POLICE BHAVAN KALABURAGI

POLICE BHAVAN KALABURAGI

16 September 2013

ಜಾತಿ ನಿಂದನೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಕಾವೇರಿ ಗಂಡ ಪ್ರಕಾಶ ದೊಡಮನಿ  ಸಾ|| ನಿಂಬರ್ಗಾ ಇವರು ದಿನಾಂಕ 14-09-2013 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ಅಡುಗೆ ಸಹಾಯಕಿಯಾದ ಶ್ರೀಮತಿ ನಜೀರಮಾ ಗಂಡ ಲಕ್ಷ್ಮಣ ಕರನಾಳಕರ ಮತ್ತು ಆಕೆಯ ಗಂಡ ಲಕ್ಷ್ಮಣ ಕರನಾಳಕರ ಸಾ|| ದಂಗಾಪೂರ ಇವರು ಅಂಗನವಾಡಿ ಕೇಂದ್ರದ ಬಾಗಿಲಿನ ಕೀಲಿ ತೆರೆದು ಯಾರೋ ಒಬ್ಬರಿಗೆ ಕೇಂದ್ರದಲ್ಲಿರುವ ಆಹಾರ ಧಾನ್ಯಗಳನ್ನು ಕಳುವಿನಿಂದ ತ್ರಿಚರ್ಕ ವಾಹನದಲ್ಲಿ ಮಾರಾಟ ಮಾಡಿರುತ್ತಾರೆದಂಗಾಪೂರ ಗ್ರಾಮದ ನಿವಾಸಿಗಳು ಇದನ್ನು ನಿಲ್ಲಿಸಿರುತ್ತಾರೆ. ನಜಿರಮಾ ಮತ್ತು ಆಕೆಯ ಗಂಡ ಲಕ್ಷ್ಮಣ ಇವರು ನಾನು ದಲಿತ ಕಾರ್ಯಕರ್ತೆಯಾಗಿದ್ದ ಕಾರಣ ಜಾತಿ ನಿಂದನೆ ಮಾಡಿ ಕಳ್ಳತನ ಆಪಾದನೆಯನ್ನು ನನ್ನ ಮೇಲೆ ಹಾಕಬೇಕೆಂದು ನಾನು ಕೇಳಿದರೆ ಜಾತಿ ನಿಂದನೆ ಮಾಡಿ ಬೈದಿರುತ್ತಾರೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಣಿಗೆ ಕಿರುಕಳ ನೀಡಿದ ಪ್ರಕರಣ :

ಜೇವರ್ಗಿ ಠಾಣೆ : ಶ್ರೀಮತಿ ಶಂಕ್ರೇಮ್ಮ ಪೂಜಾರಿ ಸಾ: ಬಣಮಿ ಇವಳು ಠಾಣೆಗೆ ಹಾಜರಾಗಿ ದೂರು ಅರ್ಜಿ ಹಾಜರ ಪಡೆಸಿದ್ದು ಅದರ ಸಾರಂಶವೆನೆಂದರೇ ನನಗೆ ಸುಮಾರು 4 ವರ್ಷಗಳ ಹಿಂದೆ ಬಣಮಿ ಗ್ರಾಮದ ನಿಂಗರಾಜ ಪೂಜಾರಿ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನಗೆ ಇನ್ನೂ ಮಕ್ಕಳು ಆಗಿರುವುದಿಲ್ಲ ಮದುವೆಯಾಗಿ 2-3 ವರ್ಷಗಳ ವರೆಗೆ ಗಂಡನ ಮನೆಯಲ್ಲಿ ಅನೊನ್ಯವಾಗಿ ಇದ್ದೆನು ತದನಂತರ ನನ್ನ ಗಂಡ ನಿಂಗರಾಜ ಮಾವ.ಕಲ್ಲಪ್ಪ ಅತ್ತೆ ಮಹಾದೇವಿ ಮೈದುನ ಅಶೋಕ ಮತ್ತು ನಮ್ಮ ಅತ್ತೆಯ ತಮ್ಮ ಈರಣ್ಣಗೌಡ ತಂದೆ ಅಮೋಗಿ ಇವರೆಲ್ಲರೂ ಕೂಡಿ ರಂಡಿ ನೀನು ಸರಿಯಾಗಿಲ್ಲ ಅಂತ ಬೈದಾಡುತ್ತಾ ಬಂದಿದ್ದು ಅಲ್ಲದೇ ನನ್ನ ಅತ್ತೆ-ಮಾವ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಲ್ಲದೇ ನಮಗೆ 3,00,000/- ಸಾಲ ಆಗಿರುತ್ತದೆ ತವರು ಮನೆಯಿಂದ ತಗೆದುಕೊಂಡು ಬಾ ಅಂತ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು ಈ ವಿಷಯದಲ್ಲಿ ಸುಮಾರು ಸಲ ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು  ಹೇಳಿದರು ಕೂಡಾ ಅವರು ಹಾಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾರೆ ನಿನ್ನೆ ದಿನಾಂಕ 14-09-2013 ರಂದು ನನ್ನ ತಂದೆ ನನಗೆ ಮಾತಾಡಿಸುವ ಸಲುವಾಗಿ ನಮ್ಮೂರಿಗೆ ಬಂದಿದ್ದರು. ನಾನು ಮತ್ತು ನನ್ನ ತಂದೆ ಬಮ್ಮರಾಯ ಇಬ್ಬರೂ ನಮ್ಮ ಮನೆಯಲ್ಲಿ ಮಾತನಾಡುತ್ತಾ ಕುಳಿತುಕೊಂಡಾಗ ಸಾಯಂಕಾಲ 6-00 ಸುಮಾರಿಗೆ ನನ್ನ ಗಂಡ ನಿಂಗರಾಜ ಮಾವ ಕಲ್ಲಪ್ಪ ಅತ್ತೆ ಮಹಾದೇವಿ ಮೈದುನಾ ಅಶೋಕ ಹಾಗೂ ಈರಣ್ಣಗೌಡ ಇವರೆಲ್ಲರೂ ಕೂಡಿ ರಂಡಿ ನಿನಗೆ ಎಷ್ಟ ಸಾರಿ ಹೇಳಿದರು 3 ಲಕ್ಷ ರೂಪಾಯಿ ತೆಗೆದುಕೊಂಡು ಬರುತ್ತಿಲ್ಲ ಹಣ ತಗೆದುಕೊಂಡು ಬಂದರೇ ಈ ಮನೆಯಲ್ಲಿ ಇರು ಅಂತ ನನಗೆ ನನ್ನ ಗಂಡನು ಕೈಹಿಡಿದ್ದು ಹೋರಗೆ ಹಾಕುತ್ತಿದ್ದಾಗ ನಾನು ಯಾಕೇ ಅಂದಿದಕ್ಕೆ ರಂಡಿ ನನಗೆ ಎದುರು ಮಾತನಾಡುತ್ತಿ ಅಂತ ಹೊಡೆಯಲು ಮೈ ಮೇಲೆ ಬಂದ ತಕ್ಷಣ ಅಂಚಿ ಓಡುತ್ತಿದ್ದ ನನಗೆ ನನ್ನ ಮೈದುನ ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದಾಗ ನನ್ನ ಗಂಡನ್ನು ಕೈಯಿಂದ ಕಪಾಳದ ಮೇಲೆ ಹೊಡೆದನು ಅತ್ತೆ ಇವಳು ಕೂದಲು ಹಿಡಿದ್ದು ಕೈಯಿಂದ ಬೆನ್ನ ಮೇಲೆ ಹೊಡೆದರು ಮಾವ ಮತ್ತು ಈರಣ್ಣಗೌಡ  ಇಬ್ಬರೂ ಈ ರಂಡಿಗೆ ಹೊಡೆಯಿರಿ ಅಂತ ಬೈದರು ನಾನು ಚಿರಾಡುವ ಬಾಯಿ ಸಪ್ಪಳ ಕೇಳಿ ಓಣಿಯ ಪಾರ್ವತಿ,ಮಹಾಂತಗೌಡಹಾಗೂ ನನ್ನ ತಂದೆ ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 September 2013

GULBARGA DIST REPORTED CRIMES

ಕೊಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಜಯಾ ತಂದೆ ಪ್ರಭು. ರಾಠೋಡ ಸಾ: ಇಂದಿರಾ ನಗರ ಮಡ್ಡಿ ನಂ: 2 ಶಹಾಬಾದ. ದಿನಾಂಕ 14-08-2013 ರಂದು 8.30 ಪಿಎಮ್ ಸುಮಾರಿಗೆ   ಗಣೇಶ ವಿಸರ್ಜನೆ ಕುರಿತು ಅದೇ ಓಣಿಯ ಹುಡಗರಾದ ಚಿಚರು ಮತ್ತು ಹೊಂಡಾ ಇವರಿಗೆ ಡಾನ್ಸ ಕಲಿಸುವಾಗ ಅದೆ ಓಣಿಯ ಸಂಜಯ ಇತನು ಬಂದು ಪಿರ್ಯಾದಿಗೆ ಏ ಭೋಸಡಿ ಮಗನೇ ಇಲ್ಲಿ ಎಕೆ ರೋಡಿನ ಮೇಲೆ ಡಾನ್ಸ ಕಲಿಸುತ್ತಿರುವೆ ಈ ಜಾಗ ನಿಮ್ಮದು ಏನು” ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಸಂಜಯ ಇತನಿಗೆ “ ನಾನು ರೋಡಿನ ಮೇಲೆ ಡಾನ್ಸ ಕಲಿಸುತ್ತೇನೆ ಅದರಿಂದ ನಿನಗೇನು ತೊಂದರೆ ಆಗುತ್ತಿದೆ ಅಂದಾಗ ಸದರಿ ಸಂಜಯ ಇತನು ಎದರು ಮಾತನಾಡುತ್ತಿಯಾ ಅಂತಾ ಅಂದವನೇ ಕೈಯಿಂದ ಬೆನ್ನ ಮೇಲೆ ಹೊಡೆಯುತ್ತಿದ್ದಾಗ ಪಿರ್ಯಾದಿಯ ತಾಯಿ ಬಿಡಿಸಲು ಬಂದಾಗ ಸದರಿಯವಳಿಗೆ ಕೈಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಪಡುತ್ತಿದ್ದ ಜಗಳದ ಸಪ್ಪಳ ಕೇಳಿ ಪಿರ್ಯಾದಿಯ ಅಣ್ಣ ಕುಮಾರ ಬಿಡಿಸಲು ಬಂದಾಗ ಆರೋಪಿಯ ಅಣ್ಣ ವಸಂತ ಇತನು ಕುಮಾರನಿಗೆ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹಿಡಿದು ಜೋರಾಗಿ ಒತ್ತುತ್ತಿದ್ದಾಗ ಸಂಜಯ ಇತನು ಕೈ ಮುಷ್ಟಿ ಮಾಡಿ ಜೋರಾಗಿ ಎದೆಗೆ, ಹೊಟ್ಟೆಗೆ ಹೊಡೆದುದ್ದಲ್ಲದೇ ತನ್ನ ಕಾಲಿನಿಂದ ಸದರಿ ಕುಮಾರನ ತರಡಿಗೆ ಜೋರಾಗಿ ಒದಿದ್ದರಿಂದ ಸದರಿಯವನು ಸ್ಥಳದಲ್ಲಿಯೇ ಬಿದ್ದು ಮೃತ ಪಟ್ಟಿದ್ದು ಸದರಿಯವನಿಗೆ ವಿನಾಕಾರಣ ಜಗಳ ತೆಗೆದು ಕೊಲೆ ಮಾಡಿರುತ್ತಾರೆ ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗ್ರ ಠಾಣೆಯಲ್ಲಿ ಪ್ರಕ್ರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ  ಮಲ್ಲಿಕಾರ್ಜುನ ತಂದೆ ಶಿವಪುತ್ರಪ್ಪಾ ಸಾಃ ಎಂ.ಬಿ ನಗರ ಗುಲಬರ್ಗಾರ ರವ ರು ದಿನಾಂಕ 13-09-2013 ರಂದು 08:00 ಪಿ.ಎಂ. ಸುಮಾರಿಗೆ ತಮ್ಮ ಗೆಳೆಯರಾದ ಸೋಮನಾಥ, ಕಿರಣಕುಮಾರ ಇವರು ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಗಣೇಶ ವಿಸರ್ಜನೆಯ ಮೆರವಣಿಗೆಯನ್ನು ನೋಡಿಕೊಂಡು ಮರಳಿ 11:00 ಪಿ.ಎಂ. ಸುಮಾರಿಗೆ ಬಸವೇಶ್ವರ ಆಸ್ಪತ್ರೆಯ ಎ.ಟಿ.ಎಂ. ಕ್ರಾಸ್ ಮುಖಾಂತರ ಹೋಗುತ್ತಿರುವಾಗ ವೆಂಕಟೇಶ, ಗೋವಿಂದ ಸಂಗಡ ಇನ್ನೂ 03 ಜನರು ತಡೆದು ನಿಲ್ಲಿಸಿ ಚಾಕುವಿನಿಂದ ಪಿರ್ಯಾದಿಯ ಕುತ್ತಿಗೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ, ಕೈಯಿಂದ ಹೊಡೆ ಬಡೆ ಗುಪ್ತಗಾಯ ಪಡಿಸಿದ್ದು ಹಾಗು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

ಜೇವರ್ಗಿ ಠಾಣೆ : ಶ್ರೀ ನಾಗಪ್ಪ ತಂದೆ ಪೀರಪ್ಪ ಮಾಂಗ ಸಾ: ಅವರಾದ . ತಾ: ಜೇವರ್ಗಿ ರವರು  13-09-13 ರಂದು ರಾತ್ರಿ 8-00 ಗಂಟೆಗೆ ತಮ್ಮ ಹೆಂಡತಿ ಶರಣಮ್ಮ ತಂದೆ ಪೀರಪ್ಪ ತಾಯಿ ಶರಣಮ್ಮ ಮನೆಯ ಮುಂದೆ ಮಾತಾನಾಡುತ್ತ ಕುಳಿತುಕೊಂಡಾಗ ಮರೆಪ್ಪ ತಂದೆ ಮಸ್ತಫ್ ಸಂಗಡ 5 ಜನರು ಸಾ: ಎಲ್ಲರು ಅವರಾದ ಗ್ರಾಮದವರು ತಾ: ಜೇವರ್ಗಿ  ಎಲ್ಲರು ಕುಡಿಕೊಂಡು ಹೊಲದ ವಿಷಯದಲ್ಲಿ ಜಗಳ ತೆಗೆದು ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕ್ರಣ ದಾಖಲಾಗಿದೆ  

13 September 2013

ಅಪಹರಣ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ. ಬಸಲಿಂಗಪ್ಪಾ ತಂದೆ ಶಿವಬಸಪ್ಪಾ ನಿರಡಿ ಸಾ: ಮನೆ ನಂ. 85 ಶಾಂತಿ ನಗರ ಗುಲಬರ್ಗಾ ರವರು ದಿನಾಂಕ 12-09-2013 ರಂದು  ಮುಂಜಾನೆ 10 ಗಂಟೆಗೆ ಸ್ಕೂಲ್ ಬಸ್ಸಿನಲ್ಲಿ ಸ್ಪಾರ್ಕ್ಲೆ ಇಂಟರ ನ್ಯಾಷನಲ್ ಶಾಲೆಗೆ ಹೋಗಿದ್ದು ಸಾಯಂಕಾಲ 6 ಗಂಟೆಯಾದರೂ ಸಹ ಮನೆಗೆ ಬರಲಾರದಕ್ಕೆ ಸ್ಪಾರ್ಕ್ಲೆ ಶಾಲೆಗೆ ಪೋನ ಮಾಡಿ ಕೇಳಿದ್ದು ಮತ್ತು ಸ್ಕೂಲ್ ಬಸ್ಸಿನ ಡ್ರೈವರ ರವರಿಗೆ ಪೋನ ಮಾಡಿ ಕೇಳಿದಾಗ ಸಾಯಂಕಾಲ 4-30 ಗಂಟೆ ಸುಮಾರಿಗೆ ಶಾಂತಿ ನಗರದ ಹನುಮಾನ ಮಂದಿರ ಹತ್ತಿರದ ಅಶೋಕ ನಗರಕ್ಕೆ ಹೋಗುವ ದಾರಿಯ ಹತ್ತಿರ ಇಳಿಸಿರುವುದಾಗಿ ಹೇಳಿದರು. ನಂತರ ಸಾಯಂಕಾಲ 7-28 ಗಂಟೆಗೆ ಯಾವುದೂ ಒಂದು ಅನಾಮದೇಯ ವ್ಯಕ್ತಿ ಮೋಬೈಲ್ ನಂ. 9620964079 ರಿಂದ ನನಗೆ ಪೋನ ಮಾಡಿ ಹಿಂದಿ ಭಾಷೆಯಲ್ಲಿ ‘’ನಿರಡಿ ಪಲ್ಲವಿ ಬಿಲ್ಡಿಂರ್ಸ ಹೈ ಕ್ಯಾ ಅಂತಾ ನನ್ನ ಹೆಸರು ವಿಳಾಸ ಕೇಳಿದದು ನಂತರ  7-35 ಪಿ.ಎಂ. ಸುಮಾರಿಗೆ ಪುನ: ಅದೇ ನಂಬರದಿಂದ ಪೋನ ಮಾಡಿ ‘’ ತುಮಾರಾ ಬೆಟಾ ಮೇರೆ ಪಾಸ ಹೈ ಮೈ ಕ್ಯಾ ಬೋಲತೋ ಸುನೋ 10 ಲಾಖ ರೂಪಯ್ಯಾ ದೇನಾ ಹೈ ಕಲ್ಲ ಸುಬಾಹ 10 ಬಜೆ ಪೋನ ಕರೆಂಗೆ ಬೇಟಾ ಹೊನಾ ಹೈತೋ 10 ಲಾಖ ರೂಪಯ್ಯಾ ಲೇಕೆ ಆನಾ’’  ಅಂತಾ ಹೇಳಿದಾಗ ನಾನು ಅವನಿಗೆ ನನ್ನ ಮಗನೊಂದಿಗೆ ಮಾತನಾಡಿಸೂ ಅಂತಾ ಕೇಳಿದಾಗ ಅವರು ನಮ್ಮ ಮಾತು ಕೇಳು ಅಂತಾ ಹೇಳಿ  ಪೋನ ಆಫ್ ಮಾಡಿದರು. ನಂತರ ನಾನು ಸುಮಾರು ಸಲ ಪೋನ ಮಾಡಿದರೆ ಸ್ವೀಚ್ ಆಫ್ ಆಗಿರುತ್ತದೆ.  ಕಾರಣ ಯಾರೋ ದುಷ್ಕರ್ಮಿಗಳು ನನ್ನ ಮಗನಿಗೆ ಅಪಹರಣ ಮಾಡಿಕೊಂಡು ಒಯ್ದು 10 ಲಕ್ಷ ರುಪಾಯಿ ತಂದು ಕೊಡುವಂತೆ ಬೇಡಿಕೆ ಇಟ್ಟಿರುತ್ತಾರೆ. ಮತ್ತು ಹಣ ತಂದು ಕೊಡುವ ಸ್ಥಳವನ್ನು ನಾಳೆ ಮುಂಜಾನೆ ಹೇಳುವದಾಗಿ ಹೇಳಿರುತ್ತಾರೆ. ಆದ್ದರಿಂದ ಅಪಹರಣವಾಗಿದ್ದ ನನ್ನ ಮಗ ನಿಶಾಂತನಿಗೆ ಪತ್ತೆ ಹಚ್ಚಿ ಅಪಹರಣ ಮಾಡಿದವರ ಮೇಲೆ ಕಾನೂನಿನ ರೀತಿಯ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಹಿಳಾ ಠಾಣೆ : ಶ್ರೀಮತಿ ಗೋದಾವರಿ ಗಂಡ ಕಲ್ಯಾಣಪ್ಪಾ ಮಾಡ್ಯಾಳ ಸಾ;ಕೋಹಿನೂರ ತಾ; ಬಸವಕಲ್ಯಾಣ ಜಿ; ಬೀದರ ಇವರ ಮಗಳಾದ ಕುಮಾರಿ ಮಮತಾ ತಂದೆ ದಿ; ಕಲ್ಯಾಣಪ್ಪಾ ಇವಳು ಸರಕಾರಿ ಮಹಿಳಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದು ವ್ಯಾಸಾಂಗದ ಸಲುವಾಗಿ ಅವಳು ನನ್ನ ತವರು ಮನೆಯಾದ ಹಾಲ ಸುಲ್ತಾನಪೂರದಿಂದ ಗುಲಬರ್ಗಾಕ್ಕೆ ಬಸ್ಸಿನಲ್ಲಿ ಕಾಲೇಜಿಗೆ ಬಂದು ಹೋಗಿ ಮಾಢುತ್ತಿದ್ದಳು. ಅದೇ ಕಾಲೇಜಿನಲ್ಲಿ ನನ್ನ ಅಣ್ಣನ ಮಗಳಾದ ನಾಗವೇಣಿ ಇವಳು ಕೂಡ ದ್ವೀತಿಯ ವರ್ಷದಲ್ಲಿ ವಿದ್ಯಾಬಾಸ ಮಾಡುತ್ತಿದ್ದಾಳೆ.
ದಿನಾಂಕ 22.08.2013 ರಂದು ಬೆಳಗ್ಗೆ 7.45 ಎ.ಎಮಕ್ಕೆ ನನ್ನ ಮಗಳಾದ ಮಮತಾ ಇವಳು ಹಾಲಸುಲ್ತಾನಪೂರದಿಂದ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾಳೆ ಅದೇ ದಿವಸ ನಮ್ಮ ಅಣ್ಣನ ಮಗಳಾದ ನಾಗವೇಣಿ ಇವಳು ಮಮತಾಳನ್ನು ಕಾಣಲು ಕಾಲೇಜಿಗೆ ಹೋದಾಗ ಮಮತಾ ಇವಳು ಸಿಕ್ಕರುವದಿಲ್ಲಾ ಅಂತಾ ನನಗೆ ಮತ್ತು ನನ್ನ ಅಣ್ಣನಾದ ಶರಣಗೌಡನಿಗೆ ಪೋನ ಮುಖಾಂತರ ವಿಷಯ ತಿಳಿಸಿದ್ದು ಆಗ ನನ್ನ ಅಣ್ಣ ಶರಣಗೌಡ ಕೂಡಲೇ ಎಲ್ಲಾ ಕಡೆ ಮಮತಾಳನ್ನು ಹುಡುಕಿ ನೋಡಲಾಗಿ ಅವಳು ಸಿಕ್ಕಿರುವದಿಲ್ಲಾ. ಸಂಜೀವಕುಮಾರ ತಂದೆ ಬಾಜಿರಾವ ಇತನ ಮೇಲೆ ನಮಗೆ ಸಂಶಯವಿರುತ್ತದೆ. ಅಪ್ರಾಪ್ತ ವಯಸ್ಸಿನ ಮಗಳಾದ ಮಮತಾಳನ್ನು ಅಪಹರಿಸಿಕೊಂಡು ಹೋಗಿದ್ದು ಅವಳನ್ನು ಹುಡುಕಿಕೋಡಬೇಕು ಮತ್ತು ಅವಳ ಅಪಹರಣಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸುಲಿಗೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಮಾರುತಿ  ತಂದೆ ರೋಸಯ್ಯಾ ಪಲ್ಲಾ  ಸಾ: ದುವ್ವುರ ಮಂಡಲ  ಜಿ:- ಕಡಪ (ಎಪಿ) ರವರು ದಿನಾಂಕ 09-09-2013 ರಂದು  ರಾತ್ರಿ 10.00 ಗಂಟೆಗೆ ಗುಜರಾತದ ಮುರುವಿಯಿಂದ ಟೈಲ್ಸ ಲೋಡ ಮಾಡಿಕೊಂಡು ಚೆನ್ನೈಗೆ ಹೋರಟಿದ್ದು ಲಾರಿಯಲ್ಲಿ ತನ್ನ ಸಂಗಡ ಕ್ಲಿನರ್ ಶ್ರಿನಿವಾಸನು ಇದ್ದನು ನಮ್ಮ ಲಾರಿಯು ಕರ್ನಾಟಕದಲ್ಲಿ ಚಿಂಚೋಳಿ ತಾಲೂಕಿನ ನಾಗಾಇದಲಾಯಿ ಗ್ರಾಮ ದಾಟಿ ಮುಂದುಗಡೆ ಬರುತ್ತಿದ್ದಾಗ ದಿನಾಂಕ 11-09-2013 ರಂದು 05.30 ಪಿ ಎಮ್ ಕ್ಕೆ ಬರುತ್ತಿದ್ದಾಗ ತಮ್ಮ ಲಾರಿಯ ಹಿಂದುಗಡೆಯಿಂದ ಒಂದು ಆಟೋ ತಮ್ಮ ಲಾರಿಗೆ ಸೈಡ್ ಹೋಡೆದು ತಮ್ಮ ಲಾರಿಯ ಮುಂದುಗಡೆ ಬಂದು ನಿಂತಾಗ ನಾನು ಲಾರಿಯನ್ನು ನಿಲ್ಲಿಸಿದೆನು ಆಟೀಒದಲ್ಲಿ 3 ಜನರು ಇದ್ದು ಅವರ ಪೈಕಿ 2 ಜನರು ಆಟೋದಿಂದ ಇಳಿದು ತನ್ನ ಹತ್ತಿರ ಬಂದು ತನಗೆ ಕೈ ಮುಷ್ಟಿ ಮಾಡಿ ಹೋಡೆದರು ಆಗ ನಾನು ಅವರಿಗೆ ಹೆದರಿಕೊಂಡು 1000 ರೂಪಾಯಿಗಳನ್ನು ಕೋಟ್ಟೆನು  ಆಗ ಅವರು ತನಗೆ ಹೆದರಿಸಿ ತನ್ನ ಜೆಬಿನಲ್ಲಿದ್ದ 4000 ಸಾವಿರ ರೂಪಾಯಿ, ಒಂದು ನೋಕಿಯಾ ಮೋಬೈಯಲ್ ಕಸಿದುಕೊಂಡರು. ನಂತರ ಅಲ್ಲಿಂದ ತಾವು ಬಂದ ದಾರಿಗೆ ಹಿಂತಿರುಗಿ ಹೋದರು .ಆಗ ಅಲ್ಲಿ ಎದರುಗಡೆಯಿಂದ  ಬಂದು ಒಂದು ಆಟೋ ಬಂದಿತ್ತು  ಸದರರ ಆಟೋದಲ್ಲಿದವನು ಘಟನೇ ನೋಡಿರುತ್ತಾನೆ . ಸದರಿಯವರು ತನಗೆ ಹೆದರಿಸಿ ಬೆದರಿಸಿ ತನ್ನ ಹತ್ತಿರವಿದ್ದು 5000 ಸಾವಿರ ರೂಪಾಯಿ ಒಂದು ನೋಕಿಯಞಾ ಹ್ತಾಂಡಸೆಟ್ ನ್ನು ದೋಚಿಕೊಂಡು ಹೋಡೆಬಡಿ ಮಾಡಿದ್ದು ಅವರ ವಿರುದ್ದ ಕಾನೂನು ಪ್ರಕಾರ ಕ್ರಮಕೈಗೋಳ್ಳಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 12-09-2013 ರಂದು ಮದ್ಯಾಹ್ನ 13-30 ಗಂಟೆ ಸುಮಾರಿಗೆ ಅಂಬು ತಂದೆ ರಾಮಚಂದ್ರಪ್ಪ ಸೋನಾಯಿ ಸಾ : ಡೊಂಗರಗಾಂವ ತಾ:ಜಿ: ಗುಲಬರ್ಗಾ ಇವನು ತಮ್ಮ ಹೋಲಕ್ಕೆ ಹೋಗುವಾಗ ಕಾಲದಾರಿಯಲ್ಲಿ ಕಲ್ಲಿನ ಗೋಡೆ ದಾಟುತ್ತಿರುವಾಗ ಕಲ್ಲಿನ ಸಂದಿಯಲ್ಲಿ ಇಟ್ಟು ಗೋಡೆ ಎರುತ್ತಿರುವಾಗ ಗೋಡೆಯಲ್ಲಿರುವ ಹಾವು ಕೈಯಿಗೆ ಕಚ್ಚಿದ ಪ್ರಯುಕ್ತ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸುಬ್ಬಮ್ಮ ಗಂಡ ರಾಮಚಂದ್ರಪ್ಪ ಸೋನಾಯಿ ಸಾ; ಡೊಂಗರಗಾಂವ ತಾಃಜಿಃ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮೃತ ನಾನಾಚಂದ ಸಿಂದೇ ಮತ್ತು ಗಾಯಾಳು ಹೀರು ತಂದೆ ರಾಮು ರಾಠೋಡ ಇಬ್ಬರು ಕೂಡಿ ನಾನಾಚಂದನ ಮೋಟಾರ ಸೈಕಲ ನಂ ಕೆ.ಎ-32 ಆರ್-6934 ನೇದ್ದರ ಮೇಲೆ ಗುಲಬರ್ಗಾದಿಂದ ಸ್ಟೇಶನ ಗಾಣಗಾಪುರಕ್ಕೆ ಹೋಗಬೇಕೆಂದು ಕೇರಿ ಭೋಸಗಾ ಕ್ರಾಸನ ಹತ್ತಿರ ರೋಡಿನ ಮೇಲೆ ಹೋಗುವಾಗ ಅದೇ ವೇಳೆಗೆ ಆಳಂದ ರೋಡ ಕಡೆಯಿಂದ ಕ್ರೋಜರ ನಂ ಕೆ.ಎ-32 ಎಂ-5594 ನೇದ್ದರ ಚಾಲಕನು ಅತೀವೇಗದಿಂದ ಮತ್ತು ನಿರ್ಲಜನತದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ ನಂ.ಕೆ.ಎ.32 ಆರ್.6934 ನೆದ್ದಕ್ಕೆ ಡಿಕ್ಕಿ ಹೊಡೆದಿದ್ದು ಸದರಿ ಮೋಟಾರ ಸೈಕಲ್ ಸವಾರ  ನಾನಾಚಂದ ತಂದೆ ಲಕ್ಷ್ಮಣ ಸಿಂಧೆ ಸಾ;ಸ್ಟೇಶನ ಗಾಣಗಾಪೂರ ತಾ;ಅಫಜಲಪೂರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಆತನ ಹಿಂದೆ ಕುಳಿತಿದ್ದ ಹೀರೂ ತಂದೆ  ರಾಮು ರಾಠೋಡ ಸಾ;ಗುಡೂರ ತಾಂಡಾ ತಾ:ಅಫಜಲಪೂರ ಇತನಿಗೆ ತಲೆಗೆ , ಬಲಗಾಲಿಗೆ ಭಾರಿ ರಕ್ತಗಾಗಿದ್ದು ಇರುತ್ತದೆ. ಸದರಿ ಕ್ರೋಜರ ಚಾಲಕ ವಾಹವನನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಕಾರಣ ಸದರಿ ಕ್ರೋಜರ ನಂ.ಕೆ.ಎ.32 ಎಂ.5594 ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತಾ ಶ್ರೀ  ಮಾಹಾದೇವ ತಂದೆ ಲಕ್ಷ್ಮಣ ಸಿಂಧೇ ಸಾ : ಸ್ಟೇಷನ ಗಾಣಗಾಪೂರ ಭ್ಆಗ್ಯವಂತಿ ನಗರ ಗುಲಬರ್ಗಾ ರವರು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಗ್ರಾಮೀಣ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.