POLICE BHAVAN KALABURAGI

POLICE BHAVAN KALABURAGI

21 July 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ.ಖಾಸೀಮ ಶಹಾ ತಂದೆ ಅಹಮದ ಶಹಾ ಸಾ||ಕಮಲಾಪೂರ ವರು ನಾನು ನನ್ನ ಹೆಂಡತಿ ದಿನಾಂಕ: 19/07/2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಮಲಗಿಕೊಂಡಾಗ ಮಧ್ಯರಾತ್ರಿ 2-00 ಗಂಟೆ ಸುಮಾರಿಗೆ ನನಗೆ ನಿದ್ದೆಯಿಂದ ಎಚ್ಚರ ಆಯಿತು. ಮೂತ್ರ ವಿಸರ್ಜನೆ ಕುರಿತು ಬಾಗಿಲು ತೆರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಆಗ ನಾನು ಹಿಂಬಾಗಿಲು ತೆರೆದು ಹೊರಗೆ ಬಂದು ಮುಂಬಾಗಿಲ ಹತ್ತಿರ ಬಂದಾಗ ನಾನಿದ್ದ ಬಾಗಿಲಿಗೆ ಕೊಂಡಿ ಹಾಕಲಾಗಿತ್ತು. ಅಲ್ಮಾರಿ ಇದ್ದ ರೂಮಿನ ಬಾಗಿಲು ನೋಡಿದಾಗ ಅದರ ಕೊಂಡಿಯನ್ನು ಯಾರೋ ಅಪರಿಚಿತ ಕಳ್ಳರು ಕೊಂಡಿ ಮಣಿಸಿ ಒಳಗೆ ಹೋಗಿ ಅಲ್ಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು, ಮತ್ತು ಬೆಳ್ಳಿನ ಸಾಮನುಗಳು ನಗದು ಹಣ 1300=00 ರೂಪಾಯಿ ಹೀಗೆ ಒಟ್ಟು 24,600=00 ರೂಪಾಯಿಯ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 86/2012 ಕಲಂ 457. 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

20 July 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್  ಠಾಣೆ: ಶ್ರೀ ಅಣ್ಣೇಮ್ಮ ತಂದೆ ದಿ: ಸಾಯಬಣ್ಣ  ನಂದಿಕೂರ ವ: 21 ವರ್ಷ, ಸಾ: ಕಪನೂರರವರು ನಾನು ದಿ: 19/07/2012 ರಂದು ಮುಂಜಾನೆ 7-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ರಾಜಕುಮಾರ ತಂದೆ ಭೀಮಶ್ಯಾ ನಂದಿಕೂರ ಇನ್ನೂ 2 ಜನರು ನಮ್ಮ  ಮನೆಯ ಮುಂದೆ ಬಂದು ನನ್ನನ್ನು  ಕರೆದು ನಿಮ್ಮ ಮನೆಯ ಮುಂದೆ ಕಂಕರ ಹಾಕಿದ್ದರಿಂದ ನಮ್ಮ ಮನೆಯ ಮುಂದೆ ಮಳೆಯ ನೀರು ನಿಂತಿರುತ್ತದೆ ಅಂತಾ ಅವ್ಯಾಚ್ಛವಾಗಿ ಬೈಯುತ್ತಿದ್ದಾಗ ಏಕೆ ಬೈಯುತ್ತಿದ್ದಿರಿ ಅಂತ ಕೇಳಿದಾಗ ನನಗೆ ಮತ್ತು ಈರಮ್ಮ, ದೇವಮ್ಮ ಇವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 236/12 ಕಲಂ 323 324 504 506 ಸಂ/ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಚಂದ್ರಕಾಂತ ತಂದೆ ಮಲಕಾಜಪ್ಪ ರೇವೂರ ಸಾ|| ಝಳಕಿ (ಕೆ) ರವರು ನಾನು ಮತ್ತು ನಮ್ಮ ಗ್ರಾಮದ  ರೇವಬಾಯಿ ಮಠಪತಿ,  ಅನಿತಾಬಾಯಿ, ಬುದ್ದಮ್ಮ,  ಶೇಖರ, ಬಸವರಾಜ, ಶರಣಪ್ಪ ಹಾಗೂ ಇನ್ನು 3-4 ಜನರು ಕೂಡಿಕೊಂಡು ಆಳಂದದಿಂದ ಮಧ್ಯಾಹ್ನ 3-00 ಗಂಟೆಗೆ ನಮ್ಮ ಗ್ರಾಮದ ದೀಲಿಪ ತಂದೆ ಮಡಿವಾಳಪ್ಪ ಕೊಚಿ ಇವರು ಚಲಾಯಿಸುತ್ತಿದ್ದ ಜೀಪ ನಂ. ಕೆಎ-23, ಎಮ-4209 ನೇದ್ದರಲ್ಲಿ ಕುಳಿತು ಅಮರ್ಜಾ ಕೆನಲಾ ರೋಡಿನ ಪಕ್ಕದ ರಸ್ತೆಯಿಂದ ಝಳಕಿ (ಕೆ) ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶರಣಪ್ಪ ನೀಲೂರ ಇವರ ಹೊಲದ ಹತ್ತಿರ ಜೀಪ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ರೇವಬಾಯಿ ಗಂಡ ಶ್ರೀಶೈಲ ಮಠಪತಿ ವ|| 40 ವರ್ಷ, ಸಾ|| ಝಳಕಿ ( ಕೆ) ಗ್ರಾಮ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅನಿತಾಬಾಯಿ, ಬುದ್ದಮ್ಮಾಮತ್ತು ಶೇಖ ಇವರಿಗೆ ಗಾಯಗಳಾಗಿರುತ್ತವೆ, ಜೀಪ ಚಾಲಕನು ಓಡಿ ಹೋಗಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 56/2012 ಕಲಂ 279, 337, 338, 304(ಎ) ಐಪಿಸಿ ಮತ್ತು 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ. 

19 July 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಸಂಜಯ ತಂದೆ ನಂದಕುಮಾರ ಉಖಂಡೆ  ಸಾ|| ವಿದ್ಯಾನಗರ  ಗುಲಬರ್ಗಾರವರು ದಿನಾಂಕ 18/07/2012 ರಂದು ರಾತ್ರಿ ನಾವೆಲ್ಲರೂ ಊಟ ಮಾಡಿ ನಮ್ಮ ಬಾಡಿಗೆ ಮನೆಯ ಅಡುಗೆ ಮನೆಯ ಬಾಗಿಲದ ಕೊಂಡಿ ಒಂದು ಭಾಗ ಕೊಂಡಿ ಬಿಳದೇ ಇರುವುದ್ದರಿಂದ ಹಾಗೇ ಬಾಗಿಲು ಮುಂದೆ ಮಾಡಿ ಮಲಗಿಕೊಂಡಿರುತ್ತೇವೆ. ದಿನಾಂಕ:19/07/2012 ರಂದು ಬೆಳಿಗ್ಗೆ ನೋಡಲಾಗಿ  1,1/2 ತೊಲೆ ಬಂಗಾರದ ಮಂಗಳಸೂತ್ರ, 7 ಮಾಸಿ ಬಂಗಾರದ ಮಂಗಳಸೂತ್ರ ನನ್ನ ತಮ್ಮನ ಹೆಂಡತಿಯದ್ದು, 4 ಮಾಸಿ ಬಂಗಾರದ ಕೀವಿ ಓಲೆ ನನ್ನ ತಮ್ಮನ ಹೆಂಡತಿಯದ್ದು, ನಗದು ಹಣ 1500=00 ರೂ.ಗಳು ಹೀಗೆ ಒಟ್ಟು 24,500/- ರೂ ಬೆಲೆ ಬಾಳುವ ಬಂಗಾರ & ನಗದು ಹಣ ಕಳುವಾಗಿದ್ದು ಇರುತ್ತದೆ. ಅಲ್ಲದೆ ದೇವರ ಮುಂದೆ ಇಟ್ಟ ದೇವರ ಗಲ್ಲಾ ಪೆಟ್ಟಿಗೆ ಚಿಲ್ಲರೆ ಹಣ  ಯಾರೋ ಕಳ್ಳರು ಮನೆ ಬಾಗಿಲ ತೆರೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:57/2012 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀಮತಿ ಗುಂಡಮ್ಮ ಗಂಡ ಬಸವರಾಜ ಚೌಡಾಪೂರ  ಸಾ || ಕೃಷ್ಣಾ ನಗರ ಬ್ರಹ್ಮಪುರ ಗುಲಬರ್ಗಾರವರು ನಾವು ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಲ್ಲಿಯವರೆಗೆ ನಮಗೆ ಮಕ್ಕಳು ಆಗದೇ ಇರುವದರಿಂದ ನನ್ನ ಗಂಡನಾದ ಬಸವರಾಜ ಇತನು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕಳೆದ ಕೆಲವು ದಿವಸಗಳಿಂದ ಅತಿ ಹೆಚ್ಚು ಮಧ್ಯಪಾನ ಮಾಡುತ್ತಾ ಬಂದು ನಾನು ಇದ್ದು ಎನು ಸಾಧಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಅರ್. ನಂ:9/12 ಕಲಂ 174 (ಸಿ)  ಸಿ.ಆರ್.ಪಿ.ಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.