POLICE BHAVAN KALABURAGI

POLICE BHAVAN KALABURAGI

23 November 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ನಾಗಪ್ಪ ತಂದೆ ಕಾಶಪ್ಪ ಕಟ್ಟಿ ಸಾ: ಪಿಲಕಮ್‌ ಏರಿಯಾ ಸಾ||  ವಾಡಿ ತಾ:ಚಿತ್ತಾಪೂರ ಜಿ: ಗುಲಬರ್ಗಾ ರವರು ನಾನು ದಿ:22/11/12 ರಂದು ನರೋಣಾದಲ್ಲಿಯ ದಾದಾ ಪೀರ ದರ್ಗಾ ದೇವರ ಕಾರ್ಯಕ್ರಮಕ್ಕೆ ದೇವಪ್ಪ ತಳವಾರ ಇವರ ಕ್ರೋಜರ್‌ ಕೆಎ 37 4395 ನೇದ್ದನ್ನು ಬಾಡಿಗೆಗೆ ಮಾಡಿಕೊಂಡು ನನ್ನ ಪತ್ನಿ ಹಾಗೂ ಸಂಬಂಧಿಕರನ್ನು ಕರೆದುಕೊಂಡು  ಹೊರಟಿದ್ದು. ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಆಳಂದ ಚೆಕ್ಕಪೋಸ್ಟ್‌‌ ಮುಂದೆ ರಾಣೇಶ ಪೀರ ದರ್ಗಾ ಕ್ಕೆ ಹೋಗುವ ರಸ್ತೆ ಹತ್ತಿರ ಹೋಗುತ್ತಿದ್ದಾಗ ಹಿಂದಿನಿಂದ ಟಿಪ್ಪರ ನಂಬರ ಕೆಎ-32 ಬಿ 5580 ನೇದ್ದರ ಚಾಲಕ ತನ್ನ  ವಾಹನವನ್ನು ಅತಿವೇಗ ಅಲಕ್ಷತನದಿಂದ ಕ್ರೋಜರನ್ನು ಓವರ ಟೇಕ ಮಾಡಲು ಹೋಗಿ ವೇಗದ ನಿಯಂತ್ರಣ ತಪ್ಪಿ ಕ್ರೋಜರಕ್ಕೆ ಡಿಕ್ಕಿ ಹೊಡೆದು  ತರಚಿಕೊಂಡ ಹೋಗಿದ್ದರಿಂದ ವಾಹನದಲ್ಲಿ ನಮಗೇಲ್ಲಾ ಸಾದಾವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:381/12  ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಭೀಮಬಾಯಿ ಗಂಡ ಮಲ್ಲಿಕಾರ್ಜುನ ಕವಲಗಿ ಸಾ|| ಭೂಸನೂರ ರವರು ನಾನು  ದಿನಾಂಕ:22-11-2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮನೆಯಲ್ಲಿ ಕುಳಿತಿರುವಾಗ ರಂಜಿತ @ ರಂಜು ತಂದೆ ಶರಣಪ್ಪ ಬೆಳಮಗಿ ಇತನು ಮಾನ ಭಂಗ ಮಾಡುವ ಉದ್ದೇಶದಿಂದ ಅವಳ ಮನೆಯಲ್ಲಿ ಹೋಗಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅವಳ ಸೀರೆ ಮತ್ತು ಕುಪ್ಪಸ ಹಿಡಿದು ಅವಳೊಂದಿಗೆ ದಂಗಾಮುಸ್ತಿ ಮಾಡುತ್ತಾ ಮಾನ ಭಂಗಕ್ಕೆ ಪ್ರಯತ್ನಿಸಿದ್ದು ನಾನು  ಚೀರಾಡುತ್ತಿರುವಾಗ ನೀನು  ಚೀರಾಡುತ್ತೀಯಾ ಭೋಸಡಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ:97/2012 ಕಲಂ, 448, 354, 323, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

22 November 2012

GULBARGA DISTRICT REPORTED CRIME


ಗಾಂಜಾ ಜಪ್ತಿ:
ನೆಲೋಗಿ  ಪೊಲೀಸ್ ಠಾಣೆ: ಶ್ರೀ ಜಗದೀಶ ಕೆ.ಜಿ.ಪಿ.ಎಸ್.ಐ ನೆಲೋಗಿ ಪೊಲೀಸ ಠಾಣೆ ರವರು ದಿನಾಂಕ:22-11-2012 ರಂದು ನೆಲೋಗಿ ಸಿಮಾಂತರದಲ್ಲಿಯ ಹೊಲ ಸರ್ವೇ ನಂ 65  ರಲ್ಲಿ ಅಕ್ರಮವಾಗಿ 10 ಗಾಂಜಾದ ಗಿಡಗಳು ಗುರುಲಿಂಗಪ್ಪ ತಂದೆ ಮರೇಪ್ಪ ಝಳಕಿ ಇವರು ಬೆಳಸಿರುವುದಾಗಿ ತಿಳಿದು ಬಂದಿದ್ದು, ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾ ರವರ ಆದೇಶದ ಮೇರೆಗೆ ಗಾಂಜಾ ಗಿಡಗಳು ಅಂದಾಜು ಕಿಮ್ಮತ್ತು 15000=00 ರೂಪಾಯಿಗಳದ್ದು ಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:149/2012 ಕಲಂ 8 (ಬಿ), 20 (ಎ) ಎನ್.ಡಿ.ಪಿ.ಎಸ್. ಆಕ್ಟ 1985 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಅಂಬಾರಾಯ ತಂದೆ ಶರಣಪ್ಪಾ ಕೊರಳ್ಳಿ ಸಾ|| ಕೊರಳ್ಳಿ ಗ್ರಾಮ ಆಳಂದ ತಾಲೂಕ,ಸಧ್ಯ ಬಿದ್ದಾಪೂರ ಕಾಲೋನಿ ಹೈ ಕೊರ್ಟ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ: 19-11-2012 ರಂದು ರಾತ್ರಿ ಟಿಪ್ಪರ ಕೆಎ 32 ಬಿ-2679 ನೇದ್ದನನ್ನು ಸಿಲ್ಲಿಸಿದ್ದು, ಬೆಳಿಗ್ಗೆ ಎದ್ದು ನೋಡಲು ಟಿಪ್ಪರ ಇರಲಿಲ್ಲ ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:380/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

21 November 2012

GULBARGA DISTRICT REPORTED CRIMES


 ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಜೂಜಾಟ ಆಡುತ್ತಿದ್ದ 15 ಜನರ ಬಂದನ:ಮತ್ತು ಜೂಜಾಟಕ್ಕೆ ಉಪಯೋಗಿಸಿದ 1,04,380/ ರೂಪಾಯಿಗಳು ಜಪ್ತಿ.
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 20/11/2012 ರಂದು ಸಾಯಂಕಾಲ ಕೈಗಾರಿಕೆ ಪ್ರದೇಶ 2 ನೇ ಹಂತದ ಮೊದಲನೇ ಕ್ರಾಸ ಹತ್ತಿರ ಇರುವ ವಿಶ್ವನಾಥ ಬಿರಾದಾರ ಆದರ್ಶ ದಾಲಮಿಲ ಎದರುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಜೂಜಾಟವಾಡುತ್ತಿದ್ದಾರೆ ಅಂತಾ ಬಾತ್ಮಿ ಬಮದ ಮೇರೆಗೆ ಮಾನ್ಯ ಪವಾರ ಪ್ರವೀಣ ಮಧುಕರ ಎಸ್ಪಿ ಸಾಹೇಬರು  ಗುಲಬರ್ಗಾ ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್ಪಿ ಸಾಹೇಬರು  ಗುಲಬರ್ಗಾ  ಹಾಗೂ ಮಾನ್ಯ  ಹೆಚ್, ತಿಮ್ಮಪ್ಪ ಡಿಎಸ್ಪಿ ಗ್ರಾಮೀಣ ಉಪ ವಿಭಾಗ  ಗುಲಬರ್ಗಾ  ರವರುಗಳ ಮಾರ್ಗದರ್ಶನದಲ್ಲಿ, ಮಾನ್ಯ  ಸತೀಶ, ಕೆ, ಎಮ್ ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾರವರ ನೇತೃತ್ವದಲ್ಲಿ  ಆನಂದರಾವ ಎಸ್ ಎನ್ ಪಿಎಸ್ಐ (ಕಾ&ಸು) ಗ್ರಾಮೀಣ ಠಾಣೆ ಹಾಗೂ ಠಾಣೆ ಸಿಬ್ಬಂದಿಗಳಾದ ಸಂಜೀವರಡ್ಡಿ, ನರಸಿಂಹ ಚಾರಿ, ಹಣಮಂತ,ಶಿವಶಂಕರ,ಜಾಧವ,ದತ್ತಾತ್ರೇಯ,ಮೊಜೋದ್ದಿನ,ಶಿವಶರಣಪ್ಪ,ಶಿವಶರಣಪ್ಪ,,ಈರಣ್ಣ,ಚನ್ನಬಸವಯ್ಯ,ಚಾಲಕರ ಬಂಡೆಪ್ಪ ಎಪಿಸಿ,ರಮೇಶ,ಸಿಪಿಸಿನೇದ್ದವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ 1} ಗೌತಮ ಅರ್ಜುನ ಖಾಜನೋರ ವ:32 ವರ್ಷ ಉ: ಕಾರ ಚಲಕ ಸಾ: ಪ್ರಗತಿ ಕಾಲನಿ ಗುಲಬರ್ಗಾ 2} ವರ್ಧನ ತಂದೆ ಮಾರುತಿರಾವ ಮಿಣಜಗಿ ವ:28 ವರ್ಷ ಉ: ಎಂ.ಬಿ.ಎ. ವಿದ್ಯಾರ್ಥಿ ಸಾ: ಪ್ರಗತಿ ಕಾಲನಿ ಗುಲಬರ್ಗಾ 3} ಆನಂದ ತಂದೆ ಶಿವಶರಣಪ್ಪ ಪಾಟೀಲ ವ;25 ವರ್ಷ ಉ: ಬಿ.ಕಾಂ. ವಿದ್ಯಾರ್ಥಿ  ಸಾ: ಎಂ.ಬಿ. ನಗರ  ಗುಲಬರ್ಗಾ 4} ರಾಜು @ ಮಂಜುನಾಥ ತಂದೆ ಜಯಂತ ವ:30 ವರ್ಷ ಉ:ಗುತ್ತೆದಾರ ಕೆಲಸ ಸಾ: ನಂ. 105 9ನೇ ಕ್ರಾಸ ಕೆ.ಅರ್.ಪುರಣ ಬೆಂಗಳೂರ 5} ಬಾಷಾಸಾಬ ತಂದೆ ಬಾಬಾಸಾಬ ವ;44 ವರ್ಷ ಉ: ತರಕಾರಿ ವ್ಯಾಪರ ಸಾ: ಎಮ್.ಬಿ. ಬ್ಲಾಕ  ಸೆಕೆಂದ ಮೇನ್ ಮಲ್ಲೇಶರಂ ಬೆಂಗಳೂರ 6} ಸಾಗರ ತಂದೆ ಬಲರಾಜ ಲಾಹೋಟಿ ವ:20 ವರ್ಷ ಉ: ಜಾತಿ ಕಸಬು ಸಾ: ಮೇತಾರ ಗಲ್ಲಿ ಗಾಜಿಪೂರ ಗುಲಬರ್ಗಾ 7} ಸಚಿನ ತಂದೆ ಬಸವಂತರಾವ ಯಳವಂತಗಿ  ವ:23 ವರ್ಷ ಉ:ಸರಾಫಿ ವ್ಯಾಪರ  ಸಾ: ಜಗತ ಭೀಮ ನಗರ ಗುಲಬರ್ಗಾ 8} ಶರಣು @ ಶರಣಬಸವ ತಂದೆ ಶಿವಶರಣಪ್ಪ ಪಾಟೀಲವ:28 ವರ್ಷ ಉ: ವಿದ್ಯಾರ್ಥಿ ಸಾ: ಎಂ.ಬಿ. ನಗರ ಗುಲಬರ್ಗಾ 9} ಅನಿಲ ತಂದೆ ಸಿದ್ದಣ್ಣಾ ಬತ್ತಲಿ ವ:28 ವರ್ಷ ಉ: ಫೈನಾನ್ಸ ಕೆಲಸ ಸಾ: ರಾಮ ನಗರ ಗುಲಬರ್ಗಾ 10} ಜಗನಾಥ ತಂದೆ ಶರಣಪ್ಪ ಸುಲ್ತನಪೂರ ವ;25 ವರ್ಷ ಉ: ಒಕ್ಕಲುತನ ಸಾ; ಹಾರುತಿ ಹಡಗಿಲ ತಾ:ಜಿ: ಗುಲಬರ್ಗಾ 11} ಗುರುಶಾಂತ ತಂದೆ ಕಲ್ಯಾಣರಾವ ವಾಡಿ ವ:28 ವರ್ಷ ಉ: ಕಾರ ಚಾಲಕ ಸಾ: ಮಾಹಾದೇವ ನಗರ ಗುಲಬರ್ಗಾ 12} ಪ್ರದೀಪ ತಂದೆ ರತ್ನನಸಿಂಗ ರಿಡ್ಡಲಾನ ವ:20 ವರ್ಷ ಉ: ಖಾಸಗಿ ಕೆಲಸ ಸಾ: ಮೇತಾರ ಗಲ್ಲಿ ಗಾಜಿಪೂರ ಗುಲಬರ್ಗಾ 13} ಕಿಶೋರ ತಂದೆ ಶಿವಶಂಕರ ಪಾಟೀಲ ವ:31 ವರ್ಷ ಉ: ವ್ಯಾಪರ ಸಾ; ಬ್ರಹ್ಮಪೂರ ಗುಲಬರ್ಗಾ 14} ಅಜಯಸಿಂಗ ತಂದೆ ಧರ್ಮಸಿAಗ ವ:22 ವರ್ಷ ಉ: ಬೇಕಾರ  ಸಾ: ಗಾಜಿಪೂರ ಗುಲಬರ್ಗಾ 15} ಶರಣಯ್ಯ ತಂದೆ ಶಂಕ್ರಯ್ಯ ಭಾಸಗಿ ಮಠ ವ:30 ವರ್ಷ ಉ:ಟೆಂಗಿನ ವ್ಯಾಪರ ಸಾ: ಬ್ರಹ್ಮಪೂರ ಗುಲಬರ್ಗಾ ರವರುಗಳ ಮೇಲೆ ದಾಳಿ ಮಾಡಿ ಅಂದರ ಬಾಹರ ಜೂಜಾಟಕ್ಕೆ ಬಳಸಿದ ನಗದು ಹಣ 1,04,380/- ರೂಪಾಯಿಗಳು ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:379/2012 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಲಾಗಿದೆ.
ವರದಕ್ಷಿಣೆ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಮಾನ್ಯ 2 ನೇ ಅಪರ ಜೆ.ಎಂ.ಎಫ.ಸಿ ನ್ಯಾಯಾಲಯ ಪತ್ರ ನಂ 4405/12 ದಿನಾಂಕ 17.11.2012 ನೇದ್ದರ ಪತ್ರದ ತಂದು ಹಾಜರ ಪಡಿಸಿದ್ದರ ಸಾರಾಂಶದವೇನೆಂದರೆ, ಮಾನ್ಯ ನ್ಯಾಯಾಲಯದ ಆದೇಶದಂತೆ ಕಲಂ 156(3) ಸಿ.ಆರ.ಪಿ.ಸಿ ಪ್ರಕಾರ ಪಿ.ಸಿ ನಂ 589/12 ನೇದ್ದರ ತನಿಖೆ ಕೈಗೊಳ್ಳುವಂತೆ ಆದೇಶದ ಪ್ರಕಾರ ಶ್ರೀಮತಿ ಅರ್ಚನಾ ಗಂಡ ಪ್ರವೀಣ ಕುಮಾರ ಪಾಟೀಲ್  : 30, : ಮನೆಗೆಲಸ ಜಾ: ಲಿಂಗಾಯತ ಸಾ: ಪ್ರಬುದೇವ ಎಪಿಸಿ 273 ಮನೆ ನಂ 140 (ಬಿ) ಪೊಲೀಸ  ಕಾಲೋನಿ ಗುಲಬರ್ಗಾರವರು  ನನ್ನ ಮದುವೆಯು ದಿನಾಂಕ:02.12.2010 ರಂದು ಪ್ರವೀಣಕುಮಾರ ಪಾಟೀಲ ಇತನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ 50 ತೊಲೆ ಬಂಗಾರ 5 ಕೆಜಿ ಬೆಳ್ಳಿ, 5 ಲಕ್ಷ ನಗದು ಹಣ ಕೊಟ್ಟು ಸಂಪ್ರದಾಯದಂತೆ ಮದುವೆ ಮಾಡಿರುತ್ತಾರೆ. ಮದುವೆಯಾದ ಎರಡು ದಿವಸದ ನಂತರ ಗಂಡ ಮತ್ತು ಗಂಡನ ಮನೆಯವರು ಇನ್ನು ವರದಕ್ಷಿಣೆ ತರಬೇಕೆಂದು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡ ಹತ್ತಿದರು. ಮದುವೆಯಾದ ಒಂದು ತಿಂಗಳ ನಂತರ ನನ್ನ ಗಂಡ ಅಸ್ಟ್ರಲೀಯಾ ಬ್ರಿಸಬಾನಗೆ ಡಿಜಾಯನ ಇಂನಜಿನಿಯರ್ ಅಂತಾ ಕೆಲಸಕ್ಕೆ ಹೋದನು. ನಂತರ ನಾನು ಗಂಡನ ಮನೆಯಲ್ಲಿ ಆರಾಮವಿಲ್ಲಾದಿದ್ದಾಗ ಗಂಡನ ಮನೆಯವರು ಯಾರು ಉಪಚಾರ ಕೊಡಸಲಿಲ್ಲಾ. ಮನೆಯ ಸಾಲ ಕೊಡಬೇಕಾಗಿದೆ ನೀನು ತವರು ಮನೆಯಿಂದ ವರದಕ್ಷಣೆ  ತೆಗೆದುಕೊಂಡು ಬಾ ಅಂತಾ ಮತ್ತು ನೌಕರಿ ಮಾಡು ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡಲು ಪ್ರಾರಂಬಿಸಿ ದಿನಾಂಕ:02.10.2010 ರಂದು  ಮುಂಜಾನೆ 10-30 ಗಂಟೆಗೆ ಗಂಡನ ಮನೆಯವರು ಟಾಟಾ ಸುಮೋ ತೆಗೆದುಕೊಂಡು ನನ್ನ ತವರು ಮನೆಯಾದ ಗುಲಬರ್ಗಾಕ್ಕೆ ಬಂದು  ಇನ್ನೂ 20 ಲಕ್ಷ ವರದಕ್ಷಣೆ ಕೊಡಬೇಕು ಇಲ್ಲಾವಾದರೆ ನಾನು ಇನ್ನೊಂದು ಮದುವೆಯಾಗುತ್ತೇನೆ ಅಂತಾ ನನ್ನ ಗಂಡ ಮತ್ತು  ಗಂಗಾಧರ ಎಂಬುವನು ನನ್ನ ತಾಯಿಗೆ ಹೊಡೆದರು ನನ್ನ ಕೂದಲು ಎಳೆದಾಳಿ ಬಿಡಿಸಲು ಬಂದ ನನ್ನ ಅಣ್ಣನಿಗೆ ಕೂಡ ಆ ಸಮಯದಲ್ಲಿ ನಮ್ಮ ಮನೆಯಲ್ಲಿ ನೆಂಟರು ಬಂದಿದರು. ಒಂದು ವಾರದ ನಂತರ ನನ್ನ ಗಂಡ ಹೇಳದೇ ಕೇಳದೇ ಆಸ್ಟ್ರಲೀಯಾಕ್ಕೆ ಹೋಗಿದ್ದು. ನನ್ನ ವಿಸಾ ಮತ್ತು ಬ್ಯಾಂಕ ಅಕೌಂಟ್ ರದ್ದುಪಡಿಸಿರುತ್ತಾರೆ.ನಾನು ನನ್ನ ಗಂಡನಿಗೆ ಫೊನ ಮುಖಾಂತರ ಸಂಪರ್ಕಿಸಿದರು ಅದಕ್ಕೆ ಸ್ಪಂದಿಸಿರುವುದಿಲ್ಲಾ ಅಂತಾ ಇತ್ಯಾದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:79/2012 ಕಲಂ 498(ಎ),323.504.506.ಐ.ಪಿ.ಸಿ 3&4 ಡಿ.ಪಿ.ಎಕ್ಟ್. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.