POLICE BHAVAN KALABURAGI

POLICE BHAVAN KALABURAGI

10 April 2014

Gulbarga District Reported Crimes

ಕೊಲೆ ಮಾಡಿ ದರೋಡೆಮಾಡಿದ ಆರೋಪಿತನ ಬಂಧನ :

ರೋಜಾ ಠಾಣೆ : ದಿನಾಂಕ: 25/03/2014 ರಂದು ಮಧ್ಯಾನ 13:15 ಗಂಟೆಗೆ ಫಿರ್ಯಾದಿ ಶ್ರೀ ಸೈಯ್ಯದ ರಫತ ರಹೆನ ತಂದೆ ಸೈಯ್ಯದ ಅಬ್ದುಲ ಸತ್ತಾರ ಸಾ: ನ್ಯಾಶನಲ್ ಪ್ಲಾವರ ಸ್ಕೂಲ ಹತ್ತಿರ ಮುಸ್ಲಿಂ ಚೌಕ್ ಮೋಮಿನಪುರ ಇವರು ಕೊಟ್ಟ ದೂರು ಅರ್ಜಿಯ ಸಂಕ್ಷಿಪ್ತ ಸಾರಾಂಶ ಏನೆಂದರೆ ತನ್ನ ಅಣ್ಣ ಸೈಯ್ಯದ ಜಾವೀದ ನುಮಾನ ಸಾ: ಮನೆ ನಂ. 7-1105/34/38 ನೆಹರು ಗಂಜ ಬ್ಯಾಂಕ ಕಾಲೋನಿ ಗುಲಬರ್ಗಾ ಇವರು ದಿನಾಂಕ: 24/03/2014 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ತಮ್ಮ ಕುಟುಂಬಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದು ಮನೆಯ ಕಾಯಲು ನಂಬಿಗಸ್ತವಾಚಮನ ಅಬ್ದುಲ ನಬಿ ತಂದೆ ಅಲಾವುದ್ದಿನ ಸಾಬ ಬಿದನೂರ ಸಾ: ಗ್ರೀನ ಸರ್ಕಲ್ ಮದೀನಾ ಕಾಲೋನಿ ಜಿಲಾನಾಬಾದ ಇವರಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಈ ವಿಷಯವನ್ನು ಮನಗಂಡು ಅಪರಿಚಿತ ದುಷ್ಕರ್ಮಿಗಳು ಉಪಾಯದಿಂದ ಮನೆಯಲ್ಲಿ ಪ್ರವೇಶ ಮಾಡಿ ವಾಚಮನ ಈತನಿಗೆ ಯಾವುದೋ ಮತ್ತುಬರುವ ಪದಾರ್ಥವನ್ನು ಕುಡಿಸಿ ಅವನು ಮೂರ್ಚೆ ಹೋದ ನಂತರ ಅವನ ಕೈಕಾಲು ಕಟ್ಟಿ ಮನೆಯಲ್ಲಿಯ ಅಲಮಾರಗಳ ಒಡೆದು ಒಟ್ಟು ಅಂದಾಜು 21,43,800/-ರೂಪಾಯಿ ಬೆಲೆಯುಳ್ಳ ಒಟ್ಟು 726 ಗ್ರಾಂ ಬಂಗಾರದ ಆಭರಣ ಮತ್ತು ನಗದು ಸೇರಿ ಮನೆ ದರೋಡೆ ಮಾಡಿ ಯಾವುದೇ ಸಾಕ್ಷಿಪುರಾವೆ ಸಿಗದಹಾಗೆ ವಾಚಮನ ಅಬ್ದುಲ ನಬಿ ಈತನಿಗೆ ಹರಿತವಾದ ಮಾರಕಾಸ್ತ್ರದಿಂದ ಕುತ್ತಿಗೆ ಕೊಯ್ದು ಕೊಲೆಮಾಡಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಅಲ್ಲದೇ ಫಿರ್ಯಾದಿ ಅಣ್ಣನವರ ರೀಯಲ ಎಸ್ಟೆಟ್ ದಾಖಲಾತಿಗಳಿಗೂ ಬೆಂಕಿ ಹಚ್ಚಿ ಸುಟ್ಟು ಹೋಗಿದ್ದು ಇರುತ್ತದೆ. ಅಪರಿಚಿತ ಆರೋಪಿತರಿಗೆ ಪತ್ತೆಹಚ್ಚುವಂತೆ ಕೊಟ್ಟ ಫಿರ್ಯಾದಿಯ ಮೇಲಿಂದ ರೋಜಾ ಠಾಣೆಯಲ್ಲಿ ಗುನ್ನೆ ನಂ. 11/2014 ಕಲಂ.302,201,396,120[ಬಿ] ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಮಾನ್ಯ ಎಸ್.ಪಿ. ಸಾಹೇಬ ಗುಲಬರ್ಗಾ ಮಾನ್ಯ ಅಪರ ಎಸ್.ಪಿ. ಸಾಹೇಬರು ಗುಲಬರ್ಗಾ ಮತ್ತು ಮಾನ್ಯ ಡಿ.ಎಸ್.ಪಿ.“ಬಿ”  ಉಪ ವಿಭಾಗ ಗುಲಬರ್ಗಾರವರ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ವಾಚಮನ ಅಬ್ದುಲ ನಬಿ ಈತನಿಗೆ ಕೈಕಾಲು ಕಟ್ಟಿ ಕೊಲೆಮಾಡಿ ಸೈಯ್ಯದ ಜಾವೀದ ನೂಮಾನ ಇವರ ಮನೆಯಿಂದ ದರೋಡೆ ಮಾಡಿದ ಬಂಗಾರ ಮತ್ತು ನಗದು ಹಣ ದೋಚಿರುವ ಅಪರಿಚಿತ ದುಷ್ಕರ್ಮಿ ಆರೋಪಿತರ ಪತ್ತೆ ಕುರಿತು ವಿಷೇಶ ತಂಡ ರಚಿಸಿ ಶ್ರೀ ಎಂ. ನಾರಾಯಣಪ್ಪಾ ಪಿ.ಐ ರೋಜಾ ಠಾಣೆ ಗುಲಬರ್ಗಾ , ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ[ಕಾ.ಸು] ರೋಜಾ ಠಾಣೆ, ಶ್ರೀ ಭೀಮಶಾ ಎಎಸ್ ಐ, ಪಿಸಿ-645 ಮದರ ಸಾಬ, ಪಿಸಿ-248 ವೈಜನಾಥ, ಪಿಸಿ-954 ಅಂಬಾಜಿ, ಪಿಸಿ-256 ಅಂಬಾದಾಸ   ಈ ತಂಡವು  ದರೋಡೆ ಮಾಡಿದ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಮೊಬಾಯಿಲ ದೂರವಾಣಿಯ ಜಾಲ ಹಿಡಿದು ಖಚಿತಬಾತ್ಮಿ ಬಂದ ಮೇರೆಗೆ ಆರೋಪಿ 1] ಮಹ್ಮದ ನಯೀಮ ಶೇಖ ತಂದೆ ಅಬ್ದುಲ ಮಜ್ಜೀದ ವಯ: 20ವರ್ಷ, ಉ: ಬಿ.ಇ ವಿದ್ಯಾರ್ಥಿ ಸಾ: ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ಈತನಿಗೆ ದಿನಾಂಕ: 09/04/2014 ರಂದು ರಾತ್ರಿ 11: 45 ಪಿಎಮ್ ಕ್ಕೆ ಗುಲಬರ್ಗಾ ರೈಲ್ವೆ ಸ್ಟೇಷನ ಪ್ಲಾಟ ಫಾರಂ ನಂ.1 ರಲ್ಲಿ ದಸ್ತಗಿರಿ ಮಾಡಿ ಆರೋಪಿತನಿಂದ ಕೃತ್ಯಕ್ಕೆ ಸಂಬಂದಿಸಿದ ನಗದು ಹಣ 40,000/-ರೂಪಾಯಿ ಒಂದು ಸೋನಿ ಮೊಬಾಯಿಲ ಅ.ಕಿ.10000/-ರೂ, ಒಂದು ನೋಕಿಯಾ ಮೊಬಾಯಿಲ್ ಅ.ಕಿ.500/-ರೂ. ಒಂದು ಯಮಹಾ ಆರ್ 15 ನಂ. ಕೆ.ಎ 32 ಯು 8000 ಅ.ಕಿ. 25000/- ರೂ.  ಬೆಲೆಯುಳ್ಳದ್ದನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿತರು ತಲೆಮರೆಸಿಕೊಂಡಿದ್ದು ಪತ್ತೆಕ್ರಮ ಜಾರಿಯಲ್ಲಿ ಇರುತ್ತದೆ. ಸದರಿ ದಸ್ತಗಿರಿಯಾದ ಆರೋಪಿತನಿಗೆ ನ್ಯಾಯಾಂಗ ಬಂದನಕ್ಕೆ ಕಳುಹಿಸಿರುತ್ತಾರೆ.
ದರೋಡೆ ಮಾಡುತ್ತಿದ್ದವರ ಬಂಧನ :
ಸ್ಟೇಷನ ಬಜಾರ ಠಾಣೆ : ಶ್ರೀ ಬಿ.ಬಿ.ಬಜಂತ್ರಿ ಪಿ.ಐ ಸ್ಟೇಷನ ಬಜಾರ ಪೊಲೀಸ್ ಠಾಣೆ ಗುಲಬರ್ಗಾ ರವರು ಠಾಣೆಗೆ ಮೂರು ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಸರ್ಕಾರಿ ತರ್ಪೆ ಫಿರ್ಯಾದಿ ಎನೆಂದರೆ. ದಿನಾಂಕ 10-04-2014 ರಂದು ರಾತ್ರಿ 02:00 ಗಂಟೆ ಸುಮಾರಿಗೆ ನಾನು ಮತ್ತು ಸುರೇಶ ಪಿ.ಎಸ್.ಐ (ಅವಿ) ಹಾಗು ಶಿವಶಂಕರ ಪಿ.ಎಸ್.ಐ(ಕಾಸು) ಹಾಗು ಸಿಬ್ಬಂದಿಯವರಾದ ಚನ್ನಮಲ್ಲಪ್ಪಾ ಪಿಸಿ, ಅಶೋಕ ಪಿಸಿ, ಹಾಜಿಮಲಂಗ ಪಿಸಿ, ಶಿವರಾಜ ಪಿಸಿ ರವರುಗಳೊಂದಿಗೆ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ ಮಾಹಿತಿ ಬಂದಿದ್ದೆನೆಂದರೆ, ಮೋಹನ ಲಾಡ್ಜ ಹತ್ತಿರ ಹೊಸದಾಗಿ ರೋಡ ಮಾಡುತ್ತಿರುವ ಜಾಗೆಯಲ್ಲಿ ಕೆಲವು ಜನರು ಹೋಗಿ ಬರುವ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಅಂಜೀಸಿ ಹೊಡೆ ಬಡೆ ಮಾಡಿ ದರೋಡೆ ಮಾಡುತ್ತಿದ್ದಾರೆ ಅಂತಾ ಬಂದ ಖಚೀತ ಭಾತ್ಮಿ ಮೇರೆಗೆ 02:30 ಗಂಟೆಗೆ ಸ್ಧಳಕ್ಕೆ ಹೋಗಿ ನೋಡಲಾಗಿ 5 ಜನರು ಇದ್ದು ವಾಹನಗಳಗೆ ತಡೆದು ಮತ್ತು ಪಾದಚಾರಿಗಳಿಗೆ ಅಂಜೀಸುತ್ತಿದ್ದು ನಾವು ಒಮ್ಮೆಲೆ ಸುತ್ತುವರಿದು ಹಿಡಿದುಕೊಳ್ಳುವಷ್ಟರಲ್ಲಿ ಎರಡು ಜನ ಓಡಿ ಹೋಗಿದ್ದು ಮೂರು ಜನ ಸಿಕ್ಕಿಬಿದ್ದದ್ದು ಅದೆ. ಸಿಕ್ಕಿಬಿದ್ದವರ ಹೆಸರು 1) ಅಂಬರೀಶ ತಂದೆ ರಾಮಚಂದ್ರ ಬನ್ಸೊಡೆ ವಯಃ 18 ವರ್ಷ ಸಾಃ ಬಸವ ನಗರ, 2) ಪ್ರಕಾಶ ತಂದೆ ಸಾಯಬಣ್ಣ ವಯಃ 18 ವರ್ಷ ಸಾಃ ಇಂದ್ರಾ ನಗರ,  3) ಶಿವು ತಂದೆ ತಿಪ್ಪಣ್ಣ ಧರ್ಮಾಪೂರ ವಯಃ 20 ವರ್ಷ ಸಾಃ ಇಂದ್ರಾ ನಗರ ಅಂತಾ ತಿಳಿಸಿದ್ದು ಸದರಿಯವರ ಹತ್ತಿರ ದೊರೆತ ವಸ್ತುಗಳ ಪಂಚನಾಮೆ ಕುರಿತು ಪಂಚರಾದ 1) ಶಂಕರ ತಂದೆ ಶರಣಪ್ಪಾ ಸಾಃ ತಾರಫೈಲ, 2) ಕಾಶಿನಾಥ ತಂದೆ ಚಂದ್ರಪ್ಪಾ ಸುಲೇಪೆಠ ಸಾ|| ಸ್ಟೇಷನ್ ಬಜಾರ ಅಪ್ಪರಗಲ್ಲಿ ಗುಲಬರ್ಗಾ ರವರುಗಳ ಸಮಕ್ಷಮ ನೂಲಿನ ಹಗ್ಗ, ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ, ಖಾರದ ಪೂಡಿ ಹಾಗು ಚಾಕು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ದಾಳಿಯ ಕಾಲಕ್ಕೆ 1) ಬಂಗಾರಿ, 2) ಸೂರ್ಯ ಗಂಗಾನಗರ ಇವರುಗಳೂ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನಿಂಬರ್ಗಾ ಠಾಣೆ : ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಠಾಣೆ ರವರು ಠಾಣೆಯಲ್ಲಿ ಹಾಜರಾಗಿ ಒಬ್ಬ ಆರೋಪಿ, ಒಂದು ವರದಿ,ಅಸಲು ಜಪ್ತಿ ಪಂಚನಾಮೆ ಲಗತ್ತಿಸಿ ಮುದ್ದೆ ಮಾಲಿನೊಂದಿಗೆ ಹಾಜರುಪಡಿಸಿದ್ದು ಸದರಿ ವರದಿಯ ವಿವರವೇನೆಂದರೆ – ಇಂದು ದಿನಾಂಕ  10-04-2014  ರಂದು 0900 ಗಂಟೆಗೆ  ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಭಟ್ಟರ್ಗಾದಿಂದ  ಆಳಂದ ಕಡೆಗೆ ಹೋಗುವ ಡಾಂಬರ ರೋಡಿನ ಮೇಲೆ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ನಾನು ಕೂಡಲೇ ಸಿಬ್ಬಂದಿ ಹಾಗು ಪಂಚರೋಂದಿಗೆ ಬಾತ್ಮಿ ಬಂದ ಸ್ಥಳವಾದ ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಭಟ್ಟರ್ಗಾದಿಂದ  ಆಳಂದ ಕಡೆಗೆ ಹೋಗುವ ಡಾಂಬರ ರೋಡಿನ ಮೇಲೆ ತನ್ನ ಮುಂದೆ ಒಂದು ಪ್ಲಾಸ್ಟೀಕ ಚೀಲದಲ್ಲಿ ಮಧ್ಯದ ಪಾಕೇಟಗಳನ್ನು ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮಧ್ಯದ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು ಯಮನಯ್ಯ ತಂದೆ ನಾಗಯ್ಯ ಗುತ್ತೇದಾರ ಸಾ|| ಭಟ್ಟರ್ಗಾ ಅಂತ ತಿಳಿಸಿದನು, ಅವನಿಗೆ ಈ ಮಧ್ಯದ ಮಾರಾಟದ ಬಗ್ಗೆ ಲೈಸನ್ಸ ವಗೈರೆ ಕೇಳಿದ್ದು ಅದಕ್ಕೆ ಆತನು ತನ್ನ ಹತ್ತಿರ ಯಾವುದೆ ಲೈಸನ್ಸ ವಗೈರೆ ಇರುವದಿಲ್ಲ ಅಂತ ತಿಳಿಸಿದನು, ಅವನ ಮುಂದೆ ಇದ್ದ ಮಧ್ಯದ ಪಾಕೀಟಗಳನ್ನು ಪರಿಶೀಲಿಸಲಾಗಿ 01] 180 ML 36 ORIGINAL CHOICE DELUXE WHISKY PACKETS WORTH RS. 1700/-ರೂಪಾಯಿಯ ಮೌಲ್ಯದ ಮಧ್ಯದ ಪಾಕೇಟಗಳನ್ನು, 02] ಮಧ್ಯ ಮಾರಿದ ನಗದು ಹಣ 110/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮದರಸಾಬ ತಂದೆ ಮೌಲಾಸಾಬ ದಫೆದಾರ ಸಾ|| ದುಧನಿ ತಾ|| ಅಕ್ಕಲಕೊಟ್ ಜಿ || ಸೋಲಾಪೂರ  ರವರು 2007 ನೇ ಸಾಲಿನಲ್ಲಿ ತನ್ನ ಹೆಂಡತಿಯ ತಮ್ಮ ರಹೀಮ ತಂದೆ ಮೊದಿನ ಸಾಬ ಇವರಿಗೆ ಆಟೋ ತೆಗೆದುಕೊಳ್ಳುವ ಸಲುವಾಗಿ 30 ಸಾವಿರ ರೂಪಾಯಿ ಕೊಟ್ಟಿದ್ದು ದಿನಾಂಕ|| 08/04/2014 ರಂದು ಸದರ ಹೆಂಡತಿ ತಮ್ಮ ರಹೀಮ ಈತನ ಮದುವೆಗೆ ಅಂತಾ ನಮ್ಮೂರಿನಿಂದ ಗುಲಬರ್ಗಾಕ್ಕೆ ಮಧ್ಯಾಹ್ನ 03-00 ಗಂಟೆಗೆ ಮದಿನಾ ಕಾಲೋನಿಯಲ್ಲಿರುವ ತನ್ನ ಮಾವನ ಮನೆಗೆ ಬಂದು ಮದುವೆಯ ಹಲ್ದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಯಂಕಾಲ ಉಟ ಮಾಡಿ ಮಾವನ ಮನೆಯಲ್ಲಿ ಮಲಗಿಕೊಂಡಿದ್ದು ಹೆಂಡತಿಯ ತಮ್ಮಂದಿರಾದ ರಹೀಮ ಮತ್ತು ಅಲೀಮ ಇಬ್ಬರು ಕೂಡಿ ಬೊಸಡಿಕೆ ಶಾದಿಸೇ ಜಾದಾ ತೆರೆಕೊ ಪೈಸೆ ಜಾದಾ ಹೊಗಾಯೆ ಪೈಸೆ ದಿಯಾ ತೊ ಮೇರೆ ಬಹಿನಾ ಕೊ ಶಾದಿ ಮೇ ಬೇಜದೇತಾ ಹೈ ಅಂತಾ ಅವಾಚ್ಯ ಶಬ್ದಗಳಿಂದ ಬೈ ಹತ್ತಿದರು ಅದಕ್ಕೆ ನಾನು ಅಲ್ಲಿಂದ ಹೊಗಬೇಕು ಅಂತಾ ಮನೆಯಿಂದ ಹೊರಗೆ ಬರುತ್ತಿರಬೇಕಾದರೆ ನನಗೆ ತಡೆದು ನಿಲ್ಲಿಸಿ ಇಬ್ಬರು ಕೂಡಿ ಕೈಮುಷ್ಟಿ ಮಾಡಿ ಹೊಟ್ಟೆಯ ಮೇಲೆ  ಬೆನ್ನಿನ ಮೇಲೆ, ಹೆಡಕಿನ ಮೇಲೆ ಹೊಡೆದು ಗಾಯಗೊಳೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 April 2014

Gulbarga District Reported Crimes

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-04-2014 ರಂದು ಶಿವೂರ ಗ್ರಾಮದಲ್ಲಿರುವ ಅಂಬಿಗರ ಚೌಡಯ್ಯನವರ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿವೂರ  ಗ್ರಾಮಕ್ಕೆ ಹೋಗಿ, ಅಂಬಿಗರ ಚೌಡಯ್ಯನವರ ಕಟ್ಟೆಯಿಂದ ಸ್ವಲ್ಪ ದೂರು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ನೀಜಶರಣ ಅಂಬಿಗರ ಚೌಡಯ್ಯನವರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇದ್ದ ಚೀಲದಿಂದ ಪೌಚಗಳನ್ನು ತಗೆದು ಸಾರ್ವಜನಿಕರಿಗೆ ಕೊಡುತ್ತಿದ್ದದು ಖಚೀತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಹಿಡಿದುಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ ಒಟ್ಟು 60 ಓರಿಜನಲ ಚೌಯ್ಸ ಕಂಪನಿಯ 90 ಎಮ್ ಎಲ್ ದ ಮದ್ಯ ತುಂಬಿದ ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಲಕಣ್ಣ ತಂದೆ ತುಕಾರಾಮ ಜಮಾದಾರ ಸಾ: ಶಿವೂರ ಗ್ರಾಮ ಎಂದು ತಿಳಿಸಿದನು. ಸದರಿಯವನ ವಶದಿಂದ 60 ಓರಿಜನಲ್ ಚೌಯ್ಸ ಕಂಪನಿಯ ಮದ್ಯ ತುಂಬಿದ ರಟ್ಟಿನ ಪೌಚಗಳು  ಒಟ್ಟು ಅಂದಾಜು 1449/- ರೂ ಆಗುತ್ತದೆ. ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 08-04-2014 ರಂದು ಬೆಳಿಗ್ಗೆ ಶಿವೂರ ಗ್ರಾಮದಲ್ಲಿರುವ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿಬ್ಬಂದಿ ಹಾಗು ಪಂಚರೊಂದಿಗೆ ಹನುಮಾನ ಗುಡಿಯಿಂದ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇದ್ದ ಒಂದು ಪ್ಲಾಸ್ಟಿಕ್ ಚೀಲದಿಂದ ಪೌಚಗಳನ್ನು ತಗೆದು ಸಾರ್ವಜನಿಕರಿಗೆ ಕೊಡುತ್ತಿದ್ದದು ಖಚೀತ ಪಡಿಸಿಕೊಂಡು ದಾಳಿ ಮಾಡಿ, ಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ ಒಟ್ಟು 31 ಓರಿಜನಲ ಚೌಯ್ಸ ಕಂಪನಿಯ 180 ಎಮ್ ಎಲ್ ದ ಮದ್ಯ ತುಂಬಿದ ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಂಜುನಾಥ ತಂದೆ ವಿಠ್ಠಲ ಸುರಗಳ್ಳಿ ಸಾ|| ಶಿವೂರ ಗ್ರಾಮ ಎಂದು ತಿಳಿಸಿದನು. ಸದರಿಯವನ ವಶದಿಂದ 31 ಓರಿಜನಲ್ ಚೌಯ್ಸ ಕಂಪನಿಯ ಮದ್ಯ ತುಂಬಿದ ರಟ್ಟಿನ ಪೌಚಗಳ  ಒಟ್ಟು ಅಂದಾಜು 1497/- ರೂ ಆಗುತ್ತದೆ. ಸದರಿ ಜಪ್ತ ಮಾಡಿಕೊಂಡ ಮುದ್ದೆ ಮಾಲು ಮತ್ತು  ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ  : ದಿನಾಂಕ 08-04-14 ರಂದು  ಸಂತೋಷಕುಮಾರ  ಇತನು ಟವೇರಾ ಕಾರ ನಂಬರ ಕೆಎ 32 ಬಿ 7186  ನೇದ್ದರ ಚಾಲನೆ ಮಾಡುತ್ತಾ  ಗುಲಬರ್ಗಾ‍ದಿಂದ ಕಮಲಾಪೂರಕ್ಕೆ ಹೋಗಿ ಜಂಬಗಾ ಸ್ವಾಮಿಗೆ ಬಿಟ್ಟು ವಾಪಸ್ಸು  ಗುಲಬಗಾ‍ಕ್ಕೆ ಬರುತ್ತಿದ್ದಾಗ ನಾವದಗಿ ಗ್ರಾಮದ ಹತ್ತಿರ 5-30 ಪಿಎಂಕ್ಕೆ ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬ್ರೀಡ್ಜಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತ ದಿಂದ ಅತನ ತಲೆಗೆ ಮತ್ತು ಇತರೇ ಕಡೆ ಭಾರಿ ರಕ್ತಗಾಯಗಳಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ಮೃತನ ತಂದೆ ಶ್ರೀ ಬಸವರಾಜ ತಂದೆ ಬಂಡೆಪ್ಪ ಪಾಟೀಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ಶ್ರೀ ಅಲ್ಲಾವುದಿನ್ ಶೇಖ ಸಾ|| ಇಂದಿರಾನಗರ ಅಫಜಲಪೂರ ಇವರು ದಿನಾಂಕ: 09-03-2014 ರಂದು ಸಾಯಂಕಾಲ 5-30 ಗಂಟೆಗೆ ನನ್ನ ಮಗ ಸದ್ದಾಮನು ಗುಲಬರ್ಗಾದಿಂದ ಸೈಕಲ ಮೋಟಾರ ನಂ. ಎಮ್.ಹೆಚ್.-13 ಬಿಕೆ-3697 ನೇದ್ದರ ಮೇಲೆ ಅಫಜಲಪೂರಕ್ಕೆ ಬರುತ್ತಿರುವಾಗ ಗೊಬ್ಬೂರ[ಬಿ] ಗ್ರಾಮದ ಬ್ಯಾಂಕ ಹತ್ತಿರ ಸೈಕಲ ಮೋಟಾರ ಸ್ಕೀಡ ಆಗಿ ರಸ್ತೆಯ ಮೇಲೆ ಬಿದ್ದು ತೆಲೆಗೆ ಬಾರಿ ಒಳಪೆಟ್ಟಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ದಿನಾಂಕ: 10-03-2014 ರಂದು ಅಶ್ವಿನಿ ಆಸ್ಪತ್ರೆ ಸೋಲಾಪೂರದಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿ ಆಗದೆ ಸದ್ದಾಮಹುಸೇನ ಶೇಖ ಇವನು ದಿನಾಂಕ: 11-03-2014 ರಂದು ಬೆಳಗು ಮುಂಜಾನೆ 03-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಮಲ್ಲಿಕಾರ್ಜುನ್‌ ತಂದೆ ಶಿವರಾಯ ಹೊನ್ನೂರ ಸಾ:ಹೇರೂರ (ಬಿ) ತಾಜಿ:ಗುಲಬರ್ಗಾ  ರವರು ದಿನಾಂಕ 07-04-2014  ರಂದು ಮದ್ಯಾನ್ಹ 3 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಬಂದಿ ಅಮೃತ ತೊರಾದಿ ಸಾ:ಕೊಟನೂರ ಇಬ್ಬರು ಕೂಡಿಕೊಂಡು ಬಸನಾಳ ಗ್ರಾಮದಲ್ಲಿರುವ ನಮ್ಮ ಬಿಗನಾದ ಮಾರುತಿ ಇವರಿಗೆ ಬೇಟಿಯಾಗಿ ಹಣವನ್ನು ಕೇಳಿ ಬಂದರಾಯಿತು ಅಂತಾ ವಿಚಾರ ಮಾಡಿ ಹೊಗಿರುತ್ತೆವೆ. ಅಲ್ಲಿಗೆ ಹೋಗಿ ಮರಳಿ ಅದೆ ದಿನ ನಡೆದುಕೊಂಡು ಸಾಯಂಕಾಲ 5:45 ಗಂಟೆಯ ಸುಮಾರಿಗೆ ಹೊರಟಿದ್ದು ಇರುತ್ತದೆ.ಹಿಗಿದ್ದು ಸಾಯಂಕಾಲ 6 ಗಂಟೆಯ ಸುಮಾರಿಗೆ ಬಸನಾಳ ಗ್ರಾಮ  ದಾಟಿ ಸ್ವಲ್ಪ ದೂರದಲ್ಲಿ  ಕವಲಗಾ(ಬಿ) ಕಡೆಗೆ ನಡೆದುಕೊಂಡು ಬರುತ್ತಿರುವಾಗ ನಮ್ಮ ಹಿಂದಗಡೆಯಲ್ಲಿ ಒಬ್ಬ ಮೊಟರ್‌ ಚಾಲಕನು ತನ್ನ ಮೋಟರ್‌ ಸೈಕಲ್‌ನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಾನು ರೋಡಿನ ಮೇಲೆ ಮುಂದೆ ಮುಖಮಾಡಿ ಕೆಳಗೆ ಬಿದ್ದಿದ್ದರಿಂದ ನನಗೆ ಹಣೆಗೆ, ತಲೆಗೆ ರಕ್ತಗಾಯವಾಗಿರುತ್ತದೆ. ನಂತರ ಮೋಟರ್‌ ಸೈಕಲ್‌ ನಂ ನೋಡಲಾಗಿ ಕೆಎ 56 ಇ-1728 ಅಂತಾ ಇದ್ದು ಅದರ ಚಾಲಕನು ಡಿಕ್ಕಿ ಪಡಿಸಿದ ನಂತರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ :  ಶ್ರೀಮತಿ ರುಕ್ಮೀಣಿ ಗಂಡ ಚಂದ್ರಕಾಂತ ಕಲಾಲ ಸಾ:ಕಕ್ಕಳಮೈಲಿ ತಾ:ಸಿಂದಗಿ ಜಿ:ಬಿಜಾಪೂರ ರವರು ತನ್ನ ತವರು ಮನೆಯಾದ ಯಲಗೋಡದಲ್ಲಿ ಶಾಹುಸೇನ ಮುತ್ಯಾನ ಜಾತ್ರೆ ಇರುವದರಿಂದ ನಮ್ಮ ತಮ್ಮ ಮನೋಜ ಇತನು ದಿಡ ನಮಸ್ಕಾರ ಹಾಕುತ್ತಿರುವದಿರಿಂದ ಎಲ್ಲರೂ ಕೂಡಿಕೊಂಡು ಪುನಾದಿಂದ ನಿನ್ನೆ ದಿನಾಂಕ 07-04-2014  ರಂದು ರಾತ್ರಿ 10 ಗಂಟೆಯ ಸುಮಾರಿಗೆ ಪ್ಯಾಸೆಂಜರ ರೈಲ್ವೆ ಗಾಡಿಗೆ ಹೊರಟು ಇಂದು ದಿನಾಂಕ: 08-04-2014 ರಂದು ಗುಲಬರ್ಗಾದ ರೈಲ್ವೆ ಸ್ಟೇಶನ್‌ಗೆ ಬಂದು ಅಲ್ಲಿಂದ ನಮ್ಮೂರಿಗೆ ಹೊಗುವ ಸಲುವಾಗ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಸುರಪೂರ ಬಸ್ಸಿಗೆ ಹೊರಟಿದ್ದು ಬೆಳಗ್ಗೆ 7:30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಶಿರನೂರ ಗ್ರಾಮ ದಾಟಿ ಗೀತಾಂಜಲಿ ಕಾರ್ಖಾನೆಯ ಹತ್ತಿರ ಹೊಗುತ್ತಿರುವಾಗ ನಮ್ಮ ಬಸ್ಸನ ಎದುರುಗಡೆಯಲ್ಲಿ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮ್ಮ ಬಸ್ಸಿನ ಎದುರುಗಡೆಯಲ್ಲಿ ಬಂದು ಒಮ್ಮೆಲೆ ಕಟ್ಟ ಮಾಡಿಕೊಂಡು ಬಸ್ಸಿನ ಬಲಭಾಗಕ್ಕೆ ಉಜ್ಜಿಕೊಂಡು ಹೊಗಿದ್ದರಿಂದ ಕಿಡಕಿಯ ಕಡೆಗೆ ಕುಳಿತ್ತಿದ್ದ ನನ್ನ ಗಂಡನಾದ ಚಂದ್ರಕಾಂತ ಇತನಿಗೆ ಬಸ್ಸಿನ ಕಿಡಕಿಯ ಕಬ್ಬೀಣದ ಪಟ್ಟಿಗಳು ತಲೆಗೆ ಮತ್ತು ಹಣೆಗೆ ಬಡೆದು ಭಾರಿ ರಕ್ತಗಯವಾಗಿರುತ್ತವೆ, ನಮ್ಮ 10 ವರ್ಷದ ಮಗಳಾದ ಅಂಕಿತಾಳಿಗೆ ತಲೆಗೆ  ಭಾರಿ ರಕ್ತಗಾಯವಾಗಿ ರುತ್ತದೆ. ನನಗೆ ಮತ್ತು ನಮ್ಮ ಇನ್ನೊಬ್ಬಳು 13 ವರ್ಷದ ಮಗಳಾದ ರೆಣುಕಾಳಿಗೆ ಅಲ್ಲಲ್ಲಿ ತರಚಿದ ಸಣ್ಣ –ಪುಟ್ಟಗಾಯಗಳಾಗಿರುತ್ತದೆ. ಬಸ್ಸಿನಲ್ಲಿ ಕುಳಿತ ಬಸವರಾಜ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಮ್ಮ ತಮ್ಮ ಮನೋಜ ಈತನಿಗೆ ಯಾವುದೇ ಗಾಯವೈಗೆರೆ ಯಾಗಿರುವುದಿಲ್ಲಾ ನಂತರ ಬಸ್ಸಿಗೆ ಡಿಕ್ಕಿ ಪಡಿಸಿದ ಟಿಪ್ಪರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಕುಮಾರ ತಂದೆ ಶಂಕರ ನಾಶಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ರವರು ಸುಮಾರು 02 ತಿಂಗಳ ಹಿಂದೆ ಕಾಂತು ಬಂಟಿ ಜಗತ ಇತನ ಕಡೆಯಿಂದ ನನ್ನ ಗೆಳೆಯನಾದ ಸಚಿನ ಇತನಿಗೆ 50 ಸಾವಿರ ರೂಪಾಯಿ ಕೊಡಿಸಿದ್ದು ಅದರ ಸಂಬಂಧವಾಗಿ, ನಿನ್ನೆ ದಿನಾಂಕಃ 07-04- 2014 ರಾತ್ರಿ 09:00 ಗಂಟೆ ಸುಮಾರಿಗೆ ಮುಕ್ತಂಪೂರದಲ್ಲಿರುವ ಸೋದರ ಮಾವನ ಮನೆಗೆ ಹೋಗಿ ನಂತರ 10:30 ಪಿ.ಎಂ. ಸುಮಾರಿಗೆ ಮರಳಿ ಮನೆಗೆ ಹೋಗುತ್ತಿರುವಾಗ ಫ್ಯಾನ್ಸಿ ಕ್ರಾಸ್ ಹತ್ತಿರ 1) ಕಾಂತು 2) ಚಿದಾನಂದ ಮತ್ತು ಅವರ ಸಂಗಡ ಇನ್ನಿಬ್ಬರು ನನಗೆ ಕರೆದು 50 ಸಾವಿರ ರುಪಾಯಿ ಕೊಡಲು ಒತ್ತಾಯಿಸಿದ್ದು ಆಗ ನಾನು ಸಚಿನ ಊರಲ್ಲಿ ಇಲ್ಲ ಅವನು ಬಂದ ಬಳಿಕ ಎರಡು ದಿವಸಗಳಲ್ಲಿ ಕೊಡುವುದಾಗಿ ಹೇಳಿದರೂ ಕೇಳದೇ ಅವಾಚ್ಯ ಶಬ್ದಗಳಿಂದ ಬೈಯಿದು ಕೈಯಿಂದ ಬೆನ್ನಿಗೆ, ಹೊಟ್ಟೆಗೆ, ಎದೆಯ ಮೇಲೆ ಹಾಗು ಬೆಲ್ಟದಿಂದ ಬಲಗೈ ಮುಂಗೈಗೆ, ಬೆನ್ನಿಗೆ ಮತ್ತು ಬಲಗಡೆ ಮತ್ತು ಎಡಗಡೆ ಕಾಲುಗಳ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಅಲ್ಲದೇ ಕಾಂಪ್ಲೇಟ್ ಮಾಡಿದರೆ ಜೀವದಿಂದ ಹೊಡೆಯುದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 April 2014

Gulbarga District Reported Crimes

ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದಯಾನಂದ ತಂದೆ ಶಾಂತಯ್ಯಾ ಹಿರೆಮಠ ಸಾ : ಮಾರ್ಸನಳ್ಳಿ ರವರ  ಜೋತೆಗೆ ಚಾಲಕನಾಗಿ ಅಬ್ದಲಸತ್ತಾರ ಬ್ಯಾಡ್ಜ ನಂಬರ 21563 ಇಬ್ಬರಿಗೂ ಅಫಜಲಪೂರ ದಿಂದ ಬಡದಾಳ, ಬಟಗೇರಾ ಗ್ರಾಮ, ನಂತರ ಬಡದಾಳ ವಸ್ತಿ ಹೀಗೆ ರೂಟ ನಂ 25/26 ಪ್ರಕಾರ ದಿನಾಂಕ 07-04-2014 ರಂದು ಕರ್ತವ್ಯಕ್ಕೆ ನೇಮಿಸಿದ್ದು , ಅದರಂತೆ ನಾವುಗಳು ಡಿಪೋದಿಂದ ಬಸ್ ನಂಬರ ಕೆಎ-32 ಎಫ್-1228 ನೇದ್ದು ಮದ್ಯಾಹ್ನ 12:00 ಗಂಟೆಗೆ ಬಸ್ ತಗೆದುಕೊಂಡು ಬಂದು, ಒಂದು ಟ್ರೀಪ ಬಡದಾಳಕ್ಕೆ ಹೋಗಿ ಮರಳಿ ಅಫಜಲಪೂರಕ್ಕೆ ಬಂದು. ನಂತರ ಬಟಗೇರಾ ಗ್ರಾಮಕ್ಕೆ ಹೊಗಿ ಪ್ರಯಾಣಿಕರನ್ನು ಇಳಿಸಿ ನಂತರ ವಾಪಾಸ ಬಟಗೇರಾ ಗ್ರಾಮದಿಂದ ಅಫಜಲಪೂರಕ್ಕೆ ಹೊರಟಿರುತ್ತೆವೆ.  ನಮ್ಮ ಬಸ್ಸು ಆನೂರ ಗ್ರಾಮಕ್ಕೆ 4:30 ಗಂಟೆಗೆ ಬಂದಾಗ ಆನೂರ ಗ್ರಾಮದ ಬಸ್ ನಿಲ್ದಾಣದಲ್ಲಿ ಅನೇಕ ಪ್ರಯಾಣಿಕರು ನಮ್ಮ ಬಸ್ಸಿನಲ್ಲಿ ಏರಿರುತ್ತಾರೆ. ಸದರಿ ಪ್ರಯಾಣಿಕೆರಿಗೆ  ಟಿಕೇಟ ಕೊಡಲು ಹೊಗಿರುತ್ತೆನೆ, ನಾನು ಟಿಕೇಟ ಕೊಡಲು ಹೋದ ಪ್ರಯಾಣಿಕರಲ್ಲಿ ಒಬ್ಬ ಪ್ರಯಾಣೀಕನು ನನಗೆ 100/- ರೂ ನೋಟು ಕೊಟ್ಟು, ಅಫಜಲಪೂರಕ್ಕೆ ಒಂದು ಟಿಕೇಟ ಕೊಡಿ ಎಂದು ಹೇಳಿದನು, ಅದಕ್ಕೆ ನಾನು ಸದರಿ ವ್ಯಕ್ತಿಗೆ ನನ್ನ ಹತ್ತಿರ ಚಿಲ್ಲರೆ ಇಲ್ಲ, 10/- ರೂ ಟಿಕೇಟ ಇದೆ, 10/- ರೂ ಇದ್ದರೆ ಕೋಡು ಎಂದು ತಿಳಿಸಿದೆನು, ಆಗ ಸದರಿ ವ್ಯಕ್ತಿ ತನ್ನ ಹತ್ತಿರ ಸಹ ಚಿಲ್ಲರೆ ಇಲ್ಲ ಎಂದು ತಿಳಿಸಿದನು. ಆಗ ನಾನು ಸದರಿ ವ್ಯಕ್ತಿಯಿಂದ 100/- ರೂ ನೋಟು ಪಡೆದುಕೊಂಡು ಟಿಕೇಟ ಕೊಟ್ಟು, ಉಳಿದ ಹಣವನ್ನು ಅಫಜಲಪೂರ ಬಸ್ ನಿಲ್ದಾಣದಲ್ಲಿ ಕೊಡುತ್ತೆನೆ ಅಂತಾ ಹೇಳಿ, ಸದರಿ ನಾನು ಕೊಟ್ಟ ಟಿಕೇಟ ಹಿಂದೆಯೆ ಬಾಕಿ ಇದ್ದ 90/- ರೂ ಹಣವನ್ನು ಬರೆದುಕೊಟ್ಟೆನು, ನಂತರ ಅಫಜಲಪೂರ ಬಸ್ ನಿಲ್ದಾಣದಲ್ಲಿ ಸದರಿ ವ್ಯಕ್ತಿ ಉಳಿದ ಚಿಲ್ಲರೆ ಹಣ ಕೊಡೊ ಸೂಳೆ ಮಗನೆ ಅಂತಾ ಬೈದನು ಆಗ ನನಗು ಅವನಿಗು ಚಿಲ್ಲರೆ ಸಂಬಂಧ ಬಾಯಿ ತಕರಾರು ಆಗಿರುತ್ತದೆ. ಆಗ ಅಲ್ಲೆ ಇದ್ದ ನಮ್ಮ ಸಿಬ್ಬಂದಿಯಾದ ಬೀರಪ್ಪ ಪೂಜಾರಿ, ಶಂಕರ ಹೂಗಾರ ಇವರು ಬಂದು ಜಗಳ ಬಿಡಿಸಿದರು. ನಂತರ ನಾವು ಬಟಗೇರಾಕ್ಕೆ ಹೋಗಿ ಅಫಜಲಪೂರಕ್ಕೆ ಬರುತ್ತಿರುವಾಗ ಆನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ನಿಂತಾದ ಅಫಜಲಪೂರದಲ್ಲಿ ಚಿಲ್ಲರೆ ಸಂಬಂಧ ಜಗಳ ತೆಗೆದ ವ್ಯಕ್ತಿ ನಮ್ಮ ಹತ್ತಿರ ಬಂದು ಏನೋ ಸೂಳೆ ಮಗನಾ ಅಫಜಲಪೂರದಲ್ಲಿ ನನ್ನಜೋತೆ ಜಗಳಾ ತಗಿತಿಯಾ ಅಂತಾ ಅಂದು ನನ್ನ ಎದೆಯ ಮೇಲಿಂದ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಮತ್ತು ಅಲ್ಲೆ ಬಿದ್ದ ಬಡಿಗೆಯಿಂದ ನನ್ನ ಮೈಕೆಗೆಗ ಹೊಡೆದನು. ಇನ್ನೊಬ್ಬ ವ್ಯಕ್ತಿ ಬಂದು ನನ್ನ ಕುತ್ತಿಗೆ ಹಿಡಿದು ಕಾಲಿನಿಂದ ಬೆನ್ನಿನ ಮೇಲೆ ಒದ್ದನು. ಸದರಿ ಜಗ್ಗಾಡುವ ಸಮಯದಲ್ಲಿ ಅಂದಾಜು 3000/- ರೂ ಕೆಳಗೆ ಬಿದ್ದಿರುತ್ತವೆ. ಸದರಿಯವರು ನನಗೆ ಹೊಡೆಯುತ್ತಿರುವಾಗ  ನಮ್ಮ ಬಸ್ ಚಾಲಕ ಅಬ್ದುಲಸತ್ತಾರ ಮತ್ತು ಅಲ್ಲೇ  ನೇರೆದ ಕೆಲ ಜನರು ಜಗಳವನ್ನು ಬಿಡಿಸಿರುತ್ತಾರೆ, ಸದರಿ ನನ್ನ ಜೋತೆಗೆ ಜಗಳ ತಗೆದವರ ಹೆಸರು ಚಂದ್ರಕಾಂತ ತಂದೆ ಕಲ್ಯಾಣಿ ಸೀತನೂರ, ಮತ್ತು ಸಿದ್ದು ತಂದೆ ಕಲ್ಯಾಣಿ ಸೀತನೂರ ಸಾ|| ಇಬ್ಬರು ಆನೂರ ಎಂದು ವಿಚಾರಣೆಯಿಂದ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಬಸ್ಸಮ್ಮ ಗಂಡ ಅಣ್ಣಪ್ಪ ಚೂರಗಸ್ತಿ ಸಾ:  ಮಾದವಾನಂದ ನಗರ ಆಳಂದ ರಸ್ತೆ ಗುಲಬರ್ಗಾ ಇವರು ದಿನಾಂಕ  31-03-2014 ರಂದು ಸಾಯಂಕಾಲ 07.30 ಗಂಟೆ ಸುಮಾರಿಗೆ ಯುಗಾದಿ ಹಬ್ಬದ ನೀಮಿತ್ಯ ಶ್ರೀ ಶರಣಬಸವೇಶ್ವರ ದೆವಸ್ಥಾನಕ್ಕೆ ದರ್ಶನ ಕುರಿತು ಹೊಗಿದ್ದು, ಅಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಕೊರಳಲ್ಲಿದ್ದ 12 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ 30000 ರೂ ನೇದ್ದನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದು ತಂದೆ ಬಸವಂತ್ರಾವ, ಸಾಃ ಸೇಡಂ  ರವರು ದಿನಾಂಕ 06-04-2014 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಇ 32 6802 ನೇದ್ದರ ಮೇಲೆ ಹಿಂದೆ ಸತೀಶ ಈತನನ್ನು ಕೂಡಿಸಿಕೊಂಡು ಸೇಡಂ ರಿಂಗ ರೋಡ ಕಡೆ ಹೋಗುತ್ತಿದ್ದಾಗ ಗುಬ್ಬಿ ಕಾಲೂನಿ ಕ್ರಾಸ್ ಹತ್ತಿರ ಕಾರ ನಂ. ಕೆ.ಎ 32 ಎಮ್. 9289 ನೇದ್ದರ ಚಾಲಕ ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ಫಿರ್ಯಾದಿಗೆ ಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 06-04-2014 ರಂದು ರಾತ್ರಿ 10;00 ಗಂಟೆಗೆ ಶ್ರೀಮತಿ ಶಾಂತಾ ಬಾಯಿ ಗಂಡ ಶ್ರೀಮಂತರಾಯ ಐರೋಡಗಿ ಸಾ : ಗೌರ (ಬಿ) ತಮ್ಮ ಮಮ್ಮೊಗಳು ದ್ರಾಕ್ಷಾಯಣಿ ಇಬ್ಬರು ಊಟ ಮಾಡಿಕೊಂಡು ಮನೆಯ ಮುಂದೆ ಮಾತಾಡುತ್ತಾ ಕುಳಿತಾಗ ನನ್ನ ಮಗ ಸಿದ್ರಾಮಪ್ಪ ಮತ್ತು ಅವನ ಹೆಂಡತಿ ಶ್ರೀದೇವಿ, ಹಾಗು ಅವನ ಮಕ್ಕಳಾದ ವಿದ್ಯಾ, ಸೀಮಾ, ಶೃತಿ ಮತ್ತು ನನ್ನ ಮಗಳ ಮಗ ಸುರೇಶ ತಂದೆ ಮಲ್ಕಣ್ಣ ಕಾಚಾಪೂರ ಇವರೆಲ್ಲರು ನಮ್ಮ ಹತ್ತಿರ ಬಂದು ಅವರಲ್ಲಿ ನನ್ನ ಸೊಸೆ ಶ್ರೀದೇವಿ ಇವಳು ಅವಾಚ್ಯಶಬ್ದಗಳಿಂದ ಬೈದು ಜಗಳ ತೆಗೆದು ಎಲ್ಲರು ಸೇರಿಕೊಂಡು ಇಬ್ಬರಿಗು ಹೋಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಶೋಕ ನಗರ ಠಾಣೆ : ದಿನಾಂಕ 03-04-2014 ರಂದು ಸಾಯಂಕಾಲ 06.00ಗಂಟೆ ಸುಮಾರಿಗೆ ಗುಲಬರ್ಗಾ ನಗರದ ಆಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆಂದ್ರಬಸ್ಸ ನಿಲ್ದಾಣದ ಎದರುಗಡೆ ಕಮಲ ಹೋಟೆಲ ಹತ್ತಿರ ಮಹಿಬೂಬ ತಂದೆ ವಜೀರ ಸಾಹೇಬ ನಾದಾಫ, ಸಾ-ಗಾಂಧಿ ಚೌಕ ದೂದನಿ ತಾ-ಅಕ್ಕಲಕೋಟ, ಜಿಲ್ಲೆ-ಸೋಲಾಪೂರು. ಇತನು ರಸ್ತೆಯ  ಪಕ್ಕ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಗುಲಬರ್ಗಾ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ ಈ ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಅವರ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ಚೀಟಿ, ಬಾಲ್ ಪೆನ್ನು, ಹಾಗೂ ನಗದು ಹಣ 3100/- ರೂಪಾಯಿ, ಜಪ್ತು ಮಾಡಿಕೊಂಡು  ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.