POLICE BHAVAN KALABURAGI

POLICE BHAVAN KALABURAGI

09 February 2012

GULBARGA DIST REPORTED CRIME

ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಶ್ರೀಮತಿ ಶೆಸಿಕಲಾ ಗಂಡ ಭೀಮರಾಯ ತಳವಾರ ಸಾ ಅಫಜಲಪೂರರವರು ನಾನು ದಿನಾಂಕ 06/02/2012 ರಂದು ರಾತ್ರಿ 10.30 ಗಂಟೆಗೆ ಮನೆಯಲ್ಲಿದ್ದಾಗ ಮಳೆಪ್ಪಾ ತಂದೆ ತಿಪ್ಪಣ್ಣ ಮನಮಿ ಸಂಗಡ 7 ಜನರು ಮನೆಯೋಳಗೆ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೋಡಲಿ ಕಾವಿನಿಂದ ಹೋಡೆದು ನನಗೆ ಮಾನಭಂಗ ಮಾಡಲು ಪ್ರಯತ್ನಿಸಿ ನನ್ನ ಗಂಡ ಭೀಮರಾಯ ತಂದೆ ನಿಂಗಪ್ಪಾ ತಳವಾರನನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದಮೇಲಿಂದಠಾಣೆಗುನ್ನೆನಂ.22/2012ಕಲಂ143,147,148.448.324.504.354.506,364 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

08 February 2012

Gulbarga Dist Reported Crime

ದರೋಡೆ ಪ್ರಕರಣ:
ಗ್ರಾಮೀಣ ಠಾಣೆ ಗುಲಬರ್ಗಾ:
ಶ್ರೀ ಶ್ರೀಕಾಂತ ತಂದೆ ನಾಗರಾಜ ಬೆಡಪಳ್ಳಿ ಸಾ ರಾಮನಗರ ಕಾಲೂನಿ ಗುಲಬರ್ಗಾರವರು ನಾವು ಮೂವರು ಅಣ್ಣ ತಮ್ಮಂದಿರಿದ್ದು ನಾನೇ ಹಿರಿಯವನಾಗಿರುತ್ತೇನೆ ,ರಾಮನಗರ ರಿಂಗರೋಡಿನ ಸಮರ್ಥ ವೈನ ಶಾಪ ಎದರುಗಡೆ ಒಂದು ಪಾನ ಶಾಪ ಅಂಗಡಿ ಇಟ್ಟುಕೊಂಡಿರುತ್ತೇನೆ. ಈ ಪಾನ ಅಂಗಡಿ ಬೆಳಗ್ಗೆ 6-00 ಗಂಟೆಗೆ ತೆರೆದು ರಾತ್ರಿ 10 -11 ಗಂಟೆ ತನಕ ಅಂಗಡಿಯಲಿದ್ದು ಕೊಂಡು ವ್ಯಾಪಾರ ಮಾಡುತ್ತೇನೆ .ದಿನಾಂಕ 06-02-2012 ರಂದು ಈಬ್ಬರು ಹುಡುಗರು ಅಂದಾಜು 28-32 ವಯಸ್ಸಿನವರು ಕ್ರೋಸರನಲ್ಲಿ ಬಂದು ವೈನಶಾಪ ಸಮರ್ಥದಲ್ಲಿ ಕುಡಿದು ತಕರಾರು ಮಾಡಿದರು ಅವರಲ್ಲಿ ಒಬ್ಬ ಹಳದಿ ಬಣ್ಣದ ಟಿಶರ್ಟ ಹಾಕಿದ್ದು ಇನೊಬ್ಬ ಬಿಳಿ ಶರ್ಟ ಬೂದಿ ಬಣ್ಣದ ಪ್ಯಾಂಟು ಹಾಕಿಕೊಂಡಿದ್ದರು ಅವರು ವೈನ ಶಾಪದಿಂದ ತಕರಾರು ಮಾಡಿ ನನ್ನ ಶಾಪ ಹತ್ತಿರ ಬಂದು ಸಿಕ್ರೇಟ ತೆಗೆದುಕೊಂಡು ಹೋದರು. ನಾನು ರಾತ್ರಿ 11 ಗಂಟೆಯಾಗಿದ್ದರಿಂದ ಅಂಗಡಿ ಮುಚ್ಚುವ ಸಲುವಾಗಿ ಗಲ್ಲಾದಲ್ಲಿದ ಹಣ ಎಣಿಲಾಗಿ 2500/- ರೂ ಇದ್ದವು ಈ ಮೊದಲು ವೈನ ಶಾಪದಲ್ಲಿ 50/- ರೂ ಸಲುವಾಗಿ ತಕರಾರು ಮಾಡಿ ಹೋಗಿದ್ದ ಈಬ್ಬರು ಕ್ರೋಸರದಲ್ಲಿ ಬಂದು ಅವರಲ್ಲಿ ಹಳದಿ ಟಿಶರ್ಟ ಧರಿಸಿದವನು ನನಗೆ “ ಎ ಕಿಂಗ ಸೈಜ ಸಿಕ್ರೇಟ ತಾಲೆ “ ಅಂದನ್ನು ನಾನು ಸಿಗರೇಟ ಕೊಟ್ಟೆನು ನಾನು ಎಣಿಸುತ್ತಿದ್ದಾಗ ಹಳದಿ ಬಣ್ಣದ ಟಿ-ಶರ್ಟ ಧರಿಸಿದವನು ನನ್ನ ಕೈಯಲಿದ್ದ 2500/- ರೂ ಕಸಿದ ಕೊಂಡನು ನಾನು ಅವನಿಗೆ ನನ್ನ ಹಣ ಕೊಡು ಅಂತಾ ಕೇಳಿದಾಗ ಟಿ-ಶರ್ಟ ಧರಿಸಿದವನು ಬೆನ್ನಿನ ಹಿಂದೆ ಇಟ್ಟುಕೊಂಡಿದ್ದ ಮಚ್ಚನ್ನು ತೆಗೆದು ನನ್ನಗೆ ಹೊಡೆಯುತ್ತಿರುವಾಗ ನಾನು ತಪ್ಪಿಸಿಕೊಂಡೆನು, ಮಚ್ಚಿನ ಎಟು ಪಾನ ಶಾಪನ ಶೋ ಗ್ಲಾಸಿಗೆ ಹೊಡೆದನು ನಮ್ಮ ತಂದೆ ನಾಗರಾಜ ಪಾನ ಶಾಪ ಹತ್ತಿರ ಬಂದು ಮಚ್ಚು ಹಿಡಿದವನಿಗೆ ಯಾಕೆ ನಮ್ಮ ಹುಡುಗನ ಜೋತೆ ಜಗಳ ಮಾಡುತ್ತಿದ್ದಿಯಾ ಅಂತಾ ಅದಿದ್ದಕ್ಕೆ ಮಚ್ಚು ಹಿಡಿದವನು ಅದೇ ಮಚ್ಚನಿಂದ ನಮ್ಮ ತಂದೆ ಹೊಡಯಲು ನಮ್ಮ ತಂದೆ ತಪ್ಪಸಿಕೊಂಡು ನನ್ನ ತಂದೆ ಮಚ್ಚು ಹಿಡಿದವನಿಗೆ ಗಟ್ಟಿಯಾಗಿ ಹಿಡಿದುಕೊಂಡು ನಮ್ಮ ತಂದೆಗೆ ಹೋಡೆಯಲು ಬಂದಾಗ ನಮ್ಮ ತಂದೆ ಜಾಡಿಸಿ ಹೊಟ್ಟೆಯ ಮೇಲೆ ಒದ್ದನ್ನು ಅವನು ಒದ್ದ ರಬಸಕ್ಕೆ ನೆಲಕ್ಕೆ ಬಿದ್ದ ಬಿದ್ದಿದರಿಂದ ಅವನ ಬಲ ತಲೆಗೆ ರೋಡಿಗೆ ಬಿದ್ದ ಕಲ್ಲು ತಲೆಗೆ ಹತ್ತಿ ರಕ್ತ ಗಾಯವಾಗಿರುತ್ತದೆ. ನಮ್ಮ ತಂದೆ ಹಳದಿ ಟಿಶರ್ಟ ಧರಿಸಿದವನಿಗೆ ಅಲೇ ಬಿದ್ದ ಕಲ್ಲು ತೆಗೆದುಕೊಂಡು ಕಲ್ಲಿನಿಂದ ಮುಖದ ಮೇಲೆ ಮತ್ತು ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅವರಿಗೆ ಯಾವುದೋ ಆಟೋದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ. 392 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

07 February 2012

GULBARGA DIST REPORTED CRIME

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಮನೋಹರ ತಂದೆ ಮನೋಜ ತಂದೆ ಸಿದ್ಧಪ್ಪ ಮಾನಿನೂರ ಸಾ|| ಹದನೂರ ತಾ|| ಚಿತ್ತಾಪೂರ ಸಧ್ಯ ಜಯ ನಗರ ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯನಾದ ನಾಗರಾಜ ಕಡಬೂರ ಗುಲಬರ್ಗಾದ ಸಮಾಧಾನ ಹೋಟಲ & ಬಾರನಲ್ಲಿ ಸರಾಯಿ ಕುಡಿದು ಹಿರೋ ಹೊಂಡಾ ಸ್ಪೆಂಡರ ಗಾಡಿಯ ಮೇಲೆ ಸಮರ್ಥ ವೈನಶಾಪ ಹತ್ತಿರುವ ಗೆಳೆಯರ ಭೇಟ್ಟಿ ಕುರಿತು ರಾತ್ರಿ 11-30 ಗಂಟೆ ಸುಮಾರಿಗೆ ಸಮರ್ಥ ವೈನಶಾಪ ಹತ್ತಿರ ಬಂದಿದ್ದು ವೈನ ಶಾಪ ಮುಚ್ಚಿದ್ದು ನೋಡಿ ನಾನು ವೈನಶಾಪ ಹತ್ತಿರ ಪಾನ ಡಬ್ಬಿ ಇಟ್ಟು ಕೊಂಡಿದ್ದ ಪರಿಚಯದ ಶ್ರೀಕಾಂತ ತಂದೆ ನಾಗರಾಜ ಬೆಡಪಲ್ಲಿ ಈತನಿಗೆ ವೈನಶಾಪ ಮಾಲೀಕನ ಮನೆಯು ಎಲ್ಲಿ ಇರುತ್ತದೆ ಎಂದು ಕೇಳಿದಾಗ ಶ್ರೀಕಾಂತನು ನನಗೆ ಗೊತ್ತಿಲ್ಲಾ ಎಂದು ಹೇಳಿದನು. ಅದಕ್ಕೆ ನಾನು ನಿನಗೆ ಎಲ್ಲಾ ಗೊತ್ತಿದೆ ಅಡ್ರೆಸ ಹೇಳು ಅಂತಾ ಕೇಳಿದ್ದಕ್ಕೆ , ಮತ್ತೆ ಶ್ರೀಕಾಂತನು ತನಗೇನು ಗೊತ್ತಿಲ್ಲಾ ಅಂತಾ ಹೇಳಲು ನಾನು ಸಿಟ್ಟಿಗೆ ಬಂದು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ಶ್ರೀಕಾಂತ ಪಾನ ಡಬ್ಬಿಯ ಮೇಲೆ ಕಲ್ಲು ಒಗೆದು ಶೋ ಗ್ಲಾಸ ಒಡೆದೆನು. ಅಲ್ಲೇ ಹತ್ತಿರದಲ್ಲಿ ನಿಂತಿದ್ದ ಶ್ರೀಕಾಂತನ ತಂದೆ ನಾಗರಾಜ ಬೆಡಪಲ್ಲಿ ಈತನು ನನ್ನ ಹತ್ತಿರ ಬಂದು ನನಗೆ ಭೋಸಡಿ ಮಗನೇ ಎಲ್ಲಿಂದಲೂ ಬಂದು ರೌಡಿಜಂ ಮಾಡುತ್ತೀ ಮಗನೇ ಅಂತಾ ಬೈಯ್ಯುತ್ತಿದ್ದಾಗ ನಾನು ನನ್ನ ಹತ್ತಿರವಿದ್ದ ಮಚ್ಚ ತೆಗೆದು ನನಗೆ ಬೈಯ್ಯುತ್ತೀ ಮಗನೇ ಅಂತಾ ಹೆದರಿಸಲು ನಾಗರಾಜ ಬೆಡಪಲ್ಲಿ ಇತನು ನನ್ನ ತೆಕ್ಕಿ ಕುಸ್ತಿಗೆ ಬಿದ್ದು ನನ್ನ ಕೈಯಲ್ಲಿದ್ದ ಮಚ್ಚು ಕಸಿದುಕೊಂಡು ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 39/2012 ಕಲಂ 504,307,324 ಸಂ. 34 ಐಪಿಸಿ ಮತ್ತು 3(1), (10) ಎಸ್.ಸಿ./ಎಸ್.ಟಿ.ಎಕ್ಟ 1989 ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.