POLICE BHAVAN KALABURAGI

POLICE BHAVAN KALABURAGI

30 May 2012

GULBARGA DIST REPORTED CRIME


ಮನುಷ್ಯ ಕಾಣೆಯಾದ ಪ್ರಕರಣ:
ಆಳಂದ ಪೊಲೀಸ್ ಠಾಣೆ: ಶ್ರೀಮತಿ, ಸೀತಾಬಾಯಿ ಗಂಡ ನಾಗೇಶ ಅಲಿಯಾಸ ನಾಗೇಂದ್ರ ಸಿಂಗೆ ಸಾ: ಬಂಗರಗಾ ರವರು ನಾನು 4 ವರ್ಷದ ಹಿಂದೆ ಬಂಗರಗಾ ಗ್ರಾಮದ ನಾಗೇಶನೊಂದಿಗೆ ಮದುವೆಯಾಗಿದ್ದೆನೆ.ನಮ್ಮ ಮನೆಯಲ್ಲಿ ನನಗೆ  2 ಜನ ಗಂಡು ಮಕ್ಕಳು ಇದ್ದು, ನನ್ನ ಅತ್ತೆ , ನನ್ನ ಗಂಡ  ಜನರು ಇದ್ದು. ನನ್ನ ಗಂಡ ರುದ್ರವಾಡಿ ಗ್ರಾಮ ಪಂಚಾಯತಿಯಲ್ಲಿ ಪಂಪ ಅಪರೇಟರ ಅಂತ ಕೂಲಿ ಕೆಲಸ ಮಾಡುತ್ತಾನೆ.  ಪ್ರತಿ ದಿವಸ ನಮ್ಮ ಗ್ರಾಮದಲ್ಲಿ ಒಟ್ಟು 6 ಮೋಟಾರಗಳಿಗೆ ನೀರು ಬಿಡಲು ದಿನಾಲು ನನ್ನ ಗಂಡ  ಸೈಕಲ ತೆಗೆದುಕೊಂಡು ಹೋಗಿ ನೀರು ಬಿಟ್ಟು ರಾತ್ರಿ 8-00 ಗಂಟೆಗೆ ಮನೆಗೆ ಬರುತ್ತಿದ್ದನು. ನನ್ನ ಗಂಡ ಬರದೆ ಇದ್ದುದರಿಂದ ನಮ್ಮ ಅತ್ತೆ ಬೀಮಬಾಯಿ ಮೈದುನ ರಾಜೇಂದ್ರ ತಂದೆ ವಿಠಲ ಕಲಕೇರೆ ಕೂಡಿಕೊಂಡು ಮೊಬಾಯಿಲ್ ಗೆ ಕಾಲ್ ಮಾಡಿದಾಗ  ನಾಟ್ ರಿಚೇಬಲ್ ಅಂತಾ ಬಂತು ನಾವೇಲ್ಲರೂ ಹುಡಕಾಡಿದರೂ ಎಲ್ಲಿಯೂ ಸಿಕ್ಕಿರುವದಿಲ್ಲ. ನನ್ನ ಗಂಡ ಕಾಣೆಯಾದ ಬಗ್ಗೆ ನಮ್ಮೂರು ಸುಭಾಷ ಮತ್ತು ದರ್ಮರಾಯ ಇವರ ಮೇಲೆ ಸಂಶಯವಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ ಪಟ್ಟೆ: ಎತ್ತರ 5 ಅಡಿ 6 ಇಂಚು ಉದ್ದ, ಸುಮಾರು 35 ವರ್ಷ ವಯಸ್ಸು, ಮೈಬಣ್ಣ ಗೋಧಿ ವರ್ಣ. ಸಣ್ಣ ಮೀಸೆ, ಕರೀಯ ಪ್ಯಾಂಟು, ಬಿಳಿ ಬಣ್ಣದ ಪುಲ್ಲ ಶರ್ಟ, ಕಾಲಲ್ಲಿ ಕಂಪನೀಯ ಕೆಂಪು ಬಣ್ಣದ ಚಪ್ಪಲಿ, ಹಣೆಯ ಮೇಲೆ ಬಲಗಡೆ ಒಂದು ಹಳೆಯ ಗಾಯ, ಬಲಗಡೆ ಕಾಲು ಕುಂಟುತ್ತಾನೆ. ಬಲಗೈಯಲ್ಲಿ ತಾಮ್ರದ ಖಡೆ ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಗೊಬರುರಾವ  ತಂದೆ  ಕೃಷ್ಣ ರಾವುತ್ ಸಾ:ಟೀಮನಪೂರ ರಾಯಗಡ ಪೋಷ್ಟಿ ನವರಂಗಪೂರ  ಜಿಲ್ಲೆ  ರಾಜ್ಯ|| ಒರಿಸ್ಸಾ ರವರು  ನಾನು ಕೆಎ-01 ಡಿ-9547 ರ ಬೋರವೆಲ್  ಲಾರಿಯ  ಮೇಲೆ ಹೆಲ್ಪರ್ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ.  ನಮ್ಮ ಗ್ರಾಮದ ಗಾಗುಡರಾಮ ತಂದೆ ಬಾಲಕ  ಯಾದವ  ಖೇತುರಾಮ ತಂದೆ ಖಟಲಿ ಮಾಲಿ  ಹಾಗೂ ಲಾಲು ತಂದೆ ಲಕ್ಕಮ್ಮ ವಡ್ಡೆ  ನಾಲ್ಕು ಜನರು ಬೋರವೆಲ್ ಲಾರಿ ಮೇಲೆ  ಹೇಲ್ಪರ್  ಕೆಲಸ  ಮಾಡುತ್ತಿದ್ದೆವೆ. ದಿನಾಂಕ:29/05/2012 ರಂದು  ಬೆಳಿಗ್ಗೆ ಳಂದ  ತಾಲೂಕಿನ  ಚಿಂಚೋಳಿ  ಗ್ರಾಮದ   ಹೊಲದಲ್ಲಿ ಬೊರವಲ್  ಹಾಕಿ ನಾವು ಅಕ್ಕಲಕೋಟಕ್ಕೆ ಹೋಗಲು ಚಿಂಚೋಳ್ಳಿ ಮಾರ್ಗವಾಗಿ ಹೋಗುತ್ತಿದೆವು, ಲಾರಿ ಎಮ್, ಮೋಹನ ತಂದೆ  ಮುತ್ತು ಸ್ವಾಮಿ ಸಾ:ಪಾಳಮೇಡ  ಇತನು ನಡೆಸುತ್ತಿದ್ದನು .ಮದ್ಯಾನ 2:30 ಗಂಟೆಯ ಸುಮಾರಿಗೆ ನಾವು ಕುಳಿತ ಹೊರಟ ಬೊರವೆಲ್ಲ ಲಾರಿ ಚಾಲಕನು ಸರಸಂಬಾ ಗ್ರಾಮದ  ಕೆಇಬಿ ಖಜಾನೆ ಹತ್ತಿರ ರಸ್ತೆಯಲ್ಲಿ ಜೊತು ಕೆಳಗೆ ಆಗದ  ಕರೇಂಟ ಇರುವ ವಿದ್ಯುತ್ ವೈಯರ್ ನೋಡದೆ ನಿರ್ಲಕ್ಷತನದಿಂದ ಎಮ್. ಮೋಹನ ತಂದೆ ಮುತ್ತು ಸ್ವಾಮಿ ಇತನು ಲಾರಿ ಚಲಾಯಿಸಿದ್ದರಿಂದ ಲಾರಿಯಲ್ಲಿ ಕುಳಿತ ಗಾಗುಡರಾಮ ತಂದೆ ಬಾಲಕ ಯಾದವ ಸಾ:ಟೀಮನಪೂರ ಇತನಿಗೆ ಹತ್ತಿ ಶಾಖ  ಹೊಡೆದಿದ್ದರಿಂದ   ವಿದ್ಯೂತ್ ವೈಯರ್ ಶಾಖದಿಂದ  ಮೃತಪಟ್ಟಿರುತ್ತಾನೆ ಸರಸಂಭಾ ಗ್ರಾಮದ ರೋಡಿನ ಹತ್ತಿರದ  ರಸ್ತೆಯಲ್ಲಿ  ಜೇಸ್ಕಾ ಕೇಂದ್ರದ  ಅಧಿಕಾರಿಗಳು  ಜೋತು ಬಿದ್ದ ವಿದ್ಯೂತ್  ಕಂಬದ ವೈಯರ್ ಜೇಸ್ಕಾಂ ಅಧಿಕಾರಿಗಳು ಸರಿಪಡಿಸದೆ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿಸಿರುತ್ತಾರೆ.ಕಾರಣ ಜೇಸ್ಕಾಂ ಅಧಿಕಾರಿಗಳಾದ ಅಶೋಕ ಕುಮಾರ  ಗೂಡುರೆ  ಮತ್ತು   ಬೋರವೇಲ್ ಲಾರಿ ನಂ ಕೆ,- ಎ 01 ಡಿ- 9547 ರ  ಚಾಲಕನ  ಮೇಲೆ   ಕಾನೂನು ಪ್ರಕಾರ  ಕ್ರಮ ಜರುಗಿಸಬೇಕು  ಅಂತಾ  ಹೇಳಿಕೆ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ  ನಂ 24/2012 ಕಲಂ 285 304 (ಎ) ರ  ಪ್ರಕಾರ  ಗುನ್ನೆ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀಶರಣರೆಡ್ಡಿ  ತಂ/ ಅನಾಂತರೆಡ್ಡಿ ಬಂಡಿ ಮು:ರಾಘಾಪೂರ ರಾಮ ನಗರ ಗುಲಬರ್ಗಾ ರವರು ನಾನು ಸಫಾರಿ ದಾಭಾದಲ್ಲಿ  ಕೆಲಸ ಮಾಡು ತ್ತಿದ್ದು  ನಾನು ದಿನಾಲು  ಹೋಗಿ ಬರಲಿಕ್ಕೆ  ನನ್ನ ಮೋಟಾರ ಸೈಕಲ ನಂ ಕೆಎ 32 ಜೆ 4759  ನೇದ್ದನ್ನು  ಉಪಯೋಗಸುತ್ತೇನೆದಿನಾಂಕ: 26-04-2012 ರಂದು ರಾತ್ರಿ  ಕೆಲಸ ಮುಗಿಸಿಕೊಂಡು ಸಫಾರಿ ದಾಭಾದ ಪಾರ್ಕಿಂಗ ನಲ್ಲಿ  ಗಾಡಿ  ನಂ ಕೆಎ 32 ಜೆ 4759  ನೇದ್ದನ್ನು ನಿಲ್ಲಿಸಿದ್ದು, ರಾತ್ರಿ 12  ಗಂಟೆಗೆ  ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನೋಡಲಾಗಿ  ನನ್ನ ಮೋಟಾರ ಸೈಕಲ ಇರಲಿಲ್ಲ .ಯಾರೋ  ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ  ಹೇಳಿಕೆ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ  ನಂ: 179/2012 ಕಲಂ 379 ಐಪಿಸಿ ಪ್ರಕಾರ  ಗುನ್ನೆ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತಾರೆ. 

29 May 2012

GULBARGA DIST REPORTED CRIME


ಅಪಹರಣ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಹಣಮಂತಪ್ಪಾ ಸಾ|| ಇಂಗಳಗಿ ವರು ನಮ್ಮ ಮನೆಯ ಅಂಗಳದಲ್ಲಿ ರಾತ್ರಿ 11-00 ಗಂಟೆ ಸುಮಾರಿಗೆ ನಾವು ಮಲಗಿಕೊಂಡಾಗ ಅಂಬಿಕಾ ಇವಳು ನನಗೆ ಸಂಡಾಸ ಬಂದಿದೆ ಅಂತಾ ಹೇಳಿದಳು.ನಾವಿಬ್ಬರೂ  ನನ್ನ ಮಗಳಿಗೆ ಹೋಗಿ ಬಾ ಅಂತಾ ಹೇಳಿದೆವು ಸ್ವಲ್ಪ ಸಮಯದ ನಂತರ ನನ್ನ ಮಗಳು ಅಂಬಿಕಾ ಅಮ್ಮಾ ಅಂತಾ ಚೀರಿದ್ದರಿಂದ ನಾವು ಗಾಬರಿಯಾಗಿ ನೊಡಲಾಗಿ ನನ್ನ ಮಗಳು ಅಂಬಿಕಾಳಿಗೆ ನಮ್ಮ ಊರಿನ ಹರಿಜನ ಕೇರಿಯ ಪರ್ದಾನಿ ಹೊನಗುಂಟಾ ಮತ್ತು ಮೊನಪ್ಪಾ ತಳಗೆರಿ ಇವರು ಎಳೆದುಕೊಂಡು ಹೊರಟಿದ್ದರು ಪರ್ದಾನಿ ನನ್ನ ಮಗಳ ಬಾಯಿ ಒತ್ತಿ ಹಿಡಿದಿದ್ದನು ಆಗ ನಾವು ಬೆನ್ನು ಹತ್ತಿದೆವು ಊರ ಹೊರಗೆ ಕತ್ತಲಲ್ಲಿ ಓಡಿ ಹೊದರು ನಾವು ಹುಡುಕಾಡಿದರು ನನ್ನ ಮಗಳು ಪತ್ತೆಯಾಗಲಿಲ್ಲಾ ಮನೆಯಲ್ಲಿ ಬಂದು ನೊಡಲಾಗಿ ಅಂಬಿಕಾಳ ನಿಶ್ಚಯ ಕಾರಣದಿಂದಾಗಿ ಅಳಿಯನಿಗೆಂದು ತಂದಿರುವ 10 ಗ್ರಾಂ ಬಂಗಾರದ ಲಾಕೆಟ, 10  ಗ್ರಾಂ ಬಂಗಾರದ ಉಂಗುರ ಮನೆಯಲ್ಲಿ ಇರಲಿಲ್ಲ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸ ಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ 366(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.