POLICE BHAVAN KALABURAGI

POLICE BHAVAN KALABURAGI

11 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 10-12-2013 ರಂದು  6.45 ಪಿ,ಎಮ್,ಕ್ಕೆ ಮೃತ ಶಿವಲಾಲ ಹೋಸಮನಿ ಇತನು ಪ್ರತಿದಿವಸದಂತೆ ಇಂದು ಕೂಡಾ ಗುರುಶಾಸ್ತ್ರಿ ಇವರ ದನಗಳನ್ನು ಮೆಯಿಸಿಕೊಂಡು ವಾಪಸ ಮಹಾಗಾಂವ ಗ್ರಾಮದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಪೀರಪ್ಪ ಪಲ್ಲಾ ರವರ ಹೋಲದ ಹತ್ತಿರ ರೋಡಿನ ಎಡಗಡೆ ಹೋಗುತ್ತಿದ್ದಾಗ ಟಂಟಂ ನಂ ಕೆ,ಎ, 32 ಬಿ 8482 ನೇದ್ದರ ಚಾಲಕನು ಆತನ ಹಿಂದಿನಿಂದ ಅಂದರೆ ಮಹಾಗಾಂವ ಕ್ರಾಸ ಕಡೆಯಿಂದ ತನ್ನ ವಶದಲ್ಲಿದ್ದ ಸದರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶಿವಲಾಲನಿಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದರಿಂದ ಆತನಿಗೆ ಎದೆಗೆ ಹೊಟ್ಟೆಗೆ ಮತ್ತು ಸೊಂಟಕ್ಕೆ ತರಚೀದ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿ ಎಡಗೈ ಮುರದಿದ್ದು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಅಪಘಾತದ ನಂತರ ಟಂಟಂ ಚಾಲಕ ವಾಹನ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ  ಶ್ರೀ ಉದಯಕುಮಾರ ತಂ ಪ್ರಭು ಹೋಸಮನಿ ಸಾ|| ಮಹಾಗಾಂವ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಅಬ್ದುಲ ಗಫಾರ ತಂದೆ ಅಬ್ದು ರಶೀದ,  ಸಾಃ ಆಲ್ ಖುರೇಷಿ ಪಂಕ್ಷನ್ ಹಾಲ್ ಹತ್ತಿರ ನಯಾ ಮೊಹಲ್ಲಾ ಮಿಜಗುರಿ ಗುಲಬರ್ಗಾ  ರವರು ದಿನಾಂಕ 10-12-2013 ರಂದು 1230 ಪಿ.ಎಮ್ ಕ್ಕೆ ಸಂತ್ರಾಸವಾಡಿ ಬಡಾ ಮಜೀದ ಎದುರುಗಡೆ ಸರಾಫ ಬಜಾರ ಕ್ರಾಸ್ ಹತ್ತಿರ ಮೇನ್ ರೋಡಿನ ಮೇಲೆ ಫಿರ್ಯಾದಿ ನಡೆದುಕೊಂಡು ಸಾತ ಗುಮ್ಮಜ ಕಡೆ ಹೋಗುತ್ತಿದ್ದಾಗ ಆರೋಪಿತನು ತನ್ನ ಗೂಡ್ಸ ಟಂ.ಟಂ ನಂ. ಕೆ.ಎ 32 ಬಿ 7356 ನೇದ್ದನ್ನು ಎಸ್.ಟಿ.ಬಿ.ಟಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಿ ಮಾಡಿ ಭಾರಿ ಗಾಯಗೊಳಿಸಿ ತನ್ನ ವಾಹನ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

10 December 2013

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 09-12-2013 ರಂದು 1930 ಗಂಟೆ ಸುಮಾರಿಗೆ ಸಿದ್ದಿಪಾಷಾ ದರ್ಗಾ ಹತ್ತಿರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಮೇರೆಗೆ ಪಂಚರು ಹಾಗು ಸಿಬ್ಬಂದಿಯೊಂದಿಗೆ ಮಾನ್ಯ ಡಿ.ಎಸ್.ಪಿ ಉಪವಿಭಾಗ ಸಹೇಬರ ಮಾರ್ಗದರ್ಶನದಲ್ಲಿ ಹೊರಟು ಸದರಿ ಸಿದ್ದಿಪಾಷಾ ದರ್ಗಾ ಹತ್ತಿರ ಸಮಿಪ ಹೋಗಿ ದೂರದಿಂದ ನೋಡಲು ಇಬ್ಬರು ಸಾರ್ವಜನಿಕರ ರಸ್ತೆಯಲ್ಲಿ ಕುಳಿತು ಲೈಟ ಬೆಳಕಿನಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರುಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಅಂತಾ ದೈವ ಲಿಲೆ ಮಟಕಾ ಜೂಜಾಟ ಅಂತಾ ಹೇಳಿ ಮಟಕಾ ನಂಬರ್ ಚೀಟಿ ಬರೆದುಕೊಳ್ಳುತ್ತಿದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತಮ್ಮ ಹೆಸರು 1. ಶ್ರೀಮಂತ ತಂದೆ ರಾಮಸಾಳೆ ಸಾಃ ಬಾಪು ನಗರ ಗುಲಬರ್ಗಾ ಅಂತಾ ಹೇಳಿದನು ಅವನಿಂದ ನಗದು ಹಣ 3,950/- ರೂ2 ಮಟಕಾ ಚೀಟಿಗಳು, ಒಂದು ಬಾಲ ಪೇನ ಮತ್ತು ಒಂದು ನೋಕಿಯಾ ಕಂಪನಿ ಮೊಬೈಲ ಅ.ಕಿಃ 1000/- ರೂ ನೆದ್ದವುಗಳು ದೊರೆತವು. ಇನ್ನೊಬನ ಹೆಸರು 2. ಮಹಮ್ಮದ ಯುಸುಫ ತಂದೆ ಮಹಮ್ಮದ ಖಾಜಾಸಾಬ ಚುಲಬುಲ ಸಾಃ ಮೆಹೆಬೂಬ ನಗರ ರಿಂಗರೋಡ ಗುಲಬರ್ಗಾ ಅಂತಾ ಹೇಳಿದನು ಅವನಿಂದ 2,070/- ರೂಪಾಯಿ ಮತ್ತು ನೋಕಿಯಾ ಕಂಪನಿ ಮೊಬೈಲ ಅ.ಕಿ 1,000/- ರೂ ದೊರೆತವು ಹೀಗೆ ಒಟ್ಟು 6,020/- ರೂಪಾಯಿ 2 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲ ಪೇನ್ನ ಹಾಗೂ 2 ನೋಕಿಯಾ ಮೊಬೈಲ ನೆದ್ದನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೋಸ ಮಾಡಿದ ಪ್ರಕರಣ : 
ಸ್ಟೇಷನ ಬಜಾರ ಠಾಣೆ : ಶ್ರೀ ಮೈಜುದ್ದಿನ ತಂಧೆ ಅಲ್ಲಾಹುದ್ದಿನ ಜಾಗೀರದಾರ  ಸಾ|| ರೋಜಾ ಗುಲಬರ್ಗಾ ಹಾ.ವ|| ಅಬುಹಸನತ್ ಕಾಲೂನಿ ಚಂದುಲಾಲ ಬಾರದಾರಿ ಹಿಂದೆ ಹೈದ್ರಾಬಾದ ಇವರು ಸರ್ವೆ ನಂ. 12 ಬಡೆಪೂರ ನೂರ ಬಾಗ ಏರಿಯಾದ ಪ್ಲಾಟ ನಂ. 30 40 X 70 ನೆದ್ದನ್ನು ದಿನಾಂಕ. 06-07-2006  ರಂದು ಫೀರ್ಯಾದಿ ತಮ್ಮ ಮಸಿಯುದ್ದಿನ ತಂದೆ ಅಲ್ಲಾಹುದ್ದಿನ ಇವನು ತಾನೆ ಮೈಜುದ್ದಿನ ಅಂತಾ ಸುಳ್ಳು ದಾಖಲೆ ಸೃಷ್ಠಿಸಿ ಉಪನೊಂದಣಾಧಿಕಾರಿಗಳ ಕಾರ್ಯಲಯಕ್ಕೆ ಹೋಗಿ ಶಾನಾ ನಫೀಸ್ ಗಂಡ ಅನ್ವರ ಹುಲ್ ಹಕ್ ಇವರ ಜಿ.ಪಿ.ಎ ಹೊಲ್ಡರಾದ ಅನ್ವರ ಉಲ ಹಕ್ ಇವರ ಕಡೆಯಿಂದ  ಕರೆಕ್ಷನ ಡಿಡ್ ಮಾಡಿಕೊಂಡು ನಂತರ ದಿನಾಂಕ. 26-06-2006 ರಂದು ಸದರಿ ಮೈಸುದ್ದಿನ ಇವರು ಸದರಿ ಪ್ಲಾಟನ್ನು ಮೈಜೊದ್ದಿನ ಅಂತಾ ಸುಳ್ಳು ದಾಖಲೆ ಸೃಷ್ಠಿಸಿ ತಮ್ಮ ಹೆಂಡತಿಯಾದ ಮಹ್ಮದಿ ಬೇಗಂ ಇವಳ ಹೆಸರಿನಲ್ಲಿ ಉಪನೊಂದಣಿ ಅಧಿಕಾರಿಗಳ ಕಾರ್ಯಲಯದಲ್ಲಿ ಗಿಪ್ಟ ಡಿಡ್ ಮಾಡಿಕೊಂಡು ಮೊಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚಾಂದ ತಂದೆ ಮಿರಜಾ ಸಾಬ ಮಕಂದಾರ ಸಾ : ದೇಸಾಯಿ ಕಲ್ಲೂರ ರವರ ತಮ್ಮನಾದ ಪೈಗಂಬರ ತಂದೆ ಮಿರಜಾ ಸಾಬ ಮಕಂದಾರ ಇವರು ಫಿರ್ಯಾದಿಯ ಟಂಟಂ ಅಪ್ಪೆ ಗುಡ್ಸ್ ನೇದ್ದರ ಬ್ಯಾಟರಿಯನ್ನು ಆರೋಪಿತನು ತೆಗೆದುಕೊಂಡಿದ್ದು ಸದರಿ ಬ್ಯಾಟರಿಯನ್ನು ಇಂದು ದಿನಾಂಕ 09-12-2013 ರಂದು ಸಾಯಂಕಾಲ 7:00 ಗಂಟೆಗೆ ತಮ್ಮ ತಮ್ಮನ  ಮನೆಗೆ ಹೋಗಿ ಹೊರಗೆ ಕರೆದು ನನಗೆ ನನ್ನ ವಾಹನದ ಬ್ಯಾಟರಿ ಕೊಡು ಎಂದು ಕೆಳಿದಾಗ ಆರೋಪಿತನು ಫಿರ್ಯಾದಿಗೆ ನಿನಗೆ ಯಾವುದು ಬ್ಯಾಟರಿ ಕೊಡುವುದಿಲ್ಲ ಏನ ಮಾಡ್ಕೊತಿ ಮಾಡ್ಕೊ ಎಂದು ಅವಾಚ್ಯವಾಗಿ ಬೈದು ರಾಡಿನಿಂದ ತಲೆಗೆ ಮತ್ತು ಎಡಗೈ ರಟ್ಟೆಯ ಮೇಲೆ ಹೊಡೆದು ರಕ್ತ ಗಾಯ ಮತ್ತು ಗುಪ್ತಗಾಯ ಪಡಿಸಿ ಜೀವ ಬೆದರಿಕೆ ಹಾಕಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮತಿ ರುಕ್ಮಿಣಿ ಗಂಡ ವೆಂಕಣ್ಣಾ ಚಾರ್ಯಾ ಪುರಾಣಿಕ  ಸಾ: ಭವಾನಿ ಶಂಕರ ಗುಡಿ ಹತ್ತಿರ ಲಾಲಗೇರಿ ಕ್ರಾಸ್ ಹತ್ತಿರ  ಗುಲಬರ್ಗಾ ರವರು ದಿನಾಂಕ 09-12-2013 ರಂದು 12-45  ಗಂಟೆಗೆ ತನ್ನ ಮೆನೆಯಿಂದ ಜಗತ ಸರ್ಕಲ್ ದಿಂದ ಸುಪರ ಮಾರ್ಕೇಟ ರೋಡಿನಲ್ಲಿರುವ ಪೊಸ್ಟ ಆಫೀಸ್ ಗೆ ಅಟೆಂಡರ ಕೆಲಸ ಮಾಡಲು ಹೋಗುತ್ತಿದ್ದಾಗ ಜಗತ ಸರ್ಕಲ್ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಡಿ 4040 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋ/ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 December 2013

Gulbarga District Reported Crimes

ಅಪಘಾತ ಪ್ರಕರಣಗಳು  :
ಸಂಚಾರಿ ಠಾಣೆ : ಶ್ರೀ ನಾಗರಾಜ ತಂದೆ ಸಿದ್ದಣ್ಣಾ ಲಗಶೇಟ್ಟಿ,  ಸಾಃ ಶೇರು ಸುಲ್ತಾನ ದರ್ಗಾ ಹತ್ತಿರ ಗುಲಬರ್ಗಾ ರವರು  ದಿನಾಂಕ 08-12-2013 ರಂದು 10-30 ಗಂಟೆಗೆ ಮಿಜಗುರಿ ನಯಾ ಮೊಹಲ್ಲಾ ದಲ್ಲಿರುವ ಸೆನೆಟರಿ ಆಫೀಸ್ ಹತ್ತಿರ ಬಾಬಾ ಸ್ಕ್ರ್ಯಾಪ ಅಂಗಡಿಯ ಎದರುಗಡೆ ತನ್ನ ಬೈಸಿಕಲ್ ನಿಲ್ಲಿಸಿ ಅಂಗಡಿಯಲ್ಲಿ ಪೇಪರ ಹಾಕಿ ಮತ್ತೆ ತನ್ನ ಬೈಸಿಕಲ್ ಮೇಲೆ ಹೋಗಬೇಕೆನ್ನುವಷ್ಟರಲ್ಲಿ ಸೆನಟರಿ ಆಫೀಸ್ ಎದರುಗಡೆ ನಿಲ್ಲಿಸಿ ಕೆಂಪು ಟವೇರಾ ಕಾರ ನಂ. ಕೆ.ಎ 03 ಎಮ್.ಡಿ 8514 ನೇದ್ದರ ಚಾಲಕ ಸ್ಟಾರ್ಟ ಮಾಡಿ ಒಮ್ಮೆಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಫಿರ್ಯಾದಿ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ  ಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 08-12-2013 ರಂದು ಬೆಳಗ್ಗೆ 7:10 ಗಂಟೆಯ ಸುಮಾರಿಗೆ ಆಕಾಶ ತಂದೆ ಹಣಮಂತರಾಯ ಹೊಸಮನಿ ಸಾ: ತಿಳಗುಳ ತಾ: ಜಿ: ಗುಲಬರ್ಗಾ ಮತ್ತು ಚಿಕ್ಕಮ್ಮಳಾದ ಶಾಂತಾಬಾಯಿ ಮತ್ತು ಅವರ ಮಗಳು ಜ್ಯೋತಿ ವಯ: 7 ವರ್ಷ ಎಲ್ಲರೂ ಕೂಡಿಕೊಂಡು ಫರತಹಬಾದಕ್ಕೆ ಬಜಾರ ಮಾಡುವ ಸಲುವಾಗಿ ನಮ್ಮ ಕಾಕನ ಮೋಟರ ಸೈಕಲ್‌ ನಂ. ಕೆಎ 36 ಎಸ್‌-2017 ನೆದ್ದನ್ನು ತೆಗೆದುಕೊಂಡು ತಿಳಗೂಳ ಗ್ರಾಮದಿಂದ ಹೊರಟೇನು. ಮುಂದೆ ಎನ್‌ಹೆಚ್‌-218 ರಸ್ತೆಯ ಫರಹತಾಬಾದ ಹತ್ತಿರ ಇರುವ ಕೆಇಬಿ ಹತ್ತಿರ ತಿಳಗೂಳ ಕ್ರಾಸ್‌ ದಾಟಿ ಮುಂದೆ ಬರುತ್ತಿದ್ದಾಗ ಜೇವರ್ಗಿ ಕಡೆಯಿಂದ ಒಬ್ಬ ಕ್ರೂಜರ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ನಾನು ನಡೆಯಿಸಿಕೊಂಡು ಬರುತ್ತಿದ್ದ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಮೂರು ಜನರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಸದರಿ ಕ್ರೂಜರ ಜೀಪ ನಂಬರ ಕೆಎ 32 / 1982 ಅಂತಾ ಇದ್ದು ಸದರಿ ಜೀಪ ಚಾಲಕನು ತನ್ನ ಜೀಪನ್ನು ನಿಲ್ಲಿಸಿದಂಗೆ ಮಾಡಿ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ನರೇಶ ಶೆಟ್ಟಿ ತಂದೆ ಜಗನ್ನಾಥ ಶೆಟ್ಟಿ ಸಾ|| ಎಮ್.ಐ.ಜಿ-14,ಕೆ.ಹೆಚ್.ಬಿ, ಕೆ.ನಾರಾಯಣಪೂರ ಹಳ್ಳಿ ಬೆಂಗಳೂರು ರವರು  ದಿನಾಂಕ 30-11-2013 ರಂದು 2 ಜನರೇಟರಗಳನ್ನು ತೆಗೆದುಕೊಂಡು ಸೊನ್ನ ಗ್ರಾಮದ ಬ್ಯಾರೇಜ ಹತ್ತಿರ ಒಂದು ದೊಡ್ಡ ರೂಮು ಇದ್ದು, ಆ ರೂಮಿನಲ್ಲಿ 2 ಜನರೇಟರಗಳನ್ನು ತಂದು ಇಟ್ಟಿದ್ದು ಜನರೇಟರಗಳಲ್ಲಿ ಒಟ್ಟು 4 Exide ಕಂಪನಿಯ ಬ್ಯಾಟರಿಗಳು ಇರುತ್ತವೆ. ದಿನಾಂಕ 06-12-2013 ರಂದು ಸೈಟ ಮ್ಯಾನೇಜರ ರವರಾದ ವಿಜಯಕುಮಾರ ರವರಿಗೆ ಒಪ್ಪಿಸಬೇಕಾಗಿದ್ದು ಇರುತ್ತದೆ. ಆದ್ದರಿಂದ ದಿನಾಂಕ 05-12-2013 ರಂದು ಬೆಳಿಗ್ಗೆ 09;00 ಗಂಟೆಗೆ ಜನರೇಟರ ರೂಮಿನಲ್ಲಿ ಜನರೇಟರಗಳು ಸ್ವಚ್ಚ ಮಾಡಲು ಹಾಗು ಇನ್ನೀತರ ಕೆಲಸಕ್ಕೆ ಲವ, ಕುಶ, ಸಂಗಮೇಶ ಪ್ಯಾಟಿ ಹಾಗು ಸಂಗಮೇಶ ನಾನು ಅವರನ್ನು ಜನರೇಟರ ರೂಮಿನಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಇದ್ದ ಜನರೇಟರಗಳನ್ನು ಸ್ವಚ್ಚ ಮಾಡಲು ಹಚ್ಚಿದೆನು. ಜನರೇಟರಗಳಲ್ಲಿ ಇದ್ದ ಬ್ಯಾಟ್ರಿಗಳನ್ನು ಹೊರಗೆ ತೆಗೆದು ರೋಮಿನ ಹೊರಗೆ ಖುಲ್ಲಾ ಜಾಗದಲ್ಲಿ ಇಟ್ಟು ಸ್ವಚ್ಚು ಮಾಡುತ್ತಿದ್ದಾಗ, ಅಂದಾಜು ಮದ್ಯಾಹ್ನ 12;30 ಗಂಟೆ ಸುಮಾರಿಗೆ ನನಗೆ ಯಾವುದೋ ಅರ್ಜೆಂಟ ಕರೆ ಬಂದ್ದಿದ್ದರಿಂದ ನಮ್ಮಲ್ಲಿ ಕೆಲಸ ಮಾಡುತ್ತಿದ್ದವರನ್ನು ಇಲ್ಲೇ ಕೆಲಸ ಮಾಡುತ್ತಾ ಇರಿ , ನಾನು ಅಫಜಲಪೂರ ಪಟ್ಟಣಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ  ಹೊದೆನು. ನಂತರ ಮರಳಿ ಸಾಯಂಕಾಲ 5;30 ಗಂಟೆಗೆ ಜನರೇಟರ ರೋಮಿನ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಯಾರು ಇರಲಿಲ್ಲ. ಹೊರಗೆ ಇಟ್ಟಿದ ಬ್ಯಾಟ್ರಿಗಳು ಸಹ ಕಾಣಲಿಲ್ಲಾ ರೂಮಿನಲ್ಲಿ ಹೋಗಿ ಚೆಕ್ಕ ಮಾಡಲಾಗಿ ಅಲ್ಲಿಯು ಸಹ ಬ್ಯಾಟ್ರಿಗಳು ಕಾಣಲಿಲ್ಲಾ. ನನಗೆ ಸಂಶಯ ಮರುದಿನ ದಿನಾಂಕ 06-12-2013 ರಂದು ಸೊನ್ನ ಗ್ರಾಮಕ್ಕೆ ಹೋಗಿ ಸದರಿ ಲವ, ಕುಶ, ಸಂಗಮೇಶ ಪ್ಯಾಟಿ ಹಾಗು ಸಂಗಮೇಶ ನಾವುದಗಿ ರವರನ್ನು ಬೇಟಿಯಾಗಿ ಕಳುವಾದ ಬ್ಯಾಟ್ರಿಗಳ ಬಗ್ಗೆ ವಿಚಾರಿಸಲು ಲವ ಮತ್ತು ಸಂಗಮೇಶ ದೇವರನಾವದಗಿ ರವರು ನಮಗೆ ಗೊತ್ತಿಲ್ಲಾ ನಾವು ಕೆಲಸ ಮುಗಿಸಿಕೊಂಡು ಬಂದಿರುತ್ತೇವೆ ಅಂತಾ ಹೇಳಿದರು. ಆದರೆ ಕುಶ ಮತ್ತು ಸಂಗಮೇಶ ಪ್ಯಾಟಿ ರವರು ತಡವರಿಸುತ್ತಾ ನಮಗೆ ಗೊತ್ತಿಲ್ಲಾ ಅಂತಾ ಗಾಬರಿಯಲ್ಲಿ ಹೇಳಿ, ನಾನು ಕೇಳುತ್ತಿದ್ದರು ಅಲ್ಲಿಂದ ಅವಸರದಲ್ಲಿ ಹೋದರು. ಸದರಿ ಬ್ಯಾಟರಿಗಳನ್ನು ನಮ್ಮ ಹತ್ತಿರ ಕೆಲಸ ಮಾಡಲು ಬಂದಿದ್ದವರಲ್ಲಿ ಕುಶ ಮತ್ತು ಸಂಗಮೇಶ ಪ್ಯಾಟಿ ರವರೆ ಕಳ್ಳತನ ಮಾಡಿರುತ್ತಾರೆ ಅಂತಾ ನನಗೆ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಳಖೇಡ ಠಾಣೆ : ಶ್ರೀಮತಿ ಅನಿತಾ ಗಂಡ ಸುಭಾಷ್ಚಂದ್ರ ಮಾಲಿ ಪಾಟೀಲ ಸಾ|| ಸಂಗಾವಿ ಎಮ್ ಗ್ರಾಮ ರವರು ದಿನಾಂಕ 08-12-13 ರಂದು ಮಧ್ಯಾಹ್ನ 01:00 ಗಂಟೆಗೆ ತನ್ನ ಮನೆಯ ಮುಂದೆ ನಿಂತಿದ್ದಾಗ 1. ದೇವಾನಂದ ತಂದೆ ಭದ್ರಣ್ಣ 2. ಗಂಗಮ್ಮ ಗಂಡ ಭದ್ರಣ್ಣ ಸಾ|| ಇಬ್ಬರು ಸಂಗಾವಿ ಎಮ್ ಗ್ರಾಮ ನನ್ನೊಂದಿಗೆ  ಜಗಳ ತೆಗೆದು ಹೊಡೆ ಬಡೆ ಮಾಡಿದ್ದು ಮತ್ತು ಜಗಳ ಬಿಡಿಸಲು ಬಂದ ನನ್ನ ಮಾವ ಚನ್ನಬಸಪ್ಪ ಇವರಿಗೆ ಹೊಡೆಬಡೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀಮತಿ ನಾಗಮ್ಮ ಗಂಡ ಶರಣಪ್ಪ ಚೆಲುವಾದಿ ಸಾ|| ಸ್ಟೇಷನ್ ತಾಂಡಾ ಮಳಖೇಡ ದಿನಾಂಕ 08-12-2013 ರಂದು ತಮ್ಮ ಮನೆಯ ಮುಂದೆ ತನ್ನ ಗಂಡನೊಂದಿಗೆ ನಿಂತಿದ್ದಾಗ 1. ಮಾಣಿಕಮ್ಮ ಗಂಡ ಶಂಕರ ಚೆಲುವಾದಿ ಸಾ||ಬೆಮಳಖೇಡ 2. ಚಂದ್ರಕಾಂತ ತಂದೆ ನಾಗಪ್ಪ ಸಾ|| ಬಾವಗಿ 3. ಜಗನ್ನಾಥ ಸಾ|| ಗುಲಬರ್ಗಾ ಎಲ್ಗರೂ ಕುಡಿಕೊಂಡು ಬಂದು ಫಿರ್ಯಾದಿದಾರಳಿಗೆ ಅಕ್ರಮವಾಗಿ ತಡೆದು ಕೈಯಿಂದ ಹೊಡೆಬಡೆ ಮಾಡಿ ದುಃಖಪಾತ ಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಮುಧೋಳ ಠಾಣೆ : ಅಂಜಲಪ್ಪ ಅಂಜಿ ತಂದೆ ರಾಮಪ್ಪ ಕಯ್ರೋಳ ಸಾ|| ಗುಂಡೇಪಲ್ಲಿ ಎ.ಪಿ ಈತನು ನಮ್ಮೂರಲ್ಲಿದ್ದು ಇತನ ಪರಿಚಯ ಇರುತ್ತದೆ. ಈತನು ಈಗ ಒಂದು ವರ್ಷದಿಂದ ಎಲ್ಲಿ ಸಿಕ್ಕಲ್ಲಿ ಮಾತಾಡುತ್ತಿದ್ದು ಆಗಾಗ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಿದ್ದನು ನಾನು ಈತನಿಗೆ ನನ್ನ ಹಿಂದೆ ಬರಬೇಡ ನನಗೆ ಮಾತನಾಡಿಸ ಬೇಡ  ನಮ್ಮ ತಂದೆ ತಾಯಿಗೆ ಹೇಳುತ್ತೇನೆ ಅಂತಾ ಹೇಳಿದರೂ ಸದರಿಯವನು ನನಗೆ ನಿನಗೆ ಬಿಡುವುದಿಲ್ಲ ಎತ್ತಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಎಂಧು ಹೇಳುತ್ತಿದ್ದನು ದಿನಾಂಕ 05-12-2013 ರಂದು ಮದ್ಯಾಹ್ನ 2 ಗಂಟೆಗೆ ಸುಮಾರಿಗೆ ನಾನು ಹಾಗೂ ನನ್ನ ತಂಗಿ ಅಶ್ವಿನಿ ಇಬ್ಬರೂ ನಮ್ಮ ತೊಗರಿ ಹೊಲಕ್ಕೆ ಕೆಲಸಕ್ಕೆ ಹೋದಾಗ ಸದರಿ ಅಂಜಲಪ್ಪ ಈತನು ನಮ್ಮ ಹಿಂದೆ ಹೊಲಕ್ಕೆ ಬಂದು ನನಗೆ ನಾವಿಬ್ಬರೂ ಮುಂಬಯಿಗೆ ಹೋಗೊಣಾ ನಡೆ ನಾವಿಬ್ಬರೂ ಮದುವೆ ಮಾಡಿಕೊಳ್ಳೋಣಾ ಎಂದು ಹೇಳಿದನು ಆಗ ನಾನು ಚಿಕ್ಕವಳಿದ್ದೇನೆ ನಾನು ಮದುವೆ ಮಾಡಿಕೊಳ್ಳುವುದಿಲ್ಲ ನೀನು ಇಲ್ಲಿಂದ ಹೋಗು ಹೋಗದಿದ್ದರೆ ನಾನು ಚೀರಾಡುತ್ತೇನೆ ಅಂತಾ ಹೇಳಿದಾಗ ಸದರಿಯವನು ನನಗೆ ರಂಡಿ ನೀನು ಚೀರಾಡಿದರೆ ನಿನಗೆ ಹೊಡೆದು ಕಲಾಸು ಮಾಡುತ್ತೆನೆ ಅಂತಾ ಬೆದರಿಕೆ ಹಾಕಿ ಬಲವಂತವಾಗಿ ನನಗೆ ಕೈಹಿಡಿದು ಎಳೆದುಕೊಂಡು ಹೊಲದಿಂದ ಲಿಂಗಂಪಲ್ಲಿ ಗೇಟ್ ವರೆಗೆ ಕರೆದುಕೊಂಡು ಬಂದು ಅಲ್ಲಿಂದ ಹೈದರಾಬಾದಿಗೆ ರಾತ್ರಿ 11 ಗಂಟೆಗೆ ಬಂದು ಮೆಂದಿ ಪಟ್ನಂ ಎರೆಯಾದಲ್ಲಿರುವ ಒಂದು ಲಾಡ್ಜಿಂಗ್ ದಲ್ಲಿ ರೂಂ ಹಿಡಿದು ನನಗೆ ರೂಂನಲ್ಲಿ ಕೂಡಿ ಹಾಕಿ ದಿನಾಂಕ 05-12-2013 ರಿಂದ 08-12-2013 ರ ವರೆಗೆ ದಿನಾಲು ಮೇಲಿಂದ ಮೇಲೆ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ ದಿನಾಂಕ 08-12-2013 ರಂದು ನಾನು ಲಾಡ್ಜ ರೂಮನಿಂದ ತಪ್ಪಿಸಿಕೊಂಡು ಬಂದು ರಾವಲಪಲ್ಲಿಗೆ ಬಂದು ನನ್ನ ತಾಯಿ ಚಿಕ್ಕಪ್ಪನನ್ನು ಕರೆಯಿಸಿ ವಿಷಯ ತಿಳಿಸಿರುತ್ತೆನೆ ಅಂತಾ  ಕುಮಾರಿ ಸಾ|| ಗುಂಡೇಪಲ್ಲಿ (ಕೆ) ಗ್ರಾಮ ತಾ|| ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೇಯಾದ ಪ್ರಕರಣ :
ಅಶೋಕ ನಗರ ಠಾಣೆ :   ಶ್ರೀ. ಬುದ್ಯಾನಾಯ್ಕ ತಂದೆ ಶೇಶ್ಯಾನಾಯ್ಕ  ರಾಠೋಡ ಸಾ: ಇಟಕಲ ತಾಂಡಾ ತಾ: ಸೇಡಂ ರವರ ಮಗನಾದ ಶಶಿಕುಮಾರನು ಗುಲಬರ್ಗಾದ ಮಹೇಶ ಪಿ.ಯು ಕಾಲೇಜದಲ್ಲಿ  ಪಿ.ಯು.ಸಿ ಸೈನ್ಸ ವಿದ್ಯಾಭ್ಯಾಸ ಮಾಡುತ್ತಿದ್ದು, ಸಾಯಿ ಮಂದಿರ ಹತ್ತಿರ ಅಯ್ಯಣ್ಣ ರವರ ಮನೆಯಲ್ಲಿ ಬಾಡಿಗೆ ರೂಮ ಹಿಡಿದುಕೊಂಡು ಇರುತ್ತಾರೆ. ಅವನ ರೂಮಿನಲ್ಲಿ ನಮ್ಮ ಸಂಬಂಧಿಕರಾದ 1.ಹಣಮ್ಯಾ ನಾಯ್ಕ  2.ರಾಜಕುಮಾರ ಚಿನ್ನಾರಾಠೋಡ ರವರು ಇರುತ್ತಾರೆ.  ನನ್ನ ಮಗ ಶಶಿಕುಮಾರ ಇತನು 8 ದಿವಸದ ಹಿಂದೆ ನಮ್ಮ ಊರಿಗೆ ಬಂದು ಹೋಗಿದ್ದು  ದಿನಾಂಕ 06-12-2013 ರಂದು 11 ಗಂಟೆ ಸುಮಾರಿಗೆ ಶಶಿಕುಮಾರನು ರೂಮಿನಿಂದ ಎಲ್ಲೋ ಹೊರಗಡೆ ಹೋಗಿದ್ದು, ಇಲ್ಲಿಯವರೆಗೆ ಮರಳಿ ಬಂದಿರುವುದಿಲ್ಲಾ.  ಅಂತಾ  ನನ್ನ ಮಗ ರೂಮಿನಲ್ಲಿರುವ ಹಣಮ್ಯಾ ನಾಯ್ಕ ರವರು ಪೋನ ಮಾಡಿ ಹೇಳಿದ್ದರಿಂದ ನಾನು ಗುಲಬರ್ಗಾಕ್ಕೆ ಬಂದು ಹಣಮ್ಯಾ ನಾಯಕ್, ರಾಜಕುಮಾರ ರವರೊಂದಿಗೆ ಕೂಡಿಕೊಂಡು ಅವರ ಕಾಲೇಜಿಗೆ ಹೋಗಿ ವಿಚಾರಿಸಿದ್ದು ಮತ್ತು ಅವನ ಗೆಳೆಯರು ಹಾಗೂ ನಮ್ಮ ಸಂಬಂಧಿಕರಿಗೆ ಪೋನಮಾಡಿ ವಿಚಾರಿಸಿ ಎಲ್ಲಾ ಹುಡುಕಾಡಿದ್ದು ಇಲ್ಲಿಯವರೆಗೆ ನನ್ನ ಮಗ ಸಿಕ್ಕಿರುವುದಿಲ್ಲಾ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.