POLICE BHAVAN KALABURAGI

POLICE BHAVAN KALABURAGI

12 February 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ:
ಶ್ರೀಮತಿ ದೇವಕಿ ಗಂಡ ದೇವಿಂದ್ರ ಮನ್ನೇರಿ ಸಾ ಯರಗಲ್ ರವರು ನಾನು ಗುಡಿಯ ಹತ್ತಿರ ಕಸ ಗುಡಿಸುತ್ತಿರುವಾಗ ಹೊಲದಲ್ಲಿ ಪಾಲ ಕೊಡು ಅಂತಾ ಸಿದ್ದಪ್ಪ ಮನೇರಿ, ಬಸವಂತಪ್ಪ ಮನೇರಿ, ಅನುಪಾ ಮನೇರಿ, ಚಂದ್ರಪ್ಪ ಮನೇರಿ, ಮಂಜುಳಾ ಗಂಡ ರವಿ ಮನೇರಿ, ಲಕ್ಷ್ಮೀ ಗಂಡ ಚಂದ್ರಪ್ಪ ಮನೇರಿ ಸಾ:ಎಲ್ಲರೂ ಯರಗಲ್ ಗ್ರಾಮದವರು ಬಂದು ಫಲಗಾದಿಂದ ಹೊಡೆದು ರಕ್ತ ಗಾಯಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ .14/2012 ಕಲಂ 147,148,323,324,504,506 ಸಂ.149 ಐಪಿಸಿ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಮತ್ತು ಬೇದರಿಕೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:
ದಿನಾಂಕ:11-02-2012 ರಂದು ಠಾಣೆಯ ಕೋರ್ಟ ಕರ್ತವ್ಯದ ಪಿ.ಸಿ-74 ಸುರೇಶ ಕದಂ ರವರು ಮಾನ್ಯ ಪ್ರೀನ್ಸಿಫಲ ಜೆ,ಎಂ.ಎಫ್.ಸಿ ಕೋರ್ಟ ಗುಲಬರ್ಗಾದ ಪಿ.ಸಿ ನಂ:30/2012 ದಿನಾಂಕ:08-02-2012 ಕಲಂ 156 (3)ಸಿ.ಆರ್.ಪಿ,ಸಿ ಪ್ರಕಾರ ಶ್ರೀ ಮಹ್ಮದ ಮೆಹಬೂಬ ತಂದೆ ಮಹ್ಮದ ಮಸ್ತಾನ ಸಾನೂರಾನಿ ಮೊಹಲ್ಲಾ ಗೋಲ್ಡ ರೋಜ ಸ್ಕೂಲ ಹತ್ತಿರ ಗುಲಬರ್ಗಾರವರು ದೂರಿನ ಸಾರಂಶವೇನೆಂದರೆ, ದಿನಾಂಕ: 24-01-2012 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಾನು ಗೋಲ್ಡ ರೋಜ ಸ್ಕೂಲ ಮುಂದಿನಿಂದ ಹೋಗುತ್ತಿರುವಾಗ ಮಹ್ಮದ ಯುನೂಸ ಪಟೇಲ ತಂದೆ ಮಹ್ಮದ ಮಗದುಮ್ ಪಟೇಲ ಸಾ: ಸಂತ್ರಾಸವಾಡಿ ಮತ್ತು ಶೇಕ ಅಜರ ಹುಸೇನಿ ತಂದೆ ಶೇಕ ಅಫ್ಸರ್ ಹುಸೇನಿ ಸಾಸಂತ್ರಾಸವಾಡಿ ಇವರಿಬ್ಬರು ಬಂದು ನನಗೆ ಪ್ಲಾಟಿನ ಸಂಬಂಧವಾಗಿ ವಿಶ್ವ ವಿದ್ಯಾಲಯ ಠಾಣೆಯಲ್ಲಿ ದಾಖಲ ಮಾಡಿದ ಕೇಸನ್ನು ವಾಪಸ್ಸ ತೆಗೆದುಕೊಳ್ಳ ಬೇಕು ಅಂತಾ ಅವಾಚ್ಯವಾಗಿ ಬೈದು ಚಾಕುದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ,ನನಗೆ ಚಾಕು ತೊರಿಸಿ ಪಾಕೀಟದಲ್ಲಿದ್ದ 2000/- ರೂಪಾಯಿಗಳನ್ನು ಜಬರ ದಸ್ತಿಯಿಂದ ಕಸಿದು ಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಾರಾಂಶ ಮೇಲಿಂದ ರೋಜಾ ಠಾಣೆಯ ಗುನ್ನೆ ನಂ:12/2012 ಕಲಂ:341,392,504,506, ಸಂ: 34 ಐ.ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

11 February 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಕೇರನಾಥ ತಂದೆ ನಾಮದೇವ ಕೋಳಸುರೆ ಸಾ:ಆಳಂದ ನಾನು ದಿನಾಂಕ 08/02/2012 ರಂದು ಪ್ರತಿ ದಿನದಂತೆ ಬೆಳಿಗ್ಗೆ ಮಕ್ಕಳಿಗೆ ಶಾಲೆಗೆ ಕಳುಹಿಸಿ ಮನೆಗೆ ಬಿಗ ಹಾಕಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಹೊಲಕ್ಕೆ ಹೋದೆವು ಮದ್ಯಾಹ್ನ ಊಟಕ್ಕಾಗಿ ನಾನು ಮನೆಗೆ ಬಂದು ಕೀಲಿ ತೆರೆದು ಒಳಗೆ ನೋಡಲಾಗಿ ಮನೆಯ ಹಿಂದಿನ ಬಾಗಿಲು ಮುರಿದಿದ್ದು, ಮನೆಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 24840 / ರೂ ಬೆಲೆಬಾಳುವ ಬಂಗಾರದ ಮತ್ತು ಬೆಳ್ಳಿ ಸಾಮಾನಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2012 ಕಲಂ 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಾಕಾ ಜೂಜಾಟ ಪ್ರಕರಣ:
ಆಳಂದ ಪೊಲೀಸ ಠಾಣೆ:
ದಿನಾಂಕ 11/02/2012 ರಂದು 10.30 ಮುಂಜಾನೆ ಆಳಂದ ಪಟ್ಟಣದ ಹೊಸ ಎಪಿಎಮಸಿ ಯಾರ್ಡದಲ್ಲಿ ಒಬ್ಬ ಮನುಷ್ಯನು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆ. ಅಂತಾ ಆಳಂದ ಪೊಲೀಸ ಠಾಣೆಯ ಶ್ರೀ ವಿಜಯಕುಮಾರ ಪಿ.ಎಸ್.ಐ ರವರಿಗೆ ಮಾಹಿತಿ ಬಂದ ಮೇರೆಗೆ ಅವರು ಪಂಚರ ಸಮಕ್ಷಮ ಠಾಣೆ ಸಿಬ್ಬಂದಿವರಾದ ಮೈನೊದ್ದಿನ್, ಬಾಬು ಪಾಟೀಲ, ರಾಜಶೇಖರ ರವರೊಂದಿಗೆ ದಾಳಿ ಮಾಡಿ ಹೆಸರು ವಿಚಾರಿಸಲು ನರಸಪ್ಪ ತಂದೆ ಯಂಕಪ್ಪ ಜಮಾದಾರ ಸಾ:- ಶಾಕಾಪುರ ಅಂತಾ ಹೇಳಿದ್ದು ಚೀಟಿ ಬರೆಸಲು ಬಂದವರು ಓಡಿ ಹೋಗಿದ್ದು ಸದರಿಯವನಿಂದ ನಗದು ಹಣ 470/ ರೂ , ಒಂದು ಅಂಕಿ ಸಂಖೆ ಬರೆದ ಮಟಕಾ ಚೀಟಿ, ಒಂದು ಬಾಲ ಪೇನ, ಮತ್ತು ಒಂದು ನೋಕಿಯಾ ಕಂಪನಿಯ ಕಪ್ಪು ಬಣ್ಣದ ಹಳಯ ಮೋಬೈಲ ಜಪ್ತಿ ಮಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 420 ಐಪಿಸಿ ಮತ್ತು 78 (3) ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಶ್ರೀಮತಿ ರಾಜೇಶ್ರೀ ಗಂಡ ಬಸವರಾಜ ಸುತಾರ ವ 19 ವರ್ಷ ಸಾ ಬಳೂರ್ಗಿ ಹಾ ವ ಅಫಜಲಪೂರ ರವರು ನಮ್ಮ ಹಳೆಯ ಸಂಬಂಧಿಕ ಬಸವರಾಜ ಸುತಾರ ಸಾ ಬಳೂರ್ಗಿ ಈತನೊಂದಿಗೆ ದಿನಾಂಕ 19/12/2011 ರಂದು ದೆಸಾಯಿ ಕಲ್ಲೂರ ಗ್ರಾಮದಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಸಿದ್ರಾಮೇಶ್ವರ ಗುಡಿಯಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಲ್ಲಿ ನಮ್ಮ ತಂದೆ – ತಾಯಿವರು 21.000-00 ರೂ. ಹುಂಡಾ ಮತ್ತು 1 ತೋಲಿ ಬಂಗಾರ ಇದನ್ನು 2012 ನೇ ಸಾಲಿನಲ್ಲಿ ಉಗಾದಿ ಹಬ್ಬಕ್ಕೆ ಕೋಡುವ ಮುದ್ದತ್ತು ಮಾಡಿಕೊಂಡು ಮದುವೆ ಮಾಡಿರುತ್ತಾರೆ. ಮದುವೆಯಾದ ಮೇಲೆ ನನ್ನ ಗಂಡನು 1 ತಿಂಗಳು ಸರಿಯಾಗಿದ್ದುಕೊಂಡು ಗಂಡ ಬಸವರಾಜ, ಅತ್ತೆ ಕಮಲಾಬಾಯಿ, ನಾದನಿಯರಾದ ಸುನಂದಾ ಮತ್ತು ಮಹನಂದಾ ಈ 4 ಜನರು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ, ಸರಿಯಾಗಿ ಬಟ್ಟೆ ಉಡುವಲು ಬರುವುದಿಲ್ಲ ಅಂತಾ ಸುಮ್ಮ, ಸುಮ್ಮನೆ ಜಗಳ ತೆಗೆದು ಕೈಯಿಂದ ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತಿದ್ದರು ಗಂಡನ ಮನೆ ಬಳೂರ್ಗಿ ಗ್ರಾಮದಲ್ಲಿದ್ದ ಮನೆಯಿಂದ ಅಫಜಲಪೂರ ನಗರದ ಲಿಂಬಿ ತೋಟದಲ್ಲಿರುವ ಸಿವಪ್ಪಾ ಪಾಟೀಲ ಇವರ ಮನೆಯಲ್ಲಿ ಬಾಡಿಗೆಗೆ ಉಳಿದಿರುತ್ತೇವೆ.ದಿನಾಂಕ 04.02.2012 ರಂದು ಲಿಂಬಿತೋಟದಲ್ಲಿರುವ ಬಾಡಿಗೆ ಮನೆಯಲ್ಲಿ ನನ್ನ ಗಂಡ, ಅತ್ತೆ ಕಮಲಾಬಾಯಿ ನಾದನಿಯರಾದ ಸುನಂದ, ಮಹಾನಂದ, ಇವರೆಲ್ಲರೂ ಸೇರಿ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ನೀನು, ತವರು ಮನೆಯಿಂದ ಹಣ ಮತ್ತು ಭಂಗಾರ ತರುವಂತೆ ಕಾಣುವುದಿಲ್ಲಾ ಅಂತಾ ಮದ್ಯಾಹ 3 ಗಂಟೆಯ ಸಮಯಕ್ಕೆ 4 ಜನರು ಸೇರಿ ಹಗ್ಗದಿಂದ ನನ್ನ ಕುತ್ತಿಗೆಗೆ ಬಿಗಿದಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಮನೆಯ ಮಾಲಿಕರಾದ ಶಿವಪ್ಪಾ ಮತ್ತು ಆತನ ಹೆಂಡತಿ ಲಲಿತಾಬಾಯಿ ಇವರು ಬಂದು ಬಿಡಿಸಿರುತ್ತಾರೆ, ದಿನಾಂಕ 11.02.12 ರಂದು ನನ್ನ ತಾಯಿ, ಅಣ್ಣ, ತಂದೆ ಮತ್ತು ನಮ್ಮ ಗ್ರಾಮದ ಪ್ರಮುಖರಾದ ಬಸವರಾಜ ಶೇಟಗಾರ, ಸಿದ್ದಯ್ಯ ಆಕಾಶಮಠ ಕಲ್ಲಪ್ಪ ಪ್ಯಾಟಿ, ಗುರುಪಾದಯ್ಯ ಆಕಾಶಮಠ, ಅರ್ಜುನ ಪ್ಯಾಟಿ, ನಿಂಗಪ್ಪ ವರಗಿ ನಾವೆಲ್ಲರೂ ಕೂಡಿ ಅಫಜಲಪೂರ ನಗರದಲ್ಲಿ ನನ್ನ ಗಂಡನು ಹಿಡಿದ ಬಾಡಿಗೆ ಮನೆಗೆ ನ್ಯಾಯ ಪಂಚಾಯಿತಿಗಾಗಿ ಬಂದಿರುತ್ತೇವೆ ನನ್ನ ಗಂಡನು ಏ ಬೋಸಡಿ ಮಕ್ಕಳೆ ನೀವು ನ್ಯಾಯ ಪಂಚಾಯಿತಿ ಮಾಡುತ್ತಿರಿ ನನಗೆ ಕೊಡಬೆಕಾದ ಹಣ ಮತ್ತು ಭಂಗಾರ ಕೊಡ್ರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅವರೆಲ್ಲರ ಎದುರು ನನಗೆ ಕುತ್ತಿಗೆ ಒತ್ತಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 24/12 498 (ಎ) 323 504 307 ಸಂ. 34 ಐಪಿಸಿ ಮತ್ತು 3 , 4 ಡಿ ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಶಿವಶರಣಪ್ಪ ತಂದೆ ಹೀರು ನಾಯಕ, ಸಾ ನಂದಿಕೂರ ತಾಂಡಾ ಗುಲಬರ್ಗಾ ರವರು ನಾನು ದಿನಾಂಕ: 10/02/2012 ರಂದು 1336 ಗಂಟೆಗೆ ಸುಪರ ಮಾರ್ಕೆಟ ಕೆನರಾ ಬ್ಯಾಂಕ ಎದುರುಗಡೆ ನನ್ನ ದ್ವಿಚಕ್ರ ವಾಹನ ಹಿರೋ ಹೊಂಡಾ ಸ್ಪೆಂಡರ ಪ್ಲಸ ನಂ:ಕೆಎ 32 ಎಸ್ 7807 ಅಕಿ 25,000/- ನೇದ್ದನ್ನು ನಿಲ್ಲಿಸಿ ಮಾರುಕಟ್ಟೆಗೆ ಸಮಾನುಗಳನ್ನು ಖರೀದಿಸಲು ಹೋಗಿ ಮರಳಿ ಬಂದು ನೋಡಿದಾಗ, ಮೋಟಾರ ಸೈಕಲ ಇದ್ದಿರುವದಿಲ್ಲ ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 24/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

10 February 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ: ಶ್ರೀ ಸಿದ್ದು ತಂದೆ ಶರಣಪ್ಪಾ ಸುಬೇದಾರ ಸಾ: ಕರುಣೇಶ್ವರ ನಗರ ಗುಲಬರ್ಗಾರವರು ದಿನಾಂಕ: 9-2-2012 ರಂದು ಬೆಳಗ್ಗೆ ನಮ್ಮ ಅಳಿಯನಾದ ನೀಲಕಂಠಪ್ಪಾ ಹಿರೇಗೌಡರ, ಅಂಜನಾಬಾಯಿ ಗಂಡ ನೀಲಕಂಟಪ್ಪಾ, ಶಕುಂತಲಾ ಚಿನಗುಡಿ, ಅಕ್ಕನಾಗಮ್ಮ ಗಂಡ ಚಂದ್ರಕಾಂತ, ಶ್ರೀದೇವಿ ಗಂಡ ಶರಣಬಸಪ್ಪಾ ಕಲ್ಲಾ ಎಲ್ಲರೂ ಸಾ: ಕರುಣೇಶ್ವರ ನಗರ ಗುಲಬರ್ಗಾರವರು ಕೂಡಿಕೊಂಡು ಕೆಎ-32 ಎನ್-208 ಮಾರುತಿ ಕಾರ ನೇದ್ದರಲ್ಲಿ ಗುಲಬರ್ಗಾದಿಂದ ಜೇವರ್ಗಿಗೆ ಶ್ರೀ ಶಾಂತಲಿಂಗ ಸ್ವಾಮಿಜಿಯವರ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ನಂದಿಕೂರ ತಾಂಡಾದ ಹತ್ತಿರ ರಸ್ತೆಯ ಮೇಲೆ ಒಂದು ಕುರಿ ಅಡ್ಡ ಬಂದಿದ್ದರಿಂದ ಅದನ್ನು ಉಳಿಸಲು ಹೋಗಿ ನೀಲಕಂಠಪ್ಪಾ ಇವರು ಕಾರಿನ ವೇಗದ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಗಡೆಯ ಸೇತುವೆಗೆ ಡಿಕ್ಕಿ ಪಡಿಸಿರುತ್ತಾರೆ. ಇದರಿಂದ ಅಕ್ಕನಾಗಮ್ಮಳಿಗೆ,ಅಂಜನಾಬಾಯಿ,ಶಕುಂತಲಾ, ಇವರಿಗೆ ಭಾಯಿಗೆ, ತಲೆಗೆ, ಕಣ್ಣಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ನೀಲಕಂಠಪ್ಪ ಈತನು ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ರಾತ್ರಿ 8-00 ಗಂಟೆಗೆ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 279, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆಗೆ ಪ್ರಯತ್ನ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀ ಹಣಮಂತ ತಂದೆ ಅನಂತ ಒಡೆಯರ ಸಾ|| ಯಳಸಂಗಿ ರವರು ನಾನು ದಿನಾಂಕ 25/01/2012 ರಂದು ಸಾಯಂಕಾಲ ನಿಂಬರ್ಗಾದ ಸಂತೆಯಲ್ಲಿ ನನ್ನ ಎರಡನೆಯ ಹೆಂಡತಿಯ ಮಗನಾದ ಬಾಬಾಸಿದ್ದ ಒಡೆಯರ ವ|| 11 ವರ್ಷ, ಉ|| 5 ನೇ ತರಗತಿ ವಿಧ್ಯಾಭ್ಯಾಸ ಈತನು ನಿಂಬರ್ಗಾದ ಹಾಸ್ಟೇಲನಿಂದ ಸಂತೆಯಲ್ಲಿ ಬಂದಿದ್ದನು. ನನ್ನ ಮೊದಲನೆಯ ಹೆಂಡತಿಯ ಮಗನಾದ ಅನಂತ ಈತನಿಗೆ ಬಾಬಾಸಿದ್ದನು ಬಾಳೆಹಣ್ಣು ಕೊಡಿಸಲು ಕೇಳಿದ್ದರಿಂದ, ಅನಂತ ತಂದೆ ಹಣಮಂತ ಒಡೆಯರ ಇನತು ಮತ್ತು ಬಾಳೆ ಹಣ್ಣು ಮಾರುವ ಅಪರಿಚಿತ ವ್ಯಕ್ತಿ ಇಬ್ಬರೂ ಕೂಡಿಕೊಂಡು (ಆಸ್ತಿಯ ವಿಷಯದ ಸಂಭಂಧ ತಕರಾರು ಇದ್ದು ಎರಡನೆಯ ಹೆಂಡತಿಯ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ) ಬಾಳೆ ಹಣ್ಣಿನಲ್ಲಿ ವಿಷ ಬೆರೆಸಿ ಕೊಟ್ಟಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ 307, 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸಂಜಯಕುಮಾರ ತಂದೆ ಹಣಮಂತ ಜಮಖಂಡಿ ಉ:ಟಾಟಾ ಇಂಡಿಕಾ ಕಾರ ಚಾಲಕ ಕೆಎ 28 ಎಂ 3376 ಸಾ: ಬಾಳೇನಗಲ್ಲಿ ಆಳಂದರವರು ದಿಃ 09-02-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರು ಗುಲಬರ್ಗಾದ ಅಪ್ಪಾ ವ್ಹೀಲ್ಸಗೆ ಬಂದು ರಿಪೇರಿ ಮಾಡಿಕೊಂಡು ಆಳಂದ ಕಡೆಗೆ ಹೊರಟಿದ್ದು, ಆಳಂದ ಗುಲಬರ್ಗಾ ರೋಡಿಗೆ ಇರುವ ದಸ್ತಯ್ಯ ದಾಬಾದ ಎದುರಿನ ರೋಡಿನ ಮೇಲೆ ಹೊರಟಾಗ ಹಿರೋ ಹೊಂಡಾ ಫ್ಯಾಶನ ಕೆಎ 05 ಇಎಫ 7933 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮುಂದೆ ಹೊರಟ ನಮ್ಮ ಕಾರಿಗೆ ಡಿಕ್ಕಿ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಶಿವಕುಮಾರ ತಂದೆ ಅಣ್ಣಾರಾವ ಪಾಟೀಲ ಸಾ:ಶೇಖರೇಜಾ ಗುಲ್ಬರ್ಗಾರವರು ದಿನಾಂಕ: 07-02-12 ರಂದು ರಾತ್ರಿ 8-00 ಗಂಟೆಯಿಂದ ರಾತ್ರಿ 10 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಸಾವಳಗಿ ಸೀಮೆಯಲ್ಲಿ ಬರುವ ಸರ್ವೆ ನಂ. 236/3 ಕಂಕರ ಮಶೀನನಕ್ಕೆ ಕೂಡಿಸಿದ 60 ಹೆಚ್.ಪಿ ಕೀರಲೋಸ್ಕರ ಮಶೀನದ ಮೋಟಾರ ಬಿಚ್ಚಿ ಅದರಲ್ಲಿ ಅಳವಡಿಸಿದ ತಾಮ್ರದ ತಂತಿಯನ್ನು ಮತ್ತು ಕ್ರ್ಯಾಂಕ 2 ತುಕಡಿಗಳು ಅಂದಾಜು ಕಿಮ್ಮತ್ತು ರೂ. 45,000-00 ಗಳದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:45/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ 09/02/2012 ರಂದು ಮುಂಜಾನೆ 8.30 ಗಂಟೆಗೆ ಭೀಮಪೂರ ಗ್ರಾಮದ ಅಣ್ಣಪ್ಪ ಶಹಾಪೂರ ಇವರ ಮನೆಗೆ ಗುರನಾಥ ತಂದೆ ಶಿವಲಿಂಗಪ್ಪ ಶೇಷಗಿರಿ ಸಂಗಡ ಇನ್ನೂ 6 ಜನರು ಕೂಡಿಕೊಂಡು ಬಂದು ಸಂಜುಕುಮಾರ ಸಣ್ಮೂಖ, ಶಿವಾನಂದ ಮಣ್ಣೂರೆ, ಅಣ್ಣಪ್ಪ ಶಹಾಪೂರೆ ಇವರಿಗೆ ಅವಿಶ್ವಾಸ ಗೊತ್ತುವಳಿಯ ನಮ್ಮ ಪರವಾಗಿ ಕೈ ಎತ್ತಬೇಕು ಇಲವಾದರೆ ನೀಮ್ಮನ್ನು ಹೊಡೆಯುತ್ತೆವೆ ಅಂತಾ ಅವರ ಎದೆಯ ಮೇಲೆ ಕಾಲಿಟ್ಟು ಹೊಡೆದಿರುತ್ತಾರೆ ಅಂತಾ ಸಿದ್ರಾಮಪ್ಪ ತಂದೆ ಶಂಕ್ರೆಪ್ಪ ಸಣ್ಮೂಖೆ ಸಾ: ಹಿರೊಳ್ಳಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ 02/2012 ಕಲಂ 143, 147, 148, 323, 506 ಸಂಗಡ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.