POLICE BHAVAN KALABURAGI

POLICE BHAVAN KALABURAGI

26 December 2012

GULBARGA DISTRICT REPORTED CRIMES


ಮನೆಯ ಮುಂದೆ ನಿಲ್ಲಿಸಿದ ಟವೆರಾ ವಾಹನ ಕಳ್ಳತನ:
ರೋಜಾ ಪೊಲೀಸ್ ಠಾಣೆ: ಶ್ರೀ ಸೈಯ್ಯದ ಇಶ್ತಿಯಾಕ ಅಹ್ಮದ ತಂದೆ ಸೈಯ್ಯದ ಮೈನುದ್ದಿನ ಖಾದ್ರಿ ಸಾ|| ಅಪ್ಜಲ ಕಾಟೇಜ ಎಮ್.ಐ.ಜಿ-2 ನೇ ಹಂತ ಮನೆ ನಂ.10  ಕೆ.ಹೆಚ್.ಬಿ ಕಾಲೋನಿ ಒಕ್ಕಲಗೇರಾ ನೆಹರು ಗಂಜ ಗುಲಬರ್ಗಾ ರವರು ನಾನು TAVERA LT L1.9 No. KA 03 MM 6968 ನೇದ್ದರ ಮಾಲೀಕನಾಗಿರುತ್ತೆನೆ. ವಾಹನದ ಡ್ರೈವರನಾದ ಮಹ್ಮದ ಜಾವೀದ ಈತನು ದಿನಾಂಕ:24/12/2012 ರಂದು ನನ್ನ ಹೆಂಡತಿಯು ಹೇರಿಗೆ ಸಲುವಾಗಿ ಹೋಗಬೇಕಾಗಿದೆ ಅಂತಾ ಹೇಳಿ ನನ್ನ ಟವೇರಾ ಗಾಡಿಯ ಚಾವಿಕೊಟ್ಟು ಅಂದಾಜು 3:00 ಗಂಟೆಯ ಸುಮಾರಿಗೆ ಹೋಗಿರುತ್ತಾನೆ.ನಾನು ನನ್ನ ಗಾಡಿಯನ್ನು ತೆಗೆದುಕೊಂಡು ಸರ್ವಿಸಿಂಗ್ ಮಾಡಿಸಿ 6:00 ಗಂಟೆಯ ಸುಮಾರಿಗೆ ವಾಹನವನ್ನು ನಮ್ಮ ಮನೆಯ ಮುಂದೆ ಕಂಪೌಂಡಿನ ಬದಿಯಲ್ಲಿ ನಿಲ್ಲಿಸಿ ನಾವು ಮನೆಯವರೆಲ್ಲರೂ ನನ್ನ ಅತ್ತೆಮಾವನವರ ಮನೆಗೆ ಹೋಗಿರುತ್ತೆವೆ.ದಿನಾಂಕ:25/12/2012 ರಂದು ಮುಂಜಾನೆ 8:30 ಗಂಟೆಯ ಸುಮಾರಿಗೆ ನನ್ನ ಅತ್ತೆ ಮಾವನ ಮನೆಯಲ್ಲಿ ಇದ್ದಾಗ ನನ್ನ ತಂಗಿ ಫೋನ ಮಾಡಿ, ಮನೆಯ ಮುಂದೆ ನಿಲ್ಲಿಸಿದ ಟವೇರಾ ವಾಹನ ಇರುವುದಿಲ್ಲಾ ಅಲ್ಲದೇ ಗಾಡಿಯ ಗ್ಲಾಸಗಳು ಒಡೆದ ಚೂರುಗಳು ಬಿದ್ದಿರುತ್ತವೆ ಅಂತಾ ತಿಳಿಸಿದ್ದರಿಂದ ನಾನು ಬಂದು ನೋಡಿದಾಗ ನನ್ನ ಮನೆಯ ಮುಂದೆ ನಿಲ್ಲಿಸಿದ ಟವೇರಾ ಗಾಡಿ ಇರಲಿಲ್ಲಾ ಗಾಡಿಯ ಗ್ಲಾಸ್ ಒಡೆದ ಚೂರುಗಳು ಬಿದ್ದಿದ್ದು ಯಾರೋ ಕಳ್ಳರು ಮನೆಯ ಮುಂದೆ ನಿಲ್ಲಿಸಿದ ಮಾಡೆಲ್ & ಬಣ್ಣ     : 2010  &   MB WHITE COLOR,ಇಂಜನ ನಂ.:3FK109759, ಚೆಸ್ಸಿನಂ: MA6AB605FAH109253 ಟವೇರಾ ವಾಹನ ಅ||ಕಿ|| 6,00,000/- ಮೌಲ್ಯದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:91/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ ಒಂದು ಸಾವು:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಬಸಯ್ಯ ತಂದೆ ಕರಸಬಸಯ್ಯ ಮಠಪತಿ ಸಾ|| ಭಟ್ಟರ್ಗಾ ಗ್ರಾಮ, ತಾ|| ಆಳಂದ ರವರು ನನ್ನ ಅಳಿಯನಾದ ಗುರುಲಿಂಗಯ್ಯ ತಂದೆ ರುದ್ರಯ್ಯ ಮಠಪತಿ ವ|| 14ವರ್ಷ ಇತನು ದಿನಾಂಕ:25-12-2012 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಾನು  ಹೊಲದಿಂದ ಮನೆಗೆ ಬರುತ್ತಿರುವಾಗ ನನ್ನ ಅಳಿಯ ಭಟ್ಟರ್ಗಾ ಗ್ರಾಮದ ಕೇನಾಲ ಬ್ರಿಡ್ಜ ಹತ್ತಿರ ಸಂಡಸಕ್ಕೆ ಹೋಗಿ ವಾಪಸ್ಸು ಮನೆಗೆ ಬರುತ್ತಿದ್ದಾಗ ನಿಂಬರ್ಗಾ ಕಡೆಯಿಂದ ಭೂಸನೂರ ಸಕ್ಕರೆ ಫ್ಯಾಕ್ಟರಿ ಕಡೆಗೆ ಎದುರುಗಡೆಯಿಂದ ಒಂದು ಟ್ರಾಕ್ಟರ ನಂ:MH-45, F-0178 ನೇದ್ದರ ಚಾಲಕನು ತನ್ನ ಟ್ರಾಕ್ಟರನ ಎರಡು ಟ್ರ್ಯಾಲಿಗಳಲ್ಲಿ ಕಬ್ಬು ತುಂಬಿಕೊಂಡು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡ ದಾಟುತ್ತಿದ್ದ ಗುರುಲಿಂಗಯ್ಯ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಆತನ ಎಡಗಡೆ ಟೊಂಕದ ಮೇಲೆ ಟ್ರಾಕ್ಟರ ಹರಿದಿದ್ದರಿಂದ ಭಾರಿ ಸ್ವರೂಪದ ಗಾಯವಾಗಿ ಗುರುಲಿಂಗಯ್ಯ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಸದರಿ ಟ್ರಾಕ್ಟರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

25 December 2012

GULBARGA DISTRICT REPORTED CRIME

ಅತ್ಯಾಚಾರ ಪ್ರಕರಣ:

ಚಿಂಚೋಳಿ ಪೊಲೀಸ್ ಠಾಣೆ:ದಿನಾಂಕ: 19-12-2012 ರಂದು ಬೆಳಿಗ್ಗೆ 10.00 ಗಂಟೆಗೆ ನನ್ನ ಮಗಳು ಎತ್ತುಗಳು ಮೈಸೆಲೆಂದು ಹೋಸ ಊರು ಹತ್ತಿರವಿರುವ ನಮ್ಮ ಹೋಲಕ್ಕೆ  ಹೋಗಿದ್ದು, ಮದ್ಯಾಹ್ನ 3.30 ಗಂಟೆ ಸುಮಾರಿಗೆ ಎತ್ತುಗಳಿಗೆ ನೀರು ಕುಡಿಸಲೆಂದು ಹೋಗಿ, ಎತ್ತುಗಳಿಗೆ ನೀರು ಕುಡಿಸಿಕೊಂಡು ಮರಳಿ ನಮ್ಮ ಹೋಲದ ಕಡೆಗೆ ಬರುತ್ತಿದ್ದಾಗ, ನಮ್ಮ ಊರಿನವನಾದ  ರಮೇಶ ತಂದೆ ಹನಮಂತ ವಡ್ಡರ ಎಂಬುವವನು, ನನ್ನ ಮಗಳಿಗೆ ನಾಲೆಯೋಳಗೆ ಎಳೆದುಕೊಂಡು ಹೋಗಿ ಕೆಳಗೆ ಕೆಡುವಿ ಜಭರಿ ಸಂಬೋಗ ಮಾಡಿರುತ್ತಾನೆ.ನನ್ನ ಮಗಳು ನೋವು ತಾಳಲಾರದೆ ಚಿರಾಡುತ್ತಿದ್ದಾಗ ಪಕ್ಕದ ಹೋಲದಲ್ಲಿ ಕೆಲಸ ಮಾಡುತ್ತಿದ್ದವರು ನೋಡಿ ಬಿಡಿಸಿಕೊಂಡಿರುತ್ತಾರೆ.ನನ್ನ ಮಗಳ ಮೇಲೆ ಜಭರಿ ಸಂಭೋಗ ಮಾಡಿದವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಸುನಿತಾ ಗಂಡ ರೇವಣಸಿದ್ದಪ್ಪಾ ಡಾಕಳಿಗಿ  ಸಾ|| ಗಡಿನಿಂಗದಳ್ಳಿ ರವರು ದಿನಾಂಕ:25-12-2012 ರಂದು ಮಧ್ಯಾಹ್ನ 13-00 ಗಂಟೆಗೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:134/2012 ಕಲಂ 341, 376 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀಮತಿ ಇಶ್ರಾತ ಪರ್ವೀನ ಗಂಡ ಸೈಯ್ಯದ ಫಾರೂಕ ಉ:ದೈಹಿಕ ಶಿಕ್ಷಕಿ ಸಾ|| ಶ್ರೀ ಅಬ್ದುಲ ಸತ್ತಾರ ಪಹಾಡವಾಲೆ ಇವರ ಮನೆಯಲ್ಲಿ ಬಾಡಿಗೆ ಹಳೆಯ ಮೋರೆ ಆಸ್ಪತ್ರೆ ಮಿಜಗುರಿ ಗುಲಬರ್ಗಾ ರವರು ನಾನು ದಿನಾಂಕ:23/12/2012 ರಂದು ಸಾಯಂಕಾಲ ಕರ್ತವ್ಯ ಮುಗಿಸಿಕೊಂಡು ನನ್ನ ತಾಯಿಯ ಮನೆಗೆ ಹೋಗಿ ನನ್ನ ತಾಯಿಯ ಮನೆಯಿಂದ ನನ್ನ  5 ತೊಲಿಯ ಬಂಗಾದ ಆಭರಣಗಳನ್ನು ನನ್ನ ವ್ಯಾನಿಟಿ ಬ್ಯಾಗದಲ್ಲಿ ಹಾಕಿಕೊಂಡು ಮನೆಗೆ ಬಂದು ವ್ಯಾನಿಟಿ  ಬ್ಯಾಗ್  ಸೋಫಾದ ಮೇಲೆ  ಸಾಯಂಕಾಲ 6:30 ಗಂಟೆಗೆ ಇಟ್ಟು ಮನೆಯ ಕೆಲಸ ಮಾಡಿ  7:30 ಗಂಟೆಗೆ ಸುಮಾರಿಗೆ ನಾನು ಸೋಫಾದ ಮೇಲೆ ಇಟ್ಟಿರುವ ಬ್ಯಾಗ ನೋಡಲಾಗಿ ಬ್ಯಾಗ ಇರಲಿಲ್ಲಾ ಯಾರೋ ಸೋಫಾದ ಮೇಲೆ ಇಟ್ಟ ನನ್ನ ವ್ಯಾನಿಟಿ ಬ್ಯಾಗ ಅದರಲ್ಲಿ ಇಟ್ಟಿರುವ 5 ತೊಲಿಯ ಬಂಗಾರದ ಆಭರಣಗಳು ಅ||ಕಿ||1,25,000/-ರೂಪಾಯಿ ಬೆಲೆಯುಳ್ಳದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.90/2012 ಕಲಂ. 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.