POLICE BHAVAN KALABURAGI

POLICE BHAVAN KALABURAGI

02 July 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಲಾಲಪಾಶಾ ತಂದೆ ರಹಿಮತ ಅಲಿ    ಉ: ಅಟೋರಿಕ್ಷಾ ಚಾಲಕ  ಸಾ||ಹುಸೇನಅಲಿಮಮಜೀದ ಎದುರು ಚೋಟಾ ರೋಜಾ ಪಾಶಾಪೂರ  ಗುಲಬರ್ಗಾರವರು ನಾನು ದಿನಾಂಕ 24-06-12 ರಂದು ಬೆಳಿಗ್ಗೆ 6-45 ಗಂಟೆಗೆ ನನ್ನ ಅಟೋರಿಕ್ಷಾ ನಂ: ಕೆಎ 32  9298 ನೆದ್ದನ್ನು  ಎಸ್.ವಿ.ಪಿ ಸರ್ಕಲ ಕಡೆಯಿಂದ ಜಗತ ಸರ್ಕಲ  ಕಡೆಗೆ ಬರುತ್ತಿದ್ದಾಗ ಎಸ್.ಬಿ ಪಾಟೀಲ ಪೆಟ್ರೊಲ್  ಪಂಪ  ಎದುರು ರೋಡಿನ ಮೇಲೆ ಎದುರುಗಡೆಯಿಂದ ಟ್ರ್ಯಾಕ್ಟರ  ನಂ:ಕೆಎ32 ಟಿಎ-1157 ನೇದ್ದರ ಚಾಲಕನು ತನ್ನ ವಾಹನವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ನನ್ನ ಅಟೋರೀಕ್ಷಾ ಡ್ಯಾಮೇಜ ಆಗಿರುತ್ತದೆ ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 70/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:01/07/2012 ರಂದು ಸಾಯಂಕಾಲ ಅವರಾದ (ಬಿ) ಸೀಮಾಂತರದಲ್ಲಿ ಬರುವ ಅಂಬಾರಾಯ ಇವರ ಹೊಲದಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ  ಆಡುತ್ತಿದ್ದ ಮಹ್ಮದ ಖಾಜಾಮಿಯ್ಯ ತಂದೆ ಫರೀದ ಸಾಬ ಸಾ: ಬುಲಂದ ಪರವೇಜ ಕಾಲೋನಿ,                      ಸಿರಾಜ ತಂದೆ ಪೈಜೋದ್ದೀನ,ಕರಿಮೋದಿನ ತಂದೆ ಪೀರ ಅಹ್ಮದ ಸಾ:ಬುಲಂದ ಪರವೇಜ ಕಾಲೋನಿ,ಬಾಲೆಸಾಬ ತಂದೆ ಮೈನೋದಿನ  ಸಾ:ಬುಲಂದ ಪರವೇಜ ಕಾಲೋನಿ,ಮತ್ತು ಅಕ್ಬರ ತಂದೆ ಶರಪೋದಿನ ಸಾ||ಖಮರ ಕಾಲೋನಿ ಗುಲಬರ್ಗಾ 6 ಜನರನ್ನು ಹಾಗೂ ನಗದು ಹಣ 8100/- ರೂಪಾಯಿಗಳು ಹಾಗೂ ಇಸ್ಪೇಟ ಎಲೆಗಳು ಮಾನ್ಯ ಡಿವೈಎಸ್ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರು ತಮ್ಮ  ನೇತೃತ್ವದಲ್ಲಿ ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆ ಗುನ್ನೆ ನಂ: 218/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

01 July 2012

GULBARGA DIST REPORTED CRIMES

ಕಾಣೆಯಾದ ಪ್ರಕರಣ:
ಆಳಂದ ಪೊಲೀಸ್ ಠಾಣೆ: ಶ್ರೀ, ಫಿರ್ಯಾದಿ ಪುಂಡಲೀಕ ತಂದೆ ಕಲ್ಯಾಣಿ ಸಿಂಗೆ ವ: 23 ವರ್ಷ ಸಾ|| ಆಯಾಜಂಗಲ ಆಳಂದ ರವರು ನಾನು ಒಂದು ವರ್ಷ ಹಿಂದೆ ಕೋರಳಿ ಗ್ರಾಮದ ರಾಮಚಂದ್ರ ಸಂಗೋಳಗಿ ಇವರ ಮಗಳಾದ ನಂದಿನಿಯೊಂದಿಗೆ ಮದುವೆಯಾಗಿದ್ದು, ಕೆಲವು ದಿವಸ ನನ್ನೊಂದಿಗಿದ್ದು, ತನ್ನ ತಂದೆ-ತಾಯಿಯವರು ಫುಣಾದಲ್ಲಿ ಇರುವದರಿಂದ ನನ್ನ ಹೆಂಡತಿ ಹೇಳದೇ ಕೇಳದೆ ಹೋಗಿದ್ದಳು, ಒಂದು ತಿಂಗಳದ ಹಿಂದೆ ಆತ್ತೆ ಮಾವ ನನ್ನ ಹೆಂಡತಿಗೆ ನನ್ನೊಂದಿಗೆ ಕಳುಹಿಸಿದ್ದು, ಅವಳು ನಿನ್ನ ಸಂಗಡ ಇರುವದಿಲ್ಲ ಅಂತಾ ಆಗಾಗ ಹೇಳುತ್ತಿದ್ದಳು, ದಿನಾಂಕ 29/06/2012 ರಂದು ರಾತ್ರಿ ಮಲಗಿದ್ದಾಗ ಬೆಳಗಿನ ಜಾವ 4.00 ಗಂಟೆ ಸುಮಾರಿಗೆ ಮನೆಯಿಂದ ಹೋಗಿರುತ್ತಾಳೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 June 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ: ಶ್ರೀ ರಾಜು ತಂದೆ ಗೋವಿಂದಪ್ಪ ಜಾ: ಡೋರ ಸಾ|| ಗೊಬ್ಬೂರ [ಬಿ] ರವರು ಮಾನ್ಯ 2 ನೇ ಅಪರ ಸತ್ರ ನ್ಯಾಯಾಲಯದಿಂದ  ಖಾಸಗಿ ದೂರು ಸಂಖ್ಯೆ: 04/2012 ನೇದ್ದರ ಸಾರಾಂಶವೇನೆಂದರೆ, ಶ್ರೀ ರಾಜು ಇವರು ಗೊಬ್ಬೂರ[ಬಿ] ಗ್ರಾಮದ ಸರ್ವೆ ನಂ. 176 ನೇದ್ದರ ವಾರಸುದಾರನಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿದ್ದು ದಿನಾಂಕ:23-03-2012 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಚಂದಪ್ಫಾ ತಂದೆ ನಾಗಪ್ಪಾ, ಬಸವರಾಜ ತಂದೆ ಶಾಂತಪ್ಪಾ, ಶಿವಾನಂದ ಮಾನಕರ, ಮಹಿಬೂಬ ಅವರಳ್ಳಿ ರವರು ಪ್ರದೀಪ ತಂದೆ ಶಿವಾನಂದ, ಪ್ರಶಾಂತ ತಂದೆ ಶಿವಾನಂದ ಎಲ್ಲರೂ ಸಾ|| ಗೊಬ್ಬುರ (ಬಿ) ರವರು ಹೊಲದಲ್ಲಿ ಹಾಕಿದ ಜೋಪಡಿ ಕಿತ್ತಿ ಹಾಕಿ ನನಗೆ ಮತ್ತು ನನ್ನ ತಮ್ಮನಿಗೂ ಅವಾಚ್ಯ ವಾಗಿ ಬೈದು ಹೊಡೆ ಮಾಡಿ ಗಾಯಗೊಳಿಸಿರುವ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಇಂದು ದಿನಾಂಕ:30-06-2012 ರಂದು ಬೆಳಿಗ್ಗೆ 10-00 ಗಂಟೆಗೆ ಖಾಸಗಿ ದೂರು ವಸೂಲಾಗಿದ್ದರ ಮೇರೆಗೆ ಠಾಣೆ ಗುನ್ನೆ ನಂಬರ :75/2012 ಕಲಂ.323,324,504,506, ಸಂ. 149 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                                                                                                                                              
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ನಾಗಪ್ಪ ಹಾದಿಮನಿ ವ|| 40 ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನನ್ನ ಚಿಕ್ಕಪ್ಪನ ಮಗನಾದ ಅಶೋಕನ ಮದುವೆ ಮಾಡಿ ಮದು ಮಕ್ಕಳ ಮೆರವಣಿಗೆ ಹಮ್ಮಿಕೊಂಡಿರುವಾಗ ರಾತ್ರಿ 11 ಗಂಟೆಯ ಸುಮಾರಿಗೆ ರೋಡಿನ ಮೇಲೆ ಹೋಗಿ ಬರುವ ವಾಹನಗಳಿಗೆ ಹಾಗು ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಹೀಗೆ ಮಾಡುವದು ಸರಿಯಲ್ಲ ಅಂತ ನಾನು ಬುದ್ಧಿಮಾತು ಹೇಳಿದ್ದು, ಅದಕ್ಕೆ ಅನಿಲ ತಂದೆ ರಾಣಪ್ಪ ಈತನು ತನ್ನ ಜೊತೆಯಲ್ಲಿ ಇನ್ನೂ ಮೂರು ಜನರೊಂದಿಗೆ ಬಂದವನೇ ನನಗೆ  ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ತಲವಾರದಿಂದ ಹೊಡೆಯಲು ಬಂದಾಗ,ನಾನು ಕೈಮುಂದೆ ಮಾಡಲು ಆ ಏಟು ಬಲಗೈ ಹಸ್ತದ ಮೇಲೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ಇನ್ನುಳಿದ ಮೂರು ಜನರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 46/2012 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.