POLICE BHAVAN KALABURAGI

POLICE BHAVAN KALABURAGI

19 July 2012

GULBARGA DIST REPORTED CRIMES


ಕೊಲೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ :ಶ್ರೀ ಬಾಬು ತಂದೆ ರಾಮಯ್ಯಾ ಬಾಗೋಡಿ ಸಾ|| ನಾಸರ್ ಜಂಗ ಏರಿಯಾ ಚಿತ್ತಾಪೂರರವರು   ನನ್ನ ಮಗನಾದ ಭೀಮು ಇತನು ದಿನಾಂಕ: 18-07-2012 ರಂದು ಸಾಯಂಕಾಲ 4-30 ಗಂಟೆ ಏಕಿ ಮಾಡಲು ಹೋದ ಸಮಯದಲ್ಲಿ ತಾಯಪ್ಪಾ ತಂದೆ ರಾಮಯ್ಯ ಭಾಗೋಡಿ ಮತ್ತು ಯಲ್ಲಪ್ಪಾ ತಂದೆ ಸಾಬಣ್ಣ ಕರದಳ್ಳಿ ಇಬ್ಬರೂ ಹಣ ಕೂಡುವ ತೆಗೆದುಕೊಳ್ಳುವ ಸಂಬಂಧ ತಕರಾರು ಮಾಡಿಕೊಳ್ಳುತ್ತಿರು ಅದನ್ನು ಕಂಡು ನನ್ನ ಮಗ ಭೀಮು ಇತನು ಜಗಳ ಮಾಡಿಕೊಳ್ಳುವದು ಸರಿಯಲ್ಲ ಅಂತಾ ಹೇಳಿದಾಗ ಭೀಮು ತಂಧೆ ಶಿವಪ್ಪ ಕರದಳ್ಳಿ,  ಈರಪ್ಪ ತಂದೆ ಯಂಕಪ್ಪ ಆಂದೋಲಾಈಸು ತಂಧೆ ಈರಪ್ಪ ಆಂದೋಲಾಯಂಕಟಿ ತಂಧೆ ಈರಪ್ಪ ಇಂಗಳಗಿಸಣ್ಣ ನಾಗಪ್ಪ ತಂದೆ ತಿಮ್ಮಯ್ಯಾ ಬಶಿರಾಬಾದ,  ಈಸು ತಂದೆ ರಾಮಯ್ಯಾ ಇಂಗಳಗಿ,  ರಾಜು ತಂಧೆ ಸಾಬಯ್ಯಾ ಕರದಳ್ಳಿರಾಜು ತಂಧೆ ಈರಪ್ಪ ಆಂದೋಲಾ, ಯಲ್ಲಪ್ಪ ತಂದೆ ಸಾಬಣ್ಣ ಕರದಳ್ಳಿ ಸಾ|| ಎಲ್ಲರೂ ನಾಸರಜಂಗ ಏರಿಯಾ ಚಿತ್ತಾಫೂರ ರವರು ಎಲ್ಲರೂ ಕೂಡಿಕೊಂಡು ಕೈ ಮುಷ್ಟಿ ಮಾಡಿ ಹೊಟ್ಟೆಗೆ ಹೊಡೆದಿರುತ್ತಾರೆ. ನಾವು ಸಹ ಅಲ್ಲಿಗೇ ಹೋಗಿ ನೋಡಲು ಭೀಮು ಇತನು ಸ್ಥಳದಲ್ಲಿ ಕುಸಿದು ಬಿದ್ದನ್ನು , ಆತನನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ವೈಧ್ಯಾಧಿಕಾರಿಗಳು ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದರು. ನನ್ನ ಮಗನಿಗೆ ಹೊಡೆದು ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 147, 148, 323, 324, 504, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

18 July 2012

GULBARGA DIST REPORTED CRIME


ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀಮತಿ ರೇಖಾ ಗಂಡ ರಾಜಕುಮಾರ ತಾಂದಳೆ ವ:30 ವರ್ಷ ಉ: ಮನೆಗೆಲಸ ಜಾತಿ  ಭಾವಸರ ಕ್ಷತ್ರಿಯ ಸಾ:ರಾಮ ನಗರ ವಿಠಲ ರುಕ್ಮಣಿ ಗುಡಿ ಹತ್ತಿರ ಗುಲಬರ್ಗಾರವರು ನಾನು ಮತ್ತು ನನ್ನ ತಾಯಿ ಕಲಾವತಿ ಇಬ್ಬರೂ ಕೂಡಿಕೊಂಡು ದಿನಾಂಕ 17-7-12 ರಂದು 12-30 ಗಂಟೆ ಸುಮಾರಿಗೆ ಮನೆ ಹತ್ತಿರುವ ವಿಠಲ ರುಕ್ಮಣಿ ಗುಡಿಗೆ  ಹೊರಟಾಗ ರಮಾಕಾಂತ @ ರಮ್ಮ , ಯುವರಾಜ, ಚಂದ್ರಕಾಂತ @ ಚಂದ್ರ್ಯಾ    ಸಾ||ಎಲ್ಲರೂ ರಾಮ ನಗರ ಗುಲಬರ್ಗಾರವರು ನಿಮ್ಮ ಮನೆ ಎದುರು ಹುಡುಗುರು ಗುಂಪು ಕಟ್ಟಿಕೊಂಡು ನಿಂತು ಮಾತನಾಡಬೇಡಾ ಅಂತಾ  ಹೇಳುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 233/2012 ಕಲಂ 341 504 354 323 506 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

17 July 2012

GULBARGA DIST REPORTED CRIME


ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ ಠಾಣೆ:ಶ್ರೀ ರಾಜೇಂದ್ರ @ ರಾಜು ತಂದೆ ಚೆನ್ನಬಸಪ್ಪ  ನರಸಗೊಂಡ ಸಾ:ಶಿವಾಜಿ ನಗರ  ಗುಲಬರ್ಗಾರವರು ನಾನು 2 ವರ್ಷಗಳ ಹಿಂದೆ ನನ್ನ ಅಕ್ಕನ ಮಗಳಾದ ಶೃತಿ ಇವಳೊಂದಿಗೆ ಮದುವೆ ಮಾಡಿಕೊಂಡಿದ್ದು,ಮದುವೆಯಾದಗಿನಿಂದ ನಾವಿಬ್ಬರು ಗಂಡ ಹೆಂಡತಿ ಚನ್ನಾಗಿದ್ದೆವು, ದಿನಾಂಕ:4-5-2012 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ  ನಾನು ಮನೆಯಲ್ಲಿದ್ದಾಗ  ನನ್ನ ಹೆಂಡತಿ ನೀರು ತರುವ ಕುರಿತು ಹೊರಗಡೆ ಬಂದಿದ್ದು, ಅರ್ಧ ಗಂಟೆಯಾದರೂ  ಮರಳಿ ಮನೆಗೆ ಬರಲಿಲ್ಲ , ನಾನು ಹೊರಗಡೆ ಬಂದು ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಸಿಗಲಿಲ್ಲಾ.  ಅಕ್ಕಪಕ್ಕದವರ ವಿಚಾರಿಸಲಾಗಿ ನನ್ನ ಹೆಂಡತಿಯ ಬಗ್ಗೆ ಸುಳಿವು ಸಿಗಲಿಲ್ಲಾ ಅಲ್ಲಿಂದ ಇಲ್ಲಿಂದ ನಮ್ಮ ಸಂಭಂದಿಕರಲ್ಲಿ ಹುಡುಕಾಡಲಾಗಿ ಶೃತಿ ಇವಳು ಪತ್ತೆಯಾಗಿರುವುದಿಲ್ಲಾ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 55/2012  ಕಲಂ ಹೆಣ್ಣು ಮಗಳು  ಕಾಣೆಯಾದ ಬಗ್ಗೆ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.