POLICE BHAVAN KALABURAGI

POLICE BHAVAN KALABURAGI

01 July 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ: 30/06/2013 ರಂದು ರಾತ್ರಿ 11:30 ಗಂಟೆಯಿಂದ ಬೆಳಗಿನ ಜಾವ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಕೋಣೆಯ ಕೀಲಿ ಮುರಿದು ಒಳಗೆ ಹೋಗಿ ಮತ್ತು ಕಿರಾಣಿ ಅಂಗಡಿಯ ಒಳ ಮಗ್ಗಲಿನ ಬಾಗಿಲ ಕೀಲಿ ಮುರಿದು ಬಾಗಿಲ ತೆರೆದು ಬಂಗಾರದ ಅಭರಣಗಳು  ಬೇಳ್ಳಿಯ ಸಾಮಾನುಗಳು ಹಾಗೂ ನಗದು ಹಣ ಒಟ್ಟು 3,14,000/- ಕೀಮ್ಮತ್ತಿನವು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ. ಚನ್ನಯ್ಯ ತಂದೆ ಬಸಯ್ಯ ಹೀರೆಮಠ  ಸಾ:ಮದಗುಣಕಿ ತಾ:ಆಳಂದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2013 ಕಲಂ: 457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಶಹಬಾದ ನಗರ ಪೊಲೀಸ್ ಠಾಣೆ:ದಿನಾಂಕ:01/07/2013 ರಂದು ಎಸ್‌‌.ಎಸ್‌‌.ಎಲ್‌.ಸಿ ಪರೀಕ್ಷೆ ಪತ್ರಿಕೆ ಮೌಲ್ಯ ಮಾಪನ ಮಾಡಲು ಹೋದಾಗ ಬೆಳಗ್ಗೆ ಶಹಾಬಾದದ ನಮ್ಮ ಮನೆಯ ಪಕ್ಕದವರಾದ ಜಿಮ್ಮೀ ಕೇಬಲದ ಮಾಲಿಕರು ಪೋನ ಮಾಡಿ ನಿಮ್ಮ ಮನೆಯ ಬಾಗಿಲ ಕೀಲಿ ಮುರಿದಿರುತ್ತದೆ ಅಂತಾ ತಿಳಿಸಿದಾಗ ನಾನು ಬಂದು ನೋಡಲು ಮನೆಯ ಬಾಗಿಲು ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ಸಾಮಾನುಗಳು ಹಾಗೂ ನಗದು ಹಣ 30,000-00 ರೂಪಾಯಿಗಳು ಹೀಗೆ ಒಟ್ಟು 3,97,000/-ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರು ದಿ:30/06/2013 ಮತ್ತು ದಿ:01/07/2013 ರಂದು ಮಧ್ಯರಾತ್ರಿ ವೇಳೆಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಬಾಬು ತಂದೆ ನಬಿಸಾಬ ಚಿತ್ತಾಪೂರಕರ ಉ:ಫ್ರೌಡಶಾಲೆ ಶಿಕ್ಷಕ ರಾವೂರ ಸಾ:ಮಜೀದ ಚೌಕ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 130/2013 ಕಲಂ:457,380 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

29 June 2013

GULBARGA DISTRICT REPORTED CRIME

ಅಟೋ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:07/06/2013 ರಂದು ಕೆಎ-32 ಎ-6272 ನೇದ್ದು ಅಟೋ ಗುಲಬರ್ಗಾ ಬಸ್ ನಿಲ್ದಾಣದ ಮುಂದುಗಡೆ ಇರುವ ಆಟೋ ಸ್ಟ್ಯಾಂಡದಲ್ಲಿ ಪಾಳಿ ಪ್ರಕಾರ ಆಟೋವನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ದಾಣದ ಒಳಗಡೆ ಇರುವ ಶೌಚಾಲಯಕ್ಕೆ ಹೋಗಿದ್ದು, ಮರಳಿ ಬಂದು ನೋಡುವಷ್ಟರಲ್ಲಿ ಅಂದರೆ 5-10  ನಿಮಿಷದಲ್ಲಿ  ಆಟೋ ಕಾಣಿಸಲಿಲ್ಲ, ಬಸ್ ಸ್ಟ್ಯಾಂಡ ಹತ್ತಿರ ಹುಡಕಾಡಿ ಸ್ಟ್ಯಾಂಡದಲ್ಲಿರುವ ಆಟೋ ಚಾಲಕರಿಗೆ ವಿಚಾರಿಸಿದ್ದರು ಆಟೋ ಸಿಗಲಿಲ್ಲ. 7:30 ಪಿಎಮ್  ಸುಮಾರಿಗೆ ಆಟೋ ಕಳೆದ ಬಗ್ಗೆ ಆಟೋದ ಮಾಲಿಕರಾದ ವಸಂತಕುಮಾರ ಇವರಿಗೆ  ಪೋನ ಮಾಡಿ ಮಾಹಿತಿ ತಿಳಿಸಿ ಅಂದಿನಿಂದ ಇಲ್ಲಿಯವರೆಗೆ ನಾನು ಮತ್ತು ಆಟೋದ ಮಾಲಿಕ ವಸಂತಕುಮಾರ ಇಬ್ಬರು ಕೂಡಿಕೊಂಡು ನಮ್ಮ ಪರಿಚಯಸ್ಥರಲ್ಲಿ, ಬಸ್ ನಿಲ್ದಾಣದ ಆಟೋ ಚಾಲಕರಲ್ಲಿ ಎಲ್ಲಾಕಡೆ ಹೂಡಕಾಡಿದರು ಆಟೋ ಸಿಕ್ಕಿರುವದಿಲ್ಲ . ಆಟೋರಿಕ್ಷಾ ನಂ; ಕೆಎ-32 ಎ-6272 ಇಂಜಿನ ನಂ: AEMBNL50313  ಚೆಸ್ಸಿ ನಂ: MD2AA24ZZNWL31818 ಒಟ್ಟು ಅ.ಕಿ 42,000/- ಬೆಲೆಬಾಳುವ  ಆಟೋ ರಿಕ್ಷಾವನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ.ಕಳುವಾದ ಆಟೋರಿಕ್ಷಾವನ್ನು ಪತ್ತೆ ಮಾಡಿ ಕೋಡಬೇಕು ಅಂತಾ ಸುನೀಲಕುಮಾರ ತಂದೆ ಭಗವಾನ ಸಾಳೊಂಕಿ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT

ಸಂಚು ರೂಪಿಸಿ ಸುಲಿಗೆ ಮಾಡಿದ ಸುಲಿಗೆಕೊರರ ಬಂಧನ, 2.5 ಲಕ್ಷ್ಯ ರೂ. ಮೌಲ್ಯದ ಆಭರಣ, ನಗದು ಹಣ, ಮೊಟಾರ ಸೈಕಲ ಹಾಗೂ ಇತರೆ ವಸ್ತುಗಳು ವಶ.

ಮಾನ್ಯ ಶ್ರೀ ಎನ್. ಸತೀಶಕುಮಾರ ಐಪಿಎಸ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಕಾಶಿನಾಥ ತಳಕೇರಿ ಅಪರ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ (ಬಿ) ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ:24-06-2013 ರಂದು ರಾತ್ರಿ ಗುಲಬರ್ಗಾ ನಗರದ ಧನ್ವಂತ್ರಿ ಆಸ್ಪತ್ರೆಯ ಎದುರುಗಡೆ ರಿಂಗ್ ರೋಡಿನ ಮೇಲೆ ಶ್ರೀಕಾಂತ ತಂದೆ ಅಶೋಕ ಚವ್ಹಾಣ ಹಾಗೂ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರು ತಮ್ಮ ಮೊಟಾರ ಸೈಕಲ ಮೇಲೆ ಬಂದು ಮೂತ್ರ ವಿಸರ್ಜನೆಗೆಂದು ನಿಂತಾಗ ಯಾರೋ ಇಬ್ಬರೂ ದುರ್ಷ್ಕಮಿಗಳು ಚಾಕು ತೊರಿಸಿ ಹೆದರಿಸಿ ಅವರ ಹತ್ತಿರ ಇದ್ದ ಬಂಗಾರದ ಆಭರಣಗಳು, ನಗದು ಹಣ ಹಾಗೂ ಇತರೆ ಸಾಮಾನುಗಳನ್ನು ಜಭರದಸ್ತಿಯಿಂದ ದೊಚಿಕೊಂಡು ಹೋಗಿದ್ದರ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಗುನ್ನೆ ನಂ:247/2013 ಕಲಂ,392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ಪತ್ತೆಗಾಗಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ಗುಲಬರ್ಗಾರವರ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ತನಿಖೆ ವಹಿಸಿಕೊಂಡ ಸಿಪಿಐ ಎಂ.ಬಿ.ನಗರ ವೃತ್ತ ರವರು ತನಿಖೆ ವೇಳೆ ಪಿರ್ಯಾದಿ ಶ್ರೀಕಾಂತ ನೀಡಿದ ಹೇಳಿಕೆಗೂ ಹಾಗೂ ಸುಲಿಗೆಗೆ ಒಳಗಾದ ನೊಂದ ಶ್ರೀ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರ ಹೇಳಿಕೆಗೆ ಬಹಳಷ್ಟು ಅಂಶಗಳು ವ್ಯಕ್ತಿರಿಕ್ತವಾಗಿ ಕಂಡುಬಂದಿದ್ದು ಮತ್ತು ಇಬ್ಬರ ಹೇಳಿಕೆಗಳು ಒಂದಕ್ಕೊಂದು ಹೊಂದಾಣಿಕೆ ಆಗುತ್ತಿರಲಿಲ್ಲ. ಶ್ರೀಕಾಂತ ಇತನಿಗೆ ದಾಳಿ ಮಾಡಿ ಸುಲಿಗೆ ಮಾಡಿದಾಗ ಆತನಿಗೆ ಯಾವುದೇ ಗಾಯ ಆಗದೇ ಮತ್ತು ಆತನಿಂದ ಯಾವುದೇ ಬಂಗಾರದ ಆಭರಣಗಳು ಕಳ್ಳತನವಾಗಿರಲಿಲ್ಲ. ಆದರೆ ಇನ್ನೊಬ್ಬ ಆನಂದ ಚವ್ಹಾಣ ಈತನ ಕೈಗೆ ಚಾಕುವಿನಿಂದ ಗಾಯವಾಗಿದ್ದು ಹಾಗೂ ಆತನಿಂದ ಸುಮಾರು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲಾಗಿತ್ತು. ಶ್ರೀಕಾಂತನ ಮೇಲೆ ಅನುಮಾನಗೊಂಡು ದಿನಾಂಕ:28-06-2013 ರಂದು ವಿಚಾರಣೆ ಮಾಡಲಾಗಿ ತನಗೆ ವಿಪರಿತ ಸಾಲವಾಗಿದ್ದರಿಂದ ಸಾಲ ತೀರಿಸುವ ಉದ್ದೇಶದಿಂದ ತಾನು ಮತ್ತು ತನ್ನ ಗೆಳೆಯರಾದ ಅಭಿಷೇಕ ಪಾಟೀಲ, ಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಸಂಗಡ ಕರೆದುಕೊಂಡು ಸಂಚು ರೂಪಿಸಿ ಹೇಗಾದರೂ ಮಾಡಿ ಆನಂದನ ಹತ್ತಿರ ಇರುವ ಬಂಗಾರ ಹಾಗೂ ನಗದು ಹಣ ಕಿತ್ತುಕೊಳ್ಳಬೇಕು ಅಂತಾ ತಿರ್ಮಾನಿಸಿ ಶ್ರೀಕಾಂತ ಹಾಗು ಅಭಿಷೇಕ ಪಾಟಿಲ ಇಬ್ಬರೂ ಕೂಡಿಕೊಂಡು ಆನಂದ ಚವ್ಹಾಣ ಇತನಿಗೆ ತಮ್ಮ ಮೊಟಾರ ಸೈಕಲಗಳ ಮೇಲೆ ಕೃಷ್ಟಲ ಪ್ಯಾಲೇಸಗೆ ಊಟಕ್ಕೆ ಕರೆದುಕೊಂಡು ಬಂದು ಸರಾಯಿ ಕುಡಿಸಿದರು. ಅಭಿಷೇಕ್ ಪಾಟೀಲ ಈತನು ಕೇವಲ ಸರಾಯಿ ಕುಡಿದು ಊಟ ಮಾಡದೇ ಎದ್ದು ಹೋಗಿ ಪಿಡಿಎ ಕಾಲೇಜನ ಹತ್ತಿರ ಕೆಲಸ ಇದೆ ನಿಮ್ಮ ಊಟ ಆದ ಮೇಲೆ ಅಲ್ಲಿಗೆ ಬನ್ನಿರಿ ಅಂತಾ ತಿಳಿಸಿ ಹೋರಟು ಹೋಗಿದ್ದನು. ಅಭಿಷೇಕ ಪಾಟೀಲ ತನ್ನ ಸ್ನೇಹಿತರಾದ ಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಕರೆದುಕೊಂಡು ರಿಂಗ್ ರೋಡಿನ ಓಜಾ ಕಾಲೋನಿ ಹತ್ತಿರ ಇರುವ ಇಂಜನಿಯರ್ಸ ಕ್ಲಬ್ ಬಳಿ ಕತ್ತಲೆಯ ಸ್ಥಳದಲ್ಲಿ ಕುಳ್ಳಿರಿಸಿ ತಾನು ಸ್ವಲ್ಪ ದೂರದಲ್ಲಿ ಕಾಣದಂತೆ ನಿಂತುಕೊಂಡಿದ್ದನು. ಶ್ರೀಕಾಂತ ಮತ್ತು ಆನಂದ ಊಟ ಆದ ಮೇಲೆ ಶ್ರೀಕಾಂತನು ಅಭಿಷೇಕನಿಗೆ ಪೋನ್ ಮಾಡಿ ಆತನನ್ನು ಕರೆಯಲು ಎಲ್ಲಿಗೆ ಬರಬೇಕು ಅಂತಾ ಕೇಳಿದಾಗ ಆತನು ರಿಂಗ್ ರೋಡ ಕಡೆಯಿಂದ ಪಿಡಿಎ ಕಾಲೇಜು ಕಡೆಗೆ ಬರಲು ತಿಳಿಸಿದನು. ಶ್ರೀಕಾಂತ ಮತ್ತು ಆನಂದ ರಿಂಗ್ ರೋಡ್ ಮಾರ್ಗವಾಗಿ ಶ್ರೀಕಾಂತನ ಬೈಕ ಮೇಲೆ ಹೊರಟರು. ಬೈಕ ಚಲಾಯಿಸುತ್ತಿದ್ದ ಶ್ರೀಕಾಂತನು ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಬೈಕನು ನಿಲ್ಲಿಸಿದನು. ಕೃಷ್ಣ ಮತ್ತು ರವಿ ಇವರು ಇಬ್ಬರನ್ನು ಹಿಂದಿನಿಂದ ದಾಳಿ ಮಾಡಿ ಕೆಳಗೆ ಬೀಳಿಸಿ ಅದರಲ್ಲಿ ಶ್ರೀಕಾಂತನು ಆರೋಪಿತರಾದ ಕೃಷ್ಣ ಮತ್ತು ರವಿಯೊಂದಿಗೆ ಶಾಮೀಲು ಇದ್ದು ಬೇಕಂತಲೇ ನಟಿಸಿ ಆನಂದನಿಂದ ಒಟ್ಟು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲು ಒಳಸಂಚಿನಿಂದ ಸಹಕರಿಸಿದ್ದನು. ಈ ವೇಳೆ ಆನಂದನಿಗೆ ತನ್ನ ಬಲಗೈಗೆ ಚಾಕುವಿನಿಂದ ದಾಳಿ ಮಾಡಿದಾಗ ಗಾಯವುಂಟಾಗಿರುತ್ತದೆ. ಶ್ರೀಕಾಂತ ತಂದೆ ಅಶೋಕ ಚವ್ಹಾಣ, ವಃ23 ವರ್ಷ, ಸಾ|| ಅಯ್ಯರವಾಡಿ ಗುಲಬರ್ಗಾ, ಅಭೀಷೇಕ ತಂದೆ ಜಗದೀಶ ಪಾಟೀಲ, ವಯಾ||23 ವರ್ಷ, ಸಾ|| ಗಂಜ ಕಾಲೋನಿ ಗುಲಬರ್ಗಾ, ಕೃಷ್ಣ ತಂದೆ ದೊಂಡಿಭಾ ಜಾಧವ, ವಯಾ||24  ವರ್ಷ ಸಾ|| ಅಯ್ಯರವಾಡಿ ಗುಲಬರ್ಗಾ, ರವಿ ತಂದೆ ಅರ್ಜುನ ಕಂಡೇಕರ್, ವಯಾ||42 ಅಯ್ಯರವಾಡಿ ಗುಲಬರ್ಗಾರವರಿಂದ ಸುಲಿಗೆ ಮಾಡಲಾದ ಬ್ರಾಸಲೈಟ್ 25 ಗ್ರಾಂ, ಚೈನ್ 20, ಗ್ರಾಂ, ಎರಡು ಉಂಗುರುಗಳು 10 ಗ್ರಾಂ, ಕೃತ್ಯಕ್ಕೆ ಬಳಸಿದ ಎರಡು ಬೈಕ್, ಎರಡು ಚಾಕು, ಒಂದು ದಸ್ತಿ ಹೀಗೆ ಒಟ್ಟು ಸುಮಾರು 2.5 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚಾರಣೆಯಲ್ಲಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ರವರ ನೇತೃತ್ವದಲ್ಲಿ  ಶ್ರೀ. ಪ್ರದೀಪ ಬೀಸೇ ಪಿ.ಎಸ್.ಐ, ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ, ಶ್ರೀ,ತಿಮ್ಮಣ್ಣ ಚಾಮನೂರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ,ಶ್ರಿ ಪರುಶುರಾಮ ಮನಗೂಳಿ ಪಿ.ಎಸ್.ಐ ಫರಹತಾಬಾದ ಹಾಗೂ ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ, ಶಂಕರ, ಅಣ್ಣಪ್ಪ, ಮನೋಹರ, ರಪಿಕ್, ಅಶೋಕ, ಆನಂದ, ಮಶಾಕ, ಅರ್ಜುನ, ವೀರಶೇಟ್ಟಿ, ಹಣಮಂತ, ಮಲ್ಲಿನಾಥ, ವೇದರತ್ನಂ, ತಾರಾಸಿಂಗ್ ರವರು ಭಾಗವಹಿಸಿದ್ದರು.