POLICE BHAVAN KALABURAGI

POLICE BHAVAN KALABURAGI

29 April 2012

GULBARGA DIST REPORTED CRIMES


ಮೋಟಾರ ಸೈಕಲ ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶಿವಕುಮಾರ ತಂದೆ ಶಿವಲಿಂಗಪ್ಪ ಯಾಳೆಗಾಂವ ವ|| 20, ಉ|| ವಿದ್ಯಾರ್ಥಿ, ಸಾ|| ಪ್ಲಾಟ ನಂ 154, ಜೆ.ಆರ್ ನಗರ ಅಳಂದ ರೋಡ ಗುಲಬರ್ಗಾರವರು ನನ್ನ  ಹೀರೊ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂ ಕೆಎ-32/ವಿ-1849 ನೇದ್ದನ್ನು ದಿನಾಂಕ 07-04-2012 ರಂದು ಸಾಯಂಕಾಲ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿಕೊಂಡು ಹೊರಗೆ ಬಂದಾಗ ನನ್ನ ಮೊಟಾರ್ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 28/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಶಂಕರ ತಂದೆ ನಾಗಪ್ಪಾ ಹಲಗುರ್ಗಿ ಸಾಃ ಹಳ್ಳಿಖೇಡ(ಕೆ) ವಾಡಿ ತಾಃ ಹುಮನಾಬಾದ ಜಿಃ  ಬೀದರ ರವರು  ನನಗೆ ಗುಲಬರ್ಗಾದಲ್ಲಿ ಖಾಸಗಿ ಕೆಲಸವಿದ್ದ ಪ್ರಯುಕ್ತ ದಿನಾಂಕ:28/04/2012 ರಂದು  ಬೆಳಿಗ್ಗೆ ಗುಲಬರ್ಗಾಕ್ಕೆ ಹೋಗಿ, ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ  ಬರುತ್ತಿರುವಾಗ,ನನ್ನ ಅಣ್ಣನ ಮಗಳಾದ ಲಕ್ಷ್ಮೀಬಾಯಿ ಗಂಡ ದೇವಪ್ಪಾ ಟಾಕಾಪೂರ ಇವಳು ಸಹ ನನ್ನ ಜೋತೆಯಲ್ಲಿ ಬಸ್ಸ ನಂಬರ ಕೆಎ:32,ಎಫ್:1711 ನೇದ್ದರಲ್ಲಿ ಕುಳಿತುಕೊಂಡು ಕಮಲಾಪೂರಕ್ಕೆ ಬಂದ್ದು ಬಸ್ಸಿನಿಂದ ಇಳಿಯುವಾಗ ಬಸ್ಸ ಚಾಲಕನು ತನ್ನ ಬಸ್ಸನ್ನು ಅಜಾಗುರುಕತೆಯಿಂದ ಒಮ್ಮೇಲೆ ಹಿಂದಕ್ಕೆ ಚಲಾಯಿಸಿದಾಗ ಬಸ್ಸಿನ ಮುಂದಿನ ಟೈಯರ ನನ್ನ ಎಡಗಾಲಿನ ಹಿಮ್ಮಡಿಗೆ ತಾಗಿದ್ದರಿಂದ ನನ್ನ ಎಡಗಾಲಿಗೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಬಸ್ಸ ಚಾಲಕನ ಹೆಸರು ವಿಚಾರಿಸಲಾಗಿ, ಎಸ್.ಜಿ ಅಕ್ಬರ ತಂದೆ ಎಸ್.ಜಿ ಅಬ್ಬಾಸ ಸಾಃಸಂತ್ರಾಸವಾಡಿ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಿರಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:46/2012  ಕಲಂ 279.337 ಐಪಿಸಿ ಸಂ. 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ಶ್ರೀ ಗೌಡಪ್ಪಗೌಡ ತಂದೆ ದೇವಿಂದ್ರಪ್ಪಗೌಡ ಮಾಲಿಪಾಟೀಲ ಸಾ: ಮಲ್ಲಾಬಾದ ತಾ: ಜೇವರ್ಗಿ ರವರು ನಮ್ಮ ಮನೆಗೆ ದಿನಾಂಕ 27,28-4-12 ರ  ಮಧ್ಯ ರಾತ್ರಿ  ವೇಳೆಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ  5 ಗ್ರಾಂ ಬಂಗಾರ, ಆಭರಣ , ನಗದು ಹಣ 10,200=00 ಮತ್ತು ಮಲ್ಲಪ್ಪ ಇವರ ಕಾರ್ಬನ್ ಮೊಬಾಯಿಲ್  ಹ್ಯಾಂಡಸೇಟ್  ಹೀಗೆ ಒಟ್ಟು 23,875=00 ರೂಪಾಯಿ ಮೌಲ್ಯದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 35/12 ಕಲಂ 475,380 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 April 2012

GULBARGA DIST REPORTED CRIMES


ಹಲ್ಲೆ ಪ್ರಕರಣ:


ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಮೊಹ್ಮದ ಇಕ್ಬಾಲ ತಂದೆ ಮೊಹ್ಮದ ಹುಸೇನ ತರನಳ್ಳಿ ಸಾ: ಟಿಪ್ಪುಸುಲ್ತಾನ ಚೌಕ  ರಾಮಾ ಮೊಹಲ್ಲಾ ಶಹಾಬಾದ ರವರು ದಿನಾಂಕ: 27-04-2012 ರಂದು ನಮ್ಮ ಮನೆಯ ಮುಂದೆ ಕುಳಿತಾಗ ಮುಕ್ತಾರ ಇನಾಮದಾರ ಸಂಗಡ ಮೂರು ಜನರು ಎಲ್ಲರೂ ಸಾ:ಮಜೀದ ಚೌಕ ಶಹಾಬಾದ ರವರು ವಿನಾಃಕಾರಣ ಜಗಳ ತೆಗೆದು, ಅವಾಚ್ಯವಾಗಿ ಬೈದು, ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಜೇಂದ್ರ ತಂದೆ ಹಣಮಂತ ಮೋರೆ ಸಾ:ಪ್ಲಾಟ ನಂ 20/2 ನ್ಯೂ ಗಾಟಗೆ ಲೇಔಟ ಹತ್ತಿರ ಕ್ಯಾಂಬೆಲ ಶಾಲೆ  ಗುಲಬರ್ಗಾರವರು ನಾನು  ದಿನಾಂಕ:25/04/2012 ರಂದು 8.30 ಪಿಎಂ ಸುಮಾರಿಗೆ ಗುಲಬರ್ಗಾದಿಂದ ಇಂಡಿಕಾ ಕಾರ ನಂ.ಕೆಎ-32/ಬಿ5063 ನೇದ್ದನ್ನು ಚಲಾಯಿಸಿಕೊಂಡು ಶಹಾಬಾದಕ್ಕೆ ಬಂದು,ಖಾಸಗಿ ಕೆಲಸ ಮುಗಿಸಿಕೊಂಡು ಗುಲಬರ್ಗಾಕ್ಕೆ ಹೋಗುವಾಗ ಶಹಾಬಾದ ರೇಲ್ವೆ ಬ್ರೀಡ್ಜ ಹತ್ತಿರ ನನ್ನ ಎದುರಿಗೆ ಒಂದು ಲಾರಿ ಚಾಲಕನು ತನ್ನ ಲಾರಿಯ Focus ಲೈಟನ್ನು ಹಾಕಿದ್ದರಿಂದ ನಾನು ಕಾರನ್ನು ಒಮ್ಮೆಲೆ ಬ್ರೇಕ ಹಾಕಿದ್ದರಿಂದ  ನನ್ನ ಕಾರು ರೋಡಿನ ಕೆಳಗೆ ಇಳಿದಿದ್ದರಿಂದ ಕಾರು ಪೂರ್ತಿ ಜಖಂ ಆಗಿರುತ್ತದೆ, ನನಗೆ ಕೇವಲ ಬಲಗಾಲ ಮೊಳ ಕಾಲಿಗೆ ಒಳಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 51/2012 ಕಲಂ 279, 337 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


27 April 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶೇಖದಾವೂರ ತಂದೆ ಶೇಖರಾಜ ಮಹ್ಮದ ಸಾ:ಅಶೋಕನಗರ ಶಹಾಬಾದ ರವರು ನಾನು ದಿನಾಂಕ 26/4/2012 ರಂದು 6-30 ಗಂಟೆ ಸುಮಾರಿಗೆ ಹಸನ ಶೇಟ ಇವರ ಹೊಲದಲ್ಲಿ ಕ್ರೀಕೇಟ ಆಡಲು ನನ್ನ ತಮ್ಮ ಶೇಖ ಇಮಾಮ ಅಲ್ಲಿಗೆ ಹೊದಾಗ ಪಿರೋಜ ತಂದೆ ಹಾಜಿ, ಸಂ 5 ಜನರು ಕೂಡಿವಿನಾಃಕಾರಣ ಜಗಳ ತೆಗೆದಿರುತ್ತಾರೆ,  ನಾನು ಕೇಳಲು ಹೋದರೆ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಕೈಯಿಂದ ನನಗೆ ಎಡಗಣ್ಣಿನ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2012 ಕಲಂ 147 323 324 504 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದಶರಥ ತಂದೆ ಶರಣಪ್ಪಾ ಶೆಳ್ಳಗಿ  ಸಾಹರಳಯ್ಯಾ ಚೌಕಶಹಾಬಾದ ರವರು ದಿನಾಂಕ:17/04/2012 ರಂದು 6 ಪಿಎಮ್ ಕ್ಕೆ ತರನಳ್ಳಿ ಗ್ರಾಮದ ಶಂಕರ ನಾಟಿಕಾರ ಇವರ ಹೊಲದಲ್ಲಿ ಮಣ್ಣು ತೆಗೆಯುತ್ತಿದ್ದ  ಜೆ.ಸಿ.ಬಿನಂಕೆ.32/5665 ನೇದ್ದರ ಚಾಲಕನಿಗೆ ನಮ್ಮ ಖಣಿಯಲ್ಲಿಕಲ್ಲು ತೆಗೆಯುವ ಕೆಲಸವಿದ್ದ ಕಾರಣ ಜೆ.ಸಿ.ಬಿಚಾಲಕನಿಗೆ ಹೇಳಿ ಜೆ.ಸಿ.ಬಿ ಹಿಂದುಗಡೆ ನಿಂತಿರುವಾಗ,ಜೆ.ಸಿ.ಬಿಚಾಲಕನು ತನ್ನ ಜೆ.ಸಿ.ಬಿಯನ್ನು ನಿಷ್ಕಾಳಜಿತನಿಂದ  ಚಲಾಯಿಸಿ ಹಿಂದಕ್ಕೆ ತೆಗೆದುಕೊಳ್ಳುತ್ತಿರುವಾಗ ನನಗೆ ಡಿಕ್ಕಿ ಪಡಿಸಿಎಡಕಾಲಿಗೆ ಮೊಳಕಾಲ ಮೇಲೆ ತೊಡೆಗೆ ಬಾರಿ ಒಳಪೆಟ್ಟು ಪಡಿಸಿದ್ದು ಇರುತ್ತದೆದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2012 ಕಲಂ; 279 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.