POLICE BHAVAN KALABURAGI

POLICE BHAVAN KALABURAGI

04 December 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ನಾಗರಾಜ @ ಶಿವಾನಂದ ತಂದೆ ರೇವಣಸಿದ್ದಪ್ಪ ದೇಸಾಯಿ ಸಾ: ಜೇವರಗಿ ಬಿ ತಾ: ಅಫಜಲಪೂರ ವರು ನನ್ನ ಅಣ್ಣ ದಯಾನಂದ ದೇಸಾಯಿ ವ:37 ವರ್ಷ ಮತ್ತು ಕರೆಪ್ಪ ದೊಡ್ಡಮಿ ಇವರು ಜೇವರ್ಗಿಯಿಂದ ಸರಕಾರಿ ಶಾಲೆ ಯಳವಾರಕ್ಕೆ ನಮ್ಮ ಅಣ್ಣನ ಹಿರೋ ಹೊಂಡಾ ಮೊಟಾರ ಸೈಕಲ ನಂ:ಕೆ.ಎ-32-ಇಎ-3485 ನೇದ್ದರ ಮೇಲೆ ಹೋಗುತ್ತಿದ್ದಾಗ ಮುಂಜಾನೆ 9-45 ಗಂಟೆಗೆ ಮಾರ್ಗ ಮಧ್ಯದಲ್ಲಿ ಜೇವರ್ಗಿ ಕಡೆಯಿಂದ ಯಾವುದೋ ವಾಹನದ ಚಾಲಕನನ್ನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಅಣ್ಣನ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಅಪಘಾತದಲ್ಲಿ ನನ್ನ ಅಣ್ಣ ದಯಾನಂದನಿಗೆ ತಲೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿ ಸತ್ತಿದ್ದು ಅಲ್ಲದೇ ಕರೆಪ್ಪ ದೊಡ್ಡಮನಿ ಇತನಿಗೆ ಭಾರಿ ಗಾಯವಾಗಿರುತ್ತದೆ.ಸದರಿ ವಾಹನ ಚಾಲಕನ್ನು ಪತ್ತೆ ಹಚ್ಚಿ ಅವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:179/2012 ಕಲಂ 279.338.304(ಎ) ಐ.ಪಿ.ಸಿ ಸಂ 187 ಐ.ಎಮ್ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಮನೆ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ.ರಮೇಶ ತಂದೆ ಲಕ್ಷ್ಮಣ ಜಾಲಗಾರ,  ಸಾ|| ಎಸ್.ಎಸ್. ಬಿರಾದಾರ ಮನೆಯಲ್ಲಿ ಬಾಡಿಗೆ ಅತ್ತರ ಕಂಪೌಂಡ ಗಾಜೀಪೂರ ಗುಲಬರ್ಗಾ ರವರು ನಾವು ಮನೆಯವರೆಲ್ಲರೂ ಮಂತ್ರಾಲಯ ದೇವರ ದರ್ಶನಕ್ಕೆ ಹೋದಾಗ ದಿನಾಂಕ:01/12/2012 ರಂದು  ಸಾಯಂಕಾಲ 6:30 ಗಂಟೆಯಿಂದ ದಿ:03/12/2012 ರಂದು ಸಾಯಂಕಾಲ 6:00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟಿದ್ದ ಒಂದು ಬಂಗಾರದ ಲಾಕೇಟ 12 ಗ್ರಾಂ ಅ||ಕಿ|| 30,000/-, ಬಂಗಾರದ ನೇಕಲ್ಸ 15 ಗ್ರಾಂ ಅ||ಕಿ|| 35,000/-,ಬಂಗಾರದ ಸುತ್ತ ಉಂಗುರ 5 ಗ್ರಾಂ ಅ||ಕಿ|| 10,000/-, ಮಕ್ಕಳ ಬೆಳ್ಳಿಯ ಕಾಲ ಚೈನ್40 ಗ್ರಾಂ ಅ||ಕಿ|| 500/-,ಒಂದು ಬೆಳ್ಳಿ ದೀಪ ಅ||ಕಿ|| 500/-,ಎರಡು ತಾಮ್ರದ ಹಾಂಡೆ ಅ||ಕಿ|| 2000/-,ಹಿತ್ತಾಳೆ ನೀರಿನ ಟ್ಯಾಂಕ ಹಿತ್ತಾಳೆ ದೀಪ & ಹಿತ್ತಾಳೆಯ ಚಿಕ್ಕ ಕೊಡ ಅ||ಕಿ|| 4000/-,ನಗದು ಹಣ 15,000/-ಹೀಗೆ ಎಲ್ಲಾ ಸೇರಿ ಒಟ್ಟು 95,000/- ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:127/2012 ಕಲಂ: 454, 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗ್ರಾಮೀಣ ಪೋಲೀಸ ಠಾಣೆ:ಮಹೇಶ  ತಂದೆ ಬಾಬಯ್ಯ ಪಾಟೀಲ ಸಾ: ಅತನೂರ ತಾ: ಅಫಜಲಪೂರ ಸಾ: ವ: ಬಿದ್ದಾಪೂರ ಕಾಲೋನಿ, ಗುಲಬರ್ಗಾ  ವರು ನಾವು ದಿನಾಂಕ: 30/11/2012 ರಂದು ಮನೆಗೆ ಕೀಲಿ ಹಾಕಿ ತಮ್ಮ ಸ್ವತ ಊರಿಗೆ ಹೋಗಿದ್ದು ದಿನಾಂಕ:03/12/2012 ರಂದು ನಮ್ಮ ಅಣ್ಣ  ಮನೆ ಕಳವು ಆಗಿದೆ ಅಂತ ಫೋನ ಮೂಲಕ ತಿಳಿಸಿದ್ದರಿಂದ ಊರಿನಿಂದ ಮನೆಗೆ ಬಂದು ನೋಡಲು  ಮನೆಯ ಬಾಗಿಲಿನ ಕೊಂಡಿ ಮುರಿದು ಅಲಮಾರಿಯಲ್ಲಿಟ್ಟ ನಗದು ಹಣ 1500/- ರೂ. ಹಾಗೂ ಬಂಗಾರದ 9 ಗ್ರಾಂ ಅಭರಣಗಳು ಹೀಗೆ ಒಟ್ಟು 12,300/- ರೂ. ಕಿಮ್ಮತ್ತಿನ ಮಾಲನ್ನು ಯಾರೊ ಕಳ್ಳರು ದಿನಾಂಕ:30/11/2012  ರ 11-00 ಎ.ಎಮ್ ದಿಂದ 03/12/2012 6-00 ಪಿ.ಎಮ್ ದ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:404/2012 ಕಲಂ 454 457 380  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ 26/11/2012 ಸಾಯಂಕಾಲ 4-30 ಗಂಟೆಯಿಂದ ದಿನಾಂಕ 27/11/12 ರಂದು  ಮದ್ಯಾಹ್ನ 3-00 ಗಂಟೆ ಅವಧಿಯಲ್ಲಿ  ನಮ್ಮ ಶಾಲೆಯ  ಕಂಪ್ಯೂಟರ ಕೋಣೆಯ ಬಾಗಿಲ ಕೀಲಿ ಮುರಿದು  ಕಂಪ್ಯೂಟರ ಕೊಣೆಯಲ್ಲಿ ಇದ್ದ ಕಂಪ್ಯೂಟರ ಮತ್ತು ಅದರ ಇತರೆ ಸಾಮಾನುಗಳು ಹೀಗೆ ಒಟ್ಟು ಅಂದಾಜು 74,000/-00 ರೂ. ಕಿಮ್ಮತ್ತಿನ ಕಂಪ್ಯೂಟರ ಸಾಮಾನುಗಳು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ  ಶ್ರೀಮತಿ. ಹೇಮಲತಾ ತಂದೆ ಗಣಪತರಾವ ಪತ್ತಾರ ಮುಖ್ಯೋಪಾದ್ಯಾಯರು  ಶ್ರೀ ಮೈಲಾರಲಿಂಗೆಶ್ವರ ಫ್ರೌಡ ಶಾಲೆ ನರಿಬೊಳ ವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 178/12 ಕಲಂ. 457.454. 380. ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

GULBARGA DISTRICT REPORTED CRIMES


ಮೋಟಾರ ಸೈಕಲ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ,ವಿಧ್ಯಾದರ ತಂದೆ ಮಲ್ಲಿಕಾರ್ಜುನ ಬಿರಾದಾರ ಸಾ|| ಗೋದುತಾಯಿ ನಗರ ಗುಲಬರ್ಗಾ ರವರು ನಾನು ದಿನಾಂಕ:26/10/2012 ರಂದು ಎಂದಿನಂತೆ ಆಶ್ರಯ ಲಾಡ್ಜದಲ್ಲಿ 7-30 ಪಿ.ಎಂ.ಕ್ಕೆ ರಿಸೆಷ್ಟನಿಸ್ಟ ಕೆಲಸಕ್ಕಾಗಿ ನನ್ನ ಹಿರೋ ಹೊಂಡಾ ಸಿ.ಡಿ 100 ನಂ. ಕೆ.ಎ-32 ಜೆ-234 ನೇದ್ದು ಆಶ್ರಯ ಲಾಡ್ಜ ಎದುರಿಗೆ ನಿಲ್ಲಿಸಿ ನನ್ನ ಕೆಲಸ ಮಾಡುತ್ತಿದ್ದೇನು. ನಂತರ 10-30 ಪಿ.ಎಂ.ಕ್ಕೆ ನೋಡಲಾಗಿ ನನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ನನ್ನ ಮೋಟಾರ ಸೈಕಲ್ ಹಿರೋ ಹೊಂಡಾ ಸಿಡಿ 100 ನಂ. ಕೆ.ಎ-32 ಜೆ-234 ಇಂಜನ ನಂ. 97ಸಿ10ಇ05162 ಚೆಸ್ಸಿ ನಂ. 97ಸಿ10ಎಫ್04732 ಅ.ಕಿ. 25,000/- ರೂ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.112/2012 ಕಲಂ. 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ರವಿ ತಂದೆ ಬಸವರಾಜ ಅಟ್ಟೂರ @ ಕೊಳ್ಳುರು  ಸಾ:ಪಟ್ಟಣ ಗ್ರಾಮ ತಾ:ಜಿ: ಗುಲಬರ್ಗಾರವರು ನಾನು ಮತ್ತು ಶರಣಬಸಪ್ಪಾ ದಿನಾಂಕ:03-12-2012 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಹೋಟಲ ಸಾಮಾನು ಖರೀದಿಸಲು ಪಟ್ಟಣದಿಂದ ಹೊಂಡಾ ಸೈನ ಕೆಎ-34 ವಿ-3945 ನೇದ್ದರ ಮೇಲೆ ಗುಲಬರ್ಗಾಕ್ಕೆ ಬಂದು ಸ್ಟೋ ಮತ್ತು ಚಹಾ ಗ್ಲಾಸುಗಳು ಖರೀದಿಸಿ ವಾಪಸ್ಸ ಪಟ್ಟಣಕ್ಕೆ ಅದೇ ಮೋಟಾರ ಸೈಕಲ ಮೇಲೆ ಹೋರಟಿದ್ದು, ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋರಟಿದ್ದನ್ನು ನೋಡಿ ಸಾವಕಾಶವಾಗಿ ನಡೆಯಿಸು ಅಂತಾ ಹೇಳಿದರೂ ಅತಿವೇಗದಿಂದ ನಡೆಸುತ್ತಾ ವಿಶ್ವರಾಧ್ಯ ಗುಡಿ ದಾಟಿ  ಹೊಸದಾಗಿ ರೇಲ್ವೆ ಟ್ರಾಕ  ಬ್ರೀಡ್ಜ ಸಲುವಾಗಿ ರೋಡಿಗೆ ಅಡ್ಡಲಾಗಿ  4-5 ಫೀಟ ಎತ್ತರದ ಇಟ್ಟಂಗಿ ಗೋಡೆ ಕಟ್ಟಿದ್ದನ್ನು ನೋಡದೇ ಅತಿವೇಗದಿಂದ ನಡೆಸುತ್ತಾ ಹೋರಟಿದ್ದನ್ನು,ಗೋಡೆ ಹತ್ತಿರ ಬಂದಾಗ ಒಮ್ಮಿಂದ ಒಮ್ಮೇಲೆ ವೇಗದಲ್ಲಿ ಬ್ರೇಕ ಹಾಕಿ ವೇಗದ ನಿಯಂತ್ರಣ ತಪ್ಪಿ  ರೋಡಿಗೆ ಅಡ್ಡವಾಗಿ ಕಟ್ಟಿದ ಇಟ್ಟಂಗಿ ಗೋಡೆಗೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ನನ್ನ ತಲೆಗೆ, ಬಲ ಮೆಲಕಿನ ಹತ್ತಿರ, ಕೈಯಿಗೆ ಕಾಲಿಗೆ ರಕ್ತಗಾಯವಾಗಿದ್ದು ಮೃತ ಶರಣುವಿಗೆ ತಲೆಗೆ, ಬಲ ಮೆಲಕಿನ ಹತ್ತಿರ, ಎದೆಗೆ, ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ನಂ:403/12 ಕಲಂ 279, 337, 304 (ಎ)  ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

03 December 2012

GULBARGA DISTRICT REPORTED CRIMES


ಕೊಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಅಲ್ಲಾಬಕ್ಷ ತಂದೆ ಅಬ್ದುಲ್ಲಾ ಸಾ:ಶಹಾ ಜೀಲಾನಿ ದರ್ಗಾ, ಎಮ್.ಎಸ್.ಕೆ. ಮೀಲ್  ಮದೀನಾ ಕಾಲೋನಿ ಗುಲಬರ್ಗಾರವರು ನನ್ನ ಮಗನಾದ ಮಾಜೀದ ತನು ಟೋರಿಕ್ಷಾ ನಂ ಕೆಎ-32, 7308 ನೇದ್ದನ್ನು ಬಾಡಿಗೆ ಹೊಡೆಯಲು ದಿನಾಂಕ: 02/12/2012 ರಂದು ಮನೆಯಿಂದ ಮಧ್ಯಾಹ್ನ 2-00 ಗಂಟೆಗೆ ಹೋದನು ಸಾಯಂಕಾಲ 7-00 ಗಂಟೆ ಸಮಯಕ್ಕೆ ನಮ್ಮ ಓಣಿಯ ಖಾಜಾ ಪಾಶಾ ಮತ್ತು ನಜೀರ ಅಹ್ಮದ ಇವರು ಆಟೋದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಬಂದು ಮನೆ ಮುಂದೆ ಆಟೋ ಬಿಟ್ಟು ಹೋದರು ನ್ನ ಮಗನಿಗೆ ನೋಡಲು ಅವನ ಹೊಟ್ಟೆಗೆ ರಕ್ತಗಾಯವಾಗಿ ನರಳಾಡುತಿದ್ದನು ವಿಚಾರಿಸಲಾಗಿ ಜಾಕೀರ @ ಜಕ್ಕ್ಯಾ,ಖಾಜಾ ಪಾಶಾ @ ಖಾಜಾ ಬೀಡಿ ಆಟೋ ಡ್ರೈವರ,ಮೈನು @ ಮೈನೋದ್ದಿನ ದೊಸಾ ಆಟೋ ಡ್ರೈವರ,ಮಹೇಬೂರ @ ಬುಡ್ಯಾ,ನಜೀರ ಅಹ್ಮದ  ಸಾ: ಎಲ್ಲರೂ ಗುಲಬರ್ಗಾರವರು ಅವರಿಗೆ ಸರಾಯಿ ಕುಡಿಸದೇ ಇದುದ್ದರಿಂದ ಚಾಕುವಿನಿಂದ ಹೊಟ್ಟೆಗೆ ಹೊಡೆದು ಭಾರಿ ರಕ್ತಗಾಯಪಡಿಸಿದ್ದು, ಸದರಿಯವನಿಗೆ ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ರಾತ್ರಿ 9-20 ಗಂಟೆಗೆ ಹೋದಾಗ ವೈದ್ಯಧಿಕಾರಿಗಳು ನೋಡಿ ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು, ಸದರಿ ಮೇಲ್ಕಂಡ 5 ಜನರು ಮಾಜೀದನಿಗೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 400/2012 ಕಲಂ 143, 147, 148,  504, 341, 302 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಪ್ರಕಾಶ ತಂದೆ ಜೈರಾಜ ಕರಕಿ   ಸಾ:ಅಂಬಾಬಾಯಿ ಗುಡಿ ಹತ್ತಿರ ಶಕ್ತಿ ನಗರ  ಗುಲಬರ್ಗಾ  ರವರು ನಾನು ದಿನಾಂಕ:02-12-2012 ರಂದು ನನ್ನ ತಂದೆಯಾದ ಜೈರಾಜ ಇವರು ಐವಾನ ಈ ಶಾಯಿ ಕಡೆಗೆ ನನಗೆ ಪರಿಚಯ ಇರುವವರಿಗೆ ಬೇಟಿಯಾಗಲು ಹೋಗುತ್ತೆನೆ ಅಂತಾ ಹೇಳಿ ಹೋಗಿದ್ದರು. ನಮ್ಮ ತಂದೆಯವರು ವಿಜಯ ವಿಧ್ಯಾಲಯ ಕಾಲೇಜ ಎದುರಗಡೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ  ಕೆಎ-51 ಇಡಿ 7822 ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ನಮ್ಮ ತಂದೆಯಾದ ಜೈರಾಜ ಇವರಿಗೆ   ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 118/2012 ಕಲಂ, 279,338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶಿವರಾಜ ತಂದೆ ಮಲ್ಲಿಕಾರ್ಜುನ ಮಾಶಟ್ಟಿ ಸಾ|| ಹೊಸ ರಾಘವೇಂದ್ರ ಕಾಲೋನಿ ಗುಲಬರ್ಗಾರವರು ನಮ್ಮ ತಾಯಿಯ ತವರು ಮನೆ ಗುಲಬರ್ಗಾ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿದ್ದು, ಸದರಿ ಗ್ರಾಮದಲ್ಲಿ ತಾಯಿಯ ತಂದೆಯಾದ ಕಲ್ಲಪ್ಪ ಇವರ ಹೆಸರಿನಲ್ಲಿ 5 ಎಕರೆ ಹೊಲ ಇದ್ದು, ಅದಕ್ಕೆ ನಾನು ಮತ್ತು ನಮ್ಮ ಅಣ್ಣ  ಸಿದ್ದು ಇಬ್ಬರು ಒಟ್ಟಿಗೆ ಸೇರಿ ಆಸ್ತಿ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹಾಕಿರುತ್ತೆವೆ.15 ದಿವಸಗಳಿಂದ  ಸಿದ್ದು ಈತನು ನನಗೆ  ಕೇಸು ವಾಪಸ್ಸು ತೆಗೆದುಕೊ ಅಂತ ಅಂದಿದ್ದು, ಅದಕ್ಕೆ ನಾಣು ನಿರಾಕರಿಸಿರುತ್ತೆನೆ, ಇದೇ ವಿಷಯದಲ್ಲಿ ತಕರಾರು ಮಾಡುತ್ತಾ ಸಿದ್ದು ಈತನು ತನ್ನ ಜೊತೆ ಮಂಜು ಹಾಗು ಇನ್ನೊಬ್ಬನೊಂದಿಗೆ ಬಂದು ನನ್ನ ಮನೆಯೊಳಗೆ ಪ್ರವೇಶ ಮಾಡಿ, ಅವಾಚ್ಯದಿಂದ ಬೈದು, ಕೈಯಿಂದ ಹಾಗು ಕಲ್ಲಿನಿಂದ ಹೋಡೆದು ಗುಪ್ತಗಾಯಪಡಿಸಿದ್ದು, ಅಲ್ಲದೆ ಜಗಳದಲ್ಲಿ ನನ್ನ ಕೊರಳಲ್ಲಿದ್ದ ಬಂಗಾರ ಲಾಕೇಟ ಮತ್ತು ಜಗಳ ಬಿಡಿಸಲು ಬಂದ ನನ್ನ  ಹೆಂಡತಿ ಕೋರಳಲ್ಲಿದ್ದ ಬಂಗಾರದ ಮಂಗಳ ಸೂತ್ರ ಹಾಗು ಬೋರಮಳ ಸರ ಕಡಿದು ಬಿದ್ದಿದ್ದು ಸಿಕ್ಕಿರುವದಿಲ್ಲಾ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:90/2012 ಕಲಂ 448, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.