POLICE BHAVAN KALABURAGI

POLICE BHAVAN KALABURAGI

17 February 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಆದ ಬಗ್ಗೆ:
ಚೌಕ ಪೊಲೀಸ್ ಠಾಣೆ:ಶ್ರೀಮತಿ ನಿರ್ಮಲಾ ಗಂಡ ಜಗದೀಶ ಡಿಗ್ಗಾಂವಕರ ಸಾ|| ವಿರೇಂದ್ರ ಪಾಟೀಲ ಬಡಾವಣೆ ಜಿಡಿಎ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ನಾದಿನಿ ಅಂಬಿಕಾ ಪಾಟೀಲ್ ಕೂಡಿಕೊಂಡು ದಿನಾಂಕ: 16-02-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅಟೋ ನಂ: ಕೆಎ-32-6508 ನೇದ್ದರಲ್ಲಿ ಓಂ ನಗರದಿಂದ ಶಹಾಬಜಾರದ್ಲಿರುವ ಸಂಬಂಧಿಕರಿಗೆ ಮಾತನಾಡಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಮಾರ್ಕೆಟ ಮಜೀದ ಹತ್ತಿರ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ನನ್ನ ಕೊರಳಲಿದ್ದ ಮಂಗಳ ಸೂತ್ರ 3 ತೊಲೆ 90,000/- ರೂಪಾಯಿಗಳದ್ದು ದೋಚಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ನಿರ್ಮಲಾ ರವರ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಎರಡು (2) ಮೋಟಾರ ಸೈಕಲುಗಳು ಜಪ್ತಿ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಮಹಾತ್ಮ ಬಸವೇಶ್ವರ ನಗರ ವೃತ್ತದ ಸಿಪಿಐ ರವರ ಮಾರ್ಗದರ್ಶದಲ್ಲಿ ದಿನಾಂಕ:16/02/2013 ರಂದು ಬೆಳಗ್ಗೆ 5-00 ಎ.ಎಮ ಕ್ಕೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಕರ್ತವ್ಯದಲ್ಲಿದ್ದಾಗ ಓಂ ನಗರ ಗೇಟ್ ಹತ್ತಿರ 3 ಜನರು ಕೂಡಿಕೊಂಡು 2 ಮೋಟಾರ ಸೈಕಲಗಳೊಂದಿಗೆ ಸಂಶಯ ರೀತಿಯಲ್ಲಿ ನಿಂತಿದ್ದು ಇನ್ನೊಬ್ಬನು ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದನ್ನು ವಿಚಾರಿಸಲು ಅವರು ನಮ್ಮಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಹಿಡಿದು ಕೂಲಂಕುಶವಾಗಿ ವಿಚಾರಿಸಲು ಅವರ ಹೆಸರು ಶೇಖ್ ಇಮ್ರಾನ್ @ ಇಮ್ರಾನ್ ತಂದೆ ಅಬ್ದುಲ ಗಫಾರ ಶೇಖ್ ವಯಃ 18 ವರ್ಷ ಉಃ ಗೌಂಡಿ ಕೆಲಸ ಜಾತಿಃ ಮುಸ್ಲಿಂ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ಕಾಳಪ್ಪ ತಂದೆ ಸುಭಾಷ ಹುಸುರ ವಯಃ23 ವರ್ಷ ಉಃ ಲಾರಿ ಡ್ರೈವರ ಜಾತಿಃ ಲಿಂಗಾಯತ ಸಾಃ ಕಾಳನೂರ ತಾಃಜಿಃ ಗುಲಬರ್ಗಾ,ಮೋಹಸೀನ ತಂದೆ ಇಮಾಮ್ ಪಟೇಲ ವಯಃ 18 ವರ್ಷ ಜಾತಿಃ ಮುಸ್ಲಿಂ ಉಃ ಗೌಂಡಿಕೆಲಸ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ನಾಗರಾಜ ತಂದೆ ಮಲ್ಲಣ್ಣಾ ಅವುಂಟಗಿ ವಯಃ 24 ವರ್ಷ ಉಃ ರಘೋಜಿ ಫೈನಾನ್ಸದಲ್ಲಿ ಕೆಲಸ ಜಾತಿಃ ಲಿಂಗಾಯತ ಸಾಃ ಶಿವಾಜಿ ನಗರ ಮಲ್ಲಿಕಾರ್ಜುನ ಗುಡಿ ಹತ್ತಿರ ಗುಲಬರ್ಗಾ ಅಂತಾ ತಿಳಿದಿದ್ದು. ಇವರ ಹತ್ತಿರವಿದ್ದ 2 ಮೋಟಾರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ 2 ಮೋಟಾರ ಸೈಕಲಗಳು ವಿಶ್ವವಿದ್ಯಾಲಯ ಮತ್ತು ರೋಜಾ ಪೊಲೀಸ ಠಾಣಾ ವ್ಯಾಪ್ತಿ ಕಳುವು ಮಾಡಿರುವುದಾಗಿ ಹೇಳಿದ್ದು, ಅವರ ಹತ್ತಿರವಿದ್ದ ಮೋಟಾರ ಸೈಕಲ್ Hero Honda Splender + Black Colour M/c No. KA 32 U 7285, Chassis No. MBLHA10EE89J32026, Engine No. HA10EA89J38209 H ಅಃಕಿಃ 25,000/- ರೂ. 2) Bajaj Company M/c No. KA 32 G 9065, Chassis No. MD2DDDZZZNWJ71396, Engine No. DUMBNJ27434 ಅಃಕಿಃ 25,000/- ನೇದ್ದವುಗಳನ್ನು ಜಪ್ತಿ  ಮಾಡಿಕೊಂಡು ಠಾಣೆ ಗುನ್ನೆ ನಂ: 25/2013 ಕಲಂ.41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರಿಮತಿ ಗಂಗಮ್ಮ ಗಂಡ ತಿಪ್ಪಣ್ಣಾ ಹುಚ್ಚನ ವ: 70 ವರ್ಷ ಸಾ||ಫರಹತಾಬಾದ ರವರು ನಾನು ಮತ್ತು ನನ್ನ ಗಂಡ ದಿನಾಂಕ 15/2/2013 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಮನೆಯಲ್ಲಿರುವಾಗ ನಮ್ಮ ಅಣ್ಣತಮ್ಮಕಿಯವರಾದ ಶಾರದಾಬಾಯಿ ಗಂಡ ಮಲಕಪ್ಪಾ ಹುಚ್ಚನ ಇವಳೊಂದಿಗೆ ನಳದ ನೀರಿನ ಸಂಬಂಧವಾಗಿ ಬಾಯಿ ಮಾತಿನ ಜಗಳ ವಾಗಿತ್ತು. ರಾತ್ರಿ 10:00 ಗಂಟೆಯ ಸುಮಾರಿಗೆ ಉಟ ಮಾಡಿಕೊಂಡು ಮಲಗಿಕೊಂಡಿದ್ದಾಗ ನಮ್ಮ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಯಾಕೆ ಬೈಯುತ್ತಿದ್ದಿರಿ ಅಂತಾ ಕೇಳಿದಕ್ಕೆ ಕಟ್ಟಿಗೆಯಿಂದ ಹೋಡೆದು ಗಾಯ ಮಾಡಿರುತ್ತಾಳೆ. ಸೋನುಬಾಯಿ ಇವಳು ಸಹ ಹೋಡೆದಿರುತ್ತಾಳೆ. ಜಗಳ ಬಿಡಿಸಲು ಬಂದ ನನ್ನ ಗಂಡನಿಗೆ ಮಲಕಪ್ಪ ಹುಚ್ಚನ ಇತನು ನೂಕಿ ಕೊಟ್ಟು ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ, 323, 324, 504, 506 ಸಂಗಡ 14 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸಚಿನ ತಂದೆ ಸೋಮಣ್ಣ ಸಂಬಿನೂರ ವ|| 19 ವರ್ಷ, ಉ|| ವಿದ್ಯಾರ್ಥಿ,ಸಾ|| ವಿಜಯ ನಗರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ 16-02-2013 ರಂದು ಸಾಯಂಕಾಲ 6-30 ಗಂಟೆಗೆ ಮನೆಯ ಮುಂದೆ ಕುಳಿತಾಗ ಪ್ರಶಾಂತ ತಂದೆ ರಜನಿಕಾಂತ, ಗಜ ತಂದೆ ರಾಜಕುಮಾರ ಬಂದು ನನಗೆ ಕರೆದು ನಿನ್ನ ಮೊಬೈಲ್ ಕೊಡು ಅಂತ ಅಂದಾಗ, ನನ್ನ ಮೊಬೈಲ್ ನಿಮಗೇಕೆ ಕೊಡಬೇಕು ಅಂತ ಅಂದಾಗ ಇಬ್ಬರೂ ಕೂಡಿ ಅವಾಚ್ಯದಿಂದ ಬೈಯುತ್ತಾ ಹೊಡೆಯ ಹತ್ತಿದರು. ನಾನು ಚೀರಾಡುತ್ತಿದ್ದಾಗ, ನನ್ನ ಎಡಗೈ ತಿರುವಿ, ಓಡಿ ಹೋಗಿದ್ದರು. ರಾತ್ರಿ 8-15 ಗಂಟೆಯ ಸುಮಾರಿಗೆ ಮತ್ತೆ ಅವರಿಬ್ಬರು ಮನೆಯ ಹತ್ತಿರ ಬಂದು, ಮನೆಯ ಮೇಲೆ ಕಲ್ಲು ತೂರಾಡಿ ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ;17/2013 ಕಲಂ 341, 323, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ತಂದೆಯ ಮೇಲೆ ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಹಾಜಿ ಕರೀಮ ತಂದೆ ಅಲಿಸಾಬ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ನಾನು ದಿನಾಂಕ:15/02/2013 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮನೆಗೆ ಬರುತ್ತಿದ್ದಾಗ ನನ್ನ ಮಗನಾದ ಮಹ್ಮದ ಫಿರೋಜ ಇತನು ನೀನು ಮನೆಗೆ ಬರಬೇಡ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದನು, ಮಹ್ಮದ ಅಮಜದ, ಫೀರೋಜ, ಶಾಹೀನ ಗಂಡ ಅಮಜದ, ಫರಜಾನ ಬೇಗಂ ಗಂಡ ಮಹ್ಮದ ಫಿರೋಜ ಇವರು ಬಂದು ನೀನು ಮನೆಗೆ ಬರುವದು ಬೇಡ ಅಂತಾ ಹೊಟ್ಟೆಗೆ ಹೊಡೆದು ಕೈಯಿಂದ ಕುತ್ತಿಗೆಗೆ ಒತ್ತಿದನು. ಆಗ  ಜಗಳ ಜಗಳದ ಸಪ್ಪಳ ಕೇಳಿ ಮಹ್ಮದ ರೀಯಾಜ, ಮಹ್ಮದ ಸಿದ್ದಿಕ ಇವರು ಬಿಡಿಸಲು ಬಂದಾಗ ಮಹ್ಮದ ರಿಯಾಜನಿಗೆ ಮಹ್ಮದ,  ಮಹ್ಮದ ಸಿದ್ದಿಕ ಇವರಿಗೆ ಬಡಿಗೆಯಿಂದ ತಲೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ:147,148,341,323,324,504,506,307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

16 February 2013

GULBARGA DISTRICT REPORTED CRIMES


ಹೆತ್ತ ಮಗನಿಂದಲೆ ತಂದೆಯ ಕೊಲೆ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ 15-02-2013 ರಂದು ರಾತ್ರಿ 8-00  ಗಂಟೆಗೆ ಕಲ್ಯಾಣಿ ತಂದೆ ಮಲ್ಲಣ್ಣ ಗಾಣಿಗೇರ ವಯ:22 ವರ್ಷ ಸಾ:ಕುಮ್ಮನಶಿರಸಗಿ ಇತನು ತನ್ನ ತಂದೆಗೆ ಸರಾಯಿ ಕುಡಿಯಲು ಹಣ ಕೇಳಿದ್ದು ಆಗ ನನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದ್ದಕ್ಕೆ ಕಲ್ಯಾಣಿ ಇತನು ಹಣ ಕೊಡುವದಿಲ್ಲ ಮಗನೇ ಇವತ್ತು ನಿನಗೆ ಖಲಾಸ್ ಮಾಡಿಯೇ ಬಿಡುತ್ತೇನೆ ಅಂತಾ ತಕರಾರು ಮಾಡಿದ್ದನು. ತನ್ನ ತಂದೆ ಮಲ್ಲಣ್ಣ ಇತನು ಅರಳಗುಂಡಗಿ ಮಡ್ಡಿ ಹೊಲದಲ್ಲಿ ಮಲಗಿಕೊಂಡಾಗ ಕಲ್ಯಾಣಿ ಇತನು ಮಲಗಿಕೊಂಡ ತನ್ನ ತಂದೆಗೆ ಅಲ್ಲೇ ಇದ್ದ ಕೊಡಲಿಯಿಂದ ಕುತ್ತಿಗೆಗೆ ಹಾಗು ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಕೊಲೆ ಮಾಡಿದ ಮಗನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮೃತನ ಹೆಂಡತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ,302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಾಲೆಯಲ್ಲಿರುವ ಟಿವಿ ಕಳ್ಳತನ ಮಾಡಿದ ಬಗ್ಗೆ:
ವಾಡಿ ಪೊಲೀಸ್ ಠಾಣೆ: ನಮ್ಮ ಶಾಲೆಯ 1 ನೇ ತರಗತಿಯಲ್ಲಿಟ್ಟಿದ್ದ ಒಂದು ಸ್ಯಾಮಸಂಗ ಕಲರ್ ಟಿವಿ, ಮತ್ತು ಬ್ಯಾಟ್ರಿ ಯಾರೊ ಕಳ್ಳರು ದಿನಾಂಕ:10-02-2013 ರಿಂದ 13-02-2013 ರ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರಿಮತಿ ಮೆರಿಯಮ್ಮಾ ಗಂಡ ಸೊಮಶೇಖರ ಬೆಳ್ಳೆ ಸರಕಾರಿ ಮಾದರಿಯ ಪ್ರಾಥಮೀಕ ಶಾಲೆ ನಾಲವಾರದ ಪ್ರಭಾರ ಮುಖ್ಯ ಗುರುಗಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 454, 457, 380 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರೆಂಟ ಮೋಟಾರ ವೈರ ಕಳ್ಳತನ ಮಾಡಿದ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಬಸಪ್ಪ ತಂದೆ ಭೂತಾಳಿ ಕೌಲಗಿ ಸಾ:ಮಾದನ ಹಿಪ್ಪರಗಾ ರವರು ಖೇಡ ಉಮರ್ಗಾ ಸೀಮಾಂತರ ಹೊಲ ಸರ್ವೆ ನಂ:43/1 ರಲ್ಲಿನ ಬಾವಿಗೆ ಅಳವಡಿಸಿದ ಕರೆಂಟ್ ಮೋಟಾರ ವೈರ್ 600 ಪೀಟ್ ಗಳದ್ದು, ದಿನಾಂಕ:12/02/2013 ರ ರಾತ್ರಿ 10-00 ಗಂಟೆಯಿಂದ ಬೆಳಗಿನ ಜಾವ 5-00 ಮಧ್ಯದಲ್ಲಿ ವಾಲ್ಕು ತಂದೆ ಸಕ್ಕರಾಮ ಪವಾರ,ಸಕಾರಾಮ ತಂದೆ ಕಲ್ಲಪ್ಪ ಪವಾರ ಸಾ:ಝಳಕಿ (ಬಿ) ಹಾ:ವ: ಹಡಲಗಿ ತಾ:ಆಳಂದ  ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶರಣಬಸಪ್ಪಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ. ನಂ:19/2013 ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಗುಲಬರ್ಗಾ ಜಿಲ್ಲೆಯ ವಿಶೇಷ ಪೊಲೀಸ್ ಘಟಕ ಅಧಿಕಾರಿಗಳಿಂದ ಮಟಕಾ ಜೂಜುಕೊರರ ಬಂಧನ; ಬಂಧಿತರಿಂದ ನಗದು ಹಣ 17,650/- ರೂಪಾಯಿಗಳು ಜಪ್ತಿ.
        ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಮತ್ತು ಮಾನ್ಯ ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ನಗರದ ರಾಜಪೂರ ಅಟೋ ಸ್ಟಾಂಡ ಹತ್ತಿರ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಶೇಷ ಘಟಕದ ಪೊಲೀಸ್ ಅಧಿಕಾರಿಯಾದ ಶ್ರೀ ಎಸ್.ಎಸ್. ಹುಲ್ಳೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ, ಹಾಗೂ ಸಿಬ್ಬಂದಿಯವರಾದ ದತ್ತಾತ್ರಯ ಎ.ಎಸ.ಐ, ಹೆಚ.ಸಿ. ಗಳಾದ ಅಣ್ಣಪ್ಪಾ ಬೆಳ್ಳೆ, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಹಾಗೂ ಜೀಪ ಚಾಲಕನಾದ ವೀರಣ ಪಿಸಿ ರವರು ಹಾಗೂ ವಿಶ್ವ ವಿಧ್ಯಾಲಯ ಪೊಲೀಸ್ ಠಾಣೆಯ ಪಿ.ಎಸ.ಐ. ರವರಾದ ಶ್ರೀ ಪ್ರದೀಪ ಭಿ.ಸೆ, ಮತ್ತು ಅವರ ಸಿಬ್ಬಂದಿಯವರು ದಿನಾಂಕ:15-02-2013 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ರಾಜಾಪೂರ ಅಟೋಸ್ಟಾಂಡ್  ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ 3 ಜನರು ಮಟಕಾ ಜೂಜಾಟದಲ್ಲಿ ತೊಡಗಿವರ ಮೇಲೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾದ ಭೀಮಶ್ಯಾ  ತಂದೆ ಅಡಿವೆಪ್ಪಾ ಮಾಶಳಕರ ಸಾ||ರಾಜಾಪೂರ ಇತನ ಹತ್ತಿರದಿಂದ ಮಟಕಾ ಜೀಟಿಗಳು ಮತ್ತು ನಗದು ಹಣ 17650/- ರೂಪಾಯಿಗಳು ಜಪ್ತಿ ಮಾಡಿಕೊಂಡಿರುತ್ತಾರೆ. ಹಾಗೂ ಬೀಮಶ್ಯಾ ಇತನ ಜೊತೆಗಿದ್ದ ಓಡಿ ಹೋದವರ ಹೆಸರುಗಳು ವಿಚಾರಿಸಲು ಸುನಿಲ, ಹಾಗೂ ಅನೀಲ ಅನ್ನುವವರು ಓಡಿ ಹೋಗಿರುತ್ತಾರೆ. ಸದರಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. 

ಕೊಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:15/02/13 ರಂದು 5.45 ಎಎಂ ಸುಭಾಸ ತಂದೆ ಶರಣಪ್ಪಾ ಅನ್ನುವವರು ಪೋನ ಮಾಡಿ, ನಿಮ್ಮ ತಮ್ಮ ಚಂದ್ರಕಾಂತ ಇತನಿಗೆ ಯಾರೋ ದುಷ್ಕರ್ಮಿಗಳು ಮಾಲಗತ್ತಿ ಗ್ರಾಮದ ಹೊಡ್ಡಿನಮನಿ ಸಂಧಿಯಲ್ಲಿ ಎರಡು ಪರ್ಸಿಕಲ್ಲು ತುಕಡಿಗಳಿಂದ ತಲೆಯ ಮೇಲೆ ಹೊಡೆದು ತಲೆಯಲ್ಲಿ ಭಾರಿ ರಕ್ತಗಾಯವಾಗಿ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಪ್ರಕಾಶ ತಂದೆ ಶರಣಪ್ಪ ಹಾಗೂ ಹೊನ್ನಪ್ಪ ತಂದೆ ಸಂಗಣ್ಣಾ ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನ ಶವವು ಮಾಲಗತ್ತಿ ಗ್ರಾಮದ ಹೊಡ್ಡಿನ ಮನಿ ಸಂಧಿಯಲ್ಲಿ ಅಂಗಾತವಾಗಿ ಬಿದ್ದಿದ್ದು ಎಡಗೈ ಭುಜದವರೆಗೆ ಮಡಚಿದ್ದು, ಬಲಗೈ ಮಗ್ಗಲಲ್ಲಿ ಚಾಚಿದ್ದು ಎರಡು ಕಾಲುಗಳು ಸೀದಾ ಇದ್ದು ಹಣೆಯ ಮೇಲೆ 2 ಇಂಚು ಉದ್ದ ಮತ್ತು ½ (ಅರ್ಧ) ಇಂಚ ಅಗಲದಷ್ಟು ಸಿಳಿದಂತೆ ಕಂಡು ಬರುತ್ತಿದ್ದು ತಲೆಯ ಮೇಲಿಂದ ಹಣೆಯ ಮೇಲಿಂದ ರಕ್ತ ಬರುತ್ತಿದ್ದು ರಕ್ತದ ಮಡುವಿನಲ್ಲಿ ತಲೆಯ ಕಂಡುಬರುತ್ತಿದ್ದನನ್ನು ನೋಡಿರುತ್ತೆನೆ. ನನ್ನ ತಮ್ಮನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂಬ ಅಂತಾಶ್ರೀ ಬಸವರಾಜ ತಂದೆ ನಾನಾಸಾಬ ಮಡಿವಾಳ ಉ:ಕೆ.ಎಸ್‌.ಆರ್‌‌.ಟಿ.ಸಿ ಮೆಕ್ಯಾನಿಕ್ ಕಾಳಗಿ ಡಿಪೋ ಸಾ:ಮಾಲಗತ್ತಿ ಹಾ:ವ:ಚನ್ನವೀರ ನಗರ ಪಿಲ್ಟರ ಬೇಡರೋಡ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 20/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರುಕ್ನೋದ್ದಿನ ತಂದೆ ಅಬ್ದುಲ ಹಮೀದ ಮಜಾವರ ಸಾ||ಹೊನಗುಂಟಾ  ರವರು ದಿನಾಂಕ:11-02-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಶಹಾಬಾದದ ಮೇನ ಬಜಾರದ ಡಾ||ಕೋರಿ ದವಾಖಾನೆ ಮೇಡಿಕಲ್ ಅಂಗಡಿ ಎದುರಿಗೆ ನಿಂತಾಗ ಮಲ್ಲಣ್ಣಾ ಗೋಳಾ ಅಂಗಡಿ ಕಡೆಯಿಂದ ಆಟೋ ನಂ.ಕೆಎ-32/3352 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾನು ನನ್ನ ಮೋಟಾರ ಸೈಕಲ ನಂ.ಕೆಎ-32/ಎಲ್‌-9627 ನೇದ್ದರ ಹತ್ತಿರ ನಿಂತಿರುವಾಗ  ಡಿಕ್ಕಿ ಪಡಿಸಿದ್ದರಿಂದ  ನನಗೆ ಕಪಾಳ ಮೇಲೆ ಹಾಗೂ ಮೇಲಕಿನ ಹತ್ತಿರ ಮತ್ತು ಬಲಗೈ ಕಿರುಬೆರಳು ಮುರಿದಿದೆ ಹಾಗೂ ಎಡಭಾಗ ಹಲ್ಲುಗಳಿಗೆ ತೊಂದರೆಯಾಗಿದೆ ಅಂತಾ ದೂರು ಸಲ್ಲಿಸಿದ್ದರಿಂದ  ಠಾಣೆ ಗುನ್ನೆ ನಂ: 21/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶಿವಕುಮಾರ ತಂದೆ ಅನಂತಪ್ಪ ಗೋಟಗಿ ಸಾ:ಹಾಬಾಳ (ಟಿ) ಗ್ರಾಮ ತಾ:ಸೇಡಂ ರವರು ನಾನು ಮತ್ತು ನಮ್ಮ ಗೆಳೆಯರಾದ ರಾಜು ತಂದೆ ಕಲ್ಲಪ್ಪ ಹೆಳೂರ,ಸಿದ್ದು ತಂದೆ ತಂದೆ ನರಸಪ್ಪ ವಡ್ಡರ, ರಾಜು ತಂದೆ ಹಣಮಂತ ಸಿನಿಮಾದೊರ ಹಾಗೂ ರಾಜು ಹೆಳೂರ ಇತನ ಸಂಭಂದಿಕರು ಕೂಡಿಕೊಂಡು ದಿನಾಂಕ:15-02-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಹಣಮಂತ ತಂದೆ ಕಲ್ಲಪ್ಪ ಹೆಳೂರ ಇತನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ದಂತಾಪೂರ ಗ್ರಾಮಕ್ಕೆ ಎರಡು ಮೋಟಾರು ಸೈಕಲಗಳು, ಹಾಗೂ ಕ್ರೂಸರ್ ಜೀಪನಲ್ಲಿ ಹೋಗಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರು ಸೈಕಲ್ ನಂ- ಕೆಎ-32 ಇಬಿ-1883 ನೇದ್ದು ಸಿದ್ದು ವಡ್ಡರ ನಡೆಸುತ್ತಿದ್ದನು. ನಾನು ಮತ್ತು ರಾಜು ಮೊಟಾರು ಸೈಕಲ್ ನಂ-ಕೆಎ-32 ಎಕ್ಸ್-7432 ನೇದ್ದರ ಮೇಲೆ ಅವರ ಹಿಂದೆ ಹೋಗುತ್ತಿದ್ದೆವು. ಸಿದ್ದು ಇತನು ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಂಜೋಳ ಗ್ರಾಮದ ನಂತರ ರೋಡ ಸಲುವಾಗಿ ಹಾಕಿದ ಕಂಕರಗಳು (ಕರಿಕಲ್ಲುಗಳು) ಇದ್ದುದ್ದರಿಂದ ಸಿದ್ದು ಇತನು ಮೋಟಾರು ಸೈಕಲಗೆ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ಒಮ್ಮೆಲೆ ಸ್ಕಿಡ್ ಆಗಿ ಬಿತ್ತು ಸಿದ್ದು ವಡ್ಡರ ಹಾಗೂ ರಾಜು ತಂದೆ ಕಲ್ಲಪ್ಪ ಹೆಳೂರ ಇಬ್ಬರೂ ಕೆಳಗೆ ಬಿದ್ದರು ನಂತರ ನೋಡಲು ರಾಜು ಹೇಳೂರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬರುತ್ತಿತ್ತು ಮತ್ತು ಬಲಗಾಲಿನ ಹಿಮ್ಮಡಿಗೆ ಸಹ ಭಾರಿ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಿದ್ದು ವಡ್ಡರ ಇತನಿಗೆ ಭಾರಿ ರಕ್ತಗಾಯವಾಗಿತ್ತು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇಡಂಕ್ಕೆ ತೆಗೆದುಕೊಂಡು ಬಂದಾಗ ರಾಜು ಹೆಳೂರ ಇತನು ಮೃತಪಟ್ಟಿರುತ್ತಾನೆ ಅಂತ ವೈದ್ಯಾಧಿಕಾರಿಗಳು ತಿಳಿಸಿದರು. ವೈದ್ಯಾಧಿಕಾರಿಗಳು ಸಿದ್ದು ವಡ್ಡರ ಇತನು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆತನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ-279, 337, 338, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ನನ್ನ ಅಣ್ಣ ಮಹಮದ ಇಸೂಫ ಇತನಿಗೆ ನಾನು 2010 ನೇ ಸಾಲಿನಲ್ಲಿ ರೂ.1,40,000/- ಹಣವನ್ನು ಮನೆಯ ಅಡಚಣೆ ಸಲುವಾಗಿ ಕೊಟ್ಟಿದ್ದು, ಸದರಿ ಹಣವನ್ನು ಮರಳಿ ಕೊಡು ಅಂತಾ ಕೇಳಿದ್ದಕ್ಕೆ ದಿನಾಂಕ:16/02/2013 ರಂದು ಮಧ್ಯರಾತ್ರಿ 00.30 ಗಂಟೆ ಸುಮಾರಿಗೆ ಟವೇರಾ ವಾಹನ ನಂ.ಕೆಎ-01/ಎಮ್‌-9226 ನೇದ್ದರಲ್ಲಿ, ಮೊಹ್ಮದ ಇಸೂಫ ತಂದೆ ಹಾಜೀಕರೀಮ,ಮೊಹ್ಮದ ರಿಯಾಜ ತಂದೆ ಹಾಜಿ ಕರೀಮ, ಸಿದ್ದೀಕ ತಂದೆ ಇಸೂಫಸಾಬ, ಮೊಹ್ಮದ ಮೇರಾಜ ತಂದೆ ಹಾಜೀಕರೀಮ,ಹಾಜಿ ಕರೀಮ ತಂದೆ ಅಲಿಸಾಬಶೇಖ  ಹಾಗೂ ಶಾಹೇದ ಬೇಗಂ ಗಂಡ ಸೈಯಸದರೋದ್ದಿನ ರವರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಬಡಿಗೆಯಿಂದ ಮತ್ತು ಕೈಯಿಂದ ಎಡಗಾಲ ಮೊಳಕಾಲಿನ ಕೆಳಗೆ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲಿಯೇ ಬಿದ್ದ ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸಗಳಿಗೆ ಹೊಡೆದು ಪುಡಿಮಾಡಿದರು. ನನ್ನ ಅಣ್ಣ ಪಿರೋಜ ಖಾನ ಮತ್ತು ತಮ್ಮ ಮಹ್ಮದ ಫಯಾಜ ಇವರು ಜಗಳ ಬಿಡಿಸಲು ಬಂದಾಗ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿಯಲು ಬಂದಾಗ ಬಲಗಡೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ ಬಲಗಡೆ ಭುಜಕ್ಕೆ ಚಾಕುವಿನಿಂದ ಚುಚ್ಚಿದ್ದರಿಂದ ರಕ್ತಗಾಯವಾಗಿರುತ್ತದೆ ಹಾಗೂ ಬಡಿಗೆಯಿಂದ ಎರಡು ಕೈಗಳ ಭುಜಕ್ಕೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಪಡಿಸಿರುತ್ತಾರೆ. ಶಾಹೀನ ಬೇಗಂ ಮತ್ತು ಫರಜಾನ ಬೇಗಂ ರವರಿಗೆ ಮಾನಭಂಗ ಮಾಡಲು ಪ್ರಯತ್ನ ಮಾಡಿ, ಕೈಯಿಂದ ಹೊಡೆದು ಬೈದಿರುತ್ತಾರೆ ಅಂತಾ ಶ್ರೀ ಮಹ್ಮದ ಅಮ್ಜದ ತಂದೆ ಹಾಜಿ ಕರೀಮ ಶೇಖ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ  ನಂ:22/2013  ಕಲಂ: 147,148,323,324,504,307,354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.