POLICE BHAVAN KALABURAGI

POLICE BHAVAN KALABURAGI

17 November 2013

Gulbarga District Reported Crimes

ದರೋಡೆ ಪ್ರಕರಣ :
ಚೌಕ ಠಾಣೆ : ದಿನಾಂಕ 10-11-2013 ರಂದು ಶ್ರೀ ರಾಜಶೇಖರ ತಂದೆ ಯಶ್ವಂತರಾವ ಬಿರಾದಾರ ಸಾ: ಮುತ್ತುಟ ಫೈನಾನ್ಸ ಮ್ಯಾನೇಜರ ಹುಮನಾಬಾದ ಬೇಸ ಗುಲಬರ್ಗಾ ರವರು ದಿನಾಂಕ 116-11-2013 ರಂದು ಬೆಳಗ್ಗೆ 0900 ಗಂಟೆಗೆ ತನ್ನ ಜೋತೆ ಕ್ಯಾಶೀಯರ ಶ್ರೀಮತಿ ನೀತುಸಿಂಗ, ಶ್ರೀಮಂತ ಅಪರೈಜರ ಫರ್ಜಾನ ಜೂಯಿಂಟ ಕಸ್ಟಡಿ ಹಾಗು ರುದ್ರಗೌಡ ಗಾರ್ಡ ಎಲ್ಲರು ಕೂಡಿಕೊಂಡು ನಮ್ಮ ಮುತ್ತುಟ ಪಿನ್ ಕಾರ್ಪ ಬಾಗಿಲು ತರೆದು ಮೇಲುಗಡೆ ಬಂದು ಕುಳಿತುಕೊಂಡಿದ್ದು ಸುಮಾರು 09-20 ರ ಸಮಯಕ್ಕೆ ಇಬ್ಬರು ವ್ಯಕ್ತಿಗಳು ಬಂದು ನಮಗೆ ಗೋಲ್ಡ ಲೋನ ಬೇಕಾಗಿದೆ ಇವತ್ತಿನ ರೇಟ ಎನಿದೆ ಅಂತಾ ಹಿಂದಿ ಭಾಷೆಯಲ್ಲಿ ಕೇಳಿದರು ಅದಕ್ಕೆ ನಾನು ಒಂದು ಗ್ರಾಂಗೆ 1900/- ರೂ ಕೊಡುತ್ತೆವೆ ಅಂತಾ ಹೆಳಿದ್ದು  ಅವರು ನಮ್ಮ ಹತ್ತಿರ 2 ತೋಲೆ ಲಾಕೀಟ ಇದೆ ಅದಕ್ಕೆ ಎಷ್ಟು ಲೋನ ಮಾಡುತ್ತಿರಿ ಅಂತಾ ಹಿಂದಿ ಬಾಷೆಯಲ್ಲಿ ಕೇಳಿದ್ದು ಅದಕ್ಕೆ ನಾನು 48,000/- ರೂ ಬರುತ್ತದೆ ಅಂತಾ ಹೇಳಿದೆ ಆಗ ಅವರು ನಮಗೆ ಎಂಟ್ರಿ ಮಾಡಿಕೊಳ್ಳಿ ಅಂತಾ ಹೇಳಿದರು ನಾನು ಐಡಿ ಪ್ರುಫ ಕೇಳಿದೆ ಅಸ್ಟರಲ್ಲಿ ಅವರು ಹೋರಗಡೆ ಹೋಗಿ 3-4 ನಿಮೀಷದಲ್ಲಿ ಮರಳಿ ಬಂದು ನಮ್ಮ ಗಾರ್ಡ ರುದ್ರಗೌಡ ಇವರಿಗೆ ಕುಡಿಯಲು ನೀರು ಕೇಳಿದ್ದು ಅಷ್ಟರಲ್ಲಿ 4 ಜನ ವ್ಯಕ್ತಿಗಳು ಮುಖಕ್ಕೆ ಮಂಕಿ ಕ್ಯಾಪ ಮತ್ತು ಮೈಮೇಲೆ ಸ್ವಟರ ಹಾಕಿಕೊಂಡು ಬಂದರು ಸದರಿ ನಾಲ್ಕು ಜನರು ಕೈಯಲ್ಲಿ ಸಣ್ಣ ತಲವಾರಗಳನ್ನು ಹಿಡಿದು ನಮ್ಮ ಕುತ್ತಿಗೆಗೆ ಹಚ್ಚಿ ನನ್ನ ಮೊಬೈಲ ಕಿತ್ತುಕೊಂಡಿದ್ದು  ಅದರಲ್ಲಿ ಇಬ್ಬರು ಸ್ಟ್ರಾಂಗ ರೂಮ ಕಡೆಗೆ ಹೋಗಿ ಚಾವಿ ಕೇಳಿದ್ದು ಇಲ್ಲಾ ಅಂತಾ ಹೆಳಿದ್ದಕ್ಕೆ ಜಬರದಸ್ತಿಯಿಂದ ಚಾವಿ ಎಲ್ಲಿದೆ ಹೇಳಿದರೆ ಸರಿ ಇಲ್ಲಾ ಅಂದರೆ ನಿಗೆ ಪಿಸ್ತೂಲನಿಂದ ಹೋಡೆದು ತಲವಾರದಿಂದ ಹೊಡೆದು ಚಾವಿ ಕಿತ್ತುಕೊಂಡು ಬೆರೆ ಬೆರೆ ಚಾವಿ ಹಾಕಿ ಸ್ಟ್ರಾಂಗ ರೂಮ ಚಾವಿ ತೆರೆದು ಒಳಗೆ ಪ್ರವೇಶ ಮಾಡಿ ಸ್ಟ್ರಾಂಗ ರೂಮನಲ್ಲಿ ಇಟ್ಟಿದ್ದ 325 ಗ್ರಾಹಕರು ವಿವಿಧ ತರಹದ ಬಂಗಾರದ ಒಡವೆಗಳನ್ನು ಅಡವಿಟ್ಟಿದ್ದು ಒಟ್ಟು 7030 ಗ್ರಾಂ ಬಂಗಾರದ ಒಡವೆಗಳು ಅವುಗಳ ಇಂದಿನ ಕಿಮ್ಮತ್ತು 2,10,90,000/- ರೂ ಆಗುತ್ತದೆ ಣಾವು ಗ್ರಾಹಕರಿಗೆ 1,29,84,656/- ಸಾಲ ಕೊಟ್ಟಿದ್ದು ನಗದು ಹಣ 2 ಲಕ್ಷ ಎಲ್ಲವನ್ನು ತಾವು ತಂದಿದ್ದ ಕಪ್ಪು ಬ್ಯಾಗಿನಲ್ಲಿ ಹಾಕಿಕೊಂಡು ನಮ್ಮನ್ನು ಸ್ಟ್ರಾಂಗ ರೂಮನಲ್ಲಿ ಕೂಡಿ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 16-11-2013 ರಂದು ಬೆಳಗ್ಗೆ 8-30 ಎ.ಎಮ್ ಕ್ಕೆ ಶ್ರೀ ದಶರಥ ತಂದೆ ಜೋತಿರಾವ ಮಾನೆ, ಸಾಃ ಜಿ.ಆರ್ ನಗರ ಖಾದ್ರಿ ಚೌಕ, ಗುಲಬರ್ಗಾ ರವರು ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ 7448 ನೇದ್ದನ್ನು ಚಲಾಯಿಸಿಕೊಂಡು ಶಹಾಬಜಾರ ನಾಕಾ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ವಿ 4033 ನೇದ್ದರ ಚಾಲಕನು ಹಿಂದಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾಥ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರವಿ ತಂದೆ ಸುರೇಶ ಇವರು  ದಿನಾಂಕ 16-11-2013 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಮತ್ತು  ಕಾಂತು ಹಾಗು ಸುರೇಶ 3 ಜನರು ಕೂಡಿಕೊಂಡು ನೆಹರು ಗಂಜ ಹತ್ತಿರ ಗೌಂಡಿ ಕೆಲಸಕ್ಕೆ ಹೋಗುವ ಸಲುವಾಗಿ ನೊಬಲ ಸ್ಕೂಲ ಹತ್ತಿರ ಅಟೋರಿಕ್ಷಾ ನಂಬರ ಕೆಎ-32 -8165 ನೇದ್ದರಲ್ಲಿ ಕುಳಿತು ಎಸ್.ವಿ.ಪಿ ಸರ್ಕಲ ಮುಖಾಂತರ ಜಗತ ಸರ್ಕಲ ಕಡೆಗೆ ಹೋಗುತ್ತಿದ್ದಾಗ ಅಟೋರಿಕ್ಷಾ ಚಾಲಕನು ಅತೀವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೆ ಕಟ್ಟ ಹೊಡೆದು ಬ್ರೇಕ ಹಾಕಿ ಸೆಂಟರ ಕಾಮತ ಎದುರಿನ ರೋಡಿನ ಮೇಲೆ ಅಟೋರಿಕ್ಷಾ ಪಲ್ಟಿ ಮಾಡಿ ಭಾರಿಗಾಯಗೊಳಿಸಿ ಅಟೋರಿಕ್ಷಾ ಚಾಲಕನು ಹೇಳದೆ ಕೇಳದೆ ಹೊರಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿದಿ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗು ಕಸಿದುಕೊಂಡು ಹೋದ ಪ್ರಕರಣ:
ಮಳಖೇಡ ಠಾಣೆ: ಶ್ರೀಮತಿ ರಾಧೀಕಾ ಗಂಡ ರಾಮಚಂದ್ರ ಗೊಂದಲಿಗೇರ ಇವರು   ದಿನಾಂಕ 15/10/2013 ರಂದು ಮಧ್ಯಾಹ್ನ ಶ್ರೀಮತಿ ಕಲಾವತಿ ಯೊಂದಿಗೆ ಮಳಖೇಡ ಸ್ಟೇಷನ್ ತಾಂಡಾ ಹತ್ತಿರ ಇರುವ ಹಣಮಂತದೇವರ ದೇವಸ್ಥಾನದ ಹತ್ತಿರ ಕುಳಿತಿದ್ದಾಗ ಸುಭಾಶ ತಂದೆ ಶಿವಪ್ಪ ಗೊಂದಲಿಗೇರ ಸಾ|| ಹಂಚನಾಳ ಆರೋಪಿತನು ಶ್ರೀಮತಿ ರಾಧೀಕಾಳ ಹತ್ತಿರ ಇದ್ದ ೦3 ತಿಂಗಳ ಮಗು ನಾಗಮಣಿಯನ್ನು ಕಸಿದುಕೊಂಡು ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೇ ಜಾರಿಯಲ್ಲಿರುತ್ತದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರಿ ನರಸಪ್ಪ ತಂದೆ ಹುಸೇನಪ್ಪ ಮೇತ್ರೀ ಸಾ: ನಾಚವಾರ ತಾ; ಸೇಡಂ ಇವರು ದಿನಾಂಕ:  15-11-2013ರಂದು ರಾತ್ರಿ 8-30 ಗಂಟೆಗೆ ಗ್ರಾಮದ ಮಸಿದಿಯಲ್ಲಿ ಮೋಹರಂ ಹಬ್ಬದ ದೇವರುಗಳು ಸವಾರಿ ನೋಡಲು ನಾನು ಮಸಿದಿಗೆ ಹೋದಾಗ ಮೈಹೀಪಾಲರೆಡ್ಡಿಯು ತನ್ನ ತಂದೆಯಾದ ಭಿಮರೆಡ್ಡಿ ,ಅಣ್ಣನಾದ ವಿಶ್ವನಾಥರೆಡ್ಡಿ ,ತಮ್ಮ ಗೋಪಾಲರೆಡ್ಡಿ ಹಾಗೂ ಅವನ ದೊಡ್ಡಪ್ಪನ ಮಗ ಗೋವಿಂದರೆಡ್ಡಿ ,ಶರಣಪ್ಪ ಇವರು ತಮ್ಮ ಕೈಗಳಲ್ಲಿ ಎಲ್ಲರು ಬಡಿಗೆ ಹಿಡಿದುಕೊಂಡು ನನ್ನ  ಹತ್ತಿರ ಬಂದು ಮೈಹಿಪಾಲರೆಡ್ಡಿಯು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಜಾತಿ ಎತ್ತಿ ಬೈದು  ಕೈಯಿಂದ ಹೋಡೆದಿದ್ದು ಅವನ ಜೋತೆಗೆ ಇದ್ದ  ಇನ್ನೂಳಿದವರು ಸಹ ಕೈಯಿಂದ ಹೋಡೆದಿದ್ದು ತಲೆಗೆ  ಒಳಪೆಟ್ಟು ಆಗಿರುತ್ತದೆ ಮತ್ತು ಇನ್ನುಳಿದವರು ಕೈಯಿಂದ ಹೊಡೆದಿದ್ದರಿಂದ   ಗುಪ್ತ ಪೆಟ್ಟು ಆಗಿರುತ್ತವೆ.ನನ್ನ ಹೆಂಡತಿಗೆ ಎದೆಗೆ ಬೆರಳಿನ ಉಗುರುಗಳು ತಾಗಿ ತರಚಿದಂತೆ ಗಾಯಾಗಳಾಗಿರುತ್ತವೆ . ನಾನು ನಮ್ಮ ಸಮಾಜದವರಲ್ಲಿ ವಿಚಾರಿಸಿಕೊಂಡು ತಿಳಿಸಿ ಬರಲು ಪಿರ್ಯಾದಿ ಕೊಡಲು  ತಡವಾಗಿರುತ್ತದೆ, ಕಾರಣ ನಮಗೆ ಸದರಿಯವರು ಜಾತಿ ಎತ್ತಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೋಡೆದು ಗುಪ್ತ ಪೆಟ್ಟು ಮಾಡಿ ನನ್ನ ಹೆಂಡತಿಗೆ ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಭೀಮರಾಯ ತಂದೆ ಗಿರೆಪ್ಪಾ ನಾಗನಹಳ್ಳಿ ಸಾ: ತಾವರಗೇರಾ ಮತ್ತು  ಮತ್ತು ಶಿವಲಿಂಗಪ್ಪ ಹಡಪದ, ಮೈನೋದ್ದಿನನ ಮಗ ಮೂವರು ದಿನಾಂಕ 14-11-2013 ರಂದು ಗಂಜ ಬಸಸ್ಟ್ಯಾಂಡದಿಂದ  ತಾವರಗೇರಾ ಗ್ರಾಮಕ್ಕೆ ಆಪಾದಿತನ ಆಟೋರಿಕ್ಷಾ ಕೆಎ 32 ಎ 8052  ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದು, ಆಟೋ ಚಾಲಕ ಬಸವರಾಜ ತನ್ನ ಆಟೋವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬೀರಪ್ಪ ಗುಡಿ ಎದುರಿನ ರೋಡಿನ ಮೇಲೆ ಬಂದಾಗ ಎದುರುನಿಂದ ಯಾವುದೋ ವಾಹನ  ಬರಲು ಅದಕ್ಕೆ ವೇಗದಲ್ಲಿ ಕಟ್ಟ ಮಡಿದಾಗ ವೇಗದ ನಿಯಂತ್ರಣ ತಪ್ಪಿ ರೋಡಿನ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದು  ನನಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪೂರ ಠಾಣೆ : ಶ್ರೀ  ವಿನೋದ ತಂದೆ ಮನಹೋರ ತಳವಾರ ಸಾ; ಸೊಂತ ತಾ; ಜಿ; ಗುಲಬರ್ಗಾ ಇವರ ಸಂಭಂದಿಕರ ಜವಳ ಕಾರ್ಯಕ್ರಮದ ಸಲುವಾಗಿ ಸದರ ಕಾರ್ಯಕ್ರಮಕ್ಕೆ ಹೋಗುವ ಕುರಿತು ದಿನಾಂಕ 14-11-2013 ರಂದು ಸಾಯಾಂಕಾಲದ ಸಮಯದಲ್ಲಿ ನಮ್ಮ ಗ್ರಾಮದ ಶೇರು ತಂದೆ ಯೂಸೂಫ್ ಇವರು ಚಲಾಯಿಸುವ ಕಮಾಂಡರ ಜೀಪ್ ನಂ. ಕೆಎ-39 –ಎಮ್-204 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡು ನಾನು ಮತ್ತು  1. ಉದಯಕುಮಾರ ತಂದೆ ಮನೋಹರ ತಳವಾರ , 2. ರವಿ ತಂದೆ ಸಿದ್ದಪ್ಪ ತಳವಾರ , 3. ಅಂಭಣ್ಣ ತಂದೆ ಹಣಮಂತ ಇಪಿ ,4. ಶಿವಮ್ಮ ಗಂಡ ರುದ್ರಪ್ಪಾ ರಾಗೆನೂರ ಮತ್ತು 5. ಓಂ ಪ್ರಕಾಸ ತಂದೆ ಗುಂಡಪ್ಪಾ ಇವರು ಕೂಡಿಕೊಂಡು ಜೀಪಿನಲ್ಲಿ ಕುಳಿತು ಹೊರಟಿದ್ದು ,ಜೀಪನ್ನು ಶೇರು ತಂದೆ ಯೂಶೂಫ್ ಈತನು ಚಲಾಯಿಸುತ್ತಿದ್ದನು, ನಾವು ಕುಳತಿ ಹೊರಟ್ಟಿದ್ದ ಜೀಪ ಡೊಂಗರಗಾಂವ ಗ್ರಾಮದ ಹತ್ತಿರ ಹೊಗುತ್ತಿದ್ದಾಗ ಅಲ್ಲಿ ಕೆಲವು ಪ್ರಯಾಣಿಕರು ನಮ್ಮ ಜೀಪಿಗೆ ಕೈ ಮಾಡಿ ನಿಲ್ಲಿಸಿ ನಾವು ಕಾಳಮಂದರ್ಗಿ ಗ್ರಾಮಕ್ಕೆ ಹೋಗುತ್ತಿದ್ದು ನಮ್ಮನ್ನು ಕರೆದುಕೊಂಡು ಹೋಗಿ ಅಂತ ಅಂದಿದ್ದು , ನಮ್ಮ ಜೀಪಿನಲ್ಲಿ ಇನ್ನೂ ಜಾಗ ಖಾಲಿ ಇರುವದ್ದರಿಂದ 3 ಜನ ಪ್ರಯಾಣಿಕರನ್ನು ಜೀಪಿನಲ್ಲಿ ಕೂಡಿಸಿಕೊಂಡು ಕಾಳಮಂದರಗಿ ಕಡೆಗೆ ಹೋಗುತ್ತಿರುವಾಗ ನಮ್ಮ ಜೀಪ ಚಾಲಕನಾದ ಶೇರು ಈತನು ತಾನು ಚಲಾಯಿಸುತ್ತಿದ್ದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತ ಅಡ್ಡಾ ತಿಡ್ಡಿ ಕಟ್ಟ ಹೊಡೆಯುತ್ತಿದ್ದಾಗ ಜೀಪ್ ಕಾಳಮಂದರ್ಗಿ ಸಮೀಪ ಇರುವ ರಾಚಯ್ಯ ಸ್ವಾಮಿ ಇವರ ಹೊಲದ ಹತ್ತಿರ ಹೊಗುತ್ತಿದ್ದಾಗ ಶೇರು ತಂದೆ ಯುಶೂಫ್ ಈತನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಓಮ್ಮಲೆ ಕಟ್ಟ ಮಾಡಿದಾಗ ಜೀಪಿನ ಮೇಲೆ ನಿಯಂತ್ರಣ ತಪ್ಪಿ ಜೀಪನ್ನು ರಸ್ತೆಯ ಎಡಭಾಗಕ್ಕೆ ಪಲ್ಟಿ ಮಾಡಿದ್ದು ಇರುತ್ತದೆ, ನಂತರ ನಾವು ಜೀಪನಿಂದ ಕೆಳಗೆ ಇಳಿದು ನೋಡಲಾಗಿ ಅಂಬಣ್ಣ ತಂದೆ ಹಣಮಂತ ಇಟಿ ನೋಡಲು ಅವರ ಬಲಗಾಲಿಗೆ ಭಾರಿ ಗುಪ್ತಗಾಯಗಳಾಗಿ ಮತ್ತು ಜೀಪಿನಲ್ಲಿ ಕುಳಿತ ಇತರರಿಗೂ ಸಾದಾ ಹಾಗೂ ಭಾರಿ ರಕ್ತ ಮತ್ತು ಗುಪ್ತಗಾಗಳಾಗಿದ್ದು, ಜೀಪ ಚಾಲಕ ಜೀಪನು ಬಿಟ್ಟು ಓಡಿ ಹೊಗಿರುತ್ತಾನೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 November 2013

Gulbarga District Reported Crimes

ಮದುವೆಯಾಗುತ್ತೆನೆ ಅಂತಾ ನಂಬಿಸಿ ಜಬರಿ ಸಂಭೋಗ ಮಾಡಿದ ಪ್ರಕರಣ :
ಚಿಂಚೋಳಿ ಠಾಣೆ : ದಿನಾಂಕ 13-11-2013 ರಂದು ರಾತ್ರಿ 0900 ಗಂಟೆ ಸುಮಾರಿಗೆ ತನ್ನ ಪಕ್ಕದ ತಾಂಡಾದ ನಿವಾಸಿಯಾದ ಪ್ರೆಮಸಿಂಗ ರಾಟೋಡ ಎಂಬುವವನು ತನ್ನ ತಾಂಡಾದ ಸೇವಾಲಾಲ ಮಂದಿರ ಹತ್ತಿರ  ಬಂದು ನಿಂತು ತನಗೆ ಪೋನಮಾಡಿ ಅಲ್ಲಿಗೆ ಬರಲು ಹೇಳಿದ್ದರಿಂದ ತಾನು ಅಲ್ಲಿಗೆ ಹೊಗಿದ್ದು ಅಲ್ಲಿಗೆ ಹೋದ ತನಗೆ ಹೀರೋ  ಹೊಂಡಾ ಮೊಟಾರ ಸಯಕಲ ನಂ. ಕೆ.ಎ- 32 ಇಇ- 2743 ನೇದ್ದರ ಮೇಲೆ ಕೂಡಿಸಿಕೊಂಡು ನಿನಗೆ ಮದುವೆಯಾಗುತ್ತೆನೆ ನಡೆ ಹೋಗೋನಾ ಅಂತಾ ಅಂದು ಚಿಮ್ಮನಚೋಡ – ಸಲಗರ ಬಸಂತಪೂರ ರಸ್ತೆಯ ಮದ್ಯ  ಸೇರಿ ಕ್ರಾಸ ಹತ್ತಿ ತೊಗರಿ ಹೊಲವೊಂದರಲ್ಲಿ ಕರೆದುಕೊಂಡು ಹೋಗಿ ತಾನು ಒಲ್ಲೆ ಅಂತಾ ಅಂದರೂ ನಿನಗೆ ಮದುವೆಯಾಗುತ್ತೆನೆ  ಅಂತ ಹೇಳಿ ನಿನ್ನೆ ದಿನಾಂಕ 13-11-2013 ರ ರಾತ್ರಿ 11.00 ಗಂಟೆಗೆ ತೋಗರಿ ಬೆಳೆಗಳ ಸಾಲುಗಳ ಮದ್ಯ ಬಲ ಜಬರಿ ಸಂಭೋಗ ಮಾಡಿರುತ್ತಾನೆ  ಇದಕ್ಕಿಂತ ಮುಂಚೆ  2 ತಿಂಗಳಗಳ ಹಿಂದೆ ಬಲ ಸಂಭೋಗ ಮಾಡಿರುತ್ತಾನೆ. ಸದರಿ ವಿಷಯದ ಬಗ್ಗೆ ನಮ್ಮ ತಾಯಿ-ತಂದೆಯವರಿಗೆ ಹೇಳಿದರೆ ಬಯ್ಯುತ್ತಾರೆ ಅಂತ ತಿಳಿದು ಹೆಳಿರುವುದಿಲ್ಲಾ ಇಂದು ದಿನಾಂಕ 14.11.2013 ರ ರಾತ್ರಿ 01.00 ಗಂಟೆಗೆ  ಮರಳಿ ಅಲ್ಲಿಂದ ನಮ್ಮ ಮನೆಗೆ ಬಂದಿರುತ್ತೆನೆ. ಇಂದು ದಿನಾಂಕ 14-11-2013 ರ ಬೇಳೆಗ್ಗೆ ಸುಮಾರಿಗೆ ಸದರಿ ಪ್ರೆಮಸಿಂಗನಿಗೆ ನಾವು ಯಾವಾಗ ಮದುವೆ ಯಾಗೋಣ ಅಂತ ಕೇಳಿದಕ್ಕೆ  ಅವನು ತಾನು ಮದುವೆ ಯಾಗುವುದಿಲ್ಲಾ ಅಂತ ಅಂದನು ಅದಕ್ಕೆ ತಾನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಮನೆಯಲ್ಲಿದ್ದ ಕ್ರಿಮಿನಾಶಕ ಔಷದವನ್ನು ಸೇವಿಸಿ ಆತ್ಮ ಹತ್ಯ ಮಾಡಿಕೊಳ್ಳಲು ಪ್ರಯತ್ನಿಸಿರುತ್ತೆನೆ  ಅಂತಾ ಕುಮಾರಿ ಸಾ|| ಪಾಲ್ತ್ಯಾನ ತಾಂಡಾ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಗೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ 14-11-2013 ರಂದು ಬೆಳಗ್ಗೆ 8-30 ಗಂಟೆಗೆ ಕಾಳಮಂದರಗಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಇರುವ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದನ್ನು ನೋಡಿ, ಪಂಚರ ಸಮಕ್ಷಮದಲ್ಲಿ ನಾನು, ಮತ್ತು ಸಿಬ್ಬಂದಿಯವರು ದಾಳಿ ಮಾಡಿದ್ದು. ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದ 08 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಿ, ಅಂಗ ಶೋಧನೆ ಮಾಡಲಾಗಿ, 1. ಶಂಭುಲಿಂಗ ತಂದೆ ನಾಗಮೂರ್ತಿ ಸುತಾರ  2. ತಿಪ್ಪಣ್ಣಾ ತಂದೆ ಅಣ್ಣಾರಾವ ಜಮಾದಾರ 3. ಕವಿರಾಜ ತಂದೆ ಮಾಣಿಕಪ್ಪಾ ಬಿರೆದಾರ 4. ಅವಿನಾಶ ತಂದೆ ಭೀಮಶ್ಯಾ ಮೇತ್ರೆ 5. ಪ್ರಭು ತಂದೆ ಕರಬಸಪ್ಪಾ ಅಳ್ಳಕಟ್ಟಿ ಇವನ 6. ರಾಘವೇಂದ್ರ ತಂದೆ ಬಸವಣ್ಣಾಪ್ಪಾ ಬಿರಾದಾರ 7. ಸುನೀಲ ತಂದೆ ಬಸವಣ್ಣಾ ವಡ್ಡನಕೇರಿ 8. ಈಶ್ವರ ತಂದೆ ಕರಬಸಪ್ಪಾ ಅಳಕಟ್ಟಿ ಇವನ ಹತ್ತಿರ 870-00 ರೂ ಸಾಃ ಎಲ್ಲರೂ ಕಾಳಮಂದರಗಿ  ತಾಃಗುಲಬರ್ಗಾ ಹಾಗು ಎಲ್ಲರ ನಡುವ ಪಣಕ್ಕೆ ಹಚ್ಚಿದ ಹಣ ರೂ ಒಟ್ಟು 7100-00 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕಳ್ಳರ ಬಂಧನ :
ಬ್ರಹ್ಮಪೂರ ಠಾಣೆ :  ದಿನಾಂಕ 14-11-2013  ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಮಾರುತಿ ಎ,ಎಸ್.ಐ. ಬ್ರಹ್ಮಪೂರ ಪೊಲಿಸ್ ಠಾಣೆ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ತಮ್ಮ ವರದಿಯೊಂದಿಗೆ4 ಜನ ಆರೋಪಿತರು ಮತ್ತು ಮುದ್ದೆಮಾಲು ಹಾಗೂ ಪಂಚನಾಮೆ ಹಾಜರಪಡಿಸಸಿದ್ದು ವರದಿಯ ಸಾರಾಂಶ ಎನೆಂದರೆ ದಿನಾಂಕ 14-11-2013 ರಂದು ಬೆಳಗ್ಗೆ 8 ಗಂಟೆಗೆ ಬ್ರಹ್ಮಪೂರ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಾನು ಮತ್ತು ನಮ್ಮ ಅಪರಾಧ ವಿಭಾಗದ ಸಿಬ್ಬಂದಿಯವರಾದ ಪ್ರಕಾಶ ಹೆಚ್.ಸಿ.259, ಶಿವಲಿಂಗಪ್ಪ ಪಿಸಿ 320, ಉದಯಕುಮಾರ ಪಿಸಿ 272 ರವರೊಂದಿಗೆ ಸ್ವತ್ತಿನ ಅಪರಾಧ ಪತ್ತೆ ಮಾಡುವ ಕುರಿತು ಪೇಟ್ರೋಲಿಂಗ್ ಮಾಡುತ್ತಾ ಸಂತ್ರಾಸವಾಡಿ ಮುಖಾಂತರ ಸಾತಗುಂಬಜ್ ಕಾರ್ನರ ಹತ್ತಿರ ಹೋಗುತ್ತಿದಂತೆ ಬೆಳಗ್ಗೆ 9 ಗಂಟೆಗೆ ಎದುರುಗಡೆ ನ್ಯಾಶನಲ್ ಕಾಲೇಜ ಕಡೆಯಿಂದ ಒಂದು ಟಂಟಂ ಟ್ರ್ಯಾಲಿ ವಾಹನದಲ್ಲಿ ಇಬ್ಬರೂ ಹೆಣ್ಣು ಮಕ್ಕಳು ಒಬ್ಬ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಕೂಡಿಕೊಂಡು ಟ್ರ್ಯಾಲಿಯಲ್ಲಿ ಸಾಮಾನುಗಳನ್ನು ತುಂಬಿಕೊಂಡು ಬರುತ್ತಿರುವಾಗ ನಮಗೆ ನೋಡಿ ಅವರು ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಮಗೆ ಸಂಶಯ ಬಂದು ಸದರಿ ವಾಹನವನ್ನು ತಡೆದು ನಿಲ್ಲಿಸಿ ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಅವೇಜ ತಂದೆ ಗೋರೆಭಾಯಿ ಸಾ|| ಮಿಜಗುರಿ ಗುಲಬರ್ಗಾ ಅಂತಾ ಹೇಳಿದನು.  ಇಬ್ಬರೂ ಹೆಣ್ಣು ಮಕ್ಕಳಿಗೆ ವಿಚಾರಿಸಲು ಒಬ್ಬಳ್ಳು ತನ್ನ ಹೆಸರು ಅಗ್ನಿ ತಂದೆ ರಾಮು ಕಾಳೆ ಸಾ|| ಬಾಪೂ ನಗರ ಗುಲಬರ್ಗಾ ಅಂತಾ ಹೇಳಿದ್ದು ಇನ್ನೊಬ್ಬಳು ಮಾಲನ ಗಂಡ ಸಿದ್ರಾಮ ಉಪಾದ್ಯ ಸಾ|| ಬಾಪೂ ನಗರ ಗುಲಬರ್ಗಾ ಅಂತಾ ಹೇಳಿದ್ದು ಮತ್ತು ಇನ್ನೊಬ್ಬ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು ನಜೀರ್ ಅಹ್ಮದ್ ತಂದೆ ಅಜೀಜ್ಉರ್ ರಹಿಮಾನ ಸಾ|| ಸಂತ್ರಾಸವಾಡಿ ಗುಲಬರ್ಗಾ ಅಂತಾ ಹೇಳಿದನು. ಆಗ ನಮಗೆ ಸಂಶಯ ಬಂದು ಟಂಟಂ ಟ್ರ್ಯಾಲಿ ಚಕ್ಕ್ ಮಾಡಲಾಗಿ ಅದರಲ್ಲಿ ಪಿ.ಡಬ್ಲ್ಯೂ.ಡಿ. ಇಲಾಖೆಗೆ ಸಂಭಂದಪಟ್ಟ 150 ಹಣ ಸ್ವೀಕರಿಸುವ ಪ್ರೀಟೆಂಡ್ ಬುಕ್ಕಗಳು ಮತ್ತು 40 ಗೇಟ್ ಪಾಸ್ ಬುಕ್ಕಗಳು ಇದ್ದು ಅವುಗಳ ಬಗ್ಗೆ ಸದರಿಯವರಿಗೆ ವಿಚಾರಿಸಲು ಯಾವುದೇ ಸಮಪರ್ಕವಾದ ಉತ್ತರ ಕೊಡದೆ ಇದ್ದಾಗ ಸದರಿ ವಸ್ತುಗಳು ಎಲ್ಲಿಯಾದರೂ ಕಳ್ಳತನ ಮಾಡಿಕೊಂಡು ಬಂದಿರಬೇಕು ಅಂತಾ ನಮಗೆ ಬಲವಾದ ಸಂಶಯ ಬಂದಿರುವದರಿಂದ ಸ್ಥಳಕ್ಕೆ ಇಬ್ಬರೂ ಪಂಚರಾದ  ಬರ ಮಾಡಿಕೊಂಡು ಇವರ ಸಮಕ್ಷಮ ಮೂರು ಚಕ್ರವುಳ್ಳ ಟಂಟಂ ಟ್ರ್ಯಾಲಿ ನಂಬರ ಕೆಎ-32  2814  ಮತ್ತು ಅದರಲ್ಲಿ ಇದ್ದ ಲೋಕೊಪಯೋಗಿ ಇಲಖೆಗೆ ಸಂಬಂದಪಟ್ಟ 150  ಹಣ ಸ್ವೀಕರಿಸುವ ಪ್ರೀಟೆಂಡ್ ಬುಕ್ಕಗಳು ಮತ್ತು 40 ಗೇಟ್ ಪಾಸ್ ಬುಕ್ಕಗಳು ಬಗ್ಗೆ ಜಪ್ತಿ ಪಂಚನಾಮೆ ಬರೆಯಿಸಿಕೊಂಡು ಜಪ್ತ ಆದ ಮಾಲು ಜಪ್ತಿ ಪಂಚನಾಮೆ ಹಾಗೂ 4 ಜನ ಆರೋಪಿತರೊಂದಿಗೆ  ಠಾಣೆಗೆ ಬಂದು ಸಲ್ಲಿಸಿದ ವರದಿಯ ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಜಾತಿನಿಂದನೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿಠಲ ತಂದೆ ಶಂಕರ ವಗ್ಗನ ಸಹ ಶಿಕ್ಷಕರು ಭೀಮಳ್ಳಿ ತಾಃ ಜಿಃ ಗುಲಬರ್ಗಾ ರವರು ದಿನಾಂಕ 16-09-2013 ರಂದು ಉಪ ನಿರ್ದೆಶಕರಾದ ಟಿ. ಜಯರಾಮ ರವರನ್ನು ಅವರ ಚೆಂಬರದಲ್ಲಿ ಹೋಗಿ ತನ್ನ ಅಮಾನತ್ತಿನ ಕಡತ ಮುಕ್ತಾಯಗೊಳಿಸಿ ಎಂದು ಕೆಳಿಕೊಂಡಾಗ ಆಗ ಉಪ ನಿರ್ದೆಶಕರಾದ ಶ್ರೀ ಟಿ.ಜಯರಾಮ ರವರು "ಏ ಭೊಳಿ ಮಗನೆ ಹೊಲೆಯ ಸುಳೇ ಮಗನೆ" ನಾನೊಬ್ಬ ಜಿಲ್ಲಾ ಅಧಿಕಾರಿ ನನಗೆ ಯಾವನೊ ಸಹಿ ಮಾಡಿಕೊಟ್ಟಂತಹ ಸುಳ್ಳು ಕಾಗದಗಳನ್ನು ನನ್ನ ಮುಂದೆ ತಂದು ಇಟ್ಟು ಆರೋಪದಿಂದ ಮುಕ್ತಗೊಳಿಸು ಅಂತಾ ಕೆಳುತ್ತಿಯಾ "ಏನಲೆ ಸುಳೆ ಮಗನೆ" ಅಂತಾ ನನಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲದೆ ತನ್ನ ಜಾತಿಗೆ ಅಪಮಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಇಮಾಮಸಾಬ ತಂ, ಬಾಸುಮೀಯಾ ಕಂದಗೋಳ, ರವರು ದಿನಾಂಕ 113-11-2013 ರಂದು  ಮೋಹರಂ ಹಬ್ಬದ 8 ನೇ ದಿವಸ ಜಾತ್ರೆ ಇದ್ದು ನಮ್ಮೂರಿನ ಚಾಂದಸಾಬ ಹಾಗೂ ಇತರರು ಕೂಡಿ ನಾನು ಇಟ್ಟ ಮನೆಗೆ ಉರಿಯುವ ಕಟ್ಟಿಗೆಗಳನ್ನು ಮೋಹರಂ ದೇವರ ಹತ್ತಿರ ಒಯ್ದು ಸುಟ್ಟಿದ್ದರಿಂದ ಆತನೊಂದಿಗೆ ಬಾಯಿ ಮಾತಿನ ಜಗಳ ಮಾಡಿದ್ದಕ್ಕೆ ರಾತ್ರಿ 10:00 ಗಂಟೆ ಸುಮಾರಿಗೆ ನಮ್ಮೂರ ಡೆಂಗೆ ನವರ ಬಾವಿ ಹತ್ತಿರ ಚಾಂದಸಾಬ ತಂ, ಹುಸೇನಸಾಬ ಝಂಡಾ, ಇಮಾಮಸಾಬ ತಂ, ಚಾಂದಸಾಬ ಝಂಡಾ, ಇಸಾಖ ತಂ, ಚಾಂದಸಾಬ ಝಂಡಾ, ಮಸ್ತಾನಸಾಬ ತಂ, ಚಾಂದಸಾಬ ಝಂಡಾ, ಮಸ್ತಾನಸಾಬ ತಂ, ಉಸ್ಮಾನಸಾಬ ಝಂಡಾ, ಖಾಸೀಂಸಾಬ ತಂ, ಮಸ್ತಾನಸಾಬ ಝಂಡಾ, ಮುಸ್ತಾಫ್ ತಂ, ಹುಸೇನ್ ಸಾಬ ಮೋಮಿನ್ ರಜಾಬ ಅಲೀ ತಂ, ಹುಸೇನಸಾಬ ಮೋಮಿನ್, ಮಹಿಬೂಬ ಸಾಬ ತಂ, ಖತಲಸಾಬ ಡಬರಿದ, ಹುಸೇನಸಾಬ ತಂ, ರುಕ್ಮೋದ್ದೀನ್ ಝಂಡಾ ಇವರೆಲ್ಲರೂ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಬಡಿಗೆಯಿಂದ, ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಹುಶೇನಸಾಬ ತಂ ರುಕ್ಮೊದ್ದಿನ ಜಂಡಾ ಸಾ| : ಹರಸೂರ ತಾ:ಜಿ:ಗುಲಬರ್ಗಾ ಇವರು ದಿನಾಂಕ 13-11-2013 ರಂದು ಮೋಹರಂ ಹಬ್ಬದ 8 ನೇ ದಿವಸ ಜಾತ್ರೆ ಇದ್ದು ನಮ್ಮೂರಿನ ಇಮಾಮಸಾಬ ತಂ ಬಾಸುಮಿಯಾ ಕಂದಗೂಳ ಇಬ್ರಾಹಿಂ ತಂ ಬಾಸುಮಿಯಾ ಕಂದಗೂಳ ಬಾಸುಮಿಯಾ ತಂ ಫಕೀರಸಾಬ ಕಂದಗೂಳ ಇವರು ತಮ್ಮ ಕಟ್ಟೆಗೆಗಳನ್ನು ಏಕೆ ತಂದು ಸುಟ್ಟಿರುವಿರಿ ಅಂತಾ ದಿನಾಂಕ 14-11-2013  ರಂದು ಬೆಳಗ್ಗಿನ ಜಾವ 1.00 ಗಂಟೆಯ ಸುಮಾರಿಗೆ ತಡೆದು ನಿಲ್ಲಿಸಿ ಕೈಯಿಂದ ಹೋಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಕುಮಾರಿ ಕವಿತಾ ಚವ್ಹಾಣ  ಮ.ಹೆಚ್.ಸಿ. 94 ನರೋಣಾ ಪೊಲೀಸ್ ಠಾಣೆ ತಾ: ಆಳಂದ ಜಿ: ಗುಲಬರ್ಗಾ ಇವರು ದಿನಾಂಕ 16-09-2013  ರಂದು ಪ್ರತಿದಿನದಂತೆ ಗುಲಬರ್ಗಾದಿಂದ ನರೋಣಾ ಠಾಣೆಗೆ ಹೋಗಿ ಸಾಯಂಕಾಲ ಮರಳಿ ಬರುವ ಕಾಲಕ್ಕೆ 7 ಪಿ.ಎಂ.ಕ್ಕೆ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಕೆಳಗೆ ಇಳಿಯುವ ಕಾಲಕ್ಕೆ ಯಾರೋ ಕಳ್ಳರು ನನ್ನ ಕೊರಳಲ್ಲಿಯ 1 ವರೇ ತೊಲೆ ಬಂಗಾರದ ಚೈನ್ ಕಳವು ಮಾಡಿಕೊಂಡಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಳೆದ ಹೋದ ಬಂಗಾರದ ಚೈನ್ ಬೇಲೆ 35,000/- ರೂ ಇಲ್ಲಿಯವರೆಗೆ ಸಾಕಷ್ಟು ಪ್ರಯತ್ನ ಮಾಡಿದರೂ ಪತ್ತೆಯಾಗಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.