POLICE BHAVAN KALABURAGI

POLICE BHAVAN KALABURAGI

24 July 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀ  ಆನಂದ ತಂದೆ ಚಂದ್ರಮೊಹನ ಶಹಾ ಸಾಃ ವಿವೇಕಾನಂದ ನಗರ ಗುಲಬರ್ಗಾ ರವರು ನಮ್ಮದೊಂದು ಕಾಟನ ಮಾರ್ಕೆಟದಲ್ಲಿ ಒಂದು ಗೋದಾಮ ಇರುತ್ತದೆ ಅದರಲ್ಲಿ ಸ್ಟೋರಗಳು ಮತ್ತು ಅದಕ್ಕೆ ಸಂಬಂದಪಟ್ಟ ಸ್ಟೋರ ಪಾರ್ಟ್ಸಗಳ ವ್ಯಾಪಾರ ಮಾಡುತ್ತಿರುತ್ತೆನೆ. ದಿನಾಂಕ 21.07.2012 ರಂದು 11-30 ಗಂಟೆ ಸುಮಾರಿಗೆ ಪಕ್ಕದ ಗೋದಾಮಿನ ಸತೀಶ ಇವರು ಪೋನ ಮಾಡಿ ನಿಮ್ಮ ಗೋದಾಮಿನ ಹಿಂದಿನ ಶೆಟ್ಟರ ಮರುದಿದ್ದು ಸಾಮಾನುಗಳೂ ಹೊರಗಡೆ ಬಿದ್ದಿವೆ ಅಂತ ತಿಳಿಸಿದ ಮೇರೆಗೆ ಹೋಗಿ ಬಂದು ನೋಡಲು ಸುಮಾರು 6,18,750/- ರೂ.ಗಳ ಕಿಮ್ಮತ್ತಿನ Rocker Sprayer Presssure Chamber  ಅಃಕಿಃ2,47,500/- Rocker Sprayer Lance with nozzle  ಅಃಕಿಃ1,80,000/- Rocker Sprayed Pressure value  ಅಃಕಿಃ1,91,250, ರೂಪಾಯಿಗಳು ವಿವಿಧ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 121/2012 ಕಲಂ 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ. 

23 July 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ಶ್ರೀ,ಸಿದ್ದಣ್ಣ ತಂದೆ ದುಂಡಪ್ಪ ಸುಂಬಡ ಸಾ|| ಮಂದೇವಾಲ ರವರು ನಾನು ದಿನಾಂಕ:22/07/2012 ರಂದು ರಾತ್ರಿ 9-00  ಗಂಟೆ ಸುಮಾರಿಗೆ ಊಟ ಮಾಡಿ ಮನೆಯ ಮಾಳಿಗೆ ಮೇಲೆ ಮಲಗಿಕೊಂಡಿದ್ದು,  ಮಧ್ಯರಾತ್ರಿ ಅಂದಾಜು 3:30 ಗಂಟೆ ಸುಮಾರಿಗೆ ನನಗೆ ಎಚ್ಚರವಾದಾಗ ನಮ್ಮ ಮನೆಯ ಬಾಗಿಲು ತೆರೆದಿತ್ತು, ನಾನು ಎದ್ದು ಬಂದು ನೋಡಲು ಅರ್ದತೋಲಿಯ ಬಂಗಾರದ ಬೋರಮಳ ಹಾಗೂ ರೇಸ್ಮೆ ಸೀರೆಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದರ ಕಿಮ್ಮತ್ತು ಅಂದಾಜ 22,400/- ರೂಪಾಯಿಗಳಾಗುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:99/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.   
ಅಪಘಾತ ಪ್ರಕರಣ:
ಆಳಂದ  ಪೊಲೀಸ್ ಠಾಣೆ:ಶ್ರೀ ಸೋಮಲಿಂಗಪ್ಪ ತಂದೆ ಭೀಮಶ್ಯಾ ಸಲಗರೆ ಸಾ|| ಜಿರೋಳ್ಳಿ ಗ್ರಾಮ ತಾ| ಆಳಂದ ರವರು ನನ್ನ ಮಗ ಸಂತೋಷ ಹಾಗು ನನ್ನ ತಮ್ಮ ಪರಮೇಶ್ವರ ಇಬ್ಬರೂ ಕೂಡಿಕೊಂಡು ದಿನಾಂಕ:22-07-2012  ರಂದು ಮಧ್ಯಾಹ್ನ 12-05 ಗಂಟೆಗೆ ಮೋಟಾರ ಸೈಕಲ್ ನಂ. ಕೆಎ-32 ವ್ಹಾಯ-816 ನೇದ್ದರ ಮೇಲೆ ಜೆರೋಳ್ಳಿಯಿಂದ ಎ.ಪಿ.ಎಮ್.ಸಿ. ಆಳಂದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿರುವಾಗ ಎದುರಗಡೆಯಿಂದ ಜೀಪ್ ನಂ.ಕೆಎ-32 ಎಮ್.ಎ-1048 ನೇದ್ದರ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ನನ್ನ ಮಗನಿಗೆ ಹಾಗೂ ನನ್ನ ತಮ್ಮನಿಗೆ ಭಾರಿ ಗಾಯವಾಗಿತ್ತು, ಉಪಚಾರ ಕುರಿತು ಆಳಂದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ನನ್ನ ತಮ್ಮ ಪರಮೇಶ್ವರ ಇತನು ಮೃತಪಟ್ಟಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:151/2012 ಕಲಂ 279,338,304(ಎ) ಐ.ಪಿ.ಸಿ. ಸಂ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 July 2012

GULBARGA DIST REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಮಾಳಿಂಗರಾಯ   ತಂದೆ ಮಲ್ಕಪ್ಪಾ ಕೋಟೆ ಉ: ವಿಧ್ಯಾರ್ಥಿ  ಸಾ||ಮೇಳಕುಂದಾ (ಬಿ) ತಾ:ಜಿ:ಗುಲಬರ್ಗಾ ರವರು ನಾನು ದಿನಾಂಕ 21-07-12 ರಂದು 3-30  ಪಿ.ಎಮ್. ಗಂಟೆಗೆ ಲಾಲಗೇರಿ ಕ್ರಾಸ್ ದಿಂದ ಸುಪರ ಮಾರ್ಕೆಟ ಮೇನ ರೋಡಿನ ಸಿ.ಟಿ.ಬಸ್ ನಿಲ್ದಾಣದ ಹತ್ತಿರ ಕೆ.ಎಸ್.ಆರ್.ಟಿ.ಸಿ.ಬಸ್   ನಂ:ಕೆಎ 32 ಎಫ್  -1320 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿದ್ದರಿಂದ, ಬಸ್ ಬಾಗಿಲಲ್ಲಿ ನಿಂತಿರುವ ಮಾಳಿಂಗರಾಯನಿಗೆ ಭಾರಿಗಾಯಗಳಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/12  ಕಲಂ: 279, 338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.