಬಲಗೈ ಮೊಳಕೈ ಹತ್ತಿರ, ಬಲ ತೊಡೆಯ ಹಿಂದೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 May 2014

Gulbarga District Reported Crimes

ಕಳವು ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಮಧುಮತಿ ಎಸ್.ಇಕ್ಕಳಕಿ ಉ:ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಹಿರೋಳಿ  ತಾ:ಆಳಂದ.  ಇವರು ದಿನಾಂಕ 12-05-2014 ರಂದು ರಾತ್ರಿ 11:00 ಗಂಟೆಯಿಂದ ಬೇಳಗಿನ 09;00 ಗಂಟೆಯ ಮಧ್ಯದ ಅವಧಿಯಲ್ಲಿ. ಸರಕಾರಿ ಪ್ರೌಢ ಶಾಲೆ ಹಿರೋಳಿಯ ಕಂಪ್ಯೂಟರ್ ಕೋಣೆಯ ಚಲನ ಗೇಟಿನ ಚಾವಿ ಹಾಗೂ ಬಾಗಿಲ ಗೇಟನ್ನು ಕಲ್ಲಿನಿಂದ ರಾಡಿನಿಂದ ಚಾವಿ ತಗೆದು ಒಳಗೆ ಹೋಗಿ ಕಂಪ್ಯೂಟರ್ ಕೋಣೆಯಲ್ಲಿನ 5 ಕಂಪ್ಯೂಟರ್ ನಲ್ಲಿ H.C.L.ಕಂಪನಿಯ 4 ಕಂಪ್ಯೂಟರ್ , ಅದರ ಕೀಬೋರ್ಡ ,ಮೂಸ್ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ H.C.L. ಕಂಪನಿಯ 4 ಕಂಪ್ಯೂಟರಗಳ ಮತ್ತು ಸಾಮಗ್ರಿಗಳ ಒಟ್ಟು ಬೆಲೆ:50,000=00 ರೂಪಾಯಿ ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಶೋಕ ನಗರ ಠಾಣೆ : ಶ್ರೀ. ಮಹಾಲಿಂಗ್ಯಯ ತಂದೆ ಈರಯ್ಯ ಮಠಪತಿ ಸಾ: ಗೌಡಗಾಂವ ಹಾ:ವ: ಪ್ಲಾಟ ನಂ: 49 ಬಸವಸದನ ಕರುಣೇಶ್ವರ ನಗರ ನ್ಯೂ ಜೇವರ್ಗಿ ಕಾಲೋನಿ ಗುಲಬರ್ಗಾ ರವರು ದಿನಾಂಕ: 16-05-2014 ರಂದು ನಮ್ಮ ಊರಿನಿಂದ ಟ್ರ್ಯಾಕ್ಟರ  ರೀಪೆರಿಗಾಗಿ ಟ್ರ್ಯಾಲಿ ಸಮೇತವಾಗಿ ಗುಲಬರ್ಗಾಕ್ಕೆ ತಂದಿದ್ದು ನಮ್ಮ ಮನೆಯ ಹತ್ತಿರದಲ್ಲಿನ ಖುಲ್ಲಾ ಸ್ಥಳದಲ್ಲಿ ರಾತ್ರಿ 08-35 ಗಂಟೆ ಸುಮಾರಿಗೆ ಟ್ರ್ಯಾಲಿ ಬಿಟ್ಟು ಇಂಜಿನನ್ನು ರಿಪೇರಿಗಾಗಿ ಗಂಜಗೆ ತೆಗೆದುಕೊಂಡು ಹೋಗಿರುತ್ತೇವೆ. ಮರುದಿನ ಮುಂಜಾನೆ ದಿನಾಂಕ: 17-05-2014 ರಂದು 6 ಗಂಟೆಗೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಖುಲ್ಲಾ ಸ್ಥಳದಲ್ಲಿ ಬಿಟ್ಟ ಟ್ರ್ಯಾಲಿ ನಂ: ಕೆಎ-32 ಟಿ-8143 ಚೆಸ್ಸಿ ನಂ: JGSE6T9007 ಅ.ಕಿ. 49000/- ರೂ ಕಿಮ್ಮತ್ತಿನದು ಕಾಣಲಿಲ್ಲ. ನಂತರ ಎಲ್ಲಾಕಡೆ ಹುಡುಕಾಡಿದರೂ ಟ್ರ್ಯಾಲಿ ಬಗ್ಗೆ ಸುಳಿವು ಸಿಕ್ಕಿರುವದಿಲ್ಲ. ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ  ಇಮ್ತಿಯಾಜ ತಂದೆ ಖತಾಲಸಾಬ ಗಿರಣಿವಾಲಾ ಸಾ: ಮದಿನಾಕಾಲೋನಿ ಮಕ್ಕಾ ಮಜೀದ ಹತ್ತಿರ ಗುಲಬರ್ಗಾ ಇವರ ಅಣ್ನನಾದ ಮಹಿಬೂಬ ತಂದೆ ಖತಾಲಸಾಬ ಗಿರಣಿವಾಲೆ ವ: 45 ವರ್ಷ ಇವನು ಕಳೆದ ಎಂಟು ಹತ್ತು ವರ್ಷಗಳಿಂದ ಸ್ವಲ್ಪ ಮಾನಸಿಕವಾಗಿದ್ದು ಅವನಿಗೆ  ಅಲ್ಲಲ್ಲಿ ಆಸ್ಪತ್ರೆಗೆ ತೊರಿಸಿದರು ಕೂಡ  ಗುಣಮೂಕ ವಾಗಿರುವದಿಲ್ಲಾ. ಅಲ್ಲದೆ ಅವನು ಮನೆಯಲ್ಲಿ ಯಾರ ಜೊತೆಯಲ್ಲಿ ಮಾತನಾಡದೆ ಇರುತ್ತಿದ್ದನ್ನು.ಅವನು ಆಗಾಗೆ ಮನೆಯಿಂದ ಹೊಗಿ  ನಂತರ 3-2 ದಿವಸದ ನಂತರ ಮತ್ತೆ ಮರಳಿ ಮನೆಗೆ  ಬರುತ್ತಿದ್ದನು. ಅವನಿಗೆ ಕಳೆದ ವರ್ಷ ಮದುವೆ ಮಾಡಿದ್ದು ಅವನು ಸ್ವಲ್ಪ ಮಾನಸಿಕ ಇರುವದರಿಂದ ಅವನ ಹೆಂಡತಿ ಕೂಡ ಅವನು ಹುಚ್ಚು ಇರುತ್ತಾನೆ ಅಂತ ಮದುವೆಯ ನಂತರ ಅಂದಾಜ 10 ದಿವಸದಲ್ಲಿ ಬಿಟ್ಟು ಅವಳು ತನ್ನ ತವರು ಮನೆಗೆ ಹೊಗಿರುತ್ತಾಳೆ .ಅವನಿಗೆ  ಹೆಂಡತಿ ಮಕ್ಕಳು ಇರುವದಿಲ್ಲಾ .  ಮನೆಯಲ್ಲಿ ನಾನು ನನ್ನ ಹೆಂಡತಿ ಮಕ್ಕಳು ಹಾಗು ನನ್ನ ತಾಯಿ ಮುಮ್ತಾಜಬೇಗಂ ಮತ್ತು ಕಾಣೆಯಾದ ನನ್ನ ಅಣ್ನ ಮಹಿಬೂದ ಇರುತ್ತಿದ್ದೆವು. ದಿನಾಂಕ 15-4-2014 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನನ್ನ ಅಣ್ಣ ಮಹಿಬೂಬ ಇವನು ಮನೆಯಿಂದ ಹೊರಗೆ ಹೊದವನು ಮರಳಿ ಮನೆಗೆ ಬಂದಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಚನ್ನಬಸಪ್ಪಾ ತಂದೆ ವಿರುಪಾಕ್ಷಪ್ಪಾ ಪೋಪಣ್ಣಾ ಇವರು ದಿನಾಂಕಃ 12/05/2014 ರಂದು 08:45 ಪಿ.ಎಂ. ಸುಮಾರಿಗೆ ತನ್ನ ಸ್ವಂತ ಮನೆಯಾದ ವಿಶ್ವೇಶ್ವರಯ್ಯ ಕಾಲೋನಿಯ ಮೇನ್ ಗೇಟ್ ದಿಂದ ಖಾಸಗಿ ಕೆಲಸ ನಿಮಿತ್ಯ ಸೇಡಂ ಹೋಗುವ ರೋಡಿನ ಹತ್ತಿರ ಆಟೋಕ್ಕೆ ಕಾಯುತ್ತಾ ನಿಂತಿರುವಾಗ ಸೇಡಂ ರೋಡ ಓಂ ನಗರ ಗೇಟ್ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32 ಇ 2973 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫೀರ್ಯಾದಿದಾರರ ಬಲಗಾಲಿಗೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿದಾರನು ಕೆಳಗೆ ಬಿದ್ದು ಬಲಗಾಲ ಮಂಡಿಗೆ ಮತ್ತು ಬಲ ಗಣ್ಣಿಗೆ, ಹಣೆಯ ಮೇಲೆ, ತಲೆಯ ಮೇಲೆ ಗುಪ್ತಗಾಯವಾಗಿದ್ದು ಪ್ರಜ್ಞಾಹೀನನಾಗಿ ಬಿದ್ದಿದ್ದು ಅಲ್ಲೇ ಪಕ್ಕದವರು ಖಾಸಗಿ ಆಟೋದಲ್ಲಿ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲ ನಿಲ್ಲಿಸದೇ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನ ಹಿಪ್ಪರಗಾ ಠಾಣೆ : ಶ್ರಿಮತಿ ನೀಲಾಬಾಯಿ ಗಂಡ ರಾಮ ಹತ್ತಘಾಳೆ  ಸಾ: ಪ್ಲಾಟ್ ನಂ, 14 ಸಾಯಿಬಾಬ ನಗರ ಯಶ್ವಂತ ಸೂತ್ ಮೀಲ್ ಹಿಂದೂಗಡೆ ಅಕ್ಕಲಕೊಟ ರೋಡ ಸೊಲ್ಲಾಪೂರ ಇವರು ದಿನಾಂಕ 02-05-2014 ರಂದು ಮದ್ನಾಹ 01-30 ಗಂಟೆಗೆ ಸರಸಂಬಾ ಗ್ರಾಮದ ದಾಟಿ ಹಿರೋಳಿ ದೇಶಮುಖ ಇವರ ಹೊಲದ ಹತ್ತೀರ ಪೂಲಿನ ಕರವಿಂಗ್ ರಸ್ತೆಯಲ್ಲಿ ಆಪೇ ರಿಕ್ಷಾ ಟಂಟಂ ನಂ, ಕೆ- 32, ಬಿ- 2428 ನೇದ್ದರ ಚಾಲಕನು ಅತೀ ವೇಗದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಸದರಿ ಟಂಟಂದಲ್ಲಿ ಕುಳಿತ ನನಗೆ ಮತ್ತು ನನ್ನ ಮಕ್ಕಳಾದ ಶುಭಂ ಮತ್ತು ವಿಕ್ರಂ ಇವರಿಗೆ ಹಾಗು ಅಂಬುಭಾಯಿ ಗಂಡ ಶಿವಶರಣ ಕಲಶೇಟ್ಟಿ ಹಾಗು ನನಗೆ ಗೊತ್ತಿರಲಾರದ ಇತರ ಐದು ಆರು ಜನರಿಗೆ ಸಣ್ಣ ಪುಟ್ಟ ಮತ್ತು ಭಾರಿ ಪ್ರಮಾಣದ ಗಾಯವಾಗಿರುತ್ತವೆ. ನಾನು ಉಪಚಾರ ಕುರಿತು ಮಾರ್ಖಾಂಡಯ್ಯ ಆಸ್ಪತ್ರೆ ಸೊಲಾಪೂರ ಉಪಚಾರಕ್ಕಾಗಿ ಸೇರಿಕೆಯಾಗಿರುತ್ತನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.