POLICE BHAVAN KALABURAGI

POLICE BHAVAN KALABURAGI

04 April 2014

Gulbarga District Reported Crimes

PÀªÀįÁ¥ÀÆgÀ ¥ÉưøÀ oÁuÉ:
 ದಿನಾಂಕ:03/04/2014  ರಂದು  ಠಾಣೆಯ ಸಿಬ್ಬಂದಿಯವರಾದ ಚಂದ್ರಕಾಂತ ಪಿಸಿ. 988, ಭೀಮಾಶಂಕರ ಪಿಸಿ.531, ಕತಲಸಾ ಪಿಸಿ. 310 ರವರೊಂದಿಗೆಕಮಲಾಪೂರದಿಂದ ಕಿಣ್ಣಿಸಡಕ ಸೇತುವೆವರೆಗೆ ಪೆಟ್ರೋಲಿಂಗ್ ಮಾಡುತ್ತಿರುವಾಗ  ಕಿಣ್ಣಿಸಡಕ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಗೆ ಲೋಕಸಭೆ  ಚುನಾವಣೆ  ನಿಮಿತ್ಯಾ ನೀವು ಯಾವ ಪಕ್ಷಕ್ಕೆ ಮತ ನೀಡುತ್ತಿರಿನಿಮ್ಮನ್ನು ನೋಡುತ್ತೇನೆ. ಮತ್ತು ನಾನು ಹೇಳಿದ ಪಕ್ಷಕ್ಕೆ ಮತ ಹಾಕಬೇಕು ಅಂತಾಒದರಾಡುತ್ತಾಚಿರಾಡುತ್ತಾ ಸಾರ್ವಜನಿಕರಿಗೆ ಹಾಗು ಹೋಗಿ ಬರುವ ಜನರಿಗೆ ತಡೆದು ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡೆ ತಡೆ ಉಂಟುಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಾ ಇದ್ದುದ್ದರಿಂದ ಸದರಿಯವನಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸಂತೋಷಕುಮಾರ ತಂದೆ ಶರಣಪ್ಪಾ ಸಿಂಧೆ ವಯ; 28 ವರ್ಷ ಜಾಮಾದಿಗ ಉಮೇಕ್ಯಾನಿಕ್ ಕೆಲಸ ಸಾಕಿಣ್ಣಿಸಡಕ ತಾ:ಜಿ: ಗುಲಬಗರ್ಾ ಅಂತಾ ತಿಳಿಸಿದ್ದು ಸದರಿಯವನಿಗೆ ಹಾಗೆಯೆ ಬಿಟ್ಟಲ್ಲಿ ಇನ್ನು ಮುಂದೆ ಸಂಜ್ಞೆಯ ಅಪರಾಧ ಮಾಡುವದಾಗಿ ಕಂಡು ಬಂದಿದ್ದರಿಂದ ಮತ್ತು ಲೋಕಸಭೆ ಚುನಾವಣೆಯ ಸಮಯದಲ್ಲಿ ಗಲಾಟೆ ಮಾಡುವ ಸಂಭವವಿರುವದರಿಂದಮುಂಜಾಗ್ರತೆ ಅಡಿಯಲ್ಲಿ ದಸ್ತಗಿರಿ ಮಾಡಿಕೊಂಡು ಠಾಣೆಗೆ  ತಂದು ಸದರಿಯವನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.                                                                     
C¥sÀd®¥ÀÆgÀ ¥Éưøï oÁuÉ:
ಇಂದು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕುರಿತು ಜೀಪ ಚಾಲಕ ಪಿಸಿ-339 ಗುಂಡಪ್ಪ ಇವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಂಬೆಡ್ಕರ ಚೌಕ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಅಂಬಿಗರ ಚೌಡಯ್ಯನವರ ಕಮಾನ ಹತ್ತಿರ ಇರುವ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಪಿಸಿ-1258 ಆನಂದ, ಪಿಸಿ-894 ನಿಂಗಣ್ಣ, ಪಿಸಿ-1225 ಚಿದಾನಂದ, ಪಿಸಿ-903 ಚಂದ್ರಶಾ ಇವರನ್ನು ವಾಕಿ ಮೂಲಕ ಬರಮಾಡಿಕೊಂಡು ದಾಳಿ ವಿಷಯ ತಿಳಿಸಿ, ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಹುಚ್ಚಪ್ಪ ತಂದೆ ಶರಣಪ್ಪ ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿದೆನು. ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ಪಂಚರು, ಹಾಗು ಸಿಬ್ಬಂದಿಯವರು ಕೂಡಿಕೊಂಡು ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಠಾಣೆ ಜೀಪಿನಲ್ಲಿ 5:15 ಪಿ ಎಮ್ ಕ್ಕೆ ಹೊರಟು  ಸ್ಥಳಕ್ಕೆ 5:20 ಪಿ ಎಮ್ ಕ್ಕೆ ಹೊಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಅಂಬಿಗರ ಚೌಡಯ್ಯನವರ ಕಮಾನದ ಹತ್ತಿರ ಇರುವ ಹನುಂತ ದೆವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಡುತ್ತಿದ್ದ 5 ಜನರನ್ನು ಹಿಡಿದು  ಒಟ್ಟು 4785/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ದಿಂದ ವರೆಗೆ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡೆವು. ಸದರಿ ಆರೋಪಿತರೊಂದಿಗೆ ಠಾಣೆಗೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
 ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ:
 ದಿನಾಂಕ: 04/04/2014 ರಂದು ರಾತ್ರಿ  ಕಾಮರೆಡ್ಡಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಹಾಜರಾಗಿ ಶ್ರೀ ಸೋಮನಾಥ ಇವರ ಎಮ್.ಎಲ್.ಸಿ. ಪತ್ರವನ್ನು ಹಾಜರಪಡಿಸಿದ್ದರಿಂದ ನಾನು ಕಾಮರೆಡ್ಡಿ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಶ್ರೀ ಸೋಮನಾಥ ತಂದೆ ಶ್ರೀಶೈಲ ರವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ ಫಿರ್ಯಾದಿ ತನ್ನ ಮೋ/ಸೈಕಲ್ ನಂಕೆಎ 32 ವಿ 0210 ನೆದ್ದನ್ನು ಚಲಾಯಿಸಿಕೊಂಡು ಸುಪರ ಮಾರ್ಕೇಟ ದಿಂದ ಲಾಲಗೇರಿ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಅಪ್ಪನ ಕೆರೆ ಗಾರ್ಡನ ಕ್ರಾಸ್ ಹತ್ತಿರ ಲಾಲಗೇರಿ ಕ್ರಾಸ್ ಕಡೆಯಿಂದ ಮೋ/ಸೈಕಲ್ ನಂ:ಕೆಎ 32 ಇಇ 0770 ರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋರೀಕ್ಷಾ ಕ್ಕೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಹೊರಟು ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ.


               

03 April 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಶ್ರೀಶೈಲ್ ತಂದೆ ಶಾಂತಪ್ಪಾ ಬಾಪೂರೆ ಸಾಕಾಳಮಂದರ್ಗಿ ಇವರಿಗೆ ದಿನಾಂಕ: 01-04-2014  ರಂದು ರಾತ್ರಿ 10-00 ಗಂಟೆ ಸುಮಾರಿಗೆ,ನನ್ನ ತಾಯಿ ತಾರಾಬಾಯಿ ಇವಳಿಗೆ ಆರಾಮವಿರದ ಕಾರಣ ವೈದ್ಯಕೀಯ ಚಿಕಿತ್ಸೆ ಮಾಡಿಸುವದಕ್ಕಾಗಿ ನಮ್ಮೂರಲ್ಲಿರುವ ಡಾಕ್ಟರನ್ನು ಕರೆಯಲು ನಮ್ಮ ಚಿಕ್ಕಪ್ಪಾ ಸಿದ್ರಾಮ ಇವರ ಮನೆ ಮುಂದಿನ ರಸ್ತೆ ಮೇಲೆ ಹೋಗುತ್ತಿದ್ದಾಗನನ್ನ ಚಿಕ್ಕಪ್ಪಾ ಸಿದ್ರಾಮ,ಚಿಕ್ಕಮ್ಮಾ ಗುರುಬಾಯಿ ಮತ್ತು ನಮ್ಮೂರಿನ ಗುರಪ್ಪಾ ತಂದೆ ಬಸವಣ್ಣಪ್ಪಾ ಕಾಶೆಟ್ಟಿ ಎಲ್ಲರು ತಮ್ಮ ಮನೆಯ ಮುಂದಿನ ಕಟ್ಟೆ ಮೇಲೆ ಕುಳಿತುಕೊಂಡು ನನಗೆ ನೋಡಿಈ ಭೋಸಡಿ ಮಕ್ಕಳಿಗೆ ಮೊನ್ನೆ ಕೇಸ ಮಾಡಿಜೇಲು ಕಳುಹಿಸಿದರು. ಇನ್ನೂ ಬುದ್ದಿ ಬಂದಿಲ್ಲಾ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನುಯಾಕೆ ಸುಮ್ಮನೆ ಅವಾಚ್ಯವಾಗಿ ಬೈಯುತ್ತಿದ್ದಿರಿ ಅಂತಾ ಅನ್ನುತ್ತಾ ಹೋಗುತ್ತಿದ್ದಾಗ ಗುರಪ್ಪಾ ಈತನು ಅವಾಚ್ಯವಾಗಿ ಬೈಯುತ್ತಾ ಬಂದು ನನಗೆ ಮುಂದೆ ಹೋಗದಂತೆ ಆಕ್ರಮವಾಗಿ ತಡೆದು ನಿಲ್ಲಿಸಿ ಒತ್ತಿ ಹಿಡಿದನು. ಸಿದ್ರಾಮನು ಈ ಭೋಸಡಿ ಮಗನಿಗೆ ಬಹಳ ಸೊಕ್ಕು ಬಂದಿದೆ ಅಂತಾ ಬೈಯುತ್ತಾ ಅಲ್ಲೇ ಬಿದ್ದಿರುವ ಕಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ಚಿರಾಡುತ್ತಿರುವಾಗ ಸಪ್ಪಳ ಕೇಳಿ ಮನೆಯಲ್ಲಿದ್ದ ನನ್ನ ತಮ್ಮ ಮಲ್ಲಪ್ಪಾತಾಯಿ ತಾರಾಬಾಯಿ ಇವರು ಜಗಳ ಬಿಡಿಸಲು ಬಂದಾಗ ಸಿದ್ರಾಮನು ಮಲ್ಲಪ್ಪಾನಿಗೆ ರಂಡಿ ಮಗನೇ ನೀನು ಈ ಜಗಳದಲ್ಲಿ ಬಂದಿದ್ದಿ ಅಂತಾ ಒತ್ತಿಯಾಗಿ ಹಿಡಿದು ನೆಲದ ಮೇಲೆ ಕೆಡುವಿದಾಗ ಗುರಪ್ಪಾ ಈತನು ಕಾಲಿನಿಂದ ಟೊಂಕಕ್ಕೆ ಒದ್ದು ಗುಪ್ತಗಾಯ ಪಡಿಸಿದನು. ಸಿದ್ರಾಮನು ಮಲ್ಲಪ್ಪನ ತೊಡ್ಡು (ವೃಷಣ) ಹಿಡಿದು ಜಗ್ಗಿ ಗುಪ್ತಗಾಯ ಪಡಿಸಿದನು. ಗುರುಬಾಯಿ ಇವಳು ಈ ರಂಡಿದಿಂದೆ ಜಗಳ ಬಂದಿದೆ. ಅಂತಾ ಅನ್ನುತ್ತಾ ತಾಯಿ ತಾರಾಬಾಯಿ ಇವಳ ಕೂದಲು ಹಿಡಿದು ಜಗ್ಗಾಡಿನೋಕಿಸಿಕೊಟ್ಟಿದ್ದರಿಂದ ನನ್ನ ತಾಯಿಯ ಹಣೆ ಗೋಡೆಗೆ ಬಡಿದು ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ ಇಂದುಬಾಯಿ ಗಂಡ ದತ್ತಪ್ಪಾ ನಾಯಿಕೋಡಿ ಸಾ:ಹುಣಸಿಹಡಗಿಲ ತಾ:ಜಿ: ಗುಲಬರ್ಗಾ ರವರಿಗೆ ಒಂದು ವಾರದ ಹಿಂದೆ ನಮ್ಮೂರಿನ ನಮ್ಮ ಓಣಿಯ ಅನಸುಬಾಯಿ ಆದನಕರ ಮತ್ತು ಅವರ ಸಂಬಂಧಿಕರ ಹಾಗು ನನ್ನ ಮತ್ತು ನಮ್ಮ ಮನೆಯವರ ನಡುವೆ ಮನೆಯ ಜಾಗದ ಸಲುವಾಗಿ ಜಗಳವಾಗಿರುತ್ತದೆ ಅದೆ ವೈಮನಸ್ಸು ಇಟ್ಟುಕೊಂಡು ನಿನ್ನೆ ದಿನಾಂಕ 01-04-2014  ರಂದು ಸಾಯಂಕಾಲ 7 ಗಂಟೆಗೆ ನಾನು ಸಂಡಾಸಕ್ಕೆ ಅನಸುಬಾಯಿ ಆದನಕರ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲಿಂದ ಹೊಗುತ್ತಿರುವಾಗ, ಅನಸುಬಾಯಿ ಇವಳು  ಬಂದು ನನ್ನನ್ನು ನೋಡಿ ಏ ರಂಡಿ ಇಂದ್ರಿ ನಮ್ಮ ಮನೆಯ ಮುಂದಿಂದ್ದು ಯಾಕ ಸಂಡಾಸಕ್ಕೆ ಹೊಗುತ್ತಿ ನಿನಗ ಬ್ಯಾರೆ ದಾರಿ ಇಲ್ಲ ರಂಡಿ ಅಂತಾ ವಿನಾ ಕಾರಣ ನನಗೆ ಅವಾಚ್ಯವಾಗಿ ಬೈಯುತ್ತಿರುವದನ್ನು ನೋಡಿ ನಾನು ಅವಳಿಗೆ ಯಾಕ ಮೈಯಂದು ಸೊಕ್ಕೆನು ಸುಮ್ಮನೆ ಕಾಲ ಕೆದರಿ ಜಗಳ  ತೆಗೆಯುತ್ತಿದ್ದಿ ಅಂತಾ ಕೇಳಿದಕ್ಕೆ ಓಡಿ ಬಂದು ಮುಂದೆ ಹೊಗುತ್ತಿದ್ದ ನನಗೆ ತಡೆದು ನಿಲ್ಲಿಸಿ ಸೀರೆ ಹಿಡಿದು ಎಳೆದಾಡಿ ಕೈಯಿಂದ ನನಗೆ ಹೆಡಕಿನ ಮೇಲೆ ಹೊಡೆಯುತ್ತಿರುವಾಗ ನನ್ನ ಕೊರಳಲ್ಲಿನ ಬಂಗಾರದ ತಾಳಿ ಕಡಿದು ಬಿದ್ದಿರುತ್ತದೆ. ಆಗ ನಾನು ಚೀರಾಡುತ್ತಿರುವ ಗೌಳಿ ಕೇಳಿ ನನ್ನ ಗಂಡ ದತ್ತಪ್ಪಾ ಮತ್ತು ನನ್ನ ಮಗ ಅನಿಲಕುಮಾರ ಇವರು ಓಡಿ ಬರುತ್ತಿದ್ದಂತೆ ಅನಸುಬಾಯಿ ಇವಳ ಗಂಡ ರುಕ್ಕಪ್ಪ, ಅವಳ ಮಕ್ಕಳಾದ  ಸೋಮಲಿಂಗ, ವಿನೋದ  ಅವರ ಸಂಬಂದಿ ಚಿದಾನಂದ ಇವರೆಲ್ಲರೂ ಬಂದು ಅವರಲ್ಲಿ ನನ್ನ ಗಂಡನಿಗೆ ರುಕ್ಕಪ್ಪ ಇತನು ಅವಾಚ್ಯವಾಗಿ ಬೈದು ಕಾಲಿನಿಂದ ನನ್ನ ಗಂಡನ ಎಡಗಾಲಿನ ಮೊಳಕಾಲಿನ ಮೇಲೆ ಜಾಡಿಸಿ ಒದ್ದಿರುತ್ತಾನೆ. ನನ್ನ ಮಗ ಅನಿಲನಿಗೆ, ಸೊಮಲಿಂಗ ಇತನು ಹಿಡಿದಿದ್ದು, ವಿನೋದ ಇತನು ಹೊಡಿ ರಂಡಿ ಮಗನಿಗೆ ಅಂತಾ ಬೈದು ಕೈಯಿಂದ ಬೆನ್ನ ಮೇಲೆ ಹೊಡೆದಿರುತ್ತಾನೆ, ಚಿದಾನಂದ ಇತನು ರಂಡಿ ಮಕ್ಕಳಿಗೆ ಹೊಡಿರ್ರಿ ಖಲಾಸ ಮಾಡ್ರಿ ಅಂತಾ ಬೈದು ಜೀವದ ಭಯ ಹಾಕಿರುತ್ತಾರೆಡ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಗುಂಡಪ್ಪಾ ತಂದೆ ಬಸಪ್ಪಾ ಮೇಲಕೇರಿ ಸಾ; ಅಂತಪನಾಳ ಇವರು ದಿನಾಂಕ 02-04-2014 ರಂದು ಕಲ್ಮೂಡ ಗ್ರಾಮದಲ್ಲಿ ತಮ್ಮ ಸಂಭಂದಿಕರನ್ನು ಭೇಟ್ಟಿ ಮಾಡಿಕೊಂಡು ಬರುವ ಕುರಿತು ಅಂತಪನಾಳ ಗ್ರಾಮದಿಂದ ಕಮಲಾಪೂರ ಕಲ್ಮೂಡ ರಸ್ತೆ ಅಂತಪನಾಳ ಕ್ರಾಸಿನ ವರೆಗೆ ನಡೆದುಕೊಂಡು ಬಂದು ಮುಂದೆ ಕ್ರಾಸ ಹತ್ತಿರ ಬಂದು ನಿಂತ್ತುಕೊಂಡಿದ್ದಾಗ , ಕಮಲಾಪೂರ ಕಡೆಯಿಂದ ನಮ್ಮ ಪರಿಚಯವರಾದ ಶ್ರೀ ವೀರಶೇಟ್ಟೆಪ್ಪಾ ತಂದೆ ರಂಗಣ್ಣ ಪಾಟೀಲ್ ಸಾ;ಸೊಂತ  ಇವರು ತಮ್ಮ ಮೋ.ಸೈಕಲ್ ಚಲಾಯಿಸಿಕೊಂಡು ಬಂದು ನಾನು ನಿಂತ್ತಿದನ್ನು ನೋಡಿ  ನಿಲ್ಲಿಸಿ ನನಗೆ ಎಲ್ಲಿಗೆ ಹೋಗುತ್ತಿರುವಿ ಅಂತ ಕೇಳಿದ್ದುಆಗ ನಾನು ಕಲ್ಮೂಡಕ್ಕೆ ಹೋಗುತ್ತಿದ್ದೆನೆ ಅಂತ ಹೇಳಿದಕ್ಕೆ ನಾನು ಸೊಂತಕ್ಕೆ ಹೋಗುತ್ತಿದ್ದೆನೆಕಲ್ಮೂಡದಲ್ಲಿ ಬಿಡುತ್ತೇನೆ ನಡೆ ಅಂತ ಕರೆದಿದಕ್ಕೆ ನಾನು ಅವರ ಮೋ.ಸೈಕಲ್ ಮೇಲೆ ಕುಳಿತುಕೊಂಡೆನು. ಮೋ.ಸೈಕಲನ್ನು ವೀರಶೇಟ್ಟೆಪ್ಪಾ ಪಾಟೀಲ್ ಇವರೆ ಚಲಾಯಿಸುತ್ತಿದ್ದರು, ಕಮಲಾಪೂರ ಕಲ್ಮೂಡ ರಸ್ತೆಯ ಅಂತಪನಾಳ ದೋಡ್ಡ ಹಳ್ಳದ ಇಳುಕಿನಲ್ಲಿ ವೀರಶೆಟ್ಟೆಪ್ಪಾ ಪಾಟೀಲ್ ಇವರು ತಮ್ಮ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿ ದೋಡ್ಡ ಹಳ್ಳದ ಸೇತುವೆ ಹತ್ತಿರ ರಸ್ತೆಯಲ್ಲಿ ಮೋ.ಸೈಕಲ ಒಮ್ಮಲೆ ಮುಂದೆ ಇದ್ದ ತಂಗು ತಪ್ಪಿಸಲು ಹೋಗಿ ಮೋ. ಸೈಕಲನ್ನು ಸ್ಕೀಡ್ ಮಾಡಿ ಅಫಘಾತ ಪಡಿಸಿದರುಆಗಾ ನಾನು ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೆವು ನನ್ನ ಬಲಗೈ ಬುಜದ ಹತ್ತಿರ ಎದೆಗೆ ಗುಪ್ತಗಾಯವಾಗಿ ಬಲ ಭುಜ ನೋಯಿ ತಿತ್ತುವೀರಶೇಟ್ಟಿ ಇವರಿಗೆ ಮೈಕೈಗಳಿಗೆ ತರಚಿದ ಗಾಯಗಳಾಗಿದ್ದವುನಂತರ ಅಪಘಾತ ಪಡಿಸಿದ ಮೋ.ಸೈಕಲ್ ನಂ. ನೋಡಲಾಗಿ ಕೆಎ-32-ಎಸ್-8519 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಭೀಮು ತಂದೆ ಚಂದು ಚವ್ಹಾಣ ಸಾ: ಭರತನಗರ ತಾಂಡಾ ಗುಲಬರ್ಗಾ ರವರು ದಿನಾಂಕ 01-04-2014 ರಂದು ಸಾಯಂಕಾಲ 5-40 ಗಂಟೆಗೆ ಫಿರ್ಯಾದಿ ಮತ್ತು ಆತನ ಮೊಮ್ಮಗನಾದ ಲಕನ ವಯಾ: 6 ವರ್ಷ ಇಬ್ಬರು ಕೂಡಿಕೊಂಡು ಹಿರೊ ಹೋಂಡಾ ಶೂ ರೂಮದಿಂದ ಎಮ್.ಆರ್.ಎಮ್.ಸಿ ಕಾಲೇಜ ರೋಡಿನಲ್ಲಿ ಬರುವ ದೇವಿಂದ್ರ ಗಾಯಕವಾಡ ಇವರ ಮನೆಯ ಎದುರಿನ ರೋಡ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಹಿರೊಹೊಂಡಾ ಶೂ ರೂಮ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಎಸ್-7904 ರ ಸವರಾನದ ಗಿರೀಶ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೊಮ್ಮಗನಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಂಜುನಾಥ ತಂದೆ ಚಿಕ್ಕಯ್ಯ ಸಾ|| ಮನೆ ನಂ.ಟಿ-2 4ನೇ ಮಹಡಿ ಪ್ಯಾರಡೈಸ ಅಪಾರ್ಟಮೆಂಟ ವೆಂಕಟೇಶನಗರ ಗುಲಬರ್ಗಾ ಇವರುಗಳ ದಿನಾಂಕ. 26.03.2014 ರಂದು ಬೆಳಿಗ್ಗೆ 6.00 ಗಂಟೆಯಿಂದ 9.00 ಗಂಟೆಯ ಅವಧಿಯಲ್ಲಿ ತಮ್ಮ ಮಾಡರ್ನ ಗ್ಯಾಸ ಡಿಸ್ಟ್ರಬೂಟನಲ್ಲಿ ಕೆಲಸ ಮಾಡುವ ಮಂಜುನಾಥ ತಂದೆ ನಾಗಪ್ಪ ಅಗಡಿ ಈತನು ಮನೆಯಲ್ಲಿಟ್ಟಿದ್ದ 1,30,500/- ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 April 2014

Gulbarga District Reported Crimes

ಅಪಘಾತ ಪ್ರಕರಣ :
ರಟಕಲ ಠಾಣೆ : ಶ್ರೀ ಭೀಮಶ್ಯಾ ತಂದೆ ಮೊಗಲಪ್ಪ ಕುರಬರ ಸಾ ಓಗಿಪೂರ ಮಂಡಲ ತಾಂಡೂರ ಜಿ : ರಂಗಾರೆಡ್ಡಿ  ರವರ ಮಗನಾದ  ದಶರಥ ಇತನು ನನ್ನ ಮಕ್ಕಳ ಹತ್ತಿರ ಹಾಗೂ ರಟಕಲ ರೇವಣಸಿದ್ದೇಶ್ವರ ದೇವಾಲಯಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಬಂದವನು ಮರಳಿ ತನ್ನ ದ್ವಿಚಕ್ರ ವಾಹನ ನಂ ಎಪಿ.09 ಕೆ. 9952 ನೇದ್ದರ ಮೇಲೆ ಬರುವಾಗ ಎದುರಿನಿಂದ ಬಂದ ಬಸ್ ನಂ ಕೆ.ಎ. 32 ಎಪ್ 1941 ನೇದ್ದರ ಚಾಲಕ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಎದರುಗಡೆಯಿಂದ ಬರುತ್ತಿದ್ದ ನನ್ನ ಮಗನಿಗೆ ಡಿಕ್ಕಿಪಡಿಸಿದರಿಂದ ನನ್ನ ಮಗ ಸ್ಥಳದಲ್ಲಿ ಸತ್ತಿದ್ದು ಸದರಿಯ ವನ ಸಾವಿಗೆ ಬಸ್ ಚಾಲಕನ ಅತೀವೇಗ ಮತ್ತು ನಿಷ್ಕಾಳಜಿತನದ ಚಾಲನೆಯೆ ಕಾರಣವಾಗಿರುತ್ತದೆ.  ಅಂತ ಸಲ್ಲಿಸಿದ ದೂರು ಸಾರಂಶದ ಮೇಲಿಂದ ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಶಂಕರಾವ ಪಾಟೀಲ  ಸಾ: ಬಿದ್ದಾಪೂರ ಕಾಲೊನಿ ಗುಲಬರ್ಗಾ ಇವರು ದಿನಾಂಕ: 19-03-2014 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನನ್ನ ದ್ವಿಚಕ್ರವಾಹನ ಸ್ಪ್ಲೆಂಡರ ಪ್ಲಸ್ ನಂ: ಕೆಎ-37 ಕ್ಯೂ- 5992 ಸಿಲ್ವರ ಕಲರ ಚೆಸ್ಸಿ ನಂ: MBLHA10EJ9HA05309  ಇಂಜಿನ ನಂ:HA10EA8HM07742 ಅ.ಕಿ. 20,000/- ರೂ ಕಿಮ್ಮತ್ತಿನ ದ್ದು ಗಾಡಿಯಲ್ಲಿ ಪೆಟ್ರೋಲ್ ಆಗಿದ್ದರಿಂದ ಶಕ್ತಿನಗರ  ಬಡಾವಣೇಯ ಹನುಮಾನ ಗುಡಿಯ ಹತ್ತಿರ ದ್ವೀಚಕ್ರ ವಾಹನ ನಿಲ್ಲಿಸಿ ನಮ್ಮ ಸಂಬಂಧಿಕರಾದ ಅಣ್ಣಾರಾವ ಕುಂಬಾರ ರವರ ಮನೆಗೆ ಹೋಗಿ ಬರುವಷ್ಟರಲ್ಲಿ ಗಾಡಿಯು ಸ್ಥಳದಲ್ಲಿ ಕಾಣಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತರಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಭೀಮಶಾ ತಂದೆ ಕರೇಪ್ಪ ಮರಗಮ್ಮ ಕೋಳಿ ಸಾಸಲಗರ ಹಾ:ವ ನಿಂಬರ್ಗಾ ಇವರು ದಿನಾಂಕ 01-04-2014 ರಂದು 1230 ಗಂಟೆಗೆ ನಾನು ಆಳಂದ ದಿಂದ ನಿಂಬರ್ಗಾಕ್ಕೆ ಬರುವಾಗ ಭೂಸನೂರ ಪ್ಯಾಕ್ಟರಿ ಪೆಟ್ರೋಲ್ ಪಂಪ ಹತ್ತಿರ ರಸ್ತೆಯ ಮೇಲೆ ನಿಂಬರ್ಗಾ ಕಡೆಯಿಂದ 1.ಗುಂಡಪ್ಪ ತಂದೆ ತಮ್ಮಣ್ಣ ಮರಗಮ್ಮ ಕೋಳಿ 2. ಯಲ್ಲಪ್ಪ ತಂದೆ ತಮ್ಮಣ್ಣ ಮರಗಮ್ಮ ಕೋಳಿ 3. ರಮೇಶ ತಂದೆ ತಮ್ಮಣ್ಣ ಮರಗಮ್ಮ ಕೋಳಿ 4. ಬಸಪ್ಪ ತಂದೆ ತಮ್ಮಣ್ಣ ಮರಗಮ್ಮ ಕೋಳಿ ರವರು ತಮ್ಮ ಮೋಟಾರ ಸೈಕಲ್ ಮೇಲೆ ಫೀರ್ಯಾದಿಯು ಸಾಕಿದ ಹಂದಿಗಳನ್ನು ಬೇರೆ ಕಡೆ ಬಿಡಲು ಅಂತಾ ಒಯುತ್ತಿರುವಾಗ ತಡೆದು ವಿಚಾರಿಸಿದ್ದಕ್ಕೆ ಆರೋಪಿತರು ಫೀರ್ಯಾದಿಗೆ ಅವಾಚ್ಯ ಶಬ್ದಗಳಿಂದ  ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಹಾಗೂ ಗುಪ್ತ ಗಾಯ ಪಡಿಸಿ ಜೀವದ ಭಯ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಂಕರ ತಂದೆ ನಾಮು ಚವ್ಹಾಣ ಸಾಃ ಲಕ್ಷ್ಮಿ  ನಾರಾಯಣ  ನಗರ  ಗುಲಬರ್ಗಾ   ದಿನಾಂಕ 31/03/2014  ರಂದು  ರಾತ್ರಿ1 0:30 ಗಂಟೆಗೆ ತನ್ನ ಮಗನಾದ ಆಕಾಶ ಈತನು ತಾನು ಕೆಲಸ ಮಾಡುವ  ಜೆ.ಡಿ.  ಕಂಪನಿಯ ಸಾಫ್ಟವೇರ ಇರುವ ಡೇಲ್  ಕಂಪನಿಯ ಲ್ಯಾಪಟಾಪ್ನಂ. E6430 I 7 ಅನ್ನು ಮೇಲಿನ ಮನೆಯಲ್ಲಿಟ್ಡು ಕೀಲಿ  ಹಾಕದೆ  ಕೆಳಗಿನ  ಮನೆಯಲ್ಲಿ ಬಂದು ಮಲಗಿದ್ದು ಇಂದು ದಿನಾಂಕ 01-04-2014  ರಂದು 08:00ಗಂಟೆಗೆ ನೋಡಲಾಗಿ  ಯಾರೋ ಕಳ್ಳರು  ಸದರಿ  ಲ್ಯಾಪಟಾಪ್ನ್ನು ಕಳ್ಳತನ  ಮಾಡಿಕೊಂಡು  ಹೋಗಿದ್ದು ಅದರ ಕಿಮ್ಮತ್ತು 1,10,000/- ರೂ ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.