POLICE BHAVAN KALABURAGI

POLICE BHAVAN KALABURAGI

08 October 2013

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 07-10-2013 ರಂದು ರಾತ್ರಿ 1130 ಗಂಟೆಗೆ ಎಮ್. 80 ಕ್ರಾಸ್ ಹತ್ತಿರ ಇರುವ ಜಗದಂಬಾ ಹೋಟೆಲ ಎದರುಗಡೆ ರೋಡಿನ ಮೇಲೆ ರಾಹುಲ ತಂದೆ ಚನ್ನಪ್ಪಾ ಇತನು ತನ್ನ ಅಟೋರಿಕ್ಷಾ ನಂ. ಕೆ.ಎ 32 ಬಿ 7950 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಲೆ ಕಟ್ ಹೊಡೆದಿದ್ದರಿಂದ ಅಟೋರಿಕ್ಷಾದಲ್ಲಿ ಕುಳಿತ ಶ್ರೀ ಮಹಿಬೂಬ ತಂದೆ ಇಸ್ಮಾಯಿಲಸಾಬ  ಸಾಃ ಖುರೇಶಿ ಪಂಕ್ಷನ್ ಹಾಲ್ ಹತ್ತಿರ ಮಿಜಗುರಿ ನಯಾ ಮೊಹಲ್ಲಾ ಗುಲಬರ್ಗಾ ರವರಿಗ ಕೆಳಗೆ ಬಿದ್ದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :

ಫರತಾಬಾದ ಠಾಣೆ : ಶ್ರೀಮತಿ ಕಾಂತಮ್ಮ ಗಂಡ ಭೀಮಾಶಂಕರ ಯಾದಗಿರಕರ ರವರು ಸಾ: ಚಿಂಚೀಳಿತಾಲ್ಲುಕಿನ ನರನಾಳ ಗ್ರಾಮವಿದ್ದು ನನಗೆ ನಮ್ಮ ತಂದೆ ತಾಯಿವರು 7 ವರ್ಷಗಳ ಹಿಂದೆ ಚಿತಾಪೂರ ತಾಲ್ಲೂಕಿನ ಶರಣಪ್ಪ ಯಾದಗಿರಕರ ಇವರ ಮಗನಾದ ಬೀಮಾಶಂಕರ ಇತನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಈಗ ನಾವು 4 ತಿಂಗಳುಗಳ ಹಿಂದೆ ನಾವೆಲ್ಲರು ಫರಹತಾಬಾಧ ಗ್ರಾಮಕ್ಕೆ  ಮಾಡಿ ಉಣಲು ಬಂದು ವಾಸವಾಗಿರುತ್ತೆವೆ.. ನನ್ನ ಗಂಡನು ಗುಲಬರ್ಗಾದಲ್ಲಿ ಖಾಸಗಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿನಾಂಕ: 06-10-2013 ರಂದು ಮದ್ಯಾನ್ಹ 3:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳು ಹಾಗೂ ನಮ್ಮ ಅತ್ತೆ ಎಲ್ಲರೂ ಕೂಡಿಕೊಂಡು ತಿಳೂಗುಳ ಗ್ರಾಮದಲ್ಲಿರುವ ನಮ್ಮ ಬಿಗರ ಮನೆಯಲ್ಲಿ ಕುರಿಗೆ ಪೂಜೆ ಇರುವದರಿಂದ ಹೊಗುತ್ತಿರುವಾಗ ನನ್ನ ಗಂಡನು ಫರಹತಾಬಾದ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ನನ್ನ ಗಂಡನು ಸಿಕ್ಕಿದ್ದು, ಅವನು ಕುಡಿದ ನಿಶೆಯಲ್ಲಿ ಇದ್ದನು. ನಾವು ತಿಳಗೂಳ ಗ್ರಾಮಕ್ಕೆ ಹೊರಟಿದ್ದಿವೆ ಅಂತಾ ಹೇಳಿ ಹೋಗಿದ್ದು ಇರುತ್ತದೆ. ನಂತರ ದಿನಾಂಕ:07-10-2013 ರಂದು 6-30 ಪಿಎಮ್‌ಕ್ಕೆ ನಾವು ತಿಳಗೂಳ ಗ್ರಾಮದ ನಮ್ಮ ಬಿಗರ ಮನೆಯಲ್ಲಿದ್ದಾಗ ನಮ್ಮ ಮನೆಯ ಮಾಲಿಕಳಾದ ಪಾರ್ವತಿ ಇವಳು ನನಗೆ ಪೋನ್‌ ಮಾಡಿ ತಿಳಿಸಿದ್ದೆನಂದರೆ ನಿಮ್ಮ ಮನೆಯ ಬಾಗಿಲು ತೆರೆದಿದ್ದು ಒಳಗಡೆಯಲ್ಲಿ ನಾಯಿ ಹೊಗಿ ಬರುತ್ತಿದ್ದರಿಂದ ನಾಯಿಯನ್ನು ಹೊಡೆದು ಮನೆಯಾಗ ಯಾರಿದ್ದರಿ ಅಂತಾ ಕರೆದು ಕೇಳಲಾಗಿ ಏನು ಹೇಳದೆ ಇದ್ದರಿಂದ ನಾನು ಒಳಗಡೆ ಹೊಗಿ ನೋಡಲಾಗಿ ನಿನ್ನ ಗಂಡನು ಮನೆಯಲ್ಲಿನ ಜಂತಿಗೆ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನೀನು ಬೇಗನೆ ಬಾ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಅತ್ತೆ ಹಾಗೂ ನಮ್ಮ ಬೀಗರು ಗಾಬರಿಗೊಂಡು ರಾತ್ರಿ ಬಂದು ನೋಡಲಾಗಿ ಸದರಿ ನನ್ನ ಗಂಡನು ಮನೆಯಲ್ಲಿನ ಜಂತಿಗೆ ಹಗ್ಗದಿಂದ ನೆಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 October 2013

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ²æÃ ಗಿರಿಮಲ್ಲಪ್ಪ ತಂದೆ ದೇವಿಂದ್ರಪ್ಪ ತಳವಾರ  ಸಾ: ಸಿನ್ನೂರ ಅಂಕಲಗಿ ತಾ:ಅಫಜಲಪೂರ ರವರು ದಿನಾಂಕ 05-10-2013 ರಂದು ಹುಲೆಪ್ಪಾ ತಂದೆ ಬಾಬುರಾವ ಕೋಡಿ ಸಾ: ಗಣೇಶ ನಗರ ಗುಲಬರ್ಗಾ ರವರ ಮೋಟಾರ ಸೈಕಲ್ ನಂ ಕೆಎ 32 ಎಲ್ 7516 ನೇದ್ದರ ಹಿಂದೆ ಕುಳಿತುಕೊಂಡು ಸಿನ್ನೂರ ಅಂಕಲಗಿ ಗ್ರಾಮದಿಂದ ಗುಲಬರ್ಗಾಕ್ಕೆ ಹಬ್ಬದ ಸಂತೆ ಕುರಿತು  ಹೊರಟಿದ್ದು ಆರೋಪಿತನು ತನ್ನ ಮೋಟಾರಸೈಕಲ್ನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಸುತ್ತಿದ್ದು ನಾನು ಸಾವಕಾಶವಾಗಿ ಚಲಾಯಿಸು ಅಂತಾ ಹೇಳಿದರು ಕೂಡಾ ಬೆಳಗ್ಗೆ 8-30 ಗಂಟೆ ಸುಮಾರಿಗೆ ಕೆರೆ ಭೋಸಗಾ ಕ್ರಾಸ ಟರ್ನಿಂಗನಲ್ಲಿ ಅತೀ ವೇಗದಿಂದ ಟರ್ನ ಮಾಡಿದಾಗ ವೇಗದ ಆಯ ತಪ್ಪಿ ರೋಡಿನ ಬದಿಯಲ್ಲಿ ಮೋಡಾರ ಸೈಕಲ್ ದೋಂದಿಗೆ ಆಯ ತಪ್ಪಿ ಬಿದ್ದಿದ್ದು ಇದರಿಂದ ನನಗೆ ಭಾರಿ ರಕ್ಕಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಯಾಕುಬ ಅಲಿ ತಂದೆ ಶೌಕತ ಅಲಿ ಸಾಃ ಸಂತ್ರಾಸವಾಡಿ ಗುಲಬರ್ಗಾ ರವರು ದಿನಾಂಕ 05-10-2013 ರಂದು 09-30 ಎ.ಎಮ್ ಕ್ಕೆ ತನ್ನ ಮಾವನಾದ ಮಹ್ಮದ ಸಾದತ ಪಾಶಾ ಇಬ್ಬರು ಕೂಡಿಕೊಂಡು ಆದರ್ಶ ನಗರ ಕಾಲೂನಿ ಕಡೆಯಿಂದ ಎಮ್.ಜಿ ರೋಡ ಕಡೆ ನಡೆದುಕೊಂಡು ಬರುತ್ತಿದ್ದಾಗ ಫಿರ್ಯಾದಿಯ ಗ್ಯಾರೇಜ ಹತ್ತಿರ ಅಟೋರಿಕ್ಷ ನಂ. ಕೆ.ಎ 32  8965 ನೇದ್ದರ ಚಾಲಕನು ತನ್ನ  ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡುಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀಮತಿ ನಿಂಗಮ್ಮಾ ಗಂಡ ಶರಣಬಸಪ್ಪಾ ತಳವಾರ, ಸಾಃ ಜಿ.ಡಿ.ಎ ಕಾಲೋನಿ 1 ನೇ ಫೇಸ್ ಗುಲಬರ್ಗಾ ರವರು ದಿನಾಂಕ 05-10-2013 ರಂದು 07-00 ಪಿ.ಎಮ್ ಸುಮಾರಿಗೆ ತನ್ನ ಅತ್ತೆಯಾದ ಮರೆಮ್ಮಾ ಇಬ್ಬರು ಜಿ.ಡಿ.ಎ ಕಾಲೂನಿಯಲ್ಲಿರುವ ತಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಆರೋಪಿ ರವಿ ತಂದೆ ಗೋವಿಂದ ಜಮಾದಾರ ಈತನು ತನ್ನ ಟಂ.ಟಂ. ವಾಹನ ನಂ. ಕೆ.ಎ 28 ಬಿ 0191 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮಾತನಾಡುತ್ತಾ ಕುಳಿತಿದ್ದ ನನಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಟಂ. ಟಂ. ಪಲ್ಟಿ ಮಾಡಿ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ, ಲಿತಬಾಯಿ ಗಂಡ ಯಂಕೋಬಾ ಘಂಟೆ ಸಾ: ಬಿರಾಳ (ಕೆ)  ತಾ: ಜೇವರ್ಗಿ ರವರು ದಿನಾಂಕ 03-10-2013 ರಂದು ಸಾಯಂಕಾಲ 6-00 ಗಂಟೆಗೆ ನಾನು ಮತ್ತು ನನ್ನ ಗಂಡ ಕುಡಿಕೊಂಡು ಮೋಟಾ ಸೈಕಲ್ ಮೇಲೆ ಕುಳಿತು ನಮ್ಮ ಮನೆ ಕಡೆಗೆ ಹೋಗುವಾಗ ಅದೆ ವೇಳೆಗೆ  ಪಂಪನಗೌಡ ಮನೆಯ ಎದರು ನಮ್ಮೂರಿನ ಮಾರ್ಥಂಡಪ್ಪ ತಂದೆ ಅಯ್ಯಪ್ಪ ದೊಡ್ಡಮನಿ ಇತನು ಕುಡಿದ ಅಮಲಿನಲ್ಲಿ ಬಂದು ನಮ್ಮ ಮೋಟಾರ ಸೈಕಲ್  ನಿಲ್ಲಿಸಿ ಅವಚ್ಯ  ಶಬ್ದಗಳಿಂದ ಬೈದು ನನ್ನ ಕೈ ಹಿಡಿದು ಎಳೆದು ನನಗೆ  ಮೋಟಾರ ಸೈಲಕನಿಂದ ಕೆಳಗೆ ಬಿಳಿಸಿದಾಗ ನನ್ನ ಗಂಡನು ಯಾಕೆ ಅಂತಾ ಕೆಳಿದಕ್ಕೆ ಬ್ಯಾಡ ಸುಳಿಮಗನೆ ಅಂತಾ  ಆವಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳದ ಮೇಲೆ ಹೊಡೆವುವಾಗ ಮತ್ತು ಅವನ ಸಂಭಂದಿಕರಾದ ಶಂಕ್ರೆಪ್ಪ ,ಬಾಬು. ಮಲ್ಲಪ್ಪ, ಇವರೆಲ್ಲರು ಕೂಡಿ ನನ್ನ ಗಂಡನಿಗೆ ಅವಚ್ಯ  ಶಬ್ದಗಳಿಂದ ಬೈಯುವಾಗ ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 October 2013

GULBARGA DIST REPORTED CRIME

ಮಟಕಾ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:
ಗುಲಬರ್ಗಾ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಿ.ಟಿ.ಬಸ್ ನಿಲ್ದಾಣದ ಹತ್ತಿರ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಅಮೀತಸಿಂಗ ಐ.ಪಿ.ಎಸ್. ಎಸ್.ಪಿ.ಸಾಹೇಬ ಗುಲಬರ್ಗಾ ಮತ್ತು ಮಾನ್ಯ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ ಹಾಗು ಮಾನ್ಯ ಬಿ.ಎಸ್.ಸವಿಶಂಕರ ನಾಯ್ಕ ಡಿ.ಎಸ್.ಪಿ.ಎ ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಶರಣಬಸವೇಶ್ವರ ಬಿ. ಪಿ.ಐ. ಬ್ರಹ್ಮಪೂರ ಠಾಣೆಯ ರವರ ನೇತೃತ್ವದಲ್ಲಿ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ ಮಾರುತಿ ಎ,ಎಸ್,, ಶಿವಕುಮಾರ ಹೆಚ್.ಸಿ 08, ರಫೀಯೋದ್ದೀನ ಸಿಪಿಸಿ 370, ಶಿವಪ್ರಕಾಶ ಸಿಪಿಸಿ 615, ರಾಮು ಪವಾರ ಸಿಪಿಸಿ 761, ದೇವಿಂದ್ರಪ್ಪ 212, ಸುಭಾಷ ಸಿಪಿಸಿ 447 ರವರೆಲ್ಲರೂ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಾದ 1) ಅಂಬ್ರೇಶ @ ಅಂಬು ತಂದೆ ಸಂಗಣ್ಣ ಕೌಲಗಿ ವಯ|| 26 ವರ್ಷ ಉ|| ಮಟಕಾ ಬರೆದುಕೊಳ್ಳುವದು. ಸಾ|| ಆಳಂದ ಚಕ್ಕಪೋಸ್ಟ ಹತ್ತಿರ ಗುಲಬರ್ಗಾ ಇವನ ಕಡೆಯಿಂದ  1) ನಗದು ಹಣ 1,01625/- ರೂಪಾಯಿ 2) ಎಂಟು ಮಟಕಾ ಚೀಟಿ 3) ಒಂದು ಮಟಕಾ  ನಂಬರ ಬರೆದುಕೊಳ್ಳುತ್ತಿದ್ದ ನೋಟ ಪುಸ್ತಕ ಅ||ಕಿ|| 00 4) ಒಂದು ಕಾರಬನ ಕಂಪನಿಯ ಮೋಬಾಯಿಲ ಫೋನ ಅ||ಕಿ|| 1000/- ರೂಪಾಯಿ 5) ಒಂದು ಬಾಲ ಪೇನ್ನ ಅ||ಕಿ|| 00 ದೊರೆತವು 2) ಗಂಗಾಧರ ತಂದೆ ನಾಗೇಂದ್ರಪ್ಪ ಪಾಟೀಲ ವಯ|| 24 ವರ್ಷ ಉ|| ಮಟಕಾ ಬರೆದುಕೊಳ್ಳುವದು. ಸಾ|| ಆಳಂದ ಕಾಲೋನಿ ಶೇಖ ರೋಜಾ ಗುಲಬರ್ಗಾ ಇವನ ಕಡೆಯಿಂದ  1) ನಗದು ಹಣ 91000/- ರೂಪಾಯಿ 2) ಐದು ಮಟಕಾ ಚೀಟಿ 3) ಒಂದು ಬಾಲ ಪೇನ್ನ ಅ||ಕಿ|| 00 ದೋರತ್ತಿದ್ದು, ಹೀಗೆ ಒಟ್ಟು 1,92,625/- ರೂಪಾಯಿಗಳು  ಜಪ್ತಿ ಮಾಡುವಲ್ಲಿ ಯಶ್ವಸಿಯಾಗಿದ್ದು ಈ ಬಗ್ಗೆ  ಜಿಲ್ಲಾ ಪೊಲೀಸ ಅಧೀಕ್ಷಕರು ಮತ್ತು ಅಪರ ಜಿಲ್ಲಾ ಪೊಲೀಸ ಅಧೀಕ್ಷಕರು ಪ್ರಶಂಸಿರುತ್ತಾರೆ.