POLICE BHAVAN KALABURAGI

POLICE BHAVAN KALABURAGI

29 November 2012

GULBARGA DISTRICT REPORTED CRIMES


ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆ, ಯು.ಡಿ.ಅರ್. ಪ್ರಕರಣ ದಾಖಲು:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಮಲ್ಲಪ್ಪ ತಂದೆ ಬಸಪ್ಪ ಕಲಶೆಟ್ಟಿ ಪ್ರಾದೇಶಿಕ ಭೂ-ಮಾಪನ ತರಬೇತಿ ಸಂಸ್ಥೆಯಲ್ಲಿ ಭೋದಕ ಸಾ|| ಕೆರಕನಳ್ಳಿ ತಾ|| ಅಫಜಲಪುರ ಹಾ||ವ|| ಮಾತಾ ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ರವರು ನನ್ನ ಮೂರನೆ ಮಗಳು ಕುಮಾರಿ ರೇಷ್ಮಾ ಇವಳು ಪೊಲಿಸ್ ಇಲಾಖೆಯಲ್ಲಿ ಪೊಲೀಸ್ ಪೇದೆ ಅಂತ ಭರ್ತಿಯಾಗಿ ಚಿತ್ತಾಪೂರ ಠಾಣೆಯಲ್ಲಿ ಮಹಿಳಾ ಪೇದೆ ಅಂತ ಕರ್ತವ್ಯ ನಿರ್ವಹಿಸುತ್ತಿದ್ದಳು. ದಿನಾಂಕ:23/11/2012 ರಂದು ನಾನು ಕರ್ತವ್ಯದ ನಿಮಿತ್ಯ ಮೈಸೂರಿಗೆ ಹೋರಟಾಗ ನನ್ನ ಮಗಳಾದ ರೇಷ್ಮಾ ಇವಳು ರಜೆಯ ಮೇಲೆ ಬಂದು ಮನೆಯಲ್ಲಿ ಇದ್ದಳು. ಸದರಿಯವಳಿಗೆ ವಿಚಾರಿಸಲಾಗಿ ದಿನಾಂಕ:26/11/2012 ರವರೆಗೆ ರಜೆ ತೆಗೆದುಕೊಂಡು ಬಂದಿರುತ್ತೇನೆ ಅಂತ ಹೇಳಿದಳು. ನಾನು ಮರಳಿ ರೈಲು ಮುಖಾಂತರ  ಗುಲಬರ್ಗಾಕ್ಕೆ ಬರುತ್ತಿರುವಾಗ ನನ್ನ ಮಗನಾದ ಪ್ರವೀಣ ಇತನು ನನಗೆ ಫೋನ ಮುಖಾಂತರ ಅಕ್ಕಾ ಚಿತ್ತಾಪುರದಲ್ಲಿ ಮರಣ ಹೊಂದಿರುತ್ತಾಳೆ ನೀನು ನೇರವಾಗಿ ಚಿತ್ತಾಪುರಕ್ಕೆ  ಬಾ ಅಂತ ತಿಳಿಸಿದ ಮೇರೆಗೆ ನಾನು ಚಿತ್ತಾಪೂರದ ಪೊಲೀಸ್ ವಸತಿ ಗೃಹಕ್ಕೆ ಬಂದು ನೋಡಲಾಗಿ ನನ್ನ ಮಗಳು ಮೃತಪಟ್ಟಿದ್ದು ಇರುತ್ತದೆ. ನನ್ನ ಮಗಳಾದ ರೇಷ್ಮಾ  ಇವಳು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಔಷಧದ ಗುಳಿಗೆ ನುಂಗಿ ಮೃತಪಟ್ಟಿದ್ದು ನನ್ನ ಮಗಳ ಸಾವಿನಲ್ಲಿ ಯಾರ ಮೇಲೂ  ಯಾವುದೇ ಸಂಶಯ ವಗೈರೆ ಇರುವದಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.,ಡಿ.ಆರ್ ನಂ:20/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಕ್ಷಿಣೆ ಕಿರಕುಳು ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಮಾನ್ಯ 2 ನೇ ಅಪರ ಜೇ. ಎಮ್.ಎಫ್.ಸಿ ನ್ಯಾಯಾಲಯ ಪತ್ರ ನಂಬರ 607/12 ದಿನಾಂಕ: 27.11.2012 ನೇದ್ದರ ಆದೇಶ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ ತನಿಖೆ ಕೈಕೊಳ್ಳವುದಂತೆ ಆದೇಶದ ಪ್ರಕಾರ ರುಬೀನಾ ಬೇಗಂ  ಇವಳ ಮದುವೆಯು ದಿನಾಂಕ:17.06.2011 ರಂದು ವಸೀಮ್ ಅಕ್ರಮ್  ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ವರದಕ್ಷಿಣೆ ರೂಪದಲ್ಲಿ 5 ತೊಲೆ ಬಂಗಾರ ಒಂದು ಹೀರೊಹೊಂಡಾ ಮೋಟಾರ ಸೈಕಲ್ ಮತ್ತು ಗೃಹ ಬಳಿಕೆ ಸಾಮಾನುಗಳು ಕೊಟ್ಟಿದ್ದು. ವಸೀಮ್ ಅಕ್ರಮ್ ಇತನು ಬೆಂಗಳೂರಿನಲ್ಲಿ ಖಾಸಗಿ ಕೆಲಸ ಮಾಡಿಕೊಂಡು ಇರುತ್ತಾನೆ . ಮದುವೆಯಾದ ನಂತರ ಗಂಡನ  ಮನೆಯಾದ ಬೆಂಗಳೂರಿಗೆ ಹೋಗಿದ್ದು  ಅಲ್ಲಿ ಸ್ವಲ್ಪ ದಿವಸದ ನಂತರ ಗಂಡ  ಹಾಗೂ ಮನೆಯವರು  ಕೂಡಿ ನೀನು ವರದಕ್ಷಣೆ ಕಡಿಮೆ ತಂದಿದಿಯಾ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡಲು ಪ್ರಾರಂಬಿಸಿದರು.  ನನ್ನ ತಾಯಿ  ಫ್ರೀಜ್ , ಕೂಲರ್, ವಾಶಿಂಗ್ ಮಶೀನ್ , ಗ್ಯಾಸ ಸ್ಟ್ಯೋ, ಸಿಲಿಂಡರ್ , ಫ್ಯಾನ್ ಕೂಡ ತಂದು ಕೊಟ್ಟಿದ್ದು ಇರುತ್ತದೆ. ಇಷ್ಟ ಎಲ್ಲಾ ತಂದು ಕೊಟ್ಟರು ಕೂಡ ಅವರು ನನಗೆ ಹಿಂಸೆ ಕೊಡುತ್ತಾ ಬಂದಿರುತ್ತಾರೆ. ಇವತ್ತಿಲ್ಲಾ ನಾಳೆ ಸರಿ ಹೋಗ ಬಹುದು ಅಂತಾ ಸಹಿಸಿಕೊಂಡು ಬಂದಿರುತ್ತೇನೆ  ಮೂರು ತಿಂಗಳ ನಂತರ ನನ್ನ ಗಂಡ  ನನ್ನ ತವರು ಮನೆಯವರು ಕೊಟ್ಟ ಸಾಮಾನುಗಳು ಮಾರಿ ತಾವು ಒತ್ತಿ ಹಾಕಿದ ಮನೆ ಬಿಡಿಸಿಕೊಂಡಿರುತ್ತಾರೆ. ಇಷ್ಟೆಲ್ಲಾ ಮಾಡಿದ್ದು ಅಲ್ಲದೇ ಇನ್ನೊಂದು ಮೋಟಾರ ಸೈಕಲ್ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಾಗ ನನ್ನ ತವರು ಮನೆಯವರು ಇನ್ನೊಂದು ಮೋಟಾರ ಸೈಕಲ್ ಕೊಡಿಸಿದರು. ನಂತರ ನನಗೆ ಸಾಯಿಸಬೇಕು ಅಂತಾ ಸಿಲೇಡಂರ್  ಓಪನ್ ಮಾಡಿ ಮನೆ ಬಾಗಿಲು ಮುಚ್ಚಿಕೊಂಡು ಹೋಗಿರುತ್ತಾರೆ.ನಿನ್ನ ತವರು ಮನೆಯಿಂದ ನೀನು 10 ಲಕ್ಷ ರೂಪಾಯಿ ತರದೇ ಇದ್ದರೇ ತಲಾಖ್ ಕೊಡುತ್ತೇವೆ ಅಂತಾ ರಂಜಾನ ತಿಂಗಳಲ್ಲಿಯೇ ಊಟಕ್ಕೆ ಕೊಡದೇ ಉಪವಾಸ ಹಾಕಿದ್ದು ಇರುತ್ತದೆ.ಈ ವಿಷಯವನ್ನು  ನಾನು ನನ್ನ ತಮ್ಮನಿಗೆ ತಿಳಿಸಿದಾಗ ನನ್ನ ತಮ್ಮ ನನಗೆ  ಗುಲಬರ್ಗಾಕ್ಕೆ ಕರೆದುಕೊಂಡು ಬಂದಿದ್ದು ದಿನಾಂಕ: 02.09.2012 ರಂದು ನನ್ನ ಗಂಡನಾದ ವಸೀಮ್ ಅಕ್ರಮ್ ನನ್ನ ತವರು ಮನೆಗೆ ಬಂದು  ನನಗೆ 10 ಲಕ್ಷ ರೂಪಾಯಿ ಕೊಡು ಇಲ್ಲದ್ದಿದರೆ ತಲಾಖ ಕೊಡು ಅಂತಾ ಜಗಳ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 82/2012 ಕಲಂ 498(ಎ), ಐ.ಪಿ.ಸಿ ಮತ್ತು  3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ 28-11-2012 ರಂದು ರಾತ್ರಿ 9-00 ಗಂಟೆಗೆ ಶ್ರೀ ಎಸ್.ಎಸ್. ಹುಲ್ಲೂರ್ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ತಮ್ಮ ಸಿಬ್ಬಂದಿಯೊಂದಿಗೆ ಹಾಗು ನಮ್ಮ ಠಾಣೆಯ ಅಧಿಕಾರಿ ಹಾಗು ಸಿಬ್ಬಂದಿ ಸಹಾಯದೊಂದಿಗೆ ಠಾಣಾ ವ್ಯಾಪ್ತಿಯಲ್ಲಿರುವ ವಿವೇಕಾನಂದ ನಗರದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಪಡೆದುಕೊಂಡು  ದಾಳಿ ಮಾಡಿ  ಅನಿಲಕುಮಾರ ತಂದೆ ರಾಮಣ್ಣ ಗಣೇರ ಇತನಿಗೆ ವಶಕ್ಕೆ ತೆಗೆದುಕೊಂಡು ಮಟಕಾ ನಂಬರ ಬರೆದ ಚೀಟಿ, ನಗದು ಹಣ 1150/-ರೂಪಾಯಿಗಳು, ಪೆನ್ ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣಾ ಗುನ್ನೆ ನಂ:89/2012 ಕಲಂ 420 ಐಪಿಸಿ ಸಂಗಡ 78 (3) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸುಧೀರ ತಂದೆ ಶರಣಪ್ಪ @ ಶಿವಶರಣಪ್ಪ ತಳಕೇರಿ ಸಾ: ಕೆರೆಬೋಸಗಾ ತಾ: ಜಿ: ಗುಲಬರ್ಗಾ ರವರು ನಾನು ದಿನಾಂಕ:28/11/2012 ರಂದು  ಕೆರೆಬೋಸಗಾ ಗ್ರಾಮದಲ್ಲಿ ನಮ್ಮ ಸಂಬಂಧಿಕರಲ್ಲಿ ಜವಳ ಕಾರ್ಯಕ್ರಮದ ಪ್ರಯುಕ್ತ ಆಟೋ ನಂ ಕೆಎ 32 ಬಿ 0188 ನೇದ್ದರಲ್ಲಿ ಕುಳಿತು ಹೋರಟಾಗ  ಆಳಂದ ಚೆಕ್ಕ ಪೋಸ್ಟ್‌ ರಾಣೇಶ ಪೀರ ದರ್ಗಾದ ಹತ್ತಿರ ರೋಡಿನ  ಹತ್ತಿರ  ಹಿಂದಿನಿಂದ ಒಂದು ಕಾರ ಆಟೋಕ್ಕೆ ಓವರ ಟೇಕ ಮಾಡಿ ಯಾವುದೇ ಮುನ್ಸೂಚನೆ ನೀಡಿದೆ ಒಮ್ಮಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿ ಬ್ರೇಕ ಹಾಕಿ ನಿಲ್ಲಿಸಿದ್ದರಿಂದ  ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ಆಟೋದ ಗ್ಲಾಸ ಒಡೆದು ಅದರ ಚೂರುಗಳು ಹಣೆ ಮೇಲೆ & ಎರಡು ಕಣ್ಣೀನ  ಹುಬ್ಬಿನ ಮೇಲೆ ಬಡಿದು ರಕ್ತಗಾಯವಾಗಿದ್ದು . ಕಾರಿನ ಚಾಲಕ ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 393/2012 ಕಲಂ, 279,337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 November 2012

GULBARGA DISTRICT REPORTED CRIMES


ದರೋಡೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಶರಣಬಸಪ್ಪಾ ತಂದೆ ಅಪ್ಪಾರಾವ ಶೇರಿಕರ ಸಾ:ಲಕ್ಷ್ಮೀಗಂಜ ಶಹಾಬಾದ ರವರು ನಾನು ಮತ್ತು ಶಿವಕುಮಾರ ತಂದೆ ಬಾಬುರಾವ ಕೊರವಾರ ಕೂಡಿಕೊಂಡು ದಿನಾಂಕ:27/11/2012 ರಂದು ಮುಂಜಾನೆ ನನ್ನ ಮೋಟಾರ ಸೈಕಲ ಟಿವಿಎಸ್‌ ಎಕ್ಸಸ ನಂ.ಕೆಎ-32 ಡಬ್ಲೂ-4897 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿ ಮರಳಿ ಶಹಾಬಾದ ಕಡೆಗೆ ಮರತೂರ ಮಾರ್ಗವಾಗಿ ಮರತೂರ ಗ್ರಾಮದ ಹತ್ತಿರ ರಾತ್ರಿ ಅಂದಾಜು 9.30 ಪಿಎಂ ಸುಮಾರಿಗೆ ಬರುತ್ತಿರುವಾಗ ಹಿಂದುಗಡೆಯಿಂದ ಮೂರು ಜನರು ಮೋಟಾರ ಸೈಕಲ ಮೇಲೆ ಬಂದು ನಮಗೆ ಸೈಡು ಹೊಡೆದು ಮುಂದೆ ಹೋಗಿ ನಿಲ್ಲಿಸಿ,ಕಣ್ಣಿಗೆ ಕಾರಪುಡಿ ಎರಚಿ ಮಚ್ಚಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿ ನನ್ನಲ್ಲಿದ್ದ ನಗದು ಹಣ 10,000/-ರೂ ಹಾಗೂ ಒಂದು ಸ್ಯಾಮಸಂಗ ಕಂಪನಿಯ ಮೊಬೈಲ  ಅ.ಕಿ.7000/-ರೂ ಹೀಗೆ ಒಟ್ಟು 17,000/-ರೂ ಕಿಮ್ಮತ್ತಿನೇದ್ದವುಗಳನ್ನು ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 156/2012 ಕಲಂ, 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:ಶ್ರೀ. ರಜನಿಕಾಂತ ತಂದೆ ಕಂಠೆಪ್ಪಾ ಸಾ|| ಕಪನೂರ ತಾ||ಜಿ|| ಗುಲಬರ್ಗಾ ರವರು ನಾನು ದಿನಾಂಕ:19/11/2012 ರಂದು 14-30 ಗಂಟೆಗೆ ಸರಾಫ ಬಜಾರ ಮೈಲಾಪೂರ ಬಂಗಾರದ ಅಂಗಡಿ ಹತ್ತಿರ ಹೀರೋ ಹೊಂಡಾ ಸ್ಪೇಲೆಂಡರ್ ಪ್ಲಸ್ ಸಿಲ್ವರ್ ಬಣ್ಣದ ಮೋಟರ ಸೈಕಲ ನಂ:ಕೆಎ 32 ಎಕ್ಸ್ 1119  ಅ||ಕಿ|| 40,000/- ನೇದ್ದನ್ನು ನಿಲ್ಲಿಸಿ ಮಾರ್ಕೆಟ ಮಾಡಲು ಹೋಗಿ, ಮರಳಿ  ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ. ಕಾರಣ ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:124/2012 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹುಡಗ ಕಾಣೆಯಾದ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ,ಅಂಬವ್ವ ಗಂಡ ದಶರಥ ಸನಾಗರ ವ||40,ಸಾ|| ಬೋರಾಬಾಯಿ ನಗರ ಬ್ರಹ್ಮಪುರ ಗುಲಬರ್ಗಾ ರವರು ನನ್ನ  ಮಗನಾದ ಮಂಜುನಾಥ @ಕಾಕಿ ತಂದೆ ದಶರಥ ಸನಾಗರ್ ವ||10 ವರ್ಷ, ಇತನು ದಿನಾಂಕ 02-11-2012 ರಂದು ಮದ್ಯಾಹ್ನ 3-00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ಎಲ್ಲಾ ಕಡೆಗು ಹುಡುಕಾಡಿದರು ಮಗ ಪತ್ತೆ ಆಗದೇ ಇರುವದರಿಂದ, ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಬೇಕು ಅಂತ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:88/2012 ಕಲಂ ಹುಡುಗ ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಮಹ್ಮದ ಅಬ್ದುಲ ಖದೀರ ತಂದೆ ಮೊಹ್ಮದ ಅಬ್ದುಲ ಹಮೀದ ಸಾ|| ಮನೆ ನಂ: ಎಂ.ಐ.ಜಿ.10 ಆನಂದ ನಗರ ರಾಜಾಪೂರ ರೋಡ  ಗುಲಬರ್ಗಾ ರವರು ನಾನು ದಿನಾಂಕ:27/10/2012 ರಂದು 14-30 ಗಂಟೆಗೆ ಸುಪರ ಮಾರ್ಕೆಟ ಘಂಟೋಜಿ ಅಂಗಡಿ ಹತ್ತಿರ ನನ್ನ ಹೀರೋ ಹೊಂಡಾ ಸಿಡಿ 100 ಡಿಲಕ್ಸ್  ಕಪ್ಪು ಬಣ್ಣದ ಮೋಟರ ಸೈಕಲ ನಂ: ಕೆಎ 32 ಎಲ್4210 ಅ||ಕಿ|| 30,000/- ನೇದ್ದನ್ನು ನಿಲ್ಲಿಸಿ ನಮಾಜ ಮುಗಿಸಿಕೊಂಡು ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 123/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ:27-11-12 ಮದ್ಯಾಹ್ನ 2-45 ಗಂಟೆ ಸುಮಾರಿಗೆ ಸಾಗರ ದಾಬಾದ ಹಿಂದಿನ ಜಾಗದಲ್ಲಿ ವಿಠಲ ತಂದೆ ಘಾಳೆಪ್ಪ ರಂಗೋಜಿ ವ: 21 ಸಾ: ದೇಗಾಂವ ತಾ: ಆಳಂದ ಹಾ:ವ: ಸಾಗರ ಧಾಬಾ,ಮಹ್ಮದಅಲಿ ತಂದೆ ಅಬ್ದುಲ ರಶೀದ ಶೇಕ ವ: 24 ವರ್ಷ ಸಾ: ರಹೇಮತ ನಗರ ಗುಲಬರ್ಗಾ,ಬಾಬಾ ತಂದೆ ಮಲ್ಲಿಕಸಾಬ ಭಾಗವಾನ ವ: 36 ಸಾ: ಚಟ್ಟೆವಾಡಿ ರೋಜಾ ಗುಲಬರ್ಗಾ,ಮಹೇಶ ತಂದೆ ರುಕ್ಮಣ್ಣ ಚವ್ಹಾಣ ವ: 35 ವರ್ಷ  ಸಾ: ಮಕ್ತಂಪೂರ ಗುಲಬರ್ಗಾ,ಸೋಮನಾಥ ತಂದೆ ಬಾಬುರಾವ ಏವಲೇ ವ: 35 ಸಾ: ಆರ್‌ಎಸ್‌ ಕಾಲನಿ ಗುಲಬರ್ಗಾ,ನಾಶೀರ ತಂದೆ ಮಹೇಬೂಬಪಟೇಲ ವ: 36 ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ,ಸದ್ದಾಂ ತಂದೆ ಅಮಜಾದ  ಶೇಖ ವ: 20 ಸಾ: ರಹೇಮತ ನಗರ ಗುಲ್ಬರ್ಗಾ,ಸೈಬಣ್ಣ ತಂದೆ ಮಲ್ಲಪ್ಪ ತೋಟ್ನಳ್ಳಿ ಸಾ:ಹೊಸಳ್ಳಿ ತಾ:ಸೇಡಂ ಹಾ:ವ:ಸಾಗರದಾಬಾ ಗುಲ್ಬರ್ಗಾ,ದತ್ತಾತ್ರೇಯ  ತಂದೆ ಕಾಶೀನಾಥ ಪಾಟಳ ವ: 35 ವರ್ಷ ಸಾ: ಸ್ಟೇಷನ ಗಾಣಗಾಪೂರ,ಓಂ ಪ್ರಕಾಶ ತಂದೆ ರಾಮಚಂದ್ರಪ್ಪ ಬಿರಾದಾರ ವ: 27 ವರ್ಷ ಸಾ: ಶಿವಾಜಿನಗರ ಗುಲಬರ್ಗಾ  ರವರು  ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಪಿ.ಎಸ.ಐ ಆನಂದರಾವ ಮತ್ತು ಸಿಬ್ಬಂದಿಯವರು ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಗುಲಬರ್ಗಾ ಮಾರ್ಗದರ್ಶನ ಮತ್ತು ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತ್ರತ್ವದಲ್ಲಿ ದಾಳಿ ಮಾಡಿ 10 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಸಂಬಂಧಿ ಸಿದ ನಗದು ಹಣ 10,400/- ರೂ. ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನ ನಂ: ಗುನ್ನೆ ನಂ 390/12  ಕಲಂ 87 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಅಂಬುಬಾಯಿ ಗಂಡ  ಮಲ್ಲೇಶಪ್ಪಾ ಅಂಬಲಗಿ ವಯ;65 ವರ್ಷ ಉ: ಮನೆಗೆಲಸ ಸಾ: ಕಪನೂರ ತಾ: ಜಿ: ಗುಲಬರ್ಗಾರವರು ನಾನು ದಿನಾಂಕ:27/11/2012 ರಂದು ಹೊಲದಿಂದ ಮನೆಗೆ ರಸ್ತೆಯ ಪಕ್ಕದಿಂದ ನಡೆದುಕೊಂಡು ಬರುತ್ತಿರುವಾಗ ಸಾಯಂಕಾಲ 6:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡ ಕಡೆಯಿಂದ ಹಿಂದಿನಿಂದ ಯಾವುದೋ ಒಂದು ಮೋಟಾರ ಸೈಕಲ  ಸವಾರನು ನನಗೆ ಡಿಕ್ಕಿ ಹೊಡೆದು ಗಾಯಗೊಳಿಸಿ ತನ್ನ ಮೋಟಾರ ಸೈಕಲ್ಲನ್ನು ಹಾಗೇ ಒಡಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಯಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:391/2012  ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಜಗದೇವಿ ಗಂಡ ಶರಣಪ್ಪ ಉಪ್ಪಾರ ವ: 30 ಉ: ಗೌಂಡಿಕೆಲಸ ಜಾ;ಲಿಂಗಾಯತ ಸಾ:ಮೋತಕಪಳ್ಳಿ ತಾ: ಚಿಂಚೋಳಿ ಹಾ: ವ: ಬೇಲೂರ (ಜೆ) ತಾ: ಜಿ: ಗುಲಬರ್ಗಾರವರು ನಾನು ನನ್ನ ಗಂಡ ದಿನಾಂಕ:27/11/2012 ರಂದು ಸಾಯಂಕಾಲ ಮೋಟಾರ ಸೈಕಲ ಮೇಲೆ ಕುಮಸಿ ಗ್ರಾಮದಿಂದ ಬೇಲೂರ (ಜೆ) ಗ್ರಾಮಕ್ಕೆ ನಮ್ಮ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ:ಕೆಎ-32 ಇಎ-6238 ನೇದ್ದರ ಮೇಲೆ ಹೋರಟಿದ್ದು,ನನ್ನ  ಪತಿಯವರು ಅವರಾದ (ಬಿ) ಗ್ರಾಮ ದಾಟಿ ಸ್ವಾಮಿ ಸರ್ಮಥ ಆಶ್ರಮದ ಎದುರಿನ ರಸ್ತೆಯ ಮೇಲೆ ಅತಿವೇಗದಿಂದ ನಡೆಸುತ್ತಾ ಹೋರಟಾಗ ಎದರುನಿಂದ ಯಾವುದೋ ಭಾರಿ ವಾಹನ ಬರಲು ಅದರ ಲೈಟಿನ ಬೆಳಕು ಒಮ್ಮೇಲೆ ಮುಖದ ಮೇಲೆ ಬಿದಿದ್ದರಿಂದ ವೇಗದಲ್ಲಿ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ನನಗೆ ಮತ್ತು ನನ್ನ ಗಂಡನಿಗೆ ತಲೆಗೆ ಹಣೆಗೆ ಅಲಲ್ಲಿ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:392/12 ಕಲಂ 279,337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.