POLICE BHAVAN KALABURAGI

POLICE BHAVAN KALABURAGI

26 January 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 25-01-2014  ರಂದು ಸಾಯಂಕಾಲ 5-10 ಗಂಟೆಗೆ ಗೊಬ್ಬುರ(ಬಿ) ಗ್ರಾಮದ ಎಸ್.ಬಿ.ಐ. ಬ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ನಾನು ಮತ್ತು ಸಿಬ್ಬಂದಿ ಹಾಗು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತಉ ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 1. ಪ್ರಶಾಂತ ತಂದೆ ಕಲ್ಯಾಣರಾವ ಪೊಲೀಸ ಪಾಟೀಲ 2. ಅಸ್ಪಕ ತಂದೆ ಖಾಜಾಸಾಬ ವಟವಟಿ ಸಾ||ಗೊಬ್ಬೂರ[ಬಿ] 3.  ಮಹಿಬೂಬಸಾಬ ತಂದೆ ಅಬ್ದುಲ ಶಕ್ಯೂರ  ಸ್ಟೇಷನ ಸಾ|| ಗೊಬ್ಬೂರ[ಬಿ] 4. ಸಾಯಬಣ್ಣ ತಂದೆ ಬೀಂಶ್ಯಾ ಬೆಡಿ ಸಾ|| ಬೈರಾಮಡಗಿ  ನಾಲಕ್ಉ ಜನರನ್ನು ಹಿಡಿದು ಅವರಿಂದ  ಒಟ್ಟು 1760=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಘಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಆಳಂದ ಠಾಣೆ : ಡಾ|| ಸುಧಾಕರ ಬಿಎಸ್ ಪಿಎಸ್‌ಐ ಅಬಕಾರಿ ಜಾರಿ & ಲಾಟರಿ ನಿಷೇಧ  ವಿಭಾಗ ಗುಲ್ಬರ್ಗಾ ರವರು ದಿನಾಂಕ 24-01-2014 ರಂದು 5 ಪಿಎಮ್‌ಕ್ಕೆ ಆಳಂದ ತಾಲೂಕಿನ ಜವಳಗಾ (ಜೆ) ಗ್ರಾಮದಿಂದ ಭಾತ್ಮೀ ಬಂದ ಮೇರೆಗೆ ನಾನು ಪಂಚರಿಗೆ ಕರೆಯಿಸಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಜೂಜಾಟ ಆಡುತ್ತಿದ್ದ ಸಾರ್ವಜನಿಕರು ನಮ್ಮನ್ನು ನೋಡಿ ಓಡಿ ಹೋದರು, ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದ ಅವನ ಹೆಸರು ಕಲ್ಲಪ್ಪಾ ತಂದೆ ಗುರುಲಿಂಗಪ್ಪಾ ಚಿಂಚೋಳಿ ವಯಾ|| 22 ಉ|| ಬೇಕಾರ ಸಾ|| ಜವಳಗಾ (ಜೆ) ತಾ|| ಆಳಂದ ಅವನ ಬಳಿ 1. 4 ಮಟಕಾ ನಂಬರದ ಚೀಟಿಗಳು ಅಂ ಕಿ 0000 2. ಒಂದು ಬಾಲ ಪೆನ್ ಅಂ ಕಿ 5 ರೂ 3. ನಗದು ಹಣ 2840 ರೂ  4. ಕಪ್ಪು ಬಣ್ಣದ ಸ್ಯಾಮಸಂಗ ಮೋಬಾಯಿಲ್ ಅಂ ಕಿ 1500 ರೂ 5. ಪ್ಲಾಟಿನಂ ಕೆಂಪು ಬಣ್ಣದ ಮೋ ಸೈಕಲ್ ನಂ ಎಮ ಹೆಚ್‌ 24 ಆರ್ 6475 ಅಂ ಕಿ 20000/- ಹೀಗೆ ಒಟ್ಟು 24,345/- ರೂ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ಮಡಿವಾಳಪ್ಪ ತಂದೆ ಶರಣಪ್ಪ ಮಾಳಿ ಸಾ : ತ್ರಿಪರಾಂತ ತಾ : ಬಸವಕಲ್ಯಾಣ ಜಿ :  ಬೀದರ ರವರು ಒಬ್ಬ  ಆರೋಪಿ ಹಾಗೂ ಮಾಲು ಸಮೇತ ಠಾಣೆಗೆ ಬಂದು ಲಿಖಿತ ಪಿರ್ಯಾದಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶ ಏನೆಂದರೆ ದಿನಾಂಕ 25-01-2014 ರಂದು ರಾತ್ರಿ 10 ಗಂಟೆಗೆ ಎ.ಪಿ.ಎಂ.ಸಿ ಕಟ್ಟಡದಲ್ಲಿ ನಾನು ಮಲಗಿಕೊಂಡಿದ್ದು ದಿನಾಂಕ 26-01-2014ರಂದು ಸುಮಾರು 1 ಎ.ಎಂಕ್ಕೆ ಒಬ್ಬ ವ್ಯಕ್ತಿ ಎ.ಪಿ.ಎಂ.ಸಿ ಬಿಲ್ಡಿಂಗದಲ್ಲಿ ಬಂದು ಕಬ್ಬಿಣದ ತುಕಡಿಗಳನ್ನು (ಕಟ್ಟಡದ ಸಾಮಾನುಗಳು) ಒಂದು ಚಿಲದಲ್ಲಿ ಹಾಕಿಕೊಂಡು ಹೊಗುತ್ತಿದ್ದಾಗ ಶಬ್ದವಾಗಿರುವದರಿಂದ ನನಗೆ ಎಚ್ಚರವಾಗಿದ್ದು ಎದ್ದು ನೋಡಲು ಆ ವ್ಯಕ್ತಿ ಒಂದು ಚಿಲದಲ್ಲಿ ಕಬ್ಬಿಣ ಸಾಮಾನು ತೆಗೆದುಕೊಂಡು ಹೊಗುತ್ತಿದ್ದು ಅವನನ್ನು ಯಾರು ನೀನು ಎಂದು ಕೇಳಲು ಓಡಿ ಹೊಗುತ್ತಿದ್ದು ಆಗ ನಾನು ಬಾಜು ಬಿಲ್ಡಿಂಗದಲ್ಲಿ ಇದ್ದ ವಿಶ್ವನಾಥ ಇವರಿಗೆ ಕಳ್ಳ ಬಂದಿದ್ದಾನೆ ಬರ್ರಿ ಅಂತಾ ಚಿರಿದಾಗ ಆಗ ಅವರು ಬಂದಿದ್ದು ನಾನು ಅವರು ಕೂಡಿ ಕಳ್ಳ ಕಳ್ಳ ಅಂತ ಆತನ ಹಿಂದೆ ಬೆನ್ನು ಹತ್ತಿದಾಗ ಅಲ್ಲೆ ಎಂ.ಎಸ್.ಕೆ ಮಿಲ್ ಸ್ಟಾಫ್ ಕ್ವಾರ್ಟಸದಲ್ಲಿ ಇದ್ದ ಅಶೋಕ, ಅರವಿಂದ, ಪ್ರಶಾಂತ ರವರು ಬಂದು ಕತ್ತಲಲ್ಲಿ ಓಡಿ ಹೊದ ಕಳ್ಳನಿಗೆ ಹುಡುಕುತ್ತಿದ್ದಾಗ ಬಸವರಾಜ ಕಲಶೇಟ್ಟಿ ರವರ ಬಿಲ್ಡಿಂಗ ಮೇಲೆ ಕಳ್ಳ ಓಡಿ ಹೊಗಿದ್ದು ಬಿಲ್ಡಿಂಗ ಮಾಲಿಕರಾದ ಬಸವರಾಜ ಕಲಶೇಟ್ಟಿ ಅವರಿಗೆ ಪೊನ ಮಾಡಿ ಕರೆಯಿಸಿ ಬಿಲ್ಲಡಿಂಗ ಮೇಲಿದ್ದ ಕಳ್ಳನಿಗೆ ಕಳ್ಳತನ ಮಾಡಿದ ಕಬ್ಬಿಣದ ಸಣ್ಣ ರಾಡುಗಳಿರುವ ಚಿಲದೊಂದಿಗೆ ಹಿಡಿದುಕೊಂಡು ಎಲ್ಲರು ಕೂಡಿ ಕಳ್ಳನಿಗೆ ವಿಚಾರಿಸಲಾಗಿ ಆತನ ಹೆಸರು ಖಲೀಲ ತಂದೆ ಮಹೆಮೂದ ಲೊಹಾರ ಸಾ|| ಟಿಪ್ಪುಸುಲ್ತಾನ ಚೌಕ ಜೇವರ್ಗಿ ಅಂತ ತಿಳಿಸಿದನು ಆಗ ನಾವೆಲ್ಲರು ಕೂಡಿ ಕಳ್ಳನಿಗೆ ಮಾಲು ಸಮೇತವಾಗಿ ಪೊಲೀಸ್ ಠಾಣೆಗೆ ತಂದು ಕೊಟ್ಟಿರುತ್ತೆವೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಗ್ರಾಮೀಣ ಠಾಣೆ : ಶ್ರೀ ದಸ್ತಗಿರ ತಂದೆ ಹುಸೇನ್‌ ಸಾಬ್‌ ಚಿಂಚೋಳ್ಳಿ ಸಾ: ಭೀಮಳ್ಳಿ ತಾ: ಜಿಲ್ಲಾ ಗುಲಬರ್ಗಾ ಇವರ ತೋಟದ ಹೊಲ ಸರ್ವೇ ನಂ: 7ರಲ್ಲಿ ಹನಿ ನೀರಾವರಿ ಸಲುವಾಗಿ 16 ಎಂಎಂ 10 ಬಂಡಲ್‌ ಡ್ರೀಪ್‌‌ ಪೈಪುಗಳು ಇಟ್ಟಿದ್ದು ಸದರಿ ಪೈಪುಗಳು ದಿನಾಂಕ: 10-01-2014 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರ ನೋಡಲಾಗಿ ಸದರಿ ಪೈಪುಗಳು ದಿನಾಂಕ: 10-01-2014 ರಂದು ರಾತ್ರಿ 0100 ಗಂಟೆಯಿಂದ 0500 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು ಸದರಿ ಪೈಪುಗಳು ಅಂದಾಜು ಕಿಮ್ಮತ್ತು 2,00,000/- ರೂ ಆಗುತ್ತಿದ್ದು ಪಿರ್ಯಾದಿದಾರ ಯಾರು ಕಳವುಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಮತ್ತು ಎಲ್ಲಾ ಕಡೆ ಹುಡುಕಾಡಲು ಇಂದು ದಿನಾಂಕ: 25-01-2014 ರಂದು ತಿಳಿದುಬಂದಿದ್ದೇನೆಂದರೆ ಕಾಂತಪ್ಪ ತಂದೆ ಅಪ್ಪಣ್ಣ ಸಾ: ಭೀಮಳ್ಳಿ ಈತನ ಹೊಲದಲ್ಲಿ ನಮ್ಮ 16 ಎಂಎಂ 19 ಡ್ರಿಪ್ಸ್‌‌ ಪೈಪುಗಳು  ಹೊಲದಲ್ಲಿ ಹೂಳಿ ಹಾಕಿದ್ದು ನೋಡಿರುತ್ತೇವೆ, ಮತ್ತು ಇನ್ನೂಳಿದ ಪೈಪುಗಳು ಯಾರು ಕಳವು ಮಾಡಿದ್ದಾರೆ ಎಂಬುದರ ಬಗ್ಗೆ ಗೊತ್ತಾಗಿರುವುದಿಲ್ಲ. ಕಾರಣ ನಮ್ಮ ತೋಟದ ಹೊಲದಲ್ಲಿ ಹಾಕಿದ್ದ 10 ಬಂಡಲ್‌ ಡ್ರಿಪ್ಸ್‌ ಪೈಪುಗಳು ಅ.ಕಿ 2,00,000/- ರೂ ಬೆಲೆ ಬಾಳುವ ಸಾಮಾನು ಕಳವು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷತನದಿಂದ ಅಪಘಾತ ಪ್ರಕರಣ :
ಎಮ್.ಬಿ. ನಗರ ಠಾಣೆ : ಶ್ರೀ ಮಹಿಬೂಬಸಾಬ ತಂದೆ ಮಂಜಲೆ ಸಾಬ ಘಾಣೆವಾಲೆ ಸಾಃ ಪಸ್ತಾಪೂರ ತಾಃ ಚಿಂಚೋಳಿ ಹಾವಃ ಆಜಾದಪೂರ ಗುಲಬರ್ಗಾ ರವರಿಗೆ ದಿನಾಂಕಃ 25/01/2014 ರಂದು 01:00 ಪಿ.ಎಂ. ಕ್ಕೆ ಮಹ್ಮದ ಗೌಸ್ ಇವರು ಫೋನ್ ಮಾಡಿ ಬಸವೇಶ್ವರ ಆಸ್ಪತ್ರೆಗೆ ಬರಲು ತಿಳಿಸಿದ ಮೇರೆಗೆ 02:30 ಪಿ.ಎಂ. ಕ್ಕೆ ಬಸವೇಶ್ವರ ಆಸ್ಪತ್ರೆಗೆ ಬಂದು ಮಹ್ಮದ ಗೌಸ ಇತನಿಗೆ ವಿಚಾರಣೆ ಮಾಡಲಾಗಿ ಡಾಃ ನಿತಿನ್ ತಂದೆ ದಿಲಿಪ್ ಸಿಂಗ್ ಠಾಕೂರ ಇವರು ನಮಗೆ 09:00 ಗಂಟೆಗೆ ಕೆಲಸಕ್ಕೆ ಕರೆದುಕೊಂಡು ಹೋಗಿ ಅವರ ಮನೆಯ ಮುಂದೆ ನಿಂತಿರುವ ಲಾರಿ ನಂ. RJ 19 GB 2504 ನೇದ್ದರಲ್ಲಿನ ಮಾರ್ಬಲ್ ಕಲ್ಲುಗಳನ್ನು ಇಳಿಸಲು ಹಚ್ಚಿದರು. ಆಗ ನಾವು ಮಾರ್ಬಲ್ ಕಲ್ಲುಗಳು ಬಹಳ ದೊಡ್ಡ ಪ್ರಮಾಣದಲ್ಲಿವೆ ಅಂತಾ ಅಂದಾಗ ಲಾರಿ ಚಾಲಕ ಜಯರಾಮ ಇತನು ಇಂತಹ ಎಷ್ಟೋ ಲೋಡಗಳು ನಾವು ಇಳಿಸಿರುತ್ತೇವೆ ಬೇಗ ಬೇಗ ಇಳಿಸಿ ಅಂತಾ ಅಂದಿದ್ದು ಆಗ ನಾವು ಸದರಿ ಚಾಲಕನಿಗೆ ಸಮತಟ್ಟಾದ ಜಾಗದಲ್ಲಿ ನಿಲ್ಲಿಸು ಅಂತಾ ಹೇಳಿದೇವು. ಆಗ ಸದರಿ ಚಾಲಕನು ಸರಿಯಾದ ಜಾಗದಲ್ಲಿ ನಿಲ್ಲಿಸಿರುತ್ತೇನೆ ಬೇಗ ಇಳಿಸಿರಿ ಎಂದು ನಮಗೆ ದಬಾಯಿಸಿರುತ್ತಾನೆ. ಸದರಿ ಲಾರಿಯಲ್ಲಿದ್ದ ಮಾರ್ಬಲ್ ಕಲ್ಲುಗಳನ್ನು ಇಳಿಸುತ್ತಿರುವಾಗ ಒಮ್ಮೇಲೆ ಸುಮಾರು 10-15 ಕಲ್ಲುಗಳು ಮಹ್ಮದ ಇಸ್ಮಾಯಿಲ್ ಇತನ ಎದೆಯ ಮೇಲೆ ಬಿದ್ದು ಸದರಿಯವನು ಉಸಿರು ಗಟ್ಟಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಸದರಿ ಘಟನೆ ಸಂಭಂವಿಸಿದಾಗ ಅಂದಾಜು 11:00 ಎ.ಎಂ. ಆಗಿತ್ತು. ಸದರಿ ಘಟನೆಯಲ್ಲಿ ಸಿದ್ದು ಇತನಿಗೆ ಬಲಗೈಗೆ, ಶರಣಗೌಡ ಇತನಿಗೆ ಟೊಂಕದ ಹತ್ತಿರ, ಲಾರಿ ಚಾಲಕನಾದ ಜಯರಾಮ ಇತನಿಗೆ ಎಡಗೈಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಫತ್ತುಸಾಬ ತಂದೆ ಹುಸೇನಸಾಬ ಪೈಲವಾನ ಸಾ: ಇಟಗಾ(ಕೆ)  ದಿನಾಂಕ 24-01-2014 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನನ್ನ ಮಗ ಮೈನೋದ್ದೀನ ಈತನು ನಮ್ಮೂರಿನ ರಾಜ ಅಹ್ಮದ ಗುತ್ತಿಗೆದಾರರಲ್ಲಿ ಗುಲಬರ್ಗಾದಲ್ಲಿ ಕೆಲಸಕ್ಕಾಗಿ ನಮ್ಮ ಅಣ್ಣ ತಮ್ಮಕೀಯ ಬಾಬು ಫೈಲವಾನ, ಹುಸೇನಸಾಬ ಫೈಲವಾನ ಇವರೊಂದಿಗೆ ಹೋಗಿ ಸಾಯಂಕಾಲ ಮನೆಗೆ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ.   ನಾನು ರಾತ್ರಿ 9 ಗಂಟೆಗೆ ಮನೆಯಲ್ಲಿ ಇದ್ದಾಗ ನಮ್ಮ ಅಣ್ಣತಮ್ಮಕಿಯ ಬಾಬು ಪೈಲವಾನ ಈತನು ಫೊನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಮೈನೊದ್ದೀನ ಇಬ್ಬರು ಕೂಡಿ ಗುಲಬರ್ಗಾದಿಂದ ಕೆಲಸ ಮುಗಿಸಿಕೊಂಡು ನಮ್ಮೂರಿಗೆ ಟಂ ಟಂ ಮೂಲಕ ಬರುವಾಗ ರಾಷ್ಟ್ರೀಯ ಹೆದ್ದಾರಿ 218 ರ ರಸ್ತೆ ಗುಲಬರ್ಗಾ – ಜೇವರ್ಗಿ ರಸ್ತೆಯ ಮೇಲೆ ನಂದಿಕೂರ ತಾಂಡಾದ ಹತ್ತಿರ  ರಾತ್ರಿ 08-30 ಗಂಟೆಯ ಸುಮಾರಿಗೆ ಏಕಿ ಮಾಡಲು ಬಸ್ ನಿಲ್ದಾಣದ ಹತ್ತಿರ ಟಂ ಟಂ ನಿಲ್ಲಿಸಿದ್ದು, ಟಂ ಟಂ ದಿಂದ  ನಾನು ಮತ್ತು ಮೈನೊದ್ದೀನ ಇಳಿದ್ದೇವು. ಮೈನೊದ್ದೀನ ಈತನು  ಏಕಿ ಮಾಡಲು ಸ್ವಲ್ಪ ಮುಂದೆ ಹೋಗಿ ಏಕಿ ಮಾಡಿ ನನ್ನ ಕಡೆಗೆ ಬರುವಾಗ ಜೇವರ್ಗಿ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರೋಡಿನ ಎಡಗಡೆ ಸೈಡಿಗೆ ಬಂದು ನಡೆದುಕೊಂಡು ಬರುತ್ತಿದ್ದ ಮೈನೊದ್ದೀನ ಈತನಿಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆ. ಅಪಘಾತ ಪಡಿಸಿದ ಇನೊವಾ ಕಾರ ನಂಬರ ನೋಡಲಾಗಿ ಕೆಎ-05 ಎಮ್ ಎಫ್-6223 ನೇದ್ದು ಇದ್ದು ಅದರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ನಿಮ್ಮ ಮಗನ ಮೃತ ದೇಹವು ಫರಹತಾಬಾದ ಪೊಲೀಸರು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾ ತಗೆದುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 25-01-14 ರಂದು  ಮಧ್ಯಾಹ್ನ 1-30 ಗಂಟೆ ಸುಮಾರಿಗೆ  ಕಲ್ಯಾಣರಾ ವ ತಂದೆ ಗುಂಡಪ್ಪ ಓಕಳಿ ಇವರು  ತನ್ನ ಹೊಂಡಾ ಸೈನ ಕೆಎ 32 ಇಸಿ 3341 ನೇದ್ದರ ಮೇಲೆ ಕುಳಿತುಕೊಂಡು ಗುಲಬರ್ಗಾದಿಂದ  ಓಕಳಿ ಕಡೆ ಅತಿವೇಗದಿಂದ  ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹೊರಟಿದ್ದು, ಕಪನೂರ ಬ್ರೀಡ್ಜ  ದಾಟಿ ಸ್ವಲ್ಪ ಮುಂದೆ  ಹೊರಟಾಗ ವೇಗದ ಆಯ ತಪ್ಪಿ ತನ್ನಷ್ಟಕ್ಕೆ  ತಾನೇ ಸ್ಕಿಡ ಆಗಿ ಬಿದ್ದಿದ್ದರಿಂದ ಭಾರಿ ರಕ್ತಗಾಯ  ಮತ್ತು ಗುಪ್ತಗಾಯಗಳಾದ ಬಗ್ಗೆ ಶ್ರೀ ರಮೇಶ ತಂದೆ ಗುಂಡಪ್ಪ ಓಕಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಅಮೃತ ತಂದೆ ಮಕಲು ಪಾರ್ದಿ ಸಾ: ಶೇಕಾಪೂರ ತಾಂಡ ರವರು ದಿನಾಂಕ 21-01-2014 ರಂದು ತನ್ನ ಕುರಿಗಳನ್ನು ಮೇಯಿಸಿಕೊಂಡು ಬರುವ ಕುರಿತು ಮುಂಜಾನೆ ಗುಳ್ಳೊಳಿ ಗ್ರಾಮ ಕಡೆಗೆ ಹೊಲಗಳಿಗೆ ಹೋಗಿ ಕುರಿ ಮೈಯಿಸಿಕೊಂಡು ಪೆರತ ನಮ್ಮ ತಾಂಡಾದ ಕಡೆಗೆ ಸಾಯಾಂಕಾಲ 7 ಗಂಟೆ ಸುಮಾರಿಗೆ ಬರುವಾಗ ಶೇಕಾಪೂರ ಗ್ರಾಮದ ಕ್ರಾಸ ಹತ್ತಿರ ಬರುವಾಗ ಎದುರಿನಿಂದ ಒಂದು ಕಂದು ಬಣ್ಣದ ಸ್ಕೂಟರ ಅದರ ಚಾಲಕನು ಸದರಿ ಸ್ಕೂಟರನ್ನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ಓಡಿಸುತ್ತಾ ಬಂದವನೆ ನನ್ನ ಎಡಗಾಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಫಘಾತ ಮಾಡಿದ್ದು ನಾನು ಕೆಳಗೆ ಬಿದ್ದೇನು. ನಂತರ ವಿಚಾರಿಸಲಾಗಿ ನನಗೆ ಅಫಘಾತವನ್ನು ಉಂಟು ಮಾಡಿದವನ ಹೆಸರು ಜೇಮಿಲ ಅಹ್ಮದ ಜೆರ್ದಿ ಸಾ: ಆಳಂದ ಆತನು ಚಲಾಯಿಸಿದ ದ್ವಿ ಚಕ್ರ ವಾಹನ ಹೊಂಡಾ ಎಕ್ಟಿವಾ ನಂ ಕೆಎ 26 ಎಲ್‌ 3575 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಭಾರತಾಬಾಯಿ ಗಂಡ ವಿಜಯಕುಮಾರ ಚವ್ಹಾಣ ಸಾ|| ಚವಡಾಪೂರ ತಾಂಡಾ ಹಾ ವ|| ಹೊದಲೂರ ತಾಂಡಾ ತಾ|| ಆಳಂದ ರವರಿಗೆ ದಿನಾಂಕ 26/02/2012 ರಂದು ಅಫಜಲಪೂರ ತಾಲೂಕಿನ ಚವಡಾಪೂರ ತಾಂಡಾದ ವಿಜಯಕುಮಾರ ತಂದೆ ಪಾಂಡು ಚವ್ಹಾಣ ರವರೊಂದಿಗೆ ನಮ್ಮ ತಂದೆ ಬಾಬು, ತಾಯಿ ಸುಶೀಲಾಬಾಯಿ, ಹಾಗೂ ಇತರರು ಕೂಡಿ ಗುಲ್ಬರ್ಗಾದ ನಾಜ ಫಂಕ್ಷನ ಹಾಲ ದಲ್ಲಿ ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆ ಕಾಲದಲ್ಲಿ ನನ್ನ ಗಂಡನಿಗೆ 1 ಲಕ್ಷ ರೂಪಾಯಿ  ಹಾಗೂ 6 ತೋಲೆ ಬಂಗಾರ ವರೋಪಚಾರವಾಗಿ ಹಾಗೂ ಇತರೆ ಗೃಹ ಉಪಯೋಗಿ ಸಾಮಾನುಗಳು ಕೊಟ್ಟಿರುತ್ತಾರೆ, ನನ್ನ ಲಗ್ನವಾದ 6 ತಿಂಗಳವರೆಗೆ ನನಗೆ ಚನ್ನಗಾ ನೋಡಿಕೊಂಡು ನಂತರ  ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಇವರು ನನಗೆ ತವರು ಮನೆಯಿಂದ ಇನ್ನು ಹೆಚ್ಚಿಗೆ ಹಣ ತರಬೇಕು ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಪ್ರತಿ ದಿನ ಕಿರುಕುಳ ನೀಡುತ್ತಾ ಬಂದಿದ್ದು ನನ್ನ ತಂದೆಯವರು ಅಲ್ಲಿ ಇಲ್ಲಿ ಸಾಲ ಸೂಲ ಮಾಡಿ ಸದರಿ ಮೇಲಿನ ಹಣ ಹಾಗೂ ಬಂಗಾರ ನೀಡಿದ್ದು ಇವಾಗ ಅವರ ಹತ್ತಿರ ಯಾವುದೇ ಬಿಡಿಗಾಸು ಇರುವುದಿಲ್ಲ, ಅವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ, ಇಂಥಹ ಸಮಯದಲ್ಲಿ ಅವರಿಗೆ ದುಡ್ಡು ಕೊಡುವದು ಆಗುವುದಿಲ್ಲ ಅಂತಾ ಹೇಳಿದ್ದಕ್ಕೆ ನನ್ನ ಗಂಡ ಹಾಗೂ ನಾದನಿ ಬೈಯುವದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿರುತ್ತರೆ   ದಿನಾಂಕ 02/12/2013 ರಂದು ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಕೂಡಿ ನಾನಿದ್ದ ನಮ್ಮ ತವರು ಮನೆಗೆ ಬಂದಾಗ  ನನಗೆ ವಿಚ್ಚೇದನೆ ಕೊಡು ಇಲ್ಲದಿದ್ದರೆ ಹಣ ತೆಗೆದುಕೊಂಡು ಬಾ ಅಂದು ಸಾಯಂಕಾಲ 5 ಗಂಟೆಗೆ ಜಗಳ ತೆಗೆದು ಅವರಿಬ್ಬರೂ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

25 January 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಚೌಕ ಠಾಣೆ : ¢£ÁAPÀ 24.01.2014 gÀAzÀÄ 1945 ಗಂಟೆಗೆ  ನೆಹರು ಗಂಜದ ಎಪಿಎಂಸಿ ಕಾರ್ಯಲಯದ ಮುಂದುಗಡೆ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ ಎಸ್ ಐ ರಾಜಶೇಖರ ವಿಶೇಷ ಪೊಲೀಸ್ ಠಾಣೆ ಅಲಾನಿ ಗುಲಬರ್ಗಾ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1.ರಾಮಚಂದ್ರ ತಂದೆ ಮರೆಪ್ಪ ಘಂಟಿ ಸಾಃ ಸಂಜೀವ ನಗರ ಮತ್ತು 2. ರಾಜಶೇಖರ ರವರನ್ನು ಹಿಡಿದು ಆರೋಪಿತರಿಂದ ನಗದು 550 ರೂಪಾಯಿ ಮತ್ತು ಮಟಕಾ ಬರೆದ ಚೀಟಿ, ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಸುಲಿಗೆ ಪ್ರಕರಣಗಳು :
ಬ್ರಹ್ಮಪೂರ ಠಾಣೆ : ಶ್ರೀ. ನರಸಿಂಹ ತಂದೆ ಬಾಲಯ್ಯಾ ಕಲ್ಲಕುಟಿಗ ಸಾ|| ಜೊಪಡಪಟ್ಟಿ ಹೆಡಪೊಸ್ಟ ಆಫೀಸ್ ಹತ್ತಿರ  ಗುಲಬರ್ಗಾ  ರವರು ದಿನಾಂಕ 25-01-2014 ರಂದು ರಾತ್ರಿ 01:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣನಾದ ಪಿಂಟು ಇಬ್ಬರೂ ಕೂಡಿ ಸಿಟಿ ಬಸಸ್ಟ್ಯಾಂಡ ಹತ್ತಿರದ ರೋಡಿನ ಕೆಲಸ ಮಾಡುತ್ತಿರುವಾಗ ಯಾರೋ ಒಬ್ಬನು ಅವರ ಹತ್ತಿರ ಬಂದವನೆ ಏ ಮಕ್ಕಳೆ ನಿಮ್ಮ ಹತ್ತಿರ ಏನೆನು ಇವೆ ನಾನು ಚೆಕ್ಕಿಂಗ ಮಾಡಲು ಬಂದಿದ್ದೇನೆ. ತನ್ನ ಕೈಯಲ್ಲಿದ್ದ ರಾಡಿನಿಂದ ಹೊಡೆಯಲು ಬಂದಾಗ ಅವನಿಗೆ ಹೆದರಿ ನನ್ನ ಪ್ಯಾಂಟಿನ ಜೇಬಿಗೆ ಕೈ ಹಾಕಿ ಪಾಕೆಟನಲ್ಲಿ ಇದ್ದ 600/- ರೂಪಾಯಿ ಹಾಗು ಪ್ಯಾಂಟಿನ ಜೇಬಿನಲ್ಲಿದ್ದ ಒಂದು ಓನಿಡಾ ಮೋಬಾಯಿಲ ಅ||ಕಿ|| 1200/-ರೂ ಒಟ್ಟು 1800/- ರೂ ಮಾಲು ಜಬರದಸ್ತಿಯಿಂದ ಕಸಿದುಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಪೂರ ಠಾಣೆ : ಶ್ರೀ. ಅಂಥೋನಿ ತಂದೆ ವಿಶ್ವಾಸ ಮಠ ಸಾ|| ವೆಂಕಟೇಶ್ವರ ನಗರ ಚಿತ್ತಾಪೂರ ಹಾ|| ಸನಮಾನ ಲಾಡ್ಜ ಗುಲಬರ್ಗಾ.ರವರು ದಿನಾಂಕ 24-01-2014 ರಂದು ರಾತ್ರಿ 11:15 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಲಾಡ್ಜ ರೂಮ ಬಾಯ ಆದ ಮೋನಪ್ಪಾ ಸೂಲಹಳ್ಳಿ ಇಬ್ಬರೂ ಲಾಡ್ಜನಲ್ಲಿ ಇದ್ದ ಸಮಯದಲ್ಲಿ ಯಾರೋ ಒಬ್ಬ ಅಪರಿಚಿತ ಕೈಯಲ್ಲಿ ರಾಡು ಹಿಡಿದುಕೊಂಡು ಏ ಮಕ್ಕಳೆ ನಿಮ್ಮ ಜೇಬಿನಲ್ಲಿ ಏನೆನು ಇದಿಯೋ ತಗೆಯಿರಿ ಇಲ್ಲದ್ದಿದ್ದರೆ. ಹೊಡೆದು ಖಲಾಸ ಮಾಡುತ್ತೇನೆ ಅಂತಾ ಹೇದರಿಸಿ ತಮ್ಮ ಜೇಬಿನಲ್ಲಿದ್ದ. ಮತ್ತು ರೂಮ ಬಾಯ ಹತ್ತಿರ ಇದ್ದ ಅಲ್ಲದೆ ಕ್ಯಾಸ ಕೌಂಟರನಲ್ಲಿ ಇದ್ದ ನಗದು ಹಣ ಹೀಗೆ ನಮ್ಮ ಹತ್ತಿರದಿಂದ 1. ಲಾವಾ ಕಂಪನಿಯ ಮೋಬಾಯಿಲ್ ಅ||ಕಿ|| 3000/- ರೂ 2. ಮೈಕ್ರೋ ಮ್ಯಾಕ್ಸ ಮೋಬಾಯಿಲ ಅ||ಕಿ|| 2500/- 3. ನಗದು ಹಣ 4500/- ಹೀಗೆ ಒಟ್ಟು 10,000/- ರೂ ಬೆಲೆ ಬಾಳುವ ಮಾಲು ಹೆದರಿಸಿ ಜಬರದಸ್ತಿಯಿಂದ ಕಸಿದುಕೊಂಡ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಶೋಕ ನಗರ ಠಾಣೆ :
ಹಲ್ಲೆ ಪ್ರಕರಣ: ದಿನಾಂಕ  24/01/2014 ರಂದು 11 ಎಎಂಕ್ಕೆ  ಶ್ರೀ. ಗುರುರಾಜ  ತಂದೆ ಹರಿಶ್ಚಂದ್ರ ರಾವ ಬಾದನಹಟ್ಟಿ  ಜೆ.ಇ ಸಾ: ಪ್ಲಾಟ ನಂ. 15/ಎ ಭಗವತಿ ನಗರ ಗುಲಬರ್ಗಾ  ರವರು ನೀಡಿದ ಫಿರ್ಯಾದಿ ಅರ್ಜಿಯ ಸಂಕ್ಷಿಪ್ತ ಸಾರಾಂಶವೆನೆಂದರೆ  ನಾನು ನನ್ನ ಮಗಳಿಗೆ ಕೊಡುವುದಿಲ್ಲಾ ಎಂದು ಹೇಳಿದಕ್ಕೆ  ವಿನಯಕುಮಾರ ಜಿ.ಗಿರಣಿ  ಇತನು ಅದೆ ಹಗೆತನದಿಂದ  ಕಳೇದ ಒಂದು ವರ್ಷದಿಂದ 4-5 ಸಲ  ನಮ್ಮ ಮನೆಯ ಹತ್ತಿರ ಬಂದು ಮನಬಂದಂತೆ ಬೈದು ಅವಹೆಳನ ಮಾಡಿ ಮನೆಯ ಕಿಡಕಿ ಗ್ಲಾಸ ಒಡೆದಿದ್ದು, ಮತ್ತು ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನದ  ಸೀಟ ಕವರಿಗೆ ಬೆಂಕಿ ಹಚ್ಚಿ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾನೆ.  ಆದರೂ ಸಹ ನಾವು ಮರ್ಯಾದೆಗೆ ಅಂಜಿ ಅವನ ಕಿರುಕುಳ ಸಹಿಸಿಕೊಂಡು ಇದ್ದೇವೆ.  ಹೀಗಿದ್ದು  ಇಂದು ದಿನಾಂಕ 24/01/2014 ರಂದು ಬೆಳಗಿನ ಜಾವ 3-30 ಎಎಂ ಸುಮಾರಿಗೆ  ನಾನು ಮತ್ತು ನನ್ನ ಧರ್ಮ ಪತ್ನಿ ಅನಿತಾ  ಇಬ್ಬರು ಮನೆಯಲ್ಲಿ ಮಲಗಿರುವಾಗ  ವಿನಯಕುಮಾರ ಜಿ. ಗಿರಣಿ ಎನ್ನುವನು ನಮ್ಮ  ಮನೆಯ ಕಂಪೌಂಡ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಕಲ್ಲು ತೂರಾಟ ಮಾಡಿ ಮನೆಯ ಕಿಟಕಿ ಗ್ಲಾಸ ಒಡೆದು “ ಹೊರಗೆ ಬರಲೇ ಬೊಸಡಿ ಮಗನೆ , ನೊಡು ಇನ್ನು ಏನೇನು ಮಾಡುತ್ತೆನೆ, ನಿಮ್ಮ ಕುಟುಂಬದವರಿಗೆ  ನೆಮ್ಮದಿಯಿಂದ ಇರಲು ಬಿಡುವುದಿಲ್ಲಾ” ಅಂತಾ ಬೈಯುತ್ತಾ ಬೇದರಿಕೆ ಹಾಕುತ್ತಿರುವಾಗ ನಾನು ಪೊಲೀಸ ಠಾಣೆಗೆ ಫೋನ ಮಾಡುವಾಗ  ಮೊಟರ ಸೈಕಲ ಮೇಲೆ ಹೊಗಿರುತ್ತಾನೆ. ಇವನಿಂದ ನಮ್ಮ  ಕುಟುಂಬದವರ ನೆಮ್ಮದಿ ಹಾಳು ಆಗಿರುತ್ತದೆ. ನಾವು ಭಯದ ವಾತಾವರಣದಲ್ಲಿ ಬದಕುತ್ತಿದ್ದೆವೆ.  ಆವನಿಂದ ನಮ್ಮ ಪ್ರಾಣಕ್ಕೆ ಅಪಾಯ ಇರುತ್ತದೆ.  ಈ ಬಗ್ಗೆ ಸೂಕ್ತ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕ ನಗರ ಠಾಣೆ
ಹಲ್ಲೆ ಪ್ರಕರಣ : ದಿನಾಂಕ 24/01/2014  ರಂದು 5 ಪಿ.ಎಂ.ಕ್ಕೆ ಪಿರ್ಯಾಧಿ ಶ್ರೀ ಮಾಹಾಂತಪ್ಪ ತಂದೆ ಕಾಶಿನಾಥ ದವಡೇ ಸಾ: ಸಿಐಬಿ ಕಾಲೋನಿ ಗುಲಬರ್ಗಾ ರವರು ನೀಡಿದ ಪಿರ್ಯಾದಿಯ ಅರ್ಜಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ24/01/2014 ರಂದು ಸಂಜೆ 4 ಗಂಟೆ ಸುಮಾರಿಗೆ ತಿಮ್ಮಾಪುರಿ ಚೌಕದಿಂದ ಅಟೋ ರಿಕ್ಷಾ ನಂ. ಕೆ.ಎ-32/6637 ನೇದ್ದರಲ್ಲಿ ಕುಳಿತು ಕೊಳ್ಳುವಾಗ ಆಟೋ ಚಾಲಕನು ಬಸ್ ಸ್ಟ್ಯಾಂಡಕ್ಕೆ ಹೋಗಲು 5 ರೂ ಅಂತಾ ಹೇಳಿದನು.  ಆಟೋ ರಿಕ್ಷಾದಲ್ಲಿ ಕುಳಿತು ಬಸ್ ನಿಲ್ದಾಣಕ್ಕೆ 4-15 ಪಿ.ಎಂದ ಸುಮಾರಿಗೆ ಬಂದು ಇಳಿದು 100 ರೂ ನೋಟು ಕೊಟ್ಟಿದ್ದು ಅದಕ್ಕೆ ಆಟೋ ಚಾಲಕನು 7 ರೂ ತೆಗೆದುಕೊಳ್ಳುತ್ತೇನೆ. ಅಂದನು ಅದಕ್ಕೆ 5 ರೂ ತೆಗೆದುಕೋ ಎಂದು ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕಪಾಳ ಮೇಲೆ ಕೈಯಿಂದ ಹೊಡೆದನು. ಮತ್ತು ‘’’ ಸಾಲೇ ಮೇರೆಕೂ ಪಾಚ್ ರೂಪಾಯಿ ಲೇ ಬೋಲತೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಟ್ಟೆಯ ಮೇಲೆ ಜೋರಾಗಿ ಹೊಡೆದನು ಮತ್ತು ಕೆಳಗಡೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ಎಡ ಕಪಾಳದ ಮೇಲೆ ಹೊಡೆದು ಗುಪ್ತ ಗಾಯಗೊಳಿಸಿದನು. ಆಟೋ ಚಾಲಕನು ನಾನು ಕೊಟ್ಟ 100 ರೂ ಹಾಗೇ ತೆಗೆದುಕೊಂಡು ಹೋಗಿ ಸಾಲೇ ತೆರೆಕೂ ನಹಿ ಛೋಡತಾ ಅಂತಾ ಅನ್ನುತ್ತಾ ಆಟೋ ತೆಗೆದುಕೊಂಡು ಓಡಿ ಹೋದನು. ಕಾರಣ ಆಟೋ ರಿಕ್ಷಾ ನಂ. ಕೆ.ಎ-32/6637 ನೇದ್ದರ ಚಾಲಕನ ಮೇಲೆ ಕಾನೂನಿನ ರೀತಿ ಕ್ರಮ ಕೈಕೊಳ್ಳಬೇಕೆಂತಾ ವಗೈರೆ ಪಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ.         
ಹಲ್ಲೆ ಪ್ರಕರಣ: ದಿನಾಂಕ: 24.01.14ರಂದು 1 ಪಿ ಎಮ್ ಕ್ಕೆ ಸರ್ಕಾರಿ ಆಸ್ಪತ್ರೆ ಸೇಡಂದಲ್ಲಿ ಫಿರ್ಯಾಧಿ ಬದ್ದಿಬಾಯಿ ಗಂಡ ಕಾಶ್ಯಾನಾಯಕ ಸಾ|| ಕೋಲಕುಂದಾ ದೊಡ್ಡ ತಾಂಡಾ ಇವರು ತಾಂಡಾದ ಸೀಮಾಂತರದಲ್ಲಿ ಹೊಲದಲ್ಲಿರುವಾಗ  ತಾಂಡಾದ ಹಣಮಂತ ತಂದೆ ತುಳಜ್ಯಾನಾಯಕ ಚಿನ್ನಾ ರಾಠೋಡ ಈತನ ಹೊಲ ಇರುತ್ತದೆ. ಈತನಿಗು ಮತ್ತು ನಮಗು ಹೊಲದ ಬಾಂದಾರಿ ಸಂಬಂಧ ತಕರಾರು ಇದ್ದು ದಿನಾಂಕ: 23.01.14 ರಂದು ಸಾಯಂಕಾಲ5 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿರುವ ಸಾರ್ವಜನಿಕ ರಸ್ತೆಯಿಂದ ನಮ್ಮ ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ನಮ್ಮ ತಾಂಡಾದ ಹಣಮಂತ ತಂದೆ ತುಳಜ್ಯಾನಾಯಕ ಚಿನ್ನರಾಠೋಡ ಈತನು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಹಳೆ ದ್ವೇಷದಿಂದ ನನಗೆ ಕಟ್ಟಿಗೆಯಿಂದ ಎದೆಗೆ, ಬೆನ್ನ ಮೇಲೆ ಮೊಣ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಕೊಲೆ ಮಾಡತ್ತೇನೆ ಅಂತಾ ಜೀವದ ಹೆದರಿಕೆ ಹಾಕಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
PÀªÀįÁ¥ÀÆgÀ ¥ÉưøÀ oÁuÉ
ಹಲ್ಲೆ ಪ್ರಕರಣ :    ದಿನಾಂಕ: 24/01/2014 ರಂದು ರಾತ್ರಿ 07-45  ಗಂಟೆಗೆ ಶ್ರೀ. ವಿಜಯಕುಮಾರ ತಂದೆ ಪಾಂಡು ರಾಠೋಡ ಸಾ: ಹರ್ಜಿ ತಾಂಡಾ ಸೊಂತ ಇವರು ಠಾಣೆಗೆ ಹಾಜರಾಗಿ ನಿನ್ನೆ ನಮ್ಮ ತಾಂಡಾದಲ್ಲಿ ಸಂಭಂದಿಕರಾರ ಶಿವಾಜಿ ತಂದೆ ಚಂದ್ರು ರಾಠೋಡ ಈತನ ಮದುವೆ ಕಾರ್ಯಕ್ರಮ ಇದ್ದ ಪ್ರಯುಕ್ತ ನಮ್ಮ ತಾಂಡಾದ ಜನರು ಕೂಡಿಕೊಂಡು ರಾತ್ರಿ ವೇಳೆಯಲ್ಲಿ ಮದುವೆಯ ನೀತಿ-ನಿಯಮಗಳನ್ನು ಮಾಡುತ್ತಾ ರಾತ್ರಿ 11-00 ಗಂಟೆ ಸುಮಾರಿಗೆ ಎಲ್ಲರೂ ಕೂಡಿಕೊಂಡು ನಮ್ಮ ಲಂಬಾಣಿ ನೃತ್ಯ ಮಾಡುತ್ತಿದ್ದು,ಈ ಮದುವೆಯ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಸೊಂತ ಕೇವಳು ತಾಂಡಾ (ಡೋಲಮುಖ ತಾಂಡಾ)ದಿಂದ ಮದುವೆ ಹುಡುಗಿಯ ಕಡೆಯವರೂ ಸಹ ಬಂದು ನಮ್ಮೊಂದಿಗೆ ನೃತ್ಯ ಮಾಡುತ್ತಿದ್ದಾಗ ಒಬ್ಬರಿಗೊಬ್ಬರೂ ತಳ್ಳಾಡಿಕೊಂಡು ಬಾಯಿ ಮಾತಿನ ತಕರಾರು ಮಾಡಿದ್ದು ಇರುತ್ತದೆ.  ಮದುವೆ ಕಾರ್ಯಕ್ರಮದ ಅಕ್ಷತೆ ಹಾಕಿ ಊಟ ಮಾಡಿ ನಮ್ಮ ತಾಂಡಾದ ಸಮುದಾಯ ಭವನದ ಹತ್ತಿರ ನಾನು ಮತ್ತು ನಮ್ಮ ಸಂಭಂದಿಕರಾದ ಸುರೇಶ ತಂದೆ ಲಕ್ಷ್ಮಣ ರಾಠೋಡ ಮತ್ತು ಆತನ ಮಕ್ಕಳಾದ ಗಣೇಶ ಮತ್ತು ಮೋಹನ ಕೂಡಿಕೊಂಡು ಮಾತನಾಡುತ್ತಾ ಕುಳಿತುಕೊಂಡಿದ್ದಾಗ ಸೊಂತ  ಕೇವಳು (ಡೋಲಮುಖ ) ತಾಂಡಾದ 1.ನವರಂಗ ಚವ್ಹಾಣ 2. ಅನೀಲ ತಂದೆ ಗಣಪತಿ ಚವ್ಹಾಣ 3. ಕಿಶನ ತಂದೆ ಪ್ರಭು ಚವ್ಹಾಣ 4. ದಿನೇಶ ತಂದೆ ತಾರು ಚವ್ಹಾಣ 5. ಪುಂಡಲೀಕ ತಂದೆ ತಾರಾಸಿಂಗ ಚವ್ಹಾಣ 6. ಸಂದೀಪ ತಂದೆ ಪಾಂಡು ಚವ್ಹಾಣ 7. ಅರುಣ ಹೀಗೆ ಎಲ್ಲರೂ ಕೂಡಿಕೊಂಡು ನಾವು ಕುಳಿತಲ್ಲಿಗೆ ಬಂದವರೇ ನಮ್ಮ ಲಂಬಾಣಿ ಭಾಷೆಯಲ್ಲಿ ನಿನ್ನೆ ರಾತ್ರಿ ನಾವು ಡ್ಯಾನ್ಸ್ ಮಾಡುವಾಗ ನಮಗೆ ನೀವೇ ನೂಕಿಸಿಕೊಟ್ಟು ನಮಗೆ ಅಪಮಾನ ಮಾಡಿರುತ್ತೀರಿ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ನಾವು ನಿನ್ನೆ ನಾವು ನಿಮಗೆ ನೂಕಿಸಿಕೊಟ್ಟಿರುವುದಿಲ್ಲ, ಯಾರೋ ನೂಕಿಸಿಕೊಟ್ಟಿದ್ದಕ್ಕೆ ನಮ್ಮನ್ನೇಕೆ ಬೈಯ್ಯುತ್ತಿದ್ದೀರಿ ಅಂತಾ ಕೇಳುತ್ತಿದ್ದಾಗ ಅವರೆಲ್ಲರೂ ಕೂಡಿಕೊಂಡು ಸುರೇಶ ರಾಠೋಡ ಮತ್ತು ಆತನ ಮಗ ಮೋಹನ ರಾಠೋಡ ಇವರುಗಳಿಗೆ ಕೈಯಿಂದ ಕಲ್ಲಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು, ಜಗಳ ಬಿಡಿಸಲು ಹೋದ ನನಗೆ ನೂಕಿಸಿಕೊಟ್ಟು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.   
ಅಫಜಲಪೂರ ಪೊಲೀಸ್ ಠಾಣೆ
ಹಲ್ಲೆ ಪ್ರಕರಣ :    ದಿನಾಂಕ 24/01/2014 ರಂದು 10.30 ಎಎಮ್ ಕ್ಕೆ ಫಿರ್ಯಾದಿದಾರ  ಶ್ರೀ ಹುಚ್ಚಪ್ಪ ತಂದೆ ಸುಕ್ಕಣ್ಣ ಸಿಂಧೆ ಸಾ|| ಉಡಚಣ ಹಟ್ಟಿ ಇವರು ಠಾಣೆಗೆ ಹಾಜರಾಗಿ ದು ಬೆಳಿಗ್ಗೆ ಫಿರ್ಯಾದಿದಾರ ಹಾಗೂ ಅವರ ಅಣ್ಣನ ಮಗ ಇಬ್ಬರು ಉಡಚಣ ಹಟ್ಟಿ ನೀರಿನ ಟ್ಯಾಂಕ್ ಹತ್ತಿರ ಇದ್ದಾಗ  ಆರೋಪಿತ್ರಾದ 1) ಕಿರಣ 2)ಸುರೇಶ 3) ರಮೇಶ 4) ಗುಂಡಪ್ಪ ಇವರು ಫಿರ್ಯಾದಿಗೆ ತಡೆದು ನಿಲ್ಲಿಸಿ  ಅವಾಚ್ಯ ಬೈದು ಕೈಯಿಂದ ಬಡಿಗೆ ಯಿಂದ ಹೋಡೆದು ರಕ್ತಗಾಯ ಗುಪ್ತ ಗಾಯ ಪಡಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಗ್ರಾಮೀಣ ಪೊಲೀಸ್ ಠಾಣೆ :
ಪಾಲಿಕೆ. ಕೆ.ಇ.ಬಿ ರವರ ನಿರ್ಲಕ್ಷ ಬಾಲಕನ ಸಾವು. : ದಿನಾಂಕ. 24-01-2014 ರಂದು ಶ್ರೀ.ಇಜಾಜ ತಂದೆ ಅಬ್ದುಲ ಗನಿ ಮೊಮಿನ ಸಾ; ಜುಬೇರ ಕಾಲೂನಿ ಹಾಗರಗಾ ಕ್ರಾಸ ಇವರ ಮಗ ವಸೀ ಜುಬೇರ ಮಸೀದ ಹತ್ತಿರ ಇರುವ ಡ್ರೈನೇಜನಲ್ಲಿ ಬಿದ್ದಿದರಿಂದ ಆತನನ್ನು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಗಳು ವಸೀ ಇತನನ್ನು ನೋಡಿ ಮೃತ ಪಟ್ಟಿರುತ್ತಾನೆ ಅಂತಾ  ಹೇಳಲು ವಸೀ ಯ  ಶವವನ್ನು ಮನೆಗೆ ತೆಗೆದುಕೊಂಡು ಹೋಗಿ  ವಿಚಾರಿಸಿದಾಗ ವಸೀ ವಯ;12 ವರ್ಷ ಇತನು ಮನೆಯಿಂದ ಕಿರಾಣಾ ಅಂಗಡಿಗೆ ಹೋಗುವಾಗ  ಡ್ರೈನೇಜ ನಾಲಿಯಲ್ಲಿ  ಬಿದಿದ್ದು   ಡ್ರೈನೇಜ ಸುತ್ತಾ ನಿಂತಿದ್ದ ನೀರಿನಲ್ಲಿ ಅಲ್ಲಿದ್ದ ವಿದ್ಯುತ ಕಂಬದಿಂದ  ವಿದ್ಯುತ ಇಳಿದಿದ್ದರಿಂದ, ನನ್ನ ಮಗ ವಸೀ ಇತನಿಗೆ ವಿದ್ಯುತ್ ಶಾಖ ಬಡಿದು ಮೃತ ಪಟ್ಟಿರುತ್ತಾನೆ. ಮಹಾನಗರ ಪಾಲಿಕೆಯವರು ಡ್ರೈನೇಜ ಕೆಲಸ ಮಾಡುವಾಗ ನಾಲಿ ನೀರು ನಿಲ್ಲದಂತೆ ಮಾಡಿದಲ್ಲಿ ಮತ್ತು ಕೆ.ಪಿ.ಟಿ.ಸಿಯಲ್.  ಇಲಾಖೆಯವರು ವಿದ್ಯುತ ಕಂಬದ ಸುತ್ತಾ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿದಲ್ಲಿ ಈ ಘಟನೆ ಸಂಭವಿಸುತ್ತಿರಲಿಲ್ಲಾ.  ಈ ಘಟನೆಯು ಮಾನ್ಯ ಆಯುಕ್ತರು  ಮಹಾನಗರ ಪಾಲಿಕೆ ಗುಲಬರ್ಗಾ  ಮತ್ತು ಸಹಾಯಕ ಕಾರ್ಯಾ ನಿರ್ವಾಹಕ ಅಭಿಯಂತರರು ಕೆ.ಪಿ.ಟಿ.ಸಿಯಲ್. ಏರಿಯಾ ಇಂಚಾರ್ಜ  ಇವರುಗಳ  ನಿರ್ಲಕ್ಷತನದಿಂದ  ಈ ಘಟನೆ ಸಂಭವಿಸಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಂತಾ  ವಗೈರೆ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ:
ಕೊಲೆ ಪ್ರಕರಣ:ಶ್ರೀ ವೀರಯ್ಯಸ್ವಾಮಿ ತಂದೆ ಶಂಕ್ರಯ್ಯಸ್ವಾಮಿ ಸಾ|| ಬಡಗೇರಾ (ಬಿ) ಇವರು ಠಾಣೆಗೆ ಹಾಜರಾಗಿ ತಮ್ಮ  ಅಜ್ಜಿಯಾದ ಪಾರ್ವತಮ್ಮ ಗಂಡ ಸದಾನಂದಯ್ಯ ವ|| 80 ವರ್ಷ ಇವಳು ಈಗ ಸುಮಾರು 40 ವರ್ಷಗಳ ಹಿಂದೆ ಗಂಡ ಮಕ್ಕಳು ಹಾಗೂ ಮನೆ ಮಾರು ಬಿಟ್ಟು ಸನ್ಯಾಸತ್ವವನ್ನು ಸ್ವಿಕರಿಸಿದ್ದು  ಅವಳಿಗೆ ನನ್ನ ತಂದೆಯಾದ ಶಂಕ್ರಯ್ಯ ಇವರು ಒಬ್ಬನೆ ಮಗನಿರುತ್ತಾನೆ ಅಜ್ಜಿ ಪಾರ್ವತಮ್ಮಳು ಕೊಂತನಪಲ್ಲಿ ಸೀಮೆಯಲ್ಲಿರುವ ಗುಡ್ಡದಲ್ಲಿರುವ ಕಾರ್ಯಗಡ್ಡ ಸಿದ್ದೇಶ್ವರ ಗುಡಿಯ ಹತ್ತಿರ ವಾಸವಾಗಿದ್ದಳು, ನಾನು ಗುಡ್ಡದಲ್ಲಿ ವಾಸಿಸುವ ಮನೆಗೆ ವಾರದಲ್ಲಿ ಎರಡು ಮೂರು ಸಲ ಹೋಗಿ ಹಾಲು ಹಣ್ಣು ಹಂಪಲು ಇನ್ನಿತರ ವಸ್ತುಗಳನ್ನು ಕೊಟ್ಟು ಮಾತಾಡಿ ಬರುತ್ತಿದ್ದೆನು. ಹೀಗಿರುವಾಗ ದಿನಾಂಕ: 24.01.14 ರಂದು ನಾನು ಹಾಲು ಹಣ್ಣು ಮತ್ತು ಇನ್ನಿತರ ಸಾಮಾನುಗಳು ತೆಗೆದುಕೊಂಡು ಕಾರ್ಯಗಡ್ಡ ಗುಡ್ಡದಲ್ಲಿರುವ ನನ್ನ ಅಜ್ಜಿಯಾದ ಪಾರ್ವತಮ್ಮ ಇವಳು ವಾಸಿಸುವ ಮನೆಗೆ ಇಂದು ಮುಂಜಾನೆ 11:30 ಗಂಟೆ ಸುಮಾರಿಗೆ ಬಂದು ನೋಡಿದಾಗ ಮನೆಯಲ್ಲಿ ನನ್ನ ಅಜ್ಜಿ ಪಾರ್ವತಮ್ಮಳ ಕುತ್ತಿಗೆ ಭಾಗವು ಪೂರ್ತಿ ಕತ್ತರಿಸಿ ದಂಡದಿಂದ ರುಂಡವು ಕತ್ತರಿಸಿ ಬೇರ್ಪಡಿಸಿದ್ದು, ಕುತ್ತಿಗೆ ಬಾಗದಿಂದ ಕಾಲಿನವರೆಗೆ ಇರುವ ಬಾಗವು ಮಾತ್ರ ಮೃತದೇಹವಿತ್ತು ಇವಳ ತಲೆಯಿಂದ ಕುತ್ತಿಗೆವರೆಗೆ ಇರುವ ಭಾಗವು ಇರುವದಿಲ್ಲ . ನನ್ನ ಅಜ್ಜಿಯಾದ ಪಾರ್ವತಮ್ಮ ಗಂಡ ಸದಾನಂದಯ್ಯ ವ|| 80ವರ್ಷ ಇವಳಿಗೆ ದಿನಾಂಕ: 23.01.14 ರಂದು 5 ಪಿ ಎಮ್ ರಿಂದ  ದಿನಾಂಕ: 24.01.14 11:30 ಎ ಎಮ್ ಅವಧಿಯಲ್ಲಿ ಯಾರೊ ಆರೋಪಿತರು ಮನೆಯೊಳಗೆ ಬಂದು ಹರಿತವಾದ ಆಯುಧಗಳಿಂದ ಕುತ್ತಿಗೆಗೆ ಹೊಡೆದು ಕತ್ತರಿಸಿ ಕೊಲೆ ಮಾಡಿ ದಂಡದಿಂದ ರುಂಡವನ್ನು ಬೇರ್ಪಡಿಸಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಯಾವುದೊ ಸ್ಥಳದಲ್ಲಿ ಒಯ್ದು ಹಾಕಿದ್ದು. ಅಜ್ಜಿಯಾದ ಪಾರ್ವತಮ್ಮಳಿಗೆ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಮಾದನ ಹಿಪ್ಪರಗಾ ಪೊಲೀಸ್ ಠಾಣೆ   :
ಕಳವು ಪ್ರಕರಣ :ದಿನಾಂಕ: 24-01-14 ರಂದು ಶ್ರೀಮತಿ.ಮಧುಮತಿ ಎಸ್.ಇಕ್ಕಳಕಿ ಉ:ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಹಿರೋಳಿ  ತಾ:ಆಳಂದ.  ಇವರು ಠಾಣೆಗೆ ಬಂದು ದಿನಾಂಕ:23-01-14 ರ ರಾತ್ರಿ 08:00 ಗಂಟೆಯಿಂದ ದಿ:24/01/14 ರ ಬೆಳಗಿನ 6 ಗಂಟೆಯ ಮಧ್ಯದ ಅವಧಿಯಲ್ಲಿ. ನಾವು ಶಾಲೆಯಲ್ಲಿ ಯಾರು ಇರಲಾರದ ಸಮಯದಲ್ಲಿಯಾರೋ ಅಪರಿಚಿತ ಕಳ್ಳರು ಸರಕಾರಿ ಪ್ರೌಢಶಾಲೆ ಹಿರೋಳಿ ಶಾಲೆಯ ಕಂಪ್ಯೂಟರ್ ಕೋಣೆಯಲ್ಲಿನ 1) H.C.L. ಕಂಪನಿಯ 2 ಎಲ್.ಸಿ.ಡಿ ಮಾನಿಟರ್ 2)H.C.L. ಕಂಪನಿಯ  ಒಂದು ಸಿ.ಪಿ.ಯು. 3) 02 ಕಂಪ್ಯೂಟರ್ ಕೀ ಬೋರ್ಡ 4) 03 ಕಂಪ್ಯೂಟರ್ Mouse.ಹೀಗೆ ಒಟ್ಟು : 24,000=00 ರೂಪಾಯಿಗಳ ಕಂಪ್ಯೂಟರ್ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು.  ಕಳುವಾದ ಕಂಪ್ಯೂಟರ್ ಸಾಮಗ್ರಿಗಳು ಪತ್ತೆ ಹಚ್ಚಿ ಕೊಡಬೇಕು ಅಂತಾ ಕೊಟ್ಟ ಅರ್ಜಿ  ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಪೊಲೀಸ್ ಠಾಣೆ :


ವರದಕ್ಷಿಣೆ ಕಿರುಕುಳ ಪ್ರಕರಣ : ದಿನಾಂಕ 24/01/2014 ರಂದು 6 ಪಿಎಮ್‌ಕ್ಕೆ  ಪಿರ್ಯಾದಿ ಭಾರತಾಬಾಯಿ ಗಂಡ ವಿಜಯಕುಮಾರ ಚವ್ಹಾಣ ಠಾಣೆಗೆ ಹಾಜರಾಗಿ ತನಗೆ ದಿನಾಂಕ 26/02/2012 ರಂದು ಅಫಜಲಪೂರ ತಾಲೂಕಿನ ಚವಡಾಪೂರ ತಾಂಡಾದ ವಿಜಯಕುಮಾರ ತಂದೆ ಪಾಂಡು ಚವ್ಹಾಣ ರವರೊಂದಿಗೆ ಗುಲ್ಬರ್ಗಾದ ನಾಜ ಫಂಕ್ಷನ ಹಾಲ ದಲ್ಲಿ ಮದುವೆ ಮಾಡಿ ಕೊಟ್ಟಿದ್ದು.  ಮದುವೆ ಕಾಲದಲ್ಲಿ ನನ್ನ ಗಂಡನಿಗೆ 1 ಲಕ್ಷ ರೂಪಾಯಿ  ಹಾಗೂ 6 ತೋಲೆ ಬಂಗಾರ ವರೋಪಚಾರವಾಗಿ ಹಾಗೂ ಇತರೆ ಗೃಹ ಉಪಯೋಗಿ ಸಾಮಾನುಗಳು ಕೊಟ್ಟಿರುತ್ತಾರೆ, ಲಗ್ನವಾದ 6 ತಿಂಗಳವರೆಗೆ ನನಗೆ ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಇವರು ನನಗೆ ತವರು ಮನೆಯಿಂದ ಇನ್ನು ಹೆಚ್ಚಿಗೆ ಹಣ ತರಬೇಕು ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಪ್ರತಿ ದಿನ ಕಿರುಕುಳ ನೀಡುತ್ತಾ ನನ್ನ ಗಂಡ ಹಾಗೂ ನಾದನಿ ಬೈಯುವದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿ ನನಗೆ ನನ್ನ ತವರು ಮನೆಗೆ ನನ್ನ ಗಂಡನು ಹಣ ತರುವ ವರೆಗೂ ನನ್ನ ಹತ್ತಿರ ಬರಬೇಡ ಅಂತಾ ನನ್ನ ತವರು ಮನೆಗೆ ನನಗೆ ಬಿಟ್ಟು ನೀನು ಎಲ್ಲಿ ಬೇಕಾದರೂ ಹೋಗು ಅಂತಾ ಹೇಳಿತ್ತಿದ್ದು. ದಿ: 02/12/2013 ರಂದು ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಕೂಡಿ ನಾನಿದ್ದ ನಮ್ಮ ತವರು ಮನೆಗೆ ಬಂದು ವಿಚ್ಚೇದನೆ ಕೊಡು ಇಲ್ಲದಿದ್ದರೆ ಹಣ ತೆಗೆದುಕೊಂಡು ಬಾ ಎಂದು ಜಗಳ ತೆಗೆದು ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂಧ ಬಯ್ದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.