POLICE BHAVAN KALABURAGI

POLICE BHAVAN KALABURAGI

06 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ:
ಚಿತ್ತಾಪೂರ ಪೊಲೀಸ್ ಠಾಣೆ:ದಿನಾಂಕ.05/04/2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ  ಚಿತ್ತಾಪೂರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಗೆ ಕರ್ತವ್ಯದಲ್ಲಿ ನಿರತನಾಗಿದ್ದಾಗ ಸಾಯಂಕಾಲ 4-00 ಗಂಟೆ ಸುಮಾರಿಗೆ ಚಿತ್ತಾಪುರ ಪಟ್ಟಣದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಿದ್ದರೂ ಸಹಿತ ಚಿತ್ತಾಪೂರ ಮತಕ್ಷೇತ್ರದ ಕೆ.ಜೆ.ಪಿ ಪಕ್ಷದ ಅಭ್ಯರ್ಥಿಯಾದ  ಶ್ರೀ ಸಿ.ಗುರುನಾಥ ರವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ ಅಂಟಿಸಿ ಬಹಿರಂಗ ಸಭೆ ನಡೆಸಿರುತ್ತಾರೆ,ಅಂತಾ ಚುನಾವಣೆ ಕರ್ತವ್ಯದ ಪ್ಲ್ಯಾಯಿಂಗ ಸ್ಕ್ವಾಡ್ ಅಧಿಕಾರಿಯವರಾದ ಶ್ರೀ ಫೀರೋಜ್. ಟಿ ಉಪ ನಿಬಂಧಕರು  ಗುಲಬರ್ಗಾ ಪ್ಲ್ಯಾಯಿಂಗ ಸ್ಕ್ವಾಡ್ ಚಿತ್ತಾಪುರ  ರವರು ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:37/2013 ಕಲಂ, 3 ಕರ್ನಾಟಕ ಓಪನ್ ಪ್ಲೇಸ್ ಪ್ರಿವೆನ್ಸನ್ ಆಪ್ ಡಿಸಫಿಗರಮೆಂಟ್ ಆಕ್ಟ್ 1981  ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ, ಲಕ್ಕಮ್ಮ ಗಂಡ ಚಂದಪ್ಪಾ ಕರಗರ ಸಾ|| ನವನಿಹಾಳ ತಾ||ಜಿ|| ಗುಲಬರ್ಗಾ ರವರು ನಮ್ಮ ಮನೆಯಲ್ಲಿ ಸಾಕಿರುವ ನಾಯಿಯು ಬಂಡಪ್ಪಾ ತಂದೆ ಬೀರಪ್ಪಾ ರವರ ಮನೆಯ ಮುಂದಿನ ಅಂಗಳದಲ್ಲಿ ಹೋಗಿ ಹೊಲಸು ಮಾಡುತ್ತಿದ್ದಾಗ ನಿಂಗಮ್ಮ ಇವಳು ನಾಯಿಗೆ ಕಲ್ಲಿನಿಂದ ಹೊಡೆದು ಓಡಿಸುತ್ತಿದ್ದಾಗ ನಾಯಿಗೆ ಯಾಕೆ ಹೊಡೆದಿದ್ದೀರಿ ಅಂತಾ ಕೇಳಿದ್ದಕ್ಕೆ ಬಂಡಪ್ಪಾ, ಕಲ್ಲಪ್ಪಾ, ಸಂಗಪ್ಪಾ, ರಾಯಪ್ಪಾ, ಉಷಾಭಾಯಿ, ನಿಂಗಮ್ಮ ರವರೆಲ್ಲರೂ ಕೂಡಿಕೊಂಡು ತಲವಾರ, ಕೊಯಿತಾ, ಬಡಿಗೆ, ಕಲ್ಲಿನಿಂದ ಹೊಡೆದಿರುತ್ತಾರೆ, ಜಗಳ ಬಿಡಿಸಲು ಬಂದ ನನ್ನ ಮಗ ಪ್ರಭಾಕರ ತನು ಜಗಳ ಬಿಡಿಸಲು ಬಂದಾಗ ಆತನಿಗೂ ಸಹ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಲಕ್ಕಮ್ಮ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 28/2013 ಕಲಂ, 143, 147, 148, 341, 323, 324, 326, 354, 504, 506 (1) ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ,ಬಂಡಪ್ಪಾ ತಂದೆ ಬೀರಪ್ಪಾ ನಾಗೂರ ಸಾ|| ನವನಿಹಾಳ ತಾ||ಜಿ|| ಗುಲಬರ್ಗಾ ರವರು, ಲಕ್ಕಮ್ಮ ಇವರು  ಸಾಕಿದ ನಾಯಿ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಬಂದು ಹೊಲಸು ಮಾಡುತ್ತಿದ್ದಾಗ ನನ್ನ  ತಾಯಿಯಾದ  ನಿಂಗಮ್ಮ ಇವಳು ನಾಯಿಗೆ ಕಲ್ಲಿನಿಂದ ಹೊಡೆದು ಓಡಿಸುತ್ತಿದ್ದಾಗ ಲಕ್ಕಮ್ಮ ಇವಳು ಬಂದು ತನ್ನ ನಾಯಿಗೆ ಯಾಕೆ ಹೊಡೆದಿದ್ದೀರಿ ಅಂತಾ ಕೇಳುತ್ತಿದ್ದಾಗ. ಆಕೆಯ ಮಗಳಾದ ಪ್ರಭಾಕರ ತನು ಬಂದವನೇ ನಮ್ಮೊಂದಿಗೆ ಜಗಳ ತೆಗೆದು ತನ್ನಲ್ಲಿರುವ ಕೊಯಿತಾದಿಂದ ನನ್ನ ಕೈಗಳಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಹಾಗೂ ಎಲ್ಲೆ ಬಿದ್ದಿರುವ ಕಲ್ಲಿನಿಂದ  ಎದೆಯ ಮೇಲೆ ಒಗೆದು ಗುಪ್ತಗಾಯ ಪಡಿಸಿರುತ್ತಾನೆ, ನನ್ನ ತಾಯಿಗೆ ಲಕ್ಕಮ್ಮ ಇವಳು ಅವಮಾನ ಮಾಡಿ ನೂಕಿಸಿಕೊಟ್ಟಿರುತ್ತಾರೆ. ಕೃಷ್ಣಮ್ಮ , ಮತ್ತು ರೇವಣಸಿದ್ದಪ್ಪಾ ರವರು ಸಹ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 29/2013 ಕಲಂ, 341, 323, 324, 354, 506 (1) ಸಂಗಡ 34 ಐಪಿಸಿ  ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

05 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ,  ಸಂಗನಬಸಪ್ಪಾ ತಂದೆ  ವಿರುಪಾಕ್ಷಪ್ಪಾ  ಮೂಸಗೇರಿ  ವಯ: 37  ವರ್ಷ ಉ: ಕೆ.ಎಸ್.ಆರ್.ಟಿ.ಸಿ. ಬಸ್ಸ. ಚಾಲಕ ಬ್ಯಾಡ್ಜ ನಂ. 3512  ಹರಿಹರ ಡಿಪೋ. ಜಾ||  ನೇಕಾರ ಸಾ:  ಶಿರವಾಳ ತಾ|| ನರಗುಂದ ಜಿ|| ಗದಗ ರವರು ನನಗೆ ಮತ್ತು ನಿರ್ವಾಹಕ  ನೀರಂಜನ ತಂದೆ ಸಂಭಾಜಿ  ರವರಿಗೆ  ದಿನಾಂಕ:03-04-2013 ರಂದು ಬೆಳಿಗ್ಗೆ 6-00 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಬಸ್ಸ. ನಂ. ಕೆಎ-7 ಎಫ್- 1299 ನೇದ್ದರ ಮೇಲೆ ಹರಿಹರದಿಂದ ಗುಲಬರ್ಗಾಕ್ಕೆ ಹೋಗಿ ಬರುವ  ಕರ್ತವ್ಯಕ್ಕೆ ನೇಮಿಸಿದ್ದು, ದಿನಾಂಕ:04-04-2013 ರಂದು  ರಾತ್ರಿ 9-30 ಗಂಟೆ ಸುಮಾರಿಗೆ ನಂದಿಕೂರ ತಾಂಡಾದ  ಹತ್ತಿರ ಗುಲಬರ್ಗಾ ಕಡೆಯಿಂದ ಕೆಎ-31/4154 ನೇದ್ದರ ಲಾರಿ  ಚಾಲಕನು ತನ್ನ  ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಬಸ್ಸಿನ  ಮುಂದಿನ ಭಾಗವನ್ನು  ಪಾಸಾದ ತಕ್ಷಣ ಹಿಂಬದಿಯ ಟಾಯರ ಹತ್ತಿರ ಬಲಗಡೆ  ಅಫಘಾತ ಪಡಿಸಿದ್ದು ಘಟನೆಯಲ್ಲಿ ಬಲಗಡೆಯ ಸಿಟೀನ ಕಿಟಕೀಯ ಕಡೆಗೆ ಕೂಳಿತ ಪ್ರಯಾಣಿಕ  ಮಹ್ಮದ ತಬರೇಜ ಸಾ|| ಶಹಾಪೂರ ಅಂತ್ತಾ ಇದ್ದಿದ್ದು ಅವನ ಬಲಗೈಗೆ  ಲಾರಿ ರಬಸದಿಂದ ಡಿಕ್ಕಿಹೊಡೆದ ಪ್ರಯುಕ್ತ  ಬಲಗೈ ಪೂರ್ತಿಯಾಗಿ ಕಟ್ಟಾಗಿರುತ್ತದೆ. ಲಾರಿ ಚಾಲಕನು ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ, ಪ್ರಕಾಶ ತಂದೆ ಶರಣಪ್ಪಾ ಪರಿಟ್‌ ಸಾ:ತಿಳುಗೂಳ ರವರು ನಾನು ಮತ್ತು ನನ್ನ ತಮ್ಮನಾದ ರವಿಂದ್ರನಾಥ ಕಂಡೆಕ್ಟರ ದಿನಾಂಕ:04-04-2013 ರಂದು ಬೆಳಿಗ್ಗೆ 6:30 ಗಂಟೆ ಸುಮಾರಿಗೆ ನಮ್ಮೂರಿನಿಂದ ಮೊಟಾರ ಸೈಕಲ ನಂ: ಕೆಎ-37.ಇ-5855 ನೇದ್ದರ ಮೇಲೆ ನಾನು ಜೇವರ್ಗಿಗೆ ನನ್ನ ಕೆಲಸದ ಪ್ರಯುಕ್ತ ಮತ್ತು ನನ್ನ ತಮ್ಮ ರವಿಂದ್ರನಾಥ ಇತನು ಗುಲಬರ್ಗಾಕ್ಕೆ ತನ್ನ ಕರ್ತವ್ಯಕ್ಕೆ ಬರುತ್ತಿದ್ದು, ಮೋಟರ ಸೈಕಲ್‌ ಮೇಲೆ ಹೊನ್ನಕಿರಣಗಿ ಕ್ರಾಸಿಗೆ ವರೆಗೆ  ಬಂದು ನಾನು ಜೇವರ್ಗಿಗೆ ಹೊಗುವ ಸಲುವಾಗಿ ಇಳಿದು ನಿಂತಿದ್ದು, ರವಿಂದ್ರನಾಥ ಇತನು ಗುಲಬರ್ಗಾಕ್ಕೆ ಹೋಗುತ್ತಿದ್ದು, ಮೋಟರ ಸೈಕಲ್‌ ಮೇಲೆ ಗುಲಬರ್ಗಾ ಕಡೆಗೆ ಹೊಗುತ್ತಿದ್ದಾಗ ಸ್ಖ್ರಾಪಿಯೋ ವಾಹನ ಚಾಲಕನು ತನ್ನ  ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಮ್ಮನ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಆತನಿಗೆ ತಲೆಯ ಹಿಂಬಾಗಕ್ಕೆ ಬಡಿದು ಭಾರಿ ಭಾರಿಗಾಯವಾಗಿರುತ್ತದೆ. ಸ್ಕಾರ್ಫಿಯೋ  ನಂಬರ  ನೋಡಲು ಕೆಎ-32. ಎಂ-5958 ಅಂತಾ ಇದ್ದು,  ಚಾಲಕನ ಹೆಸರು ಮಲ್ಲಿಕಾರ್ಜುನ ಕುಂಬಾರ ಅಂತ್ತಾ ತಿಳಿದಿರುತ್ತದೆ. ವಾಹನವು ಸ್ಥಳದಲ್ಲಿಯೇ  ಬಿಟ್ಟು  ಓಡಿ ಹೋಗಿರುತ್ತಾನೆ . ಸದ್ಯ ನನ್ನ ತಮ್ಮನು ಮಾತಾಡುವ ಸ್ಥಿತಿಯಲ್ಲಿ ಇರುವದಿಲ್ಲ ಅಂತಾ ಪ್ರಕಾಶ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀ ಪೆದ್ದಾರೆಡ್ಡಿ ಅನೀಲಕುಮಾರ ತಂದೆ ಪಿ.ಸಾಂಬರೆಡ್ಡಿ ಅಸಿಸ್ಟೆಂಟ್ ಮ್ಯಾನೇಜರ ಪಿಂಕರಟನ್ ಕಾರ್ಪೊರೇಶನ್ ರಿಸ್ಕ್ ಮ್ಯಾನೇಜಮೆಂಟ್ ದಿ ಮಿಲೇನಿಯಾ ಲೆವೆಲ್ ಒನ್ ಟಾವರ ಮರ್ಫಿರೋಡ್ ಹುಲಸೂರ ಬೆಂಗಳೂರು ಸಾ: ಹುಲಿಮಾವು ಬನ್ನೇರುಘಟ್ಟ ರೋಡ ಬೆಂಗಳೂರು ರವರು  ನಾನು ಈ ಕಂಪನಿಯ ಅಧಿಕೃತ ಪವಾರ  ಆಫ ಅಟಾರ್ನಿ ಹೊಂದ್ದಿರುವ ಅಧಿಕಾರಿಯಾಗಿದ್ದು ನಮ್ಮ ಕಂಪನಿ ಎಮ/ಎಸ್ MICO BOSCH LIMITED ಕಂಪನಿಯ ಪರವಾಗಿ ನನಗೆ ನಮ್ಮ ಕಂಪನಿಯ ಉತ್ಪಾದಿಸುವಂತಹ ಅಟೋಮೊಬಾಯಿಲ್ ಬಿಡಿ ಭಾಗಗಳನ್ನು ದೇಶವ್ಯಾಪ್ತಿ  ಗ್ರಾಹಕರಿಗೆ ಮಾರಾಟ ಮಾಡುವ ಕುರಿತು ಅಂಗಡಿಯ ಡೀಲರ್ ಗಳಿಗೆ ಮಾರಾಟ ಮಾಡಿದ್ದು, ನಮ್ಮ ಕಂಪನಿಯ ಹೆಸರಿನಲ್ಲಿ ಬೇರೆ ಕಂಪನಿಯ ವಸ್ತುಗಳು ನಮ್ಮ  ಕಂಪನಿಯ ಹೆಸರು ಮುದ್ರಿಸಿ ಡ್ಯೂಪ್ಲಿಕೇಟ್ ಮಾರಾಟ ಮಾಡುತ್ತಿರುವ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ಸ್ಪೇರಪಾರ್ಟ ಅಟೋಮೊಬಾಯಿಲ್ ಗಳಿಗೆ ಚೆಕ್ ಮಾಡುವ ಕುರಿತು ನನಗೆ ನೇಮಿಸಿದ್ದರಿಂದ ನಾನು ಕಂಪನಿಯ ಪರವಾಗಿ ಗುಲಬರ್ಗಾ ನಗರದಲ್ಲಿ ಇರುವ ಕೆಲವು ಅಟೋಮೊಬಾಯಿಲ ಅಂಗಡಿಗಳಿಗೆ ಹೋಗಿ ಪರಿಶೀಲನೆ ಮಾಡಿತ್ತಿರುವಾಗ ಮೆಹಕ ಅಟೋಮೊಬಾಯಿಲ್ಸ್ ಲಾಹೋಟಿ ಕಾಂಪ್ಲೆಕ್ಸ್ ಹುಮನಾಬಾದ ರೋಡ ಗುಲಬರ್ಗಾದಲ್ಲಿ ದಿನಾಂಕ: 04/04/2013 ರಂದು ಮಧ್ಯಾಹ್ನ 3-00 ಗಂಟೆ  ಚೆಕ್ಕ ಮಾಡಲು ಅಮೀರ ಅಲಿ ತಂದೆ ಬರಕತ ಅಲಿ ವಯ: 38 ವರ್ಷ, ಉ: ಆಟೊಮೊಬಾಯಿಲ್ಸ್ ಸಾ: ಮನೆ ನಂ. 880/154 ಅಫೀಪಾ ಎಸ್.ಟಿ.ಡಿ ಎದುರುಗಡೆ ಅಬೂಬಕರ ಮಜ್ಜೀದ ಹತ್ತಿರ ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ಈತನು ನಮ್ಮ ಕಂಪನಿಯ  MICO BOSCH LIMITED ಕಂಪನಿಯ ಹೆಸರಿನ GLOW PLUGES ಗಳನ್ನು ಅದೇ ರೀತಿಯಾಗಿ ಡೂಬ್ಲಿಕೇಟ್ ಇರುವ ನಮ್ಮ ಕಂಪನಿಯ ಹೆಸರು ಇರುವ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಮ್ಮ ಕಂಪನಿಗೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದು ಕಂಡು ಬಂದಿರುತ್ತದೆ. ಸದರಿ ವಸ್ತುಗಳ ಬಗ್ಗೆ ಯಾವುದೇ ರೀತಿಯ ರಶೀದಿ ಮತ್ತು ಬಿಲ್ ಗಳು ಇರುವದಿಲ್ಲಾ ನಮ್ಮ ಕಂಪನಿಯ ಹೆಸರನ್ನು ದುರ್ಬಳಕೆಯಿಂದ ಡೂಪ್ಲಿಕೇಟ ಆಗಿ ಉಪಯೋಗಿಸಿ ಕಂಪನಿಗೆ ಮತ್ತು ಗ್ರಾಹರಕರಿಗೆ ಮೋಸ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 21/2013 ಕಲಂ, 63, 65, ಕಾಪಿ ರೈಟ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀ ಪೆದ್ದಾರೆಡ್ಡಿ ಅನೀಲಕುಮಾರ ತಂದೆ ಪಿ.ಸಾಂಬರೆಡ್ಡಿ ಅಸಿಸ್ಟೆಂಟ್ ಮ್ಯಾನೇಜರ ಪಿಂಕರಟನ್ ಕಾರ್ಪೊರೇಶನ್ ರಿಸ್ಕ್ ಮ್ಯಾನೇಜಮೆಂಟ್ ದಿ ಮಿಲೇನಿಯಾ ಲೆವೆಲ್ ಒನ್ ಟಾವರ ಮರ್ಫಿರೋಡ್ ಹುಲಸೂರ ಬೆಂಗಳೂರು ಸಾ: ಹುಲಿಮಾವು ಬನ್ನೇರುಘಟ್ಟ ರೋಡ ಬೆಂಗಳೂರು ರವರು  ನಾನು ಈ ಕಂಪನಿಯ ಅಧಿಕೃತ ಪವಾರ  ಆಫ ಅಟಾರ್ನಿ ಹೊಂದ್ದಿರುವ ಅಧಿಕಾರಿಯಾಗಿದ್ದು ನಮ್ಮ ಕಂಪನಿ ಎಮ/ಎಸ್ MICO BOSCH LIMITED ಕಂಪನಿಯ ಪರವಾಗಿ ನನಗೆ ನಮ್ಮ ಕಂಪನಿಯ ಉತ್ಪಾದಿಸುವಂತಹ ಅಟೋಮೊಬಾಯಿಲ್ ಬಿಡಿ ಭಾಗಗಳನ್ನು ದೇಶವ್ಯಾಪ್ತಿ  ಗ್ರಾಹಕರಿಗೆ ಮಾರಾಟ ಮಾಡುವ ಕುರಿತು ಅಂಗಡಿಯ ಡೀಲರ್ ಗಳಿಗೆ ಮಾರಾಟ ಮಾಡಿದ್ದು ನಮ್ಮ ಕಂಪನಿಯ ಹೆಸರಿನಲ್ಲಿ ಬೇರೆ ಕಂಪನಿಯ ವಸ್ತುಗಳು ನಮ್ಮ  ಕಂಪನಿಯ ಹೆಸರು ಮುದ್ರಿಸಿ ಡ್ಯೂಪ್ಲಿಕೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳು ಸ್ಪೇರಪಾರ್ಟ ಅಟೋಮೊಬಾಯಿಲ್ ಗಳಿಗೆ ಚೆಕ್ ಮಾಡುವ ಕುರಿತು ನೇಮಿಸಿದ್ದರಿಂದ ನಾನು ಕಂಪನಿಯ ಪರವಾಗಿ ದಿನಾಂಕ 04/04/2013 ರಂದು ಗುಲಬರ್ಗಾ ಕ್ಕೆ ಬಂದು ಗುಲಬರ್ಗಾ ನಗರದಲ್ಲಿ ಇರುವ ಕೆಲವು ಅಟೋಮೊಬಾಯಿಲ ಅಂಗಡಿಗಳಿಗೆ ಹೋಗಿ ಪರಿಶೀಲನೆ ಮಾಡಲು ಡೀಸೆಂಟ ಡಿಸೆಲ್ ಇಂಜಿನಿಯರ್ಸ್ ಬಾಜೆ ಕಾಂಪ್ಲೆಕ್ಸ್ ಹುಮನಾಬಾದ ರಿಂಗ್  ರೋಡ ಗುಲಬರ್ಗಾ ದಲ್ಲಿ ಚೆಕ್ಕ ಮಾಡಲು ಅಂಗಡಿ ಮಾಲಿಕನಾದ ಮಹ್ಮದ ಬುರಾನುದ್ದಿನ ಖಾನ ತಂದೆ ಹಸನೊದ್ದಿನ ಖಾನ ವಯ: 66 ವರ್ಷ, ಉ: ಪಂಪ ಮೆಕಾನಿಕ್ ಸಾ: ಮನೆ ನಂ. 11-1041/112ಬಿ ನೀಯರ ಮೌಲಾಅಲಿಕಟ್ಟಾ ಜಿಲಾನಾಬಾದ ಗುಲಬರ್ಗಾ ಈತನು ನಮ್ಮ ಕಂಪನಿಯ  MICO BOSCH LIMITED ಕಂಪನಿಯ ಹೆಸರಿನ GLOW PLUGES ಗಳನ್ನು ಅದೇ ತೆರನಾಗಿ ಡೂಬ್ಲಿಕೇಟ್ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಮ್ಮ ಕಂಪನಿಗೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದು ಕಂಡು ಬಂದಿರುತ್ತವೆ. ಸದರಿ ವಸ್ತುಗಳ ಬಗ್ಗೆ ಯಾವುದೇ ರೀತಿಯ ರಶೀದಿ ಮತ್ತು ಬಿಲ್ ಗಳು ಪರಿಶೀಲಿಸಿದ್ದು ಬಿಲ್ ಗಳು ಇರುವದಿಲ್ಲಾ. ನಮ್ಮ ಕಂಪನಿಯ ಹೆಸರನ್ನು ದುರ್ಬಳಕೆಯಿಂದ ಡೂಪ್ಲಿಕೇಟ ಆಗಿ ಉಪಯೋಗಿಸಿ ಕಂಪನಿಗೆ ಮತ್ತು ಗ್ರಾಹರಕರಿಗೆ ಮತ್ತು ಸರಕಾರಕ್ಕೂ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ  ನಂ: 22/2013 ಕಲಂ, 63, 65, ಕಾಪಿ ರೈಟ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

04 April 2013

GULBARGA DISTRICT REPORTED CRIME


ಸೋಸೆ ಮತ್ತು ಅತ್ತೆ ಸಾವು:
ಶಹಾಬಾದ ನಗರ ಠಾಣೆ: ಶ್ರೀ ಮಹೇಬೂಬಖಾನ ತಂದೆ ಅಬ್ದುಲ ಅನ್ನಾನ ವ:52 ಸಾ:ಖುರ್ಷಿದ ಮೊಹಲ್ಲಾ ಮಜೀದ ಚೌಕ ಶಹಾಬಾದ ರವರು ದಿನಾಂಕ:02/04/2013 ರಂದು ರಾತ್ರಿ 9.00 ಗಂಟೆ ಸುಮಾರಿಗೆ ನನ್ನ ಮಗಳು ತನ್ನ ಗಂಡನ ಮನೆಯಲ್ಲಿ ಅಡಿಗೆ ಮಾಡಿ ತನ್ನ ಗಂಡ ಅಬ್ದುಲ ರಹೇಮಾನ, ಮಾವ ಸೈಯದ, ಮೈದುನರಾದ ಅಬ್ದುಲ್ ಮಜೀದ, ರಸೀದ ರವರಿಗೆ ಊಟಕ್ಕೆ ಕರೆದಾಗ, ನನ್ನ ಅಳಿಯ ಅಬ್ದುಲ ರಹೇಮಾನ ಇತನು ಅಡುಗೆ ಮಾಡುವದರ ಬಗ್ಗೆ ಅವಾಚ್ಯವಾಗಿ ಬೈದು, ಊಟ ಮಾಡದೇ ಎಲ್ಲರೂ ಮನೆಯ ಹೊರಗಡೆ ನಿಂತು ಹೀಯಾಳಿಸಿ ಮಾತನಾಡಿ,  ನಾವು ಇಷ್ಟು ಬೈದರು ನಿನಗೆ ನಾಚಿಕೆಯಿಲ್ಲ ಸುಟ್ಟುಕೊಂಡು ಸಾಯಿ ಅಂತಾ ಅಂದ್ದಿದಕ್ಕೆ ನನ್ನ ಮಗಳು ರಾತ್ರಿ 9.30 ಗಂಟೆ ಸುಮಾರಿಗೆ ಸದರಿಯವರೆಲ್ಲರೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರಿಂದ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚಿರಾಡುತ್ತಿದ್ದಾಗ ಅವಳ ಅತ್ತೆ ಅಹಮದಬಿ ಇವಳು  ಮೊಮ್ಮಗಳಾದ ಬೀಬಿ ಫಾತಿಮಾ ಇವಳನ್ನು ಎತ್ತಿಕೊಂಡು ಬಂದು ಬೆಂಕಿ ಆರಿಸಲು ಹೋದಾಗ ಅಹಮದಬಿಗೆ ಎರಡು ಕಾಲಿಗೆ ಟೊಂಕಕ್ಕೆ ಎಡಗೈ ಸುಟ್ಟಿದ್ದು ಬೀಬಿ ಫಾತಿಮಾಳಿಗೆ ಟೊಂಕದಿಂದ ಪಾದದವರೆಗೆ ಸುಟ್ಟಿರುತ್ತದೆ. ನನ್ನ ಮಗಳಾದ ಆಶಾ ಬೇಗಂ ಇವಳಿಗೆ ಮೈ ಪೂರ್ತಿ ಸುಟ್ಟಿರುತ್ತದೆ. ಮೂರು ಜನರಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಶಹಾಬಾದಕ್ಕೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ 108 ಅಂಬುಲೇನ್ಸನಲ್ಲಿ ಹಾಕಿಕೊಂಡು ಬಂದು ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ನನ್ನ ಮಗಳು ಆಶಾಬೇಗಂ ಇವಳು  ದಿನಾಂಕ:03/04/2013 ರಂದು 3.00 ಎಎಂ ಕ್ಕೆ ಮತ್ತು ಆಕೆಯ ಅತ್ತೆ ಅಮದಬಿ ಇವಳು ಬೆಳಗ್ಗೆ 6.15 ಗಂಟೆಗೆ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2013  ಕಲಂ: 498 (ಎ), 306, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.