POLICE BHAVAN KALABURAGI

POLICE BHAVAN KALABURAGI

27 December 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ರೇಖಾ ಗಂಡ ಕಿರಣಕುಮಾರ ಉ|| ಬೆರಳಚ್ಚುಗಾರರು ಸಂಚಾರಿ ಪೀಠ, ಸಾ|| ಹೈಕೊರ್ಟ ಪೀಠ ಕ್ವಾಟ್ರಸ್ ಗುಲಬರ್ಗಾರವರು ನಾನು ದಿನಾಂಕ:21/12/2012 ರಂದು ಸಂಜೆ ರಜೆಯ ಮೇಲೆ ಬೆಂಗಳೂರಿಗೆ (ಸ್ವಂತ ಊರಿಗೆ) ಹೋಗಿದ್ದು,ಇನ್ನೊಂದು ಕೀ ನನ್ನ ಹತ್ತಿರವಿದ್ದು,ನಾನು ದಿನಾಂಕ:15/12/2012 ರಂದು ನನ್ನ ಸ್ವಂತ ಊರು ಮಂಗಳೂರಿಗೆ ಹೋಗಿರುತ್ತೆನೆ. ನಾನು ನಮ್ಮ ಊರಿನಿಂದ ಮರಳಿ ಬಂದು ಬೀಗ ತೆರೆಯಲು ಹೋದಾಗ ಬಾಗಿಲನ ಕೊಂಡಿಯು ಸ್ಕ್ರೂ ಬಿಚ್ಚಿದ್ದು ಒಳಗೆ ಹೋಗಿ ನೋಡಲಾಗಿ ಬೆಡ್‌ರೂಮಿನಲ್ಲಿದ್ದ ಆಲಮಾರಿ ಬಾಗಿಲು ಮುರಿದಿದ್ದು ಬಟ್ಟೆಗಳೆಲ್ಳಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡು ನಾನು ಚಂದ್ರನಾಥರವರಿಗೆ ಪೋನ್‌ ಮಾಡಿ ಕೇಳಲಾಗಿ ಮನೆಯ ಕಳ್ಳತನವಾದ ಬಗ್ಗೆ ತಿಳಿಸಿದ್ದು, ಅವರು ಹೇಳಿದ್ದೇನೆಂದರೆ ಅಲ್ಮಾರಿಯಲ್ಲಿ ನಗದು ಹಣ ಸುಮಾರು 500/- ಹಾಗೂ ನಾಲ್ಕು ಗ್ರಾಂ ಬಂಗಾರ ಇಟ್ಟಿದ್ದನೆಂದು ಹೇಳಿರುತ್ತಾರೆ. ಹೀಗೆ ಒಟ್ಟು ನಗದು ಹಣ ಮತ್ತು ಬಂಗಾರ ಕೂಡಿ ರೂ 12500/- ಮೌಲ್ಯದ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ21/12/2012 ರಾತ್ರಿಯಿಂದ ದಿನಾಂಕ 26/12/2012 ರ ಬೆಳಿಗ್ಗೆ 8:30 ಗಂಟೆ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 432/2012 ಕಲಂ, 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಗೋಪಾಲರಾವ ತಂದೆ ವಿಶ್ವನಾಥ ಸೂರ್ಯವಂಶಿ  ಉ: ಅಟೋಚಾಲಕ  ಸಾ:ಮಾಣಿಕೇಶ್ವರ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ  ರಾಧಾ ಸೂರ್ಯವಂಶಿ ರವರು ಇಬ್ಬರೂ ಕೂಡಿಕೊಂಡು ದಿನಾಂಕ 22-12-12 ರಂದು ಮನೆಯ ಸಾಮಾನುಗಳು ಖರೀದಿಸಿಬೇಕಾಗಿರುವದರಿಂದ ತಿಮ್ಮಾಪೂರ ಸರ್ಕಲಕ್ಕೆ ಬಂದು ಸುಪರ ಮಾರ್ಕೆಟಕ್ಕೆ ಅಟೋ ಮುಖಾಂತರ ಹೋಗಬೇಕು ಅಂತಾ ರಸ್ತೆ ದಾಟುತ್ತಿರುವಾಗ ಮಿನಿವಿಧಾನ ಸೌಧ ಕಡೆಯಿಂದ ಮೋಟಾರ ಸೈಕಲ ನಂಬರ:ಕೆಎ-32/ಇಎ-8677 ಸವಾರ  ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ದಿನಾಂಕ:26-12-2012 ರಂದು ಸಾಯಂಕಾಲ 19-15 ಗಂಟೆಗೆ ಗೋಪಲರಾವ ರವರು ಅರ್ಜಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ, 279, 338 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀಮತಿ, ಲಕ್ಷ್ಮಿ ಗಂಡ ನಾಗೇಶ ಸಾತಾಳವಯ|| 25 ವರ್ಷ|| ಮನೆ ಕೆಲಸ,ಜಾತಿ|| ಭೋವಿ ವಡ್ಡರಸಾ||ನಿಟ್ಟುನಹಳ್ಳಿ ಬಸ್ಸ ನಿಲ್ದಾಣ ಹತ್ತಿರ ದಾವಣಗೆರೆ, ಹಾ|||| ಪೊಲೀಸ ವಸತಿ ಗೃಹ ಡಿ.ಎ.ಆರ್ ಕೇಂದ್ರ ಸ್ಥಾನ ಗುಲಬರ್ಗಾರವರು ನನ್ನ ಗಂಡನಾದ ನಾಗೇಶ ಇವನು ಸುಮಾರು ವರ್ಷಗಳಿಂದ ಗುಲಬರ್ಗಾದ ಬಹುಮನಿ ಹೊಟೇಲದಲ್ಲಿ ಕೆಲಸ ಮಾಡುತ್ತಿದ್ದನು. ನಾನು ಮತ್ತು ನನ್ನ ಗಂಡ ಇಬ್ಬರು ಕೂಡಿ ದೀಪಾವಳಿ ಹಬ್ಬಕ್ಕೆ ದಾವಣಗೆರೆಯಿಂದ ಗುಲಬರ್ಗಾದ ಪೊಲೀಸ ವಸತಿ ಗೃಹಕ್ಕೆ ಬಂದಿರುತ್ತೇವೆ. ದಿನಾಂಕ:24/11/2012 ರಂದು ನನ್ನ ಗಂಡ ಮತ್ತು ನನ್ನ ಅಣ್ಣನಾದ ಭೀಮಾಶಂಕರ ಇಬ್ಬರು ಕೂಡಿಕೊಂಡು ಆದಿತ್ಯ ಹೊಟೇಲ ಹತ್ತಿರ ಇರುವ ಹೆಚ್.ಡಿ.ಎಫ.ಸಿ ಬ್ಯಾಂಕಿಗೆ ಎ.ಟಿ.ಎಮ್ ಪಿನಕೋಡ ನಂಬರ ನೋಡಲು ಹೋಗುತ್ತೇವೆ ಅಂತಾ ಹೇಳಿ ಮನೆಯಿಂದ ಹೋದರು. ನಂತರ ನನ್ನ ಅಣ್ಣ ಮನೆಗೆ ಬಂದು ಹೇಳಿದ್ದೆನೆಂದರೆ, ನಾಗೇಶನು ಬ್ಯಾಂಕಿನಲ್ಲಿ ಇರುವಾಗ ನನಗೆ ಪೋನ್ ಬಂದಿದೆ ಹೊರಗೆ ಹೋಗಿ ಮಾತಾಡುತ್ತೇನೆ ಅಂತಾ ಹೊರಗೆ ಹೋದವನು ಬ್ಯಾಂಕ ಒಳಗಡೆ ಬಂದಿರುವದಿಲ್ಲ.ನಾನು 2-3 ತಾಸು ಬ್ಯಾಂಕಿನಲ್ಲಿ ಕುಳಿತುಕೊಂಡು ಅವನು ಬರದೆ ಇರುವದರಿಂದ ಮನೆಗೆ ಬಂದಿರುತ್ತೇನೆ ಅಂತಾ ಹೇಳಿದನು. ನಾನು ಕೂಡ ನನ್ನ ಗಂಡನು ಬರಬಹುದೆಂದು ತಿಳಿದು ಸುಮ್ಮನೆ ಇದ್ದೇನು. ನನ್ನ ಗಂಡನು ಹೋಗಿದ್ದ ದಿನದಿಂದ ಪೋನದಲ್ಲಿ ಮಾತಾಡಿರುವದಿಲ್ಲ. ದಿನಾಂಕ:20-12-2012 ರಂದು ನನ್ನ ಭಾವನಾದ ನಾಗಭೂಷಣ ಇವರಿಗೆ ಮೊಬೈಲ ನಂ:09642522117 ನೇದ್ದರಿಂದ ಕಾಲ್ ಮಾಡಿ ನಾನು ತಿರುಪತಿಯಲ್ಲಿ ಇದ್ದೇನೆ ಬರುತ್ತೇನೆ ಅಂತಾ ಹೇಳಿರುತ್ತಾನೆ. ನಾನು ಈ ನಂಬರಗೆ ಕರೆ ಮಾಡಿದಾಗ ಯಾವುದೇ ಪ್ರತಿ ಕ್ರಿಯೆ ನೀಡಿರುವದಿಲ್ಲ. ನನ್ನ ಗಂಡನು ಮನೆಗೆ ಬರಬಹುದೆಂದು ತಿಳಿದು ತಡವಾಗಿ ಬಂದು ಈ ಅರ್ಜಿ ಕೊಟ್ಟಿರುತ್ತೇನೆ. ಕಾರಣ ನನ್ನ ಗಂಡನಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:140/2012 ಕಲಂ, ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಕಾಣೆಯಾದ ಮನುಷ್ಯನ ಚಹರೆ ಪಟ್ಟಿ : ವಯಸ್ಸು 31 ವರ್ಷ, ಎತ್ತರ- 57 ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ತೆಲಗು, ಕನ್ನಡ, ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಸದರಿಯವರನು ಬಿಳಿ ಚೌಕಡಿ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾನೆ. ಸದರಿ ಮನುಷ್ಯ ಕಂಡು ಬಂದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆ ದೂರವಾಣಿ ನಂ: 08472-263618, ಗುಲಬರ್ಗಾ ಕಂಟ್ರೊಲ್ ರೂಮ್ ನಂ: 08472-263604 ಅಥವಾ 9480803608 ಸದರಿಯವರ ಪಾಲಕರ ದೂರವಾಣಿ ಸಂ: 9591634932 ನೇದ್ದಕ್ಕೆ ಸಂಪರ್ಕಿಲಸು ಕೋರಲಾಗಿದೆ. 

26 December 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಸುದರ್ಶನಕುಮಾರ ತಂದೆ ಸಾಂಸೊನ್ ಸಾ|| ಪ್ಲಾಟ ನಂ. 37/ಎ ದತ್ತನಗರ ಎನ.ಜಿ.ಓ ಕಾಲೋನಿ ಗುಲಬರ್ಗಾ ರವರು ನನ್ನ ಪರಿಚಯದವರಾದ ಬೆಂಜಮಿನ್ ತಂದೆ ಸುಮಿತ್ರ ಎಂಬುವವರು ಶಕ್ತಿನಗರದಲ್ಲಿ ವಾಸವಾಗಿದ್ದು, ಅವರ ಹೆಂಡತಿ ಸುಲೋಚನಾ ರವರು ದಿನಾಂಕ:18-19/12/2012 ರಂದು ಬೆಂಗಳೂರಕ್ಕೆ ಹೋಗಿದ್ದು ದಿನಾಂಕ:24/12/2012 ರಂದು ಬೆಂಜಮೀನ್ ರವರು ಆಧೋನಿ ಆಂದ್ರಪ್ರದೇಶಕ್ಕೆ ಹೋಗಿರುತ್ತಾರೆ.  ಆಂದ್ರ ಪ್ರದೇಶಕ್ಕೆ ಹೋಗುವ ಕಾಲಕ್ಕೆ ಮನೆಗೆ ಹೋಗಿ ಬರಲು ತಿಳಿಸಿದ್ದರು. ಅದರಂತೆ ನಾನು ಅವರ ಮನೆಗೆ ಹೋಗಿ ರಾತ್ರಿ ವೇಳೆ ಲೈಟ ಹಾಕಿ ಬರುತ್ತಿದ್ದೆ. ದಿನಾಂಕ:26/12/2012 ರಂದು ಮುಂಜಾನೆ ಬೆಂಜಮೀನ್ ರವರ ಮನೆಗೆ ಹೋಗಿ ನೋಡಲು ಗೇಟಿಗೆ ಹಾಕಿದ ಕೀಲಿ ಆಗೆ ಇದ್ದು ಶಿಟೌಟದ ರೂಮ್ ಕೀಲಿ ಮುರಿದಿದ್ದು ನೋಡಿ  ಗಾಬರಿಗೊಂಡು ನೋಡಲು ಹಾಲದಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಬೆಡ ರೂಮಿನಲ್ಲಿ ಹೋಗಿ ನೋಡಲು ಎರಡು ಹಲಮಾರಿಗಳು ತೆರೆದಿದ್ದು ಆಲಮಾರಿಯಲ್ಲಿಟಿದ್ದ ಬಂಗಾರದ ಮಂಗಳಸೂತ್ರ 50 ಗ್ರಾಂ,ಬಂಗಾರದ ನಕ್ಲೆಸ 30 ಗ್ರಾಂ,ಬಂಗಾರದ ನಾಲ್ಕು ಉಂಗುರ ತಲಾ 5 ಗ್ರಾಂ ಒಟ್ಟು  20 ಗ್ರಾಂ,ಬಂಗಾರದ 15 ಗ್ರಾಂ ಸೌಸೆಕಾಯಿ ಸರ,ಬಂಗಾರದ ಎರಡು ಬಳೆ ಒಟ್ಟು 10 ಗ್ರಾಂ. ಹೀಗೆ ಒಟ್ಟು 125 ಗ್ರಾಂ. ಬಂಗಾರ ಅ.ಕಿ 3,75,000/- ರೂ. ಕಳುವಾಗಿದ್ದು ಮನೆಯವರು ಬಂದ ನಂತರ ಇನ್ನಿತರ ಸಾಮಾನುಗಳು ಕಳುವಾದ ಬಗ್ಗೆ ಗೊತ್ತಾಗುತ್ತದೆ ದಿನಾಂಕ:25-26/12/2012 ರ ಮಧ್ಯರಾತ್ರಿ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:119/2012 ಕಲಂ 457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪೊಲೀಸ್ ಪೇದೆಗಳ ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಗ್ಗೆ:
ಚೌಕ ಪೊಲೀಸ್ ಠಾಣೆ:ಶ್ರೀ ಗೋಪಾಲ ಪೊಲೀಸ್ ಪೇದೆ ಚೌಕ ಪೊಲೀಸ್ ಠಾಣೆ ಗುಲಬರ್ಗಾ ರವರು ನಾನು ಮತ್ತು ಸುನೀಲ ಪಿಸಿ ಕೂಡಿಕೊಂಡು ಬೀಟ ನಂ. 6ರಲ್ಲಿ ರಾತ್ರಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ದಿನಾಂಕ:25.12.12ರಂದು 23-00 ಗಂಟೆಗೆ ಹೋರಟು ಬೀಟ ಮಾಡುತ್ತಾ ಮಧ್ಯರಾತ್ರಿ 00-30 ಗಂಟೆಗೆ ಸಂಗಮ ಟಾಕೀಜ ಹತ್ತಿರ ಇರುವ ದ್ವಾರಕಾ ಹೋಟೆಲ ಮುಂದುಗಡೆ ಹೋಗುತ್ತಿದ್ದಾಗ ಅಲ್ಲಿ 4 ಜನ ರಸ್ತೆಯ ಮೇಲೆ ನಿಂತುಕೊಂಡಿದ್ದರಿಂದ ನಾವು ಅವರಿಗೆ ವಿಚಾರಿಸಿ ರಾತ್ರಿ ಬಹಳಷ್ಟು ಆಗಿದೇ ಮನೆಗೆ ಹೋಗಿರಿ ಅಂತ ಹೇಳಿದಕ್ಕೆ ಅವರಲ್ಲಿ ಒಬ್ಬನು ಅವಾಚ್ಯವಾಗಿ ಬೈದು, ನಮಗೇನು ಕೇಳುತ್ತೀರಿ ಅಂತಾ ಮಾತಾಡಿ ನನ್ನ ಸಂಗಡ ಇದ್ದ ಸುನೀಲ ಪೊಲೀಸ್ ಪೇದೆಯ ಸಮವಸ್ತ್ರ ಹಿಡಿದು ಎಳೆದಾಡುತ್ತಿದ್ದು, ನಾನು ಬಿಡಿಸಲು ಹೋದಾಗ ಇನ್ನಿಬ್ಬರು ಬಂದು ನನಗೂ ಸಹ ಹಾಗೆ ಮಾಡಿ ಮಾಡಿ ನಾವು ಇಲ್ಲಿಂದ ಹೋಗುವದಿಲ್ಲ ಏನು ಮಾಡುತ್ತಿರಿ ಅಂತ ಅವಾಚ್ಯವಾಗಿ ಬೈದಿದ್ದು ಮತ್ತೊಬ್ಬನು ತನ್ನ ಹತ್ತಿರವಿದ್ದ ಚಾಕು ತೋರಿಸಿ ನೀವು ಇಲ್ಲಿಂದ ಹೋದರೆ ಸರಿ ಇಲ್ಲದಿದ್ದರೆ ನಿಮಗೆ ಹೊಡೆದು ಖಲಾಸ ಮಾಡುತ್ತೇವೆ ಅಂತ ಕರ್ತವ್ಯ ನಿರ್ವಹಿಸಲು ಅಡೆತಡೆಯನ್ನುಂಟು ಮಾಡಿರುತ್ತಾರೆ. ಸದರಿಯವರ ಹೆಸರು ಬಂಡಯ್ಯಾ ತಂದೆ ಸಾತಲಿಂಗಯ್ಯಾ ಮಠಪತಿ ವ: 25 ವರ್ಷ ಉ: ಖಾನಾವಳಿ ವ್ಯಾಪಾರ ಜಾತಿ: ಜಂಗಮ ಸಾ: ಸಂಗಮ ಟಾಕೀಜ ಎದುರುಗಡೆ ಗುಲಬರ್ಗಾ, ಬಸವರಾಜ ತಂದೆ ರಾಜಶೇಖರ ತಳವಾರ ವ: 21 ವರ್ಷ ಜಾತಿ: ಕಬ್ಬಲಿಗಾ ಸಾ:ಗಂಗಾ ನಗರ ಗುಲಬರ್ಗಾ, ಹರೀಶ ತಂದೆ ದಶರಥಸಿಂಗ ತಿವಾರಿ ವ: 24 ವರ್ಷ ಜಾತಿ: ರಜಪೂತ ಉ: ಬೇಕಾರ ಸಾ:ಶಹಾಬಜಾರ ಕಟಗರಪೂರ ಗುಲಬರ್ಗಾ ಅಂತಾ ನಂತರ ನಮಗೆ ತಿಳಿದಿರುತ್ತದೆ. ಓಡಿ ಹೋದವನ ಹೆಸರು ನಮಗೆ ಗೊತ್ತಾಗಿರುವದಿಲ್ಲ ನೋಡಿದರೆ ಗುರ್ತಿಸುತ್ತೆನೆ ಅಂತಾ ಪೊಲೀಸ್ ಪೇದೆ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:217/2012 ಕಲಂ, 341, 353, 504, 506 (2) 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.   

GULBARGA DISTRICT REPORTED CRIMES


ಮನೆಯ ಮುಂದೆ ನಿಲ್ಲಿಸಿದ ಟವೆರಾ ವಾಹನ ಕಳ್ಳತನ:
ರೋಜಾ ಪೊಲೀಸ್ ಠಾಣೆ: ಶ್ರೀ ಸೈಯ್ಯದ ಇಶ್ತಿಯಾಕ ಅಹ್ಮದ ತಂದೆ ಸೈಯ್ಯದ ಮೈನುದ್ದಿನ ಖಾದ್ರಿ ಸಾ|| ಅಪ್ಜಲ ಕಾಟೇಜ ಎಮ್.ಐ.ಜಿ-2 ನೇ ಹಂತ ಮನೆ ನಂ.10  ಕೆ.ಹೆಚ್.ಬಿ ಕಾಲೋನಿ ಒಕ್ಕಲಗೇರಾ ನೆಹರು ಗಂಜ ಗುಲಬರ್ಗಾ ರವರು ನಾನು TAVERA LT L1.9 No. KA 03 MM 6968 ನೇದ್ದರ ಮಾಲೀಕನಾಗಿರುತ್ತೆನೆ. ವಾಹನದ ಡ್ರೈವರನಾದ ಮಹ್ಮದ ಜಾವೀದ ಈತನು ದಿನಾಂಕ:24/12/2012 ರಂದು ನನ್ನ ಹೆಂಡತಿಯು ಹೇರಿಗೆ ಸಲುವಾಗಿ ಹೋಗಬೇಕಾಗಿದೆ ಅಂತಾ ಹೇಳಿ ನನ್ನ ಟವೇರಾ ಗಾಡಿಯ ಚಾವಿಕೊಟ್ಟು ಅಂದಾಜು 3:00 ಗಂಟೆಯ ಸುಮಾರಿಗೆ ಹೋಗಿರುತ್ತಾನೆ.ನಾನು ನನ್ನ ಗಾಡಿಯನ್ನು ತೆಗೆದುಕೊಂಡು ಸರ್ವಿಸಿಂಗ್ ಮಾಡಿಸಿ 6:00 ಗಂಟೆಯ ಸುಮಾರಿಗೆ ವಾಹನವನ್ನು ನಮ್ಮ ಮನೆಯ ಮುಂದೆ ಕಂಪೌಂಡಿನ ಬದಿಯಲ್ಲಿ ನಿಲ್ಲಿಸಿ ನಾವು ಮನೆಯವರೆಲ್ಲರೂ ನನ್ನ ಅತ್ತೆಮಾವನವರ ಮನೆಗೆ ಹೋಗಿರುತ್ತೆವೆ.ದಿನಾಂಕ:25/12/2012 ರಂದು ಮುಂಜಾನೆ 8:30 ಗಂಟೆಯ ಸುಮಾರಿಗೆ ನನ್ನ ಅತ್ತೆ ಮಾವನ ಮನೆಯಲ್ಲಿ ಇದ್ದಾಗ ನನ್ನ ತಂಗಿ ಫೋನ ಮಾಡಿ, ಮನೆಯ ಮುಂದೆ ನಿಲ್ಲಿಸಿದ ಟವೇರಾ ವಾಹನ ಇರುವುದಿಲ್ಲಾ ಅಲ್ಲದೇ ಗಾಡಿಯ ಗ್ಲಾಸಗಳು ಒಡೆದ ಚೂರುಗಳು ಬಿದ್ದಿರುತ್ತವೆ ಅಂತಾ ತಿಳಿಸಿದ್ದರಿಂದ ನಾನು ಬಂದು ನೋಡಿದಾಗ ನನ್ನ ಮನೆಯ ಮುಂದೆ ನಿಲ್ಲಿಸಿದ ಟವೇರಾ ಗಾಡಿ ಇರಲಿಲ್ಲಾ ಗಾಡಿಯ ಗ್ಲಾಸ್ ಒಡೆದ ಚೂರುಗಳು ಬಿದ್ದಿದ್ದು ಯಾರೋ ಕಳ್ಳರು ಮನೆಯ ಮುಂದೆ ನಿಲ್ಲಿಸಿದ ಮಾಡೆಲ್ & ಬಣ್ಣ     : 2010  &   MB WHITE COLOR,ಇಂಜನ ನಂ.:3FK109759, ಚೆಸ್ಸಿನಂ: MA6AB605FAH109253 ಟವೇರಾ ವಾಹನ ಅ||ಕಿ|| 6,00,000/- ಮೌಲ್ಯದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:91/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ ಒಂದು ಸಾವು:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಬಸಯ್ಯ ತಂದೆ ಕರಸಬಸಯ್ಯ ಮಠಪತಿ ಸಾ|| ಭಟ್ಟರ್ಗಾ ಗ್ರಾಮ, ತಾ|| ಆಳಂದ ರವರು ನನ್ನ ಅಳಿಯನಾದ ಗುರುಲಿಂಗಯ್ಯ ತಂದೆ ರುದ್ರಯ್ಯ ಮಠಪತಿ ವ|| 14ವರ್ಷ ಇತನು ದಿನಾಂಕ:25-12-2012 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಾನು  ಹೊಲದಿಂದ ಮನೆಗೆ ಬರುತ್ತಿರುವಾಗ ನನ್ನ ಅಳಿಯ ಭಟ್ಟರ್ಗಾ ಗ್ರಾಮದ ಕೇನಾಲ ಬ್ರಿಡ್ಜ ಹತ್ತಿರ ಸಂಡಸಕ್ಕೆ ಹೋಗಿ ವಾಪಸ್ಸು ಮನೆಗೆ ಬರುತ್ತಿದ್ದಾಗ ನಿಂಬರ್ಗಾ ಕಡೆಯಿಂದ ಭೂಸನೂರ ಸಕ್ಕರೆ ಫ್ಯಾಕ್ಟರಿ ಕಡೆಗೆ ಎದುರುಗಡೆಯಿಂದ ಒಂದು ಟ್ರಾಕ್ಟರ ನಂ:MH-45, F-0178 ನೇದ್ದರ ಚಾಲಕನು ತನ್ನ ಟ್ರಾಕ್ಟರನ ಎರಡು ಟ್ರ್ಯಾಲಿಗಳಲ್ಲಿ ಕಬ್ಬು ತುಂಬಿಕೊಂಡು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡ ದಾಟುತ್ತಿದ್ದ ಗುರುಲಿಂಗಯ್ಯ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಆತನ ಎಡಗಡೆ ಟೊಂಕದ ಮೇಲೆ ಟ್ರಾಕ್ಟರ ಹರಿದಿದ್ದರಿಂದ ಭಾರಿ ಸ್ವರೂಪದ ಗಾಯವಾಗಿ ಗುರುಲಿಂಗಯ್ಯ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಸದರಿ ಟ್ರಾಕ್ಟರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.