POLICE BHAVAN KALABURAGI

POLICE BHAVAN KALABURAGI

16 January 2012

GULBARGA DIST REPORTED CRIMES

ಜಾತಿ ನಿಂದನೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶರಣು@ ಶರಣಪ್ಪಾ ತಂದೆ ಶಂಕರ ಬಾಳ ಸಾ:ಫರಹತಾಬಾದ ತಾ:ಜಿ: ಗುಲಬರ್ಗಾ ರವರು ನಾನು ದಿನಾಂಕ 14/1/2012 ರಂದು ರಾತ್ರಿ 20:30 ಗಂಟೆಯ ಸುಮಾರಿಗೆ ನಮ್ಮೂರಿನ ಕ್ರಾಸ ಹೆದ್ದಾರಿಯ ಪಕ್ಕದಲ್ಲಿರುವ ಶಕ್ತಿ ವೈನ ಶಾಪ ಹತ್ತಿರ ನನ್ನ ಗೆಳೆಯರಾದ ಶ್ರೀ ವಿಜಯಕುಜಮಾರ ಬುಳ್ಳಾ. ಶ್ರೀ ಸಂಗಮೇಶ ವಡಗೇರಾ, ಶ್ರೀಶರಣು ಡೆಂಗಿ, ಮತ್ತು ಅಶೋಕ ಹಯ್ಯಳಿ ಎಲ್ಲರೂ ಕೂಡಿಕೊಂಡು ಮಾತಾನಾಡುತ್ತಾ ನಿಂತಾಗ 3 ಜನರು ಹುಡುಗರು ಕುಡಿದ ಅಮಲಿನಲ್ಲಿ ತಮ್ಮ ತಮ್ಮಲ್ಲಿಯೆ ಜಗಳಾಡುತ್ತಿದ್ದರು ನಾನು ಇದನ್ನು ನೋಡಿ ಯಾಕೆ ಜಗಳಾಡುತ್ತಿದ್ದಿರಿ ಅಂತಾ ಕೇಳಿ ಬಿಡಿಸಲು ಹೋದಾಗ ಅವರಲ್ಲಿ ಶ್ರೀನೀವಾಸ @ ಶಿನು ತಂದೆ ಬಸಯ್ಯಾ ಗುತ್ತೆದಾರ ಸಾ: ಸಿರನೂರ ಸಂಗಡ ಇನ್ನೂ ಎರಡು ಜನರು ಅದರಲ್ಲಿ ಒಬ್ಬನು ಜಾತಿ ನಿಂದನೆ ಮಾಡಿ ನಾವು ಎನಾದರು ಮಾಡಿಕೊಳ್ಳುತ್ತೆವೆ ನೀನ್ಯಾರು ನಮಗೆ ಕೇಳುವದಕ್ಕೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಬೀಯರ ಬಾಟಲಿಯಿಂದ ತಲೆಗೆ, ಮುಗಿಗೆ ಹೋಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 8/2012 ಕಲಂ 323.324.504. ಸಂಗಡ 34 ಐ.ಪಿ.ಸಿ ಮತ್ತು 3 (1)(10) ಎಸ್.ಸಿ./ಎಸ್.ಟಿ ಪಿ.ಎ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:
ಶ್ರೀ ಉಮೇಶ @ ಹೋಮು ತಂದೆ ರಾಂಚಂದ್ರ ರಾಠೋಡ ಸಾ: ಕುಶಪ್ಪ ತಾಂಡಾ ನರೋಣ ತಾ: ಆಳಂದ ರವರು ನಾನು ಹಾಗೂ ರೂಪಸಿಂಗ ರಾಠೋಡ, ರಾಮು ಹಾಗೂ ನಮ್ಮ ಹೆಂಡತಿ ಮಕ್ಕಳು ಇತರರು ಕೂಡಿಕೊಂಡು ಮಟಕಿ ಗ್ರಾಮ ಸಾಯಬಣ್ಣ ಬೀರಾದಾರ ಇವರ ಹೊಲದಲ್ಲಿ ಕೆಲಸ ಮಾಡಿ ದಿನಾಂಕ 15/01/2012 ರಂದು ಮದ್ಯಾನ್ಹ 3.45 ಗಂಟೆ ಸುಮಾರಿಗೆ ನಮ್ಮ ತಾಂಡಕ್ಕೆ ಹೋಗಿ ಬರಬೇಕೆಂದು ನಾನು ಹಾಗೂ ರೂಪಸಿಂಗ್ ರಾಠೋಡ ಕೂಡಿಕೊಂಡು ಕಬ್ಬಿನ ಮಾಲಕ ಸಾಯಬಣ್ಣ ಬಿರಾದಾರ ಇವರ ಹೀರೊ ಹೊಂಡಾ ಮೋಟರ ಸೈಕಲ್ ಕೆ.ಎ 32 ಆರ್ 3290 ನೇದ್ದನ್ನು ರೂಪಸಿಂಗ್ ತೆಗೆದುಕೊಂಡು ಆಳಂದ ಮುಖಾಂತರ ಹೋಗುವಾಗ ಆಳಂದ ರಜೀವಿ ರೋಡಿನ ಎಡಬದಿಯಿಂದ ನೈಸ್ ಚಿಕ್ಕನ್ ಸೇಂಟರ್ ಎದುರಿನಲ್ಲಿ ಹೋಗುತ್ತಿದ್ದಾಗ ಲಾರಿ ನಂ ಎಂ. ಡ್ಲೂ. ಪಿ. 2333 ನೇದ್ದರ ಚಾಲಕನ ಅಬ್ದುಲ ಹಮೀದ ತಂದೆ ಇಸಾಕ್ ಚೌದರಿ ಸಾ: ರೇವಣಸಿದ್ದೇಶ್ವರ ಕಾಲೋನಿ ಆಳಂದ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಯಿಸಿ ನಮ್ಮ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದಾಗ ನಾನು ರೋಡಿನ ಎಡಗಡೆ ಬಿದ್ದೆನು ರೂಪಸಿಂಗನು ಇತನು ಲಾರಿಯ ಹಿಂದಿನ ಬಲಟೈರಿನ ಕೆಳಗೆ ಬಿದ್ದನು ಆಗ ಜನರು ನೋಡಿ ಕೂಗಿದಾಗ ಲಾರಿ ನಿಲ್ಲಿಸಿದ್ದು ಲಾರಿಯ ಟೈರು ಅವನ ಹೊಟ್ಟೆಯ ಮೇಲೆ ಹಾಯ್ದಿದರಿಂದ ಸ್ಥಳದಲೇ ಮೃತಪಟ್ಟನು ನನಗೆ ಭಾರಿ ಗಾಯವಾಗಿರುತ್ತವೆ ಲಾರಿ ಚಾಲಕನು ವಾಹನ ಸ್ಥಳದಲಿಯೇ ಬಿಟ್ಟು ಒಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಸುನಂದಾ ಮೂರ್ತಿ ತಂದೆ ವೀರಾಪೂರ ಶಿವಮೂರ್ತಿ ವಯ:55 ಉ;ಆಕಾಶವಾಣಿಯಲ್ಲಿ ಕೆಲಸ ಸಾ; ಪ್ಲಾಟ ನಂ. 12 ಐಶ್ವರ್ಯ ಜಯನಗರ ಸೇಡಂ ರೋಡ ಗುಲಬರ್ಗಾ ರವರು ದಿನಾಂಕಃ 14/01/2012 ರಂದು ರಾತ್ರಿ 8:00 ಗಂಟೆಗೆ ಮನೆಯಿಂದ ಅಂಗಡಿಗೆ ಸಾಮಾನು ತರಲು ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಹುನುಮಾನ ಮಂದಿರದ ರೋಡಿನ ಮೇಲೆ ಶ್ರೀ ವಿದ್ಯಾಸಾಗರ ರವರ ಮನೆಯ ಮುಂದೆ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲದ ಮೇಲೆ ವೇಗವಾಗಿ ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ 15 ಗ್ರಾಂ ಬಂಗಾರದ ಹಳವವಿದ್ದ ಲಾಕೆಟ್ ಅಃಕಿಃ 45,000/- ರೂ ನೇದ್ದನ್ನು ಜಬರ ದಸ್ತಿಯಿಂದ ಕಸಿದುಕೊಂಡು ಹೋದನು. ಕತ್ತಲು ಇರುವುದರಿಂದ ಸದರಿ ಮೋಟಾರ ಸೈಕಲ ನಂಬರ ನೋಡಿರಲಿಲ್ಲಾ. ಸದರಿಯವನ ವಯಸ್ಸು ಅಂದಾಜು 25-30 ಇರಬಹುದು ವೈಟ್ ಪಿಂಕ್ ಶರ್ಟ ಹಾಕಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 03/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

13 January 2012

GULBARGA DIST REPORTED CRIMES

ವರದಕ್ಷಿಣೆ ಕಿರುಕುಳದಿಂದ ಗೃಹಿಣೆಯ ಮರಣ :
ಮಹಿಳಾ ಪೋಲಿಸ ಠಾಣೆ.
ಶ್ರೀಮತಿ ಲಕ್ಷ್ಮಿಭಾಯಿ ಗಂಡ ಶಾಂತಪ್ಪ ಬಿರಾದಾರ ಸಾ: ಕದಲಾಬಾದ ತಾ: ಬಾಲ್ಕಿ ಜಿಲ್ಲಾ: ಬೀದರ ರವರು ನನ್ನ ಮಗಳಾದ ಬಸಮ್ಮ ಇವಳಿಗೆ ದಿನಾಂಕ: 10.07.2011 ರಂದು ಗುಲಬರ್ಗಾದ ಬಸವರಾಜ ಸಾ: ದುಬೈ ಕಾಲೋನಿ ಗುಲಬರ್ಗಾ ಇತನೊಂದಿಗೆ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 1 ಲಕ್ಷ ರೂ. ಮತ್ತು 4 ತೊಲೆ ಬಂಗಾರ ನೀಡಲಾಗಿದೆ. ಮದುವೆಯಾದಾಗಿನಿಂದ ಮೃತಳಿಗೆ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಾ ತವರು ಮನೆಯಿಂದ ಇನ್ನೂ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಬಸಮ್ಮನ ಗಂಡ ಮಾವ. ಅತ್ತೆ , ಮೈದುನ, ನಾದಿನಿರವರೆಲ್ಲರೂ ಸೇರಿ ದಿನಾಂಕ: 12.01.2012 ರಂದು ಸಾಯಂಕಾಲ ಮೈಮೇಲೆ ಸೀಮೇ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ಸುಟ್ಟಗಾಯಗಳಾಗಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 05/12 ಕಲಂ. 498 (ಎ),302, 304(ಬಿ), ಸಂ. 149 ಐ.ಪಿ.ಸಿ & 3, 4, ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಅಪಘಾತ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಶರಣಬಸಪ್ಪ ತಂದೆ ಸಿದ್ರಾಮಪ್ಪ ಬಂಡೆ ಇವರ ಕರೆಂಟ ಮೋಟರ ದುರಸ್ತಿ ಮಾಡುವದಿದೆ ಅಂತಾ ಹೇಳಿದರಿಂದ ನಮ್ಮೂರ ವೆಂಕಟೇಶ @ ವೇಂಕಟಗಿರಿ ತಂದೆ ಬಸಣ್ಣ ಆಲೂರೆ ಈತನು ನಮ್ಮ ಹೊಲಕ್ಕೆ ಹೋಗಲು ಆತನ ಗೆಳೆಯ ಯುವರಾಜ ತಂದೆ ಶಿವಲಿಂಗಪ್ಪ ಖಾರಬಾರಿ ಸಾ:ಬೆಳಂ ಇವನ ಹೊಸದಾದ ಹೋಂಡಾ ಸ್ವಸ್ಟಾರ್ ಮೋಟರ ಸೈಕಲ್ ನೊಂದಣಿ ಆಗಿರುವದಿಲ್ಲ [ಪಾಸಿಂಗ ಆಗದ] ದ್ವಿಚಕ್ರ ವಾಹನ ಚೆಸಿ ನಂ ಎಮ್.ಇ. 4.ಜೆಸಿ 475.ಕೆ.ಬಿ. 7018483.ಇಂಜನ್ ನಂ ಜೆ.ಜಿ. 47ಇ 206079 ನೇದ್ದರ ಮೇಲೆ ಹೊಲಕ್ಕೆ ಹೋಗುವಾಗ ವೇಂಕಟೇಶ ಇತನು ಮೋಟಾರ ಸೈಕಲ್ ಅತೀವೇಗವಾಗಿ ಚಲಾಯಿಸುವಾಗ ಹಿಂದೆ ನಾನು ಸಾವಕಾಶವಾಗಿ ನಡೆಸು ಎಂದು ಹೇಳಿದರು ಕೇಳದೆ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಖಜೂರಿ –ಉಮರ್ಗಾ ರೋಡಿನ ಕೆ.ಇ.ಬಿ. ಖಜಾನಿಯ ಹತ್ತಿರ ರೋಡಿನ ತಿರುವಿನಲ್ಲಿ ಒಮ್ಮಲೇ ಸ್ಕಿಡ ಮಾಡಿದಾಗ ಇಬ್ಬರು ರೋಡಿನ ಮೇಲೆ ಬಿದ್ದು ರಕ್ತಗಾಯ ಮಾಡಿಕೊಂಡಿರುತ್ತಾರೆ. ಅಂತಾ ಶ್ರೀ ಶರಣಬಸಪ್ಪ ತಂದೆ ಕರಬಸಪ್ಪ @ ಸಂಗಪ್ಪ ಪಾಟೀಲ ಸಾ: ಖಜೂರಿ ತಾ: ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀಮತಿ ಮಿನಾಕ್ಷಿ ಗಂಡ ಯಲ್ಲಪ್ಪಾ ಮೇಳಕುಂದಿ ಸಾ: ಸಿರನೂರ ರವರು ನನ್ನ ಮದುವೆಯು 2009 ಸಾಲಿನಲ್ಲಿ ಶಿರನೂರ ಗ್ರಾಮದ ಯಲ್ಲಪ್ಪಾ ತಂದೆ ಶೇಟ್ಟೆಪ್ಪಾ ಮೇಳಕುಂದಿ ಇವರ ಸಂಗಡ 4 ಲಕ್ಷ್ಯ 50 ಸಾವಿರ ರೂಪಾಯಿ ಖರ್ಚು ಮದುವೆ ಮಾಡಿ ಕೊಟ್ಟಿರುತ್ತಾರೆ. ಈಗ ನನಗೆ 2 ಹೆಣ್ಣು ಮಕ್ಕಳು ಇರುತ್ತಾರೆ. ಒಂದು ವರ್ಷದಿಂದ ನನ್ನ ಗಂಡನು ದಿನಾಲು ಕೂಡಿದು ಬಂದು ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟು ತೊಂದರೆ ಮಾಡುತ್ತಿದ್ದನು ಮತ್ತು ಅತ್ತೆ ಮಾವಂದಿರು ಕೂಡಾ ನನಗೆ ವಿನಾಃಕಾರಣ ಅವಾಚ್ಯ ಶಬ್ದಗಳಿಂಗ ಬೈಯುತ್ತಿದ್ದರು. ಈ ವಿಷಯವನ್ನು ತವರು ಮನೆಯಲ್ಲಿ ನನ್ನ ತಂದೆ ತಾಯಿಯವರಿಗೆ ತಿಳಿಸಿದ್ದು 6-7 ತಿಂಗಳ ಹಿಂದೆ ನಮ್ಮ ಸಂಬಂಧಿಕರಾದ ಮಲ್ಲಿಕಾರ್ಜುನ ತಂದೆ ಭೀಮಯ್ಯಾ ಕುಸ್ತಿ ತಿಮ್ಮಯ್ಯಾ ತಂದೆ ಯಲ್ಲಪ್ಪಾ ಗುತ್ತೆದಾರ, ರಾಮಯ್ಯಾ ತಂದೆ ಯಲ್ಲಪ್ಪಾ ಕೆರಂಬಗಿ. ಇವರು ಸಮ್ಮಖದಲ್ಲಿ ನ್ಯಾಯ ಪಂಚಾಯತಿ ಮಾಡಿ ನನ್ನ ಗಂಡ ಅತ್ತೆ ಮಾವಂದರಿಗೆ ಬುಧ್ಧಿ ಮಾತು ಹೇಳಿ ಹೋಗಿರುತ್ತಾರೆ. ನನ್ನ ಗಂಡ ನಮ್ಮೂರಿನ ರೂಪಾ ತಂದೆ ಗಿಡ್ಡೆಪ್ಪ ಗುತ್ತೆದಾರ ಇವಳ ಸಂಗಡ ಓಡಾಡಿ ಅವಳಿಗೆ ಮದುವೆ ಮಾಡಿಕೊಳ್ಳುವ ಸಂಭವ ಕಂಡು ಬಂದಿರುತ್ತದೆ. ದಿನಾಂಕ 8/1/2012 ರಂದು ನನ್ನ ಗಂಡನು ನಿನ್ನ ಮಕ್ಕಳನ್ನು ತಗೆದುಕೊಂಡು ಮನೆ ಬಿಟ್ಟು ಹೋಗು ಅಂತಾ ಹೋಡೆದು ಒದ್ದು ನಿನಗೆ ಸಿಮೇ ಎಣ್ಣೆ ಹಾಕಿ ಸಾಯಿಸುತ್ತೆನೆ ಅಂತಾ ಜೀವದ ಭಯ ಬೇದರಿಕೆ ಹಾಕಿರುತ್ತಾನೆ. ಅಂತಾ ಲಿಖಿತ ದೂರು ಸಲ್ಲಿಸದಿ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 6/2012 ಕಲಂ 143.147.498 (ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ. ಮಲ್ಲಿಕಾರ್ಜುನಯ್ಯಾ ತಂದೆ ದಿ:ಶಿವರಾಚಯ್ಯಾ ಹಿರೇಮಠ ಸಾ: ಮನೆ ನಂ. 1-1495/ಸಿ ಭಗವತಿ ನಗರ ಯಾತ್ರಿಕ ನಿವಾಸ ಹಿಂದುಗಡೆ ಗುಲಬರ್ಗಾ ರವರು ನಾನು ನನ್ನ ಹೆಂಡತಿ ದಿನಾಂಕ 12/01/2012 ರಂದು ಮುಂಜಾನೆ ಪ್ರತಿನಿತ್ಯದಂತೆ ನಮ್ಮ ಕೆಲಸಕ್ಕೆ ಹೊಗಿದ್ದು ಮನೆಯಲ್ಲಿ ನನ್ನ ತಾಯಿ ಮುಂಜಾನೆ 10-30 ಸಮಯಕ್ಕೆ ಮನೆಗೆ ಕೀಲಿ ಹಾಕಿಕೊಂಡು ನನ್ನ ಹೆಂಡತಿಯ ತಂಗಿಯ ಮನೆಗೆ ಹೋಗಿ ಅಲ್ಲಿ ನಮ್ಮ ಮನೆಯ ಕೀಲಿ ಕೊಟ್ಟು ಊರಿಗೆ ಹೊಗಿರುತ್ತಾರೆ. ಮುಂಜಾನೆ 10-30 ಗಂಟೆಯಿಂದ ಮದ್ಯಾಹ್ನ 4-30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲು ಬೀಗ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ನಗದು ಹಣ 2 ಸಾವಿರ ರೂಪಾಯಿಗಳು ಹೀಗೆ ಒಟ್ಟು ಅ:ಕಿ: 1,62,000/- ರೂಪಾಯಿ ಬೆಲೆಬಾಳುವದವುಗಳ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 04/2012 ಕಲಂ. 454, 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ; 08-06-2008 ರಿಂದ ದಿನಾಂಕ 12-1-12 ವರೆಗೆ ಈ ಡಿಸೆಂಟ್ ದಾಲ್ ಮಿಲ್ಲ ಫ್ಯಾಕ್ಟರಿ ಸ್ಥಳ ಮತ್ತು ಫ್ಯಾಕ್ಟರಿಯ ಮಾರಾಟ ಸಂಬಂಧ ಮಹ್ಮದ ಹಸ್ಮತ ಅಲಿ ತಂದೆ ಇಲಾಯತ ಅಲಿ ವ:28 ವರ್ಷ ಉ:ವ್ಯಾಪರ ಸಾ: ಪ್ಲಾಟ ನಂ.14/ಎ ದರ್ಶನಾಪೂರ ಲೇಔಟ್ ಜಿ.ಡಿ.ಎ. ಕಾಲನಿ ಎದುರುಗಡೆ ಸಂತ್ರಸವಾಡಿ ಗುಲಬರ್ಗಾ, )ಮತೀನ ಜೂಹರಾ ಸಿದ್ದಿಕಿ ಗಂಡ ಮಹ್ಮದ ಇಲಾಯತ ಅಲಿ ವ: 46 ವರ್ಷ ಉ: ಮನೆಗೆಲಸ ಮತ್ತು ವ್ಯಾಪರ ಸಾ: ಪ್ಲಾಟ ನಂ.14/ಎ ದರ್ಶನಾಪೂರ ಲೇಔಟ್ ಜಿ.ಡಿ.ಎ. ಕಾಲನಿ ಎದುರುಗಡೆ ಸಂತ್ರಸವಾಡಿ ಗುಲಬರ್ಗಾ ಇಬ್ಬರಲ್ಲಿ ವ್ಯವಹಾರ ಆಗಿ ತಂಟೆ ತಕರಾರು, ಅಂದಿನಿಂದ ಇಬ್ಬರಲ್ಲಿ ಗಾಢವಾದ ವೈಮನಸ್ಸು ಬೆಳೆದಿರುತ್ತದೆ ಎರಡು ಜನರು ಯಾವ ವೇಳೆಯಲ್ಲಿ ಜಗಳವಾಗಿ ಪ್ರಾಣ ಹಾನಿ ಮತ್ತು ಆಸ್ತಿ ಸಂಭವಿಸುತ್ತದೆ ಎಂಬುದರ ಬಗ್ಗೆ ತಿಳಿದು ಬರುತ್ತಿಲ್ಲಾ. ಕಾರಣ ಮುಂಜಾಗ್ರತೆ ಕ್ರಮ ಕುರಿತು ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 09/2012 ಕಲಂ 107 ಸಿಅರ.ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.