POLICE BHAVAN KALABURAGI

POLICE BHAVAN KALABURAGI

14 December 2013

Gulbarga District Reported Crimes

ಹಲ್ಲೆ  ಪ್ರಕರಣಗಳು  :
ಮಾಹಾಗಾಂವ ಠಾಣೆ : ಶ್ರೀಮತಿ ಉಮಾದೇವಿ ಗಂಡ ರಾಜಣ್ಣ  ಇವಳ ಗಂಡ ರಾಜಣ್ಣ ಇತನು ಮೃತಪಟ್ಟಿದ್ದರಿಂದ ನಿನ್ನೆ ದಿನಾಂಕ 12-12-2013 ರಂದು ಆತನ ದಿನ ಮಾಡುತ್ತಿದ್ದರಿಂದ ಸೋದರ ಅಳಿಯನಾದ ದರ್ಮಣ್ಣ ಇತನು ಮನೆಗೆ ಊಟಕ್ಕೆ ಕರೆದಿದ್ದರಿಂದ ಸಿದ್ದಪ್ಪ ತಂ ದೇವಿಂದ್ರಪ್ಪ ಕಣ್ಣೂರ ಸಾ : ಬಬಲಾದ ,ಕೆ ಇವರು  ಹಾಗೂ ಆತನ ತಮ್ಮಂದಿರರಾದ ವಿಠಲ ಮತ್ತು ಜಗನಾಥ ಕೂಡಿ ಸಾಯಂಕಾಲ ಅವರ ಮನೆಗೆ ಹೋಗಿ ಊಟ ಮಾಡಿ ವಾಪಸ ಮನೆಯ ಕಡೆಗೆ ಬರುತ್ತಿರುವಾಗ ರಾತ್ರಿ 8 ಪಿ,ಎಮ್,ದ ಸೂಮಾರಿಗೆ ಉಮಾದೇವಿಯ ಮೈದುನನಾದ ಶಿವಶರಣಪ್ಪ ತಂ ಶೇಖಪ್ಪ ದೇಗಾಂವ ಇತನು ಪಿರ್ಯಾದಿದಾರನಿಗೆ ನೋಡಿ ಭೋಸಡಿ ಮಕ್ಕಳೆ ರಾಜಣ್ಣನ ಮಕ್ಕಳಾದ ವಿನೋದ ಮತ್ತು ದರ್ಮಣ್ಣ ಕೂಡಿ ಆಸ್ತಿ ಪಾಲು ಮಾಡಿಕೊಳ್ಳುವಾಗ ನೀವು ಧರ್ಮಣ್ಣನ ಕಡೆಗೆ ಮಾತನಾಡಿ ಜಗಳ ಹಚ್ಚಿದ್ದಿರಿ ರಂಡಿ ಮಕ್ಕಳೆ ಅಂತಾ ಬೈದಾಗ ಪಿರ್ಯಾದಿಯು ಯಾಕೆ ಬೈಯುತ್ತಿ ಅಂತಾ ಕೆಳಿದಕ್ಕೆ ಶಿವಶರಣಪ್ಪ ಇತನು ಅಲ್ಲೆ ಇದ್ದ ಒಂದು ಕೊಡ್ಲಿಯಿಂದ ನನ್ನ  ತಮ್ಮನಾದ ವಿಠಲನಿಗೆ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು ಅಭಿಶೇಖ ಇತನು ಬಡಿಗೆಯಿಂದ ವಿಠಲನಿಗೆ ಬಲಗೈಗೆ ಹೊಡೆದಾಗ ಹಾಗೂ ಆತನ ಇನ್ನೊಬ್ಬ ತಮ್ಮ ಜಗನಾಥ ಇಬ್ಬರೂ ಜಗಳ ಬಿಡಿಸಲು ಹೋದಾಗ ಸುಂದರ ದೇಗಾಂವ, ಪ್ರಸಾಧ ದೇಗಾಂವ, ವಸಂತ ದೇಗಾಂವ, ಹಾಗೂ ಸುಧಾಕರ ದೇಗಾಂವ ಮತ್ತು ಅವರ ಸಂಬಂದಿಕ ಜಗನಾಥ ತಂ ಮಾಳಪ್ಪ ಸಣ್ಣೂರ ಇವರೆಲ್ಲರೂ ಕೂಡಿ ಬಂದು ನನಗು ಹಾಗೂ ನನ್ನ ತಮ್ಮಂದಿರರಾದ ವಿಠಲ ಮತ್ತು ಜಗನಾಥನಿಗೆ ಹೋಡಬಡೆ ಮಾಡಿದ್ದು ಪ್ರಸಾದ ಇತನು ಚಾಕುವಿನಿಂದ ತನ್ನ ಮುಗಿನ ಹತ್ತಿರ ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 11-11-2013 ರಂದು ಶ್ರೀ ಶಿವಶರಣಪ್ಪ ತಂ ಶೇಖಪ್ಪ ದೇಗಾಂವ ಸಾ : ಬಬಲಾದ ಇವರ  ಅಣ್ಣನಾದ ರಾಜಣ್ಣ ಇತನು ಮರಣ ಹೊಂದಿದ್ದರಿಂದ ನಿನ್ನೆ ದಿನಾಂಕ 12-12-2013 ರಂದು  ತನ್ನ ಅಣ್ಣನ ದಿನ ಇದ್ದಿದರಿಂದ ರಾಜಣ್ಣನ ಮಕ್ಕಳಾದ ವಿನೋದ ದರ್ಮಣ್ಣ ಇವರು ಊಟದ ವವ್ಯಸ್ಥೆ ಮಾಡಿದ್ದು ಇರುತ್ತದೆ ಸಾಯಂಕಾಲ 7.30 ಪಿ,ಎಮ್,ಕ್ಕೆ ಪಿರ್ಯಾದಿ ಅಣ್ಣನಾದ ರಾಜಣ್ಣ ಇತನ ಹೆಂಡತಿಯಾದ ಉಮಾದೇವಿ ಇವಳ ತಮ್ಮಂದಿರರಾದ 1. ಸಿದ್ದಪ್ಪ ಕಣ್ಣೂರ 2. ಜಗನಾಥ ಕಣೂರ, 3. ವಿಠಲ ಕಣ್ಣೂರ 4. ವೈಜಿನಾಥ ಕಣ್ಣೂರ ಇವರು 4 ಜನ ಊಟಕ್ಕೆ ಬಂದು ನಂತರ ತಾವು ಭವಿಷ್ಯ ನೋಡಿದ್ದೇವೆ ನೀವು ಎಲ್ಲರೂ 3 ತಿಂಗಳದವರೆಗೆ ಈ ಮನೆ ಬಿಡಬೇಕು ಅಂತಾ ಹೇಳಿದ್ದಾಗ ಪಿರ್ಯಾದಿದಾರನು ನಾನು ಕೂಡಾ ಮುತ್ಯಾರವರಿಗೆ ವಿಚಾರಿಸುತ್ತೇನೆ ಅವರು ಮನೆ ಬಿಡಲು ಸೂಚಿಸಿದ್ದರೆ ಮನೆ ಬಿಡುತ್ತೇವೆ ಇಲ್ಲಾ ಅಂತಾ ಹೇಳಿದರೆ ಬಿಡುವುದಿಲ್ಲಾ ಅಂತಾ ಅಂದಾಗ ಜಗನಾಥ ಇತನು ಪಿರ್ಯಾದಿದಾರನ ಮೈಮೇಲೆ  ಅವಾಚ್ಯ ಶಬ್ದಗಳಿಂದ ಬೈದು ನಾನು ಹೆಳಿದಷ್ಟು ಕೇಳು ಅಂತಾ ಅಂದವನೆ ಅಲ್ಲೆ ಬಿದ್ದಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ ತಲೆಯ ಮುಂದೆ ಹಣೆ ಹೊಡೆದು ಭಾರಿ ರಕ್ತಗಾಯಗೊಳಿಸಿದು ಹಾಗೂ ವೈಜಿನಾಥ ಇತನು ಒಂದುಬಡಿಗೆ ತಂದು ಎಡಗೈ ಕಿರುಬೆರಳಿಗೆ ಹೋಡೆದು ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಸೇಡಂ ಠಾಣೆ :  ಶ್ರೀಮತಿ. ಜಯಶ್ರೀ ಗಂಡ ಜೈಭೀಮ ಬೇವಿನಗಿಡ ಸಾ:ಅಗ್ಗಿ ಬಸವೇಶ್ವರ ಕಾಲೋನಿ, ಸೇಡಂ. ರವರು ನಾನು ತೇಗಲತಿಪ್ಪಿ ಗ್ರಾಮದ ಜೈಭೀಮ ಬೇವಿನಗಿಡ ಇತನೊಂದಿಗೆ ಆರು ತಿಂಗಳ ಹಿಂದೆ ಪ್ರೀತಿಸಿ ರಜಿಸ್ಟರ್ ಮದುವೆ ಆಗಿರುತ್ತೇನೆ. ಮದುವೆಯಾದ ಎರಡು ತಿಂಗಳ ನಂತರ ನನಗೆ ನನ್ನ ಗಂಡ ಮತ್ತು ಆತನ ಅಣ್ಣಂದಿಯರಾದ, ನಾಗಪ್ಪ ಮತ್ತು ಶಾಂತಪ್ಪ ಇವರು ಮಾನಸೀಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದರಿಂದ ಅವರ ಕಿರುಕುಳ ತಾಳದೇ ತವರು ಮನೆಯಲ್ಲಿ ಬಂದು ನನ್ನ ತಾಯಿಯ ಮನೆಯಲ್ಲಿದ್ದೆ. ದಿನಾಂಕ 12-12-2013 ರಂದು ರಾತ್ರಿ 11-30 ಗಂಟೆಗೆ ನನ್ನ ಗಂಡ ಮತ್ತು ಆತನ ಅಣ್ಣಂದಿಯರು ಬಂದು ನನಗೆ ರಂಡಿ ಭೋಸಡಿ ತವರು ಮನೆಯಲ್ಲಿ ಎಷ್ಟು ದಿವಸ ಇರುತ್ತಿ ಎಂದು ನನ್ನ ಗಂಡ ಕೈಯಿಂದ ಹೊಡೆದಿರುತ್ತಾನೆ ಮತ್ತು ಆತನ ಅಣ್ಣಂದಿಯರು ಜೀವದ ಬೆದರಿಕೆ ಹಾಕಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

13 December 2013

Gulbarga District Reported Crimes

ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ. ಮಹ್ಮದ ಫಸಿಯೊದ್ದಿನ್ ತಂದೆ ಮಹ್ಮದ ನಸೀರೊದ್ದಿನ್ ಶೇಖ ಸಾ|| ಚುನ್ನಭಟ್ಟಿ ಮಕ್ಕಾ ಕಾಲೊನಿ ಗುಲಬರ್ಗಾ ರವರ ಅಕ್ಕಳಾದ ಶಾಹೀನ ಬೇಗಂ ಗಂಟ ಅಬ್ದುಲ ಹಮೀದ ಸಮಸ್ತಿ ಇವರ ಮನೆ ನಮ್ಮ ಮನೆ ಹತ್ತಿರವೇ ಇದ್ದು ನನ್ನ ಅಕ್ಕನ ಮಗನಾದ ಮೊಹೀನ್ ಇತನು ದುಬೈದಲ್ಲಿ ವಾಸವಾಗಿದ್ದು ಅವನಿಗೆ ಭೇಟಿ ಆಗಿ ಬರಲು ನನ್ನ ಅಕ್ಕ ಮತ್ತು ಅಕ್ಕನ ಗಂಡ 17-11-2013 ರಂದು ದುಬೈಗೆ ಹೋಗಿದ್ದು ಅವರ ಮನೆಯಲ್ಲಿ ಯಾರು ಇಲ್ಲದ ಕಾರಣ ನಾನೆ ದಿನಾಲು ಮಲಗಲು ಹೋಗಿ ಬರುತ್ತಿರುವೇನು ದಿನಾಂಕ 12-12-2013 ರಂದು ರಾತ್ರಿ 11.30 ಗಂಟೆ ವರೆಗೆ ನಾನು ನನ್ನ ಅಕ್ಕನ ಮನೆಯಲ್ಲಿ ಇದ್ದು ನಂತರ ಸದರಿ ನಮನೆಯಲ್ಲಿ ಒಂದು ಲೈಟ ಹಾಕಿ ಮನೆಗೆ ಕೀಲಿ ಹಾಕಿಕೊಂಡು ನನ್ನ ಮನೆಗೆ ಮಲಗಿಕೊಳ್ಳಲು ಹೋದೆನು ಇಂದು ದಿನಾಂಕ 13-12-2013 ರಂದು ಬೆಳಿಗ್ಗೆ ಎದ್ದು 8-00 ಗಂಟೆಗೆ ನನ್ನ ಅಕ್ಕನ ಮನೆಯ ಕಂಪೌಂಡಿಗೆ ಹಾಕಿದ ಬೀಗ ತೆಗೆದು ನೂಕಲು ಗೇಟ್ ತೆರೆಯಲಿಲ್ಲಾ ಒಳಗಡೆ ಯಾರೋ ಕೊಂಡಿ ಹಾಕಿದ್ದರಿಂದ ನಾನು ಕಂಪೌಂಡ ಹಾರಿ ಮನೆಯ ಮುಖ್ಯ ಬಾಗಿಲು ತೆರೆಯಲು ನೋಡಿದಾಗ ಬಾಗಿಲ ಕೀಲಿ ಯಾರೋ ಕಟ್ ಮಾಡಲು ಪ್ರಯತ್ನಿಸಿದ್ದು ಅದು ತೆರೆಯದೆ ಇದ್ದಾಗ ಪಕ್ಕದ ಸಿಟ್ಔಟ ಕೋಣೆ ಬಾಗಲದ ಕಿಡಕಿ ಗ್ಲಾಸ ಒಡೆದು ಒಳಗೆ ಕೈ ಹಾಕಿ ಕೊಂಡಿ ತೆರೆದು ಒಳಗೆಡೆ ಪ್ರವೇಶ ಮಾಡಿ ಕಿಚನ್ ಕೋಣೆಯ ಕಡೆಗೆ ಇರುವ ಬಾಗಿಲನ್ನು ಮುರಿದು ಬೆಡ್ ರೂಮಿನ ಬಾಗಿಲಿನಿಂದ ಪ್ರವೇಶ ಮಾಡಿ 2 ಅಲಮಾರಿ ಬೀಗ ಮುರಿದು ಬೆಳ್ಳಿ ಬಂಗಾರದ ಆಭರಣ ನಗದು ಹಣ ಹೀಗೆ ಒಟ್ಟು 1,67,500/- ರೂ ಕಿಮ್ಮತ್ತಿನ ಬೆಲೆಯುಳ್ಳ ಸಾಮಾನು ಯಾರೋ ಕಳ್ಳರು ರಾತ್ರಿ 12.00 ಗಂಟೆಯಿಂದ ಬೆಳಗಿನ ಜಾವ 5.00 ಗಂಟೆ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸುನೀಲಕುಮಾರ  ತಂದೆ ತಿಪ್ಪಣ್ಣಾ ಸಾ:ವಿಧ್ಯಾನಗರ   ಗುಲಬರ್ಗಾ ರವರು ದಿನಾಂಕ 19-11-2013 ರಂದು ಸಾಯಂಕಾಲ 06-30 ಗಂಟೆಗೆ ತಾನು ಮತ್ತು ತಂದೆ ತಿಪ್ಪಣ್ಣಾ ಇವರು ಅಟೋರೀಕ್ಷಾ ನಂ: ಕೆಎ 32 - 9417 ನೆದ್ದರಲ್ಲಿ ಕುಳಿತು ಎಸ್.ಬಿ.ಪೆಟ್ರೋಲ್ ಪಂಪ್ ದಿಂದ ಕೋರ್ಟ ರೋಡ ಕಡೆಗೆ ಹೋಗುತ್ತಿದ್ದಾಗ ಕೆ.ಇ.ಬಿ. ಆಫೀಸ  ಹಿಂದಿನ ರೋಡ ಮೇಲೆ ಅಟೋರೀಕ್ಷಾ ಚಾಲಕ ಅನೀಲಕುಮಾರ ಈತನು ತನ್ನ ಅಟೋರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡ ಜಂಪಿನಲ್ಲಿ ಕಟ್ ಹೊಡೆದಿದ್ದರಿಂದ ಅಟೋರೀಕ್ಷಾ ಬಾಗಿಲ ಹತ್ತಿರ ಕುಳಿತಿದ್ದ  ತಿಪ್ಪಣ್ಣಾ ಈತನು ಅಟೋ ದಿಂದ ಕೆಳಗೆ ಬಿಳಿಸಿ  ಭಾರಿ ಗುಪ್ತ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಮಾಡಲು ಪ್ರಯತ್ನ :
ನರೋಣಾ ಠಾಣೆ : ಶ್ರೀ  ಪ್ರಲ್ದಾದ ತಂದೆ ಶಾಮರಾವ ಪಾಟೀಲ್ ಉದ್ಯೋಗ ಎಸ್ ಬಿ ಐ ಕಡಗಂಚಿ ಶಾಖೆಯ ವ್ಯವಸ್ಥಾಪಕ ಪ್ಲಾಟ ನಂ 15 . ಎಸ್ ಬಿ ಐ ಕಾಲೋನಿ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ದಿನಾಂಕ 12-12-2013 ರಂದು ನಾನು ಕಡಗಂಚಿ ಬ್ಯಾಂಕಿಗೆ ಕರ್ತವ್ಯ ನಿರ್ವಹಿಸಲು ಗುಲಬರ್ಗಾದಿಂದ ಶ್ರೀ.ಗೋವಿಂದ ವಾಮನರಾವ ದೇಶಪಾಂಡೆ [Dy.ಮ್ಯಾನೇಜರ] ಇಬ್ಬರೂ ಕೂಡಿ ಬಸ್ ಮೂಲಕ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಹತ್ತಿರ  ಬೆಳಿಗ್ಗೆ 9-40 ಕ್ಕೆ ನಮ್ಮ ಶಾಖೆಯ  ಹಣಕಾಸಿನ ಅಧಿಕಾರಿಯಾದ ಕರಬಸಪ್ಪ ತಂದೆ ಈರಪ್ಪ ಗಡಬಳ್ಳಿಯವರು ನನ್ನ ದೂರವಾಣಿಗೆ 9448991852 ಕ್ಕೆ ಕರೆಮಾಡಿ ನಮ್ಮ ಬ್ಯಾಂಕಿನ ಮುಂದಿನ ಬಾಗಿಲಿಗೆ ಒಳಗಿನಿಂದ ಬೋಲ್ಟ ಹಾಕಿದ್ದರಿಂದ ಬಾಗಿಲು ತೆಗೆಯುತ್ತಿಲ್ಲ ಇದರಿಂದ  ಸಂಶಯಗೊಂಡು ಕಟ್ಟಡದ ಸುತ್ತಲು ತಿರುಗಾಡಿ ನೋಡಿದಾಗ ಹಿಂದಿನ ಗೋಡೆ ಕಿಟಕಿಯ ಕಬ್ಬೀಣದ ರಾಡುಗಳನ್ನು ಯಾರೋ ಕಳ್ಳರು ಮುರಿದು ಮಣಿಸಿ ಒಳಗೆ ಪ್ರವೇಶ ಮಾಡಿದಂತೆ ಕಂಡು ಬರುತ್ತಿದೆ ಎಂದು ತಿಳಿಸಿದರು ನಂತರ ಬೆಳಿಗ್ಗೆ 10-00 ಗಂಟೆಗೆ ನಾನು ಶಾಖೆಗೆ ಬಂದು ನೋಡಲಾಗಿ ಮುಖ್ಯ ಬಾಗಿಲಿನ ಒಳಗಡೆ ಬೋಲ್ಟ ಹಾಗಿದ್ದು  ಹಿಂದಿನ ಕಿಟಕಿಯ ರಾಡುಗಳನ್ನು ಯಾರೋ ಮಣಿಸಿದ್ದರು ಆಗ ನಾನು ನರೋಣಾ ಪೊಲೀಸ ಠಾಣೆಗೆ ,ಗುಲಬರ್ಗಾ ಕಂಟ್ರೋಲ್ ರೂಮಗೆ ಮತ್ತು ನಮ್ಮ ಮೇಲಾಧಿಕಾರಿಗೆ ಪೋನ ಮಾಡಿ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲೆ ಪೊಲೀಸರು ಬಂದು ಸಿಬ್ಬಂದಿಯವರು ಬ್ಯಾಂಕ ಒಳಗೆ ಹೋಗಿ ನೋಡಲಾಗಿ ಭದ್ರತಾ ಕೋಣೆ ಮುಂಭಾಗದಲ್ಲಿರುವ ಅಕೌಂಟೆಂಟ ಸೇಫನ ವೆಲ್ಟಿಂಗ ಒಡೆದು ಒಂದು ಭಾಘದ ತಗಡು ಕಟಮಾಡಿದ್ದು ಮತ್ತು ಭದ್ರತಾ ಕೋಣೆಯ ಬಾಗಿಲಿನ ಕೀಲಿ ಹಾಕುವ ಜಾಗದಲ್ಲಿ. ಎರಡು ರಂದ್ರಗಳು ಹಾಕಿದ್ದು ಕಂಡು ಬರುತ್ತದೆ.ಶಾಖೆಯಲ್ಲಿನ ಹಣ ಮತ್ತು ಇತರೆ ಯಾವುದೆ ಬೆಲೆ ಬಾಳುವ ಸಾಮಾಣುಗಳು ಕಳುವು ಆಗಿರುವದಿಲ್ಲ ಸಿ ಸಿ ಟಿ ವಿ ಪ್ರಕಾರ ಈ ಗಟನೆಯ ದಿನಾಂಕ 11-12-2013 ರಂದು ರಾತ್ರಿ 11-45 ಗಂಟೆಯಿಂದ ದಿನಾಂಕ 12-12-2013 ರ ಮುಂಜಾನೆ 5 ಗಂಟೆಯ ಮಧ್ಯದಲ್ಲಿ ಜರುಗಿರುವದು ಕಂಡು ಬರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ನಾಡ ಪಿಸ್ತೂಲ ಮಾರಾಟ ಮಾಡುತ್ತಿದ್ದವರ ಬಂಧನ :              
ಗ್ರಾಮೀಣ ಠಾಣೆ : ದಿನಾಂಕ 11-12-2013 ರಂದು ರಾಮ ನಗರ ಬಡಾವಣೆಯ ಹತ್ತಿರ ಸೆಂಟ್ರೇಲ್ ಎಕ್ಸೈಜ್ ಕಛೇರಿಯ ಹತ್ತಿರ ಬಯಲು ಜಾಗೆಯಲ್ಲಿ ಇಬ್ಬರು ಅಕ್ರಮವಾಗಿ  ಪಿಸ್ತೂಲುಗಳು ಮಾರಾಟ ಮಾಡುತ್ತಿರುವರೆಂಬ ಬಾತ್ಮಿ ಮೇರೆಗೆ ಮಾನ್ಯ ಸಂತೊಷ ಬಾಬು ಎ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಇವರ ಮಾರ್ಗ ದರ್ಶನದಲ್ಲಿ ಶ್ರೀ ಡಿ.ಜಿ ರಾಜಣ್ಣ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಶ್ರೀ ಬಾಪುಗೌಡ ಪಿ.ಎಸ್.ಐ ಮಹಾಗಾಂವ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯರವಾದ ಪ್ರಭುಲಿಂಗ, ಅಯುಬ, ಶಿವಕುಮಾರ, ಹುಸೇನ ಬಾಷಾ, ರಾಜಕುಮಾರ, ನರಸಿಂಹಚಾರಿ, ಗುರುಶಾಂತ, ಕಂಠೆಪ್ಪ, ಹಣಮಂತ, ಅನೀಲ, ಆನಂದ, ಕುಪೇಂದ್ರ, ಮಿರ್ಜಾ ಅಮಜದ ಬೇಗ ಮತ್ತು ಭವಾನಸಿಂಗ ಈ ರೀತಿಯಾಗಿ ತಂಡ ರಚನೆ ಮಾಡಿ ಸೆಂಟ್ರಲ್‌ ಎಕ್ಸೈಜ್ ಕಛೇರಿಯ ರಾಮನಗರ ಹತ್ತಿರ ಬಯಲು ಜಾಗೆಯಲ್ಲಿ ಮಧ್ಯಾಹ್ನ ದಾಳಿ ಮಾಡಿ ಆಪಾದಿತರಾದ 1. ದತ್ತು ತಂದೆ ಸಕಾರಾಮ, ಸಾ: ರಾಮ ನಗರ ಗುಲಬರ್ಗಾ, 2. ವಿನೋದ ತಂದೆ ರಾಣಪ್ಪ ವಳಕರ್, ಸಾ: ಸಂಜೀವ ನಗರ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ, ಸದರಿಯವರಿಂದ ನಾಡ ಪಿಸ್ತೂಲು – 02, ಅಂದಾಜು ಕಿಮ್ಮತ್ತು 1,50,000/- ಹಾಗೂ ಒಂದು ಮೋಟರ ಸೈಕಲ ಅಂದಾಜು ಕಿಮ್ಮತ್ತು 35,000/-  ಹೀಗೆ ಒಟ್ಟು 1,85,000/-ರೂ ಬೆಲೆ ಬಾಳುವ ನಾಡ ಪಿಸ್ತೂಲ್ ಮತ್ತು ಮೊಟಾರ ಸೈಕಲ ಜಪ್ತ ಪಡಿಸಿಕೊಂಡು ಆಪಾದಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.