POLICE BHAVAN KALABURAGI

POLICE BHAVAN KALABURAGI

01 May 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಅನಿಲಕುಮಾರ ತಂದೆ ಬಸವಂತರಾವ್ ಕೊಂಡೆದ ಸಾ|| ಕೊಂಡೆದಗಲ್ಲಿ ಬ್ರಹ್ಮಪೂರ ಗುಲಬರ್ಗಾರವರು ನಾನು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಯಂಕವ್ವ ಮಾರ್ಕೆಟ ಹತ್ತಿರ ನಡೆದುಕೊಂಡು ಬರುತ್ತಿರುವಾಗ ಗಿರಿ ಪಟವಾರಿ ಸಂಗಡ ಇನ್ನೊಬ್ಬ  ಬಂದು ಅವಾಚ್ಯವಾಗಿ ಬೈದು ಇಲ್ಲಿಂದ ಯಾಕೆ ಹೋಗುತ್ತಿ ಅಂತಾ ವಿನಾಃಕಾರಣ ನನ್ನೊಂದಿಗೆ ಜಗಳ ಮಾಡಿ ಮಾಡಿರುತ್ತಾರೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/12 ಕಲಂ 341, 323, 504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಜೇವರ್ಗೀ ಪೊಲೀಸ್ ಠಾಣೆ: ಶ್ರೀ ಮಂಜುನಾಥ ಅದ್ವಾನಿ ಸಾ: ವರವಿ ರವರು ನಾನು ಮತ್ತು ದೌವಲತರಾಯ ಹೊಸಮನಿ , ಭೀಮಬಾಯಿ, ಸಾಬವ್ವ ಹೊಸಮನಿ , ಸಿದ್ರಾಮ ಹನ್ನೂರ, ಮಲ್ಕಪ್ಪ ಸಿರಸಗಿ ಎಲ್ಲರೂ ಕೂಡಿಕೊಂಡು  ದಿನಾಂಕ: 30/04/2012 ರಂದು ಮುಂಜಾನೆ ಕೆಎ-33 ಎ-4734 ಟಂಟಂನೇದ್ದರಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೊನಗುಂಟಿ ಗ್ರಾಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ಜೇವರ್ಗಿ ಸಮೀಪದ ಮಂಡಳಾ ಬಟ್ಟಿ  ಎದುರುಗಡೆ ಟಂಟಂ ಚಾಲಕನಾದ ಚಂದ್ರಶೇಖರ ನೆಲೋಗಿ ಇತನು ತನ್ನ ಟಂ ಟಂ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮೇಲೆ ಕಟ್ಟ ಹೊಡೆದು ಟಂ ಟಂ ರೋಡಿನಲ್ಲಿ ಪಲ್ಟಿ ಮಾಡಿದ್ದರಿಂದ, ಮಲ್ಕಪ್ಪ ಸಿರಸಗಿ ಇತನಿಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ,  ಇನ್ನೂಳಿದವರಿಗೆ ಭಾರಿ ಮತ್ತು ಸಾದಾ ಗಾಯಾಗಳಾಗಿರುತ್ತವೆ. ಟಂ ಟಂ ಚಾಲಕನು ತನ್ನ ವಾಹನವನ್ನು ಅಲ್ಲೆ ಬೀಟ್ಟು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 62/2012 ಕಲಂ 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 April 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಶಿವಪುತ್ರ ತಂದೆ ಸಿದ್ರಾಮಪ್ಪ ಪಾಟೀಲ ಸಾ:ಸದಲಾಪೂರ ತಾ:ಅಕ್ಕಲಕೊಟಜಿಲ್ಲೆ :ಸೊಲಾಪೂರರವರುದಿನಾಂಕ:30-04-2012 ರಂದು ಬೆಳಿಗ್ಗೆ:7-00 ಗಂಟೆಯ ಸುಮಾರಿಗೆ ಸದಲಾಪೂರ ಗ್ರಾಮದಿಂದ ನನ್ನ ತಾಯಿಯಾದ ಸುಗಲಬಾಯಿ ಇವಳು ಸರಸಂಬಾ ಗ್ರಾಮಕ್ಕೆ ಹೋದಳು  ನಾನು ಅಕ್ಕಲಕೋಟದಲ್ಲಿದ್ದಾಗ ಸರಸಂಬಾ ಗ್ರಾಮದ ಜಗನಾಥ ಇತನು ಫೋನ ಮುಖಾಂತರ ನಿನ್ನ ತಾಯಿಯಾದ ಸುಗಲಬಾಯಿಗೆ ಸರಸಾಂಬಾ ಗ್ರಾಮದ ಬಸ್‌ ನಿಲ್ದಾಣ ಹತ್ತಿರ ಅಪಘಾತವಾಗಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಘಾಬರಿಗೊಂಡು ಸರಸಾಂಬಾಕ್ಕೆ ಬಂದು ನೋಡಲಾಗಿ ನನ್ನ ತಾಯಿಯಾದ ಸುಗಲಬಾಯಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ ಅಪಘಾತ ಪಡಿಸಿದ ವಾಹನವನ್ನು ಪರಿಶೀಲಿಸಿ ನೋಡಲಾಗಿ  ಅದು 407 ವಾಹನವಿದ್ದು ಅದರ ನಂ: ಎಮ್.ಹೆಚ್04 ಎಫ್.ಡಿ 3169 ಅಂತಾ ಇದ್ದು ಅದರ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ    ಠಾಣೆ ಗುನ್ನೆ ನಂ: 17/2012 ಕಲಂ: 279. 304() ಐಪಿಸಿ ಸಂ: 187 .ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.