POLICE BHAVAN KALABURAGI

POLICE BHAVAN KALABURAGI

08 April 2012

GULBARGA DIST REPORTED CRIMES

ಕರುಣೇಶ್ವರ ನಗರದ ಅಪ್ಪಾಸಾಬ ರವರ ಮದುವೆ ಮನೆಯಲ್ಲಿ ಬಂಗಾರದ ಮಂಗಳಸೂತ್ರ ಕಳವು ಮಾಡಿದವರ ಬಂದನ.

ಒಂದು ವಾರದ ಹಿಂದೆ ಕರುಣೇಶ್ವರ ನಗರದ ಅಪ್ಪಾಸಾಬ ಬಿರಾದಾರ ರವರ ಮದುವೆ ಮನೆಗೆ ನಾಗಣ್ಣ ತಂದೆ ಬಸವಂತರಾವ ಕವಲಗಾ ರವರು ಬಂದು ಮದುವೆ ಕಾರ್ಯಕ್ರಮಕ್ಕೆ ಬಂದು ಮದುವೆ ಕೆಲಸಗಳ್ನು ಮುಗಿಸಿ ಮಧ್ಯರಾತ್ರಿ ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದ್ದಾಗ ಪ್ಯಾಂಟ ಮತ್ತು ಶರ್ಟ ಜೇಬಿನಿಂದ ಬಂಗಾರದ ಮಂಗಳಸೂತ್ರ, ನಗದು ಹಣ ಮತ್ತು ಮೋಬಾಯಿಲಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಂತಾ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಗರದ (ಎ) ಉಪ-ವಿಭಾಗಧಿಕಾರಿಗಳಾದ ಶ್ರೀ ಭೂಷಣ ಭೋರ್ಸೆ ಎ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಿ ಅಶೋಕ ನಗರ ಠಾಣೆಯ ಪೊಲೀಸ್ ಇನ್ಸಪೇಕ್ಟರ ಶ್ರೀ ಟಿ.ಹೆಚ್.ಕರೀಕಲ್, ಪ್ರಭು ಉಪ್ಪಿನ ಪಿ.ಎಸ್.ಐ, ಮತ್ತು ಸಿಬ್ಬಂದಿ ಜನರಾದ ಸುರೇಶ, ಸಂಜೀವಕುಮಾರ , ಬಸಯ್ಯಾ ಸ್ವಾಮಿ ಎ.ಎಸ್.ಐ, ಶಿವಪುತ್ರಪ್ಪ ಎ.ಎಸ್.ಐ, ಸಿಬ್ಬಂದಿ ಜನರಾದ ಅರ್ಜುನಸಿಂಗ, ಅಣ್ಣಪ್ಪ , ಬಸವರಾಜ, ಚಂದ್ರಕಾಂತ, ಮೌಲಾಲಿ, ಗುರುಮೂರ್ತಿ, ಉಮೇಶ, ರಫೀಕ್, ಶಿವಪ್ರಕಾಶ, ರಾಮು, ದೇವಿಂದ್ರ ರವರ ಒಳಗೊಂಡ ತಂಡವು ಪೊಲೀಸ್ ತಂತ್ರಜ್ಞಾನದ ಸಹಾಯದಿಂದ 3 ಜನ ಕಳ್ಳರಾದ ಸಂತೋಷ @ ರಾಜು ತಂದೆ ಸುರೇಶ ರಜಪೂತ ಸಾ: ಭೋಗನಳ್ಳಿ ತಾ: ಅಫಜಲಪೂರ, ಪ್ರವೀಣ ತಂದೆ ಶಿವಶಂಕ್ರೇಯ್ಯಾ ಮಠಪತಿ ಸಾ: ಮಿರಿಯಾಣ ತಾ: ಚಿಂಚೋಳಿ, ಕಸ್ತೂರಪ್ಪ ತಂದೆ ಕಲ್ಲಪ್ಪ ಹೊರಪೇಠ ಸಾ: ಕುರಕುಂದಾ ತಾ: ಶಹಾಪೂರ ರವರಿಂದ ಒಟ್ಟು 1,04,000/- ರೂ ಬೇಲೆ ಬಾಳುವ ಬಂಗಾರದ ಮಂಗಳಸೂತ್ರ ಮತ್ತು 11 ಮೋಬಾಯಿಲ್ ಪೋನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವಾರದ ಒಳಗಡೆ ಅಶೋಕ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚುವಲ್ಲಿ ಯಶಸ್ಸಿ ಆಗಿರುತ್ತಾರೆ. ಹಾಗು ಈ ಪ್ರಕರಣದ ಆರೋಪಿತರು ಗುಲಬರ್ಗಾ ನಗರದಲ್ಲಿ ಇನ್ನೂ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿ ಇರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಸದರಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.

ಆಕಸ್ಮಿಕ ಬೆಂಕಿ ಅಪಘಾತ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ವೈಜಿನಾಥ ತಂದೆ ಹಣಮಂತ ಬಬಲಾದ ಸಾ: ಕುಮಸಿ ವಾಡಿ ತಾ:ಜಿ: ಗುಲಬರ್ಗಾರವರು ನಾವು ದಿನಾಂಕ 07-04-12 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಅಡುಗೆ ಮಾಡಿ ಓಲೆ ಉರಿ ಆರಿಸದೇ ಹಾಗೇ ಬಿಟ್ಟಿದ್ದರಿಂದ ಓಲೆಯಲ್ಲಿದ್ದ ಬೆಂಕಿ ಗೋಡೆಗೆ ಲಗತ್ತಾಗಿರುವ ಕಟ್ಟಿಗೆ ಚಪ್ಪರಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಮನೆ ಪೂರ್ತಿ ಸುಟ್ಟಿದ್ದರಿಂದ ಮನೆಯಲ್ಲಿ ನಗದು ಹಣ 2,30,000 ರೂ. ಜೋಳ, ತೊಗರಿ, ಧರಿಸಿದ ಬಟ್ಟೆಗಳು ಮತ್ತು ಮನೆ ಬಳಕೆ ಸಾಮಾನುಗಳು ವಿಕ್ಟರ ಜಿಎಲಎಕ್ಸ ಒಟ್ಟು 3.50,000/-ರೂ. ಲುಕ್ಸಾನ ಆಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಎಫ್,ಎ 5/12 ಕಲಂ ಆಕಸ್ಮಿಕ ಬೆಂಕಿ ಅಪಘಾತ ಅಂತಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ: ದಿನಾಂಕ 06-04-2012 ರಂದು 12-05 ಪಿ.ಎಮ್ ಕ್ಕೆ ನಗರದ ಶೇಖ ರೋಜಾ ಜಿ.ಡಿ.ಎ ಕಾಲೂನಿ ರೋಡಿನಲ್ಲಿ ಜೆ.ಸಿ.ಬಿ ನಂ. ಕೆ.ಎ 32 ಬಿ 3448 ನೇದ್ದರ ಚಾಲಕನು ತನ್ನ ಜೆ.ಸಿ.ಬಿಯನ್ನು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕ್ಕೆ ಇರುವ ಆರ್.ಸಿ.ಸಿ ವಿದ್ಯುತ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಜೆ.ಸಿ.ಬಿ ಸಮೇತ ಓಡಿ ಹೋಗಿರುತ್ತಾನೆ ಶ್ರೀ ಅರುಣ ಕುಮಾರ, ಕಾರ್ಯ ನಿರ್ವಾಹಕ ಕಿರಿಯ ಅಭಿಯಂತರರು, ಯನಿಟ ನಂ -1 ಸಿ.ಎಸ್.ಡಿ-1 ಜೆಸ್ ಕಮ್ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ 279 ಐಪಿಸಿ ಸಮಗಡ 187 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

07 April 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ:ಶ್ರೀ ರಾಜಕುಮಾರ ತಂದೆ ನಿಂಗಪ್ಪ ಮಂಠಾಳ ಸಾ: ಜಂಬಗಾ (ಬಿ) ಗ್ರಾಮ ತಾ:ಜಿ: ಗುಲಬರ್ಗಾರವರು ನಾನು ಮತ್ತು ನನ್ನ ಸಂಬಂಧಿಕರಾದ ಅಂಬರಾಯ ಇಬ್ಬರೂ ದಿನಾಂಕ: 06/04/2012 ರಂದು ಹುಮನಾಬಾದ ತಾಲೂಕಿನ ತಡೋಳಗಿ ಗ್ರಾಮದಲ್ಲಿ ಜಾತ್ರೆ ಇದ್ದ ಪ್ರಯುಕ್ತ ಬಜಾಜ ಡಿಸ್ಕವರ ಮೋಟರ್ ಸೈಕಲ್ ನಂ: ಕೆಎ-32- ಇಎ-1305 ನೇದ್ದರ ಮೇಲೆ ಕುಳಿತುಕೊಂಡು ಗುಲಬರ್ಗಾದಿಂದ ಹೊರಟು ಕಮಲಾಪೂರ ಮಾರ್ಗವಾಗಿ ತಡೋಳಗಿಗೆ ಹೋರಟಾಗ ಅಂಬಾರಾಯ ಈತನು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ನಾನು ಮೋಟರ್ ಸೈಕಲದ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದೇನು. ಕಮಲಾಪೂರ ದಾಟಿದ ನಂತರ ಅಂಬಾರಾಯ ಈತನು ಮೋಟರ್ ಸೈಕಲ್ ನಂ: ಕೆಎ- 32- ಇಎ- 1305 ನೇದ್ದನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಮಹಿಬೂಬ ಸುಬಾನಿ ದರ್ಗಾದ ಹತ್ತಿರ ಅಂಬಾರಾಯ ಇತನು ಮೋಟರ್ ಸೈಕಲ್ ಸ್ಕೀಡ್ ಮಾಡಿ ಅಪಘಾತ ಪಡಿಸಿದನು. ಬಸ್ಸಿನಲ್ಲಿ ಬರುತ್ತಿದ್ದ ನಮ್ಮ ಸಂಭಂದಿಕರಾದ ಲಕ್ಷ್ಮೀಪುತ್ರ ತಂದೆ ಬೀರಣ್ಣ ಮಂಠಾಳ ಸಾ; ಜಂಬಗಾ [ಬಿ] ತಾ: ಗುಲಬರ್ಗಾ ಇವರು ರಸ್ತೆಯ ಮೇಲೆ ಬಿದ್ದಿದ್ದ ನಮ್ಮನ್ನು ನೋಡಿ ಬಸ್ಸ ನಿಲ್ಲಿಸಿ ನಮ್ಮನ್ನು ರೋಡಿನಿಂದ ಎಬ್ಬಿಸಿ ನೋಡಲಾಗಿ ನನಗೆ ದೇಹದ ಭಾಗದಲ್ಲಿ ಗುಪ್ತಗಾಯಗಳಾಗಿದ್ದವು. ಅಂಬಾರಾಯ ಈತನಿಗೂ ಸಹ ಗುಪ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:37/2012 ಕಲಂ 279. 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಆಳಂದ ಪೊಲೀಸ್ ಠಾಣೆ: ಶ್ರೀ ಮಹಿಮೂದಮೀಯಾ ತಂದೆ ಮೀರಾಸಾಬ ಮುರಮಕರ್ ಸಾ: ಬಸ್ ಸ್ಟಾಂಡ್ ರೋಡ ಆಳಂದ ರವರು ನಾನು ಆಳಂದ ಪಟ್ಟಣದ ಬಸ್ಸ ಸ್ಟಾಂಡ ಹತ್ತಿರ ಕಿರಾಣ ಅಂಗಡಿ ಇಟ್ಟಕೊಂಡು ಉಪಜೀವಿಸುತ್ತೆನೆ. ದಿನಾಂಕ: 03/04/2012 ರಂದು ಪ್ರತಿ ದಿನದಂತೆ ಬೆಳಿಗ್ಗೆ 9-00 ಗಂಟೆಗೆ ಕಿರಾಣಿ ಅಂಗಡಿ ತೆರೆದು ವ್ಯಾಪರ ಮಾಡಿಕೊಂಡು ರಾತ್ರಿ 8.00 ಗಂಟೆಗೆ ಕಿರಾಣಿ ಅಂಗಡಿ ಮುಚ್ಚಿಕೊಂಡು ಮನೆಗೆ ಹೋಗಿರುತ್ತೆನೆ. ದಿನಾಂಕ 04/04/2012 ರಂದು ಮುಂಜಾನೆ 8 ಗಂಟೆಗೆ ಬಂದು ನೋಡಲಾಗಿ ಅಂಗಡಿಯಲ್ಲಿರುವ ಸಾಮಾನುಗಳು ಚೆಲ್ಲಾಪಿಲ್ಲಿ ಆಗಿದ್ದವು, ನಗದು ಚಿಲ್ಲರೆ ಹಣ 3000=00 ರೂಪಾಯಿಗಳು, ಯಾರೋ ಕಳ್ಳರು 40000=00 ರೂಪಾಯಿ ಮೌಲ್ಯದ ಸಾಮಾನುಗಳಯ 3 ಮೊಬೆಲಗಳು ಹಿಗೇ 63000=00 ರೂಪಾಯಿ ಬೆಲೆಬಾಳುವ ಸಾಮಾನುಗಳು ಯಾರೋ ಕಳ್ಳರು ಸೆಟ್ಟರ್. ಒಳಗಡೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ. ಮಲ್ಲಿನಾಥ ತಂದೆ ಸಿದ್ರಾಮಪ್ಪ ಮೈಂದರ್ಗಿ ಸಾ|| ಮಾದನ ಹಿಪ್ಪರಗಾರವರು ನ್ನ ಕಟ್ಟಿಗೆ ಮಷಿನ ಹೊಲ ಸರ್ವೇ ನಂ: 533/9 ನೇದ್ದರಲ್ಲಿದ್ದು, ನನ್ನ ತಮ್ಮನಾದ ಗುರುನಾಥ ಇತನು ನನ್ನ ಹತ್ತಿರ ಬಂದು ಈ ಹೊಲ ನನ್ನದು ಇರುತ್ತದೆ ಅಂತಾ ಹೊಡೆಯುತ್ತಿದ್ದನು ಇದನೂ ನೋಡಿ ನನ್ನ ಹೆಂಡತಿ ಸಿದ್ದಮ್ಮ ಇವಳು ಜಗಳ ಬಿಡಿಸಲು ಬಂದಾಗ ಅವಳಿಗೆ ಸಹ ಕಟ್ಟಿಗೆಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/2012 ಕಲಂ 341, 323, 324, 504, 506, ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಟಕಾ ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ 06/04/2012 ರಂದು ಮುಂಜಾನೆ ದುತ್ತರಗಾಂವ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಶ್ರೀ ಎಸ.ಎಸ. ದೊಡ್ಡಮನಿ ಮತ್ತು ಠಾಣೆಯ ಸಿಬ್ಬಂದಿಯವರಾದ ಶಿವರಾಯ, ಹಜರತ ಅಲಿ, ಮಲ್ಲಿಕಾರ್ಜುನ,ಸಿಪಿಸಿ ಮತ್ತು ಪಂಚರಾದ ಶ್ರೀ ಧರ್ಮರಾಯ ತಿಗಶೇಟ್ಟಿ, ಶ್ರೀ ಬಸವರಾಜ ಕೋರೆ ಸಾ|| ನಿಂಬರ್ಗಾ ಇವರನ್ನು ಜೋತೆಗೆ ಕರೆದುಕೊಂಡು ದುತ್ತರಗಾಂವ ಗ್ರಾಮದ ಗ್ರಾಮ ಪಂಚಾಯತ ಮುಂದೆ ಇಬ್ಬರು ವ್ಯಕ್ತಿಗಳು ಹಿರೋ ಹೊಂಡಾ ಮೋಟಾರ ಸೈಕಲ ನಿಲ್ಲಿಸಿಕೊಂಡು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವವರನ್ನು ದಾಳಿ ಮಾಡಲಾಗಿ ಒಬ್ಬ ವ್ಯಕ್ತಿ ಮಾತ್ರ ಸಿಕ್ಕಿದ್ದು ಇನ್ನೊಬ್ಬನು ಓಡಿ ಹೋಗಿರುತ್ತಾನೆ. ಆತನ ಹೆಸರು ಸಿದ್ದಲಿಂಗಯ್ಯಾ ತಂದೆ ಗುರುಮುರ್ತಯ್ಯಾ ವಿಶ್ವನಾಥ ಮಠ ಸಾ|| ದುತ್ತರಗಾಂವ ಅಂತ ತಿಳಿಸಿದನು, ಅತನನ್ನು ಚೆಕ್ಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 920/-, ಮಟಕಾ ಚೀಟಿ, ನೋಕಿಯಾ ಮೋಬೈಲ, ಹೀರೊ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ ನಂ. ಕೆ.ಎ-32, ಇಎ-6806 ನೇದ್ದುವಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಓಡಿ ಹೋಗಿದ್ದ ಆತನ ಹೆಸರು ವಿಚಾರಿಸಲು ರಾಜಕುಮಾರ ತಂದೆ ಶರಣಪ್ಪ ಜಮಾದಾರ ವ|| 36 ವರ್ಷ, ಜಾ|| ಕಬ್ಬಲಿಗರು, ಉ|| ಕೂಲಿಕೆಲಸ, ಸಾ|| ದುತ್ತರಗಾಂವ ಅಂತ ತಿಳಿಸಿದ್ದು, ಮತ್ತು ಮಟಕಾ ಚೀಟಿಗಳನ್ನು ಮುನ್ನಳ್ಳಿ ಗ್ರಾಮದ ಶಿವಾನಂದ ಫಿರಂಗೆ ಎಂಬುವವನಿಗೆ ಕೊಡುತ್ತಿದ್ದು ಅವನೆ ಬಂದು ತೆಗೆದುಕೊಂಡು ಹೋಗುತ್ತಾನೆ ತಿಳಿದು ಬಂದ ಮೇರೆಗೆ ಠಾಣೆ ಗುನ್ನೆ ನಂ: 25/2012 ಕಲಂ 78 (3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಟಕಾ ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 06/04/2012 ರಂದು ಮಧ್ಯಾಹ್ನ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರವಿರುವ ಮರಗಮ್ಮಾ ದೇವಸ್ಥಾನದ ಕಟ್ಟೆಯ ಮೇಲೆ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಶ್ರೀ ಎಸ.ಎಸ. ದೊಡ್ಡಮನಿ ಮತ್ತು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಶಿವರಾಯ, ಹಜರತ ಅಲಿ, ಮಲ್ಲಿಕಾರ್ಜುನ, ಭೀಮಾಶಂಕರ ಸಿಪಿಸಿ ರವರೆಲ್ಲರೂ ನಿಂಬರ್ಗಾ ಗ್ರಾಮದ ಮರಗಮ್ಮಾ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 3 ಜನರು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಮಲ್ಲಿಕಾರ್ಜುನ ತಂದೆ ಶರಣಪ್ಪ ಬಿದನಕರ ಸಾ|| ನಿಂಬರ್ಗಾ, ಇತನ ಹತ್ತಿರ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 210/-, ಬಾಲ ಪೆನ್ನ, ಒಂದು ಮಟಕಾ ಚೀಟಿ ಮತ್ತು ಒಂದು ಸ್ಪೈಸ ಮೋಬೈಲ ಇದರಲ್ಲಿ ಸಿಮ ಕಾರ್ಡ ನಂ. 01] 9902616621, & 8197931160 ಅ.ಕಿ 500/- ರೂ. ದೊರೆತವು, ದಾನಪ್ಪ ತಂದೆ ನಿಂಗಪ್ಪ ಭೂಸನೂರ ಸಾ|| ಹಿತ್ತಲಶಿರೂರ ಇವನ ಹತ್ತಿರ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 190/-, ಒಂದು ಬಾಲ ಪೆನ್ನ, ಒಂದು ಮಟಕಾ ಚೀಟಿ ಮತ್ತು ಒಂದು ನೋಕಿಯಾ ಮೋಬೈಲ ಇದರಲ್ಲಿ ಸಿಮ ಕಾರ್ಡ ನಂ: 9741801220 ಅ.ಕಿ 400/- ರೂ. ದೊರೆತವು, ಶಿವಯೋಗೆಪ್ಪ ತಂದೆ ಶಿವಲಿಂಗಪ್ಪ ಹುಗ್ಗಿ ಸಾ|| ಹಿತ್ತಲಶಿರೂರ ಇವನ ಹತ್ತಿರ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 260/-, ಒಂದು ಬಾಲ ಪೆನ್ನ, ಒಂದು ಮಟಕಾ ಚೀಟಿ ದೊರೆತವು, ಹೀಗೆ ಒಟ್ಟು ಈ ಮೂರು ಜನರಿಂದ ನಗದು ಹಣ 660/-, 3 ಮಟಕಾ ಚೀಟಿ, 03 ಬಾಲ ಪೆನ್ನ, 2 ಮೋಬೈಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಳ್ಳಲಾಗಿದೆ.ಈ ಮೂರು ಜನರು ಮಟಕಾ ಚೀಟಿಗಳನ್ನು ಭಾಷಾಸಾಬ ಸಾ|| ಜೇವೂರ ಇವರಿಗೆ ಕೊಡುತ್ತಿದ್ದು ಅವರೆ ಬಂದು ತೆಗೆದುಕೊಂಡು ಹೋಗುತ್ತಾರೆ ಬರದೆ ಇದ್ದಲ್ಲಿ ಅವರ ದೂರವಾಣಿ ಸಂಖ್ಯೆ 09545920976 ನೇದ್ದಕ್ಕೆ ನಮೂದಿಸುತ್ತೆವೆ ಅಂತ ಹೇಳಿದ್ದ ಮೇರೆಗೆ ಠಾಣೆ ಗುನ್ನೆ ನಂ. 26/2012 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.