POLICE BHAVAN KALABURAGI

POLICE BHAVAN KALABURAGI

08 May 2014

Gulbarga District Reported Crimes

ಶಾಲಾ ಮಕ್ಕಳಿಗೆ ವಿತರಿಸುವ ಹಾಲಿನ ಪೌಡರ ಮತ್ತು ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದವರ ಬಂಧನ :
ಚೌಕ ಠಾಣೆ : ಇಂದು ದಿನಾಂಕ ೦೭.೦೫.೨೦೧೪ ರಂದು ಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ಗಂಜ ಕಾಟನ ಮಾರ್ಕಟದಲ್ಲಿ ಆರೋಪಿ ಬೀರಲಿಂಗ ತಂದೆ ಬೀಮಶ್ಯಾ ಪೂಜಾರಿ ವಯ ೩೦ ವರ್ಷ ಉಃ ವ್ಯಾಪಾರ ಜಾಃ ಕುರಬರ ಸಾಃ ಚೆನ್ನವೀರ ನಗರ ಗುಲಬರ್ಗಾ ಇತನು ಬೀರಲಿಂಗ ಟ್ರೇಡಸ್ ಅಂಗಡಿಯಲ್ಲಿ ಸರಕಾರ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಲು ಒದಗಿಸಿದ ನಂದಿನ ಸ್ಕೀಮಡ ಮಿಲ್ಕ ಪೌಡರ ಮತ್ತು ನಂದಿನ ಹೋಲ ಮಿಲ್ಕ ಪೌಡರ ಮತ್ತು ಪಡಿತರ ಚೀಟಿಯ ಮೇಲೆ ಸಾರ್ವಜನಿಕರಿಗೆ ವಿತರಣೆ ಮಾಡಲು ಸರಕಾರ ಒದಗಿಸಿದ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಿಹಿಸಿಟ್ಟುಕೊಂಡು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಸಾಹೇಬ ಗುಲಬರ್ಗಾ, ಮಾನ್ಯ ಡಿ.ಎಸ್.ಪಿ (ಬಿ) ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಸಂತೊಷ ಬಾಬು ಕೆ. ಐಪಿಎಸ್ ಎ.ಎಸ್.ಪಿ ಗ್ರಾಮೀಣ ಉಪವಿಭಾಗ ಇವರ ನೇತೃತ್ವದಲ್ಲಿ ಚೌಕ ಪೊಲೀಸ್ ಠಾಣೆಯ ಶ್ರೀ ಎಸ್.ಕೆ ಮಾರಿಹಾಳ ಪಿ.ಐ, ಶ್ರೀ ಪ್ರದೀಪಕೊಳ್ಳಾ ಪಿ.ಎಸ್.ಐ(ಕಾಸು) ಮತ್ತು ಸಿಬ್ಬಂಧಿಯವರಾದ ಬಸವರಾಜ ಪಾಟೀಲ ಹೆಚ್.ಸಿ ಆನಂದ ಪಿಸಿ,  ಅನಿಲಪಿಸಿ, ವಿಠಲ ಎಪಿಸಿ, ಪ್ರಕಾಶ ಪಿಸಿ, ಗೋಪಾಲ ಪಿಸಿ, ಬಾಬು ಶೇರಿಕಾರ ಪಿಸಿ, ಮಹೇಬೂಬಸಾಬ ಪಿಸಿ, ಮಂಜೂನಾಥ ಪಿಸಿ ರವರು ಕೂಡಿಕೊಂಡು ಆರೋಪಿತನ ಅಂಗಡಿಯ ಮೇಲೆ ಮದ್ಯಾಹ್ನ 02-30 ಗಂಟೆಗೆ ದಾಳಿ ಮಾಡಿ ಆರೋಪಿತನಿಂದ ಸರಕಾರ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಲು ಒದಗಿಸಿದ ನಂದಿನ ಸ್ಕೀಮಡ ಮಿಲ್ಕ ಪೌಡರ ಮತ್ತು ನಂದಿನ ಹೋಲ ಮಿಲ್ಕ ಪೌಡರ ಒಟ್ಟು 205 ಚೀಲಗಳು ಒಟ್ಟು ತೂಕ 5125 ಕೆ.ಜಿ ಹಾಲಿನ ಪೂಡಿ, ಮತ್ತು ಪಡಿತರ ಚೀಟಿಯ ಮೇಲೆ ಸಾರ್ವಜನಿಕರಿಗೆ ವಿತರಣೆ ಮಾಡಲು ಸರಕಾರ ಒದಗಿಸಿದ 192 ಅಕ್ಕಿ ಚೀಲಗಳು ಅಂದಾಜ ತೂಕ 96 ಕ್ವಿಂಟಲ್ ಅಂದಾಜ ಕಿಮತ್ತು 96,000/- ರೂ. ಮತ್ತು ನಗದು ಹಣ 3,15,700/-ರೂ. ಹೀಗೆ ಒಟ್ಟು 6,57,950/- ರೂ. ಕಿಮತ್ತಿನ ಮಾಲು ಮತ್ತು ನಗದು ಹಣವನ್ನು ಜಪ್ತಿಮಾಡಿಕೊಂಡು ಆರೋಪಿತನ ವಿರುದ್ದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸರಸ್ವತಿ ಗಂಡ ಉಶಪ್ಪ ಜಮಾದಾರ  ಸಾ: ಸಾಯಿ  ಮಂದಿರ ಹಿಂದುಗಡೆ ಕಾಮದೇನು ಲೇ ಔಟ ಗುಲಬರ್ಗಾ ರವರ ಗಂಡನಾದ ಉಶಪ್ಪ ಇವರು ದಿನಾಂಕ: 07-05-2014 ರಂದು ಸಾಯಂಕಾಲ 0615 ಗಂಟೆಯ ಸುಮಾರಿಗೆ ಮನೆಯಿಂದ ಕೋಳಿ ಮೊಟ್ಟೆ ತರುವ ಸಲುವಾಗಿ ಕರುಣೇಶ್ವರ ನಗರ ಕ್ರಾಸ್ ಹತ್ತಿರ ಇರುವ ರಿಂಗ ರೋಡನಲ್ಲಿ  ನಡೆದುಕೊಂಡು ದಾಟುತ್ತಿರುವಾಗ ರಾಮ ಮಂದೀರ ರಿಂಗ ರೋಡ ಕಡೆಯಿಂದ ಅಭಿಶೇಕ ಈತನು ತನ್ನ ಮೋ/ಸೈಕಲ್ ನಂ; ಕೆಎ 32 ಡಬ್ಲೂ 2539 ನೆದ್ದರ ಹಿಂದುಗಡೆ ಅಬನೇಜರ ಈತನನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ  ಪಡಿಸಿ ಅಪಘಾತಮಾಡಿ ತಲೆಗೆ ಭಾರಿ ರಕ್ತಗಾಯಗೊಳಿಸಿದ್ದು ಗಾಯಾಳು ಉಶಪ್ಪ ಇವರಿಗೆ ಉಪಚಾರ ಕುರಿತು ಅಟೋರೀಕ್ಷಾ ವಾಹನದಲ್ಲಿ ಕೂಡಿಸಿಕೊಂಡು ಬಸವೇಶ್ವರ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯ ವೈದ್ಯರು ಸಾಯಂಕಾಲ 0645 ಗಂಟೆಗೆ ಪರೀಕ್ಷಿಸಿ ಆಸ್ಪತ್ರೆಗೆ ಬರುವದಕಿಂತ ಮೊದಲೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ :  ಶ್ರೀಮತಿ.ಶ್ರೀದೆವಿ ಗಂಡ ಬಸವರಾಜ ಸಾಃ ಮನೆ ನಂ.06 ಸುಭದ್ರ ನಿಲಯ ಪಿ.ಡಬ್ಲ್ಯೂಡಿ ಕ್ವಾಟ್ರಸ್ ಕೆ.ಹೆಚ್.ಬಿ ಕಾಲೋನಿ ರಾಜಾಪುರ  ರೋಡ್ ಗುಲಬರ್ಗಾ ರವರ ಗಂಡನಾದ ಬಸವರಾಜ ರವರು ದಿನಾಂಕಃ 07-05-2014 ರಂದು 07:40 ಎ.ಎಂ. ಸುಮಾರಿಗೆ ಸ್ವಸ್ತೀಕ ನಗರದ ನಾಗರಾಜ ಪಾಟೀಲ್ ಇವರಿಗೆ ಭೇಟ್ಟಿಗಾಗಿ ಟಿ.ವಿ.ಎಸ್. ಸುಜಕಿ ನಂ. ಕೆ.ಎ 32 ವಾಯ 9679 ನೆದ್ದರ ಮೇಲೆ ಹೊದರು ಸುಮಾರು 08:10 ಎ.ಎಂ ಸುಮಾರಿಗೆ ನಮಗೆ ಪರಿಚಯಸ್ತರಾದ ಭೀಮಾಶಂಕರ ಕುಂಬಾರ ಇವರು ಫೋನ್ ಮಾಡಿ ತಿಳಿಸಿದ್ದೆನೆಂದರೆ.  ಕೆ.ಹೇಚ್.ಬಿ ಕಾಂಪ್ಲೇಕ್ಸ್ ಎದುರುಗಡೆ ರಿಂಗ್ ರಸ್ತೆಯ ಮೇಲೆ ಅಂಕಲ್ ಬಸವರಾಜ ಇವರಿಗೆ ರಸ್ತೆ ಅಪಘಾತ ವಾಗಿದೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ತಿಳಿಸಿದ ಮೇರೆಗೆ. ಗಾಬರಿಯಾಗಿ ಆಸ್ಪತ್ರೆಗೆ ನಾನು ನನ್ನ ಮಗಳಾದ ಸಂದ್ಯಾ, ಭಾವನ ಮಗನಾದ ನಾಗರಾಜ, ಎಲ್ಲರು ಆಸ್ಪತ್ರೆಗೆ ಬಂದು ನೊಡಲಾಗಿ ನನ್ನ ಗಂಡನಿಗೆ ತಲೆಯ ಹಿಂಭಾಗಕ್ಕೆ, ಎಡ ಮಗ್ಗಲಿಗೆ, ಬಲಗೈಗೆ  ಭಾರಿ ರಕ್ತಗಾಯ ವಾಗಿ ರಕ್ತ ಸೊರುತ್ತಿತ್ತು. ಮತ್ತು ಟೊಂಕಕ್ಕೆ ಭಾರಿ ಗುಪ್ತಗಾಯವಾಗಿದ್ದು, ಬಲಗೈ ಭಾರಿ ರಕ್ತಗಾಯ  ಮತ್ತು ಅಲ್ಲಲ್ಲಿ ತರಚೀದ ಗಾಯಗಳಾಗಿದ್ದವು, ನಂತರ ಭೀಮಾಶಂಕರ ಕುಂಬಾರ ಇವರಿಗೆ ವಿಚಾರಿಸಲಾಗಿ ಹೇಳಿದ್ದೆನೆಂದರೆ. ನಾನು 08:00 ಎ.ಎಂ ಸುಮಾರಿಗೆ ಕೆ.ಹೆಚ್.ಬಿ ಕಾಂಪ್ಲೆಕ್ಸ್ ಎದುರುಗಡೆ ನನ್ನ ಗೆಳೆಯನೊಂದಿಗೆ ಮಾತಾಡುತ್ತಾ ನಿಂತುಕೊಂಡಾಗ, ಅದೇ ವೇಳೆಗೆ ಹುಮನಾಬಾದ ಕಡೆಯಿಂದ ಕ್ರುಜರ ನಂ. ಕೆ.ಎ 32 ಬಿ 2916 ನೆದ್ದರ ಚಾಲಕನು  ತನ್ನ ವಾಹನವನ್ನು ಅತೀ  ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ ಹೊಗುತ್ತಿದ್ದ ಟಿ.ವಿ.ಎಸ್. ಸುಜಕಿಗೆ ಡಿಕ್ಕಿ ಹೊಡೆದ ಪರಿಣಾಮ ಬಸವರಾಜ ಒಂದು ಕಡೆಗೆ ಬಿದ್ದರು, ಸುಜಕಿ ವಾಹನವನ್ನು ಕ್ರುಜರ ವಾಹನ ಒತ್ತಿಕೊಂಡು ಹೋಗಿ ಗಟಾರದಲ್ಲಿ ನಿಂತ್ತಿತ್ತು. ಮತ್ತು ವಾಹನ ಚಾಲಕನು ವಾಹನವನ್ನು ಬಿಟ್ಟು ಒಡಿ ಹೊಗಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 07-05-2014 ರಂದು 1330 ಗಂಟೆಗೆ ಮಾಡಿಯಾಳ ಗ್ರಾಮದ ಅಮೋಘಸಿದ್ದ ದೇವರ ಗುಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಮೋಘಸಿದ್ದ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ 03 ಜನ ವ್ಯಕ್ತಿಗಳು ಅಮೋಘಸಿದ್ದ ದೇವರ ಗುಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 03 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಲಾಗಿ 01. ಕಾಶಿನಾಥ ತಂದೆ ಕೊಳ್ಳಪ್ಪ ಕಲಕುಟಗಿ 02. ಶಿವಶರಣ ತಂದೆ ನಾಗಪ್ಪಾ ಶಿರೂರ 3. ಶಾಂತಪ್ಪ ತಂದೆ ಭೂತಾಳಿ ನಡಗೇರಿ ಸಾ; ಎಲ್ಲರು ಮಾಡಿಯಾಳ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 2000/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತ ಮಾಡಿಕೊಂಡು ನಂತರ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ವಯಸ್ಸಿನ ಹುಡುಗಿಗೆ ಬಾಲ್ಯ ವಿವಾಹ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಆನಂದರಾಜ ತಂದೆ ದೇಶಪ್ಪಾ  ಸಾ: . ಅಧ್ಯಕ್ಷರು ಜಿಲ್ಲಾ ಮಕ್ಕಳ ಸಮಿತಿ ಗುಲಬರ್ಗಾ  ಸಾ: ಬಾಲಕೀಯರ ಬಾಲ ಗೃಹ ಆಳಂದ ರಸ್ತೆ  ಗುಲಬರ್ಗಾ. ರವರಿಗೆ ದಿನಾಂಕ 07-05-2014  ರಂದು ತಮ್ಮ ಸಿಬ್ಬಂದಿಯಾದ ಭರತೇಶ ಶೀಲವಂತ ಇವರು ದೂರವಾಣಿ ಮೂಲಕ ಕರೆ ಮಾಡಿ ಅಪ್ರಾಪ್ತ ವಯಸ್ಸಿನ ಮಗುವಾದ ಗೌರಿ@ ಗೌರಮ್ಮ ಎಂಬುವವಳಿಗೆ ಮದುವೆ ಮಾಡಿದ ಬಗ್ಗೆ ಮಾಹಿತಿ ಬಂದಿದ್ದು ಅವಳಿಗೆ ರಕ್ಷಣೆ ಕೊಡುವ ಕುರಿತು ಹೋಗಬೇಕು ಅಂತಾ ತಿಳಿಸಿದ್ದರಿಂದ  ನಾನು 1098 ಕರೆ ಮಾಡಿ ಸಿಬ್ಬಂದಿಯವರನ್ನು ಕರೆದುಕೊಂಡು ಅಂಬೇಡ್ಕರ ನಗರದ ಆಶ್ರಯ ಕಾಲೋನಿಗೆ ಹೋಗಿ  ಮಗುವನ್ನು ಮಾತನಾಡಿಸಿದ್ದಾಗ ತನಗೆ ಸೋದರ ಮಾವ ಮಾಣಿಕ, ಅತ್ತೆ ಪ್ರೀತಾ,ಅಣ್ಣಂದಿರರಾದ  ಹಣಮಂತ ಮತ್ತು ಆಕಾಶ ಕೂಡಿ ಶಿವಕುಮಾರ ದ್ಯಾಗಯಿ ಎಂಬುವವನೊಂದಿಗೆ ದಿನಾಂಕ 01-05-2014 ರಂದು ಕನ್ನಡಗಿ ಗ್ರಾಮದ ಮಲ್ಲಕಣ್ಣ ದೇವಾಲಯದಲ್ಲಿ ಮದುವೆ ಮಾಡಿದ ಬಗ್ಗೆ ತಿಳಿಸಿದಳು. ಅಪ್ರಾಪ್ತ ವಯಸ್ಕಳಾದ ಗೌರಿ @ ಗೌರಮ್ಮ ತಂದೆ ಅಂಬಾರಾಯ ಪಾಟೀಲ ವಯ:15 ವರ್ಷ ಸಾ: ಸಡಕ ಕಿಣ್ಣಿ ತಾ: ಜಿ: ಗುಲಬರ್ಗಾ  ಇವಳಿಗೆ ಒತ್ತಾಯವಾಗಿ ಮದುವೆ ಮಾಡಿರುತ್ತಾರೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ ನಿರ್ಮಲಾದೇವಿ ಗಂಡ ಪೃಥ್ವಿರಾಜಸಿಂಗ ಠಾಕೂರ ಸಾಃ ಮನೆ ನಂ. 8-719 ಬಂಗಡಿ ಪೀರದ ಹಿಂದುಗಡೆ  ನಮೋಶಿಗಲ್ಲಿ ಗುಲಬರ್ಗಾ ರವರು ದಿನಾಂಕ 07.05.2014 ರಂದು  ಎಂದಿನಂತೆ ಬೆಳಗ್ಗೆ 6.30 ಗಂಟೆಗೆ ಶರಣಬಸಪ್ಪ ಅಪ್ಪನ ಕೇರೆಯ ಸುತ್ತಾ ವಾಕಿಂಗ ಮಾಡಿ, ಮರಳಿ ತನ್ನ ಮನೆಗೆ ಹೋಗುವ ಸಂಬಂದ 0730 ಗಂಟೆಯ ಸುಮಾರಿಗೆ ಹೆರಟಜ್ ಹೊಟೇಲದಿಂದ ಸ್ವಲ್ಪ ಮುಂದುಗಡೆ ಕಿಲ್ಲಾ ಕಡೆಗೆ ಹೋಗುವ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಯಾರು ಇಬ್ಬರು ಅಪರಿಚಿತ ಮೊಟಾರ ಸೈಕಲ ಸವಾರರು ಎದುರುಗಡೆಯಿಂದ ಮೊಟಾರ ಸೈಕಲ ಮೇಲೆ ಬಂದು ಮೊಟಾರ ಸೈಕಲ ಹಿಂದುಗಡೆ ಕುಳಿತವನು ನನ್ನ ಕೊರಳಿಗೆ ಕೈಹಾಕಿ ಕೊರಳಿನಲ್ಲಿರುವ 5-1/2 ತೊಲೆ ಬಂಗಾರದ ಮಂಗಳ ಸೂತ್ರ ಅಃಕಿಃ 1,50,000/- ಕಿತ್ತುಕೊಂಡು ಫರಾರಿ ಆಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗ್ರಾಮೀಣ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಾಯಿಬಣ್ಣಾ ಮೇಲಿನಕೇರಿ ಸಾ : ಚಂದನ ಕೇರಾ ತಾ : ಚಿಂಚೋಳಿ ಜಿ: ಗುಲಬರ್ಗಾ  ರವರು ದಿನಾಂಕ: 04-05-2014 ರಂದು ರಾತ್ರಿ ಭೂಪಾಲ ತೆಗನೂರ ಕ್ರಾಸದಲ್ಲಿರುವ ಸಿದ್ದಾರೂಢ ಮಠಕ್ಕೆ ದೇವರ ದರ್ಶನಕ್ಕೆ ಹೋಗಬೇಕೆಂದು ನಡೆದುಕೊಂಡು ತಾವರಗೇರಾ ಕ್ರಾಸ ದಾಟಿ ನಡೆಯುತ್ತಾ ಭೂಪಾಲ ತೆಗನೂರಕ್ಕೆ ಹೋಗುವ ಕ್ರಾಸದಲ್ಲಿರುವ ಸಿದ್ದಾರೂಢ ಮಠದ ಸಮೀಪ ಅಂದಾಜ ರಾತ್ರಿ 8-30 ಗಂಟೆಗೆ ಹೋಗಲು ಕಾಲು ನೋಯಿಸುತ್ತಿರುವುದರಿಂದ ಅಲ್ಲಿಯೇ ಸಮೀಪದಲ್ಲಿದ್ದ ಫೂಲ ಮೇಲೆ ಕೂಳಿತುಕೊಂಡಾಗ ಅಷ್ಟರಲ್ಲಿಯೇ ಇಬ್ಬರು ಅಪರಿಚಿತ ಹುಡುಗರು ಒಂದು ಮೋಟಾರ ಸೈಕಲ್ ಮೇಲೆ ಬಂದವರೇ ಡಿಕ್ಕಿ  ಹೊಡೆದಂತೆ ಮಾಡಿ ಹತ್ತಿರ ಬಂದು ಏ ಭೋಸಡಿ ಮಗನೇ ನಿನ್ನ ಹತ್ತಿರ ರೊಕ್ಕ ಎಷ್ಟು ಇದ್ದಾವ ಅಂತಾ ಕೇಳಲು ನನ್ನ ಹತ್ತಿರ ರೊಕ್ಕ ಇಲ್ಲ ಅಂತಾ ಹೇಳಿದಾಗ ಅವರಿಬ್ಬರೂ ನನ್ನ ಶರ್ಟ ಹಿಡಿದು ಭೋಸಡಿ ಮಗನೇ ನಿನ್ನ ಹತ್ತಿರ ರೊಕ್ಕ ಹ್ಯಾಂಗ ಇರೋದಿಲ್ಲ ಅನ್ನುತ್ತಾ ಇಬ್ಬರ ಪೈಕಿ ಒಬ್ಬನು ಶರ್ಟನ ಕೀಸೆಯಲ್ಲಿ ಕೈ ಹಾಕಿ 500/- ರೂಪಾಯಿಯನ್ನು ಜಬರದಸ್ತಿಯಿಂದ ಕಸಿದುಕೊಂಡನು. ನಂತರ ಅವರಿಬ್ಬರೂ ಅದೇ ಮೋಟಾರ ಸೈಕಲ್ ಮೇಲೆ ಹೋರಟು ಹೋದರು. ಅವರು ಹೋಗುವಾಗ ನಾನು ಅದರ ನಂ ನೋಡಲಾಗಿ ಸದರಿ ವಾಹನವು ಹೀರೋಹೊಂಡಾ ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದಿದ್ದು ಅದರ ನಂ ಕೆಎ-32 ಡಬ್ಲ್ಯೂ-3551 ನೇದ್ದು ಇತ್ತು. ಸದರಿ ಇಬ್ಬರು ಅಪರಿಚಿತರು ಸುಮಾರು 20 ರಿಂದ 25 ವರ್ಷದವರಿದ್ದು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 May 2014

Gulbarga District Reported Crimes

ಕಳವು ಪ್ರಕರಣ:
ಅಫಜಲಪೂರ ಠಾಣೆ: ಅಫಜಲಪೂರ ಪಟ್ಟಣದ ವಾರ್ಡ ನಂ. 20 ರಲ್ಲಿ ಮಾದಾಬಾಳ ತಾಂಡಾ ಬಡವಾಣೆಯಲ್ಲಿ 2009-10 ನೇ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ಕಾಮಗಾರಿ ಕೈಗೊಂಡಿದ್ದು. ದಿ. 30-04-2014 ರಂದು ಪಟ್ಟಣ ಪಂಚಾಯತಿಯ ಕಿರಿಯ ಅಭಿಯಂತರರಾದ ಶಾಂತಪ್ಪ ಹೋಸೂರ ಮತ್ತು ಸದಸ್ಯರಾದ ಮಳೇಂದ್ರ ಡಾಂಗೆ ರವರು ಸದರಿ ಶೌಚಾಲಯದ ಕಟ್ಟಡದ ಬಗ್ಗೆ ಸ್ಥಳ ಪರಿಶಿಲನೆ ಮಾಡಲು ಹೊಗಿದ್ದು, ಸದರಿ ಸಮಯದಲ್ಲಿ ಸದರಿ ಕಟ್ಟಡಕ್ಕೆ ಸಂಭಂದಪಟ್ಟ 1) 1.5 ಎಚ್.ಪಿ ಸಿಂಗಲ ಪೇಸ್ ಮೋಟರ,  2)ಸ್ಟಾಟರ ಬಾಕ್ಸ ಒಳಗಿನ ಸಾಮಾನುಗಳು 3) 500 ಲೀಟರನ ಸಿಂಟೆಕ್ಸ ರೂ 4) ನೀರು ಸರಬರಾಜು ಪೈಪಲೈನ 5) ಸ್ಯಾನಿಟೇಷನ ಪೈಪುಗಳು ಹೀಗೆ ಒಟ್ಟು ಅಂದಾಜು 29,000/- ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಶ್ರೀ ಗಂಗಾಧರ. ಜಿ. ವಾಲಿ ಮುಖ್ಯ ಅದಿಕಾರಿಗಳು ಪಟ್ಟಣ ಪಂಚಾಯತ ಅಫಜಲಪೂರ ರವರು ಸಲ್ಲಿಸಿದ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ: ದಿನಾಂಕ 06.05.2014 ರಂದು 11.30 ಪಿ.ಎಂಕ್ಕೆ ಫಿರ್ಯಾದಿ ಶ್ರೀಮತಿ.ಸುಮಲತಾ ಗಂಡ ಸಂದೀಪ ಠಾಣೆಗೆ ಹಾಜರಾಗಿ ದಿನಾಂಕ 15.04.2012 ರಂದು ಹುಮನಾಬಾದ ಗ್ರಾಮದ ಸಂದೀಪ ರವರೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ 8 ತಿಂಗಳ ನಂತರ ನನ್ನ ಗಂಡ ಅತ್ತೆ,ನಾದಿನಿ ಎಲ್ಲರೂ ಕೂಡಿ ತವರು ಮನೆಯಿಂದ ಹಣ  ಮತ್ತು ಮೋಟಾರ ಸೈಕಲ್ ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದು . ದಿನಾಂಕ 26.03.2013 ರಂದು ನನ್ನ ಅತ್ತೆ,ನಾದಿನಿ ಕೂಡಿ ಕೈಯಿಂದ ಹೊಡೆಬಡೆ ಮಾಡಿ ತವರು ಮನೆಯಿಂದ ಹಣ ಮತ್ತು ಮೋಟಾರ ಸೈಕಲ ತೆಗೆದುಕೊಂಡು ಬಾ ಇಲ್ಲಾವಾದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಮನೆಯಿಂದ ಹೊರಗೆ ಹಾಕಿದ್ದು. ಆಗಿನಿಂದ ನಾನು ನನ್ನ ತವರು ಮನೆಯಲ್ಲಿಯೇ ಇದ್ದು. ದಿನಾಂಕ 18.05.2013 ರಂದು ನನ್ನ ಗಂಡ ಅತ್ತೆ ನಾದಿನಿ ಎಲ್ಲರೂ ನನ್ನ ತವರು ಮನೆಗೆ ಬಂದು ಸಂದೀಪ ಇತನು ತವರು ಮನೆಯಿಂದ ಹಣ ಮತ್ತು ಮೋಟಾರ ಸೈಕಲ್ ತೆಗೆದುಕೊಂಡು ಬಾ ಅಂದರೆ ಇಲ್ಲಿಯೇ ಕುಳಿತಿರುವಿಯಾ ಎಂದು ಕೈಯಿಂದ ಹೊಡೆಬಡೆ ಮಾಡಿದ್ದು. ನನ್ನ ಅತ್ತೆ ನಾದಿನಿ ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ಕೊಟ್ಟಿರುತ್ತಾರೆ. ಕಾರಣ ದಯಾಳುಗಳಾದ ತಾವುಗಳು ನನ್ನ ಗಂಡ ಅತ್ತೆ ನಾದಿನಿ ಹಾಗೂ ಹರಿಸಿಂಗ್ ಇವರ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ;
ಎಂ.ಬಿ.ನಗರ ಪೊಲೀಸ್ ಠಾಣೆ: ದಿನಾಂಕಃ 06/05/2014 ರಂದು ಶ್ರೀ ಬಾಬುರಾವ ತಂದೆ ಬಾಲಪ್ಪ ಜಂಗಿ ಸಾಃ ಜ್ಯೋತಿ ನಗರ ಗುಲಬರ್ಗಾ  ಇವರು ತಮ್ಮ ಮೋಟಾರ ಸೈಕಲ ನಂ. ಕೆ.ಎ 32 ವಾಯ 5663 ನೇದ್ದರ ಮೇಲೆ ಜಯನಗರ ಕ್ರಾಸ್ ಹತ್ತಿರ ಇರುವ ಅಂಬಿಕಾ ಚಾಟ್ ಅಂಗಡಿ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವಾಗ ಸೇಡಂ ಕಡೆಯಿಂದ ಬರುತ್ತಿದ್ದ ಬುಲೇರೋ ವಾಹನ ನಂ. ಕೆ.ಎ 32 ಬಿ 2528 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಹಿಂದಿನಿಂದ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಶ್ರೀ ಬಾಬುರಾವ ತಂದೆ ಬಾಲಪ್ಪ ಜಂಗಿ ಇವ ಬೆನ್ನಿನ ಭಾಗಕ್ಕೆ ಭಾರಿ ಗುಪ್ತಗಾಯ, ಎಡಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯ, ಎಡಗಡೆ ತೊಡೆಗೆ ತರಚಿದ ಗಾಯವಾಗಿದ್ದು ಬುಲೇರೋ ವಾಹನ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ : ದಿನಾಂಕ: 06/05/2014 ರಂದು ರಾತ್ರಿ 8=15 ಗಂಟೆಯ ಸುಮಾರಿಗೆ ಸಂತೋಷಕುಮಾರ ತಂದೆ ಬಂಡಪ್ಪ   ರವರು ಶರಣಬಸವೇಶ್ವರ ದೇವಸ್ತಾನ ದಿಂದ ವೆಂಕವ್ವ ಮಾರ್ಕೇಟ ಕಡೆಗೆ ಹೋಗುವ ಕುರಿತು ನಡೆದುಕೊಂಡು ಹೋಗುತ್ತಿದ್ದಾಗ ಲಾಲಗೇರಿ ಕ್ರಾಸ್ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಇ 9615 ರ ಸವಾರ ಬುಡ್ಡಪ್ಪನು ತನ್ನ ಮೋ/ಸೈಕಲ್ ನ್ನು   ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಅಪಘಾತಮಾಡಿ ಗಾಯಗೊಳಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲಿಸ್ ಠಾಣೆ :  ದಿನಾಂಕ: 06-05-14 ಶ್ರೀ ಮಲ್ಲಿಕಾರ್ಜುನ ತಂದೆ ಕಾಶಪ್ಪ ಸಂಗಾವಿ ಸಾ:ಭಗವತಿ ನಗರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ತಾನು ಸಲ್ಲಿಸಿದ ಪಿರ್ಯಾದಿ ಅರ್ಜಿಯ ಸಾರಾಂಶವೇನೆಂದರೆ ತಾನು 7-8 ವರ್ಷದ ಹಿಂದೆ ಭಗವತಿ ನಗರದಲ್ಲಿರುವ ತನ್ನ ಮ.ನಂ. 1-1495/48ಸಿ ನೇದ್ದನ್ನು ಡಾ:ಸುಜಾತ ಮತ್ತು ಅವರ ಗಂಡ ಶಶಿಕಾಂತ ಹಾರಕೂಡ ಸಾ:ಹುಮನಾಬಾದರವರಿಗೆ ಮನೆ ಮಾರಾಟ ಮಾಡುವ ಬಗ್ಗೆ ಮಾತುಕತೆಯಾಗಿದ್ದು ಸರ್ಕಾರದಿಂದ ನನಗೆ ಪರವಾನಿಗೆ ಬಂದ ನಂತರ ಸೆಲ್ ಡಿಡ್ ಮಾಡಿಕೊಡುವದಾಗಿ ಹೇಳಿದ್ದು. ನನ್ನ ಮನೆಯನ್ನು ಕನ್ನರಾಮ (ಪಿ.ಡಿ ಭಾಠಿ) ಮಾರವಾಡಿರವರಿಗೆ ಬಾಡಿಗೆಗೆ ಕೊಟ್ಟಿದ್ದು ಇರುತ್ತದೆ. ನಾನು  ದಿ:22-04-14 ರಂದು ನನ್ನ ಮನೆಯಲ್ಲಿ ಬಾಡಿಗೆಗೆ ಇರುವ ಬಾಡಿಗೆದಾರ ಕನ್ನರಾಮ (ಪಿ.ಡಿ ಭಾಠಿ) ಮಾರವಾಡಿ ರವರಿಗೆ ಮನೆ ಬಾಡಿಗೆ ಕೇಳಲಾಗಿ ಮನೆ ಬಾಡಿಗೆಯನ್ನು ಡಾ:ಸುಜಾತ ಮತ್ತು ಅವರ ಗಂಡ ಶಶಿಕಾಂತ ಹಾರಕೂಡ ರವರು ಬಾಡಿಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು ಹೇಳಿದರು ಆಗ ನಾನು ಅವರಿಗೆ ನಾನು ಮನೆ ಮಾಲಿಕನಿದ್ದೆನೆ ನೀವು ಅವರಿಗೆ ಹೇಗೆ ಬಾಡಿಗೆ ಕೊಟ್ಟಿರುತ್ತೀರಿ ಎಂದು ಕೇಳಿದ್ದಕ್ಕೆ ಬಾಡಿಗೆದಾರ ಕನ್ನರಾಮ (ಪಿ.ಡಿ ಭಾಠಿ) ಮಾರವಾಡಿ ರವರು ನನಗೆ ಜಾತಿ ನಿಂದನೆ ಮಾಡಿ  ಅವಾಚ್ಯ ಶಬ್ದಗಳೀಂದ ಬಯ್ದು ಮನೆಯಿಂದ ಹೊರಗೆ ಹೋಗು ನೀನು ಎನು ಕೇಳುವುದಿದ್ದರೊ ಡಾ:ಸುಜಾತ ಮತ್ತು ಅವರ ಗಂಡನಿಗೆ ಕೇಳು ಬೈದಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

06 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀ ಗಣೇಶ ತಂದೆ ಕಮಲಾಕರ್ ಸುತ್ತಾರ ಸಾ: ಸಣ್ಣೂರ ಗ್ರಾಮ ತಾ:ಜಿ: ಗುಲಬರ್ಗಾ ಇವರು ದಿನಾಂಕ  05-0514 ರಂದು 06-00 ಪಿ,ಎಮ ಸುಮಾರಿಗೆ ತನ್ನ ಕಾಕನ ಮಗನಾದ ರಾಜಕುಮಾರ @ ರೇವಣಸಿದ್ದಪ್ಪ ಇವನು ತನ್ನ ಮೋಟಾರ ಸೈಕಲ ನಂಬರ ಕೆಎ-36-ಎಚ್-3165 ನೇದ್ದರ ಮೇಲೆ ನಮ್ಮ ಮಾವನಾದ ರಾಜು ತಂದೆ ಕಲ್ಯಾಣರಾವ ಇಬ್ಬರೂ ಕೂಡಿ ಗುಲಬರ್ಗಾ ಹೊರಟರು ಸದರಿ ಮೋಠಾರ ಸೈಕಲ ನಮ್ಮ ಮಾವ ಚಲಾಯಿಸಿಕೊಂಡು ಹೋದರು ಅಂದಾಜು 06-30 ಪಿ,ಎಮ ಸುಮಾರಿಗೆ ನನ್ನ ಕಾಕನ ಮೋಬೈಲ ಪೋನದಿಂದ ನನಗೆ ಯಾರೋ ಅಪರಿಚತರು ಪೋನ ಮಾಡಿ ಶ್ರೀನಿವಾಸ ಸರಡಗಿ ದಾಟಿ ಚೆಂಗಟಿ ತೋಟದ ಹತ್ತೀರ ಅವರ ಮೋಟಾರ ಸೈಕಲಗೆ ಯಾವುದೋ ಒಂದು  ನಾಲ್ಕು ಚಕ್ರದ ವಾಹನ ಡಿಕ್ಕಿಪಡಿಸಿ ಸ್ಥಳದಲ್ಲಿಯೆ ಒಬ್ಬನು ಮೃತಪಟ್ಟಿದ್ದು ಇನ್ನೊಬ್ಬನಿಗೆ ಗಾಯಗಳಾಗಿದ್ದು ಸದರಿಯವನು ಮಾತನಾಡುವ ಸ್ಥತಿಯಲ್ಲಿಲ್ಲ ಅಂತಾ ತಿಳಿಸಿದ್ ಮೇರೆಗೆ ನಾನು ಬಂದು ನೋಡಲಾಗಿ ರಾಜಕುಮಾರ @ ರೇವಣಸಿದ್ದಪ್ಪ ಇತನಿಗೆ ನೊಡಲು ಎಡಗಾಲಿನ ಮೊಳಕಾಲಿಗೆ ತರಚಿದ ಗಾಯ ಬಲ ಕಿವಿಯಿಂದ ರಕ್ತ ಸೋರುತ್ತಿದ್ದು ಬಲಗೈ ಹಸ್ತದ ಮೇಲ್ಭಗದ ಮೇಲೆ ತರಚಿದ ಗಾಯವಾಗಿರುತ್ತದೆ,ನನ್ನ ಮಾವನಿಗೆ ನೋಡಲು ಅವರಿಗೆ ತೆಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಮತ್ತು ಪಕ್ಕೆಗೆ ಒಳಪೆಟ್ಟಾಗಿರುತ್ತದೆ, ಸದರಿ ನನ್ನ ಮಾವ ಈ ಅಪಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಮೋಹನ ತಂದೆ ದನಸಿಂಗ ರಾಠೋಡ ಸಾ: ಮದಿಹಾಳ ತಾಂಡಾ  ತಾ:ಜಿ: ಗುಲಬರ್ಗಾ ಇವರು ದಿನಾಂಕ 05-05-14 ರಂದು ಮನೆಯಿಂದ ನನ್ನ ತಮ್ಮ 04-30 ಪಿ, ಎಮ ಸುಮಾರಿಗೆ ಬಿಸಿ ಹಣ ಸಂಗ್ರಹಿಸಲು ತನ್ನ ಮೋಟಾರ ಸೈಕಲ ನಂಬರ ಕೆಎ-33-ಜ-1143 ನೇದ್ದರ ಮೇಲೆ ಹೋದನು ಅಂದಾಜು 07-00 ಪಿ,ಎಮ ಸುಮಾರಿಗೆ ವಿಶ್ವ ವಿದ್ಯಾಲಯ ಪೊಲೀಸ ಠಾಣೆಯ ಪೊಲೀಸರು ನನ್ನ ತಮ್ಮನ ಮೋಬೈಲ ಪೊನದಿಂದ ನನ್ನ ಮೋಬೈಲ ಪೋನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಈ ಮೋಬೈಲ ಪೋನ ವ್ಯಕ್ತಿ ನಿಮಗೆ ಏನು ಆಗಬೇಕೆಂದು ಕೇಳಲು ನಾನು ಅವನು ನನ್ನ ತಮ್ಮ ಪ್ರಕಾಶ ತಂದೆ ಧನಸಿಂಗ ರಾಠೊಡ ಇರುತ್ತನೆ. ಅಂತ  ತಿಳಿಸಿದಾಗ ಅವರು ನಿಮ್ಮ ತಮ್ಮ ಸೇಡಂ ರೋಡ ಗುರುಕುಲ ಕ್ರಾಸ ಹತ್ತೀರ ರೋಡಿನ ಎಡ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರಿಗೆ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಟ್ರ್ಯಾಕ್ಟರ ಹಿಂದೆ ಡಿಕ್ಕಿಪಡಿಸಿ ತೆಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದ ಮೇರೆಗೆ  ನಾನು ಬಂದು ನೋಡಲಾಗಿ ನನ್ನ ತಮ್ಮ ರೋಡಿನ ಸೈಡಿಗೆ ನಿಂತ ಟ್ರ್ಯಾಕ್ಟರ ನಂ ಎಪಿ-23-8428 ಇಂಜಿನ ಟ್ರ್ಯಾಲಿ ನಂ ಕೆಎ32-ಟಿ-8623 ನೇದ್ದಕ್ಕೆ ಡಿಕ್ಕಿಪಡಿಸಿ ಭಾರಿ ರಕ್ತಗಾಯವಾಗಿ ಸ್ಥಲದಲ್ಲಿಯೇ  ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಕರ ತಂದೆ ಸಂಗಪ್ಪ ಚವಡಿ ಇವರು ದಿನಾಂಕ 05-05-2014 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ತನ್ನಬೈಸಿಕಲ ಮೇಲೆ ವಿರೇಶ ನಗರ ಕ್ರಾಸ ದಿಂದ ಜಿ.ಜಿ.ಹೆಚ್ ಸರ್ಕಲ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಮೋಟಾರ ಸೈಕಲ ನಂಬರ ಕೆಎ-32 ಇಡಿ-1539 ರ ಸವರನಾದ ಕಾಶಿನಾಥ ತನ್ನ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಬೈಸಿಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ತಾನು ಸಹ ಕೂಡಾ ಗಾಯಹೊಂದಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 04-05-2014 ರಂದು ನಮ್ಮ ಗ್ರಾಮದ ಬಸವಣ್ಣಪ್ಪ ದೇವರ ಜಾತ್ರೆ ಇದ್ದರಿಂದ ಜಾತ್ರೆಗೆ ಶ್ರೀಮತಿ ಪಾರ್ವತಿ ಗಂಡ ಲಾಡಪ್ಪ ಸಕ್ಕರಗಿ ಸಾ : ಬಳೂರ್ಗಿ ರವರು ಹೋಗಿದ್ದು  ಜಾತ್ರೆ ಮುಗಿಸಿಕೊಂಡು ಅಂದಾಜು ಸಾಯಂಕಾಲ 6:45 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಚಂದವ್ವ ತೋಳೆ ಇವರ ಮನೆಯ ಮುಂದೆ ಬರುತ್ತಿದ್ದಾಗ, ನಾನು ನನ್ನ ಮಗಳಿಗೆ ಮಾತಾಡಿಸಬೇಕು ಎಂದು ಅವಳ ಹತ್ತಿರ ಹೋಗಿ ಮಾತಾಡಿಸುತ್ತಿದ್ದಾಗ, ಅವಳ ಜೊತೆಗೆ ಇದ್ದ ನನ್ನ ಗಂಡ ಶೈಲಶ್ರೀ ದೊಡ್ಡಮನಿ, ರೇಖಾ ದೊಡ್ಡಮನಿ, ಶ್ರೀಧೇವಿ ಜಳಕಿ, ರೂಪಾ ದೊಡ್ಡಮನಿ, ಮಲ್ಲಮ್ಮ ದೊಡ್ಡಮನಿ, ರೇಣುಕಾ ಬಸವಕಲ್ಯಾಣ, ಪ್ರೀಯಾಂಕ ಕೋಳೆಕರ ಇವರೆಲ್ಲರು ನನ್ನನ್ನು ಸುತ್ತುಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನನಗೂ ಮತ್ತು ಅವರೀಗೂ ಬಾಯಿ ತಕರಾರು ಆಗುತ್ತಿದ್ದಾಗ ಸಿದ್ದಪ್ಪ ಜಳಕಿ, ನೇಹರು ದೊಡ್ಡಮನಿ, ಸುರೇಶ ದೊಡ್ಡಮನಿ, ಇವರು ಬಂದು ಏನ ಅಂತಾ ಇದಾಳ ರಂಡಿ, ಈ ರಂಡಿಗಿ ಕಲಾಸ ಮಾಡ್ರಿ ಅಂತಾ ಎಲ್ಲರೂ ಬೈಯುತ್ತಾ ಕೈಯಿಂದ ಹೊಡೆಯುತ್ತಾ ಎಲ್ಲರೂ ಕೂಡಿ ನನ್ನನ್ನು ಆಕಡೆ  ಈಕಡೆ ತಳ್ಳಾಡಿದರೂ, ಆಗ ನಾನು ಅವರಿಂದ ತಪ್ಪಿಸಿಕೊಂಡು ಹೊಗುತ್ತಿದ್ದಾಗ ಎಲ್ಲರೂ ಕೂಡಿ ನನ್ನನ್ನು ಗಟ್ಟಿ ಆಗಿ ಯಾವಕಡೆ ಹೊಗದಂತೆ ಹಿಡಿದುಕೊಂಡರು, ಸದರಿಯವರು ನನಗೆ ತಳ್ಳಾಡಿ ಕೈಯಿಂದ ಹೊಡೆದರಿಂದ ನನ್ನ ಮೈ ಕೈಗೆ ಹಾಗೂ ತಲೆಗೆ ಗುಪ್ತ ಪೆಟ್ಟುಗಳು ಆಗಿರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ:
ಅಶೋಕ ನಗರ ಠಾಣೆ :  ಶ್ರೀ. ಸುಭಾಷ ದುಂಡಪ್ಪ ಸರಿಕಾರ ಸಾ:  ಪ್ಲಾಟ ನಂ. 8-ಸಿ ನ್ಯೂ ಘಾಟಗೆ ಲೇಔಟ ಗುಲಬರ್ಗಾ ರವರು ಘಾಟಗೇ ಲೇಔಟ ಬುದ್ದ ಮಂದಿರ ಹತ್ತಿರ ಪ್ಲಾಟ ಸಂ. 62/01 ರಲ್ಲಿ ಹೊಸದಾಗಿ ಮನೆ ನಿರ್ಮಿಸುತ್ತಿದ್ದು ಸದರಿ ಮನೆಯ ಕೆಳಅಂತಸ್ಥಿನ ಅಡುಗೆ ಮನೆ ಕೆಳ ಅಂತಸ್ಥಿನ ಮೋದಲನೆ ಬೆಡ್ ರೂಮಿನ ಬಾತ ರೂಮು, ಹಾಗು ಮೊದಲನೆ ಅಂತಸ್ಥಿನ ಬಾತ್ ರೂಮುನಲ್ಲಿ ಹಾಕಲಾದ ಬೇಲೆ ಬಾಳುವ ಸ್ಟೀಲ್ ನಳಗಳನ್ನು ಮತ್ತು ಶವರಗಳನ್ನು ದಿನಾಂಕ 04-05-2014 ರಂದು ರಾತ್ರಿ ಕಳವು ಅಗಿರುತ್ತದೆ.  ಯಾರೋ ಕಳ್ಳರು ಮನೆ ಬೀಗವನ್ನು ಒಡೆದು ಕಳ್ಳತನ ಮಾಡಿರುತ್ತಾರೆ. ಕಳ್ಳತನವಾದ ಸಾಮಾನುಗಳ ಬೇಲೆ ಸುಮಾರು 15,000/- ರೂ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. 
ಅಪಹರಣ ಪ್ರರಕರಣ :
ಮಹಿಳಾ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ದಿ;ಗುರುಲಿಂಗಯ್ಯ ಗುಡಿ ಇವರ ಮಗಳಾದ ಕುಮಾರಿ ಭವಾನಿ ತಂದೆ ದಿ;ಗುರುಲಿಂಗಯ್ಯ ಗುಡಿ ವಯ;14 ವರ್ಷ ಇವಳು ನಿನ್ನೆ ದಿನಾಂಕ 04.05.2014 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವಳು ಇಲ್ಲಿಯವರೆ ಮರಳಿ ಮನೆಗೆ ಬಂದಿರುವದಿಲ್ಲಾ. ನಾನು ನಮ್ಮ ಸಂಬಂದಿಕರಲ್ಲಿ ಸ್ನೇಹಿತರಲ್ಲಿ ಹುಡುಕಾಡಿದರೂ ಪತ್ತೆ ಆಗಿರುವದಿಲ್ಲಾ ಕಾರಣ ನನ್ನ ಮಗಳಾದ ಭವಾನಿ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.