POLICE BHAVAN KALABURAGI

POLICE BHAVAN KALABURAGI

27 March 2013

GULBARGA DISTRICT REPORTED CRIMES


ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ,
ಒಟ್ಟು 1,50,240 ರೂಪಾಯಿಗಳ ಮೌಲ್ಯದ ಮಧ್ಯ ವಶ
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:26/03/2013 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಮಧ್ಯ ಮಾರಾಟ ಆಗುತ್ತಿರುವ ಬಗ್ಗೆ ಭಾತ್ಜಿ ಬಂದ ಮೇರೆಗೆ ಶ್ರಿ, ಎ.ಡಿ ಬಸಣ್ಣವರ್ ಡಿ.ಎಸ್.ಪಿ 'ಬಿ' ಉಪ-ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ಮತ್ತು ಅವರ ಸಿಬ್ಬಂದಿ ಜನರಾದ ಮಾರುತಿ ಎ.ಎಸ್.ಐ, ನಿಜಲಿಂಗಪ್ಪ, ಅಶೋಕ ರವರು ಬಹುಮನಿ ಹೊಟೇಲದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಶ್ರೀನಿವಾಸ ತಂದೆ ನಾಗೇಂದ್ರ ರಾಸೂರ, ವಯ|| 33, ಉ|| ಹೊಟೇಲ ಮ್ಯಾನೇಜರ, ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ಇತನಿಂದ ಓರಿಜಿನಲ್ ಚಾಯ್ಸ್ನ ಬಾಟಲಿಗಳು,  ಓಲ್ಡ ಟಾವರಿನ ಬಾಟಲಿಗಳು ಹೀಗೆ ಇತರೆ ಮಧ್ಯದ ಬಾಟಲಿಗಳು  ಅ||ಕಿ|| 1,50,240/- ರೂಪಾಯಿ ಬೆಲೆ ಬಾಳುವುದವುಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:38/2013 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು 188 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಶೃದ್ದಾನಂದ ತಂದೆ ರೇವಣಸಿದ್ದಪ್ಪ ಕಾಳಗಿ ವ:63 ಜಾ: ಲಿಂಗಾಯತ ಸಾ: ಮನೆ ನಂ. 39 ಜನತಾ ಗೃಹ ನಿರ್ಮಾಣ ಹೌಸಿಂಗ ಸೋಸಾಯಿಟಿ ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಪತ್ನಿ ದಿನಾಂಕ:25/03/2013  ರಂದು ಬೆಳಿಗ್ಗೆ 8-25 ಕ್ಕೆ ಮನೆಯಿಂದ ಕರುಣೇಶ್ವರ ಬಸ್ ನಿಲ್ದಾಣದಕ್ಕೆ ಆಟೋ ಮೂಲಕ ಹೋಗುವ ಸಲುವಾಗಿ ರಾಮ ಮಂದಿರ – ಜೇವರ್ಗಿ ಕಾಲನಿ ಮುಖ್ಯ ರಸ್ತೆಯ ಮುಖಾಂತರ ಹೊರಟಾಗ ಮೋಟಾರ ಸೈಕಲ್ ಮೇಲೆ ಇಬ್ಬರು ಕುಳಿತಿದ್ದು, ಕ್ಷಣಾರ್ಧದಲ್ಲಿ ಹಿಂದೆ ಕುಳಿತಿರುವ ವ್ಯಕ್ತಿ ನನ್ನ ಪತ್ನಿಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ್ 15 ಗ್ರಾಂ ಮತ್ತು ಚಿನ್ನದ ಲಾಕೇಟ ಸರ್ 14 ಗ್ರಾಂ  ಕಿತ್ತುಕೊಂಡು ಮೋಟರ ಸೈಕಲ್ ನಂಬರ ನೋಡುವಷ್ಟರಲ್ಲಿ ಅತೀವೇಗದಿಂದ ಮೋಟಾರ ಸೈಕಲ್ ಚಲಾಯಿಸಿದರು.ಬಂಗಾರದ ಒಟ್ಟು ಆಭರಣಗಳ ಕಿಮ್ಮತ್ತು 75,000/- ರೂಪಾಯಿಗಳು ಆಗಬಹುದು ಅಂತಾ ಶೃದ್ದಾನಂದ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 46/2013 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 March 2013

GULBARGA DISTRICT REPORTED CRIMES


ಕೊಲೆಗೆ ಪ್ರಯತ್ನ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ,ಸಂತೋಷ ತಂದೆ ತಿಪ್ಪಯ್ಯಾ ಕಲಾಲ ಸಾ|| ಚಿಮ್ಮಾಯಿದಲಾಯಿ ತಾ|| ಚಿಂಚೋಳಿ ರವರು ನಾನು 2011 ನೇ ಸಾಲಿನಲ್ಲಿ ಶಿವರಾಯ ಕೋಟಗಿ ಮತ್ತು ಅವನ ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಸಧ್ಯನ್ಯಾಯಾಲಯದವಿಚಾರಣೆಯಲ್ಲಿದ್ದು ಅದನ್ನು ವಾಪಸು ಪಡೆದುಕೊ ಅಂತಾ ಶಿವರಾಯ ಕೋಟಗಿ ಅವನ ಹೆಂಡತಿ ಮಕ್ಕಳು ಕೇಳಿದ್ದು, ಅದಕ್ಕೆ ನಾನು ಕೊಟ್ಟ ದೂರನ್ನು ವಾಪಸು ತಗೆದುಕೊಳ್ಳುವುದಿಲ್ಲಾ ಅಂತಾ ಹೇಳಿದಕ್ಕೆ ದಿನಾಂಕ:24-03-2013 ರಂದು ರಾತ್ರಿ 7-30 ಗಂಟೆಗೆ ಸುಮಾರಿಗೆ ಶಿವರಾಯ ಕೊಟಗಿ ರವರ ಮನೆಯ ಮುಂದೆ ನಡೆದುಕೊಂಡು ಬರುತ್ತಿದ್ದಾಗ ಶಿವರಾಯ ಕೋಟಗಿ, ಅವನ ಹೆಂಡತಿಯಾದ ಕಲ್ಲಮ್ಮ, ಅವನ ಮಕ್ಕಳಾದ ಬಸವರಾಜ ಮತ್ತು ತುಕರಾಮ ನಾಲ್ಕು ಜನರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ  ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಗುಪ್ತಾಂಗಕ್ಕೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ, 341, 323, 324, 504, 506, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ಶಹಾಬಾದ ನಗರ ಪೊಲೀಸ್ ಠಾಣೆ:ಶ್ರೀಮತಿ ಸುಶೀಲಾ ಗಂಡ ಮಹೇಶಕುಮಾರ ಗಾಯಕವಾಡ ಸಾ:ಮನೆ.ನಂ.45 ರೈಲ್ವೆ ಕ್ವಾಟ್ರಾಸ್ ಶಹಾಬಾದ ರವರು ನಮ್ಮ ಬಾಜು ಮನೆಯವನಾದ ಬಾಲು ತಂದೆ ರಾಜು ಸಾಲುವಾ ಇತನು ಕಳೆದ ಮೂರು ತಿಂಗಳಿಂದ ನನ್ನ ಮನೆಯ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದು ನಾನು ಮತ್ತು ನನ್ನ ಗಂಡ ಕೇಳಲು ಹೋದರೆ ಗಲಾಟೆ ಮಾಡುತ್ತಿದ್ದು, ದಿನಾಂಕ:24/03/2013 ರಂದು ರಾತ್ರಿ 8.45 ಗಂಟೆಯ ಸುಮಾರಿಗೆ ಮನೆಯ ಮೇಲೆ ಕಲ್ಲುಗಳು ಬಿಳುತ್ತಿದ್ದುದ್ದು ನೋಡಿ ಹೊರಗೆ ಬಂದು ನೋಡಿ ಬಾಲು ಮತ್ತು ಆತನ ಹೆಂಡತಿಗೆ ಯಾಕೆ ನಮ್ಮ ಮನೆಯ ಮೇಲೆ ಕಲ್ಲುಗಳನ್ನು ಹಾಕುತ್ತಿದ್ದಿಯಾ ಅಂತಾ ಕೇಳಿದ್ದಕ್ಕೆ ಆವರು ಅವಾಚ್ಯ ಶಬ್ದಗಳಿಂದ ಬೈದು ಬಾಲು ಇತನು ತನ್ನಲ್ಲಿರುವ ಚಾಕುವಿನಿಂದ ನನ್ನ ಗಂಡನ ಮುಖಕ್ಕೆ, ಎಡಗಾಲ ಮೊಳಕಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಶ್ರೀಮತಿ ಸುಶೀಲಾ ಗಂಡ ಮಹೇಶಕುಮಾರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 323,504,506,354,307 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

24 March 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ ::
:: ಒಂದು ವಾರದ ಹಿಂದೆ ಕೊಲೆ ಮಾಡಿದ ಆರೋಪಿತರ ಬಂಧನ::
       ಗುಲಬರ್ಗಾ ನಗರದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಉದನೂರ ಸಮೀಪ ದಿನಾಂಕ:17-03-2013 ರಂದು ಸುರೇಶ ತಂದೆ ಜನಕರಾಜ ಮೂಲಗೆ ಇತನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆ ಕುರಿತು ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಹಾಗೂ ಶ್ರೀ ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ,ಕೆ.ಎಮ್.ಸತೀಷ ಗ್ರಾಮೀಣ ವೃತ್ತ ರವರ ನೇತ್ರತ್ವದಲ್ಲಿ ಪಿ.ಎಸ.ಐ ರವರ ಆನಂದರಾವ ಎಸ್.ಎನ್., ಗಜಾನನ ಪಿ.ಎಸ.ಐ (ಪ್ರೋ) ಹಾಗೂ ಸಿಬ್ಬಂದಿಯವರಾದ ಸಂಜೀವರೆಡ್ಡಿ, ಹಣಮಂತ, ಕೇಶವ ಬಿರಾದಾರ, ನರಸಿಂಹ, ರಾಜಕುಮಾರ, ಹಾಗೂ ಮಲ್ಲಿಕಾರ್ಜುನ ರವರು ಕೂಡಿಕೊಂಡು ಕೊಲೆ ಮಾಡಿದ ಆರೋಪಿಗಳಾದ 1) ಅಮಿತ ತಂದೆ ವಿಜಯಕುಮಾರ ಕೊರಳ್ಳಿ, 2) ಜೈ ಭೀಮ @ ಬಿಲ್ಲಾ ತಂದೆ ಶಿವಲಿಂಗಪ್ಪಾ ಕೊರಳ್ಳಿ, 3) ಪ್ರಕಾಶ ತಂದೆ ಬಾಬುರಾವ ಕೊರಳ್ಳಿ, 4) ಪವನ ತಂದೆ ಶಿವಲಿಂಗಪ್ಪಾ ಸಾವಳಗಿ ಸಾ|| ಎಲ್ಲರೂ ತಾ||ಜಿ|| ಗುಲಬರ್ಗಾ,  5) ಮಲ್ಲಿಕಾರ್ಜುನ ತಂದೆ ಹಾಜಪ್ಪಾ ರದ್ದೋಡಗಿ ಸಾ|| ಶಹಾಬಾದ ರವರನ್ನು ಶಹಾಬಾದ ರೋಡಿಗೆ ಇರುವ ಶಹಾಬಾದ ಪಟ್ಟಣದ ವಾಡಿ ಕ್ರಾಸ ಹತ್ತಿರ  5 ಜನ ಕೊಲೆ  ಮಾಡಿದ ಆರೋಪಿತರನ್ನು ಬಂಧಿಸಿರುತ್ತಾರೆ.
ಕೊಲೆ ಮಾಡಿದ ಈ ಐದು (5) ಜನ ಆರೋಪಿತರನ್ನು ಪತ್ತೆ ಮಾಡಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎನ್. ಸತೀಷಕುಮಾರ  ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.