POLICE BHAVAN KALABURAGI

POLICE BHAVAN KALABURAGI

04 July 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:03/07/2013 ರಂದು ರಾತ್ರಿ 11:00 ಗಂಟೆ ಸುಮಾರಿಗೆ ಊಟ ಮಾಡಿ ಮನೆಗೆ ಕೀಲಿ ಹಾಕಿ ನನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿಯೇ ಮಲಗಿಕೊಂಡಿದ್ದು ದಿನಾಂಕ:-03/07/2013 ರಂದು ಮುಂಜಾನೆ 6:30 ಗಂಟೆ ಸುಮಾರಿಗೆ ನನ್ನ ತಮ್ಮನು ಪೋನ ಮಾಡಿ ಮನೆಯ ಬಾಗಿಲು ತೆರೆದು ಬಟ್ಟೆಗಳು ಚೆಲ್ಲಾ ಪಿಲ್ಲಾಯಾಗಿ ಬಿದ್ದಿರುತ್ತವೆ ಅಂತಾ ತಿಳಿಸಿದ್ದರಿಂದ ನಾನು ಬಂದು ನೋಡಲು ಅಲಮಾರಿಯಲ್ಲಿಟ್ಟಿದ್ದ 10 ಗ್ರಾಮ ಬಂಗಾರದ ನೆಕಲೆಸ್ ಅಕಿ 14000/- ರೂಪಾಯಿಗಳು, ಬೆಳ್ಳಿಯ ಕಾಲು ಚೈನ ಅಕಿ 5000/-, ರೂ ಹಾಗೂ ನಗದು ಹಣ 400/-  ಹೀಗೆ ಒಟ್ಟು 19,4,00/- ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸಲಿಂ ತಂದೆ ಮಹಮ್ಮದ ಯಾಸೀನ ಸಾ:ಮಿಲತ್ತನಗರ ಇವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 329/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:02/07/2013 ರಂದು ರಾತ್ರಿ 10:00 ಗಂಟೆಯ ಸಮಯಕ್ಕೆ ನಾನು ನನ್ನ ಕೆಎ-39-9047 ನೇದ್ದು ಲಾರಿಯನ್ನು ಭಾರತ ಪೋರ್ಡ ಶೋ ರೂಮ್ ಎದುರುಗಡೆ ಇರುವ ಖುಲ್ಲಾ ಪ್ಲಾಟದಲ್ಲಿ ಲಾರಿ ನಿಲ್ಲಿಸಿ ಮನೆಗೆ ಹೋಗಿ ಮಲಗಿಕೊಂಡಿದ್ದು  ಬೆಳಿಗ್ಗೆ 6:00 ಗಂಟೆಗೆ ಬಂದು ನೋಡಲು ನಿಲ್ಲಿಸಿದ ಸ್ಥಳದಲ್ಲಿ ನನ್ನ ಲಾರಿ ಇರಲಿಲ್ಲ. ತಾವರಗೇರಾ ಗ್ರಾಮಕ್ಕೆ ಹೋದಾಗ ಅಲ್ಲಿ ಗೊಡಾನ್ ಹತ್ತಿರ ನನ್ನ ಲಾರಿಯನ್ನು ನಿಲ್ಲಿಸಿದ್ದು ಲಾರಿಯ 6 ಟೈಯರಗಳು ಡಿಸ್ಕ್ ಸಮೇತ ಅಂದಾಜು ಕಿಮ್ಮತ್ತು-45,000/-ರೂಪಾಯಿಗಳದ್ದು ಬಿಚ್ಚಿಕೊಂಡು ಕಳ್ಳತನ ಮಾಡಿರುತ್ತಾರೆ. ಅಂತಾ ಚಾಂದಖಾನ ತಂದೆ ಮೈಹಿಬೂಬ ಖಾನ್ ಸಾ|| ಕಪನೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:331/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಂಪೌಂಡ ಗೊಡೆ ಹಾನಿ ಮಾಡಿದ ಬಗ್ಗೆ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:03/07/2013 ರಂದು ಮುಂಜಾನೆ 10-00  ಗಂಟೆಯ ಸುಮಾರಿಗೆ ನಿಂಗಣ್ಣ ತಂದೆ ಶರಣಪ್ಪ ಹರಸೂರ ಇತನು ತನ್ನ ಸಂಗಡ ಇತರರನ್ನು ಕರೆದುಕೊಂಡು ಕೃಷಿ ವಿಶ್ವವಿಧ್ಯಾಲಯದ ಕೌಂಪೌಂಡ ಗೋಡೆಯನ್ನು ಯಾವುದೇ ಮಾಹಿತಿಯನ್ನು ನೀಡದೆ 40 ಮೀಟರ ಉದ್ದರ ಗೋಡೆಯನ್ನು ಒಡೆದು ಹಾನಿ ಮಾಡಿರುತ್ತಾರೆ ಈ ವಿಷಯದ ಬಗ್ಗೆ ಕೇಳಲು ಹೋದ ನನಗೆ ಮತ್ತು ಎಎಇ ರವರೊಂದಿಗೆ ಅಸಭ್ಯವಾಗಿ ವರ್ತಿಸಿ ಬೇದರಿಕೆ ಹಾಕಿರುತ್ತಾನೆ ಅಂತಾ ಶ್ರೀ ಧರ್ಮರಾಜ ಪ್ರೋಜೆಕ್ಟ್‌ ಡೈರೆಕ್ಟ ರ ಅಗ್ರೀ ಕಲ್ಚರ ರಿಸರ್ಚ ಸ್ಟೇಷನ ಆಳಂದ ರಸ್ತೆ ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:332/2013 ಕಲಂ 143, 147, 447, 427, 504, 506 ಸಂಗಡ 149 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ::

ಕಮಲಾಫೂರ  ಪೊಲೀಸ ಠಾಣೆ: ದಿನಾಂಕ01-07-2013 ರಂದು ಸಾಯಂಕಾಲ 5-30  ಗಂಟೆ ಸುಮಾರಿಗೆ ತಾಂಡಾದಲ್ಲಿದ್ದ  ಖುಲ್ಲಾ ಪ್ಲಾಟದಲ್ಲಿ ಮನೆ ಕಟ್ಟಲು ನನ್ನ ಅಣ್ಣ ಭೀಮರಾವ ಇವನು ತಯ್ಯಾರಿ ಮಾಡುತ್ತಿರುವಾಗ ನಾನು, ಮೊದಲು ಮುಂಬೈಯಲ್ಲಿದ್ದ ಜಾಗ ಹಾಗು ಇಲ್ಲಿದ್ದ ಆಸ್ತಿಯಲ್ಲಿ ಹಂಚಿಕೆಯಾದ ನಂತರ ಮನೆ ಕಟ್ಟು ಅಂತಾ ತಡೆಯಲು ಹೋದಾಗ ನಮ್ಮ ಅಣ್ಣ  ಭೀಮರಾವ, ಅತ್ತಿಗೆಯಾ, ಕಮಲಾಬಾಯಿ, ಆತನ ಮಗನಾದ ಸಂತೋಷ ಇವರು ನಮ್ಮ ಮನೆಯ ಮುಂದಿನ ರಸ್ತೆ ಮೇಲೆ ಬಂದು ನನ್ನ ಸಂಗಡ ಜಗಳ ತೆಗೆದು ಹೊಡೆದಿರುತ್ತಾರೆ ಅಂತಾ ಶ್ರೀ ಲಿಂಬು @ ಲಿಂಬಾಜಿ ತಂದೆ ಉಮ್ಲಾ ರಾಠೋಡ ಸಾ:ಸೊಂತ ಹರ್ಜಿ ತಾಂಡಾ ತಾಃಜಿಃ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:64/2013 ಕಲಂ, 341, 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

03 July 2013

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ:ಶ್ರೀಮತಿ ಸುನಂದಾ @ ಜಯಶ್ರೀ ಗಂಡ ಪ್ರಭುಶರಣ ವಯಾ:32 ವರ್ಷ ಸಾ: ಪಾವನಗಂಗಾ ಕಾಲೋನಿ ರಾಜಾಪೂರ ಶಹಾಬಾದ ರಿಂಗ ರೋಡ  ಗುಲಬರ್ಗಾರವರು  ಸುಮಾರು ಮೂರು ವರ್ಷಗಳ ಹಿಂದೆ ಸೂಗುರೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಭುಶರಣ ತಂದೆ ಶಿವಣ್ಣಾ ಪಾಣಿ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ ವರದಕ್ಷಿಣೆ ಅಂತಾ ಒಂದು ಲಕ್ಷ ರೂಪಾಯಿಗಳು ಹಾಗೂ 5 ತೋಲೆ ಬಂಗಾರ ಹಾಗೂ ಇತರೆ ಸಾಮಾನುಗಳು ಕೊಟ್ಟು ಕೊಡಲಾಗಿದೆ.ನನ್ನ ಗಂಡನವರು ಸೇಡಂ ತಾಲೂಕಿನ ಬೋರಕಪಳ್ಳಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ವರ್ಷದ ನಂತರ ಅತ್ತೆಯಾದ ಪಾರ್ವತಿ ,ಮಾವ ಶಿವಣ್ಣ, ನಾದಿನಿ ಅಕ್ಕಮ್ಮಾ @ ಕಾಮಾಕ್ಷಿ ಇವರೆಲ್ಲರೂ ಸೇರಿ ನನಗೆ ಮನೆಯಲ್ಲಿ ಯಾವುದೇ ಕೆಲಸ ಮಾಡಿದ್ದರೂ ನಿನಗೆ ಕೆಲಸ ಮಾಡಲು ಬರುವುದಿಲ್ಲ. ನನ್ನ ಮಗನಿಗೆ ನೀನು  ಸರಿಯಾದ ಜೋಡಿಯಲ್ಲ ಅದಕ್ಕೆ ಅವನು ಮನೆಗೆ ಬರುವದನ್ನು ಬಿಟ್ಟಿದ್ದಾನೆ,. ನೀನು ನಿನ್ನ ತವರು ಮನೆಗೆ ಹೋಗು ಅಂತಾ ಬೈಯುವದು, ಹೊಡೆಯುವದು ಮಾಡಿ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿದರು. ನನ್ನ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ ಅವರು ಕೂಡ ಬಂದು ನನ್ನ ಅತ್ತೆ ಮಾವನವರಿಗೆ ತಿಳುವಳಿಕೆ ಹೇಳಿದರೂ ಅವರು ಹಾಗೇ ಕಿರುಕುಳ ಕೊಡುವದು ಮುಂದುವರಿಸಿದ್ದರು, ಇನ್ನೂ ವರದಕ್ಷಣೆ ರೂಪದಲ್ಲಿ 1 ಲಕ್ಷ ರೂಪಾಯಿಗಳು ಎರಡು ತೊಲೆ ಬಂಗಾರ ತೆಗೆದುಕೊಂಡು ಬಾ ನಾವು ಕಟ್ಟುತ್ತಿರುವ ಮನೆಗೆ ಸಹಾಯವಾಗುತ್ತದೆ ಅಂತಾ ಹೇಳುತ್ತಿದ್ದರು, ದಿನಾಂಕ 28-06-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸ ಮಾಡುತ್ತಿರುವ ಊರಾದ ಬುರಗಪಲ್ಲಿ  ಶಾಲೆಗೆ ಹೋದಾಗ ನನ್ನ ಗಂಡ ಊರಿಗೆ ಹೋಗಲು ಬಸ್ ದಾರಿ ಕಾಯುತ್ತಿದ್ದನು. ಅವನು ನಮ್ಮನ್ನೇಲ್ಲ ನೋಡಿದ ಕೂಡಲೇ ಅವಾಚ್ಯವಾಗಿ ಬೈಯುತ್ತಿದ್ದರು, ನನ್ನ ತಂದೆ ತಾಯಿಗೆ ಯಾಕೇ ಬೈಯುತ್ತಿದ್ದೀ ಎಷ್ಟು ದಿವಸ ಅಂತಾ ಮನೆ ಬಿಟ್ಟು ಇರುತ್ತಿ ಅಂತಾ ಕೇಳಿದಾಗ ಹೊಡೆ ಬಡೆ ಮಾಡಿರುತ್ತಾನೆ. ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:40/2013 ಕಲಂ 498(ಎ),323,504,506 355 ಸಂಗಡ 34 ಐಪಿಸಿಮತ್ತು 3 & 4 ಡಿ.ಪಿ ಎಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ ಕವಿತಾ ಗಂಡ ಶಿವಕುಮಾರ ವಯಾ:20 ವರ್ಷ ಸಾ: ಸ್ಟೇಶನ ಏರಿಯಾ ತಾರಫೈಲ್ ಗುಲಬರ್ಗಾರವರು ,ನನ್ನ ಮದುವೆಯು ದಿನಾಂಕ:01-07-2009 ರಂದು ಶಿವಕುಮಾರ ತಂದೆ ಧರ್ಮರಾಜ ಕಾಂಬಳೆ ಸಾ; ದೌಂಡ ಇವರೊಂದಿಗೆ ನಾಲ್ಕು ಲಕ್ಷದವರೆಗೆ ಖರ್ಚು ಮಾಡಿ ನನ್ನ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ಕೆಲವು ತಿಂಗಳುಗಳ ನಂತರ ನನ್ನ ಪತಿ ಹಾಗೂ ಅತ್ತೆಯಾದ ಸೋನಾಬಾಯಿ ಗಂಡ ದರ್ಮರಾಜ ಕಾಂಬಳೆ ನಾದಿನಿಯಾದ ಭಾರತಿ ಗಂಡ ಸುನೀಲ ಹೋಳಕರ ಮತ್ತು ಇವಳ ಮಗನಾದ ಮಹೇಶ ತಂದೆ ಸುನೀಲ ಹೋಳಕರ ಇವರೆಲ್ಲರೂ ಒಂದಲ್ಲಾ ಒಂದು ರೀತಿಯ ತ್ರಾಸು ಕೊಡುತ್ತಾ ಬಂದಿರುತ್ತಾರೆ. ದಿನಾಂಕ:18-04-2013 ರಂದು ನಸುಕಿನ ವೇಳೆ 4-30 ಗಂಟೆಯ ಸುಮಾರಿಗೆ ತಾರಫೈಲದಲ್ಲಿರುವ ನನ್ನ ತಂದೆಯ ಮನೆಗೆ ನನ್ನ ಗಂಡನಾದ ಶಿವಕುಮಾರ ಹಾಗೂ ಆತನೊಂದಿಗೆ  ಇನ್ನೂ 2-3 ಜನ ಜನರೊಂದಿಗೆ ಬಂದು ನನಗೆ ಮನೆಯಿಂದ ಕರೆದು ಅವಾಚ್ಯ ಶಬ್ದಗಳಿಂದ ನೀನು ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂದರೆ ಇಲ್ಲೆ ಇದ್ದಿದಿಯಾ ಅಂತಾ ಹೊಡೆಯುತ್ತಿದ್ದಾಗ ನಮ್ಮ ಮನೆಯವರು ಎದ್ದು ಬಂದು ಜಗಳ ಬಿಡಿಸಲು ಪ್ರಯತ್ನಿಸುತ್ತಿರುವಾಗ ನನ್ನನ್ನು ಬೀಟು ಹೋಗಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 39/2013 ಕಲಂ, 498 (ಎ), 323, 504, 506, ಸಂಗಡ 34 ಐಪಿಸಿ ಮತ್ತು 3 ಮತ್ತು 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:02/07/2013 ರಂದು ಮಧ್ಯಾಹ್ನ 3:15 ಗಂಟೆಗೆ ನಿಂಬಾಳ ಐ.ಬಿ. ಹತ್ತಿರ ನಿಂಬಾಳ - ದುದ್ದನಿ ರೊಡಿನಲ್ಲಿ ನನ್ನ ತಮ್ಮನಾದ ಸೋಮನಾಥನು  ಮೋಟಾರ್ ಸೈಕಲ್ ನಂ: MH:13 X:2480 ನೇದ್ದರ ಮೇಲೆ ಶರಣಪ್ಪನಿಗೆ ಕೂಡಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಕಾರ ನಂ: KA:22 N:4470 ನೇದ್ದರ ಚಾಲಕನಾದ ರಾವುತಪ್ಪ ತಂದೆ ಅಣ್ಣಪ್ಪ ಮದರಿ ಇತನ್ನೂ ತನ್ನ ಕಾರನ್ನು ಅತೀವೇಗದಿಂದ ಅಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ನನ್ನ ತಮ್ಮನ ಮೊಟಾರ್ ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶರಣಪ್ಪನಿಗೆ ಸಾದಾ ಮತ್ತು ಭಾರಿ ರಕ್ತಗಾಯವಾಗಿರುತ್ತವೆ. ಅಂತಾ ದೆ. ಕಾರಣ ಸದರಿ ಕಾರಿನ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀಶೈಲ ತಂದೆ ಶ್ರೀಮಂತ ಹೊನ್ನಳ್ಳಿ ಸಾ:ನಿಂಬಾಳ  ತಾ: ಆಳಂದ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:56/2013 ಕಲಂ:279,337,338,304(ಎ) ಐ.ಪಿ.ಸಿ ಸಂಗಡ187 ಐ.ಎಮ್.ವ್ಹಿ.ಆಕ್ಟ್.ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

ವಿದ್ಯಾರ್ಥಿಯ ಮೇಲೆ ಹಲ್ಲೆ:
ರೋಜಾ ಪೊಲೀಸ್ ಠಾಣೆ:ನಾನು ಗೋಲ್ಡರೋಜ ಶಾಲೆ ಖಮರ ಕಾಲೋನಿಯಲ್ಲಿ 7ನೇ ತರಗತಿಯ (ಎ) ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದೆನೆ.  ಕೆಲವು ವರ್ಷಗಳ ಹಿಂದೆ ಮನೆಯ ಚತ್ತ ಮೇಲಿಂದ ಕೆಳಗಡೆ ಬಿದ್ದು ತಲೆಗೆ ಭಾರಿಗಾಯಹೊಂದಿ ಸೋಲಾಪೂರದಲ್ಲಿ ತಲೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗುಣಮುಖನಾಗಿ ಶಾಲೆಗೆ ಸೇರಿಕೆ ಆಗುವ ವೇಳೆಯಲ್ಲಿ ನನಗೆ ಆದ ಘಟನೆಯ ಬಗ್ಗೆ ಶಾಲಾ ಶಿಕ್ಷಕರಿಗೆ ಹಾಗೂ ಶಾಲೆಯ ಆಡಳಿತ ಮಂಡಳಿಯವರಿಗೆ ಮಾಹಿತಿ ನೀಡಿಲಾಗಿತ್ತು. ದಿನಾಂಕ:02/07/2013 ರಂದು ಮಧ್ಯಾಹ್ನ ಹಿಂದಿ ವಿಷಯದ ಹೋಮವರ್ಕ ಮಾಡಿರುವದಿಲ್ಲಾ ಬಾಕಿ ಉಳಿದಿದ್ದು ಅದಕ್ಕಾಗಿ ಕ್ಲಾಸಮೆಂಟ ಹುಡುಗ ಮಾನಿಟರ ಆಗಿರುವ ಸಮೀರ ಹುಡುಗನ ಹತ್ತಿರ ಹಿಂದಿ ನೋಟ ಪುಸ್ತಕ ಕೊಡು ನಾನು ಕಂಪ್ಲೀಟ ಮಾಡಿ ಕೊಡುತ್ತೇನೆ ಅಂತಾ ಹೇಳಿ ಅವನಿಂದ ನೋಟ ಪುಸ್ತಕ ತೆಗೆದುಕೊಂಡಿದ್ದು ಅಷ್ಟರಲ್ಲಿಯೇ ನಮ್ಮ ಶಾಲೆಯ ರಿಜ್ವಾನ ಈತನು ಮೊದಲು ನಾನು ನೋಟಬುಕ್ ಬರೆದುಕೊಡುತ್ತೇನೆ ಅಂತಾ ನನಗೆ ತಕರಾರು ಮಾಡುತ್ತಿದ್ದನು ನಾನು ಅವನು ಒಬ್ಬರಿಗೊಬ್ಬರು ನೋಟಬುಕ್ ಬರೆಯುವ ವಿಷಯದಲ್ಲಿ ಮಾತನಾಡುತ್ತಿರುವ ಶಬ್ದ ಕೇಳಿ ಗಣಿತ ವಿಷಯದ ಸರ್ ಆಗಿರುವ ಇಮ್ರಾನ ಮತ್ತು ಸಮಾಜ ವಿಷಯದ ಹೇಳುವ ಟೀಚರ ಇವರೊಂದಿಗೆ ಬಂದು ನನಗೆ ಮೇರೆಕ್ಲಾಸ್ ಮೇ ಬಹುತ ಶಾಣಾ ಹೋಗಯಾ ಕ್ಯಾರೆ ತೆರೆಕೂ ತಮೀಜ ನಹಿ ಹೈ ಕ್ಯಾರೆ ಅಂತಾ ನನಗೆ ಬೈದಿದ್ದು ಅದಕ್ಕೆ ನಾನು ಏನು ಮಾತನಾಡದೇ ನಿಂತಾಗ ಮೇರೆಕೂ ಉಪ್ಪರಸೇ ಆರ್ಡರ್ಸ ಹೈ ತುಮಾರೆ ಜೈಸೆ ಗಲಾಟೆ ಕರನೆವಾಲೆ ಬಚ್ಚೊಕೂ ಮಾರನೆಕಾ ಇಜಾಜತ್ ಹೈ ಅಂತಾ ಹೇಳಿ ತನ್ನ ಕೈಯಲ್ಲಿ ತಂದಿದ್ದ ಸಣ್ಣ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದಿದ್ದು ಅವರು ಹೊಡೆದ ಏಟಿಗೆ ನಾನು ಒಮ್ಮೆಲೆ ಮೂರ್ಚೆ ತಪ್ಪಿ ಬಿದ್ದಿರುತ್ತೆನೆ. ನಂತರ ನನಗೆ ಏನಾಗಿದೆ ಗೊತ್ತಿಲ್ಲಾ ಸಾಯಂಕಾಲ 7:00 ಗಂಟೆಗೆ ಆಸ್ಪತ್ರೆಯಲ್ಲಿ ನನ್ನ ತಂದೆ ತಾಯಿಯವರು ನನ್ನ ಅಣ್ಣನವರು ಆಸ್ಪತ್ರೆಯಲ್ಲಿ ತಂದಿರುವದು ನನಗೆ ಪ್ರಜ್ಞೆ ಬಂದಾಗ ತಿಳಿದಿರುತ್ತದೆ ಅಂತಾ ಶೇಖಅಮೀರ ತಂದೆ ಶೇಖಶಬ್ಬೀರ ಅಹ್ಮದ ವಯ:13 ವಿದ್ಯಾರ್ಥಿ ಗೋಲ್ಡ ರೋಜ ಶಾಲೆ ಖಮರ ಕಾಲೋನಿ ಸಾ: ಮಹ್ಮದ ರಫಿಕ್ ಚೌಕ್ ಹತ್ತಿರ ಖಮರ ಕಾಲೋನಿ ಗುಲಬರ್ಗಾ ಇತನು ನನಗೆ ಹೊಡೆದಿರುವ ಇಮ್ರಾನ ಸರ್ ಹಾಗೂ ಗೋಲ್ಡ ರೋಜ ಶಾಲೆಯ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:38/2013 ಕಲಂ.324,504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.