POLICE BHAVAN KALABURAGI

POLICE BHAVAN KALABURAGI

18 February 2013

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ

ಗುಲಬರ್ಗಾ ಜಿಲ್ಲಾ ಪೊಲೀಸರಿಂದ ಅಂತರ ರಾಜ್ಯ ಕಳ್ಳನ ಬಂಧನ,
ಬಂಧಿತ ಬಾಬು @ ಮಸ್ತಾನ ಸಾ|| ನಾಗವಾರ, ಬೆಂಗಳೂರು ಇತನಿಂದ
600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಒಟ್ಟು 19,30,000/-
(ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ) ರೂಪಾಯಿಗಳ ಮೌಲ್ಯದ ಆಭರಣಗಳು  ವಶ.

ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ,  ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ, ಶ್ರೀ ಭೂಷಣ ಭೊರ್ಸೆ ಹಿರಿಯ ಸಹಾಯಕ ಎಸ್.ಪಿ. ಉಪ-ವಿಭಾಗ ಗುಲಬರ್ಗಾ, ಶ್ರೀ ಎ.ಡಿ. ಬಸವಣ್ಣನವರ್ ಡಿ.ಎಸ್.ಪಿ ಬಿ ಉಪ-ವಿಭಾಗ ಗುಲಬರ್ಗಾ, ಶ್ರೀ ಹೆಚ. ತಿಮಪ್ಪಾ ಡಿ.ಎಸ.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ನೇತ್ರತ್ವದ ತಂಡದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾರವರು ಮತ್ತು ಸ್ಟೇಶನ ಬಜಾರ ಪೊಲೀಸ ಠಾಣೆಯ ಇನ್ಸಪೇಕ್ಟರ ಶ್ರೀ.ಜೆ.ಎಚ್.ಇನಾಮದಾರ, ಪಿ.ಎಸ.ಐ. ವಿಜಯ, ಪಿ.ಎಸ.ಐ.ಮುರಳಿ ಹಾಗೂ ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ, ಬಸವರಾಜ, ದತ್ತಾತ್ರಯ, ಹೆಚ.ಸಿ.ಗಳಾದ ಅಣ್ಣರಾವ, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಶಿವಯೋಗಿ, ಅಣ್ಣಪ್ಪಾ, ಅಶೋಕ, ವೀರಣ್ಣಾ ಪಿಸಿ ರವರು ಹಾಗೂ ಸ್ಟೇಶನ ಬಜಾರ ಠಾಣೆಯ ಸಿಬ್ಬಂಧಿಯವರಾದ ಅಖಂಡಪ್ಪಾ ಎ.ಎಸ.ಐ, ಹುಸೇನಸಾಬ ಹೆಚ.ಸಿ ಹುಣಚಪ್ಪಾ ಪಿಸಿರವರ ತಂಡವು ಗುಲಬರ್ಗಾ ನಗರದಲ್ಲಿ 2007 ನೇ ಸಾಲಿನಿಂದ 2012 ನೇ ಸಾಲಿನವರೆಗೆ ಗುಲಬರ್ಗಾ ನಗರದ ವಿವಿಧ ಪೊಲೀಸ್ ಠಾಣೆಗಳ ಸರಹದ್ದುಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿರುವಂತಹ ಒಂಟಿ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಹಗಲು ಕಳ್ಳತನ ಮಾಡಿದ ಅಪರಾಧಿ ಬಾಬು @ ಮಸ್ತಾನ ಸಾ||ನಾಗವಾರ ಬೆಂಗಳೂರು ಇತನು ಗುಲಬರ್ಗಾದಲ್ಲಿ ಹಗಲು ಕಳ್ಳತನ ಮಾಡಿದ ಕೆಲವು ಮನೆಗಳಲ್ಲಿ ದೊರೆತ ಬೆರಳು ಮುದ್ರೆಯ ಆಧಾರದ ಮೇಲೆ ಗುರುತಿಸಿ ಗುಲಬರ್ಗಾ ಜಿಲ್ಲಾ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯಚರಣೆ ಕೈಕೊಂಡು ಆರೋಪಿತನಾದ ಬಾಬು @ ಮಸ್ತಾನ ಇತನನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ,
            ಗುಲಬರ್ಗಾ ನಗರದ ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯ ಪಿ & ಟಿ ಕಾಲೋನಿ, ರಹಿಮತ್ ನಗರ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹತ್ತಿರದ ಬ್ಯಾಂಕ ಕಾಲೋನಿ, ಗಾಬರೆ ಲೇಔಟ್, ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಾಲಿಬ್ ಕಾಲೋನಿ, ಏಕ್ಬಾಲ ಕಾಲೋನಿ. ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯ ಎಂ.ಕೆ.ನಗರ ಹಾಗರಗಾ ರೋಡ, ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಹಮನಿ ಚೌಕ, ಗಣೇಶ ನಗರ, ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡಿದ  10 ಗುನ್ನೆಗಳಲ್ಲಿಯ 600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಇವುಗಳ ಒಟ್ಟು ಅಂದಾಜು ಮೌಲ್ಯ 19,30,000/- (ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ)  ರೂಪಾಯಿಗಳ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಗಣಗಳನ್ನು ಆರೋಪಿತನಾದ ಬಾಬು @ ಮಸ್ತಾನ ಸಾ|| ನಾಗವಾರ ಬೆಂಗಳೂರು ಇತನಿಂದ ವಶಪಡಿಸಿಕೊಳ್ಳಲಾಗಿದೆ.
      ಈ  ಕಾರ್ಯಚರಣೆಯಲ್ಲಿ ಭಾಗಿಯಾದ ತಂಡದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು  ನಗದು ಬಹುಮಾನ ಘೋಷಿಸಿರುತ್ತಾರೆ.


17 February 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಆದ ಬಗ್ಗೆ:
ಚೌಕ ಪೊಲೀಸ್ ಠಾಣೆ:ಶ್ರೀಮತಿ ನಿರ್ಮಲಾ ಗಂಡ ಜಗದೀಶ ಡಿಗ್ಗಾಂವಕರ ಸಾ|| ವಿರೇಂದ್ರ ಪಾಟೀಲ ಬಡಾವಣೆ ಜಿಡಿಎ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ನಾದಿನಿ ಅಂಬಿಕಾ ಪಾಟೀಲ್ ಕೂಡಿಕೊಂಡು ದಿನಾಂಕ: 16-02-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅಟೋ ನಂ: ಕೆಎ-32-6508 ನೇದ್ದರಲ್ಲಿ ಓಂ ನಗರದಿಂದ ಶಹಾಬಜಾರದ್ಲಿರುವ ಸಂಬಂಧಿಕರಿಗೆ ಮಾತನಾಡಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಮಾರ್ಕೆಟ ಮಜೀದ ಹತ್ತಿರ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ನನ್ನ ಕೊರಳಲಿದ್ದ ಮಂಗಳ ಸೂತ್ರ 3 ತೊಲೆ 90,000/- ರೂಪಾಯಿಗಳದ್ದು ದೋಚಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ನಿರ್ಮಲಾ ರವರ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಎರಡು (2) ಮೋಟಾರ ಸೈಕಲುಗಳು ಜಪ್ತಿ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಮಹಾತ್ಮ ಬಸವೇಶ್ವರ ನಗರ ವೃತ್ತದ ಸಿಪಿಐ ರವರ ಮಾರ್ಗದರ್ಶದಲ್ಲಿ ದಿನಾಂಕ:16/02/2013 ರಂದು ಬೆಳಗ್ಗೆ 5-00 ಎ.ಎಮ ಕ್ಕೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಕರ್ತವ್ಯದಲ್ಲಿದ್ದಾಗ ಓಂ ನಗರ ಗೇಟ್ ಹತ್ತಿರ 3 ಜನರು ಕೂಡಿಕೊಂಡು 2 ಮೋಟಾರ ಸೈಕಲಗಳೊಂದಿಗೆ ಸಂಶಯ ರೀತಿಯಲ್ಲಿ ನಿಂತಿದ್ದು ಇನ್ನೊಬ್ಬನು ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದನ್ನು ವಿಚಾರಿಸಲು ಅವರು ನಮ್ಮಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಹಿಡಿದು ಕೂಲಂಕುಶವಾಗಿ ವಿಚಾರಿಸಲು ಅವರ ಹೆಸರು ಶೇಖ್ ಇಮ್ರಾನ್ @ ಇಮ್ರಾನ್ ತಂದೆ ಅಬ್ದುಲ ಗಫಾರ ಶೇಖ್ ವಯಃ 18 ವರ್ಷ ಉಃ ಗೌಂಡಿ ಕೆಲಸ ಜಾತಿಃ ಮುಸ್ಲಿಂ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ಕಾಳಪ್ಪ ತಂದೆ ಸುಭಾಷ ಹುಸುರ ವಯಃ23 ವರ್ಷ ಉಃ ಲಾರಿ ಡ್ರೈವರ ಜಾತಿಃ ಲಿಂಗಾಯತ ಸಾಃ ಕಾಳನೂರ ತಾಃಜಿಃ ಗುಲಬರ್ಗಾ,ಮೋಹಸೀನ ತಂದೆ ಇಮಾಮ್ ಪಟೇಲ ವಯಃ 18 ವರ್ಷ ಜಾತಿಃ ಮುಸ್ಲಿಂ ಉಃ ಗೌಂಡಿಕೆಲಸ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ನಾಗರಾಜ ತಂದೆ ಮಲ್ಲಣ್ಣಾ ಅವುಂಟಗಿ ವಯಃ 24 ವರ್ಷ ಉಃ ರಘೋಜಿ ಫೈನಾನ್ಸದಲ್ಲಿ ಕೆಲಸ ಜಾತಿಃ ಲಿಂಗಾಯತ ಸಾಃ ಶಿವಾಜಿ ನಗರ ಮಲ್ಲಿಕಾರ್ಜುನ ಗುಡಿ ಹತ್ತಿರ ಗುಲಬರ್ಗಾ ಅಂತಾ ತಿಳಿದಿದ್ದು. ಇವರ ಹತ್ತಿರವಿದ್ದ 2 ಮೋಟಾರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ 2 ಮೋಟಾರ ಸೈಕಲಗಳು ವಿಶ್ವವಿದ್ಯಾಲಯ ಮತ್ತು ರೋಜಾ ಪೊಲೀಸ ಠಾಣಾ ವ್ಯಾಪ್ತಿ ಕಳುವು ಮಾಡಿರುವುದಾಗಿ ಹೇಳಿದ್ದು, ಅವರ ಹತ್ತಿರವಿದ್ದ ಮೋಟಾರ ಸೈಕಲ್ Hero Honda Splender + Black Colour M/c No. KA 32 U 7285, Chassis No. MBLHA10EE89J32026, Engine No. HA10EA89J38209 H ಅಃಕಿಃ 25,000/- ರೂ. 2) Bajaj Company M/c No. KA 32 G 9065, Chassis No. MD2DDDZZZNWJ71396, Engine No. DUMBNJ27434 ಅಃಕಿಃ 25,000/- ನೇದ್ದವುಗಳನ್ನು ಜಪ್ತಿ  ಮಾಡಿಕೊಂಡು ಠಾಣೆ ಗುನ್ನೆ ನಂ: 25/2013 ಕಲಂ.41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರಿಮತಿ ಗಂಗಮ್ಮ ಗಂಡ ತಿಪ್ಪಣ್ಣಾ ಹುಚ್ಚನ ವ: 70 ವರ್ಷ ಸಾ||ಫರಹತಾಬಾದ ರವರು ನಾನು ಮತ್ತು ನನ್ನ ಗಂಡ ದಿನಾಂಕ 15/2/2013 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಮನೆಯಲ್ಲಿರುವಾಗ ನಮ್ಮ ಅಣ್ಣತಮ್ಮಕಿಯವರಾದ ಶಾರದಾಬಾಯಿ ಗಂಡ ಮಲಕಪ್ಪಾ ಹುಚ್ಚನ ಇವಳೊಂದಿಗೆ ನಳದ ನೀರಿನ ಸಂಬಂವಾಗಿ ಬಾಯಿ ಮಾತಿನ ಜಗಳ ವಾಗಿತ್ತು. ರಾತ್ರಿ 10:00 ಗಂಟೆಯ ಸುಮಾರಿಗೆ ಉಟ ಮಾಡಿಕೊಂಡು ಮಲಗಿಕೊಂಡಿದ್ದಾಗ ನಮ್ಮ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಯಾಕೆ ಬೈಯುತ್ತಿದ್ದಿರಿ ಅಂತಾ ಕೇಳಿದಕ್ಕೆ ಕಟ್ಟಿಗೆಯಿಂದ ಹೋಡೆದು ಗಾಯ ಮಾಡಿರುತ್ತಾಳೆ. ಸೋನುಬಾಯಿ ಇವಳು ಸಹ ಹೋಡೆದಿರುತ್ತಾಳೆ. ಜಗಳ ಬಿಡಿಸಲು ಬಂದ ನನ್ನ ಗಂಡನಿಗೆ ಮಲಕಪ್ಪ ಹುಚ್ಚನ ಇತನು ನೂಕಿ ಕೊಟ್ಟು ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ, 323, 324, 504, 506 ಸಂಗಡ 14 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸಚಿನ ತಂದೆ ಸೋಮಣ್ಣ ಸಂಬಿನೂರ ವ|| 19 ವರ್ಷ, ಉ|| ವಿದ್ಯಾರ್ಥಿ,ಸಾ|| ವಿಜಯ ನಗರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ 16-02-2013 ರಂದು ಸಾಯಂಕಾಲ 6-30 ಗಂಟೆಗೆ ಮನೆಯ ಮುಂದೆ ಕುಳಿತಾಗ ಪ್ರಶಾಂತ ತಂದೆ ರಜನಿಕಾಂತ, ಗಜ ತಂದೆ ರಾಜಕುಮಾರ ಬಂದು ನನಗೆ ಕರೆದು ನಿನ್ನ ಮೊಬೈಲ್ ಕೊಡು ಅಂತ ಅಂದಾಗ, ನನ್ನ ಮೊಬೈಲ್ ನಿಮಗೇಕೆ ಕೊಡಬೇಕು ಅಂತ ಅಂದಾಗ ಇಬ್ಬರೂ ಕೂಡಿ ಅವಾಚ್ಯದಿಂದ ಬೈಯುತ್ತಾ ಹೊಡೆಯ ಹತ್ತಿದರು. ನಾನು ಚೀರಾಡುತ್ತಿದ್ದಾಗ, ನನ್ನ ಎಡಗೈ ತಿರುವಿ, ಓಡಿ ಹೋಗಿದ್ದರು. ರಾತ್ರಿ 8-15 ಗಂಟೆಯ ಸುಮಾರಿಗೆ ಮತ್ತೆ ಅವರಿಬ್ಬರು ಮನೆಯ ಹತ್ತಿರ ಬಂದು, ಮನೆಯ ಮೇಲೆ ಕಲ್ಲು ತೂರಾಡಿ ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ;17/2013 ಕಲಂ 341, 323, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ತಂದೆಯ ಮೇಲೆ ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಹಾಜಿ ಕರೀಮ ತಂದೆ ಅಲಿಸಾಬ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ನಾನು ದಿನಾಂಕ:15/02/2013 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮನೆಗೆ ಬರುತ್ತಿದ್ದಾಗ ನನ್ನ ಮಗನಾದ ಮಹ್ಮದ ಫಿರೋಜ ಇತನು ನೀನು ಮನೆಗೆ ಬರಬೇಡ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದನು, ಮಹ್ಮದ ಅಮಜದ, ಫೀರೋಜ, ಶಾಹೀನ ಗಂಡ ಅಮಜದ, ಫರಜಾನ ಬೇಗಂ ಗಂಡ ಮಹ್ಮದ ಫಿರೋಜ ಇವರು ಬಂದು ನೀನು ಮನೆಗೆ ಬರುವದು ಬೇಡ ಅಂತಾ ಹೊಟ್ಟೆಗೆ ಹೊಡೆದು ಕೈಯಿಂದ ಕುತ್ತಿಗೆಗೆ ಒತ್ತಿದನು. ಆಗ  ಜಗಳ ಜಗಳದ ಸಪ್ಪಳ ಕೇಳಿ ಮಹ್ಮದ ರೀಯಾಜ, ಮಹ್ಮದ ಸಿದ್ದಿಕ ಇವರು ಬಿಡಿಸಲು ಬಂದಾಗ ಮಹ್ಮದ ರಿಯಾಜನಿಗೆ ಮಹ್ಮದ,  ಮಹ್ಮದ ಸಿದ್ದಿಕ ಇವರಿಗೆ ಬಡಿಗೆಯಿಂದ ತಲೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ:147,148,341,323,324,504,506,307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

16 February 2013

GULBARGA DISTRICT REPORTED CRIMES


ಹೆತ್ತ ಮಗನಿಂದಲೆ ತಂದೆಯ ಕೊಲೆ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ 15-02-2013 ರಂದು ರಾತ್ರಿ 8-00  ಗಂಟೆಗೆ ಕಲ್ಯಾಣಿ ತಂದೆ ಮಲ್ಲಣ್ಣ ಗಾಣಿಗೇರ ವಯ:22 ವರ್ಷ ಸಾ:ಕುಮ್ಮನಶಿರಸಗಿ ಇತನು ನ್ನ ತಂದೆಗೆ ಸರಾಯಿ ಕುಡಿಯಲು ಹಣ ಕೇಳಿದ್ದು ಆಗ ನನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದ್ದಕ್ಕೆ ಕಲ್ಯಾಣಿ ಇತನು ಹಣ ಕೊಡುವದಿಲ್ಲ ಮಗನೇ ಇವತ್ತು ನಿನಗೆ ಖಲಾಸ್ ಮಾಡಿಯೇ ಬಿಡುತ್ತೇನೆ ಅಂತಾ ತಕರಾರು ಮಾಡಿದ್ದನು. ತನ್ನ ತಂದೆ ಮಲ್ಲಣ್ಣ ಇತನು ಅರಳಗುಂಡಗಿ ಮಡ್ಡಿ ಹೊಲದಲ್ಲಿ ಮಲಗಿಕೊಂಡಾಗ ಕಲ್ಯಾಣಿ ಇತನು ಮಲಗಿಕೊಂಡ ತನ್ನ ತಂದೆಗೆ ಅಲ್ಲೇ ಇದ್ದ ಕೊಡಲಿಯಿಂದ ಕುತ್ತಿಗೆಗೆ ಹಾಗು ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಕೊಲೆ ಮಾಡಿದ ಮಗನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮೃತನ ಹೆಂಡತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ,302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಾಲೆಯಲ್ಲಿರುವ ಟಿವಿ ಕಳ್ಳತನ ಮಾಡಿದ ಬಗ್ಗೆ:
ವಾಡಿ ಪೊಲೀಸ್ ಠಾಣೆ: ನಮ್ಮ ಶಾಲೆಯ 1 ನೇ ತರಗತಿಯಲ್ಲಿಟ್ಟಿದ್ದ ಒಂದು ಸ್ಯಾಮಸಂಗ ಕಲರ್ ಟಿವಿ, ಮತ್ತು ಬ್ಯಾಟ್ರಿ ಯಾರೊ ಕಳ್ಳರು ದಿನಾಂಕ:10-02-2013 ರಿಂದ 13-02-2013 ರ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರಿಮತಿ ಮೆರಿಯಮ್ಮಾ ಗಂಡ ಸೊಮಶೇಖರ ಬೆಳ್ಳೆ ಸರಕಾರಿ ಮಾದರಿಯ ಪ್ರಾಥಮೀಕ ಶಾಲೆ ನಾಲವಾರದ ಪ್ರಭಾರ ಮುಖ್ಯ ಗುರುಗಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 454, 457, 380 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರೆಂಟ ಮೋಟಾರ ವೈರ ಕಳ್ಳತನ ಮಾಡಿದ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಬಸಪ್ಪ ತಂದೆ ಭೂತಾಳಿ ಕೌಲಗಿ ಸಾ:ಮಾದನ ಹಿಪ್ಪರಗಾ ರವರು ಖೇಡ ಉಮರ್ಗಾ ಸೀಮಾಂತರ ಹೊಲ ಸರ್ವೆ ನಂ:43/1 ರಲ್ಲಿನ ಬಾವಿಗೆ ಅಳವಡಿಸಿದ ಕರೆಂಟ್ ಮೋಟಾರ ವೈರ್ 600 ಪೀಟ್ ಗಳದ್ದು, ದಿನಾಂಕ:12/02/2013 ರ ರಾತ್ರಿ 10-00 ಗಂಟೆಯಿಂದ ಬೆಳಗಿನ ಜಾವ 5-00 ಮಧ್ಯದಲ್ಲಿ ವಾಲ್ಕು ತಂದೆ ಸಕ್ಕರಾಮ ಪವಾರ,ಸಕಾರಾಮ ತಂದೆ ಕಲ್ಲಪ್ಪ ಪವಾರ ಸಾ:ಝಳಕಿ (ಬಿ) ಹಾ:ವ: ಹಡಲಗಿ ತಾ:ಆಳಂದ  ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶರಣಬಸಪ್ಪಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ. ನಂ:19/2013 ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.