POLICE BHAVAN KALABURAGI

POLICE BHAVAN KALABURAGI

20 February 2013

GULBARGA DISTRCIT REPORTED CRIMES


ವಾರಸುದಾರರಿಲ್ಲದ ಮೂರು ಮೋಟಾರ ಸೈಕಲಗಳು ಜಪ್ತಿ:
ನಿಂಬರ್ಗಾ ಪೊಲೀಸ್ ಠಾಣೆ:ದಿನಾಂಕ 19/02/2013 ರಂದು ಸಾಯಂಕಾಲ ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಮತ್ತು ಸಿಬ್ಬಂಧಿಯವರಾದ ಲಕ್ಷ್ಮಣ, ಭೀಮರಾಯ ಪಾಟೀಲ,ಭೀಮಾಶಂಕರ ರವರೊಂದಿಗೆ ಹಳ್ಳಿಗಳ ಭೇಟ್ಟಿ ಕುರಿತು ಭೂಸನೂರ ಕಡೆಗೆ ಹೊರಟಾಗ ಭೂಸನೂರ ಕೆನಾಲ ಬ್ರಿಡ್ಜ ಹತ್ತಿರ ಮೂರು ಮೋಟಾರ ಸೈಕಲಗಳು ನಿಂತಿರುವದು ಕಂಡು ನೋಡಲು, ಯಾರೂ ವಾಹನದ ಮಾಲಿಕರು ಇರದೆ ಇರುವದನ್ನು ಕಂಡು ಹೋಗಿ ಬರುವ ಜನರಿಗೆ ವಿಚಾರಿಸಲು ಅವರು ಸುಮಾರು 2-3 ದಿವಸಗಳಿಂದ ಈ ಮೂರು  ವಾಹನಗಳು ಇಲ್ಲೆ ಇವೆ. ಇವುಗಳು ಯಾರಿಗೆ ಸಂಭಂಧಪಟ್ಟಿರುವವು ಅಂತ ಗೊತ್ತಿಲ್ಲ ಅಂತಾ ತಿಳಿಸಿದ್ದರಿಂದ ಮೂರು ಮೋಟಾರ ಸೈಕಲಗಳಾದ ಒಂದು ಹಿರೋ ಹೊಂಡಾ ಪ್ಯಾಶನ ಪ್ಲಸ್ ಕಪ್ಪು ಕಲರ್ ನಂ: ಎಮ.ಎಚ್-25/ಎಸ್-7047, ಚೆಸ್ಸಿ ನಂ: MBLHA10EL99G00236, ಇಂಜನ್ ನಂ: No. HA10EB99F28058  ಇರುತ್ತದೆ. ಯಮಹಾ ಮೋಟಾರ ಸೈಕಲ್ ಕಪ್ಪು ಕಲರ್ ನಂ: ಕೆಎ-32 ಎಕ್ಸ್-4807 ಚೆಸ್ಸಿನ ನಂ: No.ME154B019A2005043, ಇಂಜನ್ ನಂ:54B1005014 ಇರುತ್ತದೆ. ಮತ್ತು ಒಂದು ಹಿರೋ ಹೊಂಡಾ ಸ್ಪಲೇಂಡರ್ ಮೋಟಾರ ಸೈಕಲ್ ಕಪ್ಪು ಬಣ್ಣದ್ದು  ನಂಬರ ಇರುವದಿಲ್ಲ ಚೆಸ್ಸಿ ನಂ: MBLHA10EYAHF01831,ಇಂಜನ ನಂ:HA10EFAHF05369 ಇರುತ್ತದೆ. ಅವುಗಳ ಅಂದಾಜ ಕಿಮ್ಮತ್ತು  55,000/- ರೂಪಾಯಿಗಳದ್ದು  ಯಾರೂ ವಾರಸದಾರರು ಇಲ್ಲದ ಪ್ರಯುಕ್ತ ವಶಕ್ಕೆ ತೆಗೆದುಕೊಂಡು ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 17/2013 ಕಲಂ 41(ಡಿ) 102 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರೇವಣಸಿದ್ದಪ್ಪಾ ತಂದೆ ಹಣಮಂತ ಕೊಚಟ್ಟಿ ವ:18 ಉ:ವಿದ್ಯಾರ್ಥಿ ಸಾ:ಕೊಳಸಾಪೈಲ ಶಹಾಬಾದ ರವರು ನಾನು ಮತ್ತು ಮತ್ತು ತಾಲುಶ್ರೀಕಾಂತ ಕೂಡಿ ಕೋಳಸಾ ಫೈಲದ ಬಾಬು ಜಗಜೀವನರಾಮ ಪಾರ್ಕದಲ್ಲಿ ದಿನಾಂಕ:19/02/2013 ರಂದು 3.30 ಪಿಎಂ ಸುಮಾರಿಗೆ ಮಾತನಾಡುತ್ತಾ ಕುಳಿತಿದ್ದಾಗ ರಾಘವೇಂದ್ರ ತಂದೆ ವೆಂಕಪ್ಪಾ ಮೇಘಪಾಲ ಇತನು ಬಂದು ನಮ್ಮ ತಾಯಿಯ ಜೊತೆ ಜಗಳ ತೆಗೆದಿದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬ್ಲೇಡದಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2013 ಕಲಂ, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಘವೇಂದ್ರ ತಂದೆ ವೆಂಕಪ್ಪಾ ಮೇಘಪಾಲ ವ:18  ಉ:ಕೂಲಿ ಕೆಲಸ ಸಾ:ಕೊಳಸಾಪೈಲ ಶಹಾಬಾದ ರವರು ನಾನು ದಿನಾಂಕ:19/02/2013 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಬಾಬು ಜಗಜೀವನರಾಮ ಪಾರ್ಕ ಕೋಳಸಾಫೈಲ ಹತ್ತಿರ ಹೋಗುತ್ತಿರುವಾಗ ರೇವಣಸಿದ್ದಪ್ಪ ತಂದೆ ಹಣಮಂತ,ಶ್ರೀಕಾಂತ ತಂದೆ ಭೀಮರಾಯ ಸಾಂಬಾ ರವರು ಕೂಡಿಕೊಂಡು ಬಂದು ರೇವಣಸಿದ್ದನು ಇತನು ನನಗೆ ನಿಮ್ಮ ತಾಯಿ ಅವಾಚ್ಯವಾಗಿ ಬೈದಿರುತ್ತಾಳೆ  ಅಂತಾ ಕೈ ಮುಷ್ಠಿಮಾಡಿ ಮೂಗಿಗೆ ಹೊಡೆದನು ಮತ್ತು ಶ್ರೀಕಾಂತನು ಕೂಡಾ ಅವಾಚ್ಯ ಶಬ್ದಗಳಿಂದ ಕೈಯಿಂದ ಬಲಮಗ್ಗಲಿಗೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 323, 32,4 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ ವಿಶ್ವನಾಥ ತಂದೆ ಶರಣಪ್ಪಾ ಪ್ಯಾಟಿ ಸಾ:ಫೀರೋಜಾಬಾದ ರವರು ನಾನು ಮತ್ತು ನಮ್ಮೂರಿನ ಖಲಿಲ,ರಾಮಚಂದ್ರ, ಮತ್ತು ಹಾಜಿಮಿಯಾ ಕೂಡಿಕೊಂಡು ನದಿಸಿನ್ನೂರ ಗ್ರಾಮದ ಶಿವಶರಣಪ್ಪಾ ಹೂಗಾರ ಇವರ ದಾಲಮಿಲನ ಪೂಜೆ ಇರುವುದ್ದರರಿಂದ ದಿನಾಂಕ:18-02-2013 ರಂದು ಬೆಳಿಗ್ಗೆ 10-00 ಗಂಟೆಗೆ ದಾಲ ಮಿಲಿನ ಪೂಜೆಯ ನಿಮಿತ್ಯವಾಗಿ ಅಡುಗೆಯ ಸಾಮಾನುಗಳನ್ನು  ಟ್ರ್ಯಾಕ್ಟರ ನಂಬರ ಕೆಎ-32 ಟಿಎ-3677/78  ನೇದ್ದರಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಟ್ಯಾಕ್ಟರ ಹಾಜಿಮಿಯಾ ತಂದೆ ಖಾಸಿಮಸಾಬ ಇತನು ಚಲಾಯಿಸುತ್ತಿದ್ದು ನದಿಸಿನ್ನೂರ ಕ್ರಾಸ ಹತ್ತಿರ ಬರುತ್ತಿರುವಾಗ ಹಿಂದಿನಿಂದ ಒಬ್ಬ ಟಿಪ್ಪರ ಕೆಎ-32 ಬಇ-5476 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಹೊಗುತ್ತಿದ್ದ ಟ್ರ್ಯಾಕ್ಟರಿಗೆ ಡಿಕ್ಕಿ ಪಡಿಸಿರುತ್ತಾನೆ. ಟ್ರ್ಯಾಕ್ಟರ ರಸ್ತೆಯ ಎಡಗಡೆಗೆ ಬೋರಲಾಗಿ ಪಲ್ಟಿಯಾಗಿದ್ದರಿಂದ ನಮ್ಮೆಲರಿಗೆ ರಕ್ತಗಾಯವಾಗಿರುತ್ತವೆ. ಟಿಪ್ಪರ ಚಾಲಕ ಕಿಶನ ಚವ್ಹಾಣ ಇತನು ಡಿಕ್ಕಿ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹಾಗೆಯೆ ಹೋಗಿರುತ್ತಾನೆ. ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:21/2013 ಕಲಂ, 279,338, ಸಮಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 19-02-13 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ  ನಮ್ಮ ಚಿಕ್ಕಪ್ಪ ಭೀಮಶ್ಯಾ ಸಾವಳಗಿ ಇವರ ಮೊಮ್ಮಗನ ಜಾವಳ ಕಾರ್ಯಕ್ರಮಕ್ಕೆ ಹಾಜರಾಗಲು ನಾನು ಮತ್ತು ನನ್ನ ಇಬ್ಬರ ಗೆಳೆಯರೊಂದಿಗೆ ಮೋಟಾರ ಸೈಕಲ ಕೆಎ-32/ವಿ-2355 ನೇದ್ದರ ಮೇಲೆ ಗೋಳಾ ಗ್ರಾಮಕ್ಕೆ ಹೋಗಿ ಜಾವಳ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಸಾಯಂಕಾಲ 7-30 ಗಂಟೆ ಸುಮಾರಿಗೆ ಭೀಮಳ್ಳಿ ಕ್ರಾಸ ಹತ್ತಿರ ಎದುರುನಿಂದ ಕ್ರೋಜರ ಕೆಎ-23 ಎಂ-6474 ನೇದ್ದರ ಚಾಲಕ ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಕ್ರೋಜರ ನಿಲ್ಲಿಸಿ ಚಾಲಕ ಓಡಿ ಹೋದನು. ನನ್ನ ಹಿಂದೆ ಮೋಟಾರ ಸೈಕಲ ಮೇಲೆ ಕುಳಿತ ಅಜಿತಕುಮಾರ ಇತನು ಸ್ಥಳದಲ್ಲಿ ಮೃತಪಟ್ಟಿದ್ದು, ನನಗೆ ಮತ್ತು ಅನಿಲ ಇಬ್ಬರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತವೆ. ಅಂತಾ ಶ್ರೀ ವಿನೋದ ತಂದೆ ಮಾಹಾಂತೇಶ ದೇಸುಣಕಿ  ಸಾ|| ಬುದ್ದ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 99/2013 ಕಲಂ 279, 338 304 (ಎ) ಐಪಿಸಿ ಸಂಗಡ 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. 

18 February 2013

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ

ಗುಲಬರ್ಗಾ ಜಿಲ್ಲಾ ಪೊಲೀಸರಿಂದ ಅಂತರ ರಾಜ್ಯ ಕಳ್ಳನ ಬಂಧನ,
ಬಂಧಿತ ಬಾಬು @ ಮಸ್ತಾನ ಸಾ|| ನಾಗವಾರ, ಬೆಂಗಳೂರು ಇತನಿಂದ
600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಒಟ್ಟು 19,30,000/-
(ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ) ರೂಪಾಯಿಗಳ ಮೌಲ್ಯದ ಆಭರಣಗಳು  ವಶ.

ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ,  ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ, ಶ್ರೀ ಭೂಷಣ ಭೊರ್ಸೆ ಹಿರಿಯ ಸಹಾಯಕ ಎಸ್.ಪಿ. ಉಪ-ವಿಭಾಗ ಗುಲಬರ್ಗಾ, ಶ್ರೀ ಎ.ಡಿ. ಬಸವಣ್ಣನವರ್ ಡಿ.ಎಸ್.ಪಿ ಬಿ ಉಪ-ವಿಭಾಗ ಗುಲಬರ್ಗಾ, ಶ್ರೀ ಹೆಚ. ತಿಮಪ್ಪಾ ಡಿ.ಎಸ.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ನೇತ್ರತ್ವದ ತಂಡದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾರವರು ಮತ್ತು ಸ್ಟೇಶನ ಬಜಾರ ಪೊಲೀಸ ಠಾಣೆಯ ಇನ್ಸಪೇಕ್ಟರ ಶ್ರೀ.ಜೆ.ಎಚ್.ಇನಾಮದಾರ, ಪಿ.ಎಸ.ಐ. ವಿಜಯ, ಪಿ.ಎಸ.ಐ.ಮುರಳಿ ಹಾಗೂ ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ, ಬಸವರಾಜ, ದತ್ತಾತ್ರಯ, ಹೆಚ.ಸಿ.ಗಳಾದ ಅಣ್ಣರಾವ, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಶಿವಯೋಗಿ, ಅಣ್ಣಪ್ಪಾ, ಅಶೋಕ, ವೀರಣ್ಣಾ ಪಿಸಿ ರವರು ಹಾಗೂ ಸ್ಟೇಶನ ಬಜಾರ ಠಾಣೆಯ ಸಿಬ್ಬಂಧಿಯವರಾದ ಅಖಂಡಪ್ಪಾ ಎ.ಎಸ.ಐ, ಹುಸೇನಸಾಬ ಹೆಚ.ಸಿ ಹುಣಚಪ್ಪಾ ಪಿಸಿರವರ ತಂಡವು ಗುಲಬರ್ಗಾ ನಗರದಲ್ಲಿ 2007 ನೇ ಸಾಲಿನಿಂದ 2012 ನೇ ಸಾಲಿನವರೆಗೆ ಗುಲಬರ್ಗಾ ನಗರದ ವಿವಿಧ ಪೊಲೀಸ್ ಠಾಣೆಗಳ ಸರಹದ್ದುಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿರುವಂತಹ ಒಂಟಿ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಹಗಲು ಕಳ್ಳತನ ಮಾಡಿದ ಅಪರಾಧಿ ಬಾಬು @ ಮಸ್ತಾನ ಸಾ||ನಾಗವಾರ ಬೆಂಗಳೂರು ಇತನು ಗುಲಬರ್ಗಾದಲ್ಲಿ ಹಗಲು ಕಳ್ಳತನ ಮಾಡಿದ ಕೆಲವು ಮನೆಗಳಲ್ಲಿ ದೊರೆತ ಬೆರಳು ಮುದ್ರೆಯ ಆಧಾರದ ಮೇಲೆ ಗುರುತಿಸಿ ಗುಲಬರ್ಗಾ ಜಿಲ್ಲಾ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯಚರಣೆ ಕೈಕೊಂಡು ಆರೋಪಿತನಾದ ಬಾಬು @ ಮಸ್ತಾನ ಇತನನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ,
            ಗುಲಬರ್ಗಾ ನಗರದ ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯ ಪಿ & ಟಿ ಕಾಲೋನಿ, ರಹಿಮತ್ ನಗರ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹತ್ತಿರದ ಬ್ಯಾಂಕ ಕಾಲೋನಿ, ಗಾಬರೆ ಲೇಔಟ್, ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಾಲಿಬ್ ಕಾಲೋನಿ, ಏಕ್ಬಾಲ ಕಾಲೋನಿ. ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯ ಎಂ.ಕೆ.ನಗರ ಹಾಗರಗಾ ರೋಡ, ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಹಮನಿ ಚೌಕ, ಗಣೇಶ ನಗರ, ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡಿದ  10 ಗುನ್ನೆಗಳಲ್ಲಿಯ 600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಇವುಗಳ ಒಟ್ಟು ಅಂದಾಜು ಮೌಲ್ಯ 19,30,000/- (ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ)  ರೂಪಾಯಿಗಳ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಗಣಗಳನ್ನು ಆರೋಪಿತನಾದ ಬಾಬು @ ಮಸ್ತಾನ ಸಾ|| ನಾಗವಾರ ಬೆಂಗಳೂರು ಇತನಿಂದ ವಶಪಡಿಸಿಕೊಳ್ಳಲಾಗಿದೆ.
      ಈ  ಕಾರ್ಯಚರಣೆಯಲ್ಲಿ ಭಾಗಿಯಾದ ತಂಡದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು  ನಗದು ಬಹುಮಾನ ಘೋಷಿಸಿರುತ್ತಾರೆ.