POLICE BHAVAN KALABURAGI

POLICE BHAVAN KALABURAGI

09 April 2012

GULBARGA DIST REPORTED CRIMES


ಅನೈಸರ್ಗಿಕ ಸಂಭೋಗ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 07/04/2012 ರಂದು ಶನಿವಾರ ಮುಂಜಾನೆ ಅಮರೇಶನು ಸ್ನಾನ ಮಾಡುವಾಗ ನರಳುತ್ತಿರುವದನ್ನು ಕೇಳಿ ನಾನು ಬಚ್ಚಲಲ್ಲಿ ಹೋಗಿ ನೋಡಲಾಗಿ ನೋವಿನ ಬಾದೆಯಿಂದ ನರಳುತ್ತಿದ್ದನು, ಕೈ ಸನ್ನೆ ಮಾಡಿ ವಿಷಯ ತಿಳಿಸಿದನು. ಆತನು ಕರೆದುಕೊಂಡು ಗ್ರಾಮದ ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗಿ ತಾನು ಮಲಗಿರುವ ಜಾಗವನ್ನು ತೋರಿಸಿ ಸದರಿ ಜಾಗದಲ್ಲಿ ಮಲಗಿದಾಗ ಒಬ್ಬ ವ್ಯಕ್ತಿ ತನಗೆ ಅನೈಸರ್ಗಿಕ ಸಂಭೋಗ ಮಾಡಿರುತ್ತಾನೆ ನಮ್ಮ  ಗ್ರಾಮದ ಗುಂಡಪ್ಪ ತಂದೆ ನಾರಾಯಣ ನಾಟಿಕಾರ ಇವನ ಕಡೆಗೆ ಕೈ ಮಾಡಿ ತೋರಿಸಿ ಈತನೆ ತನಗೆ ಅನೈಸರ್ಗಿಕ ಸಂಭೋಗ ಮಾಡಿರುತ್ತಾನೆಂದು ತೋರಿಸಿರುತ್ತಾನೆ ಅಂತ ತೋರಿಸಿದ್ದ ನೊಂದ ಯುವಕನ ತಾಯಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 27/2012 ಕಲಂ 377 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಪುರ್ಣಿಮಾ ಕುಲಕರ್ಣಿ ಗಂಡ ಸುನಿಲ್ ಅಗ್ನಿಹೋತ್ರಿ ಸಾ|| ಕವಿ ಪ್ಲಾಟ ಸ್ಟೇಷನ ರೋಡ ಬಿಜಾಪೂರ ಹಾ||ವ|| 72 ಕೋಚಲೈನ ಎಕ್ಸಷ್ಟೇನ್ಸ ಪೇನಸ್ಲಿಯನಿಯಾ ಪಿ.ಎ 1934 ಯು.ಎಸ್.ಎ ರವರು ನಮ್ಮ ತಮ್ಮನ ಮದುವೆಯು ಗುಲಬರ್ಗಾ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇರುವದರಿಂದ ನಾನು ಮುದುವೆಗೆ ಬಂದಿರುತ್ತನೆ. ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಯು.ಎಸ್ ಡ್ರಾವಿಂಗ ಲೈಸನ್ಸ, ಬ್ಯಾಂಕ ಆಫ್ ಅಮೇರಿಕಾ ಕ್ರೇಡಿಟ / ಡೆಬಿಟ ಕಾರ್ಡ, ಐಸಿಐಸಿಐ ಡೆಬಿಟ ಕಾರ್ಡ, ಯು.ಎಸ್.ಇನ್ಸೂರೇನ್ಸ ಮೇಡಿಕಲ್/ಕಾರ ಕಾರ್ಡ,ವಾಲ ಮಾರ್ಟ ಕ್ರೇಡಿಟ ಕಾರ್ಡ,ಕೋಲಾಭ ಚಾರ್ಜ ಕಾರ್ಡ,ಸನ್ಯಾಸ ಕ್ಲಬ ಕಾರ್ಡ,ಬ್ಲಾಕ ಬೇರಿ ಮೋಬಾಯಿಲ್ ಅ||ಕಿ|| 10,000/-, ಯು.ಎಸ್. ಲೈಬ್ರರಿ ಕಾರ್ಡ ಮತ್ತು ಇನ್ನಿತರ ದಾಖಲಾತಿಗಳು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 46/12 ಕಲಂ: 379 380 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ನಾಗೇಂದ್ರ ಸಿಪಿಸಿ.436 ಶಹಾಬಾದ ನಗರ ಠಾಣೆರವರು ಠಾಣೆ ವ್ಯಾಪ್ತಿಯ ರೇಲ್ವೆ ಸ್ಟೇಷನ ಹತ್ತಿರ ಪೆಟ್ರೋಲಿಂಗ ಕರ್ತವ್ಯ ಕುರಿತು ಹೋದಾಗ ಪೋಸ್ಟ್‌ ಆಫೀಸ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಸರಾಯಿ ಕುಡಿದ ಅಮಲಿನಲ್ಲಿ ಚಿರಾಡುವದು, ಬೈಯುವದು, ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿದದನ್ನು ನೋಡಿ ವಿಚಾರಿಸಲಾಗಿ ಆತನ ಹೆಸರು ಶಾಮ ತಂದೆ ರಘುನಾಥ ನಾಯಕ ಸಾ:ಇಂದಿರಾ ನಗರ ಮಡ್ಡಿ ನಂ.2 ಅಂತಾ ಹೇಳಿದನು ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಸಾರ್ವಜನಿಕರಿಗೆ ತೊಂದರೆ ಯಾಗಬಹುದು ಅಂತಾ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2012 ಕಲಂ: 110 (ಇ) & (ಜಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಮೇಲೆ ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ.ನೀಲಮ್ಮ ಗಂಡ ಸೋಮನಾಥ ವಗ್ಗಾಲೆ ಸಾ|| ಮೋಘಾ (ಕೆ)ರವರು ನನ್ನ ಮನೆಯ ಮುಂದೆ ಬಂದು ಪರಮೇಶ್ವರ ತಂದೆ ಚನ್ನಪ್ಪ ವಗ್ಗಾಲೆ, ಶರಣಪ್ಪ ತಂದೆ ಚನ್ನಪ್ಪ ವಗ್ಗಾಲೆ,ಜಗದೇವಿ ಗಂಡ ಚನ್ನಪ್ಪ ವಗ್ಗಾಲೆ, ಚನ್ನಪ್ಪ ತಂದೆ ದುಂಡಪ್ಪ ವಗ್ಗಾಲೆ ಇವರೆಲ್ಲರೂ ಕೂಡಿಕೊಂಡು ಮನೆಯ ಹತ್ತಿರ ಬಂದು ಹೊಲಕ್ಕೆ ಪೈಪಲೈನ ಮಾಡಬೇಡ ಅಂತಾ ಹೇಳಿದರೂ ಪೈಪ ಲೃನ್ ಮಾಡಿದ್ದಿರಿ ಅಂತಾ ಅವಾಚ್ಯಾವಾಗಿ ಹೊಡೆ ಬಡೆ ಮಾಡಿರುತ್ತಾರೆ. ಮತ್ತು ಸೀರೆ ಹಿಡಿದು ಎಳೆದಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:14/2012 ಕಲಂ 323,324, 354, 504, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಜೀವನಕುಮಾರ ತಂದೆ ಶಿವಶರಣಪ್ಪಾ ನಿಂಗಮಾರಿ, ಸಾಃ ಮಳಖೇಡ, ಹಾ.ವ ಬಿ.ಸಿ.ಎಮ್ ಹಾಸ್ಟೆಲ ಬುದ್ದ ವಿಹಾರ ಗುಲಬರ್ಗಾರವರು ನಾನು ದಿನಾಂಕ 08-04-2012 ರಂದು ಮಧ್ಯಾಹ್ನ ಅಟೋರಿಕ್ಷಾ ನಂ. ಕೆ.ಎ 32 ಎ 5048 ನೇದ್ದರಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ಅಟೋರಿಕ್ಷಾ ಚಾಲಕನು ಹುಮನಾಬಾದ ರೋಡಿಗೆ ಇರುವ ಲಾಹೋಟಿ ಶೋ ರೂಮ ಹತ್ತಿರ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆದು ಪಲ್ಟಿ ಮಾಡಿ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 21/2012 ಕಲಂ 279, 337, ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರಾಜಕುಮಾರ ತಂದೆ ಶಿವರಾಜ ಮಂಗದಳ್ಳಿ ಸಾ: ಭೀಮ್ಮಳ್ಳಿ ತಾ: ಗುಲಬರ್ಗಾರವರು ನಾನು ಮತ್ತು ಗುರುರಾಜ ದಿನಾಂಕ:08/04/2012 ರಂದು ಮದ್ಯಾಹ್ನ 12 ಗಂಟೆಗೆ ನನ್ನ ಮೋಟಾರ ಸೈ ಕಲ ನಂ ಕೆಎ 37 ಆರ್‌ 6861 ನೇದ್ದರ ಗುಲಬರ್ಗಾಕ್ಕೆ ಮದುವೆಯ ನಿಶ್ಚಯ ಕಾರ್ಯಾಕ್ರಮಕ್ಕೆ ಹೊರಟಾಗ ಆಳಂದ ಕಡೆಯಿಂದ ಬಸ್ಸ ನಂ ಕೆಎ 36 ಎಪ್‌ 826 ನೇದ್ದರ ಚಾಲಕ ಅತೀವೇಗ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಕಾಲು ಮುರಿದಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 106/12 ಕಲಂ279 337 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರವಿಕುಮಾರ ತಂದೆ ಚಂದ್ರಶ್ಯಾ ನಡುವಿನ ಮನಿ ಸಾ||ಗರೂರ (ಬಿ) ಹಾ:ವ: ಧನಗರಗಲ್ಲಿ ಬ್ರಹ್ಮಪೂರರವರು ನಾನು ದಿನಾಂಕ:-08/04/2012 ರಂದು ಮದ್ಯಾಹ್ನ 1 ಗಂಟೆಗೆ ಟಿವಿಎಸ್‌ ಎಕ್ಸಲ್ ಮೋಟಾರ ಸೈಕಲ ನಂ ಕೆಎ 32 ಎಕ್ಸ್‌ 3894 ನೇದ್ದರ ಮೇಲೆ ಕೆರೆ ಬೋಸಗಾ ಗ್ರಾಮಕ್ಕೆ ಮದುವೆಗೆ ಹೊರಟಾಗ ಬೋಸಗಾ ಕ್ರಾಸ ಹತ್ತಿರ ಆಳಂದ ಕಡೆಯಿಂದ ಬಸ್ಸ ನಂ ಕೆಎ 32 ಎಪ್‌ 1483 ನೇದ್ದರ ಬಸ್ಸ ಚಾಲಕ ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದು ನಿಲ್ಲಿಸಿದೆ ಹಾಗೆ ಹೋಗಿರುತ್ತಾನೆ ಡಿಕ್ಕಿ ಪಡಿಸಿದ್ದರಿಂದ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 107/12 ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

08 April 2012

GULBARGA DIST REPORTED CRIME

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಗುರುರಾಜ ತಂದೆ ಸಿದ್ದಣ್ಣಾ ಕೌದಿ ಸಾ: ಭಾವಗಿ ಪಬ್ಲಿಕ ಸಿಟಿ ಹಿಂದುಗಡೆ ಶಹಾ ಬಜಾರ ಗುಲಬರ್ಗಾ ರವರು ದಿನಾಂಕ: 07-04-2012 ರಂದು 11=00 ಸುಮಾರಿಗೆ ಶಹಾ ಬಜಾರ ನಾಕಾ ದಿಂದ ಲಾಲಗೇರಿ ಕ್ರಾಸ್ ದ ಕಾಳೆ ಲೇಔಟ ಕ್ರಾಸ್ ಹತ್ತಿರ ನಿಂತಾಗ ಕಾರ ನಂ:ಕೆಎ-32 ಎಮ್-7219 ನೇದ್ದರ ಚಾಲಕ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ತನ್ನ ಕಾರ ಸಮೇತ ಚಾಲಕ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 42/2012 ಕಲಂ: 279 ,338 ಐ.ಪಿ.ಸಿ ಸಂ:187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕರುಣೇಶ್ವರ ನಗರದ ಅಪ್ಪಾಸಾಬ ರವರ ಮದುವೆ ಮನೆಯಲ್ಲಿ ಬಂಗಾರದ ಮಂಗಳಸೂತ್ರ ಕಳವು ಮಾಡಿದವರ ಬಂದನ.

ಒಂದು ವಾರದ ಹಿಂದೆ ಕರುಣೇಶ್ವರ ನಗರದ ಅಪ್ಪಾಸಾಬ ಬಿರಾದಾರ ರವರ ಮದುವೆ ಮನೆಗೆ ನಾಗಣ್ಣ ತಂದೆ ಬಸವಂತರಾವ ಕವಲಗಾ ರವರು ಬಂದು ಮದುವೆ ಕಾರ್ಯಕ್ರಮಕ್ಕೆ ಬಂದು ಮದುವೆ ಕೆಲಸಗಳ್ನು ಮುಗಿಸಿ ಮಧ್ಯರಾತ್ರಿ ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದ್ದಾಗ ಪ್ಯಾಂಟ ಮತ್ತು ಶರ್ಟ ಜೇಬಿನಿಂದ ಬಂಗಾರದ ಮಂಗಳಸೂತ್ರ, ನಗದು ಹಣ ಮತ್ತು ಮೋಬಾಯಿಲಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಂತಾ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಗರದ (ಎ) ಉಪ-ವಿಭಾಗಧಿಕಾರಿಗಳಾದ ಶ್ರೀ ಭೂಷಣ ಭೋರ್ಸೆ ಎ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಿ ಅಶೋಕ ನಗರ ಠಾಣೆಯ ಪೊಲೀಸ್ ಇನ್ಸಪೇಕ್ಟರ ಶ್ರೀ ಟಿ.ಹೆಚ್.ಕರೀಕಲ್, ಪ್ರಭು ಉಪ್ಪಿನ ಪಿ.ಎಸ್.ಐ, ಮತ್ತು ಸಿಬ್ಬಂದಿ ಜನರಾದ ಸುರೇಶ, ಸಂಜೀವಕುಮಾರ , ಬಸಯ್ಯಾ ಸ್ವಾಮಿ ಎ.ಎಸ್.ಐ, ಶಿವಪುತ್ರಪ್ಪ ಎ.ಎಸ್.ಐ, ಸಿಬ್ಬಂದಿ ಜನರಾದ ಅರ್ಜುನಸಿಂಗ, ಅಣ್ಣಪ್ಪ , ಬಸವರಾಜ, ಚಂದ್ರಕಾಂತ, ಮೌಲಾಲಿ, ಗುರುಮೂರ್ತಿ, ಉಮೇಶ, ರಫೀಕ್, ಶಿವಪ್ರಕಾಶ, ರಾಮು, ದೇವಿಂದ್ರ ರವರ ಒಳಗೊಂಡ ತಂಡವು ಪೊಲೀಸ್ ತಂತ್ರಜ್ಞಾನದ ಸಹಾಯದಿಂದ 3 ಜನ ಕಳ್ಳರಾದ ಸಂತೋಷ @ ರಾಜು ತಂದೆ ಸುರೇಶ ರಜಪೂತ ಸಾ: ಭೋಗನಳ್ಳಿ ತಾ: ಅಫಜಲಪೂರ, ಪ್ರವೀಣ ತಂದೆ ಶಿವಶಂಕ್ರೇಯ್ಯಾ ಮಠಪತಿ ಸಾ: ಮಿರಿಯಾಣ ತಾ: ಚಿಂಚೋಳಿ, ಕಸ್ತೂರಪ್ಪ ತಂದೆ ಕಲ್ಲಪ್ಪ ಹೊರಪೇಠ ಸಾ: ಕುರಕುಂದಾ ತಾ: ಶಹಾಪೂರ ರವರಿಂದ ಒಟ್ಟು 1,04,000/- ರೂ ಬೇಲೆ ಬಾಳುವ ಬಂಗಾರದ ಮಂಗಳಸೂತ್ರ ಮತ್ತು 11 ಮೋಬಾಯಿಲ್ ಪೋನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವಾರದ ಒಳಗಡೆ ಅಶೋಕ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚುವಲ್ಲಿ ಯಶಸ್ಸಿ ಆಗಿರುತ್ತಾರೆ. ಹಾಗು ಈ ಪ್ರಕರಣದ ಆರೋಪಿತರು ಗುಲಬರ್ಗಾ ನಗರದಲ್ಲಿ ಇನ್ನೂ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿ ಇರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಸದರಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.

ಆಕಸ್ಮಿಕ ಬೆಂಕಿ ಅಪಘಾತ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ವೈಜಿನಾಥ ತಂದೆ ಹಣಮಂತ ಬಬಲಾದ ಸಾ: ಕುಮಸಿ ವಾಡಿ ತಾ:ಜಿ: ಗುಲಬರ್ಗಾರವರು ನಾವು ದಿನಾಂಕ 07-04-12 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಅಡುಗೆ ಮಾಡಿ ಓಲೆ ಉರಿ ಆರಿಸದೇ ಹಾಗೇ ಬಿಟ್ಟಿದ್ದರಿಂದ ಓಲೆಯಲ್ಲಿದ್ದ ಬೆಂಕಿ ಗೋಡೆಗೆ ಲಗತ್ತಾಗಿರುವ ಕಟ್ಟಿಗೆ ಚಪ್ಪರಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಮನೆ ಪೂರ್ತಿ ಸುಟ್ಟಿದ್ದರಿಂದ ಮನೆಯಲ್ಲಿ ನಗದು ಹಣ 2,30,000 ರೂ. ಜೋಳ, ತೊಗರಿ, ಧರಿಸಿದ ಬಟ್ಟೆಗಳು ಮತ್ತು ಮನೆ ಬಳಕೆ ಸಾಮಾನುಗಳು ವಿಕ್ಟರ ಜಿಎಲಎಕ್ಸ ಒಟ್ಟು 3.50,000/-ರೂ. ಲುಕ್ಸಾನ ಆಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಎಫ್,ಎ 5/12 ಕಲಂ ಆಕಸ್ಮಿಕ ಬೆಂಕಿ ಅಪಘಾತ ಅಂತಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ: ದಿನಾಂಕ 06-04-2012 ರಂದು 12-05 ಪಿ.ಎಮ್ ಕ್ಕೆ ನಗರದ ಶೇಖ ರೋಜಾ ಜಿ.ಡಿ.ಎ ಕಾಲೂನಿ ರೋಡಿನಲ್ಲಿ ಜೆ.ಸಿ.ಬಿ ನಂ. ಕೆ.ಎ 32 ಬಿ 3448 ನೇದ್ದರ ಚಾಲಕನು ತನ್ನ ಜೆ.ಸಿ.ಬಿಯನ್ನು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕ್ಕೆ ಇರುವ ಆರ್.ಸಿ.ಸಿ ವಿದ್ಯುತ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಜೆ.ಸಿ.ಬಿ ಸಮೇತ ಓಡಿ ಹೋಗಿರುತ್ತಾನೆ ಶ್ರೀ ಅರುಣ ಕುಮಾರ, ಕಾರ್ಯ ನಿರ್ವಾಹಕ ಕಿರಿಯ ಅಭಿಯಂತರರು, ಯನಿಟ ನಂ -1 ಸಿ.ಎಸ್.ಡಿ-1 ಜೆಸ್ ಕಮ್ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ 279 ಐಪಿಸಿ ಸಮಗಡ 187 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.