POLICE BHAVAN KALABURAGI

POLICE BHAVAN KALABURAGI

19 October 2013

Gulbarga District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀರೇವಣಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ  ಸಾ|| ಕುಡಕಿ ಇವರು  ದಿನಾಂಕ 18-10-2013 ರಂದು 0800 ಗಂಟೆ  ಸುಮಾರಿಗೆ  ತಮ್ಮೂರಿನ  ರೇವಣಸಿದ್ದೇಶ್ವರ  ಗುಡಿಯ  ಹಿಂದುಗಡೆ ಇರುವ  ಶಿವಾನಂದ ಸುತಾರ ಹತ್ತಿರ ಬಿತ್ತುವಕೂರಿಗೆ ತುಂಬಿಸುತ್ತಿರುವಾಗ 1) ಮಲಕಪ್ಪ ತಂದೆ ಚಂದ್ರಶಾ ಗುಂಡಗುರ್ತಿ, 2) ಸಂತಪ್ಪ ತಂದೆ ಚಂದ್ರಶಾ ಗುಂಡಗುರ್ತಿ, 03)  ರಾಜು ತಂದೆ ಚಂದ್ರಶಾ ಗುಂಡಗುರ್ತಿ, 4) ವಿಠ್ಠಲ ತಂದೆ ಚಂದ್ರಶಾ ಗುಂಡಗುರ್ತಿ, 5) ಮಹಾಂತಪ್ಪ ತಂದೆ ಮಲಕಪ್ಪ ಗುಂಡಗುರ್ತಿ 6) ಪಿಂಟಪ್ಪ ತಂದೆ ಮಲಕಪ್ಪ ಗುಂಡಗುರ್ತಿ 7) ಚಂದ್ರಶಾ ತಂದೆ ವಿಠೋಬಾ ಗುಂಡಗುರ್ತಿ ಸಾ|| ಎಲ್ಲರೂ ಕುಡಕಿ ಗ್ರಾಮ. ಅಲ್ಲಿಗೆ ಒಂದು   ಭೋಸಡಿ  ಮಗನೆ  ಭೀರಲಿಂಗೇಶ್ವರ ದೇವಸ್ಥಾನದಲ್ಲಿ  ಪಾಲುಕೇಳುತ್ತಿಯಾ ಅಂತ  ಬೈದು  ಫಿರ್ಯಾದಿಗೆ  ಮುಂದೆ  ಹೋಗದಂತೆ  ತಡೆದು  ನಿಲ್ಲಿಸಿ    ಮಗನಿಗೆ ಖಲಾಸ ಮಾಡಿರಿ ಅಂತಾ ಬಡೆಗೆಯಿಂದ ಫಿರ್ಯಾದಿಯ ತಲೆಗೆ  ಹೊಡೆದಿರುತ್ತಾನೆ.  ಪಿಂಟು  ಇತನು  ಕಲ್ಲಿನಿಂದ  ಎಡಗೈ  ಮುಂಗೈ ಹತ್ತಿರ  ಹಾಗೂ  ಅಂಗೈಗೆ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಸಂತೋಷ ತಂದೆ ಚಂದ್ರಶಾ ಗುಂಡಗುರ್ತಿ  ಸಾ|| ಕುಡಕಿ ಇವರು ದಿನಾಂಕ 18-10-2013 ರಂದು 0800 ಗಂಟೆ  ಸುಮಾರಿಗೆ 1) ರೇವಣಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ 2) ಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ, 3) ಶಿವಾನಂದ  ತಂದೆ ರಾಚಪ್ಪಾ ಗುಂಡಗುರ್ತಿ,ಸಾ|| ಎಲ್ಲರೂ ಕುಡಕಿ ಗ್ರಾಮ.ತಮ್ಮೂರಿನ  ರೇವಣಸಿದ್ದೇಶ್ವರ ಗುಡಿಯ ಹಿಂದುಗಡೆ ಇರುವ  ಶಿವಾನಂದ  ಸುತಾರ  ಇತನ  ಹತ್ತಿರ  ದಿಂಡು  ತುಂಬಿಸುತ್ತಿದ್ದಾಗ ಅಲ್ಲಿಗೆ ಬಂದು   ಮುಂದೆ ಹೋಗದಂತೆ  ತಡೆದು  ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಮಗನಾ ಬೀರಲಿಂಗೇಶ್ವರ ಹೊಲದ ಪಾಲು  ನಮಗೂ ಬರ್ತಾದ ಅದಕ್ಕೆ ನೀವು ಎಷ್ಟು ಹಕ್ಕದಾರ ಇದ್ದೀರಿ ನಾವು ಅಷ್ಟೆ ಹಕ್ಕ ನಮಗೂ ಅದ ಆದರೆ ಬೆಳೆ ನೀವೆ ತಿಂತಿರಿ ನಿಮಗೆ ಸೊಕ್ಕು ಬಹಳಬಂದಾಗ ಅಂತ ಬೈದು  ಮುಖಕ್ಕೆ ಕೈಯಿಂದ ಜೋರಾಗಿ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಪ್ರೇಮ ತಂದೆ ಹರಿಶ್ಚಂದ್ರ ರಾಠೋಡ ಸಾಃ ಕಾಳನೂರ ತಾಂಡಾ ತಾಃಜಿಃ ಗುಲಬರ್ಗಾ ಇವರು ದಿನಾಂಕ:18-10-2013 ರಂದು ಬೆಳಿಗ್ಗೆ 9-00 ಗಂಟೆಗೆ ನಾನು, ನನ್ನ ಪರಿಚಯದವನಾದ ಗಿರೀಶ ತಂದೆ ವಿಠಲ ಚವ್ಹಾಣ ಸಾಃ ಹಗ್ಗನೂರ ತಾಂಡಾ ಇಬ್ಬರು ಕೂಡಿಕೊಂಡು ಗೀರಿಶ ಈತನ ಮೋಟಾರ ಸೈಕಲ ನಂ. ಕೆಎ:32, ಈಎ:6943 ನೇದ್ದರ ಮೇಲೆ ಕಲಕೋರಾ ತಾಂಡಾ ದೇವಿ ದರ್ಶನಕ್ಕೆ ಹೋಗುತ್ತಿರುವಾಗ ಜೀವಣಗಿ ಗ್ರಾಮದ ಹತ್ತಿರ ನಮ್ಮ ಪರಿಚಯದವನಾದ ಸೋಮಶೇಖರ ತಂದೆ ನೀಲಕಂಠ ದೋಶೆಟ್ಟಿ ಸಾಃ ಬೋಳೆವಾಡ ಇವರು ನಮಗೆ ನೋಡಿ, ಕೈ ಮಾಡಿ, ನಿಲ್ಲಿಸಿ ಮಾತನಾಡಿಸಿ, ಎಲ್ಲಿಗೆ ಹೋಗುತ್ತಿದ್ದಿರಿ ಅಂತಾ ಕೇಳಿದಕ್ಕೆ ನಾವು ಕಲಖೋರಾ ದೇವಿ ದರ್ಶನಕ್ಕೆ ಹೋಗುತ್ತಿದ್ದೇವೆ ಅಂತಾ ತಿಳಿಸಿದ್ದಕ್ಕೆ ನನಗೆ ಕಮಲಾಪೂರ ವರೆಗೆ ಬಿಡಲು ಕೇಳಿದಕ್ಕೆ ನಾವು ನಮ್ಮ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ಕಮಲಾಪೂರ ಕಡೆಗೆ ಹೊರಟಿದ್ದು. ನಾವು ಕುಳಿತ ಮೋಟಾರ ಸೈಕಲನ್ನು ಗೀರಿಶ ಈತನು ಚಲಾಯಿಸುತ್ತಿದ್ದನು. ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ರೋಡಿನ ಕಮಲಾಪೂರ ಜೀವಣಗಿ ಕ್ರಾಸ ಹತ್ತಿರ ಬರುತ್ತಿದ್ದಂತೆ ಕಮಲಾಪುರ ಕಡೆಯಿಂದ ಕ್ರೋಜರ ಜೀಪ ನಂ. ಕೆಎ:48, ಎಂ:984 ನೇದ್ದರ ಚಾಲಕ ಕ್ರೀಷ್ಣಾ ತಂದೆ ಯಲ್ಲಪ್ಪಾ ನ್ಯಾನೂಗೌಡ ಸಾಃ ನಾಗರಾಳ ತಾಃ ಮುಧೋಳ ಜಿಃ ಬಾಗಲಕೋಟ ಈತನು ತನ್ನ ಕ್ರೋಜರ ಜೀಪ ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ, ಎಲ್ಲರಿಗು ರಕ್ತಗಾಯಗಳಾಗಿ ಬಾರಿಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 17-10-2013 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಶ್ರೀ ನಾಸೀರ ತಂದೆ ಅಬ್ದುಲ ಖಾದರ, ಉಃ ಅಟೋರಿಕ್ಷಾ ನಂ. ಕೆ.ಎ 32 8360 ನೇದ್ದರ ಚಾಲಕ, ಸಾಃ ರೋಜಾ (ಬಿ) ರೋಜಾ ಠಾಣೆ ಹತ್ತಿರ ಗುಲಬರ್ಗಾ ರವರು  ತನ್ನ ಅಟೊರಿಕ್ಷಾ ನಂ.ಕೆ.ಎ 32 8360 ನೇದ್ದರಲ್ಲಿ ಗ್ಯಾಸ್ ಮುಗಿಯುತ್ತಾ ಬಂದಿದ್ದರಿಂದ ಗ್ಯಾಸ್ ತುಂಬಿಸಿಕೊಂಡು ಹೋಗುವ ಸಲುವಾಗಿ ಹುಮನಾಬಾದ ರಿಂಗ ರೋಡ ಕಡೆಯಿಂದ ಲಾಹೋಟಿ ಪೆಟ್ರೊಲ್ ಬಂಕ ಕಡೆಗೆ ಬರುತ್ತಿದ್ದಾಗ ಲಾಹೋಟಿ ಪೆಟ್ರೊಲ ಬಂಕ ಹತ್ತಿರ ಇರುವ ವ್ಹೇ ಪಾಯಿಂಟ ಎದರುಗಡೆ ಬರುತ್ತಿದ್ದಾಗ ಕಾರ ನಂ. ಎ.ಪಿ 10 ಎ.ಜಿ 9191 ಅಂತಾ ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾದಿ ಕೆಳಗೆ ಬಿದ್ದು ತಲೆಗೆ ಮತ್ತು ಕಪಾಳಕ್ಕೆ ರಕ್ತಗಾಯ ಮತ್ತು ಹಸ್ತದ ಮಣಿಕಟ್ಟಿಗೆಎಡಗೈ ಭುಜಕ್ಕೆಎಡಗಡೆ ಪಕ್ಕೆಗೆ ಗುಪ್ತ ಮತ್ತು ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜ್ಯೋತಿ ಗಂಡ ರಮೇಶ ಮುನ್ನಳ್ಳಿ ಸಾ|| ಕೈಲಾಸ ನಗರ ಇವರು ದಿನಾಂಕ 17-10-2013 ರಂದು ಸಾಯಂಕಾಲ 5.00 ಗಂಟೆಗೆ ತನ್ನ ಗಂಡ ರಮೇಶ ಇವರು ತುಳಜಾಪೂರಕ್ಕೆ ಹೊಗಿದ್ದರಿಂದ ತಾನು 6.00 ಗಂಟೆಗೆ ಮನೆ ಕಿಲಿ ಹಾಕಿಕೊಂಡು ಶಹಬಜಾರದಲ್ಲಿರುವ ತನ್ನ ತಾಯಿಯ ಮನೆಗೆ ಹೊಗಿದ್ದು ದಿನಾಂಕ 18-10-2013 ರಂದು ಬೆಳಿಗ್ಗೆ 9.30 ಗಂಟೆಗೆ ಬಂದು ನೋಡಲಾಗಿ ಮನೆಯ ಬಿಗ ತೆಗೆದಿದ್ದು ಸೂಟ್‌ಕೆಸನಲ್ಲಿದ್ದ 1] 6 ಗ್ರಾಂ ಬಂಗಾರದ ಉಂಗುರ ಅಕಿ 15000/- 2] 4 ಗ್ರಾಂ ಬಂಗಾರದ ಒಂದು ಜೋತೆ ಕಿವಿಯೋಲೆ ಅ.ಕಿ 11000 ಮತ್ತು 3] 3 ಗ್ರಾಂ ಬಂಗಾರದ ಸಣ್ಣ ಗುಂಡುಗಳನ್ನು  ದಿನಾಂಕ 17-10-2013 ರಂದು ರಾತ್ರಿ ಯಾರೋ ಅಪರಿಚಿತ ಕಳ್ಳರು ಕಳುವುಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


18 October 2013

Gulbarga District Reported Crimes

ಹಲ್ಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ಮೀರಾಜ ಪಟೇಲ ತಂದೆ ಇಸ್ಮಾಯಿಲ ಪಟೇಲ ಸಾ : ಬೀರನಳ್ಳಿ ದಿನಾಂಕ 17-10-13 ರಂದು  08:30 ಪಿ.ಎಮ್ ಕ್ಕೆ ತನ್ನ ಗ್ರಾಮದ ಭಾರತ ಕಟ್ಟೆಯ ಹತ್ತಿರ ನಿಂತಿದ್ದಾಗ 1) ಶಾಹೀದ ತಂದೆ ಖಾಜಾಮೀಯಾ  2) ಜಾವಿದ ತಂದೆ ಖಾಜಾಮೀಯಾ  3) ತೋಹಿದ ತಂದೆ ಖಾಜಾಮೀಯಾ  4) ಮಹೇಬೂಬ ತಂದೆ ಖಾಜಾಮೀಯಾ  5) ಮಹೇಮೂದ್ ತಂದೆ ಗುಲಾಮೋದ್ದಿನ್  6) ಯಾಶೀನ ತಂದೆ ಗುಲಾಮೋದ್ದಿನ್ 7) ಜಿಲಾನಿ ತಂದೆ ಯಾಜದಾನಿ 8) ಟೀಪು ತಂದೆ ಯಾಜದಾನಿ ಸಾ||ಎಲ್ಲರು ಬೀರನಳ್ಳಿ ಗ್ರಾಮ ತಾ|| ಸೇಡಂ  ಕೂಡಿಕೊಂಡು ಅಕ್ರಮ ಕೂಟರಚಿಸಿಕೊಂಡು ಬಂದು ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ದುಃಖಾಪಾತ ಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಸೂರ್ಯಕಾಂತ ತಂದೆ ಯಲ್ಲಪ್ಪ ಯಲ್ಮಾಮಡಗಿ ಸಾ: ರಾಣಾಪೂರ ರವರು ದಿನಾಂಕ 18-10-2013 ರಂಧು 11.30 ಗಂಟೆಗೆ  ಚಿಂಚೊಳಿಯಿಂದ ಚಂದಾಪೂರದ ಕಡೆಗೆ ಒಂದು ಆಟೋ ನಂ ಕೆ ಎ 32 ಎ 5482 ನೇದ್ದರ ಆಟೋದಲ್ಲಿ  ತಾನು ತನ್ನ ಹೆಂಡತಿ ಮತ್ತು ನನ್ನ ತಾಯಿ ಕುಡಿಕೊಂಡು ಆಟೋದಲ್ಲಿ ಹೋಗುತ್ತಿದ್ದಾಗ  ಶ್ರೀ ದೂಲಪ್ಪ ದೋಡ್ಮನಿ ರವರ ಮನೆಯ ಹತ್ತಿರ  ಚಾಲಕನು ತನ್ನ ಆಟೋವನ್ನು ಅತೀ ವೇಗದೀಮದ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಕೊಂಡು  ರಸ್ತೆಯ ಬಲಬದಿ  ನಾಲೆಯಲ್ಲಿ ಪಲ್ಟಿಮಾಡಿ  ನಮ್ಮ ಎಲ್ಲರೀಗೂ ರಕ್ತ ಮತ್ತು ತರಿಚಿ ಭಾರಿ ಗಾಯ ಗೋಳಿಸಿ ತನ್ನ ಆಟೋವನ್ನು ಅಲ್ಲೆ ಬಿಟ್ಟು ಚಾಲಕನಾದ ಕುಮಾರ ತಂಧೆ  ಬಿಮರಾವ್ ಪವಾರ ಎಂಬುವವನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಇಸ್ಪೀಟ ಜುಜಾಟದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 17-10-2013 ರಂದು 4:00 ಪಿ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಹರಳಯ್ಯ ಸಮಾಜದಲ್ಲಿರುವ  ಸಾರ್ವಜನಿಕರ ಗಾರ್ಡನ್ ದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ  ಮೇಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 1) ಪ್ರವೀಣ ತಂದೆ ಬಸವರಾಜ್ ಪಾಟೀಲ್  ಸಾಃ ಜಗತ್ ಗುಲಬರ್ಗಾ 2)  ರೇವಣಸಿದ್ದಯ್ಯ ತಂದೆ ಗಂಗಾಧರ ಹಿರೇಮಠ ಸಾಃ ಮಕ್ತಂಪುರ್ ಗುಲಬರ್ಗಾ 3) ಮನೋಹರ್ ತಂದೆ ಗಣಪತಿ ರಾಥೋಡ್   ಸಾಃ ಶ್ರೀನಿವಾಸ ಸರಡಗಿ ಗುಲಬರ್ಗಾ 4) ಶಂಕರ್ ತಂದೆ ನರಸಿಮಗ್ ರಾಥೋಡ್  ಸಾಃ ಶ್ರೀನಿವಾಸ ಸರಡಗಿ ಗುಲಬರ್ಗಾ 5) ಗುರು ತಂದೆ ಸಿದ್ದಲಿಂಗಪ್ಪ ಬರಾಣಪುರ್  ಸಾಃ ಹನುಮಾನ್ ನಗರ್ ತಾಂಡಾ ಗುಲಬರ್ಗಾ 05 ಜನರನ್ನು ಹಿಡಿದು 05 ಜನ ಆರೋಪಿತರಿಂದ ಹಾಗು ಸ್ಥಳದಲ್ಲಿ ಹೀಗೆ ಒಟ್ಟು 15930/- ರೂ.  ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ 5.00 ಪಿ.ಎಂ. ದಿಂದ 6:00 ಪಿ.ಎಂ.. ರವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು 05 ಜನ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಆರೋಪಿತರು, ಮುದ್ದೆ ಮಾಲು & ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಎಮ್. ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 16-07-2013 ರಂದು ಸಂಜೆ 07.00 ಗಂಟೆಯ ಸುಮಾರಿಗೆ ನಯಾ ಮೋಹಲ್ಲಾ ಸಿದ್ದಿಕಿಪುರ ಮಜೀದ ಹತ್ತಿರ ಇರುವ ಶ್ರೀ ಲಾಲ ಪಟೇಲ ತಂದೆ ಹಸನ ಪಟೇಲ,  ಸಾಃ ಸಿದ್ದಿಕಿಪೂರ ಸಿದ್ದಿಕಿ ಮಜೀದ ಹತ್ತಿರ ನಯಾ ಮೊಹಲ್ಲಾ ಗುಲಬರ್ಗಾ ರವರ ಮನೆಯ ಮುಂದೆ ಫಿರ್ಯಾದಿಯ ಮಗಳಾದ ಕುಮಾರಿ ಸುಹಾನಾ ವ || 3 ವರ್ಷ ಇವಳು ಆಟವಾಡುತ್ತಿದ್ದಾಗ ಆರೋಪಿತನು ತನ್ನ ಮೋಟಾರ ಸೈಕಲ ನಂಬರ ಕೆಎ 32 ಎಲ್ 9093 ನೇದ್ದನ್ನು ಜವಾಹರ ಹಿಂದ್ ಸ್ಕೂಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುಹಾನಾ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಎಡಗಾಗೆ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಹುಲ ತಂದೆ ಸಂಗಣ್ಣಾ ಹಾಲಕಾಯಿ   ಗುಲಬರ್ಗಾ ರವರು ದಿನಾಂಕ: 17-10 2013  ರಂದು  4=30  ಪಿ.ಎಮ್.ಕ್ಕೆ ಡಿ.ಎ.ಆರ್. ಹೆಡ್ ಕ್ವಾಟರ್ಸ ಮೇನ ಗೇಟ ದಿಂದ ಹಳೆ ಡಿ.ಪಿ.ಓ ಕ್ರಾಸ್ ರೋಡ ಕಡೆಗೆ ತನ್ನ ಕಾರ ನಂ;ಕೆಎ 32 ಎಮ್  8663  ನೆದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ  ಕ್ರೋಜರ ಜೀಪ ನಂ: ಎಮ್ ಹೆಚ 04 ಬಿಕ್ಯೂ 9723 ರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಕ್ರೋಜರ ಒಳಗೆ ಕುಳಿತ್ತಿದ್ದ ಪ್ರಯಾಣಿಕ ಮಾರುತಿ ಈತನಿಗೆ ಗಾಯಗೊಳಿಸಿ ಕಾರಿಗೆ ಜಕಂ ಮಾಡಿ ಚಾಲಕ ಹೊರಟು ತನ್ನ ವಾಹನದೊಂದಿಗೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾಆರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.