POLICE BHAVAN KALABURAGI

POLICE BHAVAN KALABURAGI

03 July 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:02/07/2013 ರಂದು ಮಧ್ಯಾಹ್ನ 3:15 ಗಂಟೆಗೆ ನಿಂಬಾಳ ಐ.ಬಿ. ಹತ್ತಿರ ನಿಂಬಾಳ - ದುದ್ದನಿ ರೊಡಿನಲ್ಲಿ ನನ್ನ ತಮ್ಮನಾದ ಸೋಮನಾಥನು  ಮೋಟಾರ್ ಸೈಕಲ್ ನಂ: MH:13 X:2480 ನೇದ್ದರ ಮೇಲೆ ಶರಣಪ್ಪನಿಗೆ ಕೂಡಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಕಾರ ನಂ: KA:22 N:4470 ನೇದ್ದರ ಚಾಲಕನಾದ ರಾವುತಪ್ಪ ತಂದೆ ಅಣ್ಣಪ್ಪ ಮದರಿ ಇತನ್ನೂ ತನ್ನ ಕಾರನ್ನು ಅತೀವೇಗದಿಂದ ಅಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ನನ್ನ ತಮ್ಮನ ಮೊಟಾರ್ ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶರಣಪ್ಪನಿಗೆ ಸಾದಾ ಮತ್ತು ಭಾರಿ ರಕ್ತಗಾಯವಾಗಿರುತ್ತವೆ. ಅಂತಾ ದೆ. ಕಾರಣ ಸದರಿ ಕಾರಿನ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀಶೈಲ ತಂದೆ ಶ್ರೀಮಂತ ಹೊನ್ನಳ್ಳಿ ಸಾ:ನಿಂಬಾಳ  ತಾ: ಆಳಂದ ರವರು  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:56/2013 ಕಲಂ:279,337,338,304(ಎ) ಐ.ಪಿ.ಸಿ ಸಂಗಡ187 ಐ.ಎಮ್.ವ್ಹಿ.ಆಕ್ಟ್.ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

ವಿದ್ಯಾರ್ಥಿಯ ಮೇಲೆ ಹಲ್ಲೆ:
ರೋಜಾ ಪೊಲೀಸ್ ಠಾಣೆ:ನಾನು ಗೋಲ್ಡರೋಜ ಶಾಲೆ ಖಮರ ಕಾಲೋನಿಯಲ್ಲಿ 7ನೇ ತರಗತಿಯ (ಎ) ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದೆನೆ.  ಕೆಲವು ವರ್ಷಗಳ ಹಿಂದೆ ಮನೆಯ ಚತ್ತ ಮೇಲಿಂದ ಕೆಳಗಡೆ ಬಿದ್ದು ತಲೆಗೆ ಭಾರಿಗಾಯಹೊಂದಿ ಸೋಲಾಪೂರದಲ್ಲಿ ತಲೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗುಣಮುಖನಾಗಿ ಶಾಲೆಗೆ ಸೇರಿಕೆ ಆಗುವ ವೇಳೆಯಲ್ಲಿ ನನಗೆ ಆದ ಘಟನೆಯ ಬಗ್ಗೆ ಶಾಲಾ ಶಿಕ್ಷಕರಿಗೆ ಹಾಗೂ ಶಾಲೆಯ ಆಡಳಿತ ಮಂಡಳಿಯವರಿಗೆ ಮಾಹಿತಿ ನೀಡಿಲಾಗಿತ್ತು. ದಿನಾಂಕ:02/07/2013 ರಂದು ಮಧ್ಯಾಹ್ನ ಹಿಂದಿ ವಿಷಯದ ಹೋಮವರ್ಕ ಮಾಡಿರುವದಿಲ್ಲಾ ಬಾಕಿ ಉಳಿದಿದ್ದು ಅದಕ್ಕಾಗಿ ಕ್ಲಾಸಮೆಂಟ ಹುಡುಗ ಮಾನಿಟರ ಆಗಿರುವ ಸಮೀರ ಹುಡುಗನ ಹತ್ತಿರ ಹಿಂದಿ ನೋಟ ಪುಸ್ತಕ ಕೊಡು ನಾನು ಕಂಪ್ಲೀಟ ಮಾಡಿ ಕೊಡುತ್ತೇನೆ ಅಂತಾ ಹೇಳಿ ಅವನಿಂದ ನೋಟ ಪುಸ್ತಕ ತೆಗೆದುಕೊಂಡಿದ್ದು ಅಷ್ಟರಲ್ಲಿಯೇ ನಮ್ಮ ಶಾಲೆಯ ರಿಜ್ವಾನ ಈತನು ಮೊದಲು ನಾನು ನೋಟಬುಕ್ ಬರೆದುಕೊಡುತ್ತೇನೆ ಅಂತಾ ನನಗೆ ತಕರಾರು ಮಾಡುತ್ತಿದ್ದನು ನಾನು ಅವನು ಒಬ್ಬರಿಗೊಬ್ಬರು ನೋಟಬುಕ್ ಬರೆಯುವ ವಿಷಯದಲ್ಲಿ ಮಾತನಾಡುತ್ತಿರುವ ಶಬ್ದ ಕೇಳಿ ಗಣಿತ ವಿಷಯದ ಸರ್ ಆಗಿರುವ ಇಮ್ರಾನ ಮತ್ತು ಸಮಾಜ ವಿಷಯದ ಹೇಳುವ ಟೀಚರ ಇವರೊಂದಿಗೆ ಬಂದು ನನಗೆ ಮೇರೆಕ್ಲಾಸ್ ಮೇ ಬಹುತ ಶಾಣಾ ಹೋಗಯಾ ಕ್ಯಾರೆ ತೆರೆಕೂ ತಮೀಜ ನಹಿ ಹೈ ಕ್ಯಾರೆ ಅಂತಾ ನನಗೆ ಬೈದಿದ್ದು ಅದಕ್ಕೆ ನಾನು ಏನು ಮಾತನಾಡದೇ ನಿಂತಾಗ ಮೇರೆಕೂ ಉಪ್ಪರಸೇ ಆರ್ಡರ್ಸ ಹೈ ತುಮಾರೆ ಜೈಸೆ ಗಲಾಟೆ ಕರನೆವಾಲೆ ಬಚ್ಚೊಕೂ ಮಾರನೆಕಾ ಇಜಾಜತ್ ಹೈ ಅಂತಾ ಹೇಳಿ ತನ್ನ ಕೈಯಲ್ಲಿ ತಂದಿದ್ದ ಸಣ್ಣ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದಿದ್ದು ಅವರು ಹೊಡೆದ ಏಟಿಗೆ ನಾನು ಒಮ್ಮೆಲೆ ಮೂರ್ಚೆ ತಪ್ಪಿ ಬಿದ್ದಿರುತ್ತೆನೆ. ನಂತರ ನನಗೆ ಏನಾಗಿದೆ ಗೊತ್ತಿಲ್ಲಾ ಸಾಯಂಕಾಲ 7:00 ಗಂಟೆಗೆ ಆಸ್ಪತ್ರೆಯಲ್ಲಿ ನನ್ನ ತಂದೆ ತಾಯಿಯವರು ನನ್ನ ಅಣ್ಣನವರು ಆಸ್ಪತ್ರೆಯಲ್ಲಿ ತಂದಿರುವದು ನನಗೆ ಪ್ರಜ್ಞೆ ಬಂದಾಗ ತಿಳಿದಿರುತ್ತದೆ ಅಂತಾ ಶೇಖಅಮೀರ ತಂದೆ ಶೇಖಶಬ್ಬೀರ ಅಹ್ಮದ ವಯ:13 ವಿದ್ಯಾರ್ಥಿ ಗೋಲ್ಡ ರೋಜ ಶಾಲೆ ಖಮರ ಕಾಲೋನಿ ಸಾ: ಮಹ್ಮದ ರಫಿಕ್ ಚೌಕ್ ಹತ್ತಿರ ಖಮರ ಕಾಲೋನಿ ಗುಲಬರ್ಗಾ ಇತನು ನನಗೆ ಹೊಡೆದಿರುವ ಇಮ್ರಾನ ಸರ್ ಹಾಗೂ ಗೋಲ್ಡ ರೋಜ ಶಾಲೆಯ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:38/2013 ಕಲಂ.324,504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

02 July 2013

GULBARGA DISTRICT REPORTED CRIMES

ಯು.ಡಿ.ಆರ್ ಪ್ರಕರಣ
ಗ್ರಾಮೀಣ ಪೊಲೀಸ ಠಾಣೆ:ಆಕಾಶ ತಂದೆ ಶಾಂತಕುಮಾರ ಖಾಬಾ ವಯಾ|| 18 ವರ್ಷ ವಿದ್ಯಾರ್ಥಿ ಸಾ|| ಚೆಂಗಟಾ ತಾ||ಚಿಂಚೊಳಿ ಜಿ||ಗುಲಬರ್ಗಾ ಇತನು ತನ್ನ ಅಜ್ಜ ಅಜ್ಜಿ ಮನೆಯಾದ ತಾಜಸುಪ್ತಾನಪೂರದಲ್ಲಿ  ದಿನಾಂಕ: 27-06-2013 ರಂದು ಮಧ್ಯಾಹ್ನ ಚಹಾ ಮಾಡುವ ಕುರಿತು ಸ್ಟೋ ಹತ್ತಿಸುವಾಗ ಆಕಸ್ಮಿಕವಾಗಿ ಸ್ಟೋ ಬ್ಲಾಸ್ಟ ಆಗಿ  ಅವನು ಧರಿಸಿರುವ ಬಟ್ಟೆಗಳಿಗೆ ಬೆಂಕಿ ಹತ್ತಿ ಮೈ ಸುಟ್ಟಿದ್ದರಿಂದ ದಿನಾಂಕ:01-07-2013 ರಂದು ಸಾಯಂಕಾಲ;5-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ನಾಗವೇಣಿ ಗಂಡ ಶಾಂತಕುಮಾರ ಸಾ|| ಚೆಂಗಟಾ ರವರು ಹೇಳೀಕೆ ಮೇಲಿಂದ ಠಾಣೆ ಯು.ಡಿ.ಆರ್. ನಂ:18/2013 ಕಲಂ, 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಯು.ಡಿ.ಆರ್ ಪ್ರಕರಣ
ಗ್ರಾಮೀಣ ಪೊಲೀಸ ಠಾಣ:ದಿನಾಂಕ:30-06-2013 ರಿಂದ ದಿನಾಂಕ: 01-07-2013 ರಂದು ಮಧ್ಯಾಹ್ನ ದ ಅವಧಿಯಲ್ಲಿ ಮೃತ ಕಾಶಿಭಾಯಿ ಗಂಟ ಮಲ್ಲಪ್ಪಾ ಕವರಿ ವಯಾ|| 65 ವರ್ಷ ಇವಳು ಮಾನಸಿಕ ಅಸ್ವಸ್ಥೆಯಿದ್ದು ಬಸವಣಪ್ಪಾ ಇವರ ತೋಟದ ಭಾವಿಯಲ್ಲಿ ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ಕೆಸರಿನಲ್ಲಿ ಉಸಿರುಗಟ್ಟಿ ಮೃತ ಪಟ್ಟಿರುತ್ತಾಳೆ ಅಂತಾ ಶ್ರಿಮತಿ ಶರಣಮ್ಮಾ ಗಂಡ ಮಹಾಂತಣ್ಣ ಸಾ|| ಶರಣಸಿರಸಗಿ ಗುಲಬರ್ಗಾ ರವರು ಹೇಳೀಕೆ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಅರ್. ನಂ: 19/2013 ಕಲಂ, 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.


01 July 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ: 30/06/2013 ರಂದು ರಾತ್ರಿ 11:30 ಗಂಟೆಯಿಂದ ಬೆಳಗಿನ ಜಾವ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಕೋಣೆಯ ಕೀಲಿ ಮುರಿದು ಒಳಗೆ ಹೋಗಿ ಮತ್ತು ಕಿರಾಣಿ ಅಂಗಡಿಯ ಒಳ ಮಗ್ಗಲಿನ ಬಾಗಿಲ ಕೀಲಿ ಮುರಿದು ಬಾಗಿಲ ತೆರೆದು ಬಂಗಾರದ ಅಭರಣಗಳು  ಬೇಳ್ಳಿಯ ಸಾಮಾನುಗಳು ಹಾಗೂ ನಗದು ಹಣ ಒಟ್ಟು 3,14,000/- ಕೀಮ್ಮತ್ತಿನವು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ. ಚನ್ನಯ್ಯ ತಂದೆ ಬಸಯ್ಯ ಹೀರೆಮಠ  ಸಾ:ಮದಗುಣಕಿ ತಾ:ಆಳಂದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2013 ಕಲಂ: 457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಶಹಬಾದ ನಗರ ಪೊಲೀಸ್ ಠಾಣೆ:ದಿನಾಂಕ:01/07/2013 ರಂದು ಎಸ್‌‌.ಎಸ್‌‌.ಎಲ್‌.ಸಿ ಪರೀಕ್ಷೆ ಪತ್ರಿಕೆ ಮೌಲ್ಯ ಮಾಪನ ಮಾಡಲು ಹೋದಾಗ ಬೆಳಗ್ಗೆ ಶಹಾಬಾದದ ನಮ್ಮ ಮನೆಯ ಪಕ್ಕದವರಾದ ಜಿಮ್ಮೀ ಕೇಬಲದ ಮಾಲಿಕರು ಪೋನ ಮಾಡಿ ನಿಮ್ಮ ಮನೆಯ ಬಾಗಿಲ ಕೀಲಿ ಮುರಿದಿರುತ್ತದೆ ಅಂತಾ ತಿಳಿಸಿದಾಗ ನಾನು ಬಂದು ನೋಡಲು ಮನೆಯ ಬಾಗಿಲು ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ಸಾಮಾನುಗಳು ಹಾಗೂ ನಗದು ಹಣ 30,000-00 ರೂಪಾಯಿಗಳು ಹೀಗೆ ಒಟ್ಟು 3,97,000/-ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರು ದಿ:30/06/2013 ಮತ್ತು ದಿ:01/07/2013 ರಂದು ಮಧ್ಯರಾತ್ರಿ ವೇಳೆಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಬಾಬು ತಂದೆ ನಬಿಸಾಬ ಚಿತ್ತಾಪೂರಕರ ಉ:ಫ್ರೌಡಶಾಲೆ ಶಿಕ್ಷಕ ರಾವೂರ ಸಾ:ಮಜೀದ ಚೌಕ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 130/2013 ಕಲಂ:457,380 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.