POLICE BHAVAN KALABURAGI

POLICE BHAVAN KALABURAGI

27 September 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ನಂದು ತಂದೆ ದೇಸು ರಾಠೋಡ ಸಾಃ ಕೌನಳ್ಳಿ ತಾಂಡಾ ನಾನು ದಿನಾಂಕ:25-09-2012 ರಂದು ಸಾಯಾಂಕಾಲ 6-00  ಗಂಟೆ ಸುಮಾರಿಗೆ ನಮ್ಮ  ಮನೆಯಲ್ಲಿ ದೇವರ ಕಾರ್ಯಕ್ರಮಕ್ಕಾಗಿ ಪೂಜೆ ಸಾಮಾನು ತೆಗೆದುಕೊಂಡು ಮನೆಗೆ ಬರುತ್ತಿರುವಾಗ ಮನೆಯ ಮುಂದಿನ ರಸ್ತೆಯ ಮೇಲೆ ಹರಿಶ್ಚಂದ್ರ ತಂದೆ ರೂಪ್ಲಾ ಪವಾರ ಸಂಗಡ 6 ಜನರು ಸಾ|| ಎಲ್ಲರೂ ಕೌನಳ್ಳಿ ತಾಂಡಾ ತಾಃಜಿಃಗುಲಬರ್ಗಾರವರು ಗುಂಪು ಕಟ್ಟಿಕೂಂಡು ಬಂದು ಮೊನ್ನೆ ನಮ್ಮ ಅಪ್ಪನ ಸಂಗಡ ತಕರಾರು ಮಾಡಿದೆ ನಿನ್ನಗೆ ಎಷ್ಟು ಸೂಕ್ಕು ಇದೆ ಅಂತಾ ಅವಾಚ್ಯವಾಗಿ ಬೈದು ನನ್ನ ತಂದೆಗೆ ಮತ್ತು ನನ್ನ ತಮ್ಮನಿಗೆ  ಹೊಡೆಬಡೆ ಮಾಡಿ, ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 103/2012 ಕಲಂ. 143,147, 148, 341, 323, 324, 504, 506, ಸಂ.149 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಹರಿಶ್ಚಂದ್ರ ತಂದೆ ರೂಪ್ಲಾ ಪವಾರ ಸಾಃ ಕೌನಳ್ಳಿ ತಾಂಡಾ ನಾನು ಮತ್ತು ನನ್ನ ಮಗ ಅಶೋಕ ಇಬ್ಬರು ಕೂಡಿಕೊಂಡು ದಿನಾಂಕ: 25-09-2012 ರಂದು ಸಾಯಾಂಕಾಲ 6-00 ಗಂಟೆ ಸುಮಾರಿಗೆ ಸೇವಲಾಲ ದೇವರ ಗುಡಿ ಮುಂದೆ ಕುಳಿತಾಗ ನಂದು ರಾಠೋಡ ಈತನು ತಕರಾರು ಮಾಡಿದ್ದು, ನಂತರ ನಾನು ಮನೆಗೆ ಕಡೆಗೆ ಹೋಗುತ್ತಿರುವಾಗ ದೇಸು ತಂದೆ ಭೋಜು ರಾಠೋಡ ಸಂಗಡ 4 ಜನರು ಸಾಃಎಲ್ಲರೂ ಕೌನಳ್ಳಿ ತಾಂಡಾ ತಾಃಜಿಃ ಗುಲಬರ್ಗಾ ರವರು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಗುಂಪು ಕಟ್ಟಿಕೂಂಡು ಬಂದು ನಿಮಗೆ ಸೂಕ್ಕು ಬಂದಿದೆ  ಅಂತಾ ಅವಾಚ್ಯ ಶಬ್ದಗಳಿಂದ ಬೈದು  ನನಗೆ ನನ್ನ ಮಗನಿಗೆ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 104/2012 ಕಲಂ. 143,147, 148, 341, 323, 324, 504, 506, ಸಂ.149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ: 25/09/2012 ರಂದು ರಾತ್ರಿ 7 ಗಂಟೆಯಿಂದ ದಿನಾಂಕ: 26/7/2012 ರ ಮುಂಜಾನೆ 7-00  ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಪನೂರ ಇಂಡಸ್ಟ್ರೀಯಲ್‌ ಏರಿಯಾದಲ್ಲಿರುವ ಟ್ರಾನಕಾಂ ಸಿಸ್ಟಮ  ಕ್ಯೂ 44 ಕೆಎಸ್‌‌ಐಡಿಸಿ ಎಸ್ಟೇಟ ಗುಲ್ಬರ್ಗಾದ ಬೀಗ ಮುರಿದು 1- Motor 1HP-2 Nos. RS=6000=00, 2- Hilti Beaker TE-706-4 Nos- RS- 80,000=00 3- Hilti Dri9lling Machine TE-1-4 Nos. Rs 16,000/- 4- Hot Press-2Nos. RS 2000=00 IN All worth Rs 1,04,000/- ಕಿಮ್ಮತ್ತಿನದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಜಶೇಖರ ತಂದೆ ಈರಣ್ಣಾ ಸಾ:ಕೆಹೆಚ್‌‌ಬಿ ಕಾಲೋನಿ ರಾಜಾಪೂರ ರೋಡ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 308/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:ಶ್ರೀಮತಿ ಜಮುನಾಬಾಯಿ ಗಂಡ ದೇವಿದಾಸ ಪವ್ಹಾರ ಸಾಃ ಬೆಡಸೂರ ಎಮ್. ತಾಂಡಾ ಹಾ||ವ|| ಇಂದಿರಾ  ನಗರ ಸೇಡಂ ರವರು  ನನ್ನ ಗಂಡನಾದ ದೇವಿದಾನ ಇತನು ದಿನಾಂಕಃ 24/09/2012 ರಂದು ಬೆಳಿಗ್ಗೆ 7:30 ಗಂಟೆಯ ಸುಮಾರಿಗೆ ಪೇಪರ್ ಜೀಪ ನಂ. ಕೆಎ-39 6347 ನೇದ್ದರ ವಾಹನದಲ್ಲಿ ಕುಳಿತುಕೊಂಡು ಸುಲೇಪೇಟ ದಿಂದ ತಮ್ಮೂರ ಕಡೆಗೆ ಹೋಗುತ್ತಿರುವಾಗ ಸದರಿ ಜೀಪ ಚಾಲಕ ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಜಂಪ ಮಾಡಿಸಿದ್ದರಿಂದ ಜೀಪನಲ್ಲಿ ಕುಳಿತ ದೇವಿದಾಸ ಇತನು ಕೆಳಗೆ ಬಿದ್ದು ತಲೆಗೆ ಭಾರಿ ಗುಪ್ತಗಾಯ, ಮುಖಕ್ಕೆ ತೆರಚಿದ ಗಾಯ ಮತ್ತು ಟೊಂಕಕ್ಕೆ ಗುಪ್ತಗಾಯವಾಗಿದ್ದು ಉಪಚಾರ ಕುರಿತು ಸಾರ್ವಜನಿಕ ಆಸ್ಪತ್ರೆ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ದಿನಾಂಕಃ 26/09/2012 ರಂದು ಮದ್ಯಾಹ್ನ 3:00 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 78/2012 ಕಲಂ. 279, 304 [ಎ] ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 

26 September 2012

GULBARGA DISTRICT REPORTED CRIME


ಕೊಲೆ  ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶಿವಪುತ್ರ ತಂದೆ ಚಂದ್ರಶಾ ಕ್ಯಾರ, ವಯ|| 27 ವರ್ಷ, ಉ|| ಒಕ್ಕಲುತನ, ಸಾ|| ಕಡಗಂಚಿ ರವರು ನಾನು ಮತ್ತು ಅರವಿಂದ ನರೋಣಿ, ಶರಣು ನರೋಣಿ, ಚಿದಾನಂದ ಢೊಳ್ಳಿ, ಎಲ್ಲರೂ ಕೂಡಿಕೊಂಡು ದಿನಾಂಕ:25-09-2012 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಕಡಗಂಚಿಯಿಂದ ಗುಲಬರ್ಗಾ ನಗರದ ಚಿಂಚೋಳಿ ಲೇಔಟನಲ್ಲಿ ಬರುವ ಅರವಿಂದ ನರೋಣಿ ಇವರ ಕಟ್ಟಡ ನಡೆಯುತ್ತಿರುವ ಕಾಂಪ್ಲೇಕ್ಸಗೆ ಬಂದಿರುತ್ತೇವೆ. ಕಾಂಪ್ಲೇಕ್ಸದಲ್ಲಿ ನಡೆಯುತ್ತಿರುವ ಕೆಲಸವನ್ನು ನೋಡಿ ಸಾಯಂಕಾಲ 6-30 ಗಂಟೆಯ ಸುಮಾರಿಗೆ ನಾವೆಲ್ಲರೂ ಕಡಗಂಚಿಗೆ ಹೋಗಬೇಕೆಂದು ಕಾಂಪ್ಲೇಕ್ಸ ಎದುರುಗಡೆ ನಿಂತಿದ್ದೇವು. ಅಷ್ಟರಲ್ಲಿ ಕಡಗಂಚಿ ಗ್ರಾಮದ ಯೋಗೇಶ ಹೊಸಕುರುಬರ, ಬೀರಣ್ಣ ವಗ್ಗಿ, ಭೀಮರಾಯ ಹೊಸಕುರುಬರ, ಮಲ್ಲಪ್ಪ ವಗ್ಗಿ, ಸೋಮಯ್ಯ ಸ್ವಾಮಿ, ಶ್ರೀಶೈಲ ಅಲ್ದಿ, ಜಗಪ್ಪ ಹೊಸಕುರುಬರ ವಿಠಲ ಹೊಸಕುರುಬರ ಹಾಗೂ ಇತರರು ಕೂಡಿಕೊಂಡು ಬಂದು ಇವರಲ್ಲಿ ಮಲ್ಲಪ್ಪ ವಗ್ಗಿ ಈತನು ಅರವಿಂದ ನರೋಣಿ ಇವರ ಎದೆಯ ಮೇಲೆ ಪಿಸ್ತೂಲದಿಂದ ಗುಂಡು ಹಾರಿಸಿದನು. ಯೋಗೇಶ, ಶ್ರೀಶೈಲ ಮತ್ತು ವಿಠಲ ಇವರು ಅರವಿಂದ ನರೋಣಿ ಇವರಿಗೆ ಹಿಡಿದುಕೊಂಡಿದ್ದು ಭೀಮರಾಯ ಈತನು ತಾನು ತಂದ ತಲವಾರದಿಂದ ಕುತ್ತಿಗೆಯ ಮುಂಭಾಗದಲ್ಲಿ ಮತ್ತು ಎದೆಯ ಮೇಲೆ ಹೊಡೆಯುತ್ತಿದ್ದನು. ಆಗ ನಾನು ಓಡಿ ಹೋಗಿ ಮಲ್ಲಪ್ಪ ವಗ್ಗಿ ಈತನಿಗೆ ಹಿಡಿದಾಗ ಅವನು ನನ್ನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ನಾನು ಅವನ ಕೈಯಿಂದ ಪಿಸ್ತೂಲನ್ನು ಕಸಿದುಕೊಳ್ಳುವಾಗ ಅವನು ಅಲ್ಲಿ ಬಿಸಾಕಿ ಓಡಿ ಹೋದನು. ನಾನು, ಚಿದಾನಂದ ಡೊಳ್ಳಿ ಮತ್ತು ಶರಣು ನರೋಣಿ ಎಲ್ಲರೂ ಕೂಡಿ ಜಗಳ ಬಿಡಿಸಲು ಹೋದಾಗ ಬೀರಣ್ಣ ವಗ್ಗಿ, ಮತ್ತು ಸೋಮಯ್ಯ ಸ್ವಾಮಿ ಇವರು ಬಿಡಬೇಡರಿ ಇವನಿಗೆ ಖಲಾಸ ಮಾಡಿರಿ ಅಂತಾ ಅಂದಾಗ ಜಗಪ್ಪ ಇವನು ಅರವಿಂದ ನರೋಣಿ ಇವರ ಟೊಂಕದಲ್ಲಿ ಇದ್ದ ಲೈಸನ್ಸ ಪಿಸ್ತೂಲ್ ತೆಗೆದುಕೊಂಡು ಶರಣು ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ಗುಂಡು ಹಾರಿಸಿದ್ದು ಅವನ ಬಲಗಾಲ ತೊಡೆಯ ಮೇಲೆ ಹತ್ತಿ ಭಾರಿಗಾಯವಾಗಿದ್ದು ಇರುತ್ತದೆ. ನಂತರ ನಾವು ಚೀರಾಡುವದನ್ನು ನೋಡಿ ನೆರೆ ಹೊರೆಯ ಜನರು ಬರುವದನ್ನು ನೋಡಿ ಅವರು ಓಡಿ ಹೋದರು.     ಕಾರಣ ಅರವಿಂದ ನರೋಣಿ ಇವರಿಗೆ ಕೊಲೆ ಮಾಡಿದ ಮತ್ತು ಶರಣು ಇವರಿಗೆ ಕೊಲೆ ಮಾಡಲು ಪ್ರಯತ್ನಪಟ್ಟವರ  ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ: 143, 147, 148, 325, 307, 302 ಸಂಗಡ 149 ಐ.ಪಿ.ಸಿ ಮತ್ತು 25 & 27 ಆಯುಧ ಅಧಿನಿಯಮ ಕಾಯ್ದೆ ಪ್ರಕಾರ ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 September 2012

GULBARGA DISTRICT REPORTED CRIME


ಕಾರ ಚಾಲಕನ ಮೇಲೆ ಪ್ರಕರಣ ದಾಖಲ ಮಾಡಿದ ಬಗ್ಗೆ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀಮತಿ ಎಸ್.ಎಸ್.ತೇಲಿ ಪಿ.ಎಸ್.. ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ ಗುಲಬರ್ಗಾರವರು ದಿನಾಂಕ 25-09-2012 ರಂದು ತಮ್ಮ ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಉದಯಗೀರಿ ಇಂಡಸ್ಟ್ರೀಜ್ ಎದುರುಗಡೆ ಕಾರ ನಂಬರ ಕೆಎ- 35  ಟಿಎಕ್ಸ- 7674 ನೇದ್ದರ ಚಾಲಕ ಶ್ರೀನಿವಾಸ ಇತನು ರೋಡಿನ ಮಧ್ಯದಲ್ಲಿ ಕಾರು ನಿಲ್ಲಿಸಿ ಹೋಗಿ ಬರುವ ವಾಹನಗಳಿಗೆ ಮತ್ತು  ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಠಾಣೆ ಗುನ್ನೆ ನಂ 98/2012 ಕಲಂ 283 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.