POLICE BHAVAN KALABURAGI

POLICE BHAVAN KALABURAGI

24 March 2014

Gulbarga District Reported Crimes


ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ಬಾಜಿರಾವ ದಿವಟೆ ಸಾ : ಅಡಗಾಂವ ಖರಾತ ತಾ: ಮಜಲಗಾಂವ ಜಿ: ಖೇಡ ರವರ ಊರಿನ ಪಕ್ಕದಲ್ಲಿ ಇರುವ ಕಾರಿ ಗ್ರಾಮದ ಮಾಣಿಕ ತಂದೆ ರಾಮರಾವ ಗೋರೆ ಇವನು ಮುಕದಂ ಕೆಲಸ ಮಾಡುತ್ತಿದ್ದು, ನನಗೆ ಮತ್ತು ನನ್ನಂತೆ ನಮ್ಮ ಅಕ್ಕ ಪಕ್ಕದ ಹಳ್ಳಿಯವರನ್ನು ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲೆಯ ಅಫಜಲಪೂರ ತಾಲೂಕಿನ ಶ್ರೀ ರೇಣುಕಾ ಶುಗರ ಕಾರ್ಖಾನೆ ವತಿಯಿಂದ ರೈತರ ಕಬ್ಬು ಕಟಾವ ಮಾಡಲು ಕರೆದುಕೊಂಡು ಬಂದಿರುತ್ತಾನೆ. ನಾವೆಲ್ಲರು ನಮ್ಮ ಹೆಂಡತಿ ಮಕ್ಕಳೊಂದಿಗೆ ಸುಮಾರು 4-5 ತಿಂಗಳ ಹಿಂದೆ ಬಂದಿರುತ್ತೇವೆ. ಈಗ 2 ತಿಂಗಳ ಹಿಂದೆ ಸರ್ಜಾರಾವನು ತನ್ನ ಹೆಂಡತಿಗೆ ಆರಾಮಿಲ್ಲದ ಕಾರಣ ಅವಳನ್ನು ತಮ್ಮೂರಿಗೆ ಕಳುಹಿಸಿಕೊಟ್ಟಿರುತ್ತಾನೆ. ಘತ್ತರ್ಗಾ ಗ್ರಾಮದ ಸಿಮಾಂತರದ ಶ್ರೀ ನಾರಾಯಣರಾವ ಕುಲಕರ್ಣಿ ರವರ ಹೊಲದಲ್ಲಿ ಕಬ್ಬು ಕಟಾವು ಮಾಡುವ ಸಮಯದಲ್ಲಿ ನಾರಾಯಣರಾವ ಕುಲಕರ್ಣಿ ರವರ ಹೊಲದಲ್ಲಿ ಜೋಪಡಿಗಳು ಹಾಕೊಕೊಂಡಿದ್ದು ಅವರ ಕಬ್ಬು ಕಟಾವು ಮುಗಿದ ನಂತರ ಪಕ್ಕದ ಹೊಲಗಳಲ್ಲಿಯ ಕಬ್ಬು ಕಟಾವು ಮಾಡಿ ರಾತ್ರಿ ನಮ್ಮ ಜೋಪಡಿಗಳಲ್ಲಿ ವಾಸಿಸುತ್ತಿದ್ದೇವು. ದಿನಾಂಕ 16-03-2014 ರಂದು ಸಾಯಂಕಾಲ 5;30 ಗಂಟೆ ಸುಮಾರಿಗೆ ನಾವೆಲ್ಲರು ನಮ್ಮ ಜೋಪಡಿಗಳ ಮುಂದೆ ಇದ್ದಾಗ, ಸರ್ಜಾರಾಮನು ಸರಾಯಿ ಕುಡಿದು ಬಂದು ನಿತಿನ ಸಿರಸಟ್ ಇವನಿಗೆ ಬೈಯ್ಯುತ್ತಿದ್ದನು. ಆಗ ನಿತೀನನು `ಮಲಾ ಕಶಾಲಾ ಸಿವಿದಿಲಿ ತುಜ ಆಯಿಲಾ ತುಲ ಖಲಾಸ ಕರ್ತು ಅಂತಾ ಅಂದು ಒಂದು ಬಡಿಗೆಯಿಂದ ಸರ್ಜಾರಾವ ಇವನ ತಲೆಯ ಮೇಲೆ ಜೋರಾಗಿ ಹೊಡೆದು ಗಾಯ ಪಡಿಸಿದನು ನಂತರ ಎಡಗಡೆ ಪಕ್ಕೆಲುಬಿನ ಮೇಲೆ, ಕೈಗೆ ಹಾಗು ಮುಖದ ಮೇಲೆ ಅದೇ ಬಡಿಗೆಯಿಂದ ಹೊಡೆದನು, ಆಗ ಸರ್ಜಾರಾವ ಇವನು ನೆಲಕ್ಕೆ ಬಿದ್ದನು. ನಂತರ ನಾನು ಮತ್ತು ನಮ್ಮ ಮುಕದಂ ಮಾಣಿಕ ಹಾಗು ನಮ್ಮೊಂದಿಗೆ ಇದ್ದ ಇತರರು ಕೂಡಿ ಜಗಳ ಬಿಡಿಸಿದೆವು. ನಂತರ ಸರ್ಜಾರಾವ ತನ್ನ ಜಪಡಿಯಲ್ಲಿ ಹೋಗಿ ಮಲಗಿಕೊಂಡನು. ನಂತರ ದಿನಾಂಕ 17-03-2014 ರಂದು ಮಧ್ಯ ರಾತ್ರಿ 01;30 ಗಂಟೆ ಸುಮಾರಿಗೆ ಸರ್ಜಾರಾವ ವಾಂತಿ ಮಾಡಿಕೊಳ್ಳುತ್ತಿದ್ದನು. ಆಗ ಟ್ರ್ಯಾಕ್ಟರ್ ಚಾಲಕ ಖಂಡು ಹೋಳಕರ ಮತ್ತು ಗೋರಕ ಹಾಗು ಮಾಣಿಕ ಗೋರೆ ಇವರು ಸರ್ಜಾರಾವನನ್ನು ಉಪಚಾರ ಕುರಿತು ಘತರಗಾಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಬೇರೆಕಡೆಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಪುನಃ ಸರ್ಜಾರಾವನನ್ನು ಸಕ್ಕರೆ ಕಾರ್ಖಾನೆಯಲ್ಲಿರುವ ದವಾಖಾನೆಗೆ ಕರೆದುಕೊಂಡು ಬಂದು ಉಪಚಾರ ಮಾಡಿಸಿದ ನಂತರ ಕಾರಖಾನೆಯಲ್ಲಿಯೆ ಪೊಪಳೆ ಮಕಾದಂ ಈತನ ಕೋಣೆಯಲ್ಲಿ ಮಲಗಿಕೊಂಡನು. ಬೆಳಿಗ್ಗೆ ಮತ್ತೆ ಸರ್ಜಾರಾವನು ವಾಂತಿ ಮಾಡಿಕೊಂಡಿದ್ದರಿಂದ ಗೋರಕ ಮತ್ತು ಮಾಣಿಕ ಗೋರೆ ಇವರು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು, ರಕ್ತ ಮತ್ತು ಮೂತ್ರ ತಪಾಸಣೆ ಮಾಡಿ ಗೋಳಿ ಔಷಧಿ ಕೊಟ್ಟು ಸಾಯಂಕಾಲ ಕಳುಹಿಸಿಕೊಟ್ಟಿರುತ್ತಾರೆ. ಸರ್ಜಾರಾವನನ್ನು ಆಸ್ಪತ್ರೆಯಿಂದ ಕರೆದುಕೊಂಡು ರಾತ್ರಿ 9;30 ಗಂಟೆ ಸುಮಾರಿಗೆ ಕಾರ್ಖಾಯಲ್ಲಿರುವ ಪೊಪಳೆ ಮಕಾದಂ ಈತನ ಕೋಣೆಯ ಹತ್ತಿರ ಬಂದಾಗ ಸರ್ಜಾರಾವ ಇವನು ನಂದು ಮುಗಿತು ಅಂತಾ ಅಂದು ಕೆಳಗಡೆ ಕುಳಿತು ಅಲ್ಲಿಯೆ ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಪ್ರಕರಣ :
ಅಶೊಕ ನಗರ ಠಾಣೆ : ಶ್ರೀ ಭಾಷಾ ತಂದೆ ಗೊರಖನಾಥ ಚೌಗುಲೆ ಸಾ|| ಮ.ನಂ. 11-689 ಭಗತಸಿಂಗ ಚೌಕ ಹತ್ತಿರ ವಡ್ಡರಗಲ್ಲಿ ಗುಲಬರ್ಗಾ ರವರ ಮಗನಾದ ಶರಣಬಸಪ್ಪ ರವರು ಅಪ್ಪ ಕಾಲೇಜಿನಲ್ಲಿ ಎಂ.ಬಿ.ಎ ವಿದ್ಯಾಬ್ಯಾಸ ಮಾಡುವಾಗ ಉಷಾ ತಂದೆ ಸುಭಾಶ್ಚಂದ್ರ ರವರೊಂದಿಗೆ ಪ್ರಿತಿ ಮಾಡಿ ರಜಿಸ್ಟರ ಮದುವೆ ಮಾಡಿಕೊಂಡಿದ್ದು ಮದುವೆಯಾದ ನಂತರ ಅವರಿಗೆ ಇಬ್ಬರು ಮಕ್ಕಳಾಗಿರುತ್ತಾರೆ. ಈಗ ಒಂದು ವರ್ಷದ ಹಿಂದೆ ಸೊಸೆ ಉಷಾ ಇವಳು ಜಗಳ ಮಾಡಿಕೊಂಡು ತನ್ನ ತವರು ಮನೆಯಾದ ರಾಯಚೂರಿನ ಯರಮರಸಗೆ ಹೊಗಿರುತ್ತಾಳೆ ನಂತರ ದಿನಾಂಕ 05-03-2014 ರಂದು ನನ್ನ ಮಗ ಮಕ್ಕಳ ಪರೀಕ್ಷೆ ಇರುವದರಿಂದ ತನ್ನ ಹೆಂಡತಿ ಮಕ್ಕಳಿಗೆ ಕರೆಯಲು ಹೊದಾಗ ಕೇಸ ಮಾಡಿ ಜೈಲಿಗೆ ಕಳುಹಿಸಿರುತ್ತಾಳೆ. ಈಗ ನಾವು ಜಾಮಿನಿನ ಮೇಲೆ ಬಂದಿದ್ದು ದಿನಾಂಕ 23-03-2014 ರಂದು ಬೆಳಿಗ್ಗೆ 11 ಗಂಟೆಗೆ ನನ್ನ ಮಗನ ಹೆಂಡತಿಯ ತಾಯಿ ಸುಲೋಚನಾ ಗಂಡ ದಿ: ಸುಭಾಶ್ಚಂದ್ರ ತಮ್ಮ ಗೀರಿಶ ತಂದೆ ಸುಭಾಶ್ಚಂದ್ರ ಅಕ್ಕ ರಾಜೇಶ್ವರಿ ಗಂಡ ಮಹೇಶ ಅವಂತಿ, ಮತ್ತು ಅವರೊಂದಿಗೆ ಪ್ರಮೀಳಾಬಾಯಿ ಗಂಡ ವಿಜಯಕುಮಾರ, ವಿಜಯಕುಮಾರ ಮತ್ತು ಮಹೇಶ ಆವಂತಿ, ಇವರುಗಳು ನಮ್ಮ ಮನೆಗೆ ಬಂದು ಎಲ್ಲಿ ಇದ್ದಾನೆ ಶರಣ್ಯಾ,ಅಲ್ಲಿ ಉಷಾ ಮಕ್ಕಳಿಗಾಗಿ ಚಡಪಡಿಸುತ್ತಿದ್ದಾಳೆ ಇಲ್ಲಿ ಮಕ್ಕಳಿಗೆ ಇಟ್ಟುಕೊಂಡು ಕುಳಿತಿರಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಗೀರಿಶ ಇತನು ನನಗೆ ಕೈಹಿಂದ ಹೊಡೆಯಲು ಬಂದ ಪ್ರಮೀಳಾ ಇವಳು ಹೊಡಿ ನಮ್ಮ ಮಗಳಿಗೆ ಹಾಳ ಮಾಡ್ಯಾರ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಳು ವಿಜಯಕುಮಾರ ಇವನು ತನ್ನ ಕಾಲಲ್ಲಿಯ ಚಪ್ಪಲಿ ತೆಗೆದು ನನ್ನ ಮೇಲೆ ಹೊಡೆಯಲು ಏರಿ ಏರಿ ಬರುತ್ತಿದ್ದರು ಇನ್ನುಳಿದವರು ಹೊಲಸು ಹೊಲಸು ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಭೀಕು ತಂದೆ ಕೇಶು ಪವಾರ  ಸಾ: ನಾಗನಟಗಿ ಮೇಘಾನಾಯ್ಕ ತಾಂಡಾ ತಾ: ಶಾಹಪೂರ ಗುಲಬರ್ಗಾ  ರವರ ಚಿಕ್ಕ ಮಗನಾದ  ಗೇನು ಇತನು ಗುಲಬರ್ಗಾ ಯುನಿವರ್ಸಿಟಿಯಲ್ಲಿ ಎಂ. ಎಡ್‌  ವಿದ್ಯಾಭ್ಯಾಸ ಮಾಡಿಕೊಂಡು ಯುನಿವರ್ಸಿಟಿ ಹಾಸ್ಟೇಲದಲ್ಲಿ ಇರುತ್ತಾನೆ.  2-3  ದಿವಸದ ಹಿಂದೆ  ನಮ್ಮ ತಾಂಡಕ್ಕೆ ಬಂದಿದ್ದನು. ನಿನ್ನೆ ದಿನಾಂಕ 22/03/2014 ರಂದು ಮುಂಜಾನೆ ವೇಳೆಗೆ  ಗೇನು ಮತ್ತು ಗೊಪಾಲ ಪವಾರ ಇಬ್ಬರು ಗುಲಬರ್ಗಾಕ್ಕೆ ಹೊಗುತ್ತಿರುವುದಾಗಿ ಹೇಳಿ ಹೊಗಿದ್ದರು. ನಿನ್ನೆ ರಾತ್ರಿ ವೇಳೆಗೆ  ಗೊಪಾಲ ರವರು ಮರಳಿ ತಾಂಡಾಕ್ಕೆ ಬಂದಾಗ  ನಾನು ಗೇನು ಇತನ ಬಗ್ಗೆ ಕೇಳಿದಾಗ  ಹೇಳಿದೆನೆಂದರೆ  ನಾನು ಮತ್ತು  ಗೇನು ಇಬ್ಬರು  ಸಂಜೆ 7-30 ಗಂಟೆ ಸುಮಾರಿಗೆ ಗುಲಬರ್ಗಾ ಬಸ ಸ್ಟ್ಯಾಂಡ ಕ್ಕೆ ಬಂದು  ನಾನು ಶಾಹಪೂರ ಬಸ್ಸಿನಲ್ಲಿ ಕುಳಿತಿದ್ದು, ಆಗ ಗೇನು ಇತನು  ಶೌಚಾಲಯಕ್ಕೆ ಹೊಗಿ ಬರುವುದಾಗಿ ಹೇಳಿ ಹೊದನು.  ಅರ್ಧ ಗಂಟೆಯಾದರೂ ಬರಲಿಲ್ಲ. ಅವನ ಮೊಬೈಲ ನಂ. 7760751705 ಕ್ಕೆ  ಕರೆ ಮಾಡಿದಾಗ  ಸ್ವಿಚ್ಛ ಆಫ್‌ ಆಗಿತ್ತು. ಆಗ ನಾನು ಒಬ್ಬನೇ ತಾಂಡಾಕ್ಕೆ ಬಂದಿರುವುದಾಗಿ ಹೇಳಿದನು. ನಾವು ಇಲ್ಲಿಯ ವರೆಗೆ  ಅವನ ಮೊಬೈಲಿಗೆ ಕರೆ ಮಾಡಿದ್ದು ಸ್ವಿಚ್ಚ ಆಫ್‌ ಆಗಿರುತ್ತದೆ.  ಗುಲಬರ್ಗಾಕ್ಕೆ ಬಂದು ಹುಡುಕಿದರು ಸಿಕ್ಕಿರುವುದಿಲ್ಲಾ. ನನ್ನ ಮಗ ಗೇನು ಇತನು  ಗುಲಬರ್ಗಾ ಬಸ ನಿಲ್ದಾಣದಿಂದ ಕಾಣೆಯಾಗಿದ್ದು, ಇಂದು ಮುಂಜಾನೆ ವೇಳೆಗೆ ನನ್ನ ಹಿರಿಯ ಮಗನಾದ  ದಾಮು ರವರಿಗೆ ಫೋನ ಮಾಡಿ ನನಗೆ ದೂರ ಕರೆದುಕೊಂಡು ಹೊಗುತ್ತಿದ್ದಾರೆ ಎಂದು ಹೇಳಿ ಫೋನ ಕಟ್‌‌ ಮಾಡಿರುತ್ತಾನೆ. ಎಂದು ಪೂನಾದಿಂದ ನನ್ನ ಮಗ ಫೋನ ಮಾಡಿ ತಿಳಿಸಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

23 March 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಉಮಾಬಾಯಿ ಗಂಡ ನಾಗೇಂದ್ರ ಗಾಯಕವಾಡ ಸಾ: ಕಿಣ್ಣಿ ಅಬ್ಬಾಸ ತಾ: ಆಳಂದ ಇವರು ದಿನಾಂಕ:21-03-2014 ರಂದು 02;30 ಪಿ.ಎಂಕ್ಕೆ ತನ್ನ ಮೊಮ್ಮಗಳಾದ ಕುಶಾ ಇವಳು ಬಾಯಿಗೆ ಖಾರಾ ಹತ್ತಿದೆ ಅಂತಾ ಅಳುತ್ತಾ ಮನೆಗೆ ಬಂದಾಗ ತನ್ನ ಮೊಮ್ಮಗಳು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾಡಿದ ಬಿಸಿ ಊಟ ಮಾಡಿ ಅಡುಗೆಯಲ್ಲಿನ ಸಾಂಬರದಲ್ಲಿ  ಖಾರಾ ಜಾಸ್ತಿಯಾಗಿ ಬಾಯಿಗೆ  ಖಾರ ಹತ್ತಿದರಿಂದ ನಾನು 02;30 ಪಿ.ಎಂಕ್ಕೆ ಸದರಿ ಸರಕಾರಿ ಶಾಲೆಯ ಆವರಣದಲ್ಲಿ ಹೋಗಿ ಶಾಲೆಯಲ್ಲಿ ಅಡುಗೆ ಮಾಡುವ ಪುತಳಾಬಾಯಿ ಗಂಡ ಶಂಕರ ಇಂಡೆ ಸಾ: ಕಿಣ್ಣಿ ಅಬ್ಬಾಸ ಇವಳಿಗೆ ನೀವು ಅಡುಗೆ ಸಾಂಬಾರನಲ್ಲಿ ಖಾರಾ ಕಡಿಮೆ ಹಾಕಬೇಕು ನನ್ನ ಮೊಮ್ಮಗಳು ಕುಶಾ ಇವಳು ಬಾಯಿಯಲ್ಲಿ  ಖಾರಾ ಹೆಚ್ಚಿಗೆ ಆಗಿದೆ ಎಂದು ಅಳುತ್ತಾ ಮನೆಗೆ ಬಂದಿರುತ್ತಾಳೆ ಎಂದು ಕೇಳಿದಕ್ಕೆ ಸದರಿ ಪುತಳಾಬಾಯಿ ಇಂಡೆ ಇವಳು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ  ನಾವು ಅಡುಗೆಯಲ್ಲಿ ಖಾರಾ ಸರಿಯಾಗಿ ಹಾಕುತ್ತೇವೆ. ಶಾಲೆಯ ತನಕ ಬಂದು ಕೇಳತಿ ಅಂತಾ ಅಂದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ತಲೆಯಲ್ಲಿ ಕೂದಲು ಹಿಡಿದು ಜಗ್ಗಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸ್ತೇಷನ ಬಜಾರ ಠಾಣೆ : ಶ್ರೀಮತಿ ಸುಸಲಾಬಾಯಿ ಗಂಡ ಅರ್ಜುನ ಹತಗುಂದಿ ಸಾ: ದತ್ತ ನಗರ ಗುಲಬರ್ಗಾ ಇವರು ಈಗ ಸುಮಾರು ಎರಡುವರೆ ವರ್ಷ ಹಿಂದೆ ನಮ್ಮ ಪರಿಚಯವಿರುವ ಶಿವಲಿಂಗಪ್ಪಾ ಬೆಂಗಳೂರ ಇವರಲ್ಲಿ ನನ್ನ ಅಡಚಣೆ ಸಲುವಾಗಿ 2,00,000/- ರೂ ತೆಗೆದುಕೊಂಡಿದ್ದು ಅದರಲ್ಲಿ ಸ್ವಲ್ಪ ಹಣ ಕೊಟ್ಟಿದ್ದು ಇನ್ನೂ ಹಣ ಕೊಡುವುದು ಇದೆ. ಹೀಗಿರುವಾಗ ದಿನಾಂಕ 20/03/2014 ರಂದು 11:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಪರಿಚಯದವನಾದ ಕೀರಣ ಇವನ ಮೋಟಾರ ಸೈಕಲ ಮೇಲೆ ರಾಮ ಮಂದಿರ ಕಡೆಯಿಂದ ಮೋಹನ ಲಾಡ್ಜ ಕಡೆಗೆ ಬುರುವಾಗ ಪಿ&ಟಿ ಕ್ರಾಸ್ ಹತ್ತಿರ ಶಿವಲಿಂಗಪ್ಪಾ ಬೆಂಗಳೂರ ಇವರ ನನಗೆ ಕೂಗಿದರು ಆಗ ಕೀರಣ ಇವನು ಮೋಟಾರ ಸೈಕಲ ನಿಲ್ಲಿಸಿದನು. ಆಗ ಸದರಿ ಶಿವಲಿಂಗಪ್ಪಾ ಮತ್ತು ಅವನ ಹೆಂಡತಿ ನಾಗರತ್ನ ಕೂಡಿ ನನಗೆ ಕೊಡಬೇಕಾದ ಹಣ ಕೊಡು ಅಂತಾ ಹೇಳಿ ನಾಗರತ್ನ ಇವಳು ಸೀರೆ ಹಿಡಿದು ಜಬರದಸ್ತಿನಿಂದ ಎಳೆದಿದ್ದರಿಂದ ನನ್ನ ಮೈ ಮೇಲಿನ ಸೀರೆ ಬಿಚ್ಚಿತು ಆಗ ನಾಗರತ್ನ ಇವಳು ಸೀರೆ ಕೊಟ್ಟಿದ್ದು ಆಗ ಸೀರೆ ಉಟ್ಟಿಕೊಂಡು ನಂತರ ನನಗೆ ಜಬರದಸ್ತಿನಿಂದ ಯಾವುದೊ ಅಟೋದಲ್ಲಿ ಕುಡಿಸಿಕೊಂಡು ಕೌಶಿಕ ಲಾಡ್ಜನಲ್ಲಿ ಯಾವುದೊ ಒಂದು ರೂಮಿನಲ್ಲಿ ಒಯ್ದಿಟ್ಟನು. ಆಗ ಸದರಿ ಶಿವಲಿಂಗಪ್ಪಾ ಇವನು ಕೊಡಬೇಕಾದ ಹಣ ಕೊಡುತ್ತಿಲ್ಲಾ ರಂಡಿ, ಭೋಸಡಿ ಅಂತಾ ಬೈದು ಕೈಯಿಂದ ಮುಖದ ಮೇಲೆ ಹಾಗು ತಲೆಯ ಮೇಲೆ ಹೊಡೆದನು ಮತ್ತು ಕಾಲಿನಿಂದ ಬಲಗೈ ರಟ್ಟೆಗೆ ಒದ್ದನು. ಆ ದಿವಸ ರಾತ್ರಿ ನಾನು ಮತ್ತು ಶಿವಲಿಂಗಪ್ಪನ ಹೆಂಡತಿ ಮತ್ತು ಶಿವಲಿಂಗಪ್ಪಾ ಎಲ್ಲರೂ ಒಂದೇ ರೂಮಿನಲ್ಲಿ ಇದ್ದೆವು. ಮರುದಿವಸ ದಿನಾಂಕ 21/03/2014 ರಂದು 02:00 ಗಂಟೆ ಸುಮಾರಿಗೆ ಕಬಿನಾ ಲಾಡ್ಜಗೆ ಹೋಗಿ ಅಲ್ಲಿಯೆ ಉಳಿದುಕೊಂಡೆವು. ನಂತರ ಅರ್ಜುನ ಹತಗುಂದಿ ಇವನು ನಿನಗೆ ತೊಂದರೆ ಕೊಡು ಅಂತಾ ಹೇಳಿದ್ದರಿಂದ ನಾವು ನಿನಗೆ ಜಬರದಸ್ತಿನಿಂದ ಕರೆದುಕೊಂಡು ಬಂದಿದ್ದೆವೆ ಅಂತಾ ಹೇಳಿ ಕೈಯಿಂದ ಮತ್ತೆ ತಲೆಗೆ ಹೊಡೆದಿರುತ್ತಾನೆ ಮತ್ತು ನೀನು ಹಣ ಕೊಡದೆ ಇದ್ದರೆ ನಿನಗೆ ಮತ್ತು ನಿಮ್ಮ ಮಕ್ಕಳಿಗೂ ಸಹ ಬೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ|| ರಶ್ಮಿ ಗಂಡ ಡಾ|| ಆನಂದ ನಾಗಲಿಕರ ಸಾ : ಎಸ.-2 ಬ್ಯಾಗವಂತಿ ರೆಸಿಡೆನ್ಸಿ ಸಂಗಮೇಶ್ವರ ಕಾಲೋನಿ ಗುಲಬರ್ಗಾ ಇವರು  ಬೇಸಿಗೆ ರಜೆಯಿದ್ದ ಪ್ರಯುಕ್ತ ನನ್ನ ಮಕ್ಕಳೊಂದಿಗೆ ತವರು ಮನೆ ಬಳ್ಳಾರಿಗೆ ಹೋಗಿದೆ.  ನಿನ್ನೆ ದಿನಾಂಕ 21 ಮಾರ್ಚ 2014 ರಂದು ಗುಲಬರ್ಗಾಕ್ಕೆ ಮರಳಿ ಬರುವಾಗ ನನ್ನ ಮೈಮೆಲೆ ಇದ್ದ ಬಂಗಾರದ ಒಡವೆಗಳನ್ನು ವೇನೆಟಿ ಬ್ಯಾಗಿನಲ್ಲಿ ಹಾಕಿದ್ದು ಮತ್ತು ಲಗೇಜ ಬ್ಯಾಗದೊಂದಿಗೆ ರಾತ್ರಿ 9-30 ಗಂಟೆ ಸುಮಾರಿಗೆ ರಿಸರ್ವೇಶನ ಟಿಕೇಟ ತೆಗೆಸಿಕೊಂಡು ಬಳ್ಳಾರಿಯಿಂದ ಸುಹಾಸ ಬಸ್ಸ ಸಂಖ್ಯೆ:ಕೆಎ-32 ಎಪ್-1809 ರಲ್ಲಿ ಪ್ರಯಾಣ ಮಾಡುವಾಗ ವೆನೇಟ ಬ್ಯಾಗ ಮತ್ತು ಲಗೇಜ ಬ್ಯಾಗಯನ್ನು ಶೀಟ ಕಾಲ ಕೆಳಗಡೆ ಇಟ್ಟಿದೆ.  ಬೆಳಗ್ಗೆ  ಗುಲಬರ್ಗಾಕ್ಕೆ ಬಂದು ಇಳಿದಿದ್ದು.  ನನ್ನ ಗಂಡ ಆನಂದ ರವರ ಕಾರ ತೆಗೆದುಕೊಂಡು ಬಂದಿದ್ದು.  ಮನೆಗೆ ಹೋಗಿ ವೇನೆಟಿ ಬ್ಯಾಗನಲ್ಲಿಟ್ಟಿದ ಬಂಗಾರದ ಒಡವೆಗಳನ್ನು ನೋಡಿದಾಗ ಇರಲಿಲ್ಲಾ.  ಬಂಗಾರ ಆಭರಣಗಳು ಒಟ್ಟು  18 ತೊಲೆ ಬಂಗಾರದ ಒಡವೆಗಳು ಅದರ ಕಿಮ್ಮತ್ತು 5,20,000=00 ಇರಬಹುದು.ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ನನ್ನ ಪಕ್ಕದ ಸಿಟ್ಟಿನಲ್ಲಿ ಇಬ್ಬರು ಹೆಂಗಸರು, ಒಬ್ಬ ಗಂಡಸು ಕೆದರಿದ ಕೂದಲುವುಳ್ಳವರು ಕುಳಿತಿದರು. ಅವರ ಹಿಂದಿನ ಸಿಟಿನಲ್ಲಿ ಇಬ್ಬರು 25-35 ವಯಸ್ಸಿನವರು ಬಳ್ಳಾರಿಯಿಂದ ಗುಲಬರ್ಗಾಕ್ಕೆ ಟೀಕೆಟ ತೆಗೆಸಿದ್ದು ನಡುವೆ ಲಿಂಗಸೂರಿನಲ್ಲಿ ಇಳಿದಿರುತ್ತಾರೆ. ಅವರ ನನ್ನ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 22-03-2014 ರಂದು 1400 ಗಂಟೆಗೆ ಜವಳಿ (ಡಿ) ಗ್ರಾಮದ ಹುನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂಧಿ ಮತ್ತು ಪಂಚರೊಂದಿಗೆ ಜವಳಿ (ಡಿ) ಗ್ರಾಮಕ್ಕೆ ಹೋಗಿದ್ದು ಆ ವೇಳೆಗೆ ಮಾನ್ಯ ಕೆ.ಎಸ್. ಹಟ್ಟಿ ಸಿಪಿಐ ಆಳಂದ ರವರು ಸಹ ಅಲ್ಲಿಗೆ ಬಂದಿದ್ದು ಅವರ ನೇತೃತ್ವದಲ್ಲಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮರೆಯಾಗಿ ನಿಂತು ನೋಡಲಾಗಿ 05 ಜನ ವ್ಯಕ್ತಿಗಳು ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 1430 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಪಿಐ ಸಾಹೇಬರುಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂಧಿ ಜನರು ದಾಳಿ ಮಾಡಿ 1. ಸಿದ್ರಾಮಯ್ಯ ತಂದೆ ಮಲ್ಲಯ್ಯ ಹಿರೇಮಠ, 2. ಮಲ್ಲಪ್ಪ ತಂದೆ ಮೈಲಾರಿ ಗೌರವಗೋಳ 3. ಸುರೇಶ ತಂದೆ ಭೀಮರಾವ ಶಿರವಾಳ 4.  ಶ್ರೀಶೈಲ ತಂದೆ ಬಸವರಾಜ ಉಡಗಿ 5.  ಗುರುಶರಣ ತಂದೆ ದತ್ತಪ್ಪ ಕೊಡ್ಲ ಹಂಗರಗಾ, ಸಾ|| ಎಲ್ಲರೂ ಜವಳಿ(ಡಿ) ರವರನ್ನು ಹಿಡಿದು ಸದರಿಯವರಿಂದ ಒಟ್ಟು 2330/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 22-03-2014 ರಂದು 1130 ಗಂಟೆಗೆ ದೇವಂತಗಿ ಗ್ರಾಮದ ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ  ದೇವಂತಗಿ ಗ್ರಾಮಕ್ಕೆ ಹೋಗಿದ್ದು ಆ ವೇಳೆಗೆ ಮಾನ್ಯ ಕೆ.ಎಸ್. ಹಟ್ಟಿ ಸಿಪಿಐ ಆಳಂದ ರವರು ಸಹ ಅಲ್ಲಿಗೆ ಬಂದಿದ್ದು ಅವರ ನೇತೃತ್ವದಲ್ಲಿ ಗ್ರಾಮದ ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ 04 ಜನ ವ್ಯಕ್ತಿಗಳು ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 1. ಗುಂಡೇರಾವ ತಂದೆ ಅಮೃತರಾವ ಪೊಲೀಸ ಪಾಟೀಲ 2.ಪರಮೇಶ್ವರ ತಂದೆ ಪಂಡೀತರಾವ ಮಾಲಿಪಾಟೀಲ 3. ಗುಂಡೇರಾವ ತಂದೆ ಬಲವಂತಪ್ಪ ಮೂಲಗೆ 4. ಬೀರಪ್ಪ ತಂದೆ ಮೈಲಾರಿ ಅಂಕಲಗಿ ಸಾ|| ಎಲ್ಲರೂ ದೇವಂತಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 15110/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.