POLICE BHAVAN KALABURAGI

POLICE BHAVAN KALABURAGI

19 July 2013

GULBARGA DIST REPORTED CRIMES

ಅಶೋಕನಗರ ಪೊಲೀಸ ಠಾಣೆ
ಕಳವು ಪ್ರಕರಣ:
ಶ್ರೀ ಕಲ್ಲಪ್ಪ ತಂದೆ ಸಾಯಿಬಣ್ಣ ನಾಟೀಕಾರ ಸಾ: ಶ್ರೀನಿವಾಸ ಸರಡಗಿ ತಾ:ಜಿ: ಗುಲಬರ್ಗಾ ರವರು ದಿನಾಂಕ 18/07/2013 ರಂದು ಸಾಯಂಕಾಲ  ಧಾರವಾಡಕ್ಕೆ  ಹೊಗುವ  ಕುರಿತು ಕೇಂದ್ರ ಬಸ್ ನಿಲ್ದಾಣದಲ್ಲಿ ರಾತ್ರಿ 8 ಗಂಟೆಗೆ ಸೇಡಂ-ಹಾವೇರಿ ಬಸ್ಸಿನಲ್ಲಿ ಲಗೇಜ ಬ್ಯಾಗ ಮತ್ತು  ಸೊನಿ ಕಂಪನಿಯ ಲ್ಯಾಪಟಾಪ ಮತ್ತು ಶಾಲಾ ದಾಖಲಾತಿಗಳು ಇರುವ ಬ್ಯಾಗನ್ನು  ಬಸ್ಸಿನ ಸೀಟಿನ ಮೇಲೆ ಇಟ್ಟು ನೀರಿನ ಬಾಟಲ ತರಲು  ಬಸ ಸ್ಟ್ಯಾಂಡ ಕ್ಯಾಂಟಿನಕ್ಕೆ ಹೊಗಿ  ಬಂದು ನೊಡುವಷ್ಟರಲ್ಲಿ ಶಾಲಾ ದಾಖಲಾತಿ ಲ್ಯಾಪಟಾಪ ಇರುವ ಬಾಗ  ಇರಲಿಲ್ಲ. ಎಲ್ಲಾ ಕಡೆ ಹುಡುಕಿದ್ದು ಸಿಗಲಿಲ್ಲ.  ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೊಗಿದ್ದು  ಬ್ಯಾಗದಲ್ಲಿ  1) ಒಂದು ಸೊನಿ ಲ್ಯಾಪಟಾಪ ಅ:ಕಿ:  40,000/-  ರೂಪಾಯಿ ಮತ್ತು 1) ಎಸ್‌.ಎಸ್‌.ಎಲ್‌.ಸಿ ಮೂಲ ಅಂಕಪಟ್ಟಿ, 2) ಪಿ.ಯು.ಸಿ ಮೂಲ ಅಂಕಪಟ್ಟಿ 3) ಆಧಾರ ಕಾರ್ಡ, 4) ಕಾಲೇಜ ರಸಿದಿಗಳು  ಮತ್ತು ಇನ್ನಿತರೆ ಶಾಲಾ ದಾಖಲಾತಿ ಇದ್ದು ಪತ್ತೆ ಮಾಡಿ ಕೊಡುವ ಕುರಿತು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸೇಡಂ ಪೊಲೀಸ ಠಾಣೆ:
ಕಳವು ಪ್ರಕರಣ:
         ದಿನಾಂಕ:18-07-2013 ರಂದು ಶ್ರೀ. ಅಕ್ಬರ್ ಸಾಬ ನದಾಫ್ ಶಾಖಾಧಿಕಾರಿಗಳು, ಜೆಸ್ಕಂ ಸೇಡಂ. ರವರು ಠಾಣೆಗೆ ಹಾಜರಾಗಿ ಸೇಡಂ-ಚಿಂಚೋಳಿ ರೋಡಿನ ಸಟಪಟನಳ್ಳಿಗೆ ಹೋಗುವ ಮಾರ್ಗದಲ್ಲಿರುವ ಐಡಲ್ 11. ಕೆ.ವಿ. ಶಿರೋಳ್ಳಿ ವಿದ್ಯೂತ್ ಮಾರ್ಗದ 5 ಕಂಬಗಳ ಅಂದಾಜು 1.3 ಕಿ.ಮೀ ಅಳತೆಯ ಅಲೂಮಿನಿಯಂ ವೈಯರನ್ನು ದಿನಾಂಕ:17-07-2013 ರಂದು ರಾತ್ರಿ 1000 ಗಂಟೆಯಿಂದ ಬೆಳಗ್ಗೆ 0600 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಸದರಿ ಕಳವಾಗಿರುವ ವಿದ್ಯೂತ್ ಕಂಬದ ಅಲೂಮಿನಿಯಂ ವೈಯರಿನ ಅಂದಾಜು ವೆಚ್ಚ ರೂ 45,000/- ಗಳು ಆಗಿರುತ್ತದೆ. ಕಳ್ಳತನವಾದ ವಿಷಯ ಮೇಲಾಧಿಕಾರಿಗಳಿಗೆ ತಿಳಿಸಿ ಠಾಣೆಗೆರುವಲ್ಲಿ ತಡವಾಗಿರುತ್ತದೆ. ಕಾರಣ ಸದರಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ದೂರು ಅರ್ಜಿ  ಸಾರಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಮಲಾಪೂರ ಪೊಲೀಸ್ ಠಾಣೆ:
ವರದಕ್ಷಿಣೆ ಕಿರುಕುಳ ಪ್ರಕರಣ:

ಶ್ರೀಮತಿ.ವಿಶಾಖಾ  ಗಂ. ಶಿವರಾಜ ಗೋಗರೆ ಸಾ: ಸೊಂತ ರವರು  ದಿ: 28-11-10 ರಂದು ಶಿವರಾಜ ತಂದೆ ಸುಭಾಷ ಗೋಗರೆ ರವರೊಂದಿಗೆ ವಿವಾಹವಾಗಿದ್ದು  ನನ್ನಮದುವೆ ಕಾಲಕ್ಕೆ ಅವರ ತಂದೆ ತಾಯಿ ಶಿವರಾಜನಿಗೆ   5 ತೊಲೆ ಬಂಗಾರ, ಬಟ್ಟೆ-ಬರೆ, ,ವಾಚ್ ಹಾಗೂ ನಗದು ಹಣ 11,000/- ರೂಪಾಯಿ ವರದಕ್ಷಿಣೆ ರೂಪದಲ್ಲಿ ನೀಡಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡನ ಮನೆಯಲ್ಲಿ ಮೊದ ಮೊದಲು ಸರಿಯಾಗಿ ನೋಡಿಕೊಳ್ಳುತ್ತಿದ್ದು, ನಂತರ ಗಂಡ ಶಿವರಾಜ ತಂದೆ ಸುಭಾಷ ಗೋಗರೆ, ಅತ್ತೆ  ರೇವತಿ ಗಂಡ ಸುಭಾಷರಾವ ಗೋಗರೆ , ನಾಗರಾಣಿ ಗಂಡ ಗಜಾನಂದ ಮಾಲ್ದಾರ ಗಜಾನಂದ ತಂದೆ ದತ್ತಾತ್ರೇಯ ಮಾಲ್ದಾರ, ಲಖನ ತಂದೆ ಸುಭಾಷರಾವ ಗೋಗರೆ ಮತ್ತು ದತ್ತಾತ್ರೇಯ ತಂದೆ ಬಳವಂತರಾವ ಮಾಲ್ದಾರ ರವರು ತವರು ಮನೆಯಿಂದ ಇನ್ನೂ ಹೆಚ್ಚಿನ ಹಣ ಮತ್ತು ಬಂಗಾರ ತರಬೇಕು ಇಲ್ಲದಿದ್ದರೆ ಶಿವರಾಜನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ದಿನಾಲು ಅವಾಚ್ಯವಾಗಿ ಬೈಯ್ಯುತ್ತಾ ಕೈಯಿಂದ ನನಗೆ ಹೊಡೆಯುವುದು ಮತ್ತು ನೂಕಿಸಿಕೊಡುವುದು ಮಾಡುತ್ತಾ ನನಗೆ ಸರಿಯಾಗಿ ಊಟಕ್ಕೆ ಹಾಕದೇ ಒಂದು ರೂಮಿನಲ್ಲಿ ಕೂಡಿಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಕೊಳ್ಳಲಾಗಿದೆ 

18 July 2013

GULBARGA DIST REPORTED CRIMES

ಮಹಿಳಾ ಪೊಲೀಸ್ ಠಾಣೆ :
ವರದಕ್ಷಿಣೆ ಕಿರುಕಿಳ ಪ್ರಕರಣ:

ಶ್ರೀಮತಿ ಸರಸ್ವತಿ ಗಂಡ ಸಿದ್ದರಾಮ್ ಅಲ್ಲಾಪೂರ  ಸಾ:ವಿವೇಕಾನಂದ ನಗರ  ಖಾದ್ರೀ ಚೌಕ ಗುಲಬರ್ಗಾ ಇವರ ಮದುವೆಯು 14 ವರ್ಷಗಳ ಹಿಂದೆ ಸಿದ್ದರಾಮ್ ಇತನೊಂದಿಗೆ ದಂಗಾಪೂರ ಗ್ರಾಮದಲ್ಲಿ ನಡೆದಿದ್ದು ಈಗ ಮಿನಾಕ್ಷೀ ಎಂಬ 10 ವರ್ಷದ ಮಗಳು ಹಾಗೂ ಆಕಾಶ ಎಂಬ 8 ವರ್ಷದ ಮಗನಿರುತ್ತಾನೆ. ಮದುವೆಯಾದ ಕೆಲವು ದಿನಗಳ ನಂತರ ಸಿದ್ದರಾಮ್ ಇತನು ಪ್ರತಿದಿನ ಕುಡಿದು ಬಂದು ಹೊಡೆ ಬಡೆ ಮಾಡಿ ತವರು ಮನೆಯಿಂದ 20 ಸಾವಿರ ರೂಪಾಯಿ ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದು  ತವರು ಮನೆಯಿಂದ 20 ಸಾವಿರ ರೂಪಾಯಿ ತಂದುಕೊಟ್ಟರು ಸಹ ಹೊಡೆ ಬಡೆ ಮಾಡುತ್ತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಿದ್ದು. ಅಲ್ಲದೆ ಶ್ರೀಮಂತರಾಯ ತಂದೆ ಈರಪ್ಪಾ ಮತ್ತು ಬಸಮ್ಮಾ ಗಂಡ ಬಸವರಾಜ ಸಾ:ಯಲಗುಂಡಾ ತಾ: ಬಸವಕಲ್ಯಾಣ  ಇವರ ಸಹಾಯದಿಂದ ದಿನಾಂಕ:24.08.2009 ರಂದು ಸವೀತಾ @ ಸಂಗಿತಾ ,  ಬಸವರಾಜ ತಂ. ನಿರಂಜನ ಸಾ: ದುತ್ತರಗಾವ ಇವಳೋಂದಿಗೆ ಮದುವೆಯಾಗಿದ್ದು ಸರಸ್ವತಿಗೆ ಆರೋಪಿ ಸಂಗಿತಾ , ಶ್ರೀಶೈಲ್ , ಬಸವರಾಜ, ಬಸಮ್ಮಾ, ಶ್ರೀಶೈಲ್ ತಂ. ಶ್ರೀಮಂತರಾಯ, ಬಸಮ್ಮಾ ಗಂಡ ಬಸವರಾಜ ಎಲ್ಲರೊ ತವರು ಮನೆಯಿಂದ ಇನ್ನು ಹಣ ತರುವಂತೆ ಪಿಡಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ವರದಕ್ಷಣೆ ಕಿರುಕುಳ ನೀಡಿದ ಬಗ್ಗೆ ಸಲ್ಲಿಸಿದ ಖಾಸಗಿ ದೂರಿನ ಅನ್ವಯ ಮಹಿಳಾ ಪೊಲೀಸ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

17 July 2013

GULBARGA DIST REPORTED CRIMES

ಮಳಖೇಡ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ :
ದಿನಾಂಕ 17/07/2013 ರಂದು ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಸಾ.ತೊಟ್ಟನಳ್ಳಿ ತಾ. ಸೇಡಂ ರವರ ಮರಳಿನ ಲಾರಿಯನ್ನು ತಹಸಿಲ್ದಾರ ರವರು ಜಪ್ತಿ ಮಾಡಿದ ಕಾರಣ ಯಾರೋ ಉದ್ದೇಶ ಪೂರ್ವಕ ಪೋನ್ ಮಾಡಿ ತನ್ನ ಮರಳಿನ ಲಾರಿಯನ್ನು ಜಪ್ತಿ ಮಾಡಿಸಿದ್ದಾರೆ ಎಂದು ಬೈಯುತ್ತಿದ್ದಾಗ 1) ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿ2) ಚಂದ್ರಕಾಂತ ತಂದೆ ಅಣ್ಣಾರಾವ ಮುದಕನಳ್ಳಿ ರವರು ಬಂದು ನೀನು ನಮಗೆ ಬೈಯುತ್ತಿದ್ದಿಯಾ ಎಂದು ಹೇಳುತ್ತಾ  ಅಕ್ರಮವಾಗಿ ತಡೆದು ಅವಾಚ್ಯವಾಗಿ ಬೈದು ಹೊಡೆ ಮಾಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ದಿನಾಂಕ 17/07/2013 ರಂದು ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಸಾ.ತೊಟ್ಟನಳ್ಳಿ ತಾ. ಸೇಡಂ ರವರ ಮರಳಿನ ಲಾರಿಯನ್ನು ತಹಸಿಲ್ದಾರ ರವರು ಜಪ್ತಿ ಮಾಡಿದ ಕಾರಣ ಗೌಡಪ್ಪನು ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿಯ ಅಣ್ಣನೇ ತಹಸಿಲ್ದಾರರಿಗೆ ಫೋನ್ ಮಾಡಿದ್ದು ಎಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವಾಗ ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿಯು ಗೌಡಪ್ಪನಿಗೆ ನಮ್ಮ ಅಣ್ಣನಿಗೆ ವಿನಾಃಕಾರಣ ಏಕೆ ಬಯ್ಯುತ್ತಿರುವೆ  ಎಂದು ಕೇಳಲು 1) ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಮತ್ತು 2) ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ರವರುಗಳು ವಿನಾ ಕಾರಣ ಅವಾಚ್ಯವಾಗಿ ಬೈದು ಹೊಡೆ ಮಾಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಪತ್ನಿಗೆ ಕಿರುಕುಳ ಪ್ರಕರಣ:

ದಿನಾಂಕ 15/07/2013  ರಂದು ಸುನಿತಾ ಗಂಡ ಮಹಾಂತೇಶ ತಳವಾರ  ರವರಿಗೆ ಅವಳ ಗಂಡನಾದ ಮಹಾಂತೇಶ ತಂದೆ ದೇವಪ್ಪ ತಳವಾರ ಸಹಶಿಕ್ಷಕ ಸಾ: ಸುಂಬಡ ತಾ: ಜೇವರ್ಗಿ ಹಾ.ವ. ಮಳಖೇಡ ಈತನು ಸುನಿತಾಳ  ಮಳಖೇಡದಲ್ಲಿರುವ  ಮನಗೆ ಬಂದು ಸುನಿತಾಳಿಗೆ ಅವಾಚ್ಯವಾಗಿ ಬೈದು ಕೂದುಲು ಹಿಡಿದು  ಎಳೆದಾಡಿ ಕೈಯಿಂದ ಹೊಡೆ ಬಡೆ ಮಾಡಿ ಹಾಗು ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದ ಬಗ್ಗೆ ಸಲ್ಲಿಸಿದ ದೂರು ಸರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.