POLICE BHAVAN KALABURAGI

POLICE BHAVAN KALABURAGI

06 October 2012

Gulbarga District Reported Crimes



ಜಾತಿ ನಿಂದನೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ : ಶ್ರೀ ಸುಭಾಸ ತಂದೆ ಬಂಡೆಪ್ಪ ವ|| 22 ವರ್ಷ, ಜಾ|| ಎಸ್.ಸಿ ಸಾ|| ಭೂಸನೂರ ರವರು ಐ.ಟಿ.ಐ ಮತ್ತು ಡಿಪ್ಲೊಮಾ ವಿಧ್ಯಾಭ್ಯಾಸ ಮುಗಿಸಿಕೊಂಡಿದ್ದು ಸುಮಾರು 1 ತಿಂಗಳ ಹಿಂದೆ ಎನ.ಎಸ್.ಎಲ ಸುಗರ್ಸ ಭೂಸನೂರ ಇವರು ತಮ್ಮ ಪ್ಯಾಕ್ಟರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರಿಂದ ಫಿರ್ಯಾದಿದಾರರು ದಿನಾಂಕ 05/10/2012 ರಂದು ಮುಂಜಾನೆ ಫ್ಯಾಕ್ಟರಿಗೆ ಇಂಟರವೀವ ಕೊಡಲು ಹೋಗಿದ್ದು ಅಲ್ಲಿ ಹೆಚ.ಆರ್ ವಿಭಾಗದ ಮ್ಯಾನೇಜರ ಆದ ರಾಜೆಂದ್ರಸಿಂಗ ಇವರ ಆಫೀಸನಲ್ಲಿ ಹೋಗಿ ತನ್ನ  ವಿಧ್ಯಾಭ್ಯಾಸದ ಕಾಗದ ಪತ್ರಗಳನ್ನು ತೋರಿಸಿದ್ದು ಕಾಗದ ಪತ್ರ ಪರಿಶೀಲಿಸಿದ ನಂತರ ಜಾತಿಯ ಬಗ್ಗೆ ವಿಚಾರಿಸಿ ನಂತರ ಎಸ.ಸಿ ಕಾಸ್ಟ ಇದ್ದು ಅದರಲ್ಲಿ ಹೊಲೆಯ ಎಂಬ ಜಾತಿಗೆ ಸೇರಿದವರು ಅಂತ ತಿಳಿಸಿದ ಮೇರೆಗೆ ಅಂತಹ ಜಾತಿಯವರಿಗೆ ಕೆಲಸಕ್ಕೆ ತೆಗೆದುಕೊಳ್ಳುವದಿಲ್ಲ ಅಂತ ಮ್ಯಾನೇಜರ ರವರು ಜಾತಿ ನಿಂದನೆ ಮಾಡಿದ್ದು ಮತ್ತು ಅವರ ಮುಂದೆ ಕುಳಿತಿದ್ದ ಅಧಿಕಾರಿಗಳಾದ ಶಿವಯೋಗಿ ಮತ್ತು ಜಗದೀಶ ಇವರಿಬ್ಬರೂ ನಿಮ್ಮೂರ ಹೊಲೆಯರಿಗೆ ಕೆಲಸಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಹೇಳಿದ್ದು ಆಗ ಹಾಗೆಲ್ಲಾ ಹೇಳಬೇಡಿ ಸರ ಎಂದು ಕೇಳಿಕೊಂಡಾಗ ಮ್ಯಾನೇಜರ ರಾಜೆಂದ್ರಸಿಂಗ ರವರು ಹೊಲೆ ಸೂಳೆ ಮಕ್ಕಳಿಗೆ ಹೊರಗೆ ಹಾಕಿ ಅಂತ ಹಿಂದಿ ಭಾಷೆಯಲ್ಲಿ ಹೇಳಿದರು ಯಾಕೆ ಸರ ಅಂತ ಕೇಳಿದಾಗ ಗೆಟ ಔಟ ಅಂತ ಕುತ್ತಿಗೆ ಹಿಡಿದು ಹೊರಗೆ ನೂಕಿದ್ದರಿಂದ ಹಣೆಗೆ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ  ದೂರಿನ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ. 87/2012 ಕಲಂ 323, 324, 504 ಸಂ. 34 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಳ್ಳಲಾಗಿದೆ.     
ಹಲ್ಲೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ : ಶ್ರೀ ರಾಜೆಂದ್ರಸಿಂಗ ತಂದೆ ಹೋರಿ ಸಿಂಗ ವ|| 56 ವರ್ಷ, ಜಾ|| ಜಾಡ, || ಮ್ಯಾನೇಜರ (ಹೆಚ್.ಆರ್ & ಎ.ಡಿ.ಎಮ) ಎನ.ಎಸ್.ಎಲ. ಸುಗರ್ಸ ಲಿಮಿಟೇಡ ಘಟಕ – 02 ಭೂಸನೂರ, ಸಾ|| ಭಾರತೀಯ ಗ್ರಾಮ, ಪೋಸ್ಟ || ಗಜುರಲ್ಲಾ, ತಾ|| ಹಸನಪೂರ, ಜಿ|| ಅಮರೋಹಾ ( ಜ್ಯೋತಿಬಾ ಫುಲೇ ನಗರ ) ರಾಜ್ಯ|| ಉತ್ತರ ಪ್ರದೇಶ, ಹಾ||ವಾ|| ಎನ.ಎಸ್.ಎಲ. ಸುಗರ್ಸ ಲಿಮಿಟೇಡ ಘಟಕ – 02 ಭೂಸನೂರ ಇವರು ದಿನಾಂಕ 05/10/2012 ರಂದು ತಮ್ಮ ಆಫೀಸನಲ್ಲಿದ್ದಾಗ ಸುಭಾಸ ಈತನು ಬಂದು ಫ್ಯಾಕ್ಟರಿಯಲ್ಲಿ ನೌಕರಿ ಸಲುವಾಗಿ ಕೇಳಿದ್ದು ಈಗ ಫ್ಯಾಕ್ಟರಿಯಲ್ಲಿ ಯಾವುದೆ ಖಾಲಿ ಹುದ್ದೆ ಇರುವದಿಲ್ಲ ಮತ್ತು ಯಾವುದೆ ಇಂಟರವೀವ ಇರುವದಿಲ್ಲ ಹಾಗೂ ಫ್ಯಾಕ್ಟರಿಯಲ್ಲಿ ಇಂಟರವೀವ ಇದ್ದಾಗ ಬಂದು ಹಾಜರಾಗಲು ತಿಳಿಸಿದ್ದು, ಆಗ ಸುಭಾಸ ಈತನು ಟೇಬಲ ಮೇಲಿದ್ದ ಪೇಪರ ವೇಟನ್ನು ತೆಗೆದುಕೊಂಡು ಫಿರ್ಯಾದಿಯ ಮುಖಕ್ಕೆ ಮತ್ತು ಮೂಗಿಗೆ ಹೊಡೆದಿದ್ದರಿಂದ ರಕ್ತ ಮತ್ತು ಗುಪ್ತಗಾಯವಾಗಿದ್ದು, ಮತ್ತು ಬಲಗಣ್ಣಿಗೆ ಹೊಡೆದಿದ್ದರಿಂದ ಕನ್ನಡಕ ಒಡೆದು ಮೂಗಿಗೆ ಚುಚ್ಚಿ ರಕ್ತಗಾಯವಾಗಿರುತ್ತದೆ. ಆಗ ಆರೋಪಿತನು ನಾನು ಎಸ್.ಸಿ ಕಾಸ್ಟದವನಿದ್ದು ನಿಮ್ಮ ಮೇಲೆ ಅಟ್ರಾಸಿಟಿ ಕಾಯ್ದೆಯಲ್ಲಿ ಕೇಸು ಮಾಡಿಸುತ್ತೇನೆ ಅಂತಾ ಅನ್ನುತ್ತಾ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 86/2012 ಕಲಂ 341, 323, 324 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪ್ರವೀಣಕುಮಾರ ತಂದೆ ಶಿವರಾಯ ತಳವಾರ  ರವರು  ದಿನಾಂಕ: 05-10-2012 ರಂದು ಬೆಳಗ್ಗೆ   ತನ್ನ ಮೊ/ಸೈಕಲ್  ನಂ: ಕೆಎ 32 ಎಲ್ 9246 ನೆದ್ದರ ಮೇಲೆ ಹರೀಶ ಈತನಿಗೆ ಕೂಡಿಸಿಕೊಂಡು ದೇವಿ ನಗರ ಕಾಸ್ ಧಾಟಿ ಹೋಗಿ ಪೆಟ್ರೋಲ್ ಪಂಪ ಹತ್ತಿರ ಹರೀಶ ಈತನಿಗೆ ಬಿಟ್ಟು ರೋಡ ದಾಟುತ್ತಿದ್ದಾಗ ಶಾಹಾಬಜಾರ ನಾಕಾ ಕಡೆಯಿಂದ ಟಿ.ವಿ.ಎಸ್.ಎಕ್ಸ.ಎಲ್. ಮೋ/ಸೈಕಲ್ ನಂ: ಕೆಎ 32 ಕ್ಯೂ 524 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಸವಾರ ಹೊರಟು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆ ಗುನ್ನೆ ನಂ 102/12  ಕಲಂ: 279,338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಾಂತಪ್ಪ ತಂದೆ ಸಿದ್ದಪ್ಪಾ ನೀಲಿ, ವಯ; 62 ವರ್ಷ, ಉ: ಒಕ್ಕಲುತನ , ಸಾ: ತಾಜಸುಲ್ತಾನಪೂರ  ರವರ ಸೇವಕರಾದ  ಪೂಜಾರಿ ಬಸಣ್ಣ ಮತ್ತು ಅಮೃತ, ನಾಗಣ್ಣ ಇವರು ತಮ್ಮ ಹೋರಿಯನ್ನು ದಿನಾಂಕ 27-09-2012 ರಂದು ಕೊಟ್ಟಿಗೆಯಲ್ಲಿ ಕಟ್ಟಿ ಊಟಕ್ಕೆ ಹೋಗಿದ್ದು ಅಂದು ಊರಲ್ಲಿ ಗಣೇಶ ಉತ್ಸವವಿದ್ದ ಪ್ರಯುಕ್ತ ಮರುದಿವಸ ಬೆಳಗ್ಗೆ ಬಂದು ನೋಡಲು ಹೋರಿ ಇರಲಿಲ್ಲ  ನನಗೆ ಪೋನ ಮುಖಾಂತರ ತಿಳಿಸಿದ್ದು ನಾನು ಹೋಗಿ ನೋಡಲಾಗಿ ಕಪ್ಪು ಬಿಳಿ ಚುಕ್ಕಿಯ ಬಣ್ಣದ ಹೊರಿ ಸುಮಾರು 3 ವರ್ಷದ ಹೋರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದರ ಅಂದಾಜು ಕಿಮ್ಮತ್ತು 45,000/- ರೂ ಗಳಿದ್ದು ನನ್ನ ಹೋರಿಯನ್ನು ಹುಡುಕಿಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ  316/12 ಕಲಂ 379  ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

05 October 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಮಹಾದೇವಪ್ಪ ತಂದೆ ತಿಪ್ಪಣ್ಣ ಬಂದ್ರೂರ ಸಾ||ಹಂದರಕಿ ಗ್ರಾಮ ತಾ:ಸೇಡಂ ರವರು ನಾನು ಮತ್ತು ನನ್ನ ಹೆಂಡತಿಯಾದ ಗೌರಮ್ಮ ಹಾಗೂ ನನ್ನ ಅಳಿಯನಾದ ಹಣಮಂತ ಮೂರು ಜನ ಕೂಡಿಕೊಂಡು ದಿನಾಂಕ:04-10-2012 ರಂದು ಬೆಳಿಗ್ಗೆ 10-00  ಗಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿಯ ಸಜ್ಜಿ ರಾಶಿ ಮಾಡಿಕೊಂಡು ಮನೆಯ ಕಡೆಗೆ ನಾವೆಲ್ಲರೂ ನಡೆದುಕೊಂಡು ಶರಣಪ್ಪಾ ಮಾದರ ಇವರ ಹೊಲದ ಸಮಿಪದಿಂದ ಮನೆಗೆ ಹೊರಟಿದೇವು, ನನ್ನ ಹೆಂಡತಿಯಾದ ಗೌರಮ್ಮ ಇವಳು ರೋಡ ದಾಟುವಾಗ ಯಾದಗಿರ ಕಡೆಯಿಂದ ಕೆಎ-02 ಬಿ-2265 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿದನು. ಅಪಘಾತ ಪಡಿಸಿದ ರಭಸಕ್ಕೆ ಅವಳ ಮುಖವು ಜಜ್ಜಿದಂತಾಗಿ ಬಲಗಣ್ಣಿನ ಗುಡ್ಡೆ ಹೊರಗಡೆ ಬಂದಿದ್ದು ತಲೆಯ ಮೆದಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸ್ಥಳದಲ್ಲಿ ಭಾರಿ ರಕ್ತವಾಗಿ ನನ್ನ ಹೆಂಡತಿ ಗೌರಮ್ಮ ಇವಳು ಮೃತಪಟ್ಟಿರುತ್ತಾಳೆ. ಲಾರಿ ಚಾಲಕನ ಹೆಸರು  ವೇಣುಗೋಪಾಲ ತಂದೆ ಕೊಂಡಯ್ಯ ಸಾ:ಹಾಲಹಳ್ಳಿ ಸ್ಲಂಬೋರ್ಡ, ಮಂಡ್ಯ ಜಿಲ್ಲಾ:ಮಂಡ್ಯ ಅಂತ ತಿಳಿದು ಬಂದಿದ್ದು, ಆತನ ಮೇಲೆ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 208/2012 ಕಲಂ, 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಮೈನು @ ಮೈನೊದ್ದಿನ ತಂದೆ ಯಾಸಿನಸಾಬ ಲೋಹಾರ ಸಾ|| ಮುಸ್ಲಿಂ ಸಂಘ ಗುಲಬರ್ಗಾರವರು  ನಾನು ಮತ್ತು ನನ್ನ ಅಣ್ಣನಾದ ರಿಯಾಜ ಮತ್ತು ರಿಯಾಜನ ಗೆಳೆಯ ಚಾಂದ ಎಲ್ಲರೂ ಕೂಡಿಕೊಂಡು ದಿನಾಂಕ: 04-10-2012 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಆಳಂದ ಚೆಕ್ಕ ಪೋಸ್ಟ ಹತ್ತಿರದ ಭಾಲೇಶ್ವರ ವೈನ ಶಾಪದಲ್ಲಿ ಸರಾಯಿ ಕುಡಿಯುತ್ತಿದ್ದು, ನಾನು ಇನ್ನೂ ಸರಾಯಿ ಕುಡಿಸಬೇಕೆಂದು ರಿಯಾಜ ಮತ್ತು ಆತನ ಗೆಳೆಯನಿಗೆ ಕೇಳಲಾಗಿ ಅವರು ಹಣ ಕೊಡುತ್ತೆವೆ ಅಂತಾ ಸ್ಪಲ್ಪ ದೂರು ಕಡೆದುಕೊಂಡು ಹೋಗಿದ ಹಣ ಇಲ್ಲ ಅಂತಾ ಹೇಳಿದರು.ನನಗೆ ಹಣ ಕೊಡದೆ ಇದ್ದರೆ ಇಲ್ಲಿಯವರೆಗೆ ಯಾಕೇ ಕರೆದುಕೊಂಡು ಬಂದಿದ್ದಿರಿ ಅಂತಾ ಕೇಳಿದಕ್ಕೆ,  ಅವಾಚ್ಯವಾಗಿ ಬೈದು ಕೈ ಮುಷ್ಟಿ ಮಾಡಿ ಹೊಡೆದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 314/2012 ಕಲಂ, 504, 323, 324, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀಮತಿ ಗೌಸಿಯಾಬೇಗಂ ಗಂಡ ಮಹಮ್ಮದ ಇಸ್ಮಾಯಿಲ್ ಅಲಿ ವ;45 ವರ್ಷ ಸಾ|| ಮುಸ್ಲಿಂ ಸಂಘ ಟಿಪ್ಪು ಸುಲ್ತಾನ ಚೌಕ ಹತ್ತಿರ ಅಜಾದಪುರ ರೋಡ ಗುಲಬರ್ಗಾ ರವರು ನಾನು ಮತ್ತು ನನ್ನ ಗಂಡ ಕೂಡಿಕೊಂಡು ದಿನಾಂಕ: 04-10-2012 ರಂದು ಮದ್ಯಾಹ್ನ  ಸುಮಾರಿಗೆ ಟಿವಿಎಸ್‌ ಎಕ್ಸ್‌ ಮೋಟಾರ ಸೈಕಲ ನಂ ಕೆಎ-32 ಎಕ್ಸ್‌‌-4133 ನೇದ್ದರ ಮೇಲೆ  ಆಳಂದ ರೋಡ ಹತ್ತಿರ ಹೋಗುತ್ತಿದ್ದಾಗ ನನ್ನ ಸೀರೆಯು ಹಿಂದಿನ ಗಾಲಿಯಲ್ಲಿ ಸಿಕ್ಕಿದ್ದರಿಂದ ಕೆಳಗೆ ಬಿದ್ದು ತಲೆಗೆ ಹಣೆಗೆ ಎಡಗಣ್ಣಿನ ಹತ್ತಿರ  ಕಾಲಿಗೆ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 315/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

03 October 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಶರಣಮ್ಮ ಗಂಡ ಯಲ್ಲಪ್ಪ ಹಲ್ಲಕಟ್ಟಿ ಸಾ: ಚಿತ್ತಾಪೂರ ಹಾ.ವ ಗಂಗಾಬಾಯಿ ಮಠದ ಹತ್ತಿರ ಜೇವರ್ಗಿರವರು ನನ್ನ ಮಗನಾದ ಮಲ್ಲಿಕಾರ್ಜುನ ಇತನು ದಿನಾಂಕ:02-10-12 ರಂದು ಸಾಯಂಕಾಲ 7-45 ಗಂಟೆಯ ಸುಮಾರಿಗೆ ಶಹಾಪೂರ ಜೇವರ್ಗಿ  ಮೇನ್ ರೋಡ ಅವರಾದ ಕ್ರಾಸದ ಸಮೀಪ ಮೋಟಾರ ಸೈಕಲ ನಂ ಕೆ.ಎ-28, ಇ.ಎ-0063 ನೇದ್ದರ ಮೇಲೆ ರಾಮು ತಂದೆ ಭಿಮಯ್ಯ ಇತನಿಗೆ ಕೂಡಿಸಿಕೊಂಡು ಮೋಟಾರ ಸೈಕಲ  ಮೇಲೆ ಶಹಾಪೂರ ಕಡೆಯಿಂದ ಜೇವರ್ಗಿ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮುಂದುಗಡೆ ರೋಡಿನ ಮೇಲೆ ರಸ್ತೆ ಸುಗಮ ಸಂಚಾರ ನಿಯಮ ಪಾಲಿಸದೆ ಮತ್ತು ಪಾರ್ಕಿಂಗ್ ಲೈಟ್ ಹಾಕದೇ, ಅಲಕ್ಷತನದಿಂದ ನಿಲ್ಲಿಸಿದ್ದ ಲಾರಿ ನಂ ಕೆಎ-28-ಎ-7323 ನೇದ್ದರ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದು ನನ್ನ ಮಗ  ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ರಾಮು ಇತನಿಗೆ ಭಾರಿ ಗಾಯಗಳಾಗಿರುತ್ತವೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012 ಕಲಂ 279, 338,283,  304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪರಿಚಿತ ವ್ಯಕ್ತಿ ಮರಣ ಹೊಂದಿದ್ದ ಬಗ್ಗೆ: 
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:03-10-2012 ರಂದು ಬೆಳಿಗ್ಗೆ  8-30  ಗಂಟೆ ಸುಮಾರಿಗೆ ಗುಲಬರ್ಗಾ ಕೇಂದ್ರ ಬಸ್ಸ ನಿಲ್ದಾಣದಲ್ಲಿ  ಅಂದಾಜು 40 ರಿಂದ 45 ವಯಸ್ಸಿನ  ಅಪರಿಚಿತ ವ್ಯಕ್ತಿಯ ಯಾವುದೋ ಕಾಯಿಲೆಯಿಂದ ಬಳಲಿ ಮೃತಪಟ್ಟಿದ್ದು.  ಮೃತನ ಮೈಮೇಲೆ ಕ್ರೀಮ ಬಣ್ಣದ ಗೆರೆವುಳ್ಳ ಶರ್ಟ ಇದ್ದು ಬಿಳಿಯ ಬಣ್ಣದ ಪ್ಯಾಂಟ ಹಾಗೂ ಒಂದು ಬಿಳಿ ಬಣ್ಣದ ಟಾವೆಲ್ ಇರುತ್ತದೆ. ಸಾಧಾ ತೆಳ್ಳನೆ ಮೈಕಟ್ಟು ತಿಳಿಗಪ್ಪು ಬಣ್ಣದ ಮೈ ಬಣ್ಣ ದಪ್ಪ ಮೂಗು ಚಪಟೆ ಮುಖ ಕೈಗಳ ಮೇಲೆ ಕಪ್ಪು ಯಾವುದೋ ರೋಗದ ಗಾಯಗಳು ಇದ್ದು ಮೃತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ.  ಆದ್ದರಿಂದ ಶವವನ್ನು  ಜಿಲ್ಲಾ ಸರ್ಕಾರಿ ಆಸ್ಪತ್ರೆಯ  ಶವಗಾರ ಕೊಣೆಯಲ್ಲಿ  ಇಡಲಾಗಿದೆ.  ಇತನ  ಹೆಸರು ವಿಳಾಸ ಮತ್ತು ಸಂಬಂಧಿಕರ ಬಗ್ಗೆ  ಮಾಹಿತಿ ಗೊತ್ತಿದ್ದವರು  ಪೊಲೀಸ ಇನ್ಸಪೇಕ್ಟರ ಅಶೋಕ ನಗರ ಪೊಲೀಸ ಠಾಣೆ ಗುಲಬರ್ಗಾ ಮೋಬಾಯಿಲ್  ನಂಬರ    9480803545  ನೇದ್ದಕ್ಕೆ ಅಥವಾ ದೂರವಾಣಿ ಸಂಖ್ಯೆ 08472-263617 ಅಥವಾ ಜಿಲ್ಲಾ ಕಂಟ್ರೋಲ ರೂಮ ಗುಲಬರ್ಗಾ  100 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ,