POLICE BHAVAN KALABURAGI

POLICE BHAVAN KALABURAGI

09 November 2012

GULBARGA DISTRICT REPORTED CRIMES


ದರೋಡೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸುಭಾಷ ತಂದೆ ಗಿರೇಪ್ಪಾ ಬಾಲಖೆಡ್ ಸಾ:ರೇವಣಸಿದ್ದೇಶ್ವರ ಕಾಲೋನಿ ಗುಲ್ಬರ್ಗಾರವರು ನಾನು ದಿನಾಂಕ:08/11/2012 ರಂದು ನಮ್ಮ ಮಾಲೀಕರ ಟ್ಯಾಂಕರ ನಂ.ಎಮ್‌.ಹೆಚ್‌-11,ಎಮ್‌‌-3991 ನೇದ್ದರಲ್ಲಿ ಸೀಮೆಎಣ್ಣೆ ನಂದೂರ ಡಿಪೋದಲ್ಲಿ ತುಂಬಿಕೊಂಡು ಚಿತ್ತಾಪುರ ತಾಲ್ಲೂಕಿನ ಹಳ್ಳಿಗಳಾದ ನಾಲವಾರ ಗೇಟ್‌ ಹತ್ತಿರ ಇರುವ ಬಾಲು ನಾಯಕ ತಾಂಡಾ, ಮಾರಡಿಗ್ರಾಮ, ಕೊಲ್ಲೂರ ಗ್ರಾಮ ವಿ.ಎಸ್‌‌.ಎಸ್‌.ಎನ್‌, ಕನಗನಹಳ್ಳಿ, ಸನ್ನತಿ, ರಾಂಪೂರ ಹಳ್ಳಿ, ಶಾಂಫೂರ ಹಳ್ಳಿ, ತರಕಸಪೇಟ ಗ್ರಾಮ, ಸೂಗೂರ [ಎನ್‌] ಗ್ರಾಮಗಳಿಗೆ ಹೋಗಿ ಸೀಮೆಎಣ್ಣೆ ಕೊಟ್ಟು ವಾಪಾಸ ಗುಲಬರ್ಗಾಕ್ಕೆ ವಾಡಿ ಬೈಪಾಸ ರೋಡಿನಿಂದ ರಾವೂರ ಮುಖಾಂತರ ಬರುವಾಗ ಭಂಕೂರ ಕ್ರಾಸ ದಾಟಿ ಬ್ರೀಡ್ಜ ಹತ್ತಿರ 10.30 ಗಂಟೆ ಸುಮಾರಿಗೆ ಹಿಂದುಗಡೆಯಿಂದ 4 ಮೋಟಾರ ಬೈಕ ಮೇಲೆ 7-8 ಜನರು ಬಂದು ಟ್ಯಾಂಕರ ಎದರುಗಡೆ ಬಂದು ಟ್ಯಾಂಕರ ತಡೆದು ಹೆದರಿಸಿ ಮಚ್ಚು ತೊರಿಸಿ ಕೈಯಿಂದ ಹೊಡೆದು ಒಂದು ಖಾಕಿ ಕಲರ ಬ್ಯಾಗಿನಲ್ಲಿದ್ದ 1,85,500/-ರೂ ಹಣ, 3 ಮೊಬೈಲ ಸೆಟಗಳು ಅ.ಕಿ.3700/-,ಒಂದು  ಕ್ಯಾಲಕುಲೇಟರ ಅ.ಕಿ. 80/-  ಒಂದು ಕನ್ನಡಕ ಅ.ಕಿ. 400/- ರೂ ನೇದ್ದವುಗಳನ್ನು  ಹೀಗೆ ಒಟ್ಟು 1,89,680/- ರೂ. ನೇದ್ದವುಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2012 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:-08/11/2012 ರಂದು ಮುಂಜಾನೆ 09:30 ಗಂಟೆಗೆ ಫಿರ್ಯಾದಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಮಾಡುತ್ತಾ ಹಾಗರಗಾ ಕ್ರಾಸ ಕಡೆಗೆ ಹೋದಾಗ ಹಾಗರಗಾ ಕ್ರಾಸದಲ್ಲಿ ಸರಫರಾಜ ತಂದೆ ಎಂ.ಡಿ ಇಸಾ ವಯಾ:24 ವರ್ಷ ಜಾ:ಮುಸ್ಲಿಂ ಸಾ:ನೂರಾನಿ ಮೊಹಲ್ಲಾ ಹಾಗರಗಾ ಕ್ರಾಸ ಗುಲಬರ್ಗಾ ಇತನು ರೋಡಿನ ಮೇಲೆ ನಿಂತುಕೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಅವಾಶ್ಚವಾಗಿ ಬೈಯುತ್ತಾ ಹೋಗಿ ಬರುವ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದರಿಂದ ಸದರಿಯವನಿಗೆ ಮುಂಜಾಗ್ರತಾ ಕ್ರಮ ಅಡಿಯಲ್ಲಿ ದಸ್ತಗಿರಿ ಮಾಡಿ ಠಾಣೆ ಗುನ್ನೆ ನಂ: 359/2012 ಕಲಂ, 110 (ಈ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ದತ್ತಪ್ಪಾ ತಂದೆ ಲಿಂಗಪ್ಪ ಸುಂಟನೂರ ಸಾ:ಹತಗುಂದಾ ತಾ:ಜಿ:ಗುಲಬರ್ಗಾ ರವರು ನಾನು ದಿ:08-11-2012 ರಂದು ಮುಂಜಾನೆ ಶಿವಪುತ್ರ ಮದರಿ ಇತನು ನಡೆಯಿಸುತಿದ್ದ ಬಜಾಜ ಡಿಸ್ಕವರಿ ಮೋಟಾರ ಸೈಕಲ್ ನಂ.ಕೆ.ಎ32 ಇಬಿ-6690 ನೇದ್ದರ ಹಿಂದೆ ಕುಳಿತು  ಹತಗುಂದಾ ಗ್ರಾಮದಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಗುಲಬರ್ಗಾ- ಆಳಂದ ರೋಡನ ಕೆರಿಬೋಸಗಾ ದಾಟಿ ಸಂತೋಷ ದಾಬಾದ ಎದರುಗಡೆ ಮೋಟಾರ ಸೈಕಲ್ ಚಾಲಕ ಶಿವಪುತ್ರ ಇತನು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿ ರೋಡಿನ ಬದಿಗೆ ಅಪಘಾತ ಪಡಿಸಿ ನನಗೆ ಮತ್ತು ಶಿವಪುತ್ರ ಇತನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 360/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

08 November 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಹಣಮಂತರಾಯ ತಂದೆ ಗೋಪಾಲ ಗೊಳಕರ  ಸಾ:ಮೇಲಿನಕೇರಿ ಜಗತ ಗುಲಬರ್ಗಾ  ರವರು   ನಾನು ದಿನನಿತ್ಯದಂತೆ ದಿನಾಂಕ 07-11-12 ರಂದು ನಮ್ಮ ಮಾಲೀಕರ ಅಂಗಡಿಗೆ ಕೆಲಸಕ್ಕೆ ಮೋಟಾರ ಸೈಕಲ ನಂ ಕೆಎ-22 ಇಪಿ-6177 ರ ಮೇಲೆ ಮಿಲನ ಚೌಕದಿಂದ ತಿರಂದಾಜ ಮುಖಾಂತರ ಬರುವಾಗ ಕಮಲಾಪೂರ ಬಿಲ್ಡಿಂಗ ಎದರು ರೋಡಿನ ಮೇಲೆ ಮೋಟಾರ ಸೈಕಲ ನಂ:ಕೆಎ-32 ಎಸ್-6266 ನೇದ್ದರ ಸವಾರ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಡಿಕ್ಕಿ ಪಡಿಸಿದ  ಮೋಟಾರ ಸೈಕಲ ಸವಾರ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/12  ಕಲಂ: 279,337 ಐ.ಪಿ.ಸಿ sss ಸಂ 187 ಐ,ಎಮ್,ವಿ ಆಕ್ಟ   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.           

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:07/11/2012 ರಂದು ಸಾಯಂಕಾಲ 5-00 ಗಂಟೆಗೆ ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಮತ್ತು ಠಾಣೆಯ ಸಿಬ್ಬಂದಿ ಜನರಾದ ಮಾರುತಿ ಎ.ಎಸ್.ಐಬಸವರಾಜಪ್ರಕಾಶ, ಪಿಸಿಗಳಾದ ಮಹಾಂತೇಶ,ಅಶೋಕ ಕುಮಾರಗೌಡ ಎ.ಪಿ.ಸಿ  ಹಾಗೂ 'ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಶಿವಪ್ರಕಾಶ ರವರು ಕೂಡಿಕೊಂಡು ಬಹುಮನಿ ಹೊಟೇಲ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ ಬಾಹರ ಎಂಬ ಇಸ್ಪೆಟ್ ಜೂಜಾಟ ಆಡುತ್ತಿದ್ದ 15 ಜನರ ಮೇಲೆ ದಾಳಿ ಮಾಡಿ ಅವರ ಹೆಸರು ವಿಚಾರಿಸಲು ಜಯಾನಂದ ತಂದೆ ಚನ್ನಪ್ಪ ಬಿರಾದಾರವಯ|| 45, || ಒಕ್ಕಲುತನಸಾ|| ದೇಗಾಂವ ತಾ|| ಆಳಂದ, ಶಂಕ್ರಪ್ಪ ತಂದೆ ಚಂದಪ್ಪ ಪೂಜಾರಿ ಸಾ|| ಕಡಗಂಚಿ ತಾ||ಆಳಂದ ರಮೇಶಸ್ವಾಮಿ ತಂದೆ ಬಸಲಿಂಗಯ್ಯ ಮಠಪತಿ ಸಾ||ನರೋಣಾ ತಾ|| ಆಳಂದಕಲ್ಲಪ್ಪ ತಂದೆ ಮಹಾಂತಪ್ಪ ಬಡಿಗೇರಸಾ|| ಬಸವಂತವಾಡಿ ತಾ|| ಆಳಂದಸೂರ್ಯಕಾಂತ ತಂದೆ ಅನಂತರಾಮ ಕಲಾಲಸಾ|| ನರೋಣಾ ತಾ|| ಆಳಂದ ಚಂದ್ರಶೇಖರ ತಂದೆ ಭೀಮರಾವ ಸಲಗರ ಸಾ|| ಜಯನಗರ ಗುಲಬರ್ಗಾಶಿವರಾಜ ತಂದೆ ಅಣ್ಣಪ್ಪ ದಿಕ್ಕಸಂಗಿ ಸಾ|| ಖಾದ್ರಿ ಚೌಕ ಗುಲಬರ್ಗಾ, ನಟರಾಜ ತಂದೆ ರಾಯಪ್ಪ ಕಟ್ಟಿಮನಿ ಸಾ|| ಗಂಗಾನಗರ ಬ್ರಹ್ಮಪೂರ ಗುಲಬರ್ಗಾ,, ಸಂತೋಷ ತಂದೆ ಕಾಶಪ್ಪ ತಿವಾರಿ ಸಾ|| ಮನೆ ನಂ: 11-44/7 ಬ್ರಹ್ಮಪೂರ ಗುಲಬರ್ಗಾಅಮಿತ ತಂದೆ ಭಗತ ಠಾಕೂರಸಾ|| ಖೂಬಾ ಪ್ಲಾಟ ಗುಲಬರ್ಗಾ ಅರವಿಂದ ತಂದೆ ಸೂರ್ಯಕಾಂತ ಇನಾಮದಾರಸಾ|| ಮನೆ ನಂ:11-521/11 ಬ್ರಹ್ಮಪೂರ ಗುಲಬರ್ಗಾಧನಂಜಯ ತಂದೆ ರಂಗರಾವ ಕುಲಕರ್ಣಿಸಾ|| ಮನೆ ನಂ: 48 ಮಾಕಾಲೇಔಟ ಜೇವರ್ಗಿ ಕಾಲೋನಿ ಗುಲಬರ್ಗಾಶಿವರಾಯ ತಂದೆ ಗುಂಡಪ್ಪ ಬಿರಾದಾರಸಾ||ದೇಗಾಂವತಾ|| ಆಳಂದ,  ರಾಜಶೇಖರ ತಂದೆ ರಾಮಚಂದ್ರ ಸಾ||ಬುದ್ದನಗರ ಗುಲಬರ್ಗಾ, ಮತ್ತು ಅಮಜದ ಅಲಿ ತಂದೆ ಮಹ್ಮದ ಅಲಿ, ,ಸಾ|| ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿರುವ ನಗದು ಹಣ  ರೂ.34400/- ಹಾಗೂ  ಇಸ್ಪೆಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 114/2012 ಕಲಂ: 87 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕ್ರೂಜರ ಚಾಲಕ ಮೇಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಸುಲ್ತಾನಪೂರ ಕೆ.ಎಸ್.ಆರ್.ಪಿ.ಪೊಲೀಸ್ ಕ್ವಾರ್ಟ ಹತ್ತಿರ ಕಲ್ಲಹಂಗರಗಾ ಕಡೆಯಿಂದ ಪಾಂಡುರಂಗ ತಂದೆ ತಿಪ್ಪಣ್ಣಾ ಮುಗಳ್ನಾಂವ  ಉ;ಕ್ರೋಜರ ಜೀಪ ಕೆಎ 25 ಸಿ-4253 ಡ್ರೈವರ ಸಾ;ಸೈಯದ ಚಿಂಚೋಳಿ ತಾ;ಜಿ;ಗುಲಬರ್ಗಾ  ಇತನು ತನ್ನ  ಕ್ರೋಷರ ಚಾಲಕ ಕ್ರೋಷರ ಟಾಪ ಮೇಲೆ ಮತ್ತು ಒಳಗೆ ಜನರನ್ನು ತುಂಬಿ ಕೊಂಡು, ಹಿಂದಿನ ಬಾಗಿಲು ಮುಚ್ಚದೇ ಫೂಟ್ಟ್ ರೆಸ್ಟ ಮೇಲೆ ಜನ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಮಾನವನ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬರುತ್ತಿರುವದನ್ನು ನೋಡಿ, ಆನಂದರಾವ ಎಸ್.ಎನ್. ಪಿ.ಎಸ್.ಐ.ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳುವ ಕುರಿತು ಠಾಣೆ ಗುನ್ನೆ ನಂ: 357/2012 ಕಳಂ, 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಸ್ಟೋಬ್ಲಾಸ್ಟ ಆಗಿ ಗಂಡನ ಸಾವು ಹೆಂಡತಿ ಉಪಚಾರದಲ್ಲಿ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ :ಶ್ರೀಮತಿ  ಕವಿತಾ ಗಂಡ ಅವಿನಾಶ ಡೊಂಗರೆ ಸಾ: ಕೋಹಿನೂರ ವಾಡಿ ತಾ: ಬಸವಕಲ್ಯಾಣ ಹಾ:ವ:ರಾಮನಗರ ಟಿವಿ ಸ್ಟೇಷನ  ಗುಲ್ಬರ್ಗಾ ರವರು ನಾನು ದಿನಾಂಕ:07/11/2012 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಮನೆಯಲ್ಲಿ  ಅವಸರದಲ್ಲಿ ಅಡುಗೆ ಮಾಡಿ ಶಾಲೆಗೆ ಕೆಲಸಕ್ಕೆ ಹೋಗಲು ಸ್ಟೋ ಹಚ್ಚಲು ಸ್ಟೋ ಲಿಕೇಜ ಆಗುತ್ತಿದ್ದರಿಂದ ಮತ್ತಷ್ಟು ಜೋರಾಗಿ ಹವಾ ಹಾಕಿ ಪೀನ ಮಾಡುವ ಕಾಲಕ್ಕೆ ಸೀಮೆಎಣ್ಣೆ ಒಮ್ಮೇಲೆ ಹಾರಿ ನೆಲದ ಮೇಲೆ ಮತ್ತು ನಾನು ಉಟ್ಟುಕೊಂಡಿರುವ ಸೀರೆಯ ಸೇರಗಿನ ಮೇಲೆ ಬಿದಿದ್ದು ಅದನ್ನು ಗಮನಿಸದೇ ಕಡ್ಡಿ ಕೋರೆದು ಸ್ಟೋಗೆ ಬೆಂಕಿ ಹಚ್ಚಿದಾಗ ಒಮ್ಮಿಂದ್ಮೋಲೆ  ನನ್ನ  ಸೀರೆಗೆ ಮತ್ತು ನೆಲದ ಮೇಲೆ ಬಿದ್ದ ಎಣ್ಣೆಗೆ ಬೆಂಕಿ ಹತ್ತಿದ್ದು,ಆ ನಾನು ಚೀರಾಡುವ ಸಪ್ಪಳ ಕೇಳಿ ನನ್ನ ಗಂಡ ಹತ್ತಿರ ಬಂದಾಗ ನಾನು ಅವನಿಗೆ ತಬ್ಬಿಕೊಂಡಾಗ ನನ್ನ ಮೈಗೆ ಹತ್ತಿದ ಬೆಂಕಿ ನನ್ನ ಗಂಡನ ಮೈಗೆ ಹತ್ತಿ ಮೈಸುಟ್ಟು ಹೋಗಿರುತ್ತದೆ. ಉಪಚಾರ ಪಡೆಯುತ್ತಾ ನನ್ನ ಗಂಡ ಮೃತ್ತಪಟ್ಟಿದ್ದು ನಾನು ಇನ್ನೂ ಉಪಚಾರದಲ್ಲಿರುತ್ತೆನೆ. ನನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಸಂಶಯ ಇವರುವದಿಲ್ಲ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಯು.ಡಿ.ಅರ್ ನಂ: 174 ಸಿಅರಪಿಸಿ ಪ್ರಕಾರ ಯುಡಿಅರ್ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.