POLICE BHAVAN KALABURAGI

POLICE BHAVAN KALABURAGI

10 February 2012

GULBARGA DIST REPORTED CRIMES

ಹಲ್ಲೆ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಗುರಪ್ಪ ತಂದೆ ಮೌಲಪ್ಪ ಬಡಿಗೇರ ನಾನು ದಿನಾಂಕ 09/01/2012 ರಂದು ಬೆಳಿಗ್ಗೆ 10-00 ಗಂಟೆಗೆ ಜಿಲ್ಲಾ ನ್ಯಾಯಾಲಯಕ್ಕೆ ಸಾಕ್ಷಿ ಕೊಡಲು ಬಂದಿದ್ದೆ ಶಿವಪಾದಪ್ಪಾ ಗಂಡ ನಾಲ್ಕು ಜನರು ನನ್ನನ್ನು ಕೊರ್ಟ ಮುಖ್ಯ ದ್ವಾರದ ಮುಂದೆ ಹಿಡಿದು ನೀನೆನಾದರೂ ಕೋರ್ಟಿಗೆ ಹಾಜರಗಿ ನಮ್ಮ ವಿರುದ್ದ ಸಾಕ್ಷಿ ಹೇಳಿದರೆ ನಿನ್ನನ್ನು ಹಿಂದಿನ ಕೇಸಿನಲ್ಲಿ ಅರೆ ಜೀವ ಮಾಡಿಬಿಟ್ಟಿರುತ್ತೇವೆ, ಸಲ ಕೊಲೆ ಮಾಡಿಬಿಡುತ್ತೇವೆ ಅಂತಾ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಹಾಗೂ ಮೊಬೈಲ ನಂ 9975451037 ನಂಬರಿನಿಂದ 9900290425 ನಂಬರಿಗೆ ದಿನಾಂಕ 11/01/2012 ರಂದು ಪೋನ ಮಾಡಿ ನಮ್ಮ ಸೋದರ ಮಾವಂದಿರ ವಿರುದ್ದ ಸಾಕ್ಷಿ ಹೇಳಿದಲ್ಲಿ ಆಲಮೇಲ ರೌಡಿಗಳಿಂದ ಕೊಲೆ ಮಾಡಿಸುತ್ತೇನೆ ಎಂದು ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾನೆ. ನಾಲ್ಕು ಜನರು ಹೊಡೆ ಬಡೆ ಮಾಡಿರುತ್ತಾರೆ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ನನ್ನನ್ನು ಶಿವಪಾದಪ್ಪ ಗೌಡ ಇತರರೊಂದಿಗೆ ನನ್ನನ್ನು ಹಿಡಿದು ಕೂಡಿಸಿದರು ಅಂತಾ ಮಾನ್ಯ ಎರಡನೆ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಗುಲಬರ್ಗಾರವರಲ್ಲಿ ಪಿ.ಸಿ ನಂ 01/12 ದಿನಾಂಕ 06/02/12 ರಂತೆ ವಿನಂತಿಸಿಕೊಂಡ ಮೇರೆಗೆ ನ್ಯಾಯಾಲಯದ ಆದೇಶದ ಪತ್ರವನ್ನು ಸ್ವಿಕರಿಸಿಕೊಂಡ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ 504, 506 323, 324 ಸಂ 34 ಐಪಿಸಿ ಹಾಗೂ 3 ಮತ್ತು 4 ಎಸ್.ಸಿ ಎಸ್.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

ಗುಂಡು ಹಾರಿದ ಪ್ರಕರಣ:

ಆಳಂದ ಠಾಣೆ: ಶ್ರೀ ಕಲ್ಲಪ್ಪ ತಂದೆ ರಾಮಚಂದ್ರ ಜಟ್ಟೆಪಗೋಳ ಸಾ|| ಹಿರೋಳ್ಳಿ ತಾ: ಆಳಂದ ರವರು ನಾನು ಗ್ರಾಮ ಪಂಚಾಯತ ಸದಸ್ಯನಿದ್ದು ದಿನಾಂಕ 09/02/2012 ರಂದು ಹಿರೋಳ್ಳಿ ಗ್ರಾಮ ಪಂಚಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿಶ್ವಾಸಿ ಗೊತ್ತುವಳಿ ಇರುವದರಿಂದ ನಾನು ಮತ್ತು ನಮ್ಮ ಸದಸ್ಯರಾದ ಗುರುನಾಥ ಶೇಷಗೇರಿ, ಶಿವಲಿಂಗಪ್ಪ ಗುಡ್ಡದ, ಮಲ್ಲೇಶ ಜಮಾದಾರ, ಹಣಮಂತ ಮಾನೆ, ಇನ್ನಿತರರು ಕೂಡಿಕೊಂಡು ಕ್ರೂಜರ ನಂ ಎಮ್.ಹೆಚ್ 13. 2125 ನೇದ್ದರಲ್ಲಿ ಬೆಳಿಗ್ಗೆ ಆಳಂದ ಶಾಸಕರಿಗೆ ಬೇಟಿಯಾಗಲು ಬರಬೇಕು ಅಂತಾ ತಡಕಲದಿಂದ ಕಿಣ್ಣಿಸುಲ್ತಾನ ಮಾರ್ಗವಾಗಿ ಆಳಂದಕ್ಕೆ ಬರುವಾಗ ಕಿಣ್ಣಿಸುಲ್ತಾನ ಮತ್ತು ಹೊನ್ನಳ್ಳಿ ಕ್ರಾಸಿನ ನಡುವೆ ಮೂಲಗೆ ರವರ ಹೊಲದ ಹತ್ತಿರ ಬೆಳಿಗ್ಗೆ ಕ್ರೂಜರ ಜೀಪ ನಂ ಎಮ್.ಹೆಚ್ 25 .1889 ನೇದ್ದನ್ನು ರಸ್ತೆಗೆ ಅಡ್ಡಗಟ್ಟಿ ನಿಲ್ಲಿಸಿದ್ದರು ನಮ್ಮ ಹಿಂದಿನಿಂದ ಬಂದ ಇನ್ನೊಂದು ಟಾಟಾ ಸುಮಾದಲ್ಲಿದ ನಮ್ಮ ಗ್ರಾಮ ಪಂಚಾಯಿತ ಸದಸ್ಯರಾದ ಶಿವಾನಂದ ಮಣೂರೆ ಸಾ: ಹಿರೋಳ್ಳಿ, ಸಂಜುಕುಮಾರ ಷಣ್ಮೂಖೆ ಸಾ: ಹಿರೋಳ್ಳಿ, ಗಜಾನಂದ ಕವಲಗಿ, ಅಣಪ್ಪ ಶಾಹಪುರೆ ಸಾ: ಭೀಮಪುರ, ಶರಣಬಸಪ್ಪ ನಿಂಗಶೆಟ್ಟಿ ಸಾ: ಹಿರೋಳ್ಳಿ, ಹಣಮಂತ ಬೆಳ್ಳಿಕಟ್ಟಿ ಸಾ: ಹಿರೋಳ್ಳಿ, ಶರಣಬಸಪ್ಪ ವಾಗೆ ಸಾ: ಬಾಳೆನ ಕೇರಿ ಆಳಂದ, ಶಿವಪುತ್ರಪ್ಪ ಚೆಲಗೇರಿ ಸಾ; ಹಿರೋಳ್ಳಿ ಮತ್ತು ಇನ್ನಿತರರು ಟಾಟಾ ಸುಮಾದಲ್ಲಿ ಬಂದವರೆ, ನಾವು ಇದ್ದ ಜೀಪಿನ ಕಡೆಗೆ ಕೈ ಹೊರಗೆ ಮಾಡಿ ಪಿಸ್ತೂಲುನಿಂದ 2 ಸುತ್ತು ಗುಂಡು ಹಾರಿಸಿದನು, ಅದು ಯಾರಿಗೂ ತಗಲಲಿಲ್ಲ ನಂತರ ನಮ್ಮ ಹಿಂದೆ ಬರುತ್ತಿದ್ದ ಶಾಂತಪ್ಪ ಪರಿಟ ಮತ್ತು ಮಾಹಾಂತಪ್ಪ ಜಗದೆ ಇವರಿಗೆ ಇಬ್ಬರು ಒಂದು ಮೋಟರ ಸೈಕಲ್ ನಂ ಎಮ್.ಹೆಚ್ 13 ಯು 9120 ನೇದ್ದನ್ನು ನಿಲ್ಲಿಸುತ್ತಿರುವಾಗ ಮಾಹಾಂತಪ್ಪ, ಮತ್ತು ಶಾಂತಪ್ಪ ಬೇರೆ ಕಡೆಗೆ ಅವರಿಗೆ ಅಂಜಿ ಓಡಿ ಹೋಗಿತ್ತಿರುವದನ್ನು ನೋಡಿದೆವು, ಜೀವಕ್ಕೆ ಹಾನಿ ಮಾಡುವ ಉದೇಶದಿಂದ 2 ಸುತ್ತು ಪಿಸ್ತೂಲದಿಂದ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ತಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/2012 ಕಲಂ 143, 147, 148, 149, 506, 341 ಐಪಿಸಿ ಮತ್ತು 25 ಆರ್ಮ್ಸ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

09 February 2012

GULBARGA DIST REPORTED CRIME

ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಶ್ರೀಮತಿ ಶೆಸಿಕಲಾ ಗಂಡ ಭೀಮರಾಯ ತಳವಾರ ಸಾ ಅಫಜಲಪೂರರವರು ನಾನು ದಿನಾಂಕ 06/02/2012 ರಂದು ರಾತ್ರಿ 10.30 ಗಂಟೆಗೆ ಮನೆಯಲ್ಲಿದ್ದಾಗ ಮಳೆಪ್ಪಾ ತಂದೆ ತಿಪ್ಪಣ್ಣ ಮನಮಿ ಸಂಗಡ 7 ಜನರು ಮನೆಯೋಳಗೆ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೋಡಲಿ ಕಾವಿನಿಂದ ಹೋಡೆದು ನನಗೆ ಮಾನಭಂಗ ಮಾಡಲು ಪ್ರಯತ್ನಿಸಿ ನನ್ನ ಗಂಡ ಭೀಮರಾಯ ತಂದೆ ನಿಂಗಪ್ಪಾ ತಳವಾರನನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದಮೇಲಿಂದಠಾಣೆಗುನ್ನೆನಂ.22/2012ಕಲಂ143,147,148.448.324.504.354.506,364 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

08 February 2012

Gulbarga Dist Reported Crime

ದರೋಡೆ ಪ್ರಕರಣ:
ಗ್ರಾಮೀಣ ಠಾಣೆ ಗುಲಬರ್ಗಾ:
ಶ್ರೀ ಶ್ರೀಕಾಂತ ತಂದೆ ನಾಗರಾಜ ಬೆಡಪಳ್ಳಿ ಸಾ ರಾಮನಗರ ಕಾಲೂನಿ ಗುಲಬರ್ಗಾರವರು ನಾವು ಮೂವರು ಅಣ್ಣ ತಮ್ಮಂದಿರಿದ್ದು ನಾನೇ ಹಿರಿಯವನಾಗಿರುತ್ತೇನೆ ,ರಾಮನಗರ ರಿಂಗರೋಡಿನ ಸಮರ್ಥ ವೈನ ಶಾಪ ಎದರುಗಡೆ ಒಂದು ಪಾನ ಶಾಪ ಅಂಗಡಿ ಇಟ್ಟುಕೊಂಡಿರುತ್ತೇನೆ. ಈ ಪಾನ ಅಂಗಡಿ ಬೆಳಗ್ಗೆ 6-00 ಗಂಟೆಗೆ ತೆರೆದು ರಾತ್ರಿ 10 -11 ಗಂಟೆ ತನಕ ಅಂಗಡಿಯಲಿದ್ದು ಕೊಂಡು ವ್ಯಾಪಾರ ಮಾಡುತ್ತೇನೆ .ದಿನಾಂಕ 06-02-2012 ರಂದು ಈಬ್ಬರು ಹುಡುಗರು ಅಂದಾಜು 28-32 ವಯಸ್ಸಿನವರು ಕ್ರೋಸರನಲ್ಲಿ ಬಂದು ವೈನಶಾಪ ಸಮರ್ಥದಲ್ಲಿ ಕುಡಿದು ತಕರಾರು ಮಾಡಿದರು ಅವರಲ್ಲಿ ಒಬ್ಬ ಹಳದಿ ಬಣ್ಣದ ಟಿಶರ್ಟ ಹಾಕಿದ್ದು ಇನೊಬ್ಬ ಬಿಳಿ ಶರ್ಟ ಬೂದಿ ಬಣ್ಣದ ಪ್ಯಾಂಟು ಹಾಕಿಕೊಂಡಿದ್ದರು ಅವರು ವೈನ ಶಾಪದಿಂದ ತಕರಾರು ಮಾಡಿ ನನ್ನ ಶಾಪ ಹತ್ತಿರ ಬಂದು ಸಿಕ್ರೇಟ ತೆಗೆದುಕೊಂಡು ಹೋದರು. ನಾನು ರಾತ್ರಿ 11 ಗಂಟೆಯಾಗಿದ್ದರಿಂದ ಅಂಗಡಿ ಮುಚ್ಚುವ ಸಲುವಾಗಿ ಗಲ್ಲಾದಲ್ಲಿದ ಹಣ ಎಣಿಲಾಗಿ 2500/- ರೂ ಇದ್ದವು ಈ ಮೊದಲು ವೈನ ಶಾಪದಲ್ಲಿ 50/- ರೂ ಸಲುವಾಗಿ ತಕರಾರು ಮಾಡಿ ಹೋಗಿದ್ದ ಈಬ್ಬರು ಕ್ರೋಸರದಲ್ಲಿ ಬಂದು ಅವರಲ್ಲಿ ಹಳದಿ ಟಿಶರ್ಟ ಧರಿಸಿದವನು ನನಗೆ “ ಎ ಕಿಂಗ ಸೈಜ ಸಿಕ್ರೇಟ ತಾಲೆ “ ಅಂದನ್ನು ನಾನು ಸಿಗರೇಟ ಕೊಟ್ಟೆನು ನಾನು ಎಣಿಸುತ್ತಿದ್ದಾಗ ಹಳದಿ ಬಣ್ಣದ ಟಿ-ಶರ್ಟ ಧರಿಸಿದವನು ನನ್ನ ಕೈಯಲಿದ್ದ 2500/- ರೂ ಕಸಿದ ಕೊಂಡನು ನಾನು ಅವನಿಗೆ ನನ್ನ ಹಣ ಕೊಡು ಅಂತಾ ಕೇಳಿದಾಗ ಟಿ-ಶರ್ಟ ಧರಿಸಿದವನು ಬೆನ್ನಿನ ಹಿಂದೆ ಇಟ್ಟುಕೊಂಡಿದ್ದ ಮಚ್ಚನ್ನು ತೆಗೆದು ನನ್ನಗೆ ಹೊಡೆಯುತ್ತಿರುವಾಗ ನಾನು ತಪ್ಪಿಸಿಕೊಂಡೆನು, ಮಚ್ಚಿನ ಎಟು ಪಾನ ಶಾಪನ ಶೋ ಗ್ಲಾಸಿಗೆ ಹೊಡೆದನು ನಮ್ಮ ತಂದೆ ನಾಗರಾಜ ಪಾನ ಶಾಪ ಹತ್ತಿರ ಬಂದು ಮಚ್ಚು ಹಿಡಿದವನಿಗೆ ಯಾಕೆ ನಮ್ಮ ಹುಡುಗನ ಜೋತೆ ಜಗಳ ಮಾಡುತ್ತಿದ್ದಿಯಾ ಅಂತಾ ಅದಿದ್ದಕ್ಕೆ ಮಚ್ಚು ಹಿಡಿದವನು ಅದೇ ಮಚ್ಚನಿಂದ ನಮ್ಮ ತಂದೆ ಹೊಡಯಲು ನಮ್ಮ ತಂದೆ ತಪ್ಪಸಿಕೊಂಡು ನನ್ನ ತಂದೆ ಮಚ್ಚು ಹಿಡಿದವನಿಗೆ ಗಟ್ಟಿಯಾಗಿ ಹಿಡಿದುಕೊಂಡು ನಮ್ಮ ತಂದೆಗೆ ಹೋಡೆಯಲು ಬಂದಾಗ ನಮ್ಮ ತಂದೆ ಜಾಡಿಸಿ ಹೊಟ್ಟೆಯ ಮೇಲೆ ಒದ್ದನ್ನು ಅವನು ಒದ್ದ ರಬಸಕ್ಕೆ ನೆಲಕ್ಕೆ ಬಿದ್ದ ಬಿದ್ದಿದರಿಂದ ಅವನ ಬಲ ತಲೆಗೆ ರೋಡಿಗೆ ಬಿದ್ದ ಕಲ್ಲು ತಲೆಗೆ ಹತ್ತಿ ರಕ್ತ ಗಾಯವಾಗಿರುತ್ತದೆ. ನಮ್ಮ ತಂದೆ ಹಳದಿ ಟಿಶರ್ಟ ಧರಿಸಿದವನಿಗೆ ಅಲೇ ಬಿದ್ದ ಕಲ್ಲು ತೆಗೆದುಕೊಂಡು ಕಲ್ಲಿನಿಂದ ಮುಖದ ಮೇಲೆ ಮತ್ತು ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅವರಿಗೆ ಯಾವುದೋ ಆಟೋದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ. 392 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.